Author: admin

ಬೆಂಗಳೂರು: ಮುಖ್ಯಮಂತ್ರಿ ಕುರ್ಚಿಗಾಗಿ ಕಾಂಗ್ರೆಸ್ ನಲ್ಲಿ ಮ್ಯೂಸಿಕಲ್ ಚೇರ್ ನಡೆಯುತ್ತಿದೆ ಅಂತ ವಿಪಕ್ಷ ನಾಯಕ ಆರ್.ಅಶೋಕ್  ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು,  ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಜನರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ಜನರ ತೆರಿಗೆ ಹಣವನ್ನು ಯಾವ ರೀತಿ ಲೂಟಿ ಮಾಡಬೇಕು ಎಂಬ ಬಗ್ಗೆ ಕಾಂಗ್ರೆಸ್ ನಾಯಕರು ದೆಹಲಿಗೆ ತೆರಳಿ ಚರ್ಚೆ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಿಎಂ ಕುರ್ಚಿಗಾಗಿ ಕಾಂಗ್ರೆಸ್ ನಾಯಕರಲ್ಲೇ ಒಳಜಗಳ ಆರಂಭವಾಗಿದೆ. ಮುಖ್ಯಮಂತ್ರಿ ಕುರ್ಚಿಗಾಗಿ ಕಾಂಗ್ರೆಸ್ ಮ್ಯೂಸಿಕಲ್ ಚೇರ್ ನಡೆಯುತ್ತಿದೆ. ಡಿ.ಕೆ.ಶಿವಕುಮಾರ್, ಡಾ.ಜಿ.ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ, ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ, ಜಮೀರ್ ಅಹ್ಮದ್ ನಡುವೆ ಪೈಪೋಟಿ ನಡೆದಿದೆ. ಎಲ್ಲರೂ ದೆಹಲಿಗೆ ಓಡಾಡುತ್ತಿದ್ದಾರೆ. ಸಿದ್ದರಾಮಯ್ಯ ಬಳಿಕ ಯಾರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ಬಗ್ಗೆ ಕಾಂಗ್ರೆಸ್ ನಾಯಕರಲ್ಲಿ ಚರ್ಚೆ ನಡೆದಿದೆ ಎಂದು ಹೇಳಿದರು. ಅಗತ್ಯವಸ್ತುಗಳ ದರ ಏರಿಕೆಯಾಗಿದೆ. ಈಗ ನೀರಿನ ದರ ಏರಿಸಲು ಸರ್ಕಾರ ಹೊರಟಿದೆ. ನೀರಿನ ದರ ಏರಿಸಬೇಡಿ ಎಂದು ಜನರು ಒತ್ತಾಯಿಸಿದರೂ ಸರ್ಕಾರ…

Read More

ಚಿಕ್ಕಬಳ್ಳಾಪುರ: ಮಹಿಳಾ ಟೆಕ್ಕಿಯೊಬ್ಬರು ಕೇತೇನಹಳ್ಳಿ ಜಲಪಾತಕ್ಕೆ ಆಗಮಿಸಿದ್ದ ವೇಳೆ ಕಾಲು ಜಾರಿ ಬಿದ್ದು, ಕಾಲು ಮುರಿದುಕೊಂಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಅರ್ಪಿತಾ ಕಾಲುಮುರಿದುಕೊಂಡ ಮಹಿಳೆಯಾಗಿದ್ದು, ಇವರು ಮುಂಬೈ ಮೂಲದವರಾಗಿದ್ದಾರೆ. ಬೆಂಗಳೂರಿನಲ್ಲಿ ಟೆಕ್ಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅರ್ಪಿತಾ, ಸ್ನೇಹಿತರೊಂದಿಗೆ ಕೇತೇನಹಳ್ಳಿ ಜಲಪಾತ ನೋಡಲು ಹೋಗಿದ್ದರು. ಜಲಪಾತದಲ್ಲಿ ಆಟವಾಡಿ ವಾಪಾಸ್ ಆಗುವಾಗ ಕಾಡಿನ ದಾರಿಯಲ್ಲಿ ಜಾರಿ ಬಿದ್ದಿದ್ದಾರೆ. ಪರಿಣಾಮ ಕಾಲು ಮುರಿದಿದ್ದು, ಸ್ನೇಹಿತರು ಹಾಗೂ ಸ್ಥಳೀಯರು 2 ಕಿ.ಮೀವರೆಗೆ ಮಹಿಳೆಯನ್ನು ಸ್ಟ್ರೆಚರ್ ಮೂಲಕ ಕರೆತಂದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕ್ಕಬಳ್ಳಾಪುರದ ಖಾಸಗಿ ಆಸ್ಪತ್ರೆಗೆ ಅರ್ಪಿತಾ ದಾಖಲಾಗಿದ್ದಾರೆ. ಘಟನೆ ಬಳಿಕ ಕೇತೇನಹಳ್ಳಿ ಜಲಪಾತಕ್ಕೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಅರಣ್ಯದೋಳಗೆ ಪ್ರವೇಶ ಮಡದಂತೆ ಅರಣ್ಯಾಧಿಕಾರು ಸೂಚಿಸಿದ್ದು, ಸ್ಥಳದಲ್ಲಿ ಅರಣ್ಯ ಇಲಖೆ ಸಿಬ್ಬಂದಿಗಳನ್ನು ನಿಯೋಜಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

Read More

ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ ಸಿ) ಆಗಸ್ಟ್ 27ರ ಮಂಗಳವಾರ ಗೆಜೆಟೆಡ್ ಪ್ರೊಬೇಷನರ್ಸ್‌ 384 ಹುದ್ದೆಗಳ ಪೂರ್ವಭಾವಿ ಪರೀಕ್ಷೆಯನ್ನು ನಡೆಸಲಿದೆ. ಸುಮಾರು 2,10,910 ಅಭ್ಯರ್ಥಿಗಳು ಈ ಪರೀಕ್ಷೆಯನ್ನು ಬರೆಯಬೇಕಿದೆ. ಆದರೆ ಪರೀಕ್ಷೆಯನ್ನು ಮುಂದೂಡಬೇಕು ಎಂದು ಶನಿವಾರ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ. ಪರೀಕ್ಷೆ ಮುಂದೂಡುವ ಕುರಿತು ಇನ್ನೂ ಕೆಪಿಎಸ್‌ಸಿ ಯಾವುದೇ ಆದೇಶವನ್ನು ಹೊರಡಿಸಿಲ್ಲ. ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘ (ರಿ) ಫ್ರೀಡಂಪಾರ್ಕ್‌ನಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆಸುತ್ತಿದೆ. ಕೆಪಿಎಸ್‌ ಸಿಯಿಂದ ನಿಗದಿಯಾಗಿರುವ KAS 2023-24 ಪೂರ್ವಭಾವಿ ಪರೀಕ್ಷೆಯನ್ನು ಮುಂದೂಡುವ ಕುರಿತು ಬೃಹತ್ ಪ್ರತಿಭಟನೆ ನಡೆಸುತ್ತಿದ್ದು, ಎಲ್ಲರೂ ಭಾಗವಹಿಸಿ ಎಂದು ಕರೆ ನೀಡಲಾಗಿದೆ. ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ, ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಅನೇಕ ರಾಜಕೀಯ ನಾಯಕರು ಸಹ ಪರೀಕ್ಷೆ ಮುಂದೂಡುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್…

Read More

Music ಸಂಗೀತಮಯ Mu ತೆಗೆದರೆ sick ಕಾಯಿಲೆ ಆದ್ದರಿಂದ ನಮ್ಮೆಲ್ಲ ನೋವು ,ರುಜಿನ,ಕಾಯಿಲೆ ,ಕಸಾಲೆ ದೂರವಾಗಬೇಕಾದರೆ ಸಂಗೀತ ಹಾಡು ಕೇಳಬೇಕು. ಸಂಗೀತವೆಂದರೆ ಹಾಡುವವರು ಮತ್ತು ಕೇಳುವವರು ಸಮಾನವಾಗಿ ಸುಖಿಸುವ ಸ್ವರ ಪ್ರಪಂಚವು ವಿಟ್ಲ ಪಡಿಬಾಗಿಲು ಮುವಾಜೆ ಸಭಾಂಗಣದಲ್ಲಿ ವರಮಹಾಲಕ್ಷ್ಮಿ ಪೂಜೆಯ ಸಂಭ್ರಮದಲ್ಲಿ ಸ್ವರಮಾದುರ್ಯ ಗಾಯನ ಕಾರ್ಯಕ್ರಮ ನಡೆಯಿತು. ಮೊದಲಿಗೆ ಶ್ರೀ ಗಣನಾಥ ಸಿಂಧೂರ ವರ್ಣ ಹಾಡಿನೊಂದಿಗೆ ಶ್ರೀ ವರಲಕ್ಷ್ಮಿ ಶ್ರೀ ರಾಗ ಹಾಡಿನೊಂದಿಗೆ ಸುಶ್ರಾವ್ಯವಾಗಿ ಹಾಡಿ ರಂಜಿಸಿದರು. ಕಾಮಾಕ್ಷಿ ವರಲಕ್ಷ್ಮಿರಾಗ ವಸಂತ ,ಪಾಹಿಸುವೆ ಶಿವರಂಜಿನಿ ರಾಗ , ಎಂದರೋ ಮಹಾನುಭಾವುಲು ಶ್ರೀರಾಗ, ಪಂಚರತ್ನ ತ್ಯಾಗರಾಜರ ಕೃತಿ, ಸಾದರ ಮವ ನಿರುಪಮ ಸರಸ್ವತಿ ರಾಗ, ತಿಲ್ಲಾನ ಬೃಂದಾವನಿ ಸಾರಂಗ ಹಾಡಿನೊಂದಿಗೆ ಸಮಾಪ್ತಿಯಾಯಿತು. ಮುಖ್ಯ ಶಿಕ್ಷಕಿ ಸವಿತಾ ಕೋಡಂದೂರ್ ನಿರ್ದೇಶನದಲ್ಲಿ ಸಿಂಚನಲಕ್ಷ್ಮಿ ಕೋಡಂದೂರ್ ಭಾಗ್ಯಶ್ರೀ ಪಡಿಬಾಗಿಲು, ವಾಣಿ, ಪ್ರತಿಭಾ, ಆದರ್ಶಿನಿ, ಸಾತ್ವಿಕ ಮುಂತಾದವರು ಭಕ್ತಿಗೀತೆ, ಭಾವಗೀತೆ ಜಾನಪದಗೀತೆ, ದಾಸರ ಗೀತೆಗಳನ್ನು ಸ್ವರ ಸಿಂಚನ ಸಂಗೀತ ಶಾಲಾ ವಿದ್ಯಾರ್ಥಿಗಳು ಜೊತೆಯಲ್ಲಿ ಹಾಡಿ ಎಲ್ಲರ ಮನ ಸೆಳೆದು…

Read More

ಅನಿಲ್ ಅಂಬಾನಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಹಣ ದುರುಪಯೋಗದ ಪ್ರಕರಣದಲ್ಲಿ ಐದು ವರ್ಷಗಳ ಕಾಲ ಷೇರು ಮಾರುಕಟ್ಟೆಯಿಂದ ಅವರನ್ನು ನಿಷೇಧಿಸಲಾಗಿದೆ. ಮಾರುಕಟ್ಟೆ ನಿಯಂತ್ರಕ ಸೆಬಿ(Securities and Exchange Board of India) ಅನಿಲ್ ಅಂಬಾನಿಗೆ ಶಾಕ್‌ ನೀಡಿದ್ದು, ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ರಿಲಯನ್ಸ್ ಹೋಮ್ ಫೈನಾನ್ಸ್‌ ನ ಮಾಜಿ ಅಧ್ಯಕ್ಷ ಅನಿಲ್ ಅಂಬಾನಿ ಸೇರಿದಂತೆ ಒಟ್ಟು 24 ಉದ್ಯಮಿಗಳನ್ನು ಸೆಕ್ಯೂರೆಟೀಸ್ ಮಾರ್ಕೆಟ್ ​​ನಿಂದ ನಿಷೇಧ ಮಾಡಲಾಗಿದೆ. ಅಲ್ಲದೇ ರಿಲಯನ್ಸ್ ಹೋಮ್ ಫೈನಾನ್ಸ್ ಅನ್ನು ಆರು ತಿಂಗಳ ಕಾಲ ನಿಷೇಧಿಸಲಾಗಿದ್ದು, ದಂಡ ವಿಧಿಸಲಾಗಿದೆ. ಇನ್ನು ಅನಿಲ್ ಅಂಬಾನಿಗೆ 25 ಕೋಟಿ ರೂಪಾಯಿ ದಂಡದ ಜೊತೆಗೆ ಐದು ವರ್ಷಗಳ ಅವಧಿಗೆ ಸೆಕ್ಯುರಿಟೀಸ್ ಮಾರುಕಟ್ಟೆಯೊಂದಿನ ಸಹಭಾಗಿತ್ವವನ್ನು ನಿಷೇಧಿಸಲಾಗಿದೆ. ಜೊತೆಗೆ ಇತರ ಅಧಿಕಾರಿಗಳಿಗೂ ಕೂಡ ಈ ಪ್ರಕರಣದಲ್ಲಿ ದಂಡ ವಿಧಿಸಲಾಗಿದೆ. ಪಿಟಿಐ ವರದಿಯ ಪ್ರಕಾರ, ಅನಿಲ್ ಅಂಬಾನಿ ಆರ್‌ ಎಚ್‌ ಎಫ್‌ ಎಲ್‌ ನ ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿಗಳ ನೆರವಿನೊಂದಿಗೆ, ತನಗೆ ಸಂಬಂಧಿಸಿದ ಸಂಸ್ಥೆಗಳಿಗೆ ಸಾಲದ…

Read More

ತುಮಕೂರು:  ತುಮಕೂರು ರೈಲ್ವೆ ನಿಲ್ದಾಣದಲ್ಲಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ ಸೋಮಣ್ಣ ಅವರು ಧಾರವಾಡ — ಕೆ ಎಸ್ ಆರ್ ನಡುವೆ ಸಂಚರಿಸುವ ವಂದೇ ಭಾರತ್ ರೈಲು ನಿಲುಗಡೆಗೆ ಹಸಿರು ನಿಶಾನೆ ತೋರಿದರು. ತುಮಕೂರಿನಲ್ಲಿ ವಂದೇ ಭಾರತ್ ರೈಲು ನಿಲುಗಡೆ ನೀಡುವುದರಿಂದ ತುಮಕೂರು ಜಿಲ್ಲೆಯಿಂದ ಬೆಂಗಳೂರಿಗೆ ಪ್ರಯಾಣಿಸುವ ಸಾಫ್ಟ್ವೇರ್ ಉದ್ಯೋಗಿಗಳು ಬಹುತೇಕ ಪ್ರವಾಸಿಗರಿಗೆ ಇದು ಅನುಕೂಲವಾಗಲಿದೆ. ಅಲ್ಲದೆ ತುಮಕೂರು ಜಿಲ್ಲೆಯ ಸುತ್ತಮುತ್ತ ಜನರಿಗೆ ಶಿಕ್ಷಣ ಆರೋಗ್ಯ ಮತ್ತು ಅಗತ್ಯ ಸೇವೆಗಳ ಲಭ್ಯತೆಯನ್ನು ಹೆಚ್ಚಿಸಲಿದೆ ಎಂದು ಸಚಿವ ಸೋಮಣ್ಣ ತಿಳಿಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

Read More

ಪಾವಗಡ: ತಾಲ್ಲೂಕಿನ ವೈ.ಎನ್.ಹೊಸಕೋಟೆ ಹೋಬಳಿಯ ಓಬಳಾಪುರ ಗ್ರಾಮದ ಸಮೀಪ ಬೈಕ್ ಮತ್ತು ಜಲ್ಲಿ ತುಂಬಿದ ಟ್ರ್ಯಾಕ್ಟರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಶುಕ್ರವಾರ ಸಂಜೆ ಸಂಭವಿಸಿದೆ. ಓಬಳಾಪುರ ಗ್ರಾಮದ ಗೋವಿಂದಪ್ಪ(40) ಲಿಂಗದಹಳ್ಳಿಯಿಂದ ಸ್ವಗ್ರಾಮಕ್ಕೆ ಬರುತ್ತಿದ್ದ ವೇಳೆ,  ಓಬಳಾಪುರ ಗುಟ್ಟೆಯ ಸಮೀಪ ಹನುಮಂತನಹಳ್ಳಿಯಿಂದ ಜಲ್ಲಿ ತುಂಬಿಕೊಂಡು ಬರುತ್ತಿದ್ದ ಟ್ರ್ಯಾಕ್ಟರ್ ಮತ್ತು ಈತನ ಬೈಕ್  ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸಮೇತ ಕೆಳಕ್ಕೆ ಬಿದ್ದಿದ್ದ ಗೋವಿಂದಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ.  ಘಟನೆ ಸಂಬಂಧ  ವೈ.ಎನ್.ಹೊಸಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಗೋವಿಂದಪ್ಪ ಪತ್ನಿ ಮತ್ತು ಒಂದು ಹೆಣ್ಣು ಮಗಳನ್ನು ಅಗಲಿದ್ದಾರೆ. ವರದಿ: ನಂದೀಶ್ ನಾಯ್ಕ, ಪಾವಗಡ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

Read More

ವಾಷಿಂಗ್ಟನ್‌ :  ಭಾರತೀಯರು ಇತರರನ್ನು ವಂಚಿಸಲು ಸಾಧ್ಯವಿಲ್ಲ, ನಮ್ಮ ನಮ್ಮ ಸ್ವಭಾವದಲ್ಲಿ ಮೋಸ ಎಂಬುದಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್  ಹೇಳಿದ್ದಾರೆ. ಅಮೆರಿಕದಲ್ಲಿರುವ ಭಾರತೀಯ ವಲಸಿಗರನ್ನುದ್ದೇಶಿಸಿ ಮಾತನಾಡಿದ ಅವರು, ಅನಿವಾಸಿಗಳಾಗಿ ಅಮೆರಿಕಕ್ಕೆ ಅವರ ಸಮರ್ಪಣೆಯನ್ನು ಪ್ರಶ್ನಿಸಬಾರದು ಎಂದು ಹೇಳಿದರು. ಇಲ್ಲಿ ಕೆಲಸ ಮಾಡುವ ಭಾರತೀಯ ಸದಸ್ಯರಿಗೆ ನಾನು ಪೂರ್ಣ ಪ್ರಾಮಾಣಿಕತೆಯಿಂದ ಕೆಲಸ ಮಾಡಲು ಹೇಳಲು ಬಯಸುತ್ತೇನೆ ಎಂದರು. ನಿಮಗೆ ಭಾರತ ಬಗ್ಗೆ ಸಮರ್ಪಣೆ ಇರಬೇಕು. ಆದರೆ ನೀವು ಇಲ್ಲಿ ಕೆಲಸ ಮಾಡುತ್ತಿರುವುದರಿಂದ, ಅಮೆರಿಕದತ್ತ ನಿಮಗಿರುವ ಸಮರ್ಪಣೆಯನ್ನೂ ಪ್ರಶ್ನಿಸಬಾರದು. ಆಗ ಮಾತ್ರ ಭಾರತೀಯರ ಗ್ರಹಿಕೆಗಳು ಚೆನ್ನಾಗಿರುತ್ತದೆ ಎಂದು ಅವರು ಹೇಳಿದರು. ಭಾರತೀಯರನ್ನು ಮೋಸ ಮಾಡ ಬಹುದು.ಆದರೆ ಭಾರತೀಯರು ಯಾರನ್ನೂ ಮೋಸ ಮಾಡಲಾರರು. ವಂಚನೆ ನಮ ಸ್ವಭಾವ ದಲ್ಲಿಲ್ಲ, ನಾವು ಮೋಸ ಹೋಗಬಹುದು, ಆದರೆ ನಾವು ಎಂದಿಗೂ ಇತರರಿಗೆ ಮೋಸ ಮಾಡಬಾರದು ಎಂದು ಇದೇ ವೇಳೆ ಅವರು ಹೇಳಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ…

Read More

ಬೆಂಗಳೂರು:  ಗಣೇಶೋತ್ಸವ ಆಚರಣೆ ಹಿನ್ನೆಲೆ ಬಿಬಿಎಂಪಿಯ ಆಯಾ ವಲಯ ವ್ಯಾಪ್ತಿಯಲ್ಲಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಗಣೇಶ ಚತುರ್ಥಿ ಆಚರಣೆ ಸಂಬಂಧ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಕೇಂದ್ರ ಕಚೇರಿ ಸಭಾಂಗಣದಲ್ಲಿಂದು ನಡೆದ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಗಣೇಶಮೂರ್ತಿ ಪ್ರತಿಷ್ಠಾಪನೆಗಾಗಿ ಅನುಮತಿ ನೀಡುವ ಸಲುವಾಗಿ 63 ಉಪವಿಭಾಗ ಕಚೇರಿಗಳಲ್ಲಿ ಏಕಗವಾಕ್ಷಿ ಕೇಂದ್ರಗಳನ್ನು ಕೂಡಲೇ ತೆರೆದು ಪಾಲಿಕೆ, ಪೊಲೀಸ್‌‍, ಬೆಸ್ಕಾಂ ಹಾಗೂ ಅಗ್ನಿಶಾಮಕ ಅಧಿಕಾರಿಗಳನ್ನು ತ್ವರಿತವಾಗಿ ನಿಯೋಜಿಸಬೇಕು. ಬಳಿಕ ಅಧಿಕಾರಿಗಳ ಮಾಹಿತಿಯುಳ್ಳ ಪಟ್ಟಿಯನ್ನು ಪಾಲಿಕೆ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಬೇಕು. ಅನುಮತಿ ಕೋರಿ ಬರುವವರಿಗೆ ಕಾಲಮಿತಿಯೊಳಗೆ ಅನುಮತಿ ನೀಡುವಂತೆ ಅತ್ಯಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಯಿತು. ಕೆರೆಗಳ ಬಳಿ ಇರುವ ಕಲ್ಯಾಣಿಗಳನ್ನು ಸಂಪೂರ್ಣ ಸ್ವಚ್ಛ ಮಾಡಬೇಕು. ಮೂರ್ತಿಗಳ ವಿಸರ್ಜನೆಗಾಗಿ ಅಗತ್ಯ ಸಿಬ್ಬಂದಿಗಳ ನಿಯೋಜನೆ, ಬ್ಯಾರಿಕೇಡ್‌, ಸಿಸಿ ಕ್ಯಾಮೆರಾ, ವಿದ್ಯುತ್‌ ದೀಪ, ನುರಿತ ಈಜುಗಾರರು ಹಾಗೂ ಕ್ರೇನ್‌ ಸೌಲಭ್ಯ ಕಲ್ಪಿಸಬೇಕೆಂದು ಸೂಚಿಸಿದರು. ಗಣೇಶ ವಿಸರ್ಜನೆ ಮೆರವಣಿಗೆ…

Read More

ತುಮಕೂರು:  ತುಮಕೂರು ಜಿಲ್ಲೆಯ ಕೆ.ಟಿವಿ ಕನ್ನಡ ವಾಹಿನಿಯ ಜಿಲ್ಲಾ ವರದಿಗಾರರಾದ ಸಿದ್ದೇಶ್ ಎನ್.ಎಸ್. ಅವರಿಗೆ 78ನೇ ಭಾರತದ ಸ್ವಾತಂತ್ರ್ಯೋತ್ಸವದ ಅಂಗವಾಗಿ “ಭಾರತ ಸೇವಾ ರತ್ನ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಈ ಪ್ರಶಸ್ತಿಯನ್ನು  ಬೆಂಗಳೂರಿನ ಕನ್ನಡ ಭವನದಲ್ಲಿ ನೆಹರೂ ಯುವ ಕೇಂದ್ರ, ಸ್ವಾನ್ ಸಾಮಾಜಿಕ–ಆರ್ಥಿಕ ಅಭಿವೃದ್ಧಿ ಸಂಸ್ಥೆ (ರಿ.), ಸ್ವರ್ಣಮುಖಿ ಮಾಸ ಪತ್ರಿಕೆ, ಇಂದು ಸಂಜೆ ದಿನಪತ್ರಿಕೆ, ಎಸ್.ಬಿ. ನ್ಯೂಸ್ ಹಾಗೂ ವಿ. ನಾಗರಾಜು ಪ್ರತಿಷ್ಠಾನದ ಸಹಯೋಗದಲ್ಲಿ 22-08-2024ರಂದು ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. ಸಿದ್ದೇಶ್ ಎನ್.ಎಸ್. ಅವರು ತಮ್ಮ ವರದಿಗಾರಿಕೆಯಲ್ಲಿ ತೇಜಸ್ವಿನಿ ಪತ್ರಿಕೆ ಸೇರಿದಂತೆ ಹಲವು ಸಣ್ಣ ಮತ್ತು ಮಧ್ಯಮ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿ, ಪ್ರಸ್ತುತ ಕೆ.ಟಿವಿ ಕನ್ನಡ ವಾಹಿನಿಯ ತುಮಕೂರು ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ, ಈ ಗೌರವವನ್ನು ಸಲ್ಲಿಸಲಾಗಿದೆ. ಈ ಪ್ರಶಸ್ತಿಯೊಂದಿಗೆ ಸಿದ್ದೇಶ್ ಎನ್.ಎಸ್. ಅವರ ವರದಿಗಾರಿಕೆಯಲ್ಲಿ ತೋರಿದ ಶ್ರದ್ಧೆ, ಪ್ರಾಮಾಣಿಕತೆ, ಮತ್ತು ನಿಷ್ಠೆಗೆಯ ಗುರುತಾಗಿ ಈ ಗೌರವ ದೊರೆತಿದ್ದು, ಅವರಿಗೆ ಮತ್ತಷ್ಟು ಪ್ರೋತ್ಸಾಹ…

Read More