ಹೈದರಾಬಾದ್: ದೇಶದ ಗಡಿಗಳನ್ನು ಸುರಕ್ಷಿತವಾಗಿಸುವಷ್ಟೇ, ದೇಶದ ಸಂಸ್ಕೃತಿಯನ್ನು ಭದ್ರಪಡಿಸುವುದು ಮುಖ್ಯ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಕೋಟಿ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ ಏಕತೆ ದುರ್ಬಲಗೊಂಡಾಗ, ಆಕ್ರಮಣಕಾರರು ನಮ ನಾಗರಿಕತೆ ಮತ್ತು ನಮ ಸಂಸ್ಕೃತಿಯನ್ನು ನಾಶಮಾಡಲು ಪ್ರಯತ್ನವನ್ನು ಮಾಡಿದ್ದಾರೆ, ಇತಿಹಾಸದಿಂದ ಕಲಿಯುವ ಮೂಲಕ ಏಕತೆಯ ಪ್ರತಿಜ್ಞೆಯನ್ನು ತೆಗೆದುಕೊಳ್ಳಬೇಕು ಎಂದು ಎಚ್ಚರಿಸಿದರು.
ವಿಭಜಿಸುವವರು, ಅವರು ವಿವಿಧ ಧರ್ಮಗಳು, ಜಾತಿಗಳು ಮತ್ತು ಪಂಗಡಗಳು ಸೇರಿದಂತೆ ಹಲವು ರೀತಿಯಲ್ಲಿ ಒಡೆಯಲು ಪ್ರಯತ್ನಿಸುತ್ತಾರೆ ಆದರೆ, ನೀವು ವಿಭಜನೆಯಾಗಬಾರದು, ಇಡೀ ದೇಶ ಒಟ್ಟಿಗೆ ಇರಬೇಕು, ನಾವು ಒಗ್ಗಟ್ಟಿನಿಂದ ಇರಬೇಕು, ನಾವು ವಿಭಜನೆಯನ್ನು ತಪ್ಪಿಸಿದರೆ, ನಾವು ಅಭಿವೃದ್ಧಿಯತ್ತ ಸಾಗುತ್ತೇವೆ ಮತ್ತು ಅಭಿವೃದ್ಧಿ ಹೊಂದಿದ ಮತ್ತು ಬಲಿಷ್ಠ ಭಾರತವನ್ನು ನಿರ್ಮಿಸುತ್ತೇವೆ ಎಂದು ಅವರು ಹೇಳಿದರು.
ಇದೇ ಏಕತೆಯನ್ನು ಖಾತ್ರಿಪಡಿಸುವ ಮೂಲಕ, ಭಾರತವು ಇಡೀ ಜಗತ್ತನ್ನು ಒಂದೇ ಕುಟುಂಬವಾಗಿ ನೋಡುವ ಮೂಲಕ ದೇಶದಲ್ಲಿ ಮಾತ್ರವಲ್ಲದೆ, ಇಡೀ ಜಗತ್ತಿಗೆ ಬೆಳಕು ಹರಡಬೇಕು ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296