Author: admin

ಬೆಂಗಳೂರು: 2.15 ಕೋಟಿ ರೂ. ಮೌಲ್ಯದ ಎಂಡಿಎಂಎ ಕ್ರಿಸ್ಟಲ್ಸ್ ಮತ್ತು ಕೊಕೇನ್ ಮಾರಾಟ ಮಾಡಿದ ಆರೋಪದ ಮೇಲೆ ಮಹಿಳೆ ಸೇರಿದಂತೆ ಇಬ್ಬರು ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಪೊಲೀಸರು ಬಂಧಿತರಿಂದ 490 ಗ್ರಾಂ ಎಂಡಿಎಂಎ ಮತ್ತು 43 ಗ್ರಾಂ ಕೊಕೇನ್ ಅನ್ನು ವಶಪಡಿಸಿಕೊಂಡಿದ್ದಾರೆ.  ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯ ಇನ್ಸ್‌ ಪೆಕ್ಟರ್‌ ಗೆ ಅಕ್ಟೋಬರ್ 8 ರಂದು ಎಲೆಕ್ಟ್ರಾನಿಕ್ ಸಿಟಿಯ 1ನೇ ಹಂತದ ಮಹಾಲಕ್ಷ್ಮಿ ಲೇಔಟ್‌ ನಲ್ಲಿ ತೆರೆದ ಪ್ರದೇಶದಲ್ಲಿ ವ್ಯಕ್ತಿಯೊಬ್ಬರು ಅಕ್ರಮವಾಗಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ನೀಡಿದ ಸುಳಿವಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಮಾಹಿತಿ ಆಧಾರದ ಮೇಲೆ, ಎನ್‌ ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿತು ಮತ್ತು ಒಂದು ತಂಡವು ದಾಳಿ ನಡೆಸಿ, ಅಕ್ರಮವಾಗಿ ಮಾದಕ ದ್ರವ್ಯ ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆಯನ್ನು ಬಂಧಿಸಿತು. ವಿಚಾರಣೆಯ ಸಮಯದಲ್ಲಿ, ಆರೋಪಿಯು ‘ಹೆಚ್ಚಿನ ಹಣ ಗಳಿಸಲು’ ಸಾರ್ವಜನಿಕರಿಗೆ MDMA (ಸ್ಫಟಿಕ ರೂಪದಲ್ಲಿ)…

Read More

ಕಲಬುರಗಿ: 3 ತಿಂಗಳಿಂದ ಸಂಬಳ ಸಿಗದಿದ್ದಕ್ಕೆ ಬೇಸರಗೊಂಡ ಗ್ರಂಥಾಲಯ ಮೇಲ್ವಿಚಾರಕಿಯೋರ್ವರು ಆತ್ಮಹತ್ಯೆಗೆ ಶರಣಾದ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಭಾಗ್ಯಶ್ರಿ (45) ಎಂದು ಗುರುತಿಸಲಾಗಿದ್ದು, ಅವರು ಮಳಖೇಡ ಸರ್ಕಾರಿ ಗ್ರಂಥಾಲಯದಲ್ಲಿ ಮೇಲ್ವಿಚಾರಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಗ್ರಾಮ ಪಂಚಾಯಿತಿ ಸದಸ್ಯ ಪಾಂಡುಸಿಂಗ್ ಚವ್ಹಾಣ್ ಅವರ ಹೇಳಿಕೆಯ ಪ್ರಕಾರ, ‘ಮೂರು ತಿಂಗಳಿಂದ ವೇತನ ಪಾವತಿ ಆಗಿರಲಿಲ್ಲ. ಅಧಿಕಾರಿಗಳು ಸತಾಯಿಸುತ್ತಿದ್ದರು. ಇದೇ ಕಾರಣಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಪತ್ರ ಬರೆದಿಟ್ಟಿದ್ದಾರೆ. ಡೆತ್ ನೋಟ್​​ನಲ್ಲಿ ಪಿಡಿಓ ಗ್ರಾಮ ಪಂಚಾಯತಿ ಅಧ್ಯಕ್ಷರ ಹೆಸರು ಉಲ್ಲೇಖಿಸಿ ಮಳಖೇಡ ಗ್ರಾಮ ಪಂಚಾಯತಿಯ ಆವರಣದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿಸಿದ್ದಾರೆ. ಘಟನೆಯ ನಂತರ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಸ್ಥಳೀಯರು “ಸೇಡಂ ಶಾಸಕ ಡಾ. ಶರಣಪ್ರಕಾಶ ಪಾಟೀಲ್ ಸ್ಥಳಕ್ಕೆ ಬರುವವರೆಗೂ ಮೃತದೇಹವನ್ನು ಹೊರತೆಗೆಯುವುದಿಲ್ಲ ಎಂದು ಪಟ್ಟು ಹಿಡಿದು ಗ್ರಂಥಾಲಯದ ಎದುರು ಪ್ರತಿಭಟನೆ ನಡೆಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್…

Read More

ತುಮಕೂರು: ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ತುಮುಲ್) ಆಡಳಿತ ಮಂಡಳಿ ನಿರ್ದೇಶಕ ಸ್ಥಾನದಿಂದ ಮಧುಗಿರಿ ತಾಲ್ಲೂಕಿನ ಬಿ.ನಾಗೇಶಬಾಬು ಅವರನ್ನು ಅನರ್ಹಗೊಳಿಸಿ ಹೈಕೋರ್ಟ್‌ ಆದೇಶಿಸಿದೆ. ನಾಗೇಶ್‌ ಬಾಬು ವಿರುದ್ಧ ಸ್ಪರ್ಧಿಸಿ 9 ಮತಗಳ ಅಂತರದಿಂದ ಸೋತಿದ್ದ ಕೊಂಡವಾಡಿ ಚಂದ್ರಶೇಖರ್ ತುಮುಲ್ ನಿರ್ದೇಶಕರಾಗಿ ಆಯ್ಕೆಯಾಗಲಿದ್ದಾರೆ. ಜಿಲ್ಲಾ ಚುನಾವಣೆ ಅಧಿಕಾರಿ ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಆಯ್ಕೆಯನ್ನು ಘೋಷಣೆ ಮಾಡಬೇಕಿದೆ. ಮಧುಗಿರಿ ತಾಲ್ಲೂಕು ಬಂದ್ರೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘವನ್ನು ನಾಗೇಶ್‌ ಬಾಬು ಪ್ರತಿನಿಧಿಸಿದ್ದರು. ಈ ಸಂಘವನ್ನು ನಿಯಮಾನುಸಾರ ಅನರ್ಹಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಬಾಬು ಹೈಕೋರ್ಟ್‌ ಮೆಟ್ಟಿಲೇರಿದ್ದು, ಮತದಾನಕ್ಕೆ ಕೋರ್ಟ್‌ ಅವಕಾಶ ನೀಡಿತ್ತು. ನಂತರ ನಡೆದ ಚುನಾವಣೆಯಲ್ಲಿ ಬಾಬು ಆಯ್ಕೆ ಆಗಿದ್ದರು. ಈಗ ಅಂತಿಮ ತೀರ್ಪು ಹೊರ ಬಿದ್ದಿದ್ದು, ಮತದಾನಕ್ಕೆ ನೀಡಿದ್ದ ಅವಕಾಶವನ್ನು ಕೋರ್ಟ್‌ ರದ್ದುಪಡಿಸಿದ್ದು, ಇದರಿಂದಾಗಿ ನಿರ್ದೇಶಕ ಸ್ಥಾನ ಕಳೆದುಕೊಂಡಿದ್ದಾರೆ. ತುಮುಲ್ ನಿರ್ದೇಶಕರ ಚುನಾವಣೆಗೆ ಮುನ್ನ ಮತದಾರರ ಪಟ್ಟಿ ಸಿದ್ಧಪಡಿಸಲಾಗುತ್ತದೆ. ಪ್ರತಿ ಡೇರಿಯಿಂದ ಒಂದು ಮತ ಚಲಾಯಿಸಲು ಅವಕಾಶ ಇರುತ್ತದೆ. ಡೇರಿಯಿಂದ…

Read More

ಬೀದರ್ : ಬಿಜೆಪಿಯು ಗುಜರಾತ್ ನಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಮೂರ್ತಿಯನ್ನು 3 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿದೆ. ಆದರೆ, ವಲ್ಲಭಭಾಯಿ ಪಟೇಲ್ ಅವರು ಕಾಂಗ್ರೆಸ್ ಸರ್ಕಾರದಲ್ಲಿ ಗೃಹಮಂತ್ರಿಯಾಗಿದ್ದಾಗ ಆರೆಸ್ಸೆಸ್ ಅನ್ನು ಎರಡು ಸಲ ನಿಷೇಧಿಸಿದ್ದರು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಹೇಳಿದ್ದಾರೆ. ಇಂದು ಬೀದರ್ ನಗರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಆರೆಸ್ಸೆಸ್ ಅನ್ನು ನಿಷೇಧ ಮಾಡಿದ್ದು, ಈ ಬಿಜೆಪಿಗರು ಮರೆತಿದ್ದಾರೆ. ಅವರಿಗೆ ಅದನ್ನು ನೆನಪಿಸಬೇಕು ಎಂದರು. ದೇಶ ಪ್ರೀತಿಸುವವರೆಲ್ಲ ಆರೆಸ್ಸೆಸ್ ಪ್ರೀತಿಸುತ್ತಾರೆ ಎನ್ನುವ ಪೋಸ್ಟರ್ ಅಂಟಿಸಲಾಗುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಅವರು ಏನಾದರು ಅಂಟಿಸಲಿ, ದೇಶಪ್ರೇಮ ಎನ್ನುವುದು ಪ್ರತಿಯೊಬ್ಬ ಭಾರತೀಯ ಪ್ರಜೆಗಳಲ್ಲೂ ಇದೆ. ಆರೆಸ್ಸೆಸ್ ನವರಿಗೆ ಎಕ್ಸ್ಟ್ರಾ ದೇಶಪ್ರೇಮ ಇರುವುದಿಲ್ಲ. ಭಾರತದಲ್ಲಿರುವ 145 ಕೋಟಿ ಜನರೂ ಕೂಡ ದೇಶಪ್ರೇಮಿಗಳೇ ಎಂದು ಹೇಳಿದರು. ನಮ್ಮ ಗ್ಯಾರಂಟಿಗಳನ್ನೇ ಮೋದಿಯವರು ಎಲ್ಲ ಕಡೆಗೆ ಹಿಡಿದುಕೊಂಡು ಓಡಾಡುತ್ತಿದ್ದಾರೆ. ಗ್ಯಾರಂಟಿಗಿಂತ ಒಳ್ಳೆ…

Read More

ತುಮಕೂರು: ನಂದಿಹಳ್ಳಿ–ಮಲ್ಲಸಂದ್ರ– ವಸಂತನರಸಾಪುರ ಬೈಪಾಸ್‌ ರಸ್ತೆ (ನಾಲ್ಕು ಪಥ) ನಿರ್ಮಾಣ ವಿರೋಧಿಸಿ, ಅಧಿಸೂಚನೆ ವಾಪಸ್‌ ಗೆ ಆಗ್ರಹಿಸಿ ಯೋಜನೆ ಪ್ರದೇಶದ 46 ಹಳ್ಳಿಗಳ ರೈತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ನಂದಿಹಳ್ಳಿ—ಮಲ್ಲಸಂದ್ರ–ವಸಂತನರಸಾಪುರ ಬೈಪಾಸ್ ರಸ್ತೆ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ರೈತರು ನಗರದ ಟೌನ್‌ ಹಾಲ್‌ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಂತರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ, ರಸ್ತೆ ನಿರ್ಮಾಣದ ಹೆಸರಿನಲ್ಲಿ ರೈತರ ಜಮೀನು ಕಿತ್ತುಕೊಳ್ಳಬಾರದು. ಅನ್ನ ನೀಡುವ ರೈತರ ಬಾಯಿಗೆ ಮಣ್ಣು ಹಾಕಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಯೋಜನೆ ಕೈಬಿಡದಿದ್ದರೆ ಹೋರಾಟ ಮುಂದುವರಿಸಲು ನಿರ್ಧರಿಸಿದರು. ನಿಯಮದಂತೆ ಗ್ರಾಮ ಸಭೆ ಕರೆದು ಒಪ್ಪಿಗೆ ಪಡೆದುಕೊಳ್ಳಬೇಕು. ಸಾಮಾಜಿಕ ಪರಿಣಾಮದ ಬಗ್ಗೆ ಅಧ್ಯಯನ ನಡೆಸಬೇಕು. ಈಗಾಗಲೇ ಇರುವ ರಿಂಗ್‌ ರಸ್ತೆ ಅಭಿವೃದ್ಧಿಪಡಿಸಬೇಕು. ನಗರದಲ್ಲಿ ವಾಹನ ದಟ್ಟಣೆ ತಗ್ಗಿಸಲು ಪರ್ಯಾಯ ವ್ಯವಸ್ಥೆಗಳ ಬಗ್ಗೆ ತಜ್ಞರು, ರೈತ ಸಂಘಟನೆಗಳ ಪ್ರಮುಖರು, ಚಿಂತಕರ ಜತೆಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಮನವಿ ಪತ್ರದಲ್ಲಿ ಕೇಳಿಕೊಂಡಿದ್ದಾರೆ. ಬೈಪಾಸ್‌…

Read More

ತುರುವೇಕೆರೆ: ಸಂವಿಧಾನದ ಅಡಿಯಲ್ಲಿ ಪ್ರತಿರೋಧ ವ್ಯಕ್ತಡಿಸಲು ಪ್ರತಿಯೊಬ್ಬರಿಗೂ ಅವಕಾಶವಿದೆ. ಆದರೆ ಕಾನೂನು ಕೈಗೆ ತೆಗೆದುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ ಎಂದು ಚಲನಚಿತ್ರ ನಟ ಚೇತನ್ ಅಹಿಂಸಾ ಹೇಳಿದರು. ಪಟ್ಟಣದಲ್ಲಿ ತಾಲ್ಲೂಕು ಕಚೇರಿ ಮುಂಭಾಗ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಅಂಬೇಡ್ಕರ್‌ವಾದ ಹಾಗೂ ವಿವಿಧ ಸಂಘಟನೆಗಳು ಸೋಮವಾರ ಹಮ್ಮಿಕೊಂಡಿದ್ದ ಸಂವಿಧಾನದ ಉಳಿವಿಗಾಗಿ ಪ್ರತಿಭಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಗವಾಯಿ ಅವರ ಮೇಲೆ ವಕೀಲನೊಬ್ಬ ಶೂ ಎಸೆದಿದ್ದು ಅಕ್ಷಮ್ಯ ಅಪರಾಧ. ಇದು ಸಂವಿಧಾನಕ್ಕೆ ಮಾಡಿದ ಅಪಮಾನ, ಹಿರಿಯ ವಕೀಲನಿಗೆ ಕಾನೂನು ಕೈಗೆ ಎತ್ತಿಕೊಳ್ಳಲು ಅಧಿಕಾರ ಕೊಟ್ಟವರು ಯಾರು? ಸಂವಿಧಾನದ ಅಡಿಯಲ್ಲಿ ಪ್ರತಿರೋಧ ವ್ಯಕ್ತಪಡಿಸಬಹುದಾಗಿತ್ತು. ಕಾನೂನು ವಿರುದ್ಧವಾಗಿ ನಡೆದುಕೊಂಡ ವಕೀಲರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯ ಮಾಡಿದರು. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಅಂಬೇಡ್ಕರ್‌ ವಾದ ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ ಮಾತನಾಡಿ, ಇದೊಂದು ಘೋರ ಕೃತ್ಯವಾಗಿದೆ. ರಾಷ್ಟ್ರಕ್ಕೆ, ಸಂವಿಧಾನಕ್ಕೆ, ಅಂಬೇಡ್ಕರ್‌ ಗೆ ಮಾಡಿದ ಅಪಮಾನ. ಇಂತಹ ಮನುವಾದಿಗಳು ಈ ದೇಶವನ್ನು…

Read More

ಔರಾದ್ : ತನ್ನ ನಾಕುತಂತಿಯ ಮೂಲಕ ಕನ್ನಡಕ್ಕೆ ಎರಡನೇ ಜ್ಞಾನಪೀಠ ಪ್ರಶಸ್ತಿ ದೊರೆಕಿಸಿಕೊಟ್ಟ ದ.ರಾ.ಬೇಂದ್ರೆ ಅವರ ವಿಚಾರಗಳು ಜಾತಿ, ಮತ, ಧರ್ಮ ಹಾಗೂ ಪ್ರದೇಶ ಮೀರಿ ಜನರನ್ನು ಇಂದಿಗೂ ಆಕರ್ಷಿಸುತ್ತಿವೆ ಎಂದು ಹಿರಿಯ ರಂಗಕರ್ಮಿ ಅನಂತ ಕೃಷ್ಣ ದೇಶಪಾಂಡೆ ಅವರು ತಿಳಿಸಿದರು. ಔರಾದ್ ಪಟ್ಟಣದ ಅಮರೇಶ್ವರ್ ಪದವಿ ಮಹಾವಿದ್ಯಾಲಯದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿರುವ ‘ಮೂಡಲ ಬೆಳಕು–ಬೇಂದ್ರೆ ಜೀವನ ದರ್ಶನ’ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು ಕನ್ನಡ ನಾಡು ಕಂಡ ಒಬ್ಬ ಅಪರೂಪದ ಶಬ್ದ ಗಾರುಡಿಗ ಬೇಂದ್ರೆ ಅವರಾಗಿದ್ದು, ಕನ್ನಡ ಕಾವ್ಯ ಕ್ಷೇತ್ರಕ್ಕೆ ಹೊಸ ಹೊಳಪು ತಂದುಕೊಟ್ಟಿದ್ದರು. ಉತ್ಸಾಹದ ಚಿಲುಮೆಯಾಗಿ, ನೊಂದ ಜೀವಕ್ಕೆ ಸಾಂತ್ವನ ನೀಡಬಲ್ಲ, ಪ್ರೀತಿ ಪ್ರೇಮ ಮೂಡಿಸಬಲ್ಲ ಕವನಗಳು ರಚಿಸಿದ್ದರು. ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ ಎಂಬುದನ್ನು ಬದುಕಿನುದ್ದಕ್ಕೂ ಅವರು ಸಾರಿ ಹೇಳಿದರು ಎಂದರು. ನರಬಲಿ ಕವನದಿಂದ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾದ ಬೇಂದ್ರೆ ಕೆಲ ತಿಂಗಳುಗಳ ಕಾಲ ಸೆರೆವಾಸ ಅನುಭವಿಸಿದ್ದರು. ಈ ಸಮಯದಲ್ಲಿ ಹುಟ್ಟಿದ…

Read More

ತುಮಕೂರು: ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಟಿಡಿಸಿಸಿಐ) ಹಾಗೂ  ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ ಪ್ರಾದೇಶಿಕ ಕಚೇರಿ ತುಮಕೂರು  ವತಿಯಿಂದ  ಪ್ರಧಾನಮಂತ್ರಿ  ವಿಕಾಸಿತ ಭಾರತ ರೋಜ್ಗಾರ್ ಯೋಜನೆ ಬಗ್ಗೆ  ಅಕ್ಟೋಬರ್ 15ರಂದು ಬೆಳಗ್ಗೆ 11:30 –12:30ವರೆಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ವಂಶಿ ಕೃಷ್ಣ ದಿಂಡಿ, ಪ್ರಾದೇಶಿಕ ಪಿ.ಎಫ್. ಆಯುಕ್ತರು ಪ್ರಾದೇಶಿಕ ಕಛೇರಿ, ತುಮಕೂರು ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿ  ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. TDCCI ಕಟ್ಟಡ, ಎಪಿಎಂಸಿ ಯಾರ್ಡ್, ಬಟವಾಡಿ, ತುಮಕೂರು ಇಲ್ಲಿ ಕಾರ್ಯಕ್ರಮ ನಡೆಯಲಿದೆ. ತುಮಕೂರು ಜಿಲ್ಲೆಯ ಕೈಗಾರಿಕೋದ್ಯಮಿಗಳು, ವಾಣಿಜ್ಯೋದ್ಯಮಿಗಳು, ವಿವಿಧ ಅಸೋಸಿಯೇಷನ್ ಗಳ ಅಧ್ಯಕ್ಷರು/ ಕಾರ್ಯದರ್ಶಿಗಳು  /ಕಾರ್ಯಕಾರಿ ಮಂಡಳಿ ಸದಸ್ಯರು, ವಿವಿಧ ಬ್ಯಾಂಕುಗಳ ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ವರ್ಗ, ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು/ ಸಿಬ್ಬಂದಿ ವರ್ಗ, ವಿವಿಧ ಆಸ್ಪತ್ರೆಗಳ ವೈದ್ಯರು ಹಾಗೂ  ಸಿಬ್ಬಂದಿ ವರ್ಗದವರು ಹಾಗೂ ತುಮಕೂರಿನ  ಜನಸಾಮಾನ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಸದುಪಯೋಗ ಪಡೆದುಕೊಳ್ಳುವಂತೆ ಪ್ರಕಟಣೆ ತಿಳಿಸಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ…

Read More

ಉಡುಪಿ: ಹಿರಿಯ ರಂಗಭೂಮಿ ಕಲಾವಿದ ಮತ್ತು ಹಾಸ್ಯ ಚಿತ್ರನಟ ರಾಜು ತಾಳಿಕೋಟೆ ನಿನ್ನೆ ಸಂಜೆ ನಿಧನರಾಗಿದ್ದಾರೆ. ಉಡುಪಿಯಲ್ಲಿ ಸಿನಿಮಾವೊಂದರ ಚಿತ್ರೀಕರಣದ ವೇಳೆ ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ. ಹೃದಯಾಘಾತದಿಂದ ರಾಜು ತಾಳಿಕೋಟೆ ಅಸ್ವಸ್ಥರಾದ ತಕ್ಷಣವೇ ಅವರನ್ನು ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈ ವೇಳೆ ಪರೀಕ್ಷೆ ನಡೆಸಿದ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ವೃತ್ತಿ ರಂಗಭೂಮಿ ಮೂಲಕ ಸಿನಿಮಾ ರಂಗಕ್ಕೆ ರಾಜು ತಾಳಿಕೋಟೆ ಎಂಟ್ರಿ ಕೊಟ್ಟಿದ್ದರು. ರಾಜು ತಾಳಿಕೋಟೆ ಅವರು ಮನಸಾರೆ, ಪಂಚರಂಗಿ, ಮತ್ತೊಂದು ಮದುವೆನಾ, ಮೈನಾ ಸಿನಿಮಾಗಳಲ್ಲಿ ನಟಿಸಿದ್ದಾರೆ. ಉತ್ತರ ಕರ್ನಾಟಕದ ರಂಗಭೂಮಿಯಲ್ಲಿ ‘ಖಾಸ್ಗತೇಶ್ವರ’ ನಾಟಕ ಮಂಡಳಿಯ ಮಾಲೀಕರಾಗಿ, ಕುಡುಕನ ಪಾತ್ರಗಳ ಮೂಲಕ ಮನೆಮಾತಾಗಿದ್ದರು. ಅವರ ನಿಧನದ ಸುದ್ದಿ ತಿಳಿದು ಚಿತ್ರರಂಗದ ಗಣ್ಯರು ಮತ್ತು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸುತ್ತಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ವಿಜಯಪುರ: ವಿಜಯಪುರ ತಾಲ್ಲೂಕಿನ ಕಣ್ಣೂರು ಗ್ರಾಮದಲ್ಲಿ ಇಬ್ಬರು ಯುವಕರನ್ನು ಕ್ರೂರವಾಗಿ ಕೊಲೆ ಮಾಡಲಾಗಿದ್ದು, ಹಳೆ ವೈಷಮ್ಯದ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಮೃತರನ್ನು ಸಾಗರ್ ಬೆಲುಂಡಗಿ (25) ಮತ್ತು ಇಸಾಹಕ್ ಖುರೇಶಿ (24) ಎಂದು ಗುರುತಿಸಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಭಾನುವಾರ ಅಪರಾಧ ಎಸಗಿದ ತಕ್ಷಣ ದಾಳಿಕೋರರು ಸ್ಥಳದಿಂದ ಪರಾರಿಯಾಗಿದ್ದಾರೆ. ಸಾಗರ್ ಮತ್ತು ಇಸಾಹಕ್ ಇಬ್ಬರೂ ಎರಡು ವರ್ಷಗಳ ಹಿಂದೆ ತಮ್ಮೂರ್ ಗ್ರಾಮದ ಈರನಗೌಡ ಎಂಬ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದರು. ಈ ವೈಷಮ್ಯಕ್ಕೆ ಇಬ್ಬರ ಕೊಲೆ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಹಲ್ಲೆ ಬಳಿಕ ಹಲವು ದಿನಗಳ ಕಾಲ ಚಿಕಿತ್ಸೆ ಪಡೆಯುತ್ತಿದ್ದ ಈರನಗೌಡ ಅವರು ಚಿಕಿತ್ಸೆಗೆ ಸ್ಪಂದಿಸದೆ ಸಾವಿಗೀಡಾಗಿದ್ದರು. ಈರನಗೌಡ ಅವರ ಸಾವಿಗೆ ಸೇಡು ತೀರಿಸಿಕೊಳ್ಳಲು ಇಬ್ಬರನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ವಿಜಯಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಗಳನ್ನು ಪತ್ತೆಹಚ್ಚುವ ಪ್ರಯತ್ನಗಳು ನಡೆಯುತ್ತಿವೆ.…

Read More