Subscribe to Updates
Get the latest creative news from FooBar about art, design and business.
- ಉತ್ತಮ ಆಡಳಿತದಿಂದ ಸರ್ವತೋಮುಖ ಪ್ರಗತಿ ಸಾಧ್ಯ: ಕೆ.ಮಂಜುನಾಥ್
- ಪಾವಗಡ ತಾ.ಪಂ ಇ.ಒ. ಉತ್ತಮ್ ಕುಮಾರ್ ವಿರುದ್ಧ ಪಿಡಿಒಗಳ ದೂರು..!
- ಕಾಲುನಡಿಯಲ್ಲಿ ಮಾಗಡಿಯಿಂದ ಮಂತ್ರಾಲಯಕ್ಕೆ ಪಾದಯಾತ್ರೆ: 100 ಕ್ಕೂ ಹೆಚ್ಚು ಯಾತ್ರಾರ್ಥಿಗಳಿಂದ ಸಂಕಲ್ಪ ಯಾತ್ರೆ
- ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಅತ್ಯಾವಶ್ಯಕ: ಡಾ.ಹನುಮಂತನಾಥ ಸ್ವಾಮೀಜಿ ಕರೆ
- ಕ್ಯಾನ್ಸರ್ ಪೀಡಿತ ಮಹಿಳೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 25 ಸಾವಿರ ರೂ. ನೆರವು
- ಗರ್ಭಿಣಿ ಮಗಳನ್ನೇ ಕೊಂದ ಪಾಪಿ ತಂದೆಗೆ ಗಲ್ಲು ಶಿಕ್ಷೆ ನೀಡಬೇಕೆಂದು ದಲಿತ ಪರ ಸಂಘಟನೆಗಳ ಆಗ್ರಹ
- ಮಹಾರಾಜವಾಡಿಯಲ್ಲಿ ‘ಮನೆ ಮನೆಗೆ ಪೊಲೀಸ್’ ಕಾರ್ಯಕ್ರಮ: ಜನಸ್ನೇಹಿ ಆಡಳಿತಕ್ಕೆ ಮುನ್ನುಡಿ
- ಬೀದರ್: ಔರಾದ್ ತಾಲೂಕಿನ ಕೊಳ್ಳುರ ಗ್ರಾಮದಲ್ಲಿ ಕ್ರಿಸ್ಮಸ್ ಹಬ್ಬದ ಸಡಗರ
Author: admin
ರಾಯಚೂರು: ಆರ್ ಎಸ್ ಎಸ್, ತಾಲಿಬಾನಿಗಳ ಮೈಂಡ್ ಸೆಟ್ ಒಂದೇಯಾಗಿದೆ ಎಂದು ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ರಾಯಚೂರಿನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕ ಸ್ಥಳಗಳಲ್ಲಿ ಏನೇ ಬೈಠಕ್ ಮಾಡಬೇಕೆಂದರೂ ಪೂರ್ವಾನುಮತಿ ಪಡೆಯಬೇಕು. ಆರ್ ಎಸ್ ಎಸ್ ನವರು ಯಾವುದೇ ಪೂರ್ವಾನುಮತಿಯಿಲ್ಲದೆ ಕಾರ್ಯಕ್ರಮ ಮಾಡ್ತಾರೆ. ಯಾರೂ ಹೇಳುವವರಿಲ್ಲ ಕೇಳುವವರಿಲ್ಲ ಅಂತ ಇಷ್ಟು ದಿನ ಮಾಡಿಕೊಂಡು ಬಂದುಬಿಟ್ಟಿದ್ದಾರೆ. ಹಾಗಾಗಿ ಅದಕ್ಕೆ ಕಡಿವಾಣ ಹಾಕಬೇಕು ಎಂದರು. ಸರ್ಕಾರಿ ಸ್ಥಳಗಳಲ್ಲಿ ಆರ್ ಎಸ್ ಎಸ್ ಕಾರ್ಯಕ್ರಮ ನಡೆಸುವುದಕ್ಕೆ ತೀವ್ರ ಆಕ್ಷೇಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಶಾಲೆಗಳಲ್ಲಿ, ಕಾಲೇಜುಗಳಲ್ಲಿ, ಪಾರ್ಕ್‌ಗಳಲ್ಲಿ ಸುಮ್ಮನೆ ಸಭೆಗಳನ್ನ ಮಾಡುವುದು, ಅವರ ವಿಷಪೂರಿತವಾದ ಸಿದ್ಧಾಂತಗಳನ್ನ ಹರಡುವ ಕೆಲಸಗಳನ್ನ ಮಾಡಬಾರದು ಎಂದು ಹೇಳಿದರು. ಆರ್ ಎಸ್ ಎಸ್ ನವರು ಸುಮ್ನೆ ಮಾಮೂಲಾಗಿ ಕಾರ್ಯಕ್ರಮಗಳನ್ನ ಮಾಡಲ್ಲ. ಹಾಗಾಗಿ ಅದಕ್ಕೆ ಕಡಿವಾಣ ಹಾಕಬೇಕು. ಅನುಮತಿ ಪಡೆದು ಕಾರ್ಯಕ್ರಮ ಮಾಡಲಿ ಎಂದು ತಿಳಿಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್…
ಸರಗೂರು: ಸ್ತ್ರೀ ಶಕ್ತಿ ಗುಂಪುಗಳಿಂದ ಮಹಿಳೆಯರು ಸ್ವಾವಲಂಬಿಗಳಾಗಿ ಜೀವನ ನಡೆಸಲು ಸಾಧ್ಯವಾಗಿದೆ ಎಂದು ಜೆಎಸ್ ಎಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷೆ ಹಾಗೂ ಸ್ನೇಹ ಸ್ತ್ರೀ ಸಮಾಜ ಸಂಘ ಅಧ್ಯಕ್ಷೆ ಮೃತ್ಯುಂಜಯಪ್ಪ ಅಭಿಪ್ರಾಯಪಟ್ಟರು. ಮೈಸೂರಿನ ಜೆಎಸ್ ಎಸ್ ರೇಡಿಯೋ 91.2 ಎಫ್ ಎಮ್ ಸಮುದಾಯ ಬಾನುಲಿ ಕೇಂದ್ರದಿಂದ ಇವರು ನಮ್ಮವರು ವಿಶೇಷ ಸರಣಿ ಕಾರ್ಯಕ್ರಮದಲ್ಲಿ ವ್ಯವಸ್ಥಾಪಕ ಶಿವಕುಮಾರ್ ಜೊತೆ ಮಾತನಾಡಿಸಿದರು. ”ಸ್ತ್ರೀ ಶಕ್ತಿ ಸಂಘಗಳು ಸ್ಥಾಪನೆಯಾದ ನಂತರ ಮಹಿಳೆ ಸಮಾಜ ಮುಖ್ಯ ಕಾರ್ಯ ನಿರ್ವಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಾಲ್ಕು ಗೋಡೆಗಳಲ್ಲಿರುತ್ತಿದ್ದ ಮಹಿಳೆ ತನ್ನ ಕಾಲ ಮೇಲೆ ನಿಂತು ಕುಟುಂಬವನ್ನೆಲ್ಲ ನಿಭಾಯಿಸುವ ಕಾರ್ಯವನ್ನು ಮಾಡುತಿದ್ದಾಳೆ. ಸಂಘ ಮಹಿಳೆಯರಲ್ಲಿ ಶಿಸ್ತು ಹಾಗೂ ಸಮಯ ಪಾಲನೆಯನ್ನು ತಿಳಿಸುವುದರ ಜತೆ ಸಮಾಜದಲ್ಲಿ ಮಹಿಳೆಯರು ಮುಖ್ಯವಾಹಿನಿಯಲ್ಲಿ ಜೀವನ ನಡೆಸುವುದನ್ನು ತಿಳಿಸಿದೆ” ಎಂದು ಅಭಿಪ್ರಾಯಪಟ್ಟರು. ಗ್ರಾಮಮಟ್ಟದ ಹಲವು ಸಂಘಗಳಿಗೆ ಆರ್ಥಿಕ ಚಟುವಟಿಕೆಗೆ ಪ್ರೋತ್ಸಾಹ ಧನವನ್ನು ನೀಡುತ್ತಿದೆ. ಪ್ರತಿ ಮಹಿಳೆಯರು ವಿವಿಧ ಇಲಾಖೆಗಳು ನೀಡುವ ಯೋಜನೆಗಳ ಬಗ್ಗೆ ಮಾಹಿತಿ ಪಡೆದು, ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು…
ಸರಗೂರು: ನ್ಯಾಯಮೂರ್ತಿ ಬಿ.ಆರ್.ಗವಾಯಿಯವರ ಮೇಲೆ ವಕೀಲನೊಬ್ಬ ‘ಶೂ’ ಎಸೆದಿರುವ ವಿರುದ್ಧ ಸೋಮವಾರದಂದು ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಮುಂಭಾಗದಲ್ಲಿ ಆದಿಕರ್ನಾಟಕ ಮಹಾಸಭಾ ಹಾಗೂ ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಆದಿಕರ್ನಾಟಕ ಮಹಾಸಭಾ ಅಧ್ಯಕ್ಷ ಇಟ್ನ ರಾಜಣ್ಣ, ಅಕ್ಟೋಬರ್ 06 ರಂದು ಭಾರತದ ಸರ್ವೋಚ್ಚ ನ್ಯಾಯಾಲಯದ ಆವರಣದಲ್ಲಿ ಮುಖ್ಯ ನ್ಯಾಯಮೂರ್ತಿಯವರ ಬಿ.ಆರ್.ಗವಾಯಿ ಸರ್ವೋಚ್ಚ ನ್ಯಾಯಾಲಯದ ಪೀಠದಲ್ಲಿ ಕುಳಿತು ತೀರ್ಪೊಂದನ್ನು ಪ್ರಕಟಿಸಿದ ಸಂದರ್ಭದಲ್ಲಿ, ತೀರ್ಪನ್ನು ವಿರೋಧಿಸಿ ಬಿ.ಆರ್.ಗವಾಯಿ ರವರ ಮೇಲೆ ಹಾಗೂ ಸರ್ವೋಚ್ಚ ನ್ಯಾಯಾಲಯದ ಪೀಠದ ಮೇಲೆ ಕೋಮುವಾದಿ ಮನುಸುಳ್ಳ ಕಾನೂನು ವಿರೋಧಿ ವಕೀಲನೊಬ್ಬ ‘ಶೂ’ ಎಸೆದಿದ್ದಾನೆ. ಈ ಘಟನೆಯಿಂದ ಇಡೀ ದೇಶವೇ ತಲೆ ತಗ್ಗಿಸುವಂತಾಗಿದೆ. ಈ ಘಟನೆಯನ್ನು ಸರಗೂರು ತಾಲೂಕಿನ ಆದಿ ಕರ್ನಾಟಕ ಮಹಾಸಭಾ ಹಾಗೂ ಎಲ್ಲಾ ಪ್ರಗತಿಪರ ಸಂಘಟನೆಗಳು ಸಹಾ ಒಕ್ಕೊರಳಿನಿಂದ ತೀವ್ರವಾಗಿ ಖಂಡಿಸುತ್ತೇವೆ ಎಂದರು. ಮಾಜಿ ಆದಿಕರ್ನಾಟಕ ಮಹಾಸಭಾ ಅಧ್ಯಕ್ಷ ಸರಗೂರು ಶಿವಣ್ಣ ಮಾತನಾಡಿ, ಬಿ.ಆರ್.ಗವಾಯಿರವರು ಇತ್ತೀಚೆಗೆ ಇದೊಂದು ಮಾಸಿ ಹೋದ ಘಟನೆ ಎಂದು ಹೇಳಿಕೊಂಡಿದ್ದಾರೆ. ಅದು…
ತುಮಕೂರು: ಚುನಾಯಿತ ಪ್ರತಿನಿಧಿ ಮೇಲೆ ರಾಜಕೀಯ ಪಕ್ಷಗಳು ಹಿಡಿತ ಸಾಧಿಸುತ್ತಿವೆ. ಯಥೇಚ್ಛವಾಗಿ ಹಣ ಸಿಗುತ್ತದೆ ಎಂದು ಒಂದು ಪಕ್ಷದ ಗುಲಾಮರಾದರೆ ಈ ವ್ಯವಸ್ಥೆ ಸುಧಾರಿಸುವುದು ಯಾವಾಗ? ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಪ್ರಶ್ನಿಸಿದರು. ನಗರದಲ್ಲಿ ಭಾನುವಾರ ಜೆ.ಎಚ್.ಪಟೇಲ್ ಪ್ರತಿಷ್ಠಾನದಿಂದ ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಜನ್ಮದಿನದ ಪ್ರಯುಕ್ತ ಆಯೋಜಿಸಿದ್ದ ‘ವ್ಯವಸ್ಥೆಯ ಸುಧಾರಣೆಯಲ್ಲಿ ನಮ್ಮ ಪಾತ್ರ’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು. ಚುನಾವಣೆಯಲ್ಲಿ ಗೆದ್ದ ವ್ಯಕ್ತಿಗೆ ಅಭಿಪ್ರಾಯ ವ್ಯಕ್ತಪಡಿಸಲು ಆಗುತ್ತಿಲ್ಲ. ಸತ್ಯ ಹೇಳಿದ್ದಕ್ಕೆ ಶಾಸಕ ಕೆ.ಎನ್.ರಾಜಣ್ಣ ಅವರನ್ನು ಮಂತ್ರಿ ಸ್ಥಾನದಿಂದ ವಜಾಗೊಳಿಸಲಾಯಿತು. ವೈಯಕ್ತಿಕ ಅಭಿಪ್ರಾಯವನ್ನು ಪಕ್ಷ ವಿರೋಧಿ ಎಂದರೆ ಹೇಗೆ? ಸತ್ಯ ಹೇಳಿದರೂ ಕಷ್ಟ ಎಂದರೆ ಒಬ್ಬ ನಾಯಕನ ಗತಿ ಏನಾಗಬೇಡ? ನಮ್ಮ ವರ್ಚಸ್ಸು, ಜನಾಭಿಪ್ರಾಯ, ಸಾಮರ್ಥ್ಯಕ್ಕೆ ಮನ್ನಣೆ ಇಲ್ಲ ಎಂದರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಏನು ಅರ್ಥವಿದೆ. ಈ ಬಗ್ಗೆ ಕೂಲಂಕಷವಾಗಿ ಯೋಚಿಸಬೇಕು ಎಂದರು. ಚುನಾವಣೆಗೂ ಮುನ್ನ ಸರ್ಕಾರದ ಹಣಕಾಸಿನ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ವೈಯಕ್ತಿಕ ಯೋಜನೆ ಘೋಷಿಸುವುದಕ್ಕೆ ಕಡಿವಾಣ ಹಾಕಿದರೆ ಚುನಾವಣೆ…
ತುರುವೇಕೆರೆ: ಕನ್ನಡದ ಕಣ್ವ ಎಂಬ ಬಿರುದಾಂಕಿತ ಬಿ.ಎಂ.ಶ್ರೀಕಂಠಯ್ಯ ಸ್ಮರಣಾರ್ಥ ತಾಲ್ಲೂಕಿನ ಸಂಪಿಗೆ ಗ್ರಾಮದಲ್ಲಿ ನಿರ್ಮಾಣವಾಗಿರುವ ಬಿಎಂಶ್ರೀ ಭವನ ಸಮರ್ಪಕ ನಿರ್ವಹಣೆ ಕೊರತೆಯಿಂದಾಗಿ ಯಾವುದೇ ಸಾಂಸ್ಕೃತಿಕ, ಸಾಹಿತ್ಯದ ಚಟುವಟಿಕೆಗಳು ನಡೆಯದೆ ಮೂಲಗುಂಪಾಗಿದೆ. ಭವನ ನಿರ್ಮಾಣವಾಗಿ ಸಾಕಷ್ಟು ವರ್ಷಗಳೇ ಸಂದಿವೆ. ಆದರೆ ಇಲ್ಲಿ ನಡೆದಿರುವ ಕಾರ್ಯಕ್ರಮಗಳು ವಿರಳ. ಭವನದ ಒಳಗೆ ಜೇಡನ ಬಲೆ ಕಟ್ಟಿದ್ದು, ಧೂಳು ಹಿಡಿದಿದೆ. ಮಳೆಗೆ ಅಲ್ಲಲ್ಲಿ ಕಟ್ಟಡದ ಚಾವಣಿ ನೆನೆದು ಗೋಡೆ ಕಪ್ಪಾಗಿದೆ. ಕಿಟಕಿಗಳ ಗಾಜು ಸಹ ಒಡೆದಿದೆ. ಕೆಲವು ಕಿಟಕಿಗಳಿಗೆ ಕಬ್ಬಿಣದ ತಗಡು, ಪ್ಲೇವುಡ್ ನಿಂದ ಮುಚ್ಚಲಾಗಿದೆ. ಭವನದ ಗೋಡೆ, ಮೆಟ್ಟಿಲುಗಳು ಬಿರುಕು ಬಿಟ್ಟಿದ್ದು, ಭವನದ ಎಡ, ಬಲ ಭಾಗದಲ್ಲಿ ಗಿಡಗಳು ಬೆಳೆದಿವೆ. ಭವನದ ಪಕ್ಕದಲ್ಲಿ ಕಸಕಡ್ಡಿಗಳು ರಾಶಿ ಬಿದ್ದು ಹುಳುಗಳ ಆವಾಸ ಸ್ಥಾನವಾಗಿದೆ. ಭವನದ ಮೆಟ್ಟಿಲಿನ ಕಲ್ಲುಗಳು ಮುರಿದಿವೆ. ಭವನದ ಗೇಟ್ ಗೆ ಬೀಗ ಹಾಕದಿರುವುದರಿಂದ ನಾಯಿ, ಇನ್ನಿತರ ಪ್ರಾಣಿಗಳು ಮಲಗಿ ಗಲೀಜು ಮಾಡುತ್ತಿವೆ. ಸುಣ್ಣ ಬಣ್ಣ ಕಾಣದ ಕಟ್ಟಡ ಪಾಳು ಬಂಗಲೆಯಂತೆ ಕಂಡು ಬರುತ್ತಿದೆ. ಸಮರ್ಪಕ…
ತಿಪಟೂರು: ಪ್ರತಿಯೊಂದು ಹಿಂದೂವಿನ ಮನೆಗೂ ಆರ್ ಎಸ್ ಎಸ್ ವಿಚಾರ ತಲುಪುವಂತೆ ಆಗಬೇಕು. ಈ ನಿಟ್ಟಿನಲ್ಲಿ ಸ್ವಯಂಸೇವಕರು ಕಾರ್ಯಪ್ರವೃತ್ತರಾಗಬೇಕು ಎಂದು ತಿಪಟೂರು ಜಿಲ್ಲಾಕಾರ್ಯವಾಹ ರವೀಂದ್ರ ತಗ್ಗಿನಮನೆ ತಿಳಿಸಿದರು. ನಗರದಲ್ಲಿ ಭಾನುವಾರ ವಿಜಯದಶಮಿ ಅಂಗವಾಗಿ ನಡೆದ ಆರ್‌ಎಸ್‌ಎಸ್ ಶತಾಬಿ ವರ್ಷಾಚರಣೆ ಪಥಸಂಚಲನದಲ್ಲಿ ಮಾತನಾಡಿದ ಅವರು, ಸಮಾಜ ಯಾವುದೇ ತುರ್ತು ಸಂದರ್ಭದಲ್ಲಿ ಆರ್ ಎಸ್ ಎಸ್ ಉಪಸ್ಥಿತಿಯನ್ನು ಅಪೇಕ್ಷಿಸುತ್ತದೆ. ಆದರೆ ಸಂಘ ನಿಸ್ವಾರ್ಥ ಭಾವನೆಯಿಂದ ಮುಂಚಿತವಾಗಿಯೇ ಕಾರ್ಯಪ್ರವೃತ್ತರಾಗಿರುತ್ತಾರೆ ಎಂದರು. ಮಂಡಲ ಮಟ್ಟದಲ್ಲಿಯೇ ಸಂಘದ ಕಾರ್ಯಕರ್ತರಿಗೆ ಸಂಸ್ಕಾರ, ಸೇವಾ ಮನೋಭಾವ, ಶಿಸ್ತು ರೂಢಿಸಿಕೊಳ್ಳಲು ದೈನಂದಿನ ಶಾಖೆ ಕಾರಣವಾಗುತ್ತಿದೆ. ಸಂಘದ ಕಾರ್ಯಕರ್ತರು ತಾವು ಇರುವ ಕಡೆ ಒಳ್ಳೆಯ ವಾತವಾರಣ ನಿರ್ಮಿಸುತ್ತಾರೆ. ದೇಶಕ್ಕೆ ಆಪತ್ತು ಬಂದಾಗ ಸೇವಕ ಸೇವೆಗೆ ನಿಲ್ಲುತ್ತಾನೆ. ಸಮಾಜದ ಸಮಸ್ಯೆಯನ್ನು ತನ್ನ ರ್ಕವ್ಯವೆಂದು ಭಾವಿಸುತ್ತಾನೆ, ಆದರೆ ಯಾವುದೇ ಗೌರವ, ಸನ್ಮಾನ ಅಪೇಕ್ಷಿಸುವುದಿಲ್ಲ. ಆರ್ ಎಸ್ ಎಸ್ ನೂರು ವರ್ಷದಲ್ಲಿ ಅನೇಕ ಸವಾಲುಗಳನ್ನು ಎದುರಿಸಿದ್ದು, ಎಂದಿಗೂ ವಿಚಲತವಾಗದೆ ತನ್ನ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ ಎಂದು ಹೇಳಿದರು..…
ತುಮಕೂರು: ಕುರುಬರನ್ನು ಎಸ್.ಟಿ. ಪಟ್ಟಿಗೆ ಸೇರಿಸುತ್ತೇವೆ ಎನ್ನುವ ಸ್ಥಿತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬರುತ್ತಾರೆ, ಅವರು ಇಷ್ಟೊಂದು ದುರ್ಬಲರು ಎಂದು ಭಾವಿಸಿರಲಿಲ್ಲ ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಭಾನುವಾರ ಹೇಳಿದರು. ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಜನ್ಮದಿನ ನಿಮಿತ್ತ ಜೆ.ಎಚ್.ಪಟೇಲ್ ಪ್ರತಿಷ್ಠಾನ ಏರ್ಪಡಿಸಿದ್ದ ವ್ಯವಸ್ಥೆ ಸುಧಾರಣೆಯಲ್ಲಿ ನಮ್ಮ ಪಾತ್ರ ವಿಚಾರ ಸಂಕಿರಣದಲ್ಲಿ ಮಾತನಾಡಿದರು. ಜಾತಿ ಸೋಂಕು ಅತಿಯಾಗುತ್ತಿದೆ. ಕುರುಬರ ಹೋರಾಟದ ವೇಳೆ ಸಿದ್ದರಾಮಯ್ಯ ಭಾಗವಹಿಸಲಿಲ್ಲ. ಈಗ ಅವರೇ ಕುರುಬರನ್ನು ಎಸ್.ಟಿಗೆ ಸೇರಿಸಬೇಕು ಎಂದು ಭಾಷಣ ಮಾಡುತ್ತಿದ್ದಾರೆ ಎಂದರು. ಇಂತಹ ಸಮಯದಲ್ಲಿ ನಾವೂ ಸಹ ಲಿಂಗಾಯತರನ್ನು ಹಿಂದುಳಿದ ವರ್ಗಕ್ಕೆ ಸೇರಿಸಿ ಎಂದು ಮಾತನಾಡುವುದು ಅನಿವಾರ್ಯವಾಗಿದೆ. ಇಲ್ಲದಿದ್ದರೆ ನಮಗೆ ಉಳಿಗಾಲವಿಲ್ಲ ಎಂದು ಹೇಳಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ಪಾವಗಡ: ತಾಲೂಕಿನ ವೆಂಕಟಾಪುರ ಗ್ರಾಮದ ನಾಗಶಂಕರ್ ಅವರಿಗೆ ಕರುನಾಡ ರತ್ನ ಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಗುರುವಾರ ಸಂಜೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ “ಶಕ್ತಿ ಅಸ್ತ್ರ ಮೀಡಿಯಾ ಕ್ರಿಯೆಷನ್” ಪತ್ರಕರ್ತರ ವೇದಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆಯಿತು. ಪಾವಗಡ ತಾಲೂಕಿನ ವೆಂಕಟಾಪುರ ಗ್ರಾಮದ ನಾಗಶಂಕರ್ ಕರ್ನಾಟಕ ಹಾಗೂ ಆಂಧ್ರದ ಗಡಿನಾಡ ಕನ್ನಡಿಗರು ಮತ್ತು “ಕವಿ ಶಂಕರ್” ಎಂದೇ ಗುರುತಿಸಿ ಕೊಂಡವರು. ಪ್ರೌಢ ಶಿಕ್ಷಣ ವ್ಯಾಸಂಗದ ಅವಧಿಯಿಂದಲೂ ಸಾಹಿತ್ಯ ಆಸಕ್ತಕರಾಗಿದ್ದು, ಪ್ರಸ್ತುತ ತಮ್ಮ ವೃತ್ತಿ ಜೀವನವನ್ನು (VRL) ಬೆಂಗಳೂರಿನ ವಿ. ಆರ್.ಎಲ್. ಸಮೂಹ ಮಾಧ್ಯಮದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಜೊತೆಗೆ ಸಾಹಿತ್ಯ ಕೃಷಿಯಲ್ಲೂ ಉತ್ತಮ ಸಾಧನೆಮಾಡಿದ್ದಾರೆ. ಇವರು ಬರೆದಿರುವ ಅನೇಕ ಕವನಗಳು ರಾಜ್ಯ ಮಟ್ಟದ ಕವನ ಸಂಕಲನಗಳಲ್ಲಿ ಆಯ್ಕೆಯಾಗಿ ಮುದ್ರಣ ಗೊಂಡಿರುತ್ತವೆ. ಇವರ ಸಾಹಿತ್ಯ ಸಾಧನೆಯನ್ನು ಗುರುತಿಸಿದ ಕರ್ನಾಟಕದ ಹಲವು ಜಿಲ್ಲೆಯ ಕನ್ನಡಪರ ಸಂಘ — ಸಂಸ್ಥೆಗಳು ಅವರಿಗೆ ಜಿಲ್ಲಾ ಹಾಗು ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಗೌರವಿಸಿದೆ.…
ಬೀದರ್: ಔರಾದ್ ಪಟ್ಟಣ ಪಂಚಾಯತಿಯನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೆ ಮಾಡಿರುವುದು ಕಾಂಗ್ರೆಸ್ ಸರಕಾರದ ಕೊಡುಗೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು. ಭಾಲ್ಕಿಯ ತಮ್ಮ ನಿವಾಸದಲ್ಲಿ ಭಾನುವಾರ ಮುಖಂಡ ಡಾ.ಭೀಮಸೇನರಾವ ಶಿಂಧೆ ನೇತೃತ್ವದಲ್ಲಿ ಔರಾದ್ ನಾಗರಿಕರಿಂದ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಔರಾದ್ ಜನರ ಬಹುದಿನಗಳ ಕೊಡುಗೆ ಕಾಂಗ್ರೆಸ್ ಸರಕಾರ ನೆರವೇರಿಸಿದೆ. ಈ ಹಿಂದಿನ ಬಿಜೆಪಿ ಸರಕಾರ ಮಾಡದ ಕೆಲಸ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಮಾಡುತ್ತಿದೆ ಎಂದರು. ಲೋಕಸಭೆ ಚುನಾವಣೆಯಲ್ಲಿ ಪಟ್ಟಣದ ಜನರಿಗೆ ಆಶ್ವಾಸನೆ ನೀಡಿರುವೆ. ಅದರಂತೆ ಔರಾದ್ ಪಟ್ಟಣ ಪಂಚಾಯತಿಯನ್ನು ಪುರಸಭೆ ಮಾಡಿದ್ದೇನೆ, ನಾನು ಈ ಹಿಂದೆ ಸಚಿವನಾಗಿರುವಾಗ ನಿಯಮದ ಪ್ರಕಾರ ಎಲ್ಲ ಮಾನದಂಡಗಳನ್ನು ಮಾಡಿಕೊಳ್ಳಲು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಈಗ ಎಲ್ಲವನ್ನು ಸಿದ್ಧಪಡಿಸಿಕೊಂಡು ಸಚಿವ ಸಂಪುಟದಲ್ಲಿ ಪುರಸಭೆ ಘೋಷಣೆಯ ನಿರ್ಣಯ ಕೈಗೊಳ್ಳಲಾಗಿದೆ. ಇದರಿಂದ ಔರಾದ್ ಪಟ್ಟಣ ಬಹುದಿನಗಳ ಬೇಡಿಕೆ ಈಡೇರಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಈ ವೇಳೆ ಮುಖಂಡ ಡಾ.ಭೀಮಸೇನರಾವ ಶಿಂಧೆ ಮಾತನಾಡಿ, ಲೋಕಸಭೆ ಚುನಾವಣೆಯ ವೇಳೆ…
ಸರಗೂರು: ಜಯಲಕ್ಷೀಪುರ ಹಾಗೂ ಶಿವಪುರ ಕೆಲ ದಿನಗಳ ಹಿಂದೆ ಜಾನುವಾರು ಮತ್ತು ಮೇಕೆ ಗಳನ್ನು ಬಲಿ ಪಡೆದುಕೊಂಡು ಜಮೀನು ಅಕ್ಕಪಕ್ಕದ ಗ್ರಾಮಗಳ ರೈತರು ಹಾಗೂ ಜನರನ್ನು ಭಯಭೀತರಾಗಿ ಮಾಡಿ, ಶಿವಪುರ ನಾಗರಾಜ ಬೋವಿರವರ ಜಮೀನಿನಲ್ಲಿ ಅವಿತು ಕುಳಿತಿದ್ದ ನರಭಕ್ಷಕ ಹುಲಿ ಮತ್ತೆ ಕಾಣಿಸಿಕೊಂಡಿತ್ತು ಇದೀಗ ಹುಲಿಯನ್ನು ಯಶಸ್ವಿಯಾಗಿ ಸೆರೆ ಹಿಡಿಯಲಾಗಿದೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ಎ.ವಿ.ಸತೀಶ್ ತಿಳಿಸಿದರು. 11 ರಿಂದ 12 ವರ್ಷದ ಹುಲಿಯನ್ನು ಸೆರೆ ಹಿಡಿಯಲಾಗಿದೆ. ಬಂಡೀಪುರ ರಾಷ್ಟ್ರೀಯ ಹೆಡಿಯಾಲ ವಲಯ ವ್ಯಾಪ್ತಿಯ ಜಯಲಕ್ಷೀಪುರ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ಸೆ.29 ರಂದು ಹುಲಿ ಮೇಕೆ ಹಸುಯನ್ನು ಕೊಂದು ತಿಂದಿತ್ತು. ವಿಷಯ ಮುಟ್ಟಿಸಿದ್ದ ಹಿನ್ನೆಲೆಯಲ್ಲಿ ಬಂದಿದ್ದ ಅರಣ್ಯ ಇಲಾಖೆಯವರು ಹುಲಿ ಸೆರೆಗೆ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ರೈತರು ದಿಗ್ಬಂಧನ ವಿಧಿಸಿದ್ದರು. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಹೆಡಿಯಾಲ ಉಪ–ವಿಭಾಗದ ವ್ಯಾಪ್ತಿಯ ಹೆಡಿಯಾಲ ವಲಯದ ಚಿಕ್ಕಬರಗಿ ಶಾಖೆಯ ಅಳಲಹಳ್ಳಿ ಗಸ್ತಿನ ವ್ಯಾಪ್ತಿಗೆ ಒಳಪಡುವ ವಿವಿಧ ಗ್ರಾಮಗಳಲ್ಲಿ ಹುಲಿಯು ಅರಣ್ಯ ಪ್ರದೇಶದಿಂದ ಹೊರಬಂದು ಜನವಸತಿ…