Subscribe to Updates
Get the latest creative news from FooBar about art, design and business.
- ಮಿಡಿಗೇಶಿ: ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಕಾರು; ಯುವಕ ಪ್ರಾಣಾಪಾಯದಿಂದ ಪಾರು!
- ಶಿಥಿಲಾವಸ್ಥೆಯ ಶಾಲಾ ಕಟ್ಟಡಗಳ ಮಾಹಿತಿಗೆ ಸೂಚನೆ
- ಸಾರಿಗೆ ಬಲಪಡಿಸಲು ಪುರುಷರು ಕಡ್ಡಾಯವಾಗಿ ಟಿಕೆಟ್ ಪಡೆದು ಪ್ರಯಾಣಿಸಿ: ಕೆ.ಎನ್.ರಾಜಣ್ಣ ಕರೆ
- ತಿಪಟೂರು ರೋಟರಿ ಕ್ಲಬ್ ನ ಪಬ್ಲಿಕ್ ಇಮೇಜ್ ಗೆ ರಾಜ್ಯಮಟ್ಟದ ಅತ್ಯುತ್ತಮ ಸೇವಾ ಪ್ರಶಸ್ತಿ
- ಬೆಂಗಳೂರು: ವಿಐಪಿ ಸಂಚಾರಕ್ಕೆ ಗರ್ಭಿಣಿ ಇದ್ದ ಕಾರು ತಡೆದಿದ್ದಕ್ಕೆ ರಸ್ತೆಯಲ್ಲೇ ಪತಿ ಪ್ರತಿಭಟನೆ; ತನಿಖೆಗೆ ಆದೇಶ!
- ಕಲಬುರಗಿ: ಮಗನ ಕಣ್ಣೆದುರೇ ಭೀಮಾ ನದಿಯಲ್ಲಿ ಮುಳುಗಿ ತಂದೆ ಸಾವು; ಮೊಬೈಲ್ ನಲ್ಲಿ ಸೆರೆಯಾಯ್ತು ದೃಶ್ಯ!
- ಭೀಕರ ರಸ್ತೆ ಅಪಘಾತ: ಟಾಟಾ ಏಸ್ ಹರಿದು ಇಬ್ಬರು ಯುವಕರು ಸಾವು, ಹೋಟೆಲ್ ಗೆ ನುಗ್ಗಿದ ವಾಹನ!
- ಕೊರಟಗೆರೆಯಲ್ಲಿ ವರುಣನ ಅಬ್ಬರ: ಶಾಲಾ ಆವರಣ, ಬಸ್ ನಿಲ್ದಾಣ ಜಲಾವೃತ, ಅವ್ಯವಸ್ಥೆ ವಿರುದ್ಧ ಸಾರ್ವಜನಿಕರ ಆಕ್ರೋಶ
Author: admin
ಬೆಂಗಳೂರಿನ ಕಿಂಗ್‌ಫಿಶರ್ ಟವರ್ಸ್‌ನಲ್ಲಿರುವ ಅಲ್ಟ್ರಾ ಲೆಕ್ಸುರಿ ಅಪಾರ್ಟ್‌ಮೆಂಟ್ ಯುಬಿ ಸಿಟಿಯ ವಿಸ್ತರಣೆಯಾಗಿದ್ದು, ಹಲವಾರು ಉದ್ಯಮಗಳು ಮತ್ತು ವಲಯಗಳ ಉದ್ಯಮಿಗಳನ್ನು ಹೊಂದಿದೆ. ಇದು 50 ಕೋಟಿ ರೂ.ಗೆ ಮಾರಾಟಕ್ಕಿದೆ ಎಂದು ಅಪಾರ್ಟ್ಮೆಂಟ್ ಅನ್ನು ಮಾರಾಟ ಮಾಡುವ ಸ್ಥಳೀಯ ದಲ್ಲಾಳಿಗಳು ತಿಳಿಸಿದ್ದಾರೆ ಎಂದು ಮನಿಕಂಟ್ರೋಲ್ ವರದಿ ಮಾಡಿದೆ. 4BHK ಅಪಾರ್ಟ್‌ಮೆಂಟ್ 8,000 ಚದರ ಅಡಿಗಿಂತಲೂ ಹೆಚ್ಚು ವಿಸ್ತಾರವಾಗಿದೆ. ಹಲವಾರು ಪ್ರಶ್ನೆಗಳು ಈಗಾಗಲೇ ಬಾಕಿ ಉಳಿದಿವೆ ಎಂದು ಬ್ರೋಕರ್‌ಗಳಲ್ಲಿ ಒಬ್ಬರಾದ ಬೆಂಗಳೂರಿನ ರಿಯಲ್ ಎಸ್ಟೇಟ್ ಕಂಪನಿಯಾದ ವಿಸ್ತಾರಾ ಹೇಳಿದ್ದಾರೆ. ಬೆಂಗಳೂರಿನಲ್ಲಿ ಐಷಾರಾಮಿ ಜಿಲ್ಲೆ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಯುಬಿ ಸಿಟಿಯು ಐಷಾರಾಮಿ ಮಾಲ್ (ದಿ ಕಲೆಕ್ಷನ್), ವಿಶಾಲವಾದ ಕಚೇರಿ ಸ್ಥಳಗಳು ಮತ್ತು ಓಕ್‌ವುಡ್ ಸರ್ವಿಸ್ ಅಪಾರ್ಟ್‌ಮೆಂಟ್‌ಗಳನ್ನು ಒಳಗೊಂಡಿರುವ ಸಮಗ್ರ ಅಭಿವೃದ್ಧಿಗಳನ್ನು ಹೊಂದಿದೆ. ಕಿಂಗ್‌ಫಿಷರ್ ಟವರ್ಸ್ ಅಥವಾ ಬಿಲಿಯನೇರ್ಸ್ ಟವರ್ ಸುಮಾರು 81 ಅಪಾರ್ಟ್‌ಮೆಂಟ್‌ಗಳನ್ನು (4 BHK) ಹೊಂದಿರುವ 34 ಅಂತಸ್ತಿನ ಐಷಾರಾಮಿ ವಸತಿ ಕ್ವಾರ್ಟರ್ ಆಗಿದೆ. ಡೇಟಾ ವಿಶ್ಲೇಷಣಾತ್ಮಕ ಸಂಸ್ಥೆ ಝಾಪ್ಕಿ ಪ್ರಕಾರ, ಸಂಸತ್ತಿನ ಸದಸ್ಯೆ…
ಬೆಂಗಳೂರು: ನಟ ದರ್ಶನ್ ಅವರು ಜೈಲಿನಲ್ಲಿ ಐಶಾರಾಮಿ ಜೀವನ ನಡೆಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜೈಲಿನಲ್ಲಿ ರೌಡಿಶೀಟರ್ ಗಳ ಜೊತೆಗೆ ದಾಸ ಟೀ ಪಾರ್ಟಿ ನಡೆಸಿದ್ದು, ವಿಡಿಯೋ ಕಾಲ್ ಗಳಲ್ಲಿ ನಟ ದರ್ಶನ್ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ದರ್ಶನ್ ಫೋಟೋ, ವಿಡಿಯೋಗಳು ವೈರಲ್ ಆದ ಬೆನ್ನಲ್ಲೇ 7 ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ. ಘಟನೆಯಲ್ಲಿ ಹಿರಿಯ ಅಧಿಕಾರಿಗಳ ಪಾತ್ರ ಇದ್ದರೆ ಅವರ ವಿರುದ್ಧವೂ ಕ್ರಮಕೈಗೊಳ್ಳುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಜೈಲರ್ ಗಳಾದ ಶರಣಬಸವ ಅಮೀನ್ಗಢ, ಖಂಡೇವಾಲ್, ಸಹಾಯಕ ಜೈಲರ್ ಗಳಾದ ಪುಟ್ಟಸ್ವಾಮಿ, ಶ್ರೀಕಾಂತ್ ತಲವಾರ್, ಜೈಲಿನ ಹೆಡ್ ವಾರ್ಡರ್ಗಳಾದ ವೆಂಕಪ್ಪ, ಸಂಪತ್, ವಾರ್ಡರ್ ಬಸಪ್ಪ ಅವರನ್ನು ಅಮಾನತುಗೊಂಡ ಅಧಿಕಾರಿಗಳಾಗಿದ್ದಾರೆ. ದರ್ಶನ್ ಅವರನ್ನು ನಿಯಂತ್ರಣಕ್ಕೆ ತರಲು ಜೈಲಧಿಕಾರಿಗಳು ಮಹತ್ವದ ಕ್ರಮಕ್ಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ದರ್ಶನ್ ಅವರನ್ನು ಬೇರೆ ಜೈಲಿಗೆ ಶಿಫ್ಟ್ ಮಾಡುವ ಚಿಂತನೆ ನಡೆದಿದೆ ಎನ್ನಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ…
ಬೆಂಗಳೂರು: ಕೆಪಿಎಸ್ ಸಿ ಗೆಜೆಟೆಡ್ ಪ್ರೊಬೇಷನರ್ಸ್ ಪರೀಕ್ಷೆಯನ್ನು (ಆ.27) ಮಂಗಳವಾರವೇ ನಡೆಸುವುದಾಗಿ ರಾಜ್ಯ ಸರ್ಕಾರ ಹೇಳಿದೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಕೆಪಿಎಸ್’ಸಿ ಮೂಲಕ ಆಗಸ್ಟ್ 27ರಂದು ನಿಗದಿಪಡಿಸಿರುವ ಗೆಜೆಟೆಡ್ ಪ್ರೊಬೇಷನರ್ಸ್ ಪರೀಕ್ಷೆಯನ್ನು ಮುಂದೂಡಲು ಆಗ್ರಹಿಸಿ ಕೆಎಎಸ್ ಆಕಾಂಕ್ಷಿಗಳ ಸಣ್ಣ ಗುಂಪೊಂದು ಲಾಬಿ ನಡೆಸುತ್ತಿದೆ. ಈಗಾಗಲೇ ಸಾಕಷ್ಟು ಕಾಲಾವಕಾಶ ನೀಡಿದ್ದು, ನಿಗದಿತ ದಿನದಂದೇ ಪರೀಕ್ಷೆ ನಡೆಸಲು ಆಯೋಗ ನಿರ್ಧಾರ ತೆಗೆದುಕೊಂಡಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಕೆಎಎಸ್ ಆಕಾಂಕ್ಷಿಗಳ ಸಣ್ಣ ಗುಂಪೊಂದು ಕೆಪಿಎಸ್ ಸಿ, ಡಿಪಿಎಆರ್ ಮತ್ತು ಸಿಎಂಒನ ಎಲ್ಲಾ ಪ್ರಮುಖ ಅಧಿಕಾರಿಗಳಿಗೆ ಕರೆ ಮಾಡುತ್ತಿದ್ದಾರೆ. ವಾಟ್ಸಾಪ್ ಸಂದೇಶಗಳ ಸುರಿಮಳೆ ಸುರಿಸುತ್ತಿದ್ದಾರೆ. ಎಷ್ಟರಮಟ್ಟಿಗೆ ಎಂದರೆ ಕೆಲವೊಮ್ಮೆ ನನ್ನ ಫೋನ್ ಅನ್ನು ನಾನು ಏರೋಪ್ಲೇನ್ ಮೋಡ್ ನಲ್ಲಿ ಇಡಬೇಕಾದ ಪರಿಸ್ಥಿತಿ ಬಂದೊದಗಿದೆ. ಕೆಪಿಎಸ್ ಸಿ ಸುತ್ತ ಅನುಮಾನಗಳ ಹುತ್ತ ಎಂಬಂತಹ ಪದಗಳನ್ನು ಬಳಸಿ ಸಾಕಷ್ಟು ತಪ್ಪು ಮಾಹಿತಿ ಹರಡಿ ಹಗರಣ ನಡೆದಿದೆ ಎಂಬಂತೆ ಬಿಂಬಿಸಲು ಯತ್ನಿಸುತ್ತಿದ್ದಾರೆ ಎಂದು…
ಬೆಂಗಳೂರು: ಶ್ರೀಕೃಷ್ಣ ಜನ್ಮಾಷ್ಠಮಿ ಹಬ್ಬವನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ನಗರದಲ್ಲೂ ಹಬ್ಬದ ಸಂಭ್ರಮ ಮನೆ ಮಾಡಿದೆ. ಕೃಷ್ಣ ಜನ್ಮಾಷ್ಠಮಿ ಹಿನ್ನೆಲೆಯಲ್ಲಿ ನಗರದ ಇಸ್ಕಾನ್ ಸೇರಿದಂತೆ ಹಲವು ದೇವಾಲಯ, ಮಠಗಳಲ್ಲಿ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ದೇಶದ ಜನತೆಗೆ ಕೃಷ್ಣ ಜನ್ಮಾಷ್ಠಮಿಯ ಶುಭಾಶಯಗಳನ್ನು ಕೋರಿದ್ದಾರೆ. ಭಾರತದಲ್ಲಿ ಶ್ರೀಕೃಷ್ಣನ ಜನ್ಮಾಷ್ಟಮಿ ಹಬ್ಬ ತನ್ನದೇ ಆದ ವಿಶೇಷತೆಗಳನ್ನು ಹೊಂದಿದೆ. ಮನೆ ಮನೆಗಳಲ್ಲಿ ಮಕ್ಕಳು ರಾಧಾ–ಕೃಷ್ಣರಾಗುತ್ತಾರೆ. ಮಕ್ಕಳಿಗೆ ರಾಧಾ–ಕೃಷ್ಣನ ವೇಷಭೂಷಣ ತೊಡಿಸಿ ಪೋಷಕರು ಸಂಭ್ರಮಿಸುತ್ತಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ತುಮಕೂರು: ಪ್ರಧಾನಿ ಹೊರ ರಾಷ್ಟ್ರಗಳಿಗೆ ಹೋದ ಸಂದರ್ಭದಲ್ಲಿ ಕ್ಲೀಷ್ಟವಾದ ಸಮಸ್ಯೆಗಳಿಗೆ ಪರಿಹಾರ ತೋರಿಸಿದ್ದಾರೆ. ಉಕ್ರೇನ್– ರಷ್ಯಾ ರಾಷ್ಟ್ರಗಳಲ್ಲೂ ಭಾರತದ ಹೃದಯ ಶ್ರೀಮಂತಿಕೆಯನ್ನ ಅರ್ಥಮಾಡಿಸಿದ್ದಾರೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ ಸೋಮಣ್ಣ ತಿಳಿಸಿದ್ದಾರೆ. ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಒಂದು ಕಡೆ ರಷ್ಯಾಕ್ಕೆ ತೆರಳಿ ಪುಟೀನ್ ಭೇಟಿ ಮಾಡಿ, ಯುದ್ಧವೇ ಎಲ್ಲಾದಕ್ಕೂ ಪರಿಹಾರವಲ್ಲ. ಯುದ್ಧ ನಿಲ್ಲಿಸಿ ಶಾಂತಿ ಕಾಪಾಡಾಬೇಕು ಅಂತ ಹೇಳಿದ್ದಾರೆ. ಉಕ್ರೇನ್ ದೇಶಕ್ಕೆ ಪೋಲ್ಯಾಂಡ್ ನಿಂದ 20 ಗಂಟೆಗಳ ಕಾಲ ರೈಲಿನಲ್ಲಿ ಪ್ರಯಾಣ ಮಾಡಿ. ಆ ದೇಶದಲ್ಲಿ ಆಗಿರುವ ಅನಾಹುತಗಳನ್ನ ಕಣ್ಣಾರೆ ಕಂಡಿದ್ದಾರೆ ಎಂದರು. ಎರಡು ದೇಶಗಳ ನಡುವೆ ಸಾಮರಸ್ಯ ಬೆಸೆಯುವಂತೆ ಸಂದೇಶ ನೀಡಿದ್ದಾರೆ. ಶಾಂತಿ ನೆಲೆಸಲು ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ ಎಂದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ಅನೇಕ ಆಸಕ್ತಿದಾಯಕ ದಾಖಲೆಗಳು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲಿ ದಾಖಲಾಗುತ್ತವೆ. ಈ ಬಾರಿ ಬದನೆಕಾಯಿ ತೂಕದ ಮೂಲಕವಾಗಿ ವಿಶ್ವದಾಖಲೆ ಸೃಷ್ಟಿಸಿರುವ ಅಭೂತಪೂರ್ವ ಘಟನೆಯೊಂದು ಬೆಳಕಿಗೆ ಬಂದಿದೆ. ಕುಂಬಳಕಾಯಿ ಗಾತ್ರದ ಬದನೆಯನ್ನು ಒಬ್ಬ ವ್ಯಕ್ತಿ ಬೆಳೆದ.ಈ ಬದನೆಕಾಯಿ ಎಷ್ಟು ತೂಗುತ್ತದೆ ಎಂದರೆ ಅದರ ಹೆಸರು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ದಾಖಲಾಗಿದೆ. ಈ ಬದನೆಕಾಯಿ ಸೊಶಿಯಲ್ ಮೀಡಿಯಾದಲ್ಲೂ ಚರ್ಚೆಗೆ ಗ್ರಾಸವಾಗಿದೆ. ಬದನೆಕಾಯಿಯಲ್ಲಿ ಹಲವು ವಿಧಗಳಿವೆ. ಆದರೆ ಅವುಗಳ ಗಾತ್ರ ಸಾಮಾನ್ಯವಾಗಿ ಚಿಕ್ಕದಾಗಿರುತ್ತದೆ. ಅವುಗಳಲ್ಲಿ ಕೆಲವು ಚಿಕ್ಕದಾಗಿದೆ ಮತ್ತು ಕೆಲವು ಗಾತ್ರದಲ್ಲಿ ತುಂಬಾ ದೊಡ್ಡದಾಗಿದೆ. ಹೆಚ್ಚಿನ ಬದನೆಕಾಯಿಗಳು 150 ಗ್ರಾಂ ಮತ್ತು 200 ಗ್ರಾಂ ತೂಕವಿರುತ್ತವೆ. ಆದರೆ, ಡೇವ್ ಬೆನೆಟ್ ಎಂಬ ವ್ಯಕ್ತಿ 200-400 ಗ್ರಾಂ ಅಲ್ಲ, 3.77 ಕಿಲೋಗ್ರಾಂ ತೂಕದ ಬದನೆಕಾಯಿ ಬೆಳೆದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗುತ್ತಿದೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ @guinnessworldrecords ನ ಅಧಿಕೃತ Instagram ಹ್ಯಾಂಡಲ್ ನಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಇದರ ತೂಕವು…
ಡೆಂಗ್ಯೂ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಡುವೆ ಸೊಳ್ಳೆಗಳ ನಾಶಕ್ಕೆ ಚೀನಾದ ಎಂಜಿನಿಯರ್ ಕಂಡು ಹಿಡಿದ ವಿಶಿಷ್ಠ ಸಾಧನವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದು ಕೆಲ ತಿಂಗಳುಗಳಿಂದ ವೈರಲ್ ಆಗಿದೆ. ಇದು ರಾಡಾರ್ ವ್ಯವಸ್ಥೆಯನ್ನು ಹೊಂದಿದ್ದು, ಅದರ ಸುತ್ತಮುತ್ತಲಿನ ಸೊಳ್ಳೆಗಳನ್ನು ತಕ್ಷಣವೇ ಪತ್ತೆ ಮಾಡುತ್ತದೆ. ಅಲ್ಲದೇ ಅವುಗಳನ್ನು ನಾಶಪಡಿಸುವ ಲೇಸರ್ ಪಾಯಿಂಟರ್ ಅನ್ನು ಕೂಡ ಹೊಂದಿದೆ. ಚಿಕಣಿ ಲೇಸರ್-ಚಾಲಿತ ಫಿರಂಗಿ ಎಂದು ವಿವರಿಸಲಾದ ಈ ಸಾಧನವು ಸೊಳ್ಳೆಗಳನ್ನು ಪತ್ತೆಹಚ್ಚುವ ಮತ್ತು ನಾಶಪಡಿಸುವ ಸಾಮರ್ಥ್ಯವನ್ನು ಹೊಂದಿದೆ. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಚೀನೀ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ವೀಬೊದಲ್ಲಿ ಸಾಧನದ ವೀಡಿಯೋವನ್ನು ಹಂಚಿಕೊಳ್ಳಲಾಗಿತ್ತು. ಇದೀಗ ಮುಂಬೈನಲ್ಲಿ ಸೊಳ್ಳೆಗಳಿಂದ ಹರಡುವ ರೋಗಗಳಲ್ಲಿ ಏರಿಕೆ ಕಂಡುಬರುತ್ತಿರುವ ಹೊತ್ತಲ್ಲಿ ಈ ವೀಡಿಯೋ ಮತ್ತೆ ಮುನ್ನೆಲೆಗೆ ಬಂದಿದೆ. ಸದ್ಯ ಈ ವೀಡಿಯೋವನ್ನು ಜನಪ್ರಿಯ ಕಾರು ತಯಾರಕಾ ಕಂಪನಿಯ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೇ “ಮುಂಬೈನಲ್ಲಿ ಡೆಂಗ್ಯೂ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೊಳ್ಳೆಗಳನ್ನು ಹುಡುಕಿ ನಾಶಪಡಿಸಬಲ್ಲ…
95 ವರ್ಷದ ಮಹಿಳೆ 2019ರಲ್ಲೇ ಮೃತಪಟ್ಟಿದ್ದರು. ಆದರೆ, ಅದಾಗಿ 5 ವರ್ಷಗಳಾದರೂ ಆಕೆಯ ಮೃತದೇಹ ಇನ್ನೂ ಕೊಳೆತಿಲ್ಲ. ಆ ಶವವನ್ನು ಹೂತಿದ್ದರೂ ಅದು ಮೊದಲಿನಿಂತೆಯೇ ಇದೆ. ಇದು ವಿಜ್ಞಾನಿಗಳನ್ನು ಕೂಡ ದಿಗ್ಭ್ರಮೆಗೊಳಿಸಿದೆ. ಇದನ್ನು ಆಧುನಿಕ ಕಾಲದ ಪವಾಡ ಎಂದು ಬಣ್ಣಿಸಲಾಗುತ್ತಿದ್ದು, ವಿಜ್ಞಾನಿಗಳು ಸಹ ಇದಕ್ಕೆ ವಿವರಣೆಯನ್ನು ನೀಡಲು ವಿಫಲರಾಗಿದ್ದಾರೆ. 2019ರಲ್ಲಿ ನಿಧನರಾದ 95 ವರ್ಷದ ಕ್ಯಾಥೋಲಿಕ್ ಸನ್ಯಾಸಿನಿಯ ಮೃತದೇಹವು ಎಷ್ಟು ಚೆನ್ನಾಗಿ ಸಂರಕ್ಷಿಸಲ್ಪಟ್ಟಿದೆಯೆಂದರೆ ಅವರು ಗಾಢವಾದ ನಿದ್ರೆಯಲ್ಲಿರುವಂತೆ ತೋರುತ್ತಿದೆ. 5 ವರ್ಷಗಳಿಂದ ಆ ದೇಹವನ್ನು ಚೆನ್ನಾಗಿ ಸಂರಕ್ಷಿಸಲಾಗಿದೆ. ಮಿಸ್ಸೌರಿಯ ಕಾನ್ಸಾಸ್ ಸಿಟಿಯಿಂದ ಸೋದರಿ ವಿಲ್ಹೆಲ್ಮಿನಾ ಲ್ಯಾಂಕಾಸ್ಟರ್, ಮೇ 29, 2019ರಂದು ತಮ್ಮ 95ನೇ ವಯಸ್ಸಿನಲ್ಲಿ ನಿಧನರಾದರು. ಆದರೆ, ಏಪ್ರಿಲ್ 2023ರಲ್ಲಿ ಅಂದರೆ, ಅವರ ಮರಣ ಸಂಭವಿಸಿ 4 ವರ್ಷಗಳ ನಂತರ, ಅವರ ದೇಹವನ್ನು ಅಂತ್ಯಕ್ರಿಯೆಗಾಗಿ ಅಬ್ಬೆ ಚರ್ಚ್‌ಗೆ ಸ್ಥಳಾಂತರಿಸಲು ಹೊರತೆಗೆಯಲಾಯಿತು. ಆಗಲೂ ಆ ದೇಹವು ಕೊಳೆಯುವ ಯಾವುದೇ ಲಕ್ಷಣಗಳಿಲ್ಲದೆ ಹಾಗೇ ಇರುವುದನ್ನು ಅವರು ಕಂಡುಕೊಂಡರು. ಸಿಸ್ಟರ್ ವಿಲ್ಹೆಲ್ಮಿನಾ ಅವರ ದೇಹಕ್ಕೆ ಯಾವುದೇ…
ರಾತ್ರಿ ವೇಳೆ ನಾಯಿಗಳು ವಿಪರೀತವಾಗಿ ಕೂಗುತ್ತವೆ. ಇದನ್ನು ಹಿರಿಯರು ಕೆಟ್ಟ ಶಕುನ ಎಂದು ಭಾವಿಸುತ್ತಾರೆ. ನಾಯಿಗಳು ಕೂಗಿದರೆ ಸಾಕು.. ಯಾರೋ ಸಾಯುತ್ತಾರೆ ಎಂದು ಹೇಳುತ್ತಾರೆ. ನಿಜವಾಗಿಯೂ ಹಾಗಾಗುತ್ತದೆಯೇ? ವಾಸ್ತವಿಕ ಕಾರಣವೇನು ? ಮನೆಯ ಹೊರಗೆ ಅಥವಾ ಮನೆಯ ಮುಂದೆ ನಾಯಿ ಕೂಗಿದರೆ ಅದು ಕೆಲವು ಕಾಯಿಲೆಗಳನ್ನು ಸೂಚಿಸುತ್ತದೆ. ನಿಮ್ಮ ಕುಟುಂಬದಲ್ಲಿ ಯಾರಾದರೂ ಗಂಭೀರ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಯಿದೆ ಎಂದು ಹಿರಿಯರು ಹೇಳುತ್ತಿರುತ್ತಾರೆ. ರಾತ್ರಿ ನಾಯಿ ಅಳುತ್ತಿದ್ದರೆ ಅದು ಕೆಲವು ದೊಡ್ಡ ದುರದೃಷ್ಟವನ್ನು ಸೂಚಿಸುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ರಾತ್ರಿ ಮನೆಯ ಹೊರಗೆ ನಾಯಿ ಅಳುತ್ತಿದ್ದರೆ, ಅವರು ಕೆಲವು ಕೆಟ್ಟ ಸುದ್ದಿಗಳನ್ನು ಕೇಳಬೇಕಾಗುತ್ತದೆ. ನಿಮ್ಮ ಮನೆಯ ಸುತ್ತಲೂ ನಕಾರಾತ್ಮಕ ಶಕ್ತಿ ಇದ್ದರೂ ನಾಯಿಗಳು ಕೂಗುತ್ತವೆ ಎಂದು ಜ್ಯೋತಿಷಿಗಳು ಹೇಳುತ್ತಾರೆ.ವಾಸ್ತವಿಕ ಕಾರಣವೇನೆಂದು ತಿಳಿದುಕೊಳ್ಳೋಣ ಬನ್ನಿ. ನಾಯಿಗಳು ಮುಂಬರುವ ನೈಸರ್ಗಿಕ ಘಟನೆಗಳನ್ನು ಮುಂಚಿತವಾಗಿ ಗ್ರಹಿಸಬಲ್ಲವು ಎಂದು ಸಹ ಹೇಳಲಾಗುತ್ತದೆ. ಅಂದರೆ ಭೂಕಂಪಗಳು. ಅದಕ್ಕಾಗಿಯೇ ನಾಯಿಗಳು ಮುಂಚಿತವಾಗಿ ಅಳಲು ಪ್ರಾರಂಭಿಸುತ್ತವೆ ಎಂದು ಹೇಳಲಾಗುತ್ತದೆ. ಕೆಲವು ನಂಬಿಕೆಗಳ…
ತುಮಕೂರು: ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಇಂದು ಪ್ರಧಾನಿ ಮೋದಿ ಅವರ ಮನ್ ಕೀ ಬಾತ್ ಕಾರ್ಯಕ್ರಮ ವೀಕ್ಷಿಸಿದರು. ತುಮಕೂರಿನ ಪ್ರವಾಸಿ ಮಂದಿರದಲ್ಲಿರುವ ಸರ್ಕೀಟ್ ಹೌಸ್ ಬಳಿ ಇರುವ ಸಚಿವರ ಕಚೇರಿ ಬಳಿ ಕಾರ್ಯಕರ್ತರೊಂದಿಗೆ ಕುಳಿತು ಮನ್ ಕೀ ಬಾತ್ ವೀಕ್ಷಣೆ ಮಾಡಿದ ಸೋಮಣ್ಣ ಅವರೊಂದಿಗೆ ಶಾಸಕ ಜ್ಯೋತಿಗಣೇಶ್, ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್ ಹೆಬ್ಬಾಕ, ಮಾಜಿ ಸಚಿವ ಸೋಗಡು ಶಿವಣ್ಣ ಭಾಗಿಯಾಗಿದ್ದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q