ತುಮಕೂರು: ಪ್ಲಾಸ್ಟಿಕ್ ಮುಕ್ತ ಹಾಗೂ ಪರಿಸರ ಸ್ನೇಹಿ ಕ್ಯಾಂಪಸ್ ಮಾಡಲು ವಿವಿಯ ಜೀವ ವೈವಿಧ್ಯಕೋಶದೊಂದಿಗೆ ನಾವೆಲ್ಲರೂ ಕೈಜೋಡಿಸೋಣ ಎಂದು ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಹೇಳಿದರು.
ವಿವಿ ವಿಜ್ಞಾನಕಾಲೇಜಿನಜೀವಾವರಣಶಾಸ್ತ್ರ ಮತ್ತು ಪರಿಸರ ವಿಜ್ಞಾನಅಧ್ಯಯನ ವಿಭಾಗವು ಶುಕ್ರವಾರ ಆಯೋಜಿಸಿದ್ದ ‘ತುಮಕೂರು ವಿವಿ ಆವರಣ ಹಾಗೂ ಬಿದರಕಟ್ಟೆಕ್ಯಾಂಪಸ್‌ನಲ್ಲಿ ಮರಗಳ ಜಿಯೋಟ್ಯಾಗಿಂಗ್ ಮತ್ತುಜೀವವೈವಿಧ್ಯದಾಖಲಾತಿ’ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಕೇವಲ ಪ್ರಚಾರಕ್ಕಾಗಿ ಸಸಿಗಳನ್ನು ನೆಡಬಾರದು.ಸಸಿಯು ಹೆಮ್ಮರವಾಗುವ ತನಕವೂ ಅದರ ಪಾಲನೆ, ಪೋಷಣೆ ನಮ್ಮದಾಗಬೇಕು. ಮಾಲಿನ್ಯರಹಿತ ಪರಿಸರ ನಿರ್ಮಿಸಲು ಸಾಧ್ಯವಾಗದಿದ್ದರೂ, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಶುದ್ಧ ಗಾಳಿ, ನೀರು ನಮ್ಮಆರೋಗ್ಯಕಾಪಾಡುವುದರಲ್ಲಿ ಮುಖ್ಯಪಾತ್ರವಹಿಸುತ್ತವೆ ಎಂದರು.
ಕುಲಸಚಿವೆನಾಹಿದಾ ಜಮ್ ಜಮ್ ಮಾತನಾಡಿ, ಜಾಗತಿಕತಾಪಮಾನ ತಡೆಯಲು ನಮ್ಮಗುರಿ ಹಾಗೂ ದೃಷ್ಟಿಜೊತೆಯಲ್ಲಿ ಸಾಗಬೇಕು. ಮಾಲಿನ್ಯರಹಿತ ಬದುಕು ನಮ್ಮದಾಗಲು ಪರಿಸರ ಕಾಳಜಿಯ ಕುರಿತು ಅರಿವು ಮೂಡಿಸುವ ಕೆಲಸವಾಗಬೇಕು ಎಂದು ತಿಳಿಸಿದರು.
ವಿವಿ ವಿಜ್ಞಾನ ಕಾಲೇಜಿನಪ್ರಾಂಶುಪಾಲ ಪ್ರೊ.ಶೇಟ್ ಎಂ.ಪ್ರಕಾಶ್, ಜೀವಾವರಣಶಾಸ್ತ್ರ ಮತ್ತು ಪರಿಸರ ವಿಜ್ಞಾನಅಧ್ಯಯನ ವಿಭಾಗದ ಸಂಯೋಜಕ ಡಾ.ದ್ವಾರಕಾನಾಥ್ ವಿ. ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q