Subscribe to Updates
Get the latest creative news from FooBar about art, design and business.
- ಬೆಂಗಳೂರು: ವಿಐಪಿ ಸಂಚಾರಕ್ಕೆ ಗರ್ಭಿಣಿ ಇದ್ದ ಕಾರು ತಡೆದಿದ್ದಕ್ಕೆ ರಸ್ತೆಯಲ್ಲೇ ಪತಿ ಪ್ರತಿಭಟನೆ; ತನಿಖೆಗೆ ಆದೇಶ!
- ಕಲಬುರಗಿ: ಮಗನ ಕಣ್ಣೆದುರೇ ಭೀಮಾ ನದಿಯಲ್ಲಿ ಮುಳುಗಿ ತಂದೆ ಸಾವು; ಮೊಬೈಲ್ ನಲ್ಲಿ ಸೆರೆಯಾಯ್ತು ದೃಶ್ಯ!
- ಭೀಕರ ರಸ್ತೆ ಅಪಘಾತ: ಟಾಟಾ ಏಸ್ ಹರಿದು ಇಬ್ಬರು ಯುವಕರು ಸಾವು, ಹೋಟೆಲ್ ಗೆ ನುಗ್ಗಿದ ವಾಹನ!
- ಕೊರಟಗೆರೆಯಲ್ಲಿ ವರುಣನ ಅಬ್ಬರ: ಶಾಲಾ ಆವರಣ, ಬಸ್ ನಿಲ್ದಾಣ ಜಲಾವೃತ, ಅವ್ಯವಸ್ಥೆ ವಿರುದ್ಧ ಸಾರ್ವಜನಿಕರ ಆಕ್ರೋಶ
- ಕಾರ್ಮಿಕರ ಮೂಲಭೂತ ಹಕ್ಕುಗಳ ರಕ್ಷಣೆಗೆ ಆಗ್ರಹ: ತುಮಕೂರಿನಲ್ಲಿ ಸಿಐಟಿಯು ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ
- ಜನರ ಮನಸ್ಸಿನಲ್ಲಿ ಉಳಿಯುವಂತೆ ಕೆಲಸ ಮಾಡಿ: ಅಧಿಕಾರಿಗಳಿಗೆ ತಹಶೀಲ್ದಾರ್ ಕೆ.ಮಂಜುನಾಥ್ ಕಿವಿಮಾತು
- ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಸಚಿವ ಸ್ಥಾನ ನೀಡಲು ಒತ್ತಾಯ: ಕಂದೇಗಾಲ ಶಿವರಾಜು ಆಗ್ರಹ
- ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಸಚಿವ ಸ್ಥಾನ ನೀಡಲು ಮುಳ್ಳೂರು ಲೋಕೇಶ್ ಒತ್ತಾಯ
Author: admin
ತುಮಕೂರು: ಇಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು (JD) ಇರ್ಕಸಂದ್ರ ಅಲೆಮಾರಿ ಕಾಲೋನಿಗೆ ಭೇಟಿ ನೀಡಿ, ಅಲ್ಲಿ ನೆಲೆಸಿರುವ ಕುಟುಂಬಗಳ ಸಂಕಷ್ಟಗಳನ್ನು ಪರಿಶೀಲಿಸಿದರು. ಈ ಭೇಟಿ ಸಂದರ್ಭದಲ್ಲಿ, ಕಾಲೋನಿಯ ನಿವಾಸಿಗಳ ಬೇಡಿಕೆಗಳನ್ನು ತಕ್ಷಣ ಪರಿಹರಿಸುವ ಉದ್ದೇಶದಿಂದ, ಪ್ಲಾಸ್ಟಿಕ್ ಶೀಟುಗಳು ಮತ್ತು ಟಾರ್ಪೆಲ್ ಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಕ್ರಮದಿಂದಾಗಿ, ಕಾಲೋನಿಯ ನಿವಾಸಿಗಳಿಗೆ ತಾತ್ಕಾಲಿಕ ಆಶ್ರಯದ ವ್ಯವಸ್ಥೆ ಸಾಧ್ಯವಾಗಿದ್ದು, ಇದು ಅವರಿಗೆ ತಾತ್ಕಾಲಿಕ ಸಾಂತ್ವನ ನೀಡಲು ಸಹಾಯಕವಾಗಿದೆ. ಇಂತಹ ತ್ವರಿತ ಕಾರ್ಯಾಚರಣೆಗೆ ಕಾಲೋನಿಯವರು ತಮ್ಮ ಸಂತೋಷ ವ್ಯಕ್ತಪಡಿಸಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯ ಈ ಆದರ್ಶ ಸೇವೆ ಅನೇಕರ ಜೀವಕ್ಕೆ ಸಹಾಯವಾಗಿದ್ದು, ಈ ಕಾರ್ಯಕ್ಕೆ ಪ್ರಾಶಂಸೆಗಳು ವ್ಯಕ್ತವಾಗಿವೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ತುಮಕೂರು: ಕೃಷಿ ಕ್ಷೇತ್ರದಲ್ಲಿ ಉತ್ಪಾದನೆ ಮತ್ತು ಉತ್ಪಾದಕತೆ ಹೆಚ್ಚಿಸುವ ಹಾಗೂ ರೈತರಲ್ಲಿ ಆರೋಗ್ಯಕರ ಸ್ಪರ್ಧಾತ್ಮಕ ಮನೋಭಾವನೆಯನ್ನು ಬೆಳೆಸುವ ಉದ್ದೇಶದಿಂದ ಕೃಷಿ ಪ್ರಶಸ್ತಿ ನೀಡಲು ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಕೃಷಿ ಪ್ರಶಸ್ತಿಗಾಗಿ ಜಿಲ್ಲೆಯ ಆಸಕ್ತ ರೈತರು ಹಾಗೂ ರೈತ ಮಹಿಳೆಯರು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಕೃಷಿಯಲ್ಲಿ ರೈತ ಮಹಿಳೆಯರನ್ನು ಪ್ರೋತ್ಸಾಹಿಸುವ ಹಾಗೂ ಇತರೆ ಮಹಿಳೆಯರನ್ನು ಕೃಷಿಯತ್ತ ಆಕರ್ಷಿಸಲು ಪ್ರತ್ಯೇಕವಾಗಿ ಮಹಿಳೆಯರಿಗೆ ಈ ವರ್ಷದಿಂದ ಕೃಷಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಕೃಷಿ ಪ್ರಶಸ್ತಿಗಾಗಿ ಆಯ್ಕೆ ಮಾಡಲಾದ ಬೆಳೆಗಳಲ್ಲಿ ಬೆಳೆ ಸ್ಪರ್ಧೆ ನಡೆಸಿ ಪ್ರತಿ ಬೆಳೆಗೂ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನವಾಗಿ ನಗದು ರೂಪದಲ್ಲಿ ನೀಡಲಾಗುವುದು. ಆಸಕ್ತ ರೈತರು ಭರ್ತಿ ಮಾಡಿದ ಅರ್ಜಿಯನ್ನು ಆಗಸ್ಟ್ 31ರೊಳಗಾಗಿ ತಮ್ಮ ಸಮೀಪದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಲ್ಲಿಸಬಹುದಾಗಿದೆ. ಅರ್ಜಿ ನಮೂನೆ ಮತ್ತಿತರ ಮಾಹಿತಿಗಾಗಿ ಸಂಬAಧಿಸಿದ ರೈತ ಸಂಪರ್ಕ ಕೇಂದ್ರ ಅಥವಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ರಮೇಶ್…
ತುಮಕೂರು: ಮಳೆಗಾಲದಲ್ಲಿ ಡೆಂಗ್ಯೂ, ಕಾಲರಾ, ಮಲೇರಿಯಾ, ಚಿಕನ್ ಗುನ್ಯಾದಂತಹ ಇತರೆ ಸಾಂಕ್ರಾಮಿಕ ರೋಗಗಳು ಉಲ್ಬಣಗೊಳ್ಳುವ ಸಾಧ್ಯತೆಯಿದ್ದು, ಮುಂಜಾಗ್ರತಾ ಕ್ರಮವಾಗಿ ಪಾಲಿಕೆ ವ್ಯಾಪ್ತಿಯಲ್ಲಿ ಬೀಡಾಡಿ ಹಂದಿಗಳನ್ನು ನಗರ ಪ್ರದೇಶದಿಂದ ಹೊರಸಾಗಿಸಬೇಕೆಂದು ಪಾಲಿಕೆ ಆಯುಕ್ತ ಬಿ.ವಿ.ಅಶ್ವಿಜ ಹಂದಿ ಸಾಕಾಣಿಕೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ನಗರ ವ್ಯಾಪ್ತಿಯಲ್ಲಿ ಬೀಡಾಡಿ ಹಂದಿಗಳ ಹಾವಳಿ ಹೆಚ್ಚಾಗಿದ್ದು, ಬೀಡಾಡಿ ಹಂದಿಗಳು ಸಾರ್ವಜನಿಕವಾಗಿ ರಸ್ತೆ, ಖಾಲಿ ನಿವೇಶನ ಸೇರಿ ಎಲ್ಲೆಂದರಲ್ಲಿ ಓಡಾಡುತ್ತಿರುವುದರಿಂದ ನಗರದ ಅನೈರ್ಮಲ್ಯಗಳಿಗೆ ಕಾರಣವಾಗುತ್ತಿರುವ ಹಿನ್ನೆಲೆಯಲ್ಲಿ 3 ದಿನಗಳ ಒಳಗಾಗಿ ಮಾಲೀಕರು / ಸಾಕಾಣಿಕೆದಾರರು ಬೀಡಾಡಿಯಾಗಿ ಓಡಾಡಿಕೊಂಡಿರುವ ತಮ್ಮ ಹಂದಿಗಳನ್ನು ಹಿಡಿದು ನಗರದ ಹೊರ ಪ್ರದೇಶಕ್ಕೆ ಸಾಗಿಸಬೇಕು. ಇಲ್ಲವಾದಲ್ಲಿ ಕುರಿ/ಕೋಳಿ ಸಾಕಾಣಿಕೆದಾರರು ನಿರ್ಮಿಸಿಕೊಂಡಿರುವ ಮಾದರಿಯಲ್ಲಿ ನಗರದ ಹೊರಗಡೆ ಫಾರ್ಮ್ ಹೌಸ್ ನಿರ್ಮಿಸಿಕೊಂಡು ಹಂದಿಗಳನ್ನು ಸಾಕಾಣಿಕೆ ಮಾಡತಕ್ಕದ್ದು. ನಿಯಮ ಮೀರಿ ಹಂದಿಗಳು ರಸ್ತೆಗೆ ಬಂದಲ್ಲಿ ಪಾಲಿಕೆ ವತಿಯಿಂದ ಸೂಕ್ತ ಕ್ರಮವಹಿಸಲಾಗುವುದು. ಇದರಿಂದಾಗುವ ಯಾವುದೇ ರೀತಿಯ ಕಷ್ಟ-ನಷ್ಟಗಳಿಗೆ ತುಮಕೂರು ಮಹಾನಗರಪಾಲಿಕೆಯು ಜವಾಬ್ದಾರಿಯಾಗಿರುವುದಿಲ್ಲವೆಂದು ಅವರು ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು…
ತುಮಕೂರು: ಕನ್ನಡ ಸಾಹಿತ್ಯದಲ್ಲಿ ಬಸವಾದಿ ಶರಣ ಶರಣೆಯರು ಸ್ವತಂತ್ರ ಧೀರರು ಅಲ್ಲದೆ ಸ್ವತಂತ್ರ ವಿಚಾರವಾದಿಗಳಾಗಿದ್ದರು” ಎಂದು ಆಧುನಿಕ ವಚನಕಾರರಾದ ರುದ್ರಮೂರ್ತಿ ಎಲೆರಾಂಪುರರವರು ಅಭಿಪ್ರಾಯಪಟ್ಟರು. ಅವರು ತುಮಕೂರಿನ ಬಸವೇಶ್ವರ ವಿದ್ಯಾರ್ಥಿನಿಲಯದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯಂದು ತುಮಕೂರು ಜಿಲ್ಲಾ ಮತ್ತು ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಸಹಕಾರದಲ್ಲಿ ಲಿಂ.ಸಿದ್ಧವೀರಮ್ಮ ನಂಜಣ್ಣ ಬಸವರಾಜಪ್ಪ ದತ್ತಿಯಲ್ಲಿ “ಶರಣರು ಸ್ವತಂತ್ರ ಧೀರರು” ಎಂಬ ವಿಷಯವಾಗಿ ಮಾತನಾಡುತ್ತಿದ್ದರು. ಶರಣರು ಎಂದಿಗೂ ಪರರ ಆಶ್ರಯದಲ್ಲಿ ಬೇಡಿ ಬದುಕಿದವರಲ್ಲ. ರಾಜರನ್ನ ಹೊಗಳಿ ಸಾಹಿತ್ಯ ರಚಿಸಲಿಲ್ಲ, ಸ್ವತಂತ್ರವಾಗಿ ಕಾಯಕ ನಂಬಿ ಬದುಕಿದ ವಿಚಾರವಂತರು ಎಂದರು. ಜೇಡರದಾಸಿಮಯ್ಯ ಅಲ್ಲದೆ ಅನೇಕ ಶರಣ ಶರಣೆಯರ ಹಲವು ವಚನಗಳ ದೃಷ್ಟಾಂತ ನೀಡಿ ವಿವರಿಸಿ, ತಮ್ಮ ಸ್ವರಚಿತ ವಚನಗಳನ್ನು ಹಾಡಿ ರಂಜಿಸಿದರು. ದತ್ತಿದಾನಿಗಳಾದ ಜಿ.ಎನ್.ಬಸವರಾಜಪ್ಪನವರು ಉದ್ಘಾಟಿಸಿ ಮಾತನಾಡುತ್ತಾ, ತಾವು ಬಾಲ್ಯದಲ್ಲಿ ಶಿಕ್ಷಣದಿಂದ ವಂಚಿತರಾದಾಗ ತಮ್ಮ ತಂದೆ ತಾಯಿಯವರ ಪೂರ್ಣ ಜವಾಬ್ದಾರಿಯಿಂದ ವಿದ್ಯಾವಂತರಾಗಿ ಇಂದು ಈ ಮಟ್ಟದಲ್ಲಿ ಬೆಳೆಯಲು ವಿದ್ಯೆಯೇ ಸರ್ವಸ್ವ ಎಂದರು. ಸಿದ್ಧಾರ್ಥ ಸಂಸ್ಥೆಯ ಡಿ.ಎಂ.ಗಂಗಾಧರಯ್ಯನವರ ಸಲಹೆ ಸಹಕಾರ ಸ್ಮರಿಸಿದರು.…
ತುಮಕೂರು: ಭಾರತ ಚುನಾವಣಾ ಆಯೋಗವು ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ–2025ಕ್ಕೆ ಸಂಬಂಧಿಸಿದಂತೆ ವೇಳಾಪಟ್ಟಿಯನ್ನು ಪ್ರಕಟಿಸಿದೆ. ವೇಳಾಪಟ್ಟಿಯನ್ವಯ ಆಗಸ್ಟ್ 20 ರಿಂದ ಅಕ್ಟೋಬರ್ 18ರವರೆಗೆ ಸಂಬಂಧಿಸಿದ ಮತಗಟ್ಟೆ ಮಟ್ಟದ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ. ಪರಿಶೀಲನಾ ವೇಳೆಯಲ್ಲಿ ಮತಗಟ್ಟೆ ವ್ಯಾಪ್ತಿಯಲ್ಲಿ ಮರಣ ಹೊಂದಿದ/ 18 ವರ್ಷ ತುಂಬಿದ / ಸ್ಥಳಾಂತರಗೊಂಡ ಮತದಾರರ ಬಗ್ಗೆ ಹಾಗೂ ಮತದಾರರ ಪಟ್ಟಿಯಲ್ಲಿ ತಿದ್ದುಪಡಿ ಇದ್ದಲ್ಲಿ ನಿಗದಿತ ನಮೂನೆಯಲ್ಲಿ ಮಾಹಿತಿ ಪಡೆಯಲಿದ್ದಾರೆ. ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ–ಮನೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರು ತಮ್ಮ ಹಾಗೂ ತಮ್ಮ ಮನೆಯ ಸದಸ್ಯರ ಹೆಸರುಗಳು ಮತದಾರರ ಪಟ್ಟಿಯಲ್ಲಿ ನಮೂದಾಗಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ–2025ಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 29ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರ್ಪಡೆಗಾಗಿ ನಮೂನೆ 6; ಅನಿವಾಸಿ ಭಾರತೀಯರ ಹೆಸರು ಸೇರ್ಪಡೆಗೆ ನಮೂನೆ 6ಎ; ಚಾಲ್ತಿಯಲ್ಲಿರುವ ಮತದಾರರ ಪಟ್ಟಿಯಲ್ಲಿ ಉದ್ದೇಶಿತ ಹೆಸರಿನ…
ತುಮಕೂರು: ದಲಿತರಾಮಯ್ಯ ಎಂದು ಹೇಳಿಕೊಂಡು ದಲಿತರಿಗೆ ಮೀಸಲಿಟ್ಟ ಅನುದಾನವನ್ನು ಸಿದ್ದರಾಮಯ್ಯ ಅವರು ಬೇರೆ ಯೋಜನೆಗಳಿಗೆ ಉಪಯೋಗಿಸಿದ್ದಾರೆ. ಅವರ ವಿರುದ್ಧ ಮುಡಾ ಹಗರಣದಲ್ಲಿ ರಾಜ್ಯಪಾಲರ ನಡೆ ಸರಿಯಾಗಿದ್ದು, ಕೂಡಲೇ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಅಹಿಂದ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಚಾಲಕ ಭಾಸ್ಕರ್ ಪ್ರಸಾದ್ ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಡಾದಲ್ಲಿ ಸಿದ್ದರಾಮಯ್ಯ ಕುಟುಂಬದ ವೈಯಕ್ತಿಕ ಹಗರಣ, ಆದರೆ ಅದಕ್ಕಿಂತಲೂ ಹೆಚ್ಚಿನ ಹಗರಣಗಳು ದಲಿತರ ಹೆಸರಿನಲ್ಲಿ ನಡೆದಿವೆ. ಹಾಗಾಗಿ ಅಹಿಂದ ಸಂಘಟನೆಗಳ ಒಕ್ಕೂಟದಿಂದ ಆ. 28 ರಂದು ಬೆಂಗಳೂರಿನಲ್ಲಿ ‘ಕಾಂಗ್ರೆಸ್ ಹಠಾವೋ ದಲಿತ ಬಚಾವೋ’ ಎಂಬ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಪರಿಶಿಷ್ಟರ ರಕ್ಷಣೆ, ನಮ್ಮ ಹಕ್ಕು ಕೇಳಲು ಪ್ರತಿಭಟನೆ ನಡೆಯಲಿದೆ. ನಮ್ಮ ಪಾಲಿನ ಹಣದಿಂದ ಬೇರೆಯವರ ಹೊಟ್ಟೆ ತುಂಬುತ್ತಿದೆ. ಪ್ರತಿ ವರ್ಷ ಸಾವಿರಾರು ಕೋಟಿ ಮೀಸಲಿಟ್ಟರೂ ಸಮುದಾಯಗಳ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಎಲ್ಲ ಅಂಶಗಳನ್ನು ಮುಂದಿಟ್ಟುಕೊಂಡು ಹೋರಾಟ ರೂಪಿಸಲಾಗುವುದು ಎಂದು ಅವರು ಹೇಳಿದರು. ಅಹಿಂದ ಸಂಘಟನೆಗಳ ಒಕ್ಕೂಟದ ಮತ್ತೊಬ್ಬ ಸಂಚಾಲಕ ಪ್ರೊ.ಹರಿರಾಮ್…
ತುಮಕೂರು: ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕಪಟ್ಟಿಯಲ್ಲಿತುಮಕೂರು ವಿವಿಯು ಮೊದಲ 100 ಸ್ಥಾನಗಳಲ್ಲಿ ಸೇರಿರುವುದು ಹೆಮ್ಮೆಯ ಸಂಗತಿ ಎಂದು ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಸಂತಸ ವ್ಯಕ್ತಪಡಿಸಿದರು. ತುಮಕೂರು ವಿಶ್ವವಿದ್ಯಾನಿಲಯವು ನಿಟ್ಟೆ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಸಂಶೋಧನೆಯನ್ನು ತಂತ್ರಜ್ಞಾನವಾಗಿ ಪರಿವರ್ತಿಸುವ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗುಣಮಟ್ಟದ ಸಂಶೋಧನೆ, ಪ್ರಾಯೋಗಿಕ ಬೋಧನೆ, ಸಂಶೋಧನೆ ಆಧಾರಿತ ಶಿಕ್ಷಣದಿಂದ ವಿಶ್ವವಿದ್ಯಾನಿಲಯಗಳ ಬೆಳವಣಿಗೆ ವೃದ್ಧಿಯಾಗಲಿದೆ ಎಂದರು. ಕಳೆದ ಒಂದು ವರ್ಷದಲ್ಲಿಸಂಶೋಧನಧನ ಸಹಾಯ ಸಂಸ್ಥೆಗಳಿಗೆ 80 ಸಂಶೋಧನ ಪ್ರಸ್ತಾವನೆಗಳನ್ನು ವಿವಿಧ ವಿಭಾಗಗಳ ಪ್ರಾಧ್ಯಾಪಕರು ಸಲ್ಲಿಸಿದ್ದರು. ಅದರಲ್ಲಿ, 22 ಸಂಶೋಧನ ಪ್ರಸ್ತಾವನೆಗಳಿಗೆ ಅನುಮೋದನೆದೊರೆತಿದ್ದು, 1.5 ಕೋಟಿಯಷ್ಟುಧನ ಸಹಾಯದ ಮಾನ್ಯತೆದೊರೆತಿರುವುದು ವಿವಿಯ ಸಂಶೋಧನ ಗುಣಮಟ್ಟಕ್ಕೆ ನಿದರ್ಶನವಾಗಿದೆ ಎಂದರು. ನಿಟ್ಟೆ ವಿಶ್ವವಿದ್ಯಾನಿಲಯದಸಲಹೆಗಾರಡಾ.ಇಡ್ಯಾಕರುಣಾಸಾಗರ ಮಾತನಾಡಿ, ವಿಭಿನ್ನ ಸಂಶೋಧನ ಕಲ್ಪನೆಯಿಂದ ವಾಣಿಜ್ಯಿಕ ತಂತ್ರಜ್ಞಾನಗಳತ್ತ ಸಾಗಲು ಅನುವು ಮಾಡಿಕೊಡುವುದು ತಂತ್ರಜ್ಞಾನ ಕಾರ್ಯಗತಗೊಳಿಸುವ ಕೇಂದ್ರದ ಧ್ಯೇಯವಾಗಿದೆ. ಸಂಶೋಧನೆಯ ಫಲಿತಾಂಶಗಳು ಸಮಾಜಕ್ಕೆ ತಲುಪಿ, ಅನುಕೂಲವಾಗುವಂತೆ ತಂತ್ರಜ್ಞಾನವಾಗಿ ಪರಿವರ್ತನೆಯಾಗಬೇಕು ಎಂದು ತಿಳಿಸಿದರು. ಸಂಶೋಧನೆಯ ಗರಿಷ್ಠ ಸದುಪಯೋಗಕ್ಕಾಗಿ ವಿಶ್ವವಿದ್ಯಾನಿಲಯದ ವಿವಿಧ ನಿಕಾಯಗಳು ಹಾಗೂ ವಿಭಾಗಗಳು…
ತುಮಕೂರು: ತೋಟಗಾರಿಕೆ ಇಲಾಖೆಯು ತೋಟಗಾರಿಕೆ ರೈತರು ಹಾಗೂ ಉದ್ದಿಮೆದಾರರಿಗೆ ನೆರವು ನೀಡಲು ಅರ್ಜಿ ಆಹ್ವಾನಿಸಿದೆ. ಅಡಿಕೆ ಸುಲಿಯುವ ಯಂತ್ರ, ದೋಟಿ, ಬ್ರಷ್ ಕಟರ್, ಟಿಲ್ಲರ್, ಪವರ್ ವೀಡರ್, ಸ್ಪ್ರೇಯರ್, ರೋಟೋವೇಟರ್, ಡಿಗ್ಗರ್ ಹಾಗೂ ಇತರೆ ಯಂತ್ರಗಳನ್ನು (ಗರಿಷ್ಟ 1.25 ಲಕ್ಷ ರೂ. ಅಥವಾ 5 ಯಂತ್ರೋಪಕರಣಗಳಿಗೆ ಮಾತ್ರ) ಖರೀದಿಸಲು ಸಹಾಯಧನ ನೀಡಲಾಗುವುದು. ಆಸಕ್ತ ರೈತರು ಹಾಗೂ ಉದ್ದಿಮೆದಾರರು ಭರ್ತಿ ಮಾಡಿದ ಅರ್ಜಿಯೊಂದಿಗೆ ಪಹಣಿ, ಬೆಳೆ ದೃಢೀಕರಣ, ಚೆಕ್ಬಂದಿ, ಆಧಾರ್, ಬ್ಯಾಂಕ್ ಪಾಸ್ ಪುಸ್ತಕ, ಜಾತಿ ಪ್ರಮಾಣಪತ್ರ(ಪ.ಜಾತಿ ಮತ್ತು ಪ.ಪಂಗಡ ರೈತರಿಗೆ), ಜಂಟಿ ಖಾತೆ ಇದ್ದಲ್ಲಿ ಒಪ್ಪಿಗೆ ಪ್ರಮಾಣ ಪತ್ರ, ಖಾತೆದಾರರು ಮರಣ ಹೊಂದಿದ್ದಲ್ಲಿ ಮರಣ ಪ್ರಮಾಣ ಪತ್ರ ಸೇರಿದಂತೆ ಮತ್ತಿತರೆ ದಾಖಲಾತಿಗಳನ್ನು ಲಗತ್ತಿಸಿ ಹತ್ತಿರದ ಗ್ರಾಮ ಪಂಚಾಯಿತಿ ಕಚೇರಿ ಅಥವಾ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ತುಮಕೂರು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ- 9686503500, ಗುಬ್ಬಿ-9535781963, ಶಿರಾ-9844042356, ಕುಣಿಗಲ್-9606570210, ತಿಪಟೂರು-9845014293, ಚಿಕ್ಕನಾಯಕನಹಳ್ಳಿ-9686056705, ಮಧುಗಿರಿ-9916378199,…
ತುಮಕೂರು: ನಗರದ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರವನ್ನು ನಾಟಕ ಪ್ರದರ್ಶನಕ್ಕೆ ಕಾಯ್ದಿರಿಸುವ ವಿಚಾರದಲ್ಲಿ ದುರುಪಯೋಗವಾಗುತ್ತಿದ್ದು, ಕೂಡಲೇ ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ಸಾಂಸ್ಕೃತಿಕ ಸಂಘಟನೆಗಳ ರಾಜ್ಯ ಮಹಾ ಒಕ್ಕೂಟ ಅಪರ ಜಿಲ್ಲಾಧಿಕಾರಿ ಡಾ. ತಿಪ್ಪೇಸ್ವಾಮಿ ರವರಿಗೆ ಮನವಿ ಸಲ್ಲಿಸಿದೆ. ಕರ್ನಾಟಕ ಸಾಂಸ್ಕೃತಿಕ ಸಂಘಟನೆಗಳ ರಾಜ್ಯ ಮಹಾ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಕಲಾವಿದರ ಒಕ್ಕೂಟದ ರಾಜ್ಯಾಧ್ಯಕ್ಷ ತಿಪ್ಪೇಸ್ವಾಮಿ ಹಾಗೂ ಒಕ್ಕೂಟದ ಜಿಲ್ಲಾಧ್ಯಕ್ಷ ಗೂಳಹರಿವೆ ಪೆರುಮಯ್ಯ ಅವರು ಅಪರ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಈ ಸಂಬಂಧ ಮನವಿ ಸಲ್ಲಿಸಿ, ನಾನು ನಮ್ಮ ನುರಿತ ಕಲಾವಿದರಿಂದ ಸಂಪೂರ್ಣ ರಾಮಾಯಣ ಪೌರಾಣಿಕ ನಾಟಕವನ್ನು ಪ್ರದರ್ಶಿಸಲು ಸ್ಥಳಾವಕಾಶ ನೀಡುವಂತೆ ಅನೇಕ ಬಾರಿ ಮನವಿ ಸಲ್ಲಿಸಿದ್ದೇವೆ. ಆದರೂ ಅವಕಾಶ ಸಿಕ್ಕಿಲ್ಲ ಎಂದು ದೂರಿದರು. ಕೆಲವು ವ್ಯಕ್ತಿಗಳು ತಮಗೆ ಅವಶ್ಯಕತೆ ಇಲ್ಲದಿದ್ದರೂ ಮುಂಚಿತವಾಗಿ ಪದೇ ಪದೇ ಗುಬ್ಬಿ ವೀರಣ್ಣ ಕಲಾಕ್ಷೇತ್ರವನ್ನು ಆನ್ ಲೈನ್ ನಲ್ಲಿ ಕಾಯ್ದಿರಿಸಿ ಹಣ ಪಡೆದು ಅನ್ಯರಿಗೆ ಬಿಟ್ಟು…
ತುಮಕೂರು: ನಾಡಿನ ಸಾಮಾಜಿಕನ್ಯಾಯದ ಹರಿಕಾರರಾಗಿ, ದೀನ ದುರ್ಬಲರಆಶಾಕಿರಣವಾಗಿ, ಜೀತ ಹಾಗೂ ಮಲ ಹೊರುವ ಪದ್ಧತಿಯನ್ನು ನಿರ್ಮೂಲನೆ ಮಾಡಿದ ಧೀಮಂತ ನಾಯಕ ದೇವರಾಜ ಅರಸು ಚಿರಸ್ಮರಣೀಯ ಎಂದು ಕುವೆಂಪು ವಿವಿಯ ಕಲಾ ನಿಕಾಯದ ಡೀನ್ ಪ್ರೊ. ಎಂ.ಗುರುಲಿಂಗಯ್ಯ ಹೇಳಿದರು. ತುಮಕೂರು ವಿಶ್ವವಿದ್ಯಾನಿಲಯದ ಡಿ.ದೇವರಾಜ ಅರಸುಅಧ್ಯಯನ ಪೀಠ ಮತ್ತು ಹಿಂದುಳಿದ ವರ್ಗಗಳ ಕೋಶವು ಮಂಗಳವಾರ ಆಯೋಜಿಸಿದ್ದ ಡಿ.ದೇವರಾಜ ಅರಸು ಅವರ 109ನೇ ಜಯಂತಿಯಲ್ಲಿ‘ಪ್ರಸಕ್ತ ಸನ್ನಿವೇಶದಲ್ಲಿ ಡಿ.ದೇವರಾಜ ಅರಸು ಅವರ ಸಾಮಾಜಿಕ ನ್ಯಾಯ ಪರಿಕಲ್ಪನೆಯ ಪ್ರಸ್ತುತತೆ’ ಕುರಿತು ಮಾತನಾಡಿದರು. 12ನೆಯ ಶತಮಾನದ ಸಾಮಾಜಿಕ ನ್ಯಾಯದ ಪರಿಪಾಲಕ ಬಸವಣ್ಣನವರ ಆದರ್ಶವನ್ನು ಪ್ರತಿಪಾದಿಸಿದ ನಾಯಕ ದೇವರಾಜ ಅರಸು ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳನ್ನು ಸಮಾಜಕ್ಕೆ ತಲುಪಿಸಿ ಸಮ ಸಮಾಜವನ್ನುರೂಪಿಸುವ, ಸಮಾಜಕ್ಕಾಗಿ ದುಡಿದು ಬದುಕುವ ವಿಕಾಸ ಮನಸ್ಥಿತಿಯಿದ್ದವರು ಎಂದರು. ಸಾಮಾಜಿಕ ನ್ಯಾಯವು ಸಂವಿಧಾನಕ್ಕೆ ಕಿರೀಟವಿದ್ದಂತೆ. ಉಳ್ಳವರು ಮತ್ತುಇರದವರ ನಡುವಿನ ವ್ಯತ್ಯಾಸವನ್ನು ಸಮಾನತೆಯ ಧ್ಯೇಯದೊಂದಿಗೆ, ಮೇಲ್ವರ್ಗದವರ ಶೋಷಣೆಯಿಂದ ತುಳಿತಕ್ಕೊಳಗಾದವರ ಧ್ವನಿಯಾಗಿ ಅರಸು ಹಿಂದುಳಿದ ಸಮುದಾಯಗಳ ನಾಯಕರಾಗಿ ಸದಾ ಮೇಲ್ಪಂಕ್ತಿಯಲ್ಲಿ ಕಾಣಿಸಿಕೊಳ್ಳುತ್ತಾರೆ…