Subscribe to Updates
Get the latest creative news from FooBar about art, design and business.
- ತಿಪಟೂರು ರೋಟರಿ ಕ್ಲಬ್ ನ ಪಬ್ಲಿಕ್ ಇಮೇಜ್ ಗೆ ರಾಜ್ಯಮಟ್ಟದ ಅತ್ಯುತ್ತಮ ಸೇವಾ ಪ್ರಶಸ್ತಿ
- ಬೆಂಗಳೂರು: ವಿಐಪಿ ಸಂಚಾರಕ್ಕೆ ಗರ್ಭಿಣಿ ಇದ್ದ ಕಾರು ತಡೆದಿದ್ದಕ್ಕೆ ರಸ್ತೆಯಲ್ಲೇ ಪತಿ ಪ್ರತಿಭಟನೆ; ತನಿಖೆಗೆ ಆದೇಶ!
- ಕಲಬುರಗಿ: ಮಗನ ಕಣ್ಣೆದುರೇ ಭೀಮಾ ನದಿಯಲ್ಲಿ ಮುಳುಗಿ ತಂದೆ ಸಾವು; ಮೊಬೈಲ್ ನಲ್ಲಿ ಸೆರೆಯಾಯ್ತು ದೃಶ್ಯ!
- ಭೀಕರ ರಸ್ತೆ ಅಪಘಾತ: ಟಾಟಾ ಏಸ್ ಹರಿದು ಇಬ್ಬರು ಯುವಕರು ಸಾವು, ಹೋಟೆಲ್ ಗೆ ನುಗ್ಗಿದ ವಾಹನ!
- ಕೊರಟಗೆರೆಯಲ್ಲಿ ವರುಣನ ಅಬ್ಬರ: ಶಾಲಾ ಆವರಣ, ಬಸ್ ನಿಲ್ದಾಣ ಜಲಾವೃತ, ಅವ್ಯವಸ್ಥೆ ವಿರುದ್ಧ ಸಾರ್ವಜನಿಕರ ಆಕ್ರೋಶ
- ಕಾರ್ಮಿಕರ ಮೂಲಭೂತ ಹಕ್ಕುಗಳ ರಕ್ಷಣೆಗೆ ಆಗ್ರಹ: ತುಮಕೂರಿನಲ್ಲಿ ಸಿಐಟಿಯು ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ
- ಜನರ ಮನಸ್ಸಿನಲ್ಲಿ ಉಳಿಯುವಂತೆ ಕೆಲಸ ಮಾಡಿ: ಅಧಿಕಾರಿಗಳಿಗೆ ತಹಶೀಲ್ದಾರ್ ಕೆ.ಮಂಜುನಾಥ್ ಕಿವಿಮಾತು
- ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಸಚಿವ ಸ್ಥಾನ ನೀಡಲು ಒತ್ತಾಯ: ಕಂದೇಗಾಲ ಶಿವರಾಜು ಆಗ್ರಹ
Author: admin
ತುಮಕೂರು: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ವಿದ್ಯಾರ್ಥಿ ನಿಲಯ ಪ್ರವೇಶಕ್ಕಾಗಿ ಸಾಮಾನ್ಯ ಪದವಿ ಕೋರ್ಸಿನ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ವಿದ್ಯಾರ್ಥಿ ನಿಲಯದಲ್ಲಿ ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ ವರ್ಗದವರಿಗೆ ಶೇ.75ರಷ್ಟು ಹಾಗೂ ಪರಿಶಿಷ್ಟ ಜಾತಿ/ ಪ.ಪಂಗಡ/ಇತರೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಶೇ.25ರಷ್ಟು ಸ್ಥಾನಗಳನ್ನು ಮೀಸಲಿರಿಸಿದ್ದು, ಆಸಕ್ತರು ಸೆಪ್ಟೆಂಬರ್ 12ರೊಳಗಾಗಿ ಜಾಲತಾಣ: https://shp.karnataka.gov.in ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮೌಲಾನಾ ಅಜಾದ್ ಭವನ, ಇಂದಿರಾ ಕಾಲೇಜು ಮುಂಭಾಗ, ಉಪ್ಪಾರಹಳ್ಳಿ, ತುಮಕೂರು-572102 ಅಥವಾ ದೂರವಾಣಿ ಸಂಖ್ಯೆ 0816-2273724ನ್ನು ಸಂಪರ್ಕಿಸಬೇಕೆಂದು ಅಲ್ಪಸಂಖ್ಯಾತರ ಇಲಾಖೆ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ಚಿಕ್ಕನಾಯಕನಹಳ್ಳಿ: ಹನುಮಂತ ರಾಮ ನಾಯಕ್ ಗ್ರಾಮೀಣಾಭಿವೃದ್ಧಿ ಸಂಘ ಚಿಕ್ಕನಾಯಕನ ಹಳ್ಳಿ ಹಾಗೂ ತಾಲ್ಲೂಕು ಬಂಜಾರ ಬಳಗ ವತಿಯಿಂದ ಶ್ರೀ ಮಾತಾ ಚಾರಿಟಬಲ್ ಟ್ರಸ್ಟ್ ಸಪ್ತಗಿರಿ ಆಸ್ಪತ್ರೆ, ಬೆಂಗಳೂರು ಇವರ ಸಹಯೋಗದೊಂದಿಗೆ ಚಿಕ್ಕಸಂದ್ರ, ಹೆಸರುಘಟ್ಟ ಮುಖ್ಯರಸ್ತೆ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಉಚಿತ ಔಷಧಿ ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿದೆ. ಆಗಸ್ಟ್ 24 ಹಾಗೂ 25ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 3 ಗಂಟೆವರೆಗೆ ಧ್ಯಾನ ನಗರಿ ಸೇವಾಲಾಲ್ ಸದನ, ಕೋಡಿ ಪಾಳ್ಯ, ಹುಳಿಯಾರ ಇಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಮಾಜಿ ಗ್ರಾ.ಪಂ. ಸದಸ್ಯ, ಸಮಾಜ ಸೇವಕ ಹನುಮಂತ ರಾಮ ನಾಯಕ್ ಚಿಕ್ಕನಾಯಕನಹಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ಬೀದರ್: ಜಿಲ್ಲೆಯ ಔರಾದ ತಾಲೂಕಿನ ಸಂತಪೂರ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಿ ಹೆಂಗರ್ ಪ್ರಾಜೆಕ್ಟ್ ಸಂಸ್ಥೆ ಬೆಂಗಳೂರು ಅಡಿಯಲ್ಲಿ ಸಂತಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಂತ ವೈದ್ಯಾಧಿಕಾರಿಗಳಾದ ರೇಣುಕಾ ನಾಗರಾಳ್ಕರ್ ತಪಾಸಣೆ ನಡೆಸಿದರು. ಅಧ್ಯಕ್ಷ ಸ್ಥಾನ ಅಲಂಕರಿಸಿದ ಮಾದೇವಿ ಪಾಟೀಲ್ ಇವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಸಂತಪುರ ಸರ್ಕಾರಿ ಪ್ರೌಢಶಾಲೆ ಮಕ್ಕಳಿಗೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಂತ ಆರೋಗ್ಯ ತಪಾಸಣೆ ಮಾಹಿತಿ ಕೊಡಲಾಯಿತು. ಕಾರ್ಯಕ್ರಮದಲ್ಲಿ ಅನಸೂಯಾ ದೊಡ್ಡಿ, ಮಾಲಾಶ್ರಿಕೋಟೆ, ಭಾರತಿ ಚಂದಾಪುರೇ, ಶೃತಿ ಗುರು ಅಂಕಲಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ವರದಿ: ಅರವಿಂದ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ತಿಪಟೂರು: ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿನ ನೂತನ ಸೈನ್ಸ್ ಕ್ಲಬ್ ಮತ್ತು ಇಕೋ ಕ್ಲಬ್ ನ ಉದ್ಘಾಟನಾ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಲಾಯಿತು. ನಂತರ ಕಾಲೇಜು ಆವರಣದಲ್ಲಿ 10 ಗಿಡಗಳನ್ನು ಹಸಿರುಪಡೆ ವತಿಯಿಂದ ನೆಡಲಾಯಿತು. ಸೈನ್ಸ್ ಕ್ಲಬ್ ವತಿಯಿಂದ ಸೈನ್ಸ್ ರಂಗೋಲಿ ಸ್ಪರ್ಧೆ ಹಾಗೂ ಪೋಸ್ಟರ್ ಡ್ರಾಯಿಂಗ್ ಸ್ಪರ್ಧೆ ಏರ್ಪಡಿಸಲಾಗಿತ್ತು. ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಎಂ.ಡಿ.ಶಿವಕುಮಾರ್ ರವರು ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ರಾಜೇಶ್ ಪದ್ಮಾರ್ ರವರು ಆಗಮಿಸಿದ್ದರು. ಸೈನ್ಸ್ ಕ್ಲಬ್ ಕಾರ್ಯದರ್ಶಿಯಾದ ಡಾ. ಲೋಕೇಶ್ ಕೆ ಮತ್ತು ಸಹ ಕಾರ್ಯದರ್ಶಿ ಮಂಜುನಾಥ ಪಿ. ಎನ್. ರವರು ಎಲ್ಲರಿಗೂ ಸೈನ್ಸ್ ಕ್ಲಬ್ ನ ಪ್ರತಿಜ್ಞಾ ವಿಧಿ ಬೋಧಿಸಿದರು. ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ರೂಢಿಸುವುದರ ಜತೆಗೆ, ಮಾನವೀಯ ಸಂವೇದನೆಗಳನ್ನು ಅರ್ಥೈಸಿಕೊಂಡು ಪರಿಸರಪೂರಕ ಮಾದರಿಯಲ್ಲಿ ವೈಜ್ಞಾನಿಕ ಕ್ಷೇತ್ರದಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ ಎಂದು ಉಪನ್ಯಾಸಕ ರಾಜೇಶ್ ಪದ್ಮಾರ್ ತಿಳಿಸಿದ್ದಾರೆ. ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ವೈಜ್ಞಾನಿಕ ಸಾಧನೆಗಳು ಹೇರಳವಾಗಿತ್ತು. ಲೋಹಶಾಸ್ತ್ರದ ಸಂಶೋಧನೆಗಳಿಂದ ಪ್ರಾರಂಭಿಸಿ…
ತುಮಕೂರು: ಇಡೀ ದೇಶವನ್ನೇ ಬೆಚ್ಚಿಬೀಳಿಸಿರುವ ಕೋಲ್ಕತ್ತಾದ ಆರ್ ಜಿಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ತರಬೇತಿ ನಿರತ ಕಿರಿಯ ಮಹಿಳಾ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಹತ್ಯೆಯ ಘಟನೆಯನ್ನು ಖಂಡಿಸಿ ಎಐಡಿಎಸ್ ಓ ವತಿಯಿಂದ ತುಮಕೂರು ಟೌನ್ ಹಾಲ್ ವೃತ್ತದಿಂದ ಸ್ವಾತಂತ್ರ್ಯ ಚೌಕದವರೆಗೆ ಮೋಂಬತ್ತಿ ಮೆರವಣಿಗೆ ಮಾಡಲಾಯಿತು. ಎಐಡಿಎಸ್ ಓ ಜಿಲ್ಲಾ ಕಾರ್ಯದರ್ಶಿ ಲಕ್ಕಪ್ಪ ಸಿ.ಬಿ. ಮಾತನಾಡಿ, ಮಹಿಳೆಯರ ಮೇಲೆ ಹೆಚ್ಚುತ್ತಿರುವ ಅಪರಾಧಗಳಿಗೆ ಮಾಧ್ಯಮಗಳಲ್ಲಿ ನಿರಂತರವಾಗಿ ಮತ್ತು ಅವ್ಯಾಹತವಾಗಿ ಅಶ್ಲೀಲತೆ ಮತ್ತು ಕ್ರೌರ್ಯಗಳ ಪ್ರದರ್ಶನ, ಇಂಟರ್ ನೆಟ್, ಮೊಬೈಲ್ ಗಳ ಮೂಲಕ ಪೋರ್ನೋಗ್ರಫಿಕ್ ವೆಬ್ ಸೈಟ್ ಗಳನ್ನು ಹರಿಬಿಡುತ್ತಿರುವುದು, ದುರಾಭ್ಯಾಸಗಳಿಗೆ ವ್ಯಸನಿಗಳನ್ನಾಗಿಸುತ್ತಿರುವುದು ಮೂಲ ಕಾರಣವಾಗಿವೆ. ವಿಕೃತ ಮನಸ್ಥಿತಿ ಬೆಳೆಸಿಕೊಂಡು ಬಾಲಕಿಯರ ಮೇಲೆ, ಮಹಿಳೆಯರ ಮೇಲೆ ಅತ್ಯಾಚಾರದಂತಹ ಹೀನ, ಅನಾಗರಿಕ, ಅಮಾನವೀಯ ಕೃತ್ಯವನ್ನು ಎಸಗುತ್ತಿದ್ದಾರೆ. ದೆಹಲಿಯ ನಿರ್ಭಯ ಪ್ರಕರಣದ ನಂತರ ನಡೆದ ಪ್ರಭಲ ಹೋರಾಟದ ಫಲವಾಗಿ ಮಹಿಳೆಯರ ಮೇಲಿನ ಅಪರಾಧಗಳನ್ನು ತಡೆಗಟ್ಟಲು ವರ್ಮಾ ಆಯೋಗ ಹಲವಾರು ಶಿಫಾರಸ್ಸುಗಳನ್ನು ಮಾಡಿದ್ದರೂ ಸರ್ಕಾರಗಳು ಅವುಗಳ ಪರಿಣಾಮಕಾರಿ…
ಪಾವಗಡ: ಭಾರತೀಯ ಪರಿವರ್ತನ ಸಂಘ–BPS ಹಾಗೂ ನಿಸರ್ಗ ದೃಷ್ಟಿಧಾಮ ಚಂದಾಪುರ, ಸಹಯೋಗದೊಂದಿಗೆ ಹೈಕೋರ್ಟ್ ವಕೀಲರು ಹಾಗೂ ಬಿಪಿಎಸ್ ರಾಜ್ಯಾಧ್ಯಕ್ಷರು ಆದಂತಹ ಪ್ರೊ.ಹರಿರಾಮ್ ಅವರ ನೇತೃತ್ವದಲ್ಲಿ19 ಜನರಿಗೆ ಉಚಿತ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಎಲ್ಲರನ್ನೂ ಚಿಕಿತ್ಸೆಯ ಬಳಿಕ ಬೆಂಗಳೂರಿಂದ ಪಾವಗಡಕ್ಕೆ ಕಳುಹಿಸಿಕೊಡಲಾಯಿತು. ಇದೇ ವೇಳೆ ಮಾತನಾಡಿದ ಹರಿರಾಮ್ ಎ., ಪಾವಗಡ ತಾಲ್ಲೂಕು, ವೈ.ಎನ್.ಹೊಸಕೋಟೆ ಹೋಬಳಿ, ಬಲ್ಲೇನಹಳ್ಳಿ ಗ್ರಾಮದಲ್ಲಿ ದಿನಾಂಕ 06.08.2024 ರಂದು ಉಚಿತ ಕಣ್ಣಿನ ತಪಾಸಣೆ ಮತ್ತು ಆರೋಗ್ಯ ಶಿಬಿರವನ್ನು ಪರಿವರ್ತನ ಸಂಘ ಪಾವಗಡ ಮತ್ತು ನಿಸರ್ಗ ದೃಷ್ಟಿಧಾಮ ಸಹಯೋಗದೊಂದಿಗೆ ಆ ಯೋಜನೆ ಮಾಡಿದ್ದೆವು, ಈ ಆರೋಗ್ಯ ಶಿಬಿರದಲ್ಲಿ ವೈದ್ಯರ ತಪಾಸಣೆಯಲ್ಲಿ ಆಯ್ಕೆಯಾದ ಜನರಿಗೆ ದಿನಾಂಕ 11.08.2024 ರಂದು ಅದೇ ಗ್ರಾಮದಲ್ಲಿ 110 ಜನರಿಗೆ ಉಚಿತ ಕನ್ನಡಕಗಳನ್ನು ವಿತರಿಸಿದ್ದೆವು, ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಆಯ್ಕೆಯಾದ 19 ಜನರನ್ನು ಬೆಂಗಳೂರಿಗೆ ಕರೆದುಕೊಂಡು ಬಂದು ಎಲ್ಲರಿಗೂ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಆಗಿದ್ದು ಇಂದು ಪಾವಗಡಕ್ಕೆ ಕರೆದುಕೊಂಡು ಹೋಗುತ್ತಿದ್ದೇವೆ, ಇವರೆಲ್ಲರನ್ನು ಆಸ್ಪತ್ರೆಯಲ್ಲಿ ಚೆನ್ನಾಗಿ ನೋಡಿಕೊಂಡಂತಹ ಕೆಂಚರಾಯ, ಈರಣ್ಣ,…
ತುಮಕೂರು: ಈ ವರ್ಷದ ಮುಂಗಾರಿನಲ್ಲಿ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ. 92ರಷ್ಟು ಹೆಚ್ಚಿನ ಮಳೆಯಾಗಿದೆ ಎಂದು ಗೃಹ ಸಚಿವ ಪರಮೇಶ್ವರ ಅವರು ಹೇಳಿದರು. ನಗರದ ಅಮಾನಿಕೆರೆ ಬಾಗಿನ ಅರ್ಪಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾನ್ಯ ಮುಂಗಾರಿನಂತೆ ಕಾಣಿಸುತ್ತಿದೆ. ಮುಂಗಾರಿನಲ್ಲಿ ವಾಡಿಕೆ ಪ್ರಕಾರ 302 ಮಿ.ಮೀ ಮಳೆಯನ್ನು ನಿರೀಕ್ಷಿಸಲಾಗಿತ್ತು. ಮುಂಗಾರು ಆರಂಭವಾದಾಗಿನಿಂದ ಈವರೆಗೆ ಜಿಲ್ಲೆಯಲ್ಲಿ 592 ಮಿ.ಮೀ ಮಳೆಯಾಗಿದೆ. ಶೇ. 92ರಷ್ಟು ಹೆಚ್ಚು ಮಳೆ ಬಿದ್ದಿದೆ ಎಂದರು. ಜಿಲ್ಲೆಯಲ್ಲಿ ಅನೇಕ ಕೆರೆಗಳು ತುಂಬಿ ಕೋಡಿ ಹರಿದಿವೆ. ತುಮಕೂರು ನಗರದ ಅಮಾನಿ ಕೆರೆ ತುಂಬುವುದೇ ಬಹಳ ವಿರಳ. ಕಳೆದ ವರ್ಷ ಹೆಚ್ಚು ಬರಗಾಲವಿದ್ದ ಪರಿಣಾಮ ಕೆರೆಗೆ ನೀರು ಬರಲಿಲ್ಲ. ಆದಾಗ್ಯೂ ಇದ್ದ ನೀರನ್ನು ರಕ್ಷಸಿಕೊಂಡು ಬಂದಿದ್ದೇವೆ. ಕೆರೆಯ ಅಭಿವೃದ್ಧಿ ಕಾರ್ಯಕ್ಕೆ ಒತ್ತು ನೀಡಲಾಗುವುದು ಎಂದು ಹೇಳಿದರು. ಸೇತುವೆ ನೀರ್ಮಾಣ ಕಾಮಗಾರಿ ಪೂಋಣಗೊಳಿಸುವ ಬಗ್ಗೆ ಗುತ್ತಿಗೆದಾರರೊಂದಿಗೆ ಮಾತನಾಡಿದ್ದೇನೆ. ಸೆಪ್ಟೆಂಬರ್‌ನೊಳಗೆ ಮುಗಿಸಿ ಕೊಡುತ್ತಾರೆ. ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವುದು. ಎಸ್ ಮಾಲ್‌ನವರು ರಾಜಗಾಲುವೆ ಒತ್ತುವರಿ ಮಾಡಿರುವ ಬಗ್ಗೆ ಪರಿಶೀಲನೆ…
ಕೋಲ್ಕತ್ತಾದಲ್ಲಿ ನಡೆದ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಇಡೀ ದೇಶವೇ ಬೆಚ್ಚಿ ಬೀಳುವಂತೆ ಮಾಡಿದೆ. ಘಟನೆಯ ಬಗ್ಗೆ ಅನೇಕರು ಪ್ರತಿಕ್ರಯಿಸಿದ್ದು ಹಲವರು ತಮಗಾದ ಲೈಂಗಿಕ ಕಿರುಕುಳ, ಯಾತನೆ, ನೋವುಗಳ ಬಗ್ಗೆ ಮಾತನಾಡಿದ್ದಾರೆ.ನಟಿ ಸೆಲಿನಾ ಜೇಟ್ಲಿ ತಮ್ಮ ಜೀವನದಲ್ಲಿ ನಡೆದ ಆಘಾತಕಾರಿ ಘಟನೆಯೊಂದನ್ನು ಬಿಚ್ಚಿಟ್ಟಿದ್ದಾರೆ. ತಮ್ಮ ಆರನೇ ತರಗತಿ ಫೋಟೋ ಒಂದನ್ನು ಪೋಸ್ಟ್ ಮಾಡಿದ ಸೆಲಿನಾ, ಇಂಥ ಪ್ರಕರಣಗಳಲ್ಲಿ ಯಾವಾಗಲೂ ಬಲಿಪಶುವನ್ನೇ ತಪ್ಪು ಮಾಡಿದವಳು ಎಂದು ಹೇಳಲಾಗುತ್ತದೆ. ಈ ಫೋಟೋ ನಾನು ಆರನೇ ತರಗತಿಯಲ್ಲಿದ್ದಾಗಿನದು. ಹತ್ತಿರದ ಕಾಲೇಜಿನ ಹುಡುಗನೊಬ್ಬ ನಾನು ಶಾಲೆಯಿಂದ ಹೊರಬರುವುದನ್ನು ಕಾಯುತ್ತಿದ್ದ. ಅವನು ಪ್ರತಿದಿನ ನನ್ನ ಶಾಲೆಯ ರಿಕ್ಷಾವನ್ನು ಹಿಂಬಾಲಿಸಿ ಮನೆಯವರೆಗೆ ಬರುತ್ತಿದ್ದ. ಕೆಲವು ದಿನಗಳ ನಂತರ, ನನ್ನ ಗಮನವನ್ನು ಸೆಳೆಯಲು, ಅವನು ರಸ್ತೆಯ ಮಧ್ಯದಲ್ಲಿ ನನ್ನ ಮೇಲೆ ಕಲ್ಲು ಎಸೆಯಲು ಪ್ರಾರಂಭಿಸಿದ್ದ. ಅಲ್ಲಿದ್ದವರು ಯಾರೂ ಆತನ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ ಎಂದಿದ್ದಾರೆ. ಇದರ ಮಧ್ಯೆ ನನ್ನ ಟೀಚರ್ ನನ್ನ ಮೇಲೆಯೇ ಆರೋಪ ಮಾಡಿದ್ರು. ನಾನು ಬಿಗಿಯಾದ ಬಟ್ಟೆ…
ಸೋಷಿಯಲ್ ಮೀಡಿಯಾದಲ್ಲಿ ನಮ್ರತಾ ಹಾಗೂ ಕಿಶನ್ ಬೆಳಗಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಅದರಲ್ಲೂ ಇಬ್ಬರ ಡ್ಯಾನ್ಸ್ ವಿಡಿಯೋಗೇ ಅಭಿಮಾನಿಗಳು ಕಾಯುತ್ತಿರುತ್ತಾರೆ. ಇಬ್ಬರು ಕೂಡ ಒಳ್ಳೆಯ ಡ್ಯಾನ್ಸರ್ಸ್. ರೊಮ್ಯಾಂಟಿಕ್ ಆಗಿ ಡ್ಯಾನ್ಸ್ ಮಾಡಿ ಮೋಡಿ ಮಾಡಿದ ವಿಡಿಯೋಗಳು ಹರಿದಾಡುತ್ತಿವೆ. ನಮ್ರತಾ ಹಾಗೂ ಕಿಶನ್ ಪರಿಚಯವಾಗಿದ್ದು ‘ತಕಧಿಮಿತ’ ಡ್ಯಾನ್ಸ್ ಶೋ ಮೂಲಕ. ಆ ಸಮಯದಲ್ಲಿ ನಮ್ರತಾ ಅವರ ಡ್ಯಾನ್ಸ್ ಪಾಟ್ನರ್ ಕಾಲಿನ ಸಮಸ್ಯೆ ಆಗಿ ಅರ್ಧಕ್ಕೆ ಬಿಟ್ಟಿದ್ದರು. ಆಗ ನಮ್ರತಾಗೆ ಪಾಟ್ನರ್ ಆಗಿದ್ದು ಇದೇ ಕಿಶನ್. ಡ್ಯಾನ್ಸ್ ಮುಗಿದ ಮೇಲೆ ನಮ್ರತಾರ ತಾಯಿ ಕಿಶನ್ ಕ್ಲೋಸ್ ಆಗಿದ್ದು. ಹಬ್ಬ ಹರಿದಿನಗಳಿಗೆ ಕರೆಯುತ್ತಿದ್ದರು. ಬಳಿಕ ಮನೆಯವರೆಲ್ಲ ಕ್ಲೋಸ್ ಆಗಿದ್ದು ಅಂತ ಕಿಶನ್ ಹೇಳಿಕೊಂಡಿದ್ದಾರೆ. ಫ್ರೆಂಡ್ಸ್ ಅಂತ ಬಂದಾಗ ನೆಕ್ ನೇಮ್ ಇರುವುದು ಕಾಮನ್. ಕಿಶನ್ ಅವರು ನಮ್ರತಾರನ್ನ ಏನಂತ ಕರೆಯುತ್ತಾರೆ ಹಾಗೇ ನಮ್ರತಾ, ಕಿಶನ್ ಅವರನ್ನ ಏನಂತ ಕರೆಯುತ್ತಾರೆ ಎಂಬ ಕುತೂಹಲದ ಪ್ರಶ್ನೆಗೂ ಉತ್ತರಿಸಿದ್ದಾರೆ. ‘ನಮ್ರತಾಳನ್ನ ಗುಂಡಕ್ಕ ಅಂತ ಕರೆಯುತ್ತೀನಿ. ಆದ್ರೆ ನಂಬರ್ ಸೇವ್ ಮಾಡಿಕೊಂಡಿರುವುದು…
ಮುಂಗಾರು ಮಳೆ’ಯಿಂದ ಇಲ್ಲಿವರೆಗೂ ಜಯಂತ್ ಕಾಯ್ಕಿಣಿ ಹಾಡುಗಳನ್ನು ಬರೆಯುತ್ತಲೇ ಇದ್ದಾರೆ. ಒಂದೊಂದು ಹಾಡು ಕೂಡ ಸಿನಿಮಾ ಪ್ರೇಮಿಗಳನ್ನು ಸೆಳೆಯುತ್ತಲೇ ಇದೆ. ಆದರೆ, ಜಯಂತ್ ಕಾಯ್ಕಿಣಿ ಸಿನಿಮಾಗಾಗಿ ಒಂದು ಪ್ರೇಮ ಕವಿತೆಯನ್ನು ಬರೆಯುವುದಕ್ಕೆ ಸಿಕ್ಕಾಪಟ್ಟೆ ಕಷ್ಟ ಪಟ್ಟಿದ್ದರಂತೆ ! ‘ಗಾಳಿಪಟ’ ಸಿನಿಮಾದ ಮಿಂಚಾಗಿ ನೀನು ಬರಲು ಹಾಡನ್ನು ಬರೆಯಲು 20 ದಿನ ಯಾಕೆ ತೆಗೆದುಕೊಂಡರು ಅನ್ನೋದನ್ನು ಹೇಳಿಕೊಂಡಿದ್ದಾರೆ.’ಮುಂಗಾರು ಮಳೆ’ ಬಳಿಕ ಯೋಗರಾಜ್ ಭಟ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಕಾಂಬಿನೇಷನ್ ನಲ್ಲಿ ‘ಗಾಳಿಪಟ’ ಸಿನಿಮಾ ಸೆಟ್ಟೇರಿತ್ತು. ಈ ಸಿನಿಮಾಗೆ ವಿ.ಹರಿಕೃಷ್ಣ ಸಂಗೀತ ಸಂಯೋಜನೆ ಮಾಡುತ್ತಿದ್ದರು. ಯೋಗರಾಜ್ ಭಟ್ ಈ ಸಿನಿಮಾದಲ್ಲಿಯೂ ಜಯಂತ್ ಕಾಯ್ಕಿಣಿ ಅವರಿಂದ ಜನಪ್ರಿಯ ಹಾಡನ್ನು ಬರೆಸುವ ನಿರ್ಧಾರ ಮಾಡಿದ್ದರು. ಅದುವೇ “ಮಿಂಚಾಗಿ ನೀನು ಬರಲು..” ಅನ್ನೋ ಜನಪ್ರಿಯ ಹಾಡು. ಜಯಂತ್ ಕಾಯ್ಕಿಣಿ ಈ ಹಾಡನ್ನು ಬರೆಯುವುದಕ್ಕೆ ಸಿಕ್ಕಾಪಟ್ಟೆ ಪರದಾಡಿದ್ದಂತೆ. ಇದೊಂದು ಹಾಡು ಬರೆಯುವುದಕ್ಕೆ ಬರೋಬ್ಬರಿ 20 ದಿನಗಳನ್ನು ತೆಗೆದುಕೊಂಡಿದ್ದಾಗಿ ಸ್ವತ: ಜಯಂತ್ ಕಾಯ್ಕಿಣಿ ಅವರೇ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಒಂದು ಹಾಡನ್ನು…