Subscribe to Updates
Get the latest creative news from FooBar about art, design and business.
- ಔರಾದ್: ಗ್ರಾಮೀಣ ಬದುಕಿಗೆ ಆಸರೆಯಾದ ‘ವಿಬಿ-ಜಿ ರಾಮ್ ಜಿ’ ಯೋಜನೆ – 125 ದಿನಗಳ ಉದ್ಯೋಗ, ದಿನಗೂಲಿ ₹382ಕ್ಕೆ ಏರಿಕೆ
- ಎದೆಹಾಲು ಮಗುವಿನ ಮೊದಲ ಸಂಪೂರ್ಣ ಆಹಾರ: ಸಾಗರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಆಚರಣೆ
- ಸರಗೂರು: ವಿವೇಕಾನಂದ ಸ್ಮಾರಕ ಆಸ್ಪತ್ರೆಯಲ್ಲಿ ‘ಮೇಧಾ ಸುರಕ್ಷಾ ಕೇಂದ್ರ’ ಶುಭಾರಂಭ
- ಭೀಕರ ಬೈಕ್ ಅಪಘಾತ: ಮರದ ತುಂಡಿಗೆ ಡಿಕ್ಕಿಯಾಗಿ ಕಾಲೇಜು ವಿದ್ಯಾರ್ಥಿ ದುರಂತ ಸಾವು, ಇಬ್ಬರ ಸ್ಥಿತಿ ಗಂಭೀರ
- ಬಾಡಿಗೆ ಕಾರು ಚಾಲಕನ ಕೊಲೆ ಪ್ರಕರಣ: ಅಪರಾಧಿಗೆ ಜೀವಾವಧಿ ಶಿಕ್ಷೆ, ₹1 ಲಕ್ಷ ದಂಡ
- ಶೆಟ್ಟಿಹಳ್ಳಿ ಹಾಲು ಉತ್ಪಾದಕರ ಸಂಘದ ಕಟ್ಟಡ ನಿರ್ಮಾಣಕ್ಕೆ ಶ್ರೀ ಕ್ಷೇತ್ರದಿಂದ ₹2 ಲಕ್ಷ ಧನಸಹಾಯ
- ಬೀದರ್ ನೂತನ ಅಪರ ಜಿಲ್ಲಾಧಿಕಾರಿಯಾಗಿ ಕೆಎಎಸ್ ಅಧಿಕಾರಿ ಸುರೇಖಾ ನೇಮಕ
- ಕರ್ನಾಟಕದ ಮೊದಲ ಎಲೆಕ್ಟಾ ಯುನಿಟಿ ಎಂಆರ್–ಲೈನಾಕ್ ಯಂತ್ರ ಅನಾವರಣ, ಕ್ಯಾನ್ಸರ್ ರೋಗಿಗಳಿಗೆ HCG ಆಸ್ಪತ್ರೆಯಲ್ಲಿ ಅತ್ಯಾಧುನಿಕ ಚಿಕಿತ್ಸೆ
Author: admin
ತುಮಕೂರು: ಜಿಲ್ಲೆಯ ಪಾವಗಡ ತಾಲ್ಲೂಕಿನ ವೈ.ಎನ್.ಹೊಸಕೋಟೆ ಗ್ರಾಮದ ಶ್ರೀನಿವಾಸ್ ಎಂಬವರಿಗೆ ಸೇರಿದ ಸೈಟ್ ವೊಂದಕ್ಕೆ ಸಂಬಂಧಿಸಿದಂತೆ ಗುರುವಾರ ಬುನಾದಿ ಹಾಕುವ ವಿಚಾರಕ್ಕೆ ಪಕ್ಕದ ಸೈಟ್ ಮಾಲಿಕ ನಾಗರಾಜ್ ಎಂಬುವವರು ಶ್ರೀನಿವಾಸ್ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾರೆ. ಸೈಟ್ ನಮಗೆ ಸೇರಿದ್ದು ಎಂದು ಆರೋಪಿಸಿ ಹಲ್ಲೆ ಮಾಡಲಾಗಿದೆ. ಶ್ರೀನಿವಾಸ್ ರವರನ್ನು ಮಚ್ಚು ಹಾಗೂ ಕಲ್ಲುಗಳಿಂದ ಹಲ್ಲೆ ಮಾಡಿದ್ದು ಕಣ್ಣು ಹಾಗೂ ಕೈಗೆ ಗಾಯಗಳಾಗಿ ರಕ್ತ ಸ್ತ್ರಾವವಾಗಿ ಜಿಲ್ಲಾಸ್ವತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಬಗ್ಗೆ ದೂರು ನೀಡಿದರು ವೈ.ಎನ್.ಹೊಸಕೋಟೆ ಪೋಲಿಸರು ದೂರು ಪಡೆದಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ವರದಿ: ನಂದೀಶ್ ನಾಯ್ಕ, ಪಾವಗಡ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ಪಾವಗಡ: ತಾಲ್ಲೂಕಿನ ಕಸಬಾ ಹೋಬಳಿಯ ವೆಂಕಟಪುರ ಗ್ರಾಮದಲ್ಲಿ ದಿನಾಂಕ 24—11–2024 ರ ಭಾನುವಾರದಂದು ನಡೆಯುತ್ತಿರುವ ವಿಜೃಂಭಣೆಯ ಕನಕದಾಸ ಜಯಂತಿ ಕಾರ್ಯಕ್ರಮಕ್ಕೆ ರೇಡಿಯಂಟ್ ಅಕಾಡೆಮಿ ಸಂಸ್ಥಾಪಕರು ಶಂಕರ್ ಅವರು 5000 ಸಾವಿರ ರೂಪಾಯಿ ಕಾಣಿಕೆಯಾಗಿ ನೀಡಿದ್ದರು. ಇದೇ ಸಂದರ್ಭದಲ್ಲಿ ರೇಡಿಯಂಟ್ ಅಕಾಡೆಮಿ ಅಧ್ಯಕ್ಷರು ಮುರಳಿ ಹಾಗೂ ಗ್ರಾಮಸ್ಥರು ಹಾಜರಿದ್ದರು. ವರದಿ: ನಂದೀಶ್ ನಾಯ್ಕ, ಪಾವಗಡ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ಬಾಗಲಕೋಟೆ: ಆರ್ಥಿಕ ಹಾಗೂ ಸಾಮಾಜಿಕವಾಗಿ ಅಭಿವೃದ್ದಿ ಹೊಂದುವಲ್ಲಿ ಪರಸ್ಪರ ಸಹಕಾರ ಅವಶ್ಯವಾಗಿದ್ದು, ಎಲ್ಲ ರಂಗಗಳಿಗೂ ಈ ಸಹಕಾರಿ ರಂಗ ಮುನ್ನುಡಿ ಬರೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಗರದ ಹುಬ್ಬಳ್ಳಿ ಬೈಪಾಸ್ ರಸ್ತೆ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಮೈದಾನದಲ್ಲಿ ಹಮ್ಮಿಕೊಂಡ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅವರು ಸಹಕಾರ ರಂಗ ಬಲಿಷ್ಟವಾಗಬೇಕಾದರೆ, ಜ್ಯಾತ್ಯಾತೀತ, ಧರ್ಮಾತೀತ ಹಾಗೂ ಪಕ್ಷಾತೀತವಾಗಿ ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ದುಡಿದಾಗ ಮಾತ್ರ ಸಾಧ್ಯವೆಂದು ತಿಳಿಸಿದರು. ಸ್ವಾತಂತ್ರ್ಯ ಪೂರ್ವದಲ್ಲಿಯೇ ದೇಶದಲ್ಲಿಯೇ ಸಹಕಾರ ಕ್ಷೇತ್ರಕ್ಕೆ ಮುನ್ನುಡಿ ಬರೆದಿದ್ದು, ನಮ್ಮ ರಾಜ್ಯದ ಗದಗ ಜಿಲ್ಲೆಯ ಕನಗಿನಹಾಳ ಶಿವನಗೌಡ ಪಾಟೀಲ 1904ರಲ್ಲಿ ಸ್ಥಾಪಿಸಿದ ಸಹಕಾರಿ ಸಂಘ. ಸ್ವಾತಂತ್ರ್ಯದ ನಂತರ ನೆಹರು ಹಾಗೂ ಗಾಂಧಿಜೀಯವರು ಈ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿ ತಮ್ಮ ಪಂಚವಾರ್ಷಿಕ ಯೋಜನೆಗಳಲ್ಲಿ ಈ ಸಹಕಾರಿ ಕ್ಷೇತ್ರವು ಒಳಗೊಂಡಿತ್ತು. ಹಳ್ಳಿಯಿಂದ ದಿಲ್ಲಿಯವರೆಗೆ ಗ್ರಾಮ ಸ್ವರಾಜ್ಯ ಆಗಬೇಕೆಂಬ ಗಾಂದೀಜಿಯವರ ಕಲ್ಪನೆಯಂತೆ ಗ್ರಾಮೀಣ ಪ್ರದೇಶದಲ್ಲಿ ಮೊದಲು ಆರ್ಥಿಕವಾಗಿ ಪ್ರಬಲರಾದಾಗ ಮಾತ್ರ ದೇಶ…
ಪಾವಗಡ: ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಸಾರ್ವಜನಿಕರಿಗೆ ಗುಲಾಬಿ ಹೂವು ನೀಡಿ ತಂಬಾಕು ವಿರುದ್ಧ ಅರಿವು ಮೂಡಿಸಿದರು. ಪಾವಗಡ NSS ಘಟಕದ ವತಿಯಿಂದ ತಂಬಾಕು ಮುಕ್ತ ಅರಿವಿನ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರಾಂಶುಪಾಲರಾದ ರಾಮಕೃಷ್ಣಪ್ಪ, ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಬೊಮ್ಮಣ್ಣ ಹಾಗೂ ಉಪನ್ಯಾಸಕರಾದ ಸೌಭಾಗ್ಯ, ಪಿ.ಕೆ.ರಘು, ವೀರಪ್ಪ, ಶಾಂತರಾಜು, ಸುಮತಿ, ಪುಷ್ಪಲತಾ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ವರದಿ: ನಂದೀಶ್ ನಾಯ್ಕ ಪಿ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ಬೆಂಗಳೂರು: ಕೃಷಿ ಅಭಿವೃದ್ಧಿಯಲ್ಲಿ ಕೃಷಿ ವಿಶ್ವವಿದ್ಯಾನಿಲಯವು ಮಹತ್ತರ ಪಾತ್ರವನ್ನು ವಹಿಸುತ್ತಿದೆ. ಕೃಷಿ ವಿಶ್ವವಿದ್ಯಾನಿಲಯ ಆಯೋಜಿಸಿರುವ ಈ ಬೃಹತ್ ಕೃಷಿಮೇಳ ದೇಶದಲ್ಲಿ ಮಾದರಿಯಾಗಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ.ಶಾಲಿನಿ ರಜನೀಶ್ ತಿಳಿಸಿದರು. ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ ಕೃಷಿಮೇಳ — 2024ರ ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಮೇಳಕ್ಕೆ ಭೇಟಿ ನೀಡಿದ ರೈತರು ತಾವು ನೋಡಿದ ಕೃಷಿ ತಾಂತ್ರಿಕತೆಗಳು, ತಳಿಗಳ ಬಗ್ಗೆ ಇನ್ನು ಹತ್ತು ರೈತರಿಗೆ ಮಾಹಿತಿಯನ್ನು ರವಾನಿಸಿದಾಗ ಮಾತ್ರ ಈ ಮೇಳಕ್ಕೆ ಒಂದು ಅರ್ಥಸಿಗುತ್ತದೆ. ಈ ಮೇಳದಲ್ಲಿ ಕೃಷಿಯಲ್ಲಿ ನಿರತರಾದ ಮಹಿಳೆಯರನ್ನು ಗುರುತಿಸಿ ಸನ್ಮಾನಿಸುವುದು ಅಭಿನಂದನಾರ್ಹ ಎಂದರು. ನಮ್ಮ ಯುವಜನತೆ ಡಿಜಿಟಲ್ ತಂತ್ರಜ್ಞಾನಗಳನ್ನು ಕೃಷಿಯಲ್ಲಿ ಅಳವಡಿಸಿಕೊಂಡು ಕೃಷಿಯಲ್ಲಿ ಕ್ರಾಂತಿಯನ್ನು ತರಬೇಕಾಗಿದೆ. ಕೃಷಿಯಲ್ಲಿ ಹೆಚ್ಚಿನ ಮಾಹಿತಿ, ತಂತ್ರಜ್ಞಾನದ ಬಳಕೆಯಿಂದಾಗಿ ಇತರೆ ದೇಶಗಳು ಸಹ ನಮ್ಮ ಆಧುನಿಕ ಕೃಷಿಯನ್ನು ಹೊಗಳುವಂತಾಗಿದೆ. ಈ ವೇದಿಕೆಯಲ್ಲಿ ಕೃಷಿಗೆ ಸಂಬಂಧಿಸಿದ ಎಲ್ಲಾ ಮಾಹಿತಿ, ತಂತ್ರಜ್ಞಾನ, ಪರಿಕರಗಳು ಮತ್ತು ರುಚಿಯಾದ ಹಳ್ಳಿಯ ಸೊಗಡಿನ ಮಧ್ಯಾಹ್ನದ…
ಪಾವಗಡ: ವಿಶ್ವಕ್ಕೆ ರಾಮಾಯಣ ಗ್ರಂಥದ ಮೂಲಕ ರಾಮ ಲಕ್ಷ್ಮಣ ಸೀತೆ ಹನುಮಂತ ಲವ ಕುಶರನ್ನು ಪರಿಚಯಿಸಿದ ಕೀರ್ತಿ ದೈವ ಸಂಭೂತ ಮಹರ್ಷಿ ವಾಲ್ಮೀಕಿ ರವರಿಗೆ ಸಲ್ಲುತ್ತದೆ. ಕೇಂದ್ರ ಸರ್ಕಾರ ರಾಮನ ಹೆಸರಿನಲ್ಲಿ ರಾಜಕೀಯ ಕೆಸರರಾಚಾಟ ಮಾಡುತ್ತಿದೆ. ರಾಮಾಯಣ ರಚನಾಕಾರ ವಿಶ್ವದ ಮೊದಲ ಕವಿ ಭಗವಾನ್ ಮಹರ್ಷಿ ವಾಲ್ಮೀಕಿರವರ ಮಂದಿರ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದರು ವಾಲ್ಮೀಕಿ ಜಾಗೃತಿ ವೇದಿಕೆ ಅಧ್ಯಕ್ಷ ಲೋಕೇಶ್ ಪಾಳೇಗಾರ ಹೇಳಿದರು. ತಾಲೂಕಿನ ಕರಿಯಮ್ಮನಪಾಳ್ಯದಲ್ಲಿ ಹದ್ದೂರಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಕಾರ್ಯಕ್ರಮದಲ್ಲಿ ಗ್ರಾಮದ ಮಹಿಳೆಯರು ಅಲಂಕಾರ ಕುಂಬಗಲಂನ್ನೊತ್ತು, ಗ್ರಾಮದ ಬೀದಿಗಳ ವಾದ್ಯಗಳೊಂದಿಗೆ ಗ್ರಾಮದ ಮುಖಂಡರ ಯುವಕರ ಸಮ್ಮುಖದಲ್ಲಿ ಮೆರವಣಿಗೆ ಸಾಗಿದರು. ಗ್ರಾಮ ದೇವತೆಗಳಾದ ಕರಿಯಮ್ಮ ಮತ್ತು ಮಾರಿಕಾಂಬ ದೇವಿಯ ದೇವಸ್ಥಾನಗಳ ಪ್ರದಕ್ಷಿಣೆ ಮಾಡಿ ನಂತರ ವಾಲ್ಮೀಕಿ ಮೂರ್ತಿ ಗೆ ಮಹಾ ಮಂಗಳಾರತಿ ಮಾಡಿ, ವಿಶೇಷ ಪೂಜಾ ಕಾರ್ಯಕ್ರಮ ಮಾಡಿ ನಂತರ ಕುಂಬಗಳ ಮಖಾಂತರ ಮಂಗಾರತಿ ಮಾಡಿ ಪ್ರಸಾದ ವಿನಿಯೋಗ ಮಾಡಲಾಯಿತು. ಕಾರ್ಯಕ್ರಮದಲ್ಲಿ ಡಿ ಸಿ ಸಿ…
ದಾವಣಗೆರೆ: ಜೈನ ಧರ್ಮ ಪುರಾತನವಾದ ಧರ್ಮವಾಗಿದ್ದು ಸಂಸ್ಕೃತಿ, ಸಂಸ್ಕಾರ ಹೊಂದಿದ್ದು, ಜೈನ ಧರ್ಮದ ಬೆಳವಣಿಗೆಗೆ ಧೈರ್ಯ ಮತ್ತು ಆತ್ಮ ವಿಶ್ವಾಸ ಅತಿ ಅಗತ್ಯವಾಗಿದೆ ಎಂದು ಹಿರಿಯ ಶ್ರಾವಕಿ, ಸ್ಥಾಪಕ ಅಧ್ಯಕ್ಷೆ, ಮಾರ್ಗದರ್ಶಿಗಳಾದ ಉಷಾ ಜಯಪ್ರಕಾಶ್ ತಿಳಿಸಿದರು. ಅವರಿಂದು ದಾವಣಗೆರೆಯ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಭವನದಲ್ಲಿ ನಡೆದ ಭಾರತೀಯ ಜೈನ್ ಮಿಲನ್ ವಲಯ — 8ರ ದಾವಣಗೆರೆ ಜೈನ್ ಮಿಲನ್ ದಾವಣಗೆರೆ, ಶ್ರೀ ಆದಿನಾಥ ಜೈನ್ ಮಿಲನ್, ಸಮಸ್ತ ದಿಗಂಬರ ಜೈನ ಸಮಾಜ ದಾವಣಗೆರೆ ಇವರ ಆತಿಥ್ಯದಲ್ಲಿ ನಡೆದ ದಾವಣಗೆರೆ ವಿಭಾಗ ಮಟ್ಟದ ಕಿರಿಯರ ಹಾಗೂ ಹಿರಿಯರ ಜಿನ ಭಜನೆ ಸ್ಪರ್ಧೆಯ 8 ನೇ ಆವೃತ್ತಿ ಉದ್ಘಾಟಿಸಿ ಮಾತನಾಡಿದರು. ಜೈನ ಧರ್ಮದ ಬೆಳವಣಿಗೆಗೆ ಉತ್ತಮ ಮಾರ್ಗದರ್ಶನ –ಒಗ್ಗಟ್ಟು ಅಗತ್ಯ. ಜೈನ ಧರ್ಮ ಉತ್ತಮ ಪ್ರಗತಿಯಲ್ಲಿ ಮುನ್ನಡೆಯುತ್ತಿದ್ದು, ಧರ್ಮದ ಹಲವಾರು ವಿಭಾಗಗಳಲ್ಲಿ ಹಲವಾರು ಹುದ್ದೆಗಳನ್ನು ನಿರ್ವಹಿಸಿರುವ ಬಗ್ಗೆ ನನಗೆ ಸಂತಸ ತಂದಿದೆ, ವನಿತ ಸಮಾಜ ಹಾಗೂ ಪದ್ಮಂಬಾ ಮಹಿಳಾ ಸಮಾಜದ ಏಳಿಗೆ ನನ್ನ…
ಮಧುಗಿರಿ: ನನಗೆ ಕಣ್ಣು ಕಾಣಿಸುವುದಿಲ್ಲ, ಹೆಂಡತಿ ಮಕ್ಕಳು ಯಾರೂ ಇಲ್ಲ, ವೃದ್ಧಾಪ್ಯ ವೇತನದಿಂದ ನಾನು ಜೀವನ ಸಾಗಿಸುತ್ತಿದ್ದೇನೆ. ಆದರೆ, ಹಿಂದೆ ಅಂಚೆ ಇಲಾಖೆ ಕಚೇರಿ ಅಕೌಂಟ್ ಗೆ ನನಗೆ ವೃದ್ಧಾಪ್ಯ ವೇತನ ಬರುತ್ತಿತ್ತು. ಆದರೆ ಈಗ ಕರ್ನಾಟಕ ಗ್ರಾಮೀಣ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸುತ್ತಿರುವುದರಿಂದ ನನಗೆ ಸಮಸ್ಯೆಯಾಗಿದೆ ಎಂದು ವೃದ್ಧರೊಬ್ಬರು ಅಳಲು ತೋಡಿಕೊಂಡಿದ್ದಾರೆ. ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿಯ ನೇರಳೇಕೆರೆ ಗ್ರಾಮದ ನಿವಾಸಿಯಾಗಿರುವ ಕರಿಯಪ್ಪನವರು ಇದೀಗ ತಮಗೆ ನೇರಳೇಕೆರೆ ಅಂಚೆ ಇಲಾಖೆಯ ಖಾತೆಗೆ ವೃದ್ಧಾಪ್ಯ ವೇತನವನ್ನು ಜಮಾ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ಹಿಂದಿನಿಂದಲೂ ಅಂಚೆಕಚೇರಿ ಖಾತೆಗೆ ಹಣ ಬರುತ್ತಿತ್ತು. ಆದರೆ ಈಗ ಅದನ್ನು ಕೈಮರದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಗೆ ವರ್ಗಾಯಿಸಲಾಗುತ್ತಿದೆ. ಹಾಗಾಗಿ ವೃದ್ಧಾಪ್ಯ ವೇತನವನ್ನು ಪಡೆದುಕೊಳ್ಳಲು ಕಷ್ಟಕರವಾಗಿದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ. ಸರ್ಕಾರ ಅಂಗವಿಕಲರಿಗೆ, ವೃದ್ಧರಿಗೆ ಸ್ಥಳೀಯವಾಗಿಯೇ ವೃದ್ಧಾಪ್ಯ ವೇತನ ದೊರೆಯುವಂತೆ ಮಾಡಬೇಕು. ವೃದ್ಧರನ್ನ ಅಲೆದಾಡಿಸದೇ ವೃದ್ಧಾಪ್ಯ ವೇತನ ಅವರ ಕೈಗೆ ಸಿಗುವಂತೆ ಕ್ರಮವಹಿಸಬೇಕು ಎನ್ನುವ ಮಾತುಗಳು…
ತುಮಕೂರು: ಕನ್ನಡ ಸಂಸ್ಕೃತಿಯ ಪ್ರತೀಕವಾಗಿ, ತುಮಕೂರು ಜಿಲ್ಲಾ ಬೀದಿ ಬದಿ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಬಿ.ಎಚ್. ರಸ್ತೆಯಲ್ಲಿರುವ ವ್ಯಾಪಾರಿಗಳು ಕನ್ನಡ ರಾಜ್ಯೋತ್ಸವವನ್ನು ಭಾನುವಾರ ಬಿ.ಎಚ್.ರಸ್ತೆ ಹೈಸ್ಕೂಲ್ ಫೀಲ್ಡ್ ತುಮಕೂರಿನಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸಂಘದ ಜಿಲ್ಲಾಧ್ಯಕ್ಷರಾದ ಭದ್ರೆಗೌಡ ಮಾತನಾಡಿ, ಕನ್ನಡ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಜೀವಂತವಾಗಿಡುವಲ್ಲಿ ಬೀದಿ ಬದಿ ವ್ಯಾಪಾರಿಗಳೂ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಬೆಲೆ ಏರಿಕೆ ಮತ್ತು ಆರ್ಥಿಕ ಸಮಸ್ಯೆಗಳ ನಡುವೆಯೂ ವ್ಯಾಪಾರಿಗಳು ತಮ್ಮ ವ್ಯಾಪಾರವನ್ನು ನಿರ್ವಹಿಸುತ್ತಿರುವ ಬಗೆ, ಅವರು ತಮ್ಮ ನೆಲದ ಪರಂಪರೆಗೆ ಸೇರಿದವರು ಎಂಬುದರ ದೃಷ್ಟಾಂತ ಎಂದು ಅವರು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಈರಣ್ಣ, ಬಿ.ಎಚ್. ರಸ್ತೆ ವಿಭಾಗದ ಅಧ್ಯಕ್ಷ ಮುದ್ದಾಪಜಿ ಹಾಗೂ ಸದಸ್ಯರಾದ ಲೋಕೇಶು, ಪ್ರಕಾಶ್, ಆನಂದ, ಅಶೋಕ, ಶಾಂತಮ್ಮ, ಚಂದ್ರಪ್ಪ ಮತ್ತಿತರರು ಭಾಗವಹಿಸಿ, ಕನ್ನಡ ಭೂಮಿಯ ಬೆಳವಣಿಗೆಗೆ ಮತ್ತು ಭಾಷೆಯ ಅಭಿವೃದ್ದಿಗೆ ತಮ್ಮ ಸಹಕಾರವನ್ನು ನೀಡುವ ಪ್ರತಿಜ್ಞೆತಲುಕಿ, ಕನ್ನಡ ಹಿನ್ನಲೆ ಮತ್ತು ಕರ್ನಾಟಕದ…
ಬೀದರ್: ದಿ.ಹೆಂಗರ್ ಪ್ರಾಜೆಕ್ಟ್ ಸಂಸ್ಥೆ ವತಿಯಿಂದ ಕಿಶೋರಿಯರ ಮೇಳ ಕಾರ್ಯಕ್ರಮವು ಬೀದರ್ ಜಿಲ್ಲೆಯ ಔರದ್ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆಯಿತು. ಸಂತಪೂರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಾದೇವಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ಕೊಳ್ಳರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಸೂರ್ಯಕಾಂತ್ ಕೂಳ್ಳರ್ ಭಾಗವಹಿಸಿದ್ದರು. ಅಹಿಲ್ಯಾ ಸುಗಮ ಅವರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಂತಪೂರ ಸಮುದಾಯ ಆರೋಗ್ಯ ಸಿಬ್ಬಂದಿ ಕಿರಣ್ ಕುಮಾರ್ ಆಯೋಜಕರಾದ ಅನುಸೂಯ ದೊಡ್ಡಿ, ಮಾಲಾಶ್ರೀ ಕೋಟೆ, ಭಾರತಿ ಚಂದಾಪುರೆ ಇತರರು ಇದ್ದರು. ವರದಿ: ಅರವಿಂದ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q