Subscribe to Updates
Get the latest creative news from FooBar about art, design and business.
- ಕಾವೇರಿ ಕಿಚ್ಚು: ‘ಭೂಮಿ, ನೀರು, ಭಾಷೆ ವಿಚಾರ ಬಂದಾಗ ಕರ್ನಾಟಕ ಒಂದಾಗಬೇಕು’ : ಸರ್ವಪಕ್ಷ ಸಭೆಯಲ್ಲಿ ಸಿದ್ದರಾಮಯ್ಯ ಕರೆ
- ತಿಪಟೂರಿನಲ್ಲಿ ಜ್ಞಾನ ವಿಕಾಸ ಮಹಿಳಾ ವಿಚಾರಗೋಷ್ಠಿ: ಆರೋಗ್ಯ ಜಾಗೃತಿ ಹಾಗೂ ಸಾಂಸ್ಕೃತಿಕ ವೈಭವ
- ವಿಜಯಪುರ: ಆಟೋ ಪಕ್ಕಕ್ಕೆ ಸರಿಸು ಎಂದಿದ್ದಕ್ಕೆ KSRTC ಕಂಡಕ್ಟರ್ ಮೇಲೆ ಹಲ್ಲೆ; ವಿಡಿಯೋ ವೈರಲ್!
- ಕುರ್ ಕುರೆ ಪ್ಯಾಕೆಟ್ ನಲ್ಲಿದ್ದ ಆಟಿಕೆ ಪ್ಲಾಸ್ಟಿಕ್ ಬಾಲ್ ನುಂಗಿ ಉಸಿರುಗಟ್ಟಿ ಬಾಲಕ ದಾರುಣ ಸಾವು
- ಕೃಷಿ ಲೋಕ /ಕಾಡು ಹಣ್ಣು.. | ಕೋಳಿ ಜುಟ್ಟು ಹಣ್ಣು
- ಮಗುವಿನ ರೋಗನಿರೋಧಕ ಶಕ್ತಿ ಹೆಚ್ಚಳಕ್ಕೆ ಸ್ತನ್ಯಪಾನ ಅತ್ಯಗತ್ಯ: ಸಿ. ದೀಪಾ ಕರೆ
- ತುಮಕೂರಲ್ಲಿ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆಗೆ ಯಶಸ್ವಿ ತೆರೆ
- ತುಮಕೂರು: 30ನೇ ವಾರ್ಡಿನ ಗಾರೇನರಸಯ್ಯ ನಕಟ್ಟೆ ಸ್ವಚ್ಛತಾ ಕಾರ್ಯ: ಪಾಲಿಕೆ ಸಿಬ್ಬಂದಿ, ನಾಗರಿಕ ಹಿತರಕ್ಷಣಾ ಸಮಿತಿ ಭಾಗಿ
Author: admin
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು ಸ್ತ್ರೀ ಪುರುಷ ವಶೀಕರಣ ಸ್ಪೆಷಲಿಸ್ಟ್ ನನಗೆ ಒಂದೇ ಕರೆ ಮಾಡಿದರೆ ನಿಮ್ಮ ಇಷ್ಟಪಟ್ಟವರು ನಿಮ್ಮಂತೆ 9535156490 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490 Provided by ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರುವಿನ ಸ್ಥಾನ ಬದಲಾವಣೆಗೆ ವಿಶೇಷ ಮಹತ್ವವಿದೆ. ದೇವರ ಗುರು ಎಂದು ಪರಿಗಣಿಸಲಾದ ಗುರು ಗ್ರಹ ಕಾಲ ಕಾಲಕ್ಕೆ ವಕ್ರ ಸ್ಥಾನದಲ್ಲೂ ಸಂಚಾರ ಮಾಡುತ್ತದೆ. ಹೀಗೆ ಗುರು ಹಿಮ್ಮುಖವಾಗಿ ಸಂಚಾರ…
ತುಮಕೂರು: ಕೇಂದ್ರ ರೈಲ್ವೆ ಹಾಗೂ ಜಲ ಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರು ಗುರುವಾರ ದೆಹಲಿಯಲ್ಲಿ ನಡೆದ ನೇಪಾಳದ ರಾಷ್ಟ್ರೀಯ ದಿನಾಚರಣೆಯ ಸಮಾರಂಭದಲ್ಲಿ ಭಾಗಿಯಾದರು. ಇದೇ ವೇಳೆ ನೇಪಾಳದ ಜನತೆಗೆ ರಾಷ್ಟ್ರೀಯ ದಿನದ ಶುಭ ಕೋರಿ ಮಾತನಾಡಿ, ಭಾರತ–ನೇಪಾಳದ ನಡುವೆ ಐತಿಹಾಸಿಕ, ಸಾಂಸ್ಕೃತಿಕ, ಆರ್ಥಿಕ ಸಂಬಂಧಗಳಿದ್ದು, ಮುಂದಿನ ದಿನಗಳಲ್ಲಿ ಮೂಲಭೂತ ಸೌಕರ್ಯ, ಡಿಜಿಟಲ್ ಹಾಗೂ ಆರ್ಥಿಕ ಸಂಪರ್ಕ, ಜಲವಿದ್ಯುತ್, ರೈಲ್ವೆ–ರಸ್ತೆ ಸಾರಿಗೆ ಹಾಗೂ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಿ, ಭಾರತವು ನೇಪಾಳದೊಂದಿಗಿನ ಸಂಬಂಧ-ಸಂಪರ್ಕ ಇನ್ನಷ್ಟು ಹತ್ತಿರವಾಗಿಸಲು ಉತ್ಸುಕವಾಗಿದೆ ಎಂದರು. ನೇಪಾಳದ ರಾಯಭಾರಿ ಡಾ.ಸುರೇಂದ್ರ ಥಾಪಾ ಅವರು ಸೋಮಣ್ಣರವರನ್ನು ಸ್ವಾಗತಿಸಿ ಭಾರತ — ನೇಪಾಳದ ನಿಕಟ ಸಂಬಂಧವನ್ನು ಶ್ಲಾಘಿಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ತುಮಕೂರು: ಗುಬ್ಬಿ ವಲಯ ವ್ಯಾಪ್ತಿಯಲ್ಲಿ ವಿವಿಧ ಅಬಕಾರಿ ಪ್ರಕರಣಗಳಲ್ಲಿ ವಶಪಡಿಸಿಕೊಂಡು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡಿರುವ ವಾಹನಗಳನ್ನು ಸೆಪ್ಟೆಂಬರ್ 27ರ ಬೆಳಿಗ್ಗೆ 11 ಗಂಟೆಗೆ ಟೆಂಡರ್ ಕಂ ಬಹಿರಂಗ ಹರಾಜು ಮಾಡಲಾಗುವುದು ಎಂದು ಅಬಕಾರಿ ನಿರೀಕ್ಷಕ ಎಸ್.ವನಜಾಕ್ಷಿ ತಿಳಿಸಿದ್ದಾರೆ. ಹರಾಜು ಪ್ರಕ್ರಿಯೆಯು ಗುಬ್ಬಿ ವಲಯ ಅಬಕಾರಿ ನಿರೀಕ್ಷಕರ ಕಚೇರಿ ಆವರಣದಲ್ಲಿ ನಡೆಸಲಾಗುವುದು. ಆಸಕ್ತರು ನಿಗದಿತ ದಿನಾಂಕ ಹಾಗೂ ಸಮಯಕ್ಕೆ ಸರಿಯಾಗಿ ಹರಾಜಿನಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ತುಮಕೂರು: ಬೆಸ್ಕಾಂ ವಾಣಿಜ್ಯ, ಕಾರ್ಯ ಮತ್ತು ಪಾಲನ ವಿಭಾಗ ವ್ಯಾಪ್ತಿಯ ಉಪಸ್ಥಾವರಗಳಲ್ಲಿ ತ್ರೈಮಾಸಿಕ ನಿರ್ವಾಹಣಾ ಕಾರ್ಯ ಕೈಗೊಂಡಿರುವುದರಿಂದ ಸೆಪ್ಟೆಂಬರ್ 21 ಹಾಗೂ 22ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸೆಪ್ಟೆಂಬರ್ 21ರಂದು ಬಡ್ಡಿಹಳ್ಳಿ, ಬೆಳ್ಳಾವಿ, ಹೆಗ್ಗೆರೆ, ದೊಡ್ಡಸಾರಂಗಿ, ಬೆಳಧರ, ಊರ್ಡಿಗೆರೆ, ಸಿ.ಟಿ. ಕೆರೆ, ಮೆಳೆಕೋಟೆ, ದೊಡ್ಡಗುಣಿ ಹಾಗೂ ಸೆ. 22ರಂದು ಹಿರೇಹಳ್ಳಿ, ಹೊನ್ನುಡಿಕೆ ಉಪಸ್ಥಾವರಗಳ ವ್ಯಾಪ್ತಿಯ ಗ್ರಾಮಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸಬೇಕೆಂದು ಕಾರ್ಯನಿರ್ವಾಹಕ ಇಂಜಿನಿಯರ್ ಮನವಿ ಮಾಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ತುಮಕೂರು: ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಇವರ ನೇತೃತ್ವದಲ್ಲಿ ನಾಳೆ ನಡೆಯಲಿರುವ ಗಣಪತಿ ವಿಸರ್ಜನಾ ಮೆರವಣಿಗೆ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಇಂದು ಪೊಲೀಸ್ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳು ತುಮಕೂರು ನಗರದಾದ್ಯಂತ ಪಥ ಸಂಚಲನ ನಡೆಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಅವರ ನೇತೃತ್ವದಲ್ಲಿ ಪಥ ಸಂಚಲನ ನಡೆಸಲಾಯಿತು. ನಗರದ ಬಿ.ಜಿ.ಎಸ್. ವೃತ್ತದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿರುವ 7ನೇ ವರ್ಷದ ಹಿಂದೂ ಮಹಾಗಣಪತಿಯ ಅದ್ದೂರಿ ಮಹೋತ್ಸವ ಸೆ.21 ರಂದು ನಡೆಯಲಿದೆ. ಮೆರವಣಿಗೆ ಯಾತ್ರೆಯು ನಗರದ ಬಿಜಿಎಸ್ ವೃತ್ತದಿಂದ ಆರಂಭಗೊಂಡು ಲಕ್ಕಪ್ಪ ವೃತ್ತ, ಜೆ.ಸಿ. ರಸ್ತೆ, ಬಂಡಿಪೇಟೆ ವೃತ್ತ, ಸ್ವತಂತ್ರ ಚೌಕ, ಅಶೋಕ ರಸ್ತೆ, ಬಿಜಿಎಸ್ ವೃತ್ತ, ಎಂಜಿ ರಸ್ತೆ, ಜೈನ್ ಟೆಂಪಲ್ ರಸ್ತೆ, ರಾಮಪ್ಪ ವೃತ್ತ, ಡಾ. ಬಿ ಆರ್ ಅಂಬೇಡ್ಕರ್ ರಸ್ತೆ, ಕೋಟೆ ಆಂಜನೇಯಸ್ವಾಮಿ ವೃತ್ತ, ಗಾರ್ಡನ್ ರಸ್ತೆ ಮುಖೇನ ಸಾಗಿ ಕೆ.ಎನ್.ಎಸ್. ಕಲ್ಯಾಣಿಯಲ್ಲಿ ಗಣೇಶಮೂರ್ತಿಯನ್ನು ವಿಸರ್ಜಿಸಲಾಗುವುದು. ಮೆರವಣಿಗೆಯಲ್ಲಿ…
ತುಮಕೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ತುಮಕೂರು ಪ್ರಾದೇಶಿಕ ಕೇಂದ್ರದಲ್ಲಿ 2024–25ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿ ಪ್ರಥಮ ವರ್ಷದ ವಿವಿಧ ಸ್ನಾತಕ/ ಸ್ನಾತಕೋತ್ತರ ಪದವಿ ಕೋರ್ಸುಗಳ ಪ್ರವೇಶಾತಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಪದವಿ ಪೂರ್ವ(10+2), ಸ್ನಾತಕ ಪದವಿ(10+2+3) ವಿದ್ಯಾರ್ಹತೆ ಹೊಂದಿರುವವರು ನವೆಂಬರ್ 15 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತ ವಿದ್ಯಾರ್ಥಿಗಳು ಬಿ.ಎ., ಬಿ.ಕಾಂ., ಬಿ.ಬಿ.ಎ., ಬಿ.ಸಿ.ಎ., ಬಿ.ಎಲ್.ಐ.ಎಸ್ಸಿ., ಬಿ.ಎಸ್.ಡಬ್ಲ್ಯೂ., ಬಿ.ಎಸ್ಸಿ.(ಜನರಲ್ ಅಂಡ್ ಐಟಿ), ಎಂ.ಎ., ಎಂ.ಸಿ.ಜೆ., ಎಂ.ಕಾಂ., ಎಂ.ಸಿ.ಎ., ಎಂ.ಎಸ್.ಡಬ್ಲ್ಯೂ, ಎಂ.ಎಲ್.ಐ.ಎಸ್ಸಿ., ಎಂ.ಎಸ್ಸಿ., ಎಂ.ಬಿ.ಎ., ಪಿ.ಜಿ. ಸರ್ಟಿಫಿಕೇಟ್, ಡಿಪ್ಲೋಮಾ, ಸರ್ಟಿಫಿಕೇಟ್ ಪ್ರೋಗ್ರಾಮ್ಸ್ ಕೋರ್ಸುಗಳ ಪ್ರವೇಶಾತಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕರಾಮುವಿ ತುಮಕೂರು ಪ್ರಾದೇಶಿಕ ಕೇಂದ್ರ ಅಥವಾ ದೂರವಾಣಿ ಸಂಖ್ಯೆ: 0816- 2955580, 9844506629, 9886112434, 7349474339ನ್ನು ಸಂಪರ್ಕಿಸಬಹುದೆಂದು ಪ್ರಾದೇಶಿಕ ನಿರ್ದೇಶಕ ಡಾ.ಆರ್. ಲೋಕೇಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್…
ತುಮಕೂರು: ಪವರ್ ಗ್ರಿಡ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ ಸಂಸ್ಥೆಯು ಹೊರಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳನ್ನು ತಾತ್ಕಾಲಿಕವಾಗಿ 2 ವರ್ಷಗಳ ಅವಧಿಗಾಗಿ ನೇಮಕಾತಿ ಮಾಡಿಕೊಳ್ಳಲು ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಫೀಲ್ಡ್ ಇಂಜಿನಿಯರ್(ಎಲೆಕ್ಟ್ರಿಕಲ್), ಫೀಲ್ಡ್ ಇಂಜಿನಿಯರ್(ಸಿವಿಲ್), ಫೀಲ್ಡ್ ಸೂಪರ್ ವೈಸರ್(ಎಲೆಕ್ಟ್ರಿಕಲ್) ಹಾಗೂ ಫೀಲ್ಡ್ ಸೂಪರ್ ವೈಸರ್(ಸಿವಿಲ್) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಕರೆಯಲಾಗಿದ್ದು, ಆಸಕ್ತ ಅಭ್ಯರ್ಥಿಗಳು ವೆಬ್ ಸೈಟ್ ವಿಳಾಸ http://www.powergrid.in/careers ನಲ್ಲಿ ಭರ್ತಿ ಮಾಡಿ ಸೆಪ್ಟೆಂಬರ್ 27ರೊಳಗಾಗಿ ಸಲ್ಲಿಸಬಹುದಾಗಿದೆ. ಫೀಲ್ಡ್ ಇಂಜಿನಿಯರ್(ಎಲೆಕ್ಟಿçಕಲ್) ಹುದ್ದೆಗಾಗಿ ಎಲೆಕ್ಟಿçಕಲ್ ವಿಷಯದಲ್ಲಿ ಬಿಇ/ಬಿ.ಟೆಕ್/ಬಿಎಸ್ಸಿ(ಇಂಜಿನಿಯರಿಂಗ್), ಫೀಲ್ಡ್ ಇಂಜಿನಿಯರ್(ಸಿವಿಲ್) ಹುದ್ದೆಗಾಗಿ ಸಿವಿಲ್ ವಿಷಯದಲ್ಲಿ ಬಿಇ/ಬಿ.ಟೆಕ್/ಬಿಎಸ್ಸಿ(ಇಂಜಿನಿಯರಿಂಗ್), ಫೀಲ್ಡ್ ಸೂಪರ್ ವೈಸರ್(ಎಲೆಕ್ಟ್ರಿಕಲ್) ಹುದ್ದೆಗಾಗಿ ಎಲೆಕ್ಟ್ರಿಕಲ್ ಡಿಪ್ಲೋಮಾ ಹಾಗೂ ಫೀಲ್ಡ್ ಸೂಪರ್‌ವೈಸರ್(ಸಿವಿಲ್) ಹುದ್ದೆಗಾಗಿ ಸಿವಿಲ್ ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 18 ರಿಂದ 29 ವರ್ಷದೊಳಗಿನವರಾಗಿದ್ದು, ವಿದ್ಯಾರ್ಹತೆಯಲ್ಲಿ ಶೇ.55ರಷ್ಟು ಅಂಕ ಪಡೆದ ಸಾಮಾನ್ಯ ವಿದ್ಯಾರ್ಥಿಗಳು ಹಾಗೂ ಕನಿಷ್ಠ ಅಂಕ ಪಡೆದು ಉತ್ತೀರ್ಣರಾದ ಹಿಂದುಳಿದ ವರ್ಗ(ಎನ್ ಸಿಎಲ್)/ ಪ.ಜಾತಿ/…
ತುಮಕೂರು: ಬೆಸ್ಕಾಂ ನಗರ ಉಪವಿಭಾಗ-2ರ ವ್ಯಾಪ್ತಿಯಲ್ಲಿ ಶಕ್ತಿ ಪರಿವರ್ತಕಗಳ ನಿರ್ವಹಣಾ ಕಾಮಗಾರಿ ಸೆಪ್ಟೆಂಬರ್ 21ರ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಸಪ್ತಗಿರಿ ಪೂರ್ವ/ ದಕ್ಷಿಣ/ ಪಶ್ಚಿಮ, ಮಾರುತಿನಗರ, ಶಿವಮೂಕಾಂಬಿಕನಗರ, ಜಯನಗರ ಪೂರ್ವ/ ಪಶ್ಚಿಮ/ ದಕ್ಷಿಣ, ಸಿದ್ದರಾಮೇಶ್ವರ ಬಡಾವಣೆ, ಖಾದರ್ ನಗರ, ಕೆ.ಪಾಲಸಂದ್ರ, ಗೂಳಹರಿವೆ, ಕಿತ್ತಗಾನಹಳ್ಳಿ, ಮಂಚಗೊAಡನಹಳ್ಳಿ, ಶೆಟ್ಟಿಹಳ್ಳಿ, ವಿಜಯನಗರ, ಚನ್ನಬಸವೇಶ್ವರನಗರ, ಸಂಕಾಪುರ, ಗೌರಿಪುರ, ಲಕ್ಷ್ಮೀಪುರ, ಹೊನ್ನೇನಹಳ್ಳಿ, ಗಂಗಸಂದ್ರ, ಬನಶಂಕರಿ, ಸದಾಶಿವನಗರ, ನಜರಾಬಾದ್, ಶಾಂತಿನಗರ, ಅಮರಜ್ಯೋತಿನಗರ, ಗೂಡ್ ಶೆಡ್ ಕಾಲೋನಿ, ಉಪ್ಪಾರಹಳ್ಳಿ, ರಿಂಗ್ ರಸ್ತೆ, ರಾಮಜ್ಯೋಯಿಷಿನಗರ, ಸರಸ್ವತಿಪುರಂ, ಮರಳೂರು, ಜನತಾ ಕಾಲೋನಿ, ಯಾದವನಗರ, ಪ್ರಗತಿ ಬಡಾವಣೆ, ಗೆದ್ದಲಹಳ್ಳಿ ಮುಖ್ಯ ರಸ್ತೆ, ಟೂಡಾ ಲೇ ಔಟ್, ಮೆಳೆಕೋಟೆ, ಮಯೂರ ನಗರ, ಶೇಷಾದ್ರಿಪುರಂ ಕಾಲೇಜು, ರಾಜೀವ್ ಗಾಂಧಿನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಜಯನಗರ ಶಾಖಾಧಿಕಾರಿ ಮೊಬೈಲ್ ಸಂಖ್ಯೆ: 9449844312 / 9449843511…
ತುಮಕೂರು: ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ಸಂಖ್ಯೆ 19, 20, 21ಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಲು ಸೆಪ್ಟೆಂಬರ್ 21ರ ಬೆಳಿಗ್ಗೆ 11 ಗಂಟೆಗೆ ಕುವೆಂಪು ನಗರದ ನೇತಾಜಿ ಪಾರ್ಕಿನಲ್ಲಿ ಜನಸ್ಪಂದನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಾಗರಿಕರು ಜನಸ್ಪಂದನ ಕಾರ್ಯಕ್ರಮದಲ್ಲಿ ತಮ್ಮ ಅಹವಾಲುಗಳನ್ನು ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಪಾಲಿಕೆ ಆಯುಕ್ತ ಬಿ.ವಿ.ಅಶ್ವಿಜ ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ತುಮಕೂರು: ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಬಲವಂತವಾಗಿ ಕರೆದೊಯ್ದು ಆಕೆಯನ್ನು ಬಾಲ್ಯ ವಿವಾಹ ಮಾಡಿಕೊಂಡು ನಿರಂತರವಾಗಿ ಲೈಂಗಿಕ ದೌರ್ಜನ್ಯ ನಡೆಸಿದ ಸೋದರ ಮಾವನಿಗೆ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ ಎಫ್ ಟಿಎಸ್ ಸಿ (POCSO) 20 ವರ್ಷಗಳ ಶಿಕ್ಷೆ ಮತ್ತು 90 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಮಾರುತಿ(25) ಶಿಕ್ಷೆಗೊಳಗಾದ ಅಪರಾಧಿಯಾಗಿದ್ದಾನೆ. ಈ ಪ್ರಕರಣ ಸಂಬಂಧ ಮಧುಗಿರಿ ಪೊಲೀಸ್ ಠಾಣಾ ತನಿಖಾಧಿಕಾರಿ ಸರ್’ದಾರ್ ಎಂ.ಎಸ್. ಅವರು ಘನ ನ್ಯಾಯಾಲಯಕ್ಕೆ ದೋಷರೋಪಣಾ ಪತ್ರವನ್ನು ಸಲ್ಲಿಸಿದರು. ವಿಚಾರಣೆ ಮಾಡಲಾದ ಸಾಕ್ಷಿಗಳಿಂದ ಆರೋಪಿಯ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆ ನ್ಯಾಯಾಧೀಶರು ಅಪರಾಧಿಗೆ 20 ವರ್ಷಗಳ ಜೈಲು ಶಿಕ್ಷೆ ಮತ್ತು 90 ಸಾವಿರ ರೂಪಾಯಿಗಳ ದಂಡ ವಿಧಿಸಿ ತೀರ್ಪು ನೀಡಿದರು. ದಂಡದ ಮೊತ್ತದಲ್ಲಿ ನೊಂದ ಬಾಲಕಿಗೆ 85 ಸಾವಿರ ರೂಪಾಯಿ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ 4 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ…