ಪಾವಗಡ: ವಿಶ್ವಕ್ಕೆ ರಾಮಾಯಣ ಗ್ರಂಥದ ಮೂಲಕ ರಾಮ ಲಕ್ಷ್ಮಣ ಸೀತೆ ಹನುಮಂತ ಲವ ಕುಶರನ್ನು ಪರಿಚಯಿಸಿದ ಕೀರ್ತಿ ದೈವ ಸಂಭೂತ ಮಹರ್ಷಿ ವಾಲ್ಮೀಕಿ ರವರಿಗೆ ಸಲ್ಲುತ್ತದೆ. ಕೇಂದ್ರ ಸರ್ಕಾರ ರಾಮನ ಹೆಸರಿನಲ್ಲಿ ರಾಜಕೀಯ ಕೆಸರರಾಚಾಟ ಮಾಡುತ್ತಿದೆ. ರಾಮಾಯಣ ರಚನಾಕಾರ ವಿಶ್ವದ ಮೊದಲ ಕವಿ ಭಗವಾನ್ ಮಹರ್ಷಿ ವಾಲ್ಮೀಕಿರವರ ಮಂದಿರ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದರು ವಾಲ್ಮೀಕಿ ಜಾಗೃತಿ ವೇದಿಕೆ ಅಧ್ಯಕ್ಷ ಲೋಕೇಶ್ ಪಾಳೇಗಾರ ಹೇಳಿದರು.
ತಾಲೂಕಿನ ಕರಿಯಮ್ಮನಪಾಳ್ಯದಲ್ಲಿ ಹದ್ದೂರಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಕಾರ್ಯಕ್ರಮದಲ್ಲಿ ಗ್ರಾಮದ ಮಹಿಳೆಯರು ಅಲಂಕಾರ ಕುಂಬಗಲಂನ್ನೊತ್ತು, ಗ್ರಾಮದ ಬೀದಿಗಳ ವಾದ್ಯಗಳೊಂದಿಗೆ ಗ್ರಾಮದ ಮುಖಂಡರ ಯುವಕರ ಸಮ್ಮುಖದಲ್ಲಿ ಮೆರವಣಿಗೆ ಸಾಗಿದರು. ಗ್ರಾಮ ದೇವತೆಗಳಾದ ಕರಿಯಮ್ಮ ಮತ್ತು ಮಾರಿಕಾಂಬ ದೇವಿಯ ದೇವಸ್ಥಾನಗಳ ಪ್ರದಕ್ಷಿಣೆ ಮಾಡಿ ನಂತರ ವಾಲ್ಮೀಕಿ ಮೂರ್ತಿ ಗೆ ಮಹಾ ಮಂಗಳಾರತಿ ಮಾಡಿ, ವಿಶೇಷ ಪೂಜಾ ಕಾರ್ಯಕ್ರಮ ಮಾಡಿ ನಂತರ ಕುಂಬಗಳ ಮಖಾಂತರ ಮಂಗಾರತಿ ಮಾಡಿ ಪ್ರಸಾದ ವಿನಿಯೋಗ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಡಿ ಸಿ ಸಿ ಸೀನಪ್ಪ ಲೋಕೇಶ್, ಪಾಳೇಗಾರ ಅಂಜನನಾಯಕ, ಎಂ.ಎನ್ ಮೂರ್ತಿ ಭಾಸ್ಕರ್ ನಾಯಕ, ಓಂಕಾರ ನಾಯಕ, ಕೆ.ಗೋಪಾಲ, ರಾಮಪ್ಪ , ಚಿನ್ನಪ್ಪ, ಹನುಮಂತರಾಯಪ್ಪ, ರಾಜ ಕುಮಾರ ಕಾಳಪ್ಪ, ವಿಜಯಮ್ಮ, ಕರಿಯಮ್ಮ, ಶಶಿಕಲಾ, ಸುಮಾ ಸುವರ್ಣ, ಸುನೀತಾ, ಮಂಜಮ್ಮ ಹಾಗೂ ಯುವಕರು ಮಹಿಳೆಯರು ಉಪಸ್ಥಿತರಿದ್ದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q