nammatumakuru

    Subscribe to Updates

    Get the latest creative news from FooBar about art, design and business.

    What's Hot

    ತುಮಕೂರು ವಿವಿ 18ನೇ ಘಟಿಕೋತ್ಸವ: ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ

    July 9, 2025

    ಜು.10 ರಂದು ಶ್ರೀಶಿರಡಿ ಸಾಯಿಬಾಬಾ ಮಂದಿರದಲ್ಲಿ ಗುರು ಪೂರ್ಣಿಮೆ ಮಹೋತ್ಸವ

    July 9, 2025

    ಯಾವ ಮಗುವು ಶಿಕ್ಷಣದಿಂದ ವಂಚಿತರಾಗಬಾರದು: ಗೋಳೂರು ಸ್ನೇಕ್ ಬಸವರಾಜು

    July 8, 2025
    Facebook Twitter Instagram
    ಟ್ರೆಂಡಿಂಗ್
    • ತುಮಕೂರು ವಿವಿ 18ನೇ ಘಟಿಕೋತ್ಸವ: ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ
    • ಜು.10 ರಂದು ಶ್ರೀಶಿರಡಿ ಸಾಯಿಬಾಬಾ ಮಂದಿರದಲ್ಲಿ ಗುರು ಪೂರ್ಣಿಮೆ ಮಹೋತ್ಸವ
    • ಯಾವ ಮಗುವು ಶಿಕ್ಷಣದಿಂದ ವಂಚಿತರಾಗಬಾರದು: ಗೋಳೂರು ಸ್ನೇಕ್ ಬಸವರಾಜು
    • ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗೆ ವಿಘ್ನ!: ಹೆಚ್ಚುವರಿ ಅರಣ್ಯ ಬಳಕೆಗೆ ಕೇಂದ್ರ ನಕಾರ
    • ಪ್ರತ್ಯೇಕ ಪ್ರಕರಣ: ರಾಜ್ಯದಲ್ಲಿಂದು ಹೃದಯಾಘಾತಕ್ಕೆ ಇಬ್ಬರು ಬಲಿ
    • ವಸತಿ ಯೋಜನೆಯಡಿ ಅರ್ಜಿ ಆಹ್ವಾನ
    • ಬೀದರ್ | ಮಾಂಜ್ರಾ ನದಿಯಲ್ಲಿ ಕೊಚ್ಚಿ ಹೋದ ಮೃತ ರೈತನ ಮನೆಗೆ ಸಚಿವ ಈಶ್ವರ್ ಖಂಡ್ರೆ ಭೇಟಿ: ಪರಿಹಾರ ವಿತರಣೆ
    • ಮಹಾತ್ಮ ಗಾಂಧಿಯವರ ಪ್ರತಿಮೆ ಅಪವಿತ್ರಗೊಳಿಸಲು ಯತ್ನ: ಆರೋಪಿಯ ಬಂಧನ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಬೇಲದಕುಪ್ಪೆ ಮಹದೇಶ್ವರ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ: ಪೂರ್ವಭಾವಿ ಸಭೆ
    ಜಿಲ್ಲಾ ಸುದ್ದಿ November 17, 2024

    ಬೇಲದಕುಪ್ಪೆ ಮಹದೇಶ್ವರ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ: ಪೂರ್ವಭಾವಿ ಸಭೆ

    By adminNovember 17, 2024No Comments3 Mins Read
    belada kuppe

    ಸರಗೂರು: ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಅರಣ್ಯ ವ್ಯಾಪ್ತಿಯ ಬೇಲದಕುಪ್ಪೆ ಮಹದೇಶ್ವರ ದೇವಸ್ಥಾನದಲ್ಲಿ  ಕಡೆ ಕಾರ್ತಿಕ ಮಾಸದಂದು ನಡೆಯಲಿರುವ ಜಾತ್ರಾ ಮಹೋತ್ಸವವನ್ನು ವಿಜೃಂಭಣೆಯಿಂದ ನಿಯಮ ಅನುಸಾರವಾಗಿ ಎಂದಿನoತೆ  ಆಚರಿಸಲು ನಿರ್ಧರಿಸಲಾಯಿತು.

    ತಾಲೂಕಿನ ಸಮೀಪದ ಹೆಡಿಯಾಲ ವಲಯ ಅರಣ್ಯ ಕಚೇರಿ ಮುಂಭಾಗದಲ್ಲಿ ಶನಿವಾರ ದಂದು ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಶಾಸಕ ಅನಿಲ್ ಚಿಕ್ಕಮಾದು ರವರು ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆಯಲ್ಲಿ ನ.23ರಿಂದ 26 ವರೆಗೆ ನಾಲ್ಕು ದಿನಗಳು ಗ್ರಾಮೀಣ ಹಾಗೂ ಧಾರ್ಮಿಕ ಸಂಪ್ರದಾಯದoತೆ  ಜಾತ್ರೆ ನಡೆಯಲಿದೆ.  ಇದಕ್ಕೆ ಸಾರ್ವಜನಿಕರು, ಇಲಾಖಾಧಿಕಾರಿಗಳು ಸಹಕಾರ ನೀಡಬೇಕು ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.


    Provided by
    Provided by

    ಖಾಸಗಿ ಮತ್ತು ಜಾನುವಾರು ಗಳಿಗೆ ಭಕ್ತಾಧಿಗಳಿಗೆ ಪ್ರಸಾದ . ನಾಲ್ಕೈದು ಗ್ರಾಮಗಳಿಂದ ಆಲಹರವಿಗಳು.ಬವಸಗಳು ಹತ್ತರಿಂದ ಇಪ್ಪತ್ತು ಜನರು ಬರುತ್ತವೆ.ಅವರಿಗೆ ಕಂದಾಯ . ಅರಣ್ಯ ಇಲಾಖೆ ಅಧಿಕಾರಿಗಳು ಪಾಸ್ ನೀಡಿ ಒಳಗಡೆಗೆ ಬಿಡಬೇಕು.ಅದರ ಜೊತೆಯಲ್ಲಿ ಮಠದ ಸ್ವಾಮೀಜಿಗಳು ಕಾರ್ಯಕ್ರಮಕ್ಕೆ ಅಡಚಣೆ ಮಾಡಬಾರದು ಅಧಿಕಾರಿಗಳಿಗೆ ತಿಳಿಸಿದರು.

    ದೇವಸ್ಥಾನದ ಸುತ್ತ ದೀಪಾಲಂಕಾರ ಹಾಗೂ ಬರುವ ಭಕ್ತರಿಗೆ ಕುಡಿಯುವ ನೀರು, ಮಂಗಳವಾದ್ಯ, ಇನ್ನೂ ಕಾರ್ಯಕ್ರಮಕ್ಕೆ ಅವಕಾಶ ನೀಡಬೇಕು. ನನಗೆ ಯಾವುದೇ ಕಾರ್ಯಕ್ರಮಗಳು ಇದ್ದರೂ ಅವುಗಳನ್ನು ಮುಂದೂಡಿ ಭಾನುವಾರ ಮತ್ತು ಸೋಮವಾರ ನಿಮ್ಮ ಜೊತೆಯಲ್ಲಿ ಇದ್ದು ಧಾರ್ಮಿಕ ಕಾರ್ಯಕ್ರಮಗಳು ಮುಗಿಸಿಕೊಂಡು ಹೋಗುತ್ತೇನೆ ಎಂದು ಸಾರ್ವಜನಿಕರ ಮುಂದೆ ಹೇಳಿದರು.

    ಕಳೆದ ವರ್ಷ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಕೆಎಸ್ಸಾರ್ಟಿಸಿ ಇಲಾಖೆ ವತಿಯಿಂದ 100 ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಹೇಳಿದರು. ಅದರೆ ಇಲಾಖೆಯವರು ಬರೇ 45 ಬಸ್ ವ್ಯವಸ್ಥೆ ಮಾಡಿದ್ದರು. ಈ ಸಲ ಈ ರೀತಿ ಮರುಕಳಿಸಬಾರದು ನಾಲ್ಕು ದಿನಗಳ ಕಾಲ ಜಾತ್ರಾ ಮಹೋತ್ಸವದಲ್ಲಿ ಬಸ್ ವ್ಯವಸ್ಥೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಸ್ಥಳದಲ್ಲೇ ಜಿಲ್ಲಾ ಬಸ್ ವ್ಯವಸ್ಥಾಪಕರಿಗೆ ಕರೆ ಮಾಡಿ 100 ಬಸ್ ವ್ಯವಸ್ಥೆ ಮಾಡಬೇಕು, ಎಚ್.ಡಿ.ಕೋಟೆ ಮತ್ತು ಸರಗೂರು, ನಂಜನಗೂಡು, ಗುಂಡ್ಲುಪೇಟೆ ತಾಲೂಕಿನಿಂದ ಡಿಪೋಗಳಿಂದ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಿದರು.

    ದೇವಸ್ಥಾನದ ಅರ್ಚಕರಿಗೆ ದಿನನಿತ್ಯ ದೇವರಿಗೆ ಪೂಜೆ ಪುನಸ್ಕಾರ ಮಾಡಲು  ಹಾಗೂ ಅವರು ಉಳಿದುಕೊಳ್ಳಲು ಅವಕಾಶ ನೀಡಬೇಕೆಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು. ಊಟ, ತಿಂಡಿ ವ್ಯವಸ್ಥೆಗೆ ಅವಕಾಶವಿಲ್ಲ. ಎತ್ತಿನಗಾಡಿ, ಖಾಸಗಿ ವಾಹನಗಳಿಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ಸಭೆಯಲ್ಲಿ ನಿರ್ಧರಿಸಿದರು.

    ಬೇಲದಕುಪ್ಪೆ ಮಹದೇಶ್ವರ ಸಮಿತಿ ಅಧ್ಯಕ್ಷ ನಿಂಗರಾಜು ಮಾತನಾಡಿ, ಈ ಬಾರಿ ಮುಜರಾಯಿ ಇಲಾಖೆಗೆ ದೇವಸ್ಥಾನ ಸೇರಿಕೊಂಡಿದೆ. ಆದ್ದರಿಂದ ವಿಜೃಂಭಣೆಯಿಂದ ಆಚರಿಸುವ ನಂಬಿಕೆ ಇದೆ. ಎಲ್ಲ ಇಲಾಖೆ ಸೇರಿಕೊಂಡು ಜಾತ್ರಾ ಮಹೋತ್ಸವ ಮಾಡಬೇಕು ಎಂದರು.

    ಮುಖಂಡ ಶಂಭುಲಿಂಗನಾಯಕ ಮಾತನಾಡಿ, ನಮ್ಮ ಪರಂಪರೆಯಿಂದ ಜಾತ್ರಾ ಮಹೋತ್ಸವನ್ನು ಮಾಡಿಕೊಂಡು ಬರುತ್ತಿದ್ದೇವೆ. ಅರಣ್ಯ ಇಲಾಖೆ ಅಧಿಕಾರಿಗಳು ಜಾತ್ರೆ ಮಾಡಬೇಕು.ನಾವು ನಿಮ್ಮನ್ನು ಏನು ಕೇಳುವುದಿಲ್ಲ.ಕಾನೂನು ಚೌಕಟ್ಟಿನಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಮಾಡುತ್ತೇವೆ. ಶಾಸಕರು ಬಳಿ ಪರವಾನಗಿ ಪಡೆದು ಜಾತ್ರೆಯನ್ನು ಮಾಡಬೇಕು. ಭಕ್ತಾಧಿಗಳ ರಕ್ಷಣೆಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ತಾತ್ಕಾಲಿಕವಾಗಿ ಆಸ್ಪತ್ರೆ ತೆರೆಯಬೇಕು. ಜಾತ್ರೆ ಮುಗಿಯುವ ತನಕ ಪೊಲೀಸ್ ಬಂದೋಬಸ್ತು, ತಾತ್ಕಾಲಿಕ ಪೊಲೀಸ್ ಠಾಣೆ ಸ್ಥಾಪನೆ ಮಾಡುವುದು. ಹಾಗೂ ಕೆಎಸ್ಸಾರ್ಟಿಸಿ ಇಲಾಖೆಯಿಂದ ಕಳೆದ ವರ್ಷ 100 ಬಸ್ ವ್ಯವಸ್ಥೆ ಮಾಡಲಾಗಿದೆ ಎಂದರು.

    ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಚಿಕ್ಕವೀರನಾಯಕ ಮಾತನಾಡಿ,  ಈ ಬಾರಿ ಗ್ಯಾರಂಟಿ ವ್ಯವಸ್ಥೆ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ ಎಂದು ಮನವಿ ಮಾಡಿಕೊಂಡಾಗ, ಕೆಎಸ್ಸಾರ್ಟಿಸಿ ಅಧಿಕಾರಿಗಳು ಈ ಬಾರಿ 70 ರಿಂದ 100 ಬಸ್ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು. ದೇವಸ್ಥಾನಕ್ಕೆ ಸುಣ್ಣ, ಬಣ್ಣ ಬಳಿಯುವುದು. ರಸ್ತೆ ಕಾಮಗಾರಿ ಕೆಲಸ, ದೇವಸ್ಥಾನಕ್ಕೆ ದೀಪಾಲಂಕಾರ, ಸೌಂಡ್ಸ್, ಶಾಮಿಯಾನ, ಪಲ್ಲಕ್ಕಿ ಬೋರ್ಡ್, ಜನರೇಟರ್ ವ್ಯವಸ್ಥೆ, ದೇವರ ಮಂಟಪ ಬಿಡುವುದು. ಪೂಜಾಗೆ ಹಣ್ಣು, ಕಾಯಿ ಇತರೆ ಸಾಮಗ್ರಿಗಳನ್ನು ಮಾರಾಟಕ್ಕೆ ಅವಕಾಶ, ಸೋಮವಾರ 11:30ಕ್ಕೆ ಹಾಲರವೆ ಸೇವೆ, ಕೊಂಡ ಮಹೋತ್ಸವ ಕಲಾತಂಡ, ವಾದ್ಯಗೋಷ್ಠಿ, ಕೋಲಾಟ, ನಗಾರಿ ವೀರಗಾಸೆ ಸೇರಿದಂತೆ ಕಲಾತಂಡಗಳ ಅವಕಾಶಕ್ಕೆ ಅನುಮತಿ ಭಕ್ತಾಧಿಗಳಿಗೆ ಅಗತ್ಯ ಮಾಡಬೇಕು ಎಂದು ಸಮಿತಿ ಸದಸ್ಯರು ಕೇಳಿಸಿಕೊಂಡಾಗ,   ಶಾಸಕರು  ಮಾತನಾಡಿ, ಜಾತ್ರೆ ನಡೆಸುವ ವಿಚಾರದಲ್ಲಿ ಅರಣ್ಯ ಇಲಾಖೆ, ಸ್ಥಳೀಯ ಜನರ ನಡುವೆ ಕೆಲವು ಬಾಂಧವ್ಯ ಮಾಡಿಕೊಂಡು ಅರಣ್ಯ ಇಲಾಖೆ ಮೇಲ್ಪಟ್ಟ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿ ಅವಕಾಶ ಮಾಡಲಾಗುವುದು ಎಂದರು.

    ಜನರು ಅರಣ್ಯ ರಕ್ಷಣೆಯೊಂದಿಗೆ ಇಲಾಖೆಯ ಕಾನೂನುಗಳನ್ನು ಗೌರವಿಸಬೇಕಿದೆ. ಅದೇ ರೀತಿ ಅರಣ್ಯ ಇಲಾಖೆಯ ಅಧಿಕಾರಿಗಳು ಸಾಮಾನ್ಯ ಜನರ ಭಾವನೆಗಳ ಜೊತೆ ಆಟವಾಡಬಾರದು. ಈ ಭಾಗದಲ್ಲಿ ಹೀಗಾಗಿ ಅವರು ಧಾರ್ಮಿಕ ಭಾವನೆಗಳಿಗೆ ದಕ್ಕೆ ತರಬಾರದು ಎಂದು ತಿಳಿಸಿದರು.

    ಜಾತ್ರೆ ಮಾಮೂಲಿಯಂತೆ ನಡೆಸಲು ಅವಕಾಶ ಕಲ್ಪಿಸಬೇಕು. ಬಸ್ ವ್ಯವಸ್ಥೆ ನಂಜನಗೂಡು ಮತ್ತು ಗುಂಡ್ಲುಪೇಟೆ ಹಾಗೂ ಹುಣಸೂರು, ಎಚ್.ಡಿ.ಕೋಟೆ ಮತ್ತು ಸರಗೂರು ತಾಲ್ಲೂಕಿನಿಂದ ಎಲ್ಲಾ ಕಡೆಯಿಂದ ಜಾತ್ರಾ ನಡೆಯಲಿರುವ ದೇವಸ್ಥಾನದ ಬಳಿಯ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

    ಅಕ್ಕಪಕ್ಕದ ಗ್ರಾಮಗಳ ಮುಖಂಡರು ಎಲ್ಲಾ ಸಮಸ್ಯೆಗಳನ್ನೂ ಹೇಳಿಕೊಂಡು. ಅ ಸಮಸ್ಯೆಗಳನ್ನು ಬಗೆಹರಿಸಿಕೊಟ್ಟರು.

    ಈ ಸಂದರ್ಭದಲ್ಲಿ ತಹಶೀಲ್ದಾರ್ ಮೋಹನಕುಮಾರಿ, ಇಓ ಪ್ರೇಮ್ ಕುಮಾರ್, ಎಸಿಎಫ್ ಸತೀಶ್, ಸರ್ಕಲ್ ಇನ್ಸ್ಪೆಕ್ಟರ್ ಲಕ್ಷ್ಮೀಕಾಂತ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಪಿ.ರವಿ, ಸಿಂಡಿಕೇಟ್ ಬ್ಯಾಂಕ್ ಸದಸ್ಯ ಕ್ಯಾತನಹಳ್ಳಿ ನಾಗರಾಜು, ಆರ್‌ಎಫ್‌ಓ ವಿವೇಕ್, ಅಮೃತ, ಮುಜರಾಯಿ ಇಲಾಖೆ ಕಾರ್ಯನಿರ್ವಾಹಕ ಅಧಿಕಾರಿ ರಘು, ರಾಕೇಶ್, ಸಮಿತಿ ಅಧ್ಯಕ ನಿಂಗರಾಜು,ಮುಖಂಡರಾದ ಶಂಭುಲಿoಗನಾಯಕ, ರಾಮೇಲಿಂಗೌಡ,ಲಿಂಗರಾಜು, ಮಹದೇವಸ್ವಾಮಿ, ಮಹಾದೇವಯ್ಯ, ಪುಟ್ಟಸ್ವಾಮಿ, ಶಿವಮೂರ್ತಿ, ರಾಜೇಶ್, ಶಿವರಾಜು, ಶಿವಕುಮಾರ್, ಕೆಂಡಗಣ್ಣಸ್ವಾಮಿ, ಪ್ರಕಾಶ್, ಲಿಂಗರಾಜು, ನಾಗರಾಜು,ಮಹದೇವಯ್ಯ, ಸಿದ್ದರಾಜು, ನಟರಾಜು, ಪಾಲುಪತ್ತೇದಾರು ಮಹದೇವಸ್ವಾಮಿ,  ನಾಗೇಂದ್ರ, ಸಂಜಯ್, ಶೇಖರ್, ಬಸವಣ್ಣ, ರವಿ ನಂಜುಂಡಿ ಪಾಪಣ್ಣ ಸೇರಿದಂತೆ ಭಕ್ತಾಧಿಗಳು ಹಾಜರಿದ್ದರು.

    ವರದಿ: ಹಾದನೂರು ಚಂದ್ರ


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

    admin
    • Website

    Related Posts

    ಯಾವ ಮಗುವು ಶಿಕ್ಷಣದಿಂದ ವಂಚಿತರಾಗಬಾರದು: ಗೋಳೂರು ಸ್ನೇಕ್ ಬಸವರಾಜು

    July 8, 2025

    ವಸತಿ ಯೋಜನೆಯಡಿ ಅರ್ಜಿ ಆಹ್ವಾನ

    July 8, 2025

    ಬೀದರ್ | ಮಾಂಜ್ರಾ ನದಿಯಲ್ಲಿ ಕೊಚ್ಚಿ ಹೋದ ಮೃತ ರೈತನ ಮನೆಗೆ ಸಚಿವ ಈಶ್ವರ್ ಖಂಡ್ರೆ ಭೇಟಿ: ಪರಿಹಾರ ವಿತರಣೆ

    July 8, 2025
    Our Picks

    ಮಹಾತ್ಮ ಗಾಂಧಿಯವರ ಪ್ರತಿಮೆ ಅಪವಿತ್ರಗೊಳಿಸಲು ಯತ್ನ: ಆರೋಪಿಯ ಬಂಧನ

    July 8, 2025

    ಮದುವೆ ದಿಬ್ಬಣದ ಕಾರು ಭೀಕರ ಅಪಘಾತ: ವರ ಸಹಿತ 8 ಮಂದಿ ಸಾವು

    July 5, 2025

    ಪತಿಯಿಂದಲೇ ಮಹಿಳಾ ಕೌನ್ಸಿಲರ್‌ ಬರ್ಬರ ಹತ್ಯೆ!

    July 4, 2025

    ಪ್ರಧಾನಿ ಮೋದಿಗೆ ಘಾನಾದ ರಾಷ್ಟ್ರೀಯ ಗೌರವ ಪ್ರದಾನ

    July 3, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ತುಮಕೂರು ವಿವಿ 18ನೇ ಘಟಿಕೋತ್ಸವ: ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ

    July 9, 2025

    ತುಮಕೂರು:  ತುಮಕೂರು ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ 18ನೇ ವಿವಿ ಘಟಿಕೋತ್ಸವದಲ್ಲಿ ಮೂವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ರಾಜ್ಯಪಾಲ ಥಾವರ್…

    ಜು.10 ರಂದು ಶ್ರೀಶಿರಡಿ ಸಾಯಿಬಾಬಾ ಮಂದಿರದಲ್ಲಿ ಗುರು ಪೂರ್ಣಿಮೆ ಮಹೋತ್ಸವ

    July 9, 2025

    ಯಾವ ಮಗುವು ಶಿಕ್ಷಣದಿಂದ ವಂಚಿತರಾಗಬಾರದು: ಗೋಳೂರು ಸ್ನೇಕ್ ಬಸವರಾಜು

    July 8, 2025

    ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗೆ ವಿಘ್ನ!: ಹೆಚ್ಚುವರಿ ಅರಣ್ಯ ಬಳಕೆಗೆ ಕೇಂದ್ರ ನಕಾರ

    July 8, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.