ಶಿರೂರು: ಗುಡ್ಡಕುಸಿತ ಪ್ರಕರಣದಲ್ಲಿ ಕಣ್ಮರೆಯಾಗಿದ್ದ ಕೇರಳ ಮೂಲದ ಟ್ರಕ್ ಡ್ರೈವರ್ ಅರ್ಜುನ್ ನ ಮೃತದೇಹಕ್ಕಾಗಿ ಮತ್ತೆ ಹುಡುಕಾಟ ಆರಂಭಗೊಂಡಿದೆ.
ಜುಲೈ 16 ಕ್ಕೆ ಶಿರೂರಿನಲ್ಲಿ ಗುಡ್ಡ ಕುಸಿತವಾಗಿತ್ತು. ಟ್ರಕ್ ಡ್ರೈವರ್ ಅರ್ಜುನ್ ತಮ್ಮ ಟ್ರಕ್ ಸಮೇತ ನಾಪತ್ತೆಯಾಗಿದ್ದರು. ಲಾರಿಯ ಅವಶೇಷಗಳು ನದಿಯಲ್ಲಿ ಸಿಕ್ಕಿದರೂ, ಇನ್ನೂ ಮೃತದೇಹ ಪತ್ತೆಯಾಗಿಲ್ಲ.
ಅರ್ಜುನ್ ನ ಮೃತದೇಹದ ಒಂದು ಭಾಗವಾದರೂ ನಮಗೆ ಹುಡುಕಿ ಕೊಡಿ ಅಂತ ಕುಟುಂಬಸ್ಥರು ಮನವಿ ಮಾಡಿಕೊಂಡಿದ್ದರು. ಇಂದಿನಿಂದ ನಾವಿಕರು ಮತ್ತು ಮುಳುಗು ತಜ್ಞ ಈಶ್ವರ್ ಮಲ್ಪೆ ನೇತೃತ್ವದ ತಂಡ ಹುಡುಕಾಟ ಆರಂಭಿಸಲಿದೆ ಎಂದು ವರದಿಯಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q