Author: admin

ಶಿರಾ: ತಾಲೂಕಿನ ಹುಲಿಕುಂಟೆ ಹೋಬಳಿಯ ಬರಗೂರು ಸಮೀಪದ ಗೋಣಿಹಳ್ಳಿ, ಬಡಮಾರನಹಳ್ಳಿ ಸೇರಿದಂತೆ ಹಲವು ಭಾಗಗಳಲ್ಲಿ ಕಳೆದ ಮೂರು ದಿನಗಳ ಹಿಂದೆ ಬಿದ್ದ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಿಂದ ಅನೇಕ ರೈತರ ದಾಳಿಂಬೆ ಬೆಳೆ ನಷ್ಟಗೊಂಡಿದೆ. ಗೋಣಿಹಳ್ಳಿ ಗ್ರಾಮದ ರೈತ ಸಿದ್ದಪ್ಪ, ಬಡಮಾರನಹಳ್ಳಿ ಭಾಗದ ವೀರ ಮುಲ್ಲಪ್ಪ, ಗುರುಮೂರ್ತಿ ಸೇರಿದಂತೆ ಬಹುತೇಕ ರೈತರ ದಾಳಿಂಬೆ ತೋಟಗಳು ವ್ಯಾಪಕವಾಗಿ ಹಾನಿಗೊಳಗಾಗಿವೆ. ಆಲಿಕಲ್ಲು ಮಳೆಯಿಂದ ಫಸಲಿಗೆ ಬಂದಿದ್ದ ದಾಳಿಂಬೆ ಕೊಳೆತು ಹೋಗುವ ಹಂತ ತಲುಪಿವೆ. ಈ ಸಂಬಂಧ ವಿಧಾನ ಪರಿಷತ್ ಶಾಸಕ ಚಿದಾನಂದ್ ಎಂ.ಗೌಡ ಶನಿವಾರ ಈ ಭಾಗಕ್ಕೆ ಭೇಟಿ ನೀಡಿ ರೈತರ ಸಂಕಷ್ಟವನ್ನು ಆಲಿಸಿದ್ದು, ತಹಶೀಲ್ದಾರ್ ಹಾಗೂ ತೋಟಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ಪಡೆದು ಸರ್ಕಾರಕ್ಕೆ ಸಲ್ಲಿಸುವಂತೆ ಸೂಚನೆಯನ್ನು ನೀಡಿದ್ದಾರೆ. ರೈತರ ದಾಳಿಂಬೆ ಬೆಳೆ ನಷ್ಟ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಚಿದಾನಂದ್‌ ಗೌಡ ರೈತರು ಬೆಳೆ ವಿಮೆ ಮಾಡಿಸಿರಬಹುದು. ಬೆಳೆ ವಿಮೆ ಹಣವನ್ನು ಹೊರತುಪಡಿಸಿ ಸರ್ಕಾರ ರೈತರ ಬೆಳೆ ನಷ್ಟವನ್ನು ಕಟ್ಟಿಕೊಡುವ ಕೆಲಸವನ್ನು ಪ್ರಾಮಾಣಿಕವಾಗಿ…

Read More

ತುರುವೇಕೆರೆ: ಮಾ. 24 ರಂದು ಮಂಗಳವಾರ ಜಿಲ್ಲಾಧಿಕಾರಿಗಳು ತಾಲೂಕಿಗೆ ಆಗಮಿಸಲಿದ್ದಾರೆ ಎಂದು ತಹಶೀಲ್ದಾರ್ ಎಸ್.ಎ.ಕುಂಞಿ ಅಹಮದ್  ತಿಳಿಸಿದ್ದಾರೆ. ಮಾ. 24 ರಂದು ಮಂಗಳವಾರ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ತಾಲೂಕಿನ ದಬ್ಬೇಘಟ್ಟ ಹೋಬಳಿಯ ಮಾವಿನಕೆರೆಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಆಗಮಿಸಿ, ಸಾರ್ವಜನಿಕರ ಕುಂದು ಕೊರತೆ ಆಲಿಸಲಿದ್ದಾರೆ ಅಂತಾ ಅವರು ತಿಳಿಸಿದರು. ಅದೇ ದಿನ ಮಧ್ಯಾಹ್ನ 2.30 ರಿಂದ 5.30 ರವರೆಗೆ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಜನ ಸಂಪರ್ಕ ಸಭೆಯಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಪಾಲ್ಗೊಳ್ಳಲಿದ್ದಾರೆ ಎಂದರು. ಸದರಿ ಜನ ಸಂಪರ್ಕ ಸಭೆಯಲ್ಲಿ ಸಾರ್ವಜನಿಕರು ಯಾವುದೇ ಸಮಸ್ಯೆ ಅಥವಾ ಕುಂದು ಕೊರತೆಗಳಿದ್ದಲ್ಲಿ ಆಗಮಿಸಿ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲು ತಿಳಿಸಲಾಗಿದೆ. ಈ ಸದಾವಕಾಶವನ್ನು ತಾಲೂಕಿನ ಜನತೆ ಸದುಪಯೋಗಪಡಿಸಿಕೊಳ್ಳಬೇಕೆಂದು ಅವರು ವಿನಂತಿಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ಮಧುಗಿರಿ: ರಂಜಾನ್ ಹಬ್ಬ ಪವಿತ್ರವಾದ ಹಬ್ಬವಾಗಿದ್ದು ಹಬ್ಬವು ಸಹೋದರತ್ವವನ್ನು ಸಾರುತ್ತದೆ ಎಂದು ಶಾಸಕರಾದ ಕೆ.ಎನ್.ರಾಜಣ್ಣ ತಿಳಿಸಿದರು. ಪಟ್ಟಣದ ಶಿರಾ ರಸ್ತೆಯ ಸಮೀಪವಿರುವ ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಧುಗಿರಿಯಲ್ಲಿ ಹಿಂದೂ ಮುಸ್ಲಿಂ ಬಾಂಧವರು ಸಹೋದರತೆಯಿಂದ ಬಾಳ್ವೆಯನ್ನು ನಡೆಸುತ್ತಿದ್ದಾರೆ ಎಂದರು. ರಂಜಾನ್ ಹಬ್ಬವನ್ನು ಒಂದು ತಿಂಗಳ ಕಾಲ ಉಪವಾಸ ಇರುವುದರ ಮೂಲಕ ಭಕ್ತಿಯಿಂದ ಆಚರಿಸಲಾಗುತ್ತದೆ. ಎಲ್ಲರ ಒಳಿತಿಗಾಗಿ ವಿಶೇಷವಾಗಿ ಪ್ರಾರ್ಥನೆಯನ್ನು ಸಲ್ಲಿಸಿರುವುದು ಹಾಗೂ ಪ್ರಪಂಚದಲ್ಲಿನ ಅಶಾಂತಿಯನ್ನು ತೊರೆದು ಶಾಂತಿಯು ಮತ್ತು ನೆಮ್ಮದಿಯಿಂದ ಎಲ್ಲಾರೂ ಬಾಳುವಂತಹ ವಾತಾವರಣ ಸೃಷ್ಟಿಯಾಗಬೇಕಾಗಿದೆ. ಯಾವುದೇ ಜಾತಿ, ಧರ್ಮದವರಾಗಿದ್ದರೂ ಸಹ ನಾವೆಲ್ಲಾರೂ ಭಾರತ ದೇಶದ ಮಕ್ಕಳು ಹಾಗೂ ಹಕ್ಕುದಾರರಾಗಿದ್ದು ಸಹೋದರತೆಯಿಂದ ಬಾಳ್ವೆಯನ್ನು ನಡೆಸೋಣ. ಅವರಣದಲ್ಲಿ ನಮಾಜ್ ಮಾಡಲು ಅನುಕೂಲವಾಗುವಂತೆ ಮುಂದಿನ ದಿನಗಳಲ್ಲಿ ಶೆಡ್‌ ನ್ನು ನಿರ್ಮಿಸಿಕೊಡಲಾಗುವುದು ಎಂದರು. ಉಪವಿಭಾಗಾಧಿಕಾರಿ ಗೂಟೂರು ಶಿವಪ್ಪ, ಸಿಪಿಐ ಹನುಮಂತರಾಯಪ್ಪ, ಪಿಎಸ್‌ಐ ಚಂದ್ರಶೇಖರ್, ಜಾಮೀಯ ಮಸೀದಿ ಅಧ್ಯಕ್ಷರಾದ ಅಲೀಮ್, ಉಪಾಧ್ಯಕ್ಷ ಜಾಫರ್ ಸಾದಿಕ್, ಪದಾಧಿಕಾರಿಗಳಾದ ಬಾಬ…

Read More

ತುಮಕೂರು: ಏಪ್ರಿಲ್ 1ರಂದು ಸಿದ್ದಗಂಗಯ ತ್ರಿವಿಧ ದಾಸೋಹಿ ಲಿಂಗೈಕ್ಯ ಕರ್ನಾಟಕ ರತ್ನ ಡಾ. ಶ್ರೀಶಿವಕುಮಾರಮಹಾಸ್ವಾಮೀಜಿ ಅವರ 119ನೇ ಜನ್ಮಜಯಂತೋತ್ಸವ ಹಿನ್ನೆಲೆಯಲ್ಲಿ ಶ್ರೀ ಮಠದಲ್ಲಿ ಗುರುವಂದನಾ ಮಹೋತ್ಸವ ನಡೆಯಲಿದೆ. ಈ ಬಾರಿಯ ಗುರುವಂದನಾ ಮಹೋತ್ಸವದ ವಿಶೇಷ ಅತಿಥಿಗಳಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪಾಲ್ಗೊಳ್ಳುತ್ತಿದ್ದಾರೆ. ಸಿದ್ದಗಂಗಾ ಮಠದಲ್ಲಿ ಕಾರ್ಯಕ್ರಮದ ಹಿನ್ನೆಲೆ ನಡೆದ ಪೂರ್ವಭಾವಿ ಸಭೆಯಲ್ಲಿ ತುಮಕೂರು ಕ್ಷೇತ್ರದ ಸಂಸದರು, ಕೇಂದ್ರ ಸಚಿವರೂ ಆಗಿರುವ ವಿ.ಸೋಮಣ್ಣ ಭಾಗಿಯಾಗಿದ್ದರು. ಸಿದ್ದಗಂಗಾ ಮಠದಲ್ಲಿ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಪೂರ್ವಭಾವಿ ಸಭೆಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ವಿ.ಸೋಮಣ್ಣ ಅವರು ಭಕ್ತರ ಪಾಲಿಗೆ ನಡೆದಾಡುವ ದೇವರೆಂದೇ ಪೂಜ್ಯ ಡಾ. ಶ್ರೀ ಶಿವಕುಮಾರ ಮಹಾಸ್ವಾಮೀಜಿ ಅವರ 119ನೇ ಜನ್ಮ ಜಯಂತಿ ಗುರುವಂದನಾ ಮಹೋತ್ಸವಕ್ಕೆ ದೇಶದ ಘನವೆತ್ತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಏ.1ರಂದು ಆಗಮಿಸುತ್ತಿರುವುದು ವಿಶೇಷವೆನಿಸಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಿಲ್ಲೆಗೆ ಅದರಲ್ಲೂ ತುಮಕೂರು ನಗರಕ್ಕೆ ಆಗಮಿಸುತ್ತಿರುವುದು ತುಮಕೂರಿನ ಅದೃಷ್ಟವೇ ಸರಿ ಎಂದರು.…

Read More

ದೇವನಹಳ್ಳಿ: ವಾರಾಣಸಿಗೆ ಧಾರ್ಮಿಕ ಪ್ರವಾಸ ಕೈಗೊಂಡಿದ್ದ ತಿಪಟೂರು ಮೂಲದ ಮೂವರು ಮಹಿಳೆಯರು ಬೆಂಗಳೂರಿನ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಶನಿವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ತಿಪಟೂರಿನ ವಿದ್ಯಾನಗರದ ನಿವಾಸಿಗಳಾದ ಗಂಗಮ್ಮ (38), ಜಯಮ್ಮ (65) ಹಾಗೂ ಯಶೋದಮ್ಮ (60) ಮೃತಪಟ್ಟ ದುರ್ದೈವಿಗಳು. ಒಟ್ಟು 13 ಜನರ ತಂಡವೊಂದು ಟೆಂಪೊ ಟ್ರಾವೆಲರ್ (TT) ವಾಹನದಲ್ಲಿ ತಿಪಟೂರಿನಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿತ್ತು. ಅಲ್ಲಿಂದ ಅವರು ವಾರಾಣಸಿಗೆ ವಿಮಾನದ ಮೂಲಕ ಪ್ರಯಾಣಿಸಬೇಕಿತ್ತು. ಆದರೆ, ವಿಮಾನ ನಿಲ್ದಾಣದ ಸಮೀಪ ತಲುಪುತ್ತಿದ್ದಂತೆ ರಸ್ತೆ ಬದಿಯಲ್ಲಿ ನಿಂತಿದ್ದ ಕ್ಯಾಂಟರ್ ವಾಹನಕ್ಕೆ ಇವರು ಪ್ರಯಾಣಿಸುತ್ತಿದ್ದ ಟೆಂಪೊ ಟ್ರಾವೆಲರ್ ವೇಗವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮೂವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಅಪಘಾತದಲ್ಲಿ ಟೆಂಪೊದಲ್ಲಿದ್ದ ಇತರ ಪ್ರಯಾಣಿಕರಿಗೂ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್…

Read More

ಕೊಪ್ಪಳ: ಜಿಲ್ಲೆಯಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ವಿಧಿಸಿದ್ದ ನಿರ್ಬಂಧದ ನಡುವೆಯೂ ಪುನೀತ್ ಕೆರೆಹಳ್ಳಿ ಪೊಲೀಸರೊಂದಿಗೆ ವಾಗ್ವಾದ ನಡೆಸಿ ಅಂಜನಾದ್ರಿ ಬೆಟ್ಟ ಏರಿದ ಘಟನೆ ನಡೆದಿದೆ. ಈ ಹಿಂದೆ ನೀಡಿದ್ದ ವಿವಾದಾತ್ಮಕ ಭಾಷಣಗಳ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಮತ್ತು ಪುನೀತ್ ಕೆರೆಹಳ್ಳಿ ಅವರಿಗೆ ಜಿಲ್ಲಾ ಪ್ರವೇಶಕ್ಕೆ ನಿಷೇಧ ಹೇರಲಾಗಿತ್ತು. ಜಿಲ್ಲಾಡಳಿತದ ಈ ಆದೇಶವನ್ನು ಮೀರಿ ಅಂಜನಾದ್ರಿ ಬೆಟ್ಟದ ಬಳಿ ಬಂದ ಪುನೀತ್ ಕೆರೆಹಳ್ಳಿ ಅವರನ್ನು ಪೊಲೀಸರು ತಡೆದರು. ಈ ವೇಳೆ ನಿಷೇಧಾಜ್ಞೆ ಪ್ರತಿಯನ್ನು ತೋರಿಸಿದ ಪೊಲೀಸರೊಂದಿಗೆ ಕೆರೆಹಳ್ಳಿ ತೀವ್ರ ವಾಗ್ವಾದ ನಡೆಸಿದರು. ಅಲ್ಲದೆ, ಪೊಲೀಸರು ನೀಡಿದ ನೋಟಿಸ್ ಹಾಗೂ ಆದೇಶದ ಪ್ರತಿ “ನಕಲಿ” ಎಂದು ಆರೋಪಿಸಿದರು. ತೀವ್ರ ಚರ್ಚೆ ಮತ್ತು ಹೈಡ್ರಾಮಾ ಬಳಿಕ, ಅಂತಿಮವಾಗಿ ಪೊಲೀಸರ ಭದ್ರತೆಯ ನಡುವೆಯೇ ಪುನೀತ್ ಕೆರೆಹಳ್ಳಿ ಅಂಜನಾದ್ರಿ ಬೆಟ್ಟ ಏರಿ ಹನುಮಂತನ ದರ್ಶನ ಪಡೆದರು. ಈ ಭಾಗದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ…

Read More

ಶಿರಾ (ತುಮಕೂರು): ತಾಲ್ಲೂಕಿನ ಲಕ್ಕನಹಳ್ಳಿ ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ಅಂತ್ಯಕ್ರಿಯೆಗಾಗಿ ಪ್ರತ್ಯೇಕ ಖಬರಸ್ಥಾನ (ಸ್ಮಶಾನ) ಮಂಜೂರು ಮಾಡುವಂತೆ ಒತ್ತಾಯಿಸಿ ಶನಿವಾರ ಮುಸ್ಲಿಂ ಬಾಂಧವರು ಪ್ರತಿಭಟನೆ ನಡೆಸಿದರು. ಈದ್ ಉಲ್ ಫಿತ್ರ್ ಹಬ್ಬದ ಸಾಮೂಹಿಕ ಪ್ರಾರ್ಥನೆಯ ನಂತರ ಒಗ್ಗೂಡಿದ ಸಮುದಾಯದ ಮುಖಂಡರು ಮತ್ತು ಗ್ರಾಮಸ್ಥರು ಸರ್ಕಾರದ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಲಕ್ಕನಹಳ್ಳಿಯಲ್ಲಿ ಮುಸ್ಲಿಮರಿಗೆ ಅಂತ್ಯಕ್ರಿಯೆ ನಡೆಸಲು ಹಕ್ಕುಬದ್ಧವಾದ ಜಾಗವಿಲ್ಲ. ಸದ್ಯಕ್ಕೆ ಸರ್ಕಾರಿ ಜಾಗವೊಂದನ್ನು ಇದಕ್ಕಾಗಿ ಬಳಸಲಾಗುತ್ತಿದೆ. ಆದರೆ, ಆ ಜಾಗದಲ್ಲಿ ರೈತರು ಕೃಷಿ ಮಾಡುತ್ತಿರುವುದರಿಂದ ಅಂತ್ಯಕ್ರಿಯೆ ನಡೆಸಲು ಪದೇ ಪದೇ ಅಡೆತಡೆಗಳು ಎದುರಾಗುತ್ತಿವೆ. ಮೃತರನ್ನು ಗೌರವಯುತವಾಗಿ ಬೀಳ್ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಸಾಲಬಾಧೆಯಿಂದ ತುಮಕೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಲಕ್ಕನಹಳ್ಳಿಯ ಒಂದೇ ಕುಟುಂಬದ ಐವರು ಸದಸ್ಯರ ಅಂತ್ಯಕ್ರಿಯೆ ಸಂದರ್ಭದಲ್ಲಿ ಈ ಸಮಸ್ಯೆ ತೀವ್ರವಾಗಿ ಕಾಡಿತ್ತು. ಸ್ವಗ್ರಾಮದಲ್ಲಿ ಸೂಕ್ತ ಸ್ಮಶಾನವಿಲ್ಲದ ಕಾರಣ, ಮೃತರ ಶವಗಳನ್ನು ಶಿರಾ ಪಟ್ಟಣಕ್ಕೆ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ಮಾಡಬೇಕಾಯಿತು. ಈ ಘಟನೆಯು ಗ್ರಾಮಸ್ಥರಲ್ಲಿ…

Read More

ಸರಗೂರು:   ತಾಲೂಕಿನ ಇಟ್ನ ಮತ್ತು ಹಾಲುಗಡ ಶ್ರೀ ಚಿಕ್ಕದೇವಮ್ಮನವರ  ಜಾತ್ರಾಮಹೋತ್ಸವದ ಗ್ರಾಮಗಳಲ್ಲಿ ಪ್ರಾಣಿಬಲಿ ತಡೆ ಸಂಪೂರ್ಣ ಯಶಸ್ವಿಯಾಗಿದ್ದು, ಮಾಂಸಾಹಾರದ ಬದಲಾಗಿ ಸುಮಾರು 10 ಸಾವಿರಕ್ಕೂ ಅಧಿಕ ಭಕ್ತರಿಂದ ಸಸ್ಯಾಹಾರ ಹಾಗೂ ಸಿಹಿ ಭೋಜನದ ಸೇವನೆ ಐತಿಹಾಸಿಕ ಮೈಲಿಗಲ್ಲುಯಾಗಿದೆ ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ, ಪಶು ಪ್ರಾಣಿ ಬಲಿ ನಿರ್ಮೂಲನ ಮಹಾಸಂಘ ಮತ್ತು ಬಸವ ಧರ್ಮ ಜ್ಞಾನ ಪೀಠ ಅಧ್ಯಕ್ಷ ದಯಾನಂದ ಸ್ವಾಮೀಜಿ ತಿಳಿಸಿದರು. ಶನಿವಾರದಂದು ಹಾಲಗಡ ಮತ್ತು ಇಟ್ನ ಗ್ರಾಮದಲ್ಲಿ ಯುಗಾದಿ ಹಬ್ಬದಿಂದ 3 ದಿನಗಳ ಕಾಲ ಜಾತ್ರಾ ಮಹೋತ್ಸವ ನಡೆದ ಹಿನ್ನೆಲೆಯಲ್ಲಿ ಹಾಲ್ಗಡ ಮತ್ತು ಇಟ್ನಾ ಗ್ರಾಮಗಳಲ್ಲಿ ನಡೆದ ಮಹೋತ್ಸವದಲ್ಲಿ ದೇವಿಯ ಮೆರವಣಿಗೆ ಸಂದರ್ಭದಲ್ಲಿ, ರಸ್ತೆ ಹಾಗೂ  ಅಕ್ಕಪಕ್ಕದ ಜಮೀನುಗಳಲ್ಲಿ, ಹಾಲ್ಗಡದ ಮೈದಾನದಲ್ಲಿ, ಕಪಿಲ ನದಿಯ ದಡದಲ್ಲಿ ಎಲ್ಲಿಯೂ ಯಾವುದೇ ಪ್ರಾಣಿಗಳ ಬಲಿ ನಡೆಯಲಿಲ್ಲ, ಪ್ರಾಣಿಬಲಿ ಹಾಗೂ ರಕ್ತ ತರ್ಪಣೆಗೆ ಬದಲಾಗಿ ತೆಂಗಿನಕಾಯಿ, ಎಳನೀರ ಅಭಿಷೇಕ, ಅರಶಿನ ಕುಂಕುಮ ಅರ್ಚನೆ ಮೂಲಕ ದೇವಿಗೆ ಪೂಜೆ ಸಲ್ಲಿಸಿದರು ಅಂತಾ ಅವರು…

Read More

ಸರಗೂರು: “ಮಾನವಕುಲದ ಒಳಿತಿಗಾಗಿ ಸರ್ವರೂ ಪ್ರಾರ್ಥಿಸುವುದು ಅತ್ಯಂತ ಅವಶ್ಯಕ. ಮಾನವೀಯತೆಯಿಂದ ಪರಸ್ಪರ ಪ್ರೀತಿ ಮತ್ತು ವಿಶ್ವಾಸದಿಂದ ಬಾಳುವುದು ಮುಖ್ಯ,” ಎಂದು ಹೆಚ್.ಡಿ.ಕೋಟೆ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು. ಪಟ್ಟಣದ ಖಾದ್ರಿಯಾದಲ್ಲಿ ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ, ಮುಸ್ಲಿಂ ಬಾಂಧವರಿಗೆ ಶುಭ ಹಾರೈಸಿದ ನಂತರ ಅವರು ಮಾತನಾಡಿದರು. ಸಾದಿ ಮಹಲ್ ನಿರ್ಮಾಣದ ಭರವಸೆ: ಸರಗೂರು ಪಟ್ಟಣದಲ್ಲಿ ಸಾದಿ ಮಹಲ್ ಭವನ ನಿರ್ಮಾಣ ಮಾಡಿಕೊಡಬೇಕೆಂದು ಮುಸ್ಲಿಂ ಬಾಂಧವರು ಪ್ರಮುಖ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕರು, “ಹೆಚ್.ಡಿ. ಕೋಟೆ ತಾಲ್ಲೂಕಿನಲ್ಲಿ ಈಗಾಗಲೇ ಸಾದಿ ಮಹಲ್ ಇದೆ. ಅದೇ ಮಾದರಿಯಲ್ಲಿ ಸರಗೂರು ಪಟ್ಟಣದಲ್ಲೂ ಸಾದಿ ಮಹಲ್ ನಿರ್ಮಾಣಕ್ಕೆ ಜಾಗ ಗುರುತಿಸಿ, ಕಾಂಗ್ರೆಸ್ ಸರ್ಕಾರದ ವತಿಯಿಂದ ಖಂಡಿತವಾಗಿಯೂ ಭವನ ನಿರ್ಮಿಸಿಕೊಡಲಾಗುವುದು,” ಎಂದು ಭರವಸೆ ನೀಡಿದರು. ಅಲ್ಲದೆ, ಖಾದ್ರಿಯ ಸುತ್ತ ಕಾಂಪೌಂಡ್ ನಿರ್ಮಾಣದ ಬೇಡಿಕೆಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಜಾಗದ ದಾಖಲೆಗಳನ್ನು ಪರಿಶೀಲಿಸಿದ ನಂತರ ಹಂತ ಹಂತವಾಗಿ ಅನುದಾನ ಬಿಡುಗಡೆಗೊಳಿಸಿ…

Read More

ತುಮಕೂರು: ರುಡ್‌ಸೆಟ್ ಸಂಸ್ಥೆ ವತಿಯಿಂದ ಏಪ್ರಿಲ್ 2 ರಿಂದ ಕಂಪ್ಯೂಟರ್ ಡಿ.ಟಿ.ಪಿ. ಕುರಿತು 45 ದಿನಗಳ ಉಚಿತ ತರಬೇತಿ ನೀಡಲು ಉದ್ದೇಶಿಸಿದ್ದು, ತರಬೇತಿ ಪಡೆಯಲಿಚ್ಛಿಸುವ ಆಸಕ್ತ ಗ್ರಾಮೀಣ ನಿರುದ್ಯೋಗಿ ಯುವಕ/ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 18 ರಿಂದ 50 ವರ್ಷ ವಯೋಮಾನದವರಾಗಿದ್ದು, ಕನ್ನಡ ಭಾಷೆ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಗ್ರಾಮೀಣ ಭಾಗದ ಬಿಪಿಎಲ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಹೊಂದಿರಬೇಕು. ತರಬೇತಿಯು ವಸತಿಯುತವಾಗಿದ್ದು, ತರಬೇತಿ ಅವಧಿಯಲ್ಲಿ ಉಚಿತ ಊಟದ ವ್ಯವಸ್ಥೆ ಕಲ್ಪಿಸಲಾಗುವುದು. ತರಬೇತಿ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪ್ರಮಾಣಪತ್ರವನ್ನು ವಿತರಿಸಲಾಗುವುದು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ರುಡ್‌ ಸೆಟ್ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಥವಾ ಮೊಬೈಲ್ ಸಂಖ್ಯೆ: 9380162042, 9481506564, 9481778047ನ್ನು ಸಂಪರ್ಕಿಸಬಹುದಾಗಿದೆ ಎಂದು ರುಡ್‌ಸೆಟ್ ಸಂಸ್ಥೆ ಬೆಂಗಳೂರು ಶಾಖೆಯ ನಿರ್ದೇಶಕ ರವಿಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್…

Read More