Author: admin

ತುಮಕೂರು:  ನಗರದ ಮಳೆಕೋಟೆಯ ಉದ್ಯಮಿ ಇದಾಯತ್ ಉಲ್ಲಾ ಖಾನ್ ಫೋನ್ ಪೇ ಖಾತೆಯಿಂದ ಅವರ ಗಮನಕ್ಕೆ ಬಾರದಂತೆ 7.87 ಲಕ್ಷ ವರ್ಗಾವಣೆಯಾಗಿದ್ದು, ಈ ಕುರಿತು ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನನ್ನ ಸ್ನೇಹಿತರಿಗೆ ಹಣ ವರ್ಗಾವಣೆ ಮಾಡುವಾಗ ಫೋನ್ ಪೇ ಬಳಕೆಯಾಗಲಿಲ್ಲ. ಪರಿಶೀಲಿಸಿದಾಗ ಸೆ. 18ರಿಂದ 23ರವರೆಗೆ 137 ಬಾರಿ ಫೋನ್ ಪೇ ಮೂಲಕ ಹಣ ವರ್ಗಾವಣೆ ಮಾಡಿಕೊಂಡಿರುವುದು ತಿಳಿಯಿತು. ಮಧ್ಯರಾತ್ರಿ 12 ಗಂಟೆಯಿಂದ ಬೆಳಗಿನ ಜಾವ 3.30ರ ಅವಧಿಯಲ್ಲಿ ಹಣ ವರ್ಗಾವಣೆಯಾಗಿದೆ. ಒಟ್ಟು 7,87,558 ಕಡಿತವಾಗಿದೆ’ ಎಂದು ಇದಾಯತ್ ಉಲ್ಲಾ ಖಾನ್ ದೂರು ನೀಡಿದ್ದಾರೆ. ಫೋನ್ ಪೇ ಬಳಸಿ ವಿವಿಧ ಯುಪಿಐ ಐ.ಡಿಗಳಿಗೆ ಹಣ ವರ್ಗಾವಣೆ ಮಾಡಿಕೊಂಡಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ಕೊಡಿಗೇನಹಳ್ಳಿ: ಬೆಂಗಳೂರಿನಲ್ಲಿ ಖಾಸಗಿ ಕಂಪನಿ ಉದ್ಯೋಗ ಮಾಡುತ್ತಿದ್ದ ಹೋಬಳಿಯ ತೆರಿಯೂರು ಗ್ರಾಮದ ಟಿ.ಎನ್. ನಾಗಭೂಷಣ್ ಎಂಬವರು ಕೋವಿಡ್ ಸಂದರ್ಭದಲ್ಲಿ ಗ್ರಾಮಕ್ಕೆ ಮರಳಿದ್ದರು. ಇದೀಗ ಕಳೆದ ನಾಲ್ಕು ವರ್ಷಗಳಿಂದ ತಮ್ಮ ಜಮೀನಿನಲ್ಲಿ ಏಲಕ್ಕಿ ಬಾಳೆ ಬೆಳೆದು ಲಾಭ ಗಳಿಸಿದ್ದಾರೆ. ತಮ್ಮ ಆರು ಎಕರೆ ಜಮೀನಿನ ಜೊತೆಗೆ 10 ಎಕರೆ ಜಮೀನನ್ನು ಬೋಗ್ಯಕ್ಕೆ ಪಡೆದರು. ಅದರಲ್ಲಿ ಕನಕಾಂಬರ, ಟೊಮೆಟೊ, ಕುರಿ ಸಾಕಾಣಿಕೆಗೆ ಮೆಕ್ಕೆಜೋಳದ ಸಪ್ಪೆ ಬೆಳೆಯುತ್ತಿದ್ದಾರೆ. ನಾಲ್ಕು ಎಕರೆಯಲ್ಲಿ ಸುಮಾರು ನಾಲ್ಕು ವರ್ಷಗಳಿಂದ ಏಲಕ್ಕಿ ಬಾಳೆ ಬೆಳೆಯುತ್ತಿದ್ದಾರೆ. ‘ಗುಂಪು ಬಾಳೆಯಾಗಿರುವುದರಿಂದ ವರ್ಷಪೂರ್ತಿ ಬಾಳೆಗೊನೆ ದೊರೆಯುತ್ತದೆ. ಹಾಗಾಗಿ ಪ್ರತಿವರ್ಷ ಖರ್ಚು ಹೋಗಿ ಎಕರೆಗೆ 75ರಿಂದ 76 ಲಕ್ಷ ಲಾಭ ದೊರಕುತ್ತಿದೆ ಎಂದು ನಾಗಭೂಷಣ್ ಹೇಳುತ್ತಾರೆ. ನಾಲ್ಕು ವರ್ಷದ ಹಿಂದೆ ಬಾಳೆಗೆಡ್ಡೆ ಖರೀದಿಸಿ ನಾಟಿ ಮಾಡುವ ಸಂದರ್ಭದಲ್ಲಿ ಮೂರು ಅಡಿ ಆಳದ ಕುಣಿಯಲ್ಲಿ ಹೊಂಗೆ, ಎಕ್ಕ ಹಾಗೂ ತಂಗಡೆ ಸೊಪ್ಪನ್ನು ಹಾಕಿಸಿದ್ದೆ. ನಂತರ ಗಿಡಗಳಿಗೆ ಕಡಿಮೆ ರಸಗೊಬ್ಬರದ ಜೊತೆಗೆ ಹೆಚ್ಚಾಗಿ ಕೊಟ್ಟಿಗೆ ಗೊಬ್ಬರ ನೀಡುತ್ತಿರುವುದರಿಂದ ಬಾಳೆ ತೋಟ…

Read More

ಬೆಂಗಳೂರು: ತುಮಕೂರು ಜಿಲ್ಲೆಯಲ್ಲಿ ಚಿರತೆ ಕಾರ್ಯಪಡೆ ರಚನೆಗೆ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರು ಅನುಮೋದನೆ ನೀಡಿದ್ದಾರೆ. ಕಾರ್ಯಪಡೆಯಲ್ಲಿ ಒಟ್ಟು 59 ಸಿಬ್ಬಂದಿ ಇರಲಿದ್ದಾರೆ ಎಂದು ಅರಣ್ಯ ಇಲಾಖೆ ಪ್ರಕಟಣೆ ತಿಳಿಸಿದೆ. ತುಮಕೂರಿನ ಕುಣಿಗಲ್‌, ತಿಪಟೂರು, ಮಧುಗಿರಿ, ಕೊರಟಗೆರೆ, ಪಾವಗಡ ತಾಲ್ಲೂಕು ವ್ಯಾಪ್ತಿಯಲ್ಲಿ ಚಿರತೆ ಮಾನವ ಸಂಘರ್ಷ ತಪ್ಪಿಸಲು ಈ ಕಾರ್ಯಪಡೆ ಕೆಲಸ ಮಾಡಲಿದೆ. ತುಮಕೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದಲ್ಲಿ 4 ತಂಡಗಳಾಗಿ ಈ ಕಾರ್ಯಪಡೆ ಕೆಲಸ ಮಾಡಲಿದೆ.  ಚಿರತೆ ಹಾವಳಿ ಹೆಚ್ಚುಇರುವ ಗ್ರಾಮಗಳಲ್ಲಿ ಗಸ್ತು, ರೈತರ ಜಮೀನು ಮತ್ತು ವಸತಿ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡರೆ ಅದನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಹೊಣೆಗಾರಿಕೆಯನ್ನು ಕಾರ್ಯಪಡೆಗೆ ನೀಡಲಾಗಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾರ್ಯಪಡೆಯ ಮುಖ್ಯಸ್ಥರಾಗಲಿದ್ದಾರೆ. ತಲಾ ಒಬ್ಬರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಪಶುವೈದ್ಯರು, ಒಬ್ಬ ವಲಯ ಅರಣ್ಯಾಧಿಕಾರಿ ಇರಲಿದ್ದಾರೆ. ಜತೆಗೆ ನಾಲ್ವರು ಉಪ ವಲಯ ಅರಣ್ಯಾಧಿಕಾರಿ, ಎಂಟು ಗಸ್ತು ಅರಣ್ಯ ಪಾಲಕರು, ಐವರು ವಾಹನ ಚಾಲಕರು ಮತ್ತು 40 ಹೊರಗುತ್ತಿಗೆ…

Read More

ಬೀದರ್: ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಪ್ರಕರಣವನ್ನು ಪತ್ತೆ ಹಚ್ಚಿರುವ ಬೀದರ ಜಿಲ್ಲಾ ಪೊಲೀಸರು 10.50 ಲಕ್ಷ ರೂ. ಮೌಲ್ಯದ ಸೊತ್ತು ವಶಕ್ಕೆ ಪಡೆದುಕೊಂಡಿದ್ದಾರೆ. ಚಿಟಗುಪ್ಪಾ ಪೊಲೀಸ್ ಠಾಣಾ ವ್ಯಾಪ್ತಿಯ ಚಿಟಗುಪ್ಪಾ ಪಟ್ಟಣದ ನಾನ್ ಹಜರತ್ ದರ್ಗಾದ ಹತ್ತಿರ ವಾಹನವೊಂದರಲ್ಲಿ ಅಕ್ರಮವಾಗಿ ಪಡಿತರ ಸಾಗಿಸುತ್ತಿದ್ದ ವೇಳೆ ಖಚಿತ ಮಾಹಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು, ಆಹಾರ ನಿರೀಕ್ಷಕರ ರಾಜು ಪಂಚಾಳ ಅವರ ಸಮಕ್ಷಮದಲ್ಲಿ 4,05,000 ಮೌಲ್ಯದ  180 ಕ್ವಿಂಟಾಲ್ ಪಡಿತರ ಅಕ್ಕಿ ಮತ್ತು 6,00,000 ರೂ. ಮೌಲ್ಯದ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದು, ಆರೋಪಿತರ ವಿರುದ್ಧ ಕ್ರಮಕೈಗೊಂಡಿದ್ದಾರೆ. ಬೀದರ ಜಿಲ್ಲಾ ಪೊಲೀಸ್  ಡಿ.ಐ.ಜಿ.ಪಿ, ಈ.ವರವರ ಮಾರ್ಗದರ್ಶನದಂತೆ, ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ನಿರ್ದೇಶನದಂತೆ ಚಿಟಗುಪ್ಪಾ ಪೊಲೀಸರು ಈ ಕಾರ್ಯಾಚರಣೆ ನಡೆಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ತುರುವೇಕೆರೆ: ತಾಲ್ಲೂಕಿನಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ –2025 ಭರದಿಂದ ಸಾಗಿದ್ದು, ಗಣತಿಯಿಂದ ಯಾರಾದರೂ ಹೊರಗುಳಿದಿದ್ದರೆ ತಕ್ಷಣ ಸರ್ಕಾರ ಆರಂಭಿಸಿರುವ ಸಹಾಯವಾಣಿಗೆ ಸಂಪರ್ಕಿಸಬೇಕೆಂದು ತಾಲೂಕಿನ ತಹಶೀಲ್ದಾರ್ ಕುಂ.ಇ.ಅಹಮದ್  ರವರು ತಾಲೂಕಿನ ನಾಗರಿಕರಿಗೆ ಮನವಿ ಮಾಡಿದ್ದಾರೆ. 13.08.2025 ಆದೇಶದನ್ವಯ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ –2025 ಮನೆ ಮನೆ ಸಮೀಕ್ಷೆಯಮ್ಮ ಸೆಪ್ಟೆಂಬರ್ –22 ರಿಂದ ಅಕ್ಟೋಬರ್ –7 ರವರೆಗೆ ರಾಜ್ಯದಾದ್ಯಂತ ಹಮ್ಮಿಕೊಳ್ಳಲಾಗಿರುತ್ತದೆ . ಅದರಂತೆ ತುರುವೇಕೆರೆ ತಾಲೂಕಿನಲ್ಲಿಯೂ ಸಹ 443 ಸಮೀಕ್ಷೆದಾರರು, 22 ಸಮೀಕ್ಷಾ ಮೇಲ್ವಿಚಾರಕರು, 12 ಮಾಸ್ಟರ್ ಟ್ರೈನರ್ಗಳು ಸಮೀಕ್ಷೆಯನ್ನು ನಡೆಸುತ್ತಿದ್ದಾರೆ. ಆದರಿಂದ ತುರುವೇಕೆರೆ ತಾಲೂಕಿನಲ್ಲಿ ಯಾವುದೇ ಗ್ರಾಮ / ಹಟ್ಟಿ / ಕಾಲೋನಿ / ಬೀದಿಗಳಲ್ಲಿ ಕುಟುಂಬದಲ್ಲಿ ಸಮೀಕ್ಷೆ ನಡೆಯದೇ ಇದ್ದಲ್ಲಿ ಅಂತಹ ವಿವರಗಳನ್ನು ದಿ : 07.10.2025 ರ ಒಳಗೆ ಕೆಳಕಂಡ ತುರುವೇಕೆರೆ ತಾಲ್ಲೂಕು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಸಹಾಯವಾಣಿಯನ್ನು ಸಂಪರ್ಕಿಸಿ , ಮಾಹಿತಿ ಒದಗಿಸುವುದು ಅಥವಾ ತಾಲ್ಲೂಕು…

Read More

ಬೆಂಗಳೂರು: ಖ್ಯಾತ ಸಾಹಿತಿ, ಹಿರಿಯ ಕತೆಗಾರ ಪ್ರೊ.ಮೊಗಳ್ಳಿ ಗಣೇಶ್ (64) ಭಾನುವಾರ ಅನಾರೋಗ್ಯದಿಂದ ಮನೆಯಲ್ಲಿ ನಿಧನರಾದರು. ಇವರು ಪತ್ನಿ, ಮೂವರು ಪುತ್ರಿಯರನ್ನು ಅಗಲಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯ ಸುಮಾರು 28 ವರ್ಷ ಪ್ರಾಧ್ಯಾಪಕರಾಗಿದ್ದ ಮೊಗಳ್ಳಿ ಗಣೇಶ್ ತಮ್ಮ ವಿಶಿಷ್ಟ ಶೈಲಿಯ ಕಥೆಗಳ ಮೂಲಕ ಅವರು ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದವರು. ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಸೇವೆ ಸಲ್ಲಿಸಿದ್ದ ಅವರು ‘ಸೂರ್ಯನನ್ನು ಬಚ್ಚಿಡಬಹುದೆ?’ ಮತ್ತು ‘ಅನಾದಿ’ ಕಾವ್ಯ ಸಂಕಲನಗಳ ಮೂಲಕ ಹೆಸರು ಮಾಡಿದರು. ಪ್ರಬಲ ದಲಿತ  ಚಿಂತಕರಾಗಿದ್ದ ಅವರು ದೇಶದ ಪ್ರತಿಷ್ಠತ ವಿಶ್ವವಿದ್ಯಾಲಯಗಳಿಗೆ ಆಹ್ವಾನಿತರಾಗಿ ಹೋಗುತ್ತಿದ್ದರು. ಹಂಪಿ ವಿಶ್ವವಿದ್ಯಾಲಯದಲ್ಲಿ ಜಾನಪದ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿದ್ದ ಇವರು ಸದ್ಯ ಹಾವೇರಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯರಾಗಿದ್ದರು. ಬುಗುರಿ, ಮಣ್ಣು, ಅತ್ತೆ, ಭೂಮಿ, ಕನ್ನೆಮಳೆ, ದೇವರ ದಾರಿ, ಮೊಗಳ್ಳಿ ಕಥೆಗಳು (ಆವರೆಗಿನ ಬಹುಪಾಲು ಕಥೆಗಳ ಸಂಕಲನ) ಮುಂತಾದವು ಮೊಗಳ್ಳಿ ಗಣೇಶ್ ಅವರ ಕಥಾ ಸಂಕಲನಗಳು. ತೊಟ್ಟಿಲು, ಕಿರೀಟ ಅವರ ಕಾದಂಬರಿಗಳು. ‘ಬೇರು’…

Read More

ಬೆಂಗಳೂರು: ಗಣತಿ ಸರ್ವೇ ವೇಳೆ ಕುರಿ, ಕೋಳಿ, ಚಿನ್ನ, ವಾಚ್ ಎಷ್ಟಿವೆ ಎಂದು ಕೇಳಬಾರದು. ಬೆಂಗಳೂರಲ್ಲಿ ಆ ರೀತಿ ಕೇಳಬಾರದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಸದಾಶಿವನಗರ ನಿವಾಸದಲ್ಲಿ ಪ್ರತಿಕ್ರಿಯಿಸಿದ ಅವರು, ನಿಮಗೆ ಏನು ಉತ್ತರ ಕೊಡಬೇಕೋ ಅದಕ್ಕೆ ಉತ್ತರ ಕೊಡಿ. ಕೊಡಬಾರದು ಅನ್ನಿಸಿದರೆ ಕೊಡಬಾರದು. ಎಷ್ಟು ವಾಚ್, ಎಷ್ಟು ಚಿನ್ನ ಇದೆ, ಎಷ್ಟು ಫ್ರಿಡ್ಜ್ ಇದೆ ಅದೆಲ್ಲ ಕೇಳಬೇಡಿ. ಅದು ಅವರ ಪರ್ಸನಲ್ ಬಿಟ್ಟು ಬಿಡಿ ಎಂದು ಅಧಿಕಾರಿಗಳಿಗೂ ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು. ಯಾರು ಬೇಕಾದರೂ ಅಪೇಕ್ಷೆಪಡಲಿ. ಕೋರ್ಟ್ ಹೇಳಿದೆ, ಏನು ಬೇಕೋ ಅದಕ್ಕೆ ಮಾತ್ರ ಉತ್ತರ ನೀಡಿ. ಆದರೆ ಸಮೀಕ್ಷೆ ವಿರೋಧ ಮಾಡೋದರಲ್ಲಿ ಅರ್ಥ ಇಲ್ಲ, ಎಲ್ಲರೂ ಭಾಗಿಯಾಗಬೇಕು. ಇಲಾಖೆಯವರು ಏನು ಮಾಡುತ್ತಾರೆ, ಮಾಡಲಿ. ಎಲ್ಲರೂ ಸಮೀಕ್ಷೆಯಲ್ಲಿ ಭಾಗಿಯಾಗಬೇಕು ಎಂದು ಮನವಿ ಮಾಡಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ಬೆಂಗಳೂರು: ನಮ್ಮ ಮೆಟ್ರೋಗೆ “ಬಸವ ಮೆಟ್ರೋ” ಎಂದು ನಾಮಕರಣ ಮಾಡುವ ಬಗ್ಗೆ ಕೇಂದ್ರಕ್ಕೆ ಶಿಫಾರಸ್ಸು ಮಾಡುತ್ತೇನೆ. ಇದು ಪೂರ್ಣವಾಗಿ ರಾಜ್ಯ ಸರ್ಕಾರದ ಯೋಜನೆ ಆಗಿದ್ದರೆ ಇವತ್ತೇ “ಬಸವ ಮೆಟ್ರೋ” ಎಂದು ಘೋಷಿಸಿ ಬಿಡುತ್ತಿದ್ದೆ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ವಿಶ್ವಗುರು ಬಸವಣ್ಣ ಅವರನ್ನು “ಕರ್ನಾಟಕ ಸಾಂಸ್ಕೃತಿಕ ನಾಯಕ” ಎಂದು ಘೋಷಿಸಿದ ವರ್ಷಾಚರಣೆ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ‘ಬಸವ ಸಂಸ್ಕೃತಿ ಅಭಿಯಾನ–2025’ ರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ನಮ್ಮಲ್ಲಿ ಅನೇಕ ಜಾತಿ, ಅನೇಕ‌ ಧರ್ಮಗಳಿವೆ. ಚಾತುವರ್ಣ ವ್ಯವಸ್ಥೆಯಲ್ಲಿ ನಾಲ್ಕನೇ ಸ್ಥಾನದಲ್ಲಿ ಇರುವವರು ನಾವು. ಶೂದ್ರರು ಜಾತಿ ಯಾವುದೇ ಆದರೂ ನಾವೆಲ್ಲರೂ ಒಂದೇ ಎನ್ನುವುದನ್ನು ಅರಿಯಬೇಕು.  ನಾನು ಬಸವಣ್ಣನವರ ಅಭಿಮಾನಿ. ಬಸವ ತತ್ವದಲ್ಲಿ‌ ನಂಬಿಕೆ – ಬದ್ಧತೆ ಇಟ್ಟುಕೊಂಡಿದ್ದೇನೆ.  ಅಂದಿಗಲ್ಲ—ಇಂದಿಗಲ್ಲ–ಮುಂದೆ ಎಂದೆಂದಿಗೂ ಬಸವ ತತ್ವ ಶಾಶ್ವತ ಮತ್ತು ಪ್ರಸ್ತುತ ಎನ್ನುವುದು ನನ್ನ ನಂಬಿಕೆ. ಸಹಬಾಳ್ವೆ ಮತ್ತು ಸಹಿಷ್ಣತೆಯನ್ನು ಬಸವಣ್ಣನವರು ಬದುಕಿನುದ್ದಕ್ಕೂ ಸಾರಿದರು. ನಾನೂ ಇದನ್ನು ಪಾಲಿಸುತ್ತೇನೆ ಎಂದು ಹೇಳಿದರು. ಬಸವ ಜಯಂತಿಯ ದಿನವೇ ಮುಖ್ಯಮಂತ್ರಿಯಾಗಿ…

Read More

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಉತ್ತರ ಪ್ರದೇಶ ಮಾದರಿಯ ಆಡಳಿತ ಬರಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ಚಿಕ್ಕಬಳ್ಳಾಪುರ ತಾಲೂಕಿನ ಕೌರನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ಈದ್ ಮಿಲಾದ್ ಹಬ್ಬದ ವೇಳೆ ದೇಶದ ಯಾವುದೇ ಭಾಗದಲ್ಲೂ ಹಿಂದೂಗಳು ಅಶಾಂತಿ ಉಂಟುಮಾಡಿಲ್ಲ. ಆದ್ರೆ ರಾಜ್ಯದ ಮದ್ದೂರು, ನಾಗಮಂಗಲ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮುಸ್ಲಿಮರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ದೂರಿದರು. ಇಸ್ಲಾಂ ಧರ್ಮದಲ್ಲಿ ನಿಜವಾದ ಸೋದರತ್ವದ ಮೌಲ್ಯಗಳು ಕಾಣಿಸುತ್ತಿಲ್ಲ. ಈಗ ಕರ್ನಾಟಕದಲ್ಲಿ ಸಾಬ್ರ ಸರ್ಕಾರವೇ ಆಡಳಿತ ನಡೆಸುತ್ತಿದೆ. ನಮ್ಮ ಮುಖ್ಯಮಂತ್ರಿ ದಸರಾ ವೇಳೆ ಚಾಮುಂಡೇಶ್ವರಿಯ ಕುಂಕುಮ ಹಚ್ಚಿಕೊಳ್ಳುವುದಿಲ್ಲ, ಆದರೆ ಮುಸ್ಲಿಂ ಕಾರ್ಯಕ್ರಮಗಳಲ್ಲಿ ಟೋಪಿ ಧರಿಸಿ ಸಂತೋಷ ವ್ಯಕ್ತಪಡಿಸುತ್ತಾರೆ ಎಂದು ಟೀಕಿಸಿದರು. 2028ರಲ್ಲಿ ಸನಾತನ ಧರ್ಮ ರಕ್ಷಣೆ ಮಾಡುವ ಶಕ್ತಿಯೇ ಅಧಿಕಾರಕ್ಕೆ ಬರಬೇಕು, ಹಿಂದೂಗಳ ದೇವಾಲಯಗಳು, ಕುಂಕುಮ ಮತ್ತು ಸಂಸ್ಕೃತಿಯ ರಕ್ಷಣೆ ಅಗತ್ಯವಾಗಿದೆ. ಇನ್ನೂ ನನಗೂ ಒಂದು ಅವಕಾಶ ಕೊಡಿ ಮಾದರಿ ಆಡಳಿತ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಆಗುವ…

Read More

ತುಮಕೂರು: ಜಿಲ್ಲೆಯಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಮಾರಾಟ ಮಾಡಲು ಅ.1ರಿಂದ ರೈತರ ನೋಂದಣಿ ಆರಂಭವಾಗಿದೆ. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು ಪ್ರತಿ ಕ್ವಿಂಟಾಲ್‌ ಗೆ 4,886 ನಿಗದಿಪಡಿಸಲಾಗಿದೆ. ನೋಂದಣಿ ಮಾಡಿಸಲು ಡಿಸೆಂಬರ್ 15ರ ವರೆಗೆ ಕಾಲಾವಕಾಶವಿದೆ. 2026ನೇ ಜನವರಿ 1ರಿಂದ ಮಾರ್ಚ್‌ 31ರ ವರೆಗೆ ರಾಗಿ ಖರೀದಿ ನಡೆಯಲಿದೆ. 11 ನೋಂದಣಿ ಕೇಂದ್ರ: ಚಿಕ್ಕನಾಯಕನಹಳ್ಳಿ ಹೊಸ ಸರ್ಕಾರಿ ಆಸ್ಪತ್ರೆ ಹಿಂಭಾಗ ಇರುವ ಎಪಿಎಂಸಿ ಗೋದಾಮು, ಹುಳಿಯಾರು ಎಪಿಎಂಸಿ, ಕುಣಿಗಲ್ ಎಪಿಎಂಸಿ (2 ಕೇಂದ್ರ), ತಿಪಟೂರು ಎಪಿಎಂಸಿ, ತುರುವೇಕೆರೆ ಎಪಿಎಂಸಿ, ಗುಬ್ಬಿ ಎಪಿಎಂಸಿ, ಮಧುಗಿರಿ ಎಪಿಎಂಸಿ, ಶಿರಾ ಎಪಿಎಂಸಿ, ಕೊರಟಗೆರೆ ಅಕ್ಕಿರಾಂಪುರ ಪಿಡಿಎಸ್ ಗೋದಾಮು, ತುಮಕೂರು ಬಟವಾಡಿ ಎಪಿಎಂಸಿ ಗೋದಾಮಿನಲ್ಲಿ ರೈತರು ನೋಂದಣಿ ಮಾಡಿಸಬಹುದು. ನಗರದಲ್ಲಿ ಶನಿವಾರ ಜಿಲ್ಲಾ ಕಾರ್ಯಪಡೆ ಸಮಿತಿ ಸಭೆ ನಡೆಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ ನೋಂದಣಿಗೆ ಅಗತ್ಯ ಕ್ರಮಕ್ಕೆ ನಿರ್ದೇಶಿಸಿದರು. ಆಹಾರ ಇಲಾಖೆ ಜಂಟಿ ನಿರ್ದೇಶಕಿ ಸೌಮ್ಯ, ಕೃಷಿ ಇಲಾಖೆ ಜಂಟಿ ನಿರ್ದೇಶಕ…

Read More