Author: admin

ತುಮಕೂರು : ರುಡ್‌ಸೆಟ್ ಸಂಸ್ಥೆಯು ಗ್ರಾಮೀಣ ನಿರುದ್ಯೋಗಿ ಯುವಕ-ಯುವತಿಯರಿಗೆ ಉಚಿತವಾಗಿ 30 ದಿನಗಳ ಟಿವಿ ರಿಪೇರಿ ತರಬೇತಿ ನೀಡಲು ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ತರಬೇತಿಯು ಡಿಸೆಂಬರ್ 18 ರಿಂದ ಆರಂಭವಾಗಲಿದ್ದು, ಟಿವಿ ಟೆಕ್ನಿಷಿಯನ್ ತರಬೇತಿಯಲ್ಲಿ ಬೇಸಿಕ್‌ನಿಂದ ಅತ್ಯಧಿಕ ತಂತ್ರಜ್ಞಾನದವರೆಗೆ ತರಬೇತಿ ನೀಡಲಾಗುವುದು. ಥಿಯರಿ ಜೊತೆಯಲ್ಲಿ ಪ್ರಾಕ್ಟಿಕಲ್ ತರಬೇತಿಯನ್ನು ಸಹ ನೀಡಲಾಗುವುದು. ಇಲೆಕ್ಟಾçನಿಕ್ ಸ್ಪೇರ್ ಪಾರ್ಟ್ಸ್, ಕಲರ್ ಟಿವಿ, ಆಂಡ್ರಾಯ್ಡ್, ಸ್ಮಾರ್ಟ್, 4ಏ ಟಿವಿ ಐಇಆ ಮತ್ತು ಐಅಆ ಟಿವಿ, ಮದರ್ ಬೋರ್ಡ್, ಸಾಫ್ಟ್ ವೇರ್ ಪವರ್ ಸಪ್ಲೆöÊ ಜೊತೆಯಲ್ಲಿ ಆಡಿಯೋ ಸಿಸ್ಟಮ್ ರಿಪೇರಿ, ಎಲ್ಲಾ ಕಂಪನಿಯ ಡಿಟಿಹೆಚ್ ಅಳವಡಿಕೆ ಮತ್ತು ಎಲೆಕ್ಟಾçನಿಕ್ ವಸ್ತುಗಳ ರಿಪೇರಿ ಬಗ್ಗೆ ತರಬೇತಿ ನೀಡಲಾಗುವುದು. ಅರ್ಜಿ ಸಲ್ಲಿಸುವವರು 18 ರಿಂದ 45 ವರ್ಷ ವಯೋಮಾನದವರಾಗಿದ್ದು, ಕನ್ನಡ ಭಾಷೆ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಬಿಪಿಎಲ್ ಕಾರ್ಡ್/ ಜಾಬ್ ಕಾರ್ಡ್ ಹಾಗೂ ಆಧಾರ್ ಕಾರ್ಡನ್ನು ಕಡ್ಡಾಯವಾಗಿ ಹೊಂದಿರುವ ಗ್ರಾಮೀಣ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಅರ್ಜಿ ಸಲ್ಲಿಸಲು ನವೆಂಬರ್ 20…

Read More

ಬೆಂಗಳೂರು: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಹೋದರ ಕಳೆದ ಲೋಕಸಭಾ ಚುನಾವಣೆಗೆ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಶಾಸಕರೊಬ್ಬರಿಗೆ ವಂಚನೆ ಮಾಡಿರುವ ಗಂಭೀರ ಆರೋಪ ಕೇಳಿ ಬಂದಿದೆ. ಕೊಟ್ಟ ಹಣ ಕೇಳಿದರೆ ಹಲ್ಲೆ ಮಾಡಿ, ಬೆದರಿಕೆ ಹಾಕಿ, ಜಾತಿ ನಿಂದನೆ ಮಾಡಿರುವ ಆರೋಪ ಕೇಳಿ ಬಂದಿದೆ. ಪ್ರಲ್ಹಾದ ಜೋಶಿ ಸಹೋದರ ಗೋಪಾಲ್ ಜೋಶಿ ಎಂಬುವವರು ಲೋಕಸಭಾ ಚುನಾವಣೆಗೆ ಟಿಕೆಟ್ ಕೊಡಿಸುವುದಾಗಿ ಬರೋಬ್ಬರಿ 2 ಕೋಟಿ ರೂ. ವಂಚಿಸಿರುವುದಾಗಿ ಎಫ್ ಐ ಆರ್ ದಾಖಲಾಗಿದೆ. ಗೋಪಾಲ್ ಜೋಶಿ ಸೇರಿದಂತೆ ಸಹೋದರಿ ವಿಜಯಲಕ್ಷ್ಮಿ ಜೋಶಿ, ಪುತ್ರ ಅಜಯ್ ಜೋಶಿ ವಿರುದ್ಧವೂ ಕೇಸ್ ದಾಖಲಾಗಿದೆ. ಲೋಕಸಭಾ ಚುನಾವಣೆಯಲ್ಲಿ ತಮ್ಮ ಪತಿ ದೇವಾನಂದ ಪುಲ್ ಸಿಂಗ್ ಚೌಹ್ಹಾಣ್ ಅವರಿಗೆ ಪ್ರಹ್ಲಾದ್ ಜೋಷಿ ಪ್ರಭಾವ ಬಳಸಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಅವರ ಸಹೋದರ ಗೋಪಾಲ ಜೋಷಿ ಮತ್ತು ಸಹೋದರಿ ವಿಜಯ್ ಲಕ್ಷ್ಮಿ ಜೋಷಿ ಹಾಗೂ ಗೋಪಾಲ್ ಜೋಷಿ ಮಗ ಅಜಯ್ ಜೋಷಿ ಭರವಸೆ ನೀಡಿ…

Read More

ಬೆಂಗಳೂರು: ಜನ ಸರ್ಕಾರ ವಿರುದ್ಧ ದಂಗೆ ಏಳುವ ಮುನ್ನ ಸಮರೋಪಾದಿಯಲ್ಲಿ ರಸ್ತೆಗಳ ದುರಸ್ತಿ ಮಾಡಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಬೆಂಗಳೂರಿನ ಜನತೆ ಕಾಂಗ್ರೆಸ್ ಸರ್ಕಾರದ ವಿರುದ್ಧ ದಂಗೆ ಏಳುವ ಮುನ್ನ, ರಸ್ತೆ ಗುಂಡಿಗಳಿಂದ ಇನ್ನಷ್ಟು ಅಪಘಾತಗಳು, ಸಾವು-ನೋವು ಸಂಭವಿಸುವ ಮುನ್ನ ಸಮರೋಪಾದಿಯಲ್ಲಿ ರಸ್ತೆಗಳ ದುರಸ್ತಿ ಮಾಡಬೇಕು ಎಂದಿದ್ದಾರೆ. ಬೆಂಗಳೂರು ನಗರಕ್ಕೆ 25,000 ಕೋಟಿ ವಿಶೇಷ ಅನುದಾನ ನೀಡಿ, ರಸ್ತೆಗಳು, ರಾಜಕಾಲುವೆಗಳನ್ನು ಸರಿಪಡಿಸುವ ಕೆಲಸ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಬಯಲಾಯ್ತು ಬ್ರ್ಯಾಂಡ್ ಬೆಂಗಳೂರಿನ ಮುಖವಾಡ, ಬೀದಿಗೆ ಬಂತು ಕಾಂಗ್ರೆಸ್ ಸರ್ಕಾರದ ಬಂಡವಾಳ. ಇಷ್ಟಕ್ಕೂ ಬ್ರ್ಯಾಂಡ್ ಬೆಂಗಳೂರು ಹೆಸರಿನಲ್ಲಿ ಕಾಂಗ್ರೆಸ್ ಪಕ್ಷ ಏನು ಮಾಡಿದೆ ಕಾಂಗ್ರೆಸ್ ಸರ್ಕಾರ ಕಳೆದ 15 ತಿಂಗಳ ಆಡಳಿತದಲ್ಲಿ ಬೆಂಗಳೂರಿಗೆ ಬಿಡಿಗಾಸು ಅನುದಾನ ಸಹ ನೀಡಿಲ್ಲ ಎಂದು ಕಿಡಿಕಾರಿದರು. ಒಂದೇ ಮಳೆಗೆ ಬೆಂಗಳೂರಿನ ತುಂಬಾ ಬಾಯ್ತೆರೆದಿರುವ ಯಮಸ್ವರೂಪಿ ರಸ್ತೆ ಗುಂಡಿಗಳು ಭ್ರಷ್ಟ ಕಾಂಗ್ರೆಸ್…

Read More

ಬೆಂಗಳೂರು: ಭಾರತೀಯ ಅಂಚೆ ಮೂಲಕ ವಿದೇಶಗಳಿಂದ ಮಾದಕ ವಸ್ತುಗಳನ್ನು ನಗರಕ್ಕೆ ಸರಬರಾಜು ಮಾಡಿಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು 21.17 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಸಿಸಿಬಿ ತಂಡವು ಭಾರತೀಯ ಅಂಚೆ ಮೂಲಕ ವಿವಿಧ ವಿದೇಶಗಳಿಂದ ಮಾದಕ ವಸ್ತು ತರಿಸಿಕೊಳ್ಳುತ್ತಿದ್ದ ವ್ಯಕ್ತಿಗಳ ಮೇಲೆ ನಿಗಾ ಇಟ್ಟಿತ್ತು. ಈ ವರ್ಷದಲ್ಲಿ 12 ಪ್ರಕರಣಗಳನ್ನು ದಾಖಲು ಮಾಡಿಕೊಂಡು ಆರೋಪಿಗಳನ್ನು ಬಂಧಿಸಿ ವಿವಿಧ ಮಾದಕ ವಸ್ತುಗಳನ್ನು ವಶಪಡಿಸಿಕೊಂಡು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳನ್ನು ದಾಖಲು ಮಾಡಿಕೊಳ್ಳಲಾಗಿದೆ. ಕಳೆದ ತಿಂಗಳು ನಗರದ ಎಚ್ ಎಸ್ ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಇಂತಹದ್ದೇ ಎರಡು ಪ್ರಕರಣಗಳು ಮತ್ತು ಸಿಸಿಬಿ ಠಾಣೆಯಲ್ಲಿ ಒಂದು ಪ್ರಕರಣ ದಾಖಲಿಸಿದ್ದು ಈ ಪ್ರಕರಣಗಳಲ್ಲಿ ಮೂವರನ್ನು ಬಂಧಿಸಿ ಕ್ರಮ ಕೈಗೊಳ್ಳಲಾಗಿತ್ತು. ನಿಷೇಧ ಮಾದಕ ವಸ್ತುವನ್ನು ಸಂಪೂರ್ಣವಾಗಿ ಬೇರು ಸಮೇತ ಕಿತ್ತೊಗೆಯಲು ಸಿಸಿಬಿಯ ಮಾದಕ ದ್ರವ್ಯ ನಿಗ್ರಹದಳದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಚಾಮರಾಜಪೇಟೆಯ ಫಾರೀನ್ ಪೋಸ್ಟ್ ಆಫೀಸ್ನಲ್ಲಿ…

Read More

ಬಿಗ್ ಬಾಸ್ ಕನ್ನಡ ಸೀಜನ್ 11 ಆರಂಭವಾಗಿದ್ದು, ಮೂರನೇ ವಾರ ನಡೆಯುತ್ತಿದೆ. ಬಿಗ್ ಬಾಸ್ ಎಂದರೆ ಪ್ರೇಕ್ಷಕರಿಗೆ ಅಚ್ಚುಮೆಚ್ಚಿನ ಕಾರ್ಯಕ್ರಮ ಕೂಡ ಹೌದು.ಆದರೆ ಇತ್ತೀಚಿಗೆ ಬಿಗ್ ಬಾಸ್ ಕನ್ನಡ ಪ್ರೇಕ್ಷರನ್ನು ಭಾರೀ ನಿರಾಸೆಗೊಳಿಸುತ್ತಿದೆ. ವರ್ಷದಿಂದ ವರ್ಷಕ್ಕೆ ಈ ಕಾರ್ಯಕ್ರಮ ನೋಡುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಈ ಬಾರಿಯ ಸೀಜನ್ ಗಂತೂ ಜನ ಕ್ಯಾರೇ ಎನ್ನದೇ ಅಸಮಾಧಾನ ಹೊರಹಾಕುತ್ತಿದ್ದಾರೆ. ಬಿಗ್ ಬಾಸ್ ಕನ್ನಡ ಸೀಜನ್ 11 ಆರಂಭವಾದ ದಿನದಿಂದಲೂ ಜಗಳ, ಬೈಗುಳ ಹೊಡೆದಾಟ ಮಿತಿ ಮೀರಿದ ವರ್ತನೆಯೇ ಹೆಚ್ಚಾಗಿದೆ. ದೈಹಿಕ ಹಲ್ಲೆ, ಕೊಳಕು ಮಾತು, ಕೆಟ್ಟ ವರ್ತನೆಗಳೇ ಹೆಚ್ಚಾಗಿದೆ. ಒಂದೆಡೆ ಮಹಿಳೆಯರಿಗೆ ಅಪಮಾನವಾಗುವಂತೆ ಒಬ್ಬ ಸ್ಪರ್ಧಿ ಬೈದರೆ, ಮತ್ತೊಂದೆಡೆ ಆ ಸ್ಪರ್ಧಿಯನ್ನು ಪ್ರಚೋದಿಸುವ ಮಾತುಗಳನ್ನು ಮಹಿಳಾ ಸ್ಪರ್ಧಿಗಳೇ ಆಡುತ್ತಾರೆ. ಇದರಿಂದ ಜಗಳ ಆರಂಭವಾಗಿ ಮೊದಲು ಇಬ್ಬರು ಕೊನೆಗೆ ಎಲ್ಲರೂ ಸೇರಿ ಅದು ಅತಿರೇಖಕ್ಕೆ ಹೋಗಿ ಕೈ ಕೈ ಮಿಲಾಯಿಸಿದ ಪ್ರಸಂಗ ಕೂಡ ನಡೆದಿದೆ. ಹುಚ್ಚ ವೆಂಕಟ್ ಸೇರಿದಂತೆ ಕೆಲವು ಸ್ಪರ್ಧಿಗಳು ಮಿತಿ ಮೀರಿದ ವರ್ತನೆ…

Read More

ಬೆಂಗಳೂರು: ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಹಸ್ತದ ಗುರುತೇ ಅಭ್ಯರ್ಥಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಲಿಂಗಾಯತರ ಮೀಸಲಾತಿ ವಿಚಾರವಾಗಿ ಸಮುದಾಯದ ನಾಯಕರುಗಳ ಜತೆ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣದಲ್ಲಿ ಸಭೆಯ ಕುರಿತು ಮಾತನಾಡಿ, ಯಾವುದೇ ಸಮುದಾಯಕ್ಕೆ ಅನ್ಯಾಯವಾಗಬಾರದು ಎಂಬುದು ನಮ್ಮ ಸರ್ಕಾರದ ಉದ್ದೇಶ. ಮೀಸಲಾತಿ ವಿಚಾರ ನ್ಯಾಯಾಲಯದಲ್ಲಿದ್ದು ನಾವು ಹಸ್ತಕ್ಷೇಪ ಮಾಡಲು ಆಗುವುದಿಲ್ಲ. ಮುಂದಿನ ದಿನಗಳಲ್ಲಿ ಪಂಚಮಸಾಲಿ ಸಮುದಾಯದ ಜತೆ ಮತ್ತೆ ಚರ್ಚೆ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಕಾಲಮಿತಿಯಲ್ಲಿ ಮೀಸಲಾತಿ ನೀಡಬೇಕು ಎಂದರೆ, ಅದು ಸಾಧ್ಯವಾಗುವುದಿಲ್ಲ ಎಂದು ಮುಖ್ಯಮಂತ್ರಿಗಳು ಸ್ಪಷ್ಟವಾಗಿ ಹೇಳಿದ್ದಾರೆ. ಹಿಂದೆ ಬಿಜೆಪಿ ಸರ್ಕಾರ ತರಾತುರಿಯಲ್ಲಿ ಬೇರೆ ಸಮಾಜಗಳಿಗೆ ನೋವಾಗುವಂತೆ ತೀರ್ಮಾನ ಮಾಡಿತ್ತು. ನಂತರ ಆ ಸರ್ಕಾರವೇ ನಾವು ಯಾವುದೇ ಮೀಸಲಾತಿ ಜಾರಿ ಮಾಡುವುದಿಲ್ಲ ಎಂದು ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಿದೆ. ಈ ವಿಚಾರ ನ್ಯಾಯಾಲಯದಲ್ಲಿ ಇರುವಾಗ ನಾವು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.…

Read More

ಬಿಗ್ ಬಾಸ್ ಕನ್ನಡ 11ನೇ ಆವೃತ್ತಿ ಈವರೆಗಿನ ಎಲ್ಲ ಸೀಸನ್ ಗಿಂತಲೂ ಹೆಚ್ಚು ವಿವಾದಕ್ಕೀಡಾಗಿದೆ. ಇದಕ್ಕೆ ಪ್ರಮುಖ ಕಾರಣ ಲಾಯರ್ ಜಗದೀಶ್ ಎಂಟ್ರಿ ಅಂತ ಬಿಗ್ ಬಾಸ್ ವೀಕ್ಷಕರು ಹೇಳುತ್ತಿದ್ದಾರೆ. ಈ ನಡುವೆ ಒಂದೇ ಬಾರಿ ಬಿಗ್ ಬಾಸ್ ಮನೆಯಿಂದ ಇಬ್ಬಿಬ್ಬರು ಸ್ಪರ್ಧಿಗಳು ಒಂದೇ ಬಾರಿಗೆ ಔಟ್ ಆಗಿದ್ದಾರೆ. ವಕೀಲ್ ಸಾಬ್ ಎಂದೇ ಖ್ಯಾತರಾಗಿರುವ ಜಗದೀಶ್ ಮತ್ತು ರಂಜಿತ್‌ರನ್ನು ಬಿಗ್ ಬಾಸ್ ಮನೆಯಿಂದ ಹೊರ ಕಳಿಸಲಾಗಿದ್ದು, ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ. ಬಿಗ್ ಬಾಸ್ ಮನೆಯಲ್ಲಿ ಲಾಯರ್ ಜಗದೀಶ್ ವಿರುದ್ಧ ಉಳಿದ 15 ಅಭ್ಯರ್ಥಿಗಳು ಒಟ್ಟಾಗಿ ಜಗಳವಾಡಿದ್ದು, ಎಲ್ಲರಿಗೂ ಜಗದೀಶ್ ತಿರುಗೇಟು ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಜಗದೀಶ್ ಮಹಿಳಾ ಅಭ್ಯರ್ಥಿಗಳಿಗೆ ಗೌರವ ಕೊಡದೆ ಮಾತನಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಜಗಳ ವಿಕೋಪಕ್ಕೆ ಹೋಗಿದ್ದು, ರಂಜಿತ್ ಜಗದೀಶ್‌ರನ್ನು ತಳ್ಳಿದ್ದಾರೆ. ಇದನ್ನೆಲ್ಲಾ ಗಂಭೀರವಾಗಿ ಪರಿಗಣಿಸಿ ಇಬ್ಬರನ್ನು ಕಾರ್ಯಕ್ರಮದಿಂದ ಹೊರಹಾಕಲಾಗಿದೆ. ಇದೀಗ ಲಾಯರ್ ಜಗದೀಶ್‌ಗೆ ಭಾರೀ ಬೆಂಬಲ ವ್ಯಕ್ತವಾಗಿದ್ದು, ಮಹಿಳೆಯಾದ ಮಾತ್ರಕ್ಕೆ ಏನು ಬೇಕಾದರೂ…

Read More

ಪಾವಗಡ: ತಾಲೂಕಿನಾದ್ಯಂತ ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಹಿನ್ನೆಲೆ ವಿವಿಧೆಡೆ ಅನೇಕ ಹಳೆಯ ಮನೆಗಳು ಮೇಲ್ಚಾವಣಿ ಕುಸಿದಿದೆ.  ಕೆಲವು ಮನೆಗಳಿಗೆ ಮಳೆಯ ನೀರು ನುಗ್ಗಿದೆ. ಮಳೆಯ ತೀವ್ರತೆಗೆ ಮೇಕೆ ಮರಿಗಳು ಸಹ ಸಾವನ್ನಪ್ಪಿರುವ ಘಟನೆ ಶುಕ್ರವಾರ ಬೆಳಗ್ಗೆ ಏಳು ಗಂಟೆಗೆ ನಡೆದಿದೆ. ಪಾವಗಡ ತಾಲೂಕಿನ ಸಿಂಗರೆಡ್ಡಿಹಳ್ಳಿ, ಗಂಗಸಾಗರ, ಕ್ಯಾತಗಾನಕೆರೆ, ಬೆಳ್ಳಿ ಬಟ್ಟಲು ಗ್ರಾಮಗಳಲ್ಲಿ ತಲಾ ಒಂದು ಮನೆಯ ಮೇಲ್ಚಾವಣಿ ಕುಸಿದಿದ್ದು ಸಾಸನಕುಂಟೆ ಗ್ರಾಮದಲ್ಲಿ ಎರಡು ಮನೆಗಳ ಮೇಲ್ಚಾವಣಿ ಕುಸಿದು ಬಿದ್ದಿದ್ದು, ವದನಕಲ್ಲು ಗ್ರಾಮದ ಸಣ್ಣೀರಪ್ಪ ಎನ್ನುವವರಿಗೆ ಸೇರಿದ ಮೂರು ಮೇಕೆ  ಮರಿಗಳು ಮಳೆಯಲ್ಲಿ ನೆನೆದು ಸಾವನ್ನಪ್ಪಿದೆ. ಮತ್ತೊಂದೆಡೆ ತಾಲೂಕಿನ ನಾಗಲಮಡಿಕೆ ಡ್ಯಾಂ ಸೇರಿದಂತೆ ಮತ್ತಿತರ ಕೆರೆಗಳಲ್ಲಿ ನೀರು ಶೇಖರಣೆಯಾಗುತ್ತಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ್ದರೆ. ಕಟಾವು ಹಂತದಲ್ಲಿರುವ ಶೇಂಗಾ ಸೇರಿದಂತೆ ಮತ್ತಿತರ ಬೆಳೆಗಳ ಪಸಲು ಪಡೆಯಲು ರೈತರು ವಾರಸಾಹಾಸ ಪಡುತ್ತಿದ್ದು ನಷ್ಟದ ಭಯದಿಂದ ಜೀವನ ನಡೆಸುತ್ತಿದ್ದಾರೆ. ವರದಿ: ನಂದೀಶ್ ನಾಯ್ಕ, ಪಾವಗಡ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ…

Read More

ಪಾವಗಡ : ಕೊರಟಗೆರೆ ಪಟ್ಟಣದಲ್ಲಿ ವಾಲ್ಮೀಕಿ ಜಯಂತಿಯ ಹಿಂದಿನ ದಿನ ರಾತ್ರಿ ತಾಲ್ಲೂಕು ಆಡಳಿತ ಹಾಗೂ ಸ್ಥಳೀಯ ಪುರಸಭೆ ಇಲಾಖೆ ವಾಲ್ಮೀಕಿ ವಿಗ್ರಹ ತೆರವು ಗೊಳಿಸಿರುವುದನ್ನು ವಿರೋಧಿಸಿ ಪಾವಗಡ ಜಾಗೃತಿ ವೇದಿಕೆ ಅಧ್ಯಕ್ಷರಾದ ಲೋಕೇಶ್ ಪಾಳೇಗಾರ್ ನೇತೃತ್ವದಲ್ಲಿ ತಹಸೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟಿಸಿ, ವಾಲ್ಮೀಕಿ ಸಮಾಜಕ್ಕೆ ಶ್ರೀ ಮಹರ್ಷಿ ವಾಲ್ಮೀಕಿಗೆ ಮಾಡಿರುವ ಅಪಮಾನವನ್ನು ಖಂಡಿಸಿ ನ್ಯಾಯ ದೊರಕಿಸಿಕೊಡುವಂತೆ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಲೋಕೇಶ್ ಪಾಳೇಗಾರ್, ರಾಮಾಯಣ ಗ್ರಂಥವನ್ನು ಇಡೀ ವಿಶ್ವಕ್ಕೆ ಪರಿಚಯಿಸಿದ ಮಹರ್ಷಿ ವಾಲ್ಮೀಕಿಯವರ ವಿಗ್ರಹವನ್ನು ತಾಲ್ಲೂಕು ಆಡಳಿತ ರಾತ್ರೋ ರಾತ್ರೋ ತೆರವುಗೊಳಿಸಿ ನಂತರ ಸಮಾಜದ ಮುಖಂಡರನ್ನು ಮನವೊಲಿಸಿ ಶ್ರೀ ಮಹರ್ಷಿ ವಾಲ್ಮೀಕಿ ವೃತ್ತ ಎಂದು ತಾಲೂಕ್ ಆಡಳಿತ ನಾಮಫಲಕ ಹಾಕಿ ವಾಲ್ಮೀಕಿ ನಂತರ  ಮತ್ತೆ ವಿಗ್ರಹ  ಹಾಗೂ ನಾಮಫಲಕ ತೆರವು ಗೊಳಿಸಿ ಇಡೀ ವಾಲ್ಮೀಕಿ ಸಮಾಜಕ್ಕೆ ಮಾಡಿರುವ ಅವಮಾನವನ್ನು ಖಂಡಿಸಿ, ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ವಾಲ್ಮೀಕಿ ವಿಗ್ರಹ ಮತ್ತು ನಾಮಫಲಕವನ್ನು…

Read More

ಬೆಂಗಳೂರು: 2028 ರಲ್ಲೂ ನಾವೇ ಅಧಿಕಾರಕ್ಕೆ ಬಂದು ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡುವ ಕಾರ್ಯಕ್ರಮ ಮುಂದುವರೆಸುತ್ತೇವೆ. ಮಹಿಳೆಯರು ಜಾತ್ಯತೀತತೆ ಮತ್ತು ಸಾಮಾಜಿಕ ನ್ಯಾಯದ ರಕ್ಷಣೆಗೆ ಮುಂದಾಗಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. KPCC ಕಚೇರಿಯ ಭಾರತ್ ಜೋಡೋ ಭವನದಲ್ಲಿ ಸೌಮ್ಯ ರೆಡ್ಡಿಯವರು ಪ್ರದೇಶ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಜಾತ್ಯತೀತತೆ, ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ ಮತ್ತು ಸಂವಿಧಾನದ ಮೌಲ್ಯಗಳ ಬಗ್ಗೆ ಸ್ಪಷ್ಟತೆ ಕೊಡುವ ಮೂಲಕ ಕಾರ್ಯಕರ್ತೆಯರನ್ನು ಸಜ್ಜುಗೊಳಿಸಿ ಪಕ್ಷ ಸಂಘಟನೆ ಮಾಡುವ ಸಮರ್ಥ್ಯ ಸೌಮ್ಯರೆಡ್ಡಿಯವರಿಗೆ ಇದ್ದು ಈ ದಿಕ್ಕಿನಲ್ಲಿ ಮುಂದುವರೆಯಿರಿ ಎಂದು ಕರೆ ನೀಡಿದರು. ಬಿಜೆಪಿ ಪಕ್ಷವೇ ಬಹುಜನರ, ದುಡಿಯುವ ವರ್ಗಗಳ, ಶ್ರಮಿಕ ಸಂಸ್ಕೃತಿಯ ವಿರೋಧಿ. ಮುಖ್ಯವಾಗಿ ಬಿಜೆಪಿ ಮಹಿಳಾ ಮೀಸಲಾತಿಯ, ಮಹಿಳಾ ಹಕ್ಕುಗಳ ವಿರೋಧಿ. ಇದನ್ನು ಸಮಸ್ತ ಮಹಿಳೆಯರಿಗೆ ಅರ್ಥ ಮಾಡಿಸುವ ಕೆಲಸ ಮಾಡಿ ಎಂದು ಕರೆ ನೀಡಿದರು. ಮಹಿಳಾ ಮೀಸಲಾತಿ ಜಾರಿಗೆ ತಂದಿದ್ದು ಕಾಂಗ್ರೆಸ್ ಪಕ್ಷ. ಮಹಿಳೆಯರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ತುಂಬುವ…

Read More