Subscribe to Updates
Get the latest creative news from FooBar about art, design and business.
- ಕಲಬುರಗಿ: ಮಗನ ಕಣ್ಣೆದುರೇ ಭೀಮಾ ನದಿಯಲ್ಲಿ ಮುಳುಗಿ ತಂದೆ ಸಾವು; ಮೊಬೈಲ್ ನಲ್ಲಿ ಸೆರೆಯಾಯ್ತು ದೃಶ್ಯ!
- ಭೀಕರ ರಸ್ತೆ ಅಪಘಾತ: ಟಾಟಾ ಏಸ್ ಹರಿದು ಇಬ್ಬರು ಯುವಕರು ಸಾವು, ಹೋಟೆಲ್ ಗೆ ನುಗ್ಗಿದ ವಾಹನ!
- ಕೊರಟಗೆರೆಯಲ್ಲಿ ವರುಣನ ಅಬ್ಬರ: ಶಾಲಾ ಆವರಣ, ಬಸ್ ನಿಲ್ದಾಣ ಜಲಾವೃತ, ಅವ್ಯವಸ್ಥೆ ವಿರುದ್ಧ ಸಾರ್ವಜನಿಕರ ಆಕ್ರೋಶ
- ಕಾರ್ಮಿಕರ ಮೂಲಭೂತ ಹಕ್ಕುಗಳ ರಕ್ಷಣೆಗೆ ಆಗ್ರಹ: ತುಮಕೂರಿನಲ್ಲಿ ಸಿಐಟಿಯು ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ
- ಜನರ ಮನಸ್ಸಿನಲ್ಲಿ ಉಳಿಯುವಂತೆ ಕೆಲಸ ಮಾಡಿ: ಅಧಿಕಾರಿಗಳಿಗೆ ತಹಶೀಲ್ದಾರ್ ಕೆ.ಮಂಜುನಾಥ್ ಕಿವಿಮಾತು
- ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಸಚಿವ ಸ್ಥಾನ ನೀಡಲು ಒತ್ತಾಯ: ಕಂದೇಗಾಲ ಶಿವರಾಜು ಆಗ್ರಹ
- ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಸಚಿವ ಸ್ಥಾನ ನೀಡಲು ಮುಳ್ಳೂರು ಲೋಕೇಶ್ ಒತ್ತಾಯ
- ಸರಗೂರು: ‘ರಾಷ್ಟ್ರೀಯ ಭೀಮಾ ಮಾರ್ಗ ಸಂಘಟನೆ’ಯ ನೂತನ ತಾಲ್ಲೂಕು ಅಧ್ಯಕ್ಷರಾಗಿ ಹಳಿಯೂರು ಮೂರ್ತಿ ಆಯ್ಕೆ
Author: admin
ತುಮಕೂರು: ತೆಂಗು ಬೆಳೆಯಲ್ಲಿ ಕೆಂಪುಮೂತಿ ಹುಳುಗಳನ್ನು ಹತೋಟಿ ಮಾಡುವ ಕ್ರಮದ ಬಗ್ಗೆ ಗುಬ್ಬಿ ತಾಲ್ಲೂಕು ತೋಟಗಾರಿಕೆ ಇಲಾಖೆ ರೈತರಿಗೆ ಸಲಹೆ ನೀಡಿದೆ. ಕೆಂಪುಮೂತಿ ಕೀಟವು ತನ್ನ ಜೀವನಚಕ್ರವನ್ನು ಪೂರ್ಣಗೊಳಿಸಲು ತೆಂಗಿನ ಮರವನ್ನು ಅವಲಂಬಿಸಿರುವುದರಿಂದ ಎಲ್ಲಾ ಹಂತದಲ್ಲೂ ತೆಂಗಿಗೆ ಹಾನಿ ಉಂಟು ಮಾಡುತ್ತದೆ. ಕೆಂಪುಮೂತಿ ಹುಳುಗಳು ತೆಂಗಿನ ಮರದ ಕಾಂಡದೊಳಗೆ ಸೇರಿಕೊಂಡು ಮೃದು ಭಾಗಗಳನ್ನು ಕೊರೆಯುವುದರಿಂದ ಪ್ರಾರಂಭದಲ್ಲಿ ಸಣ್ಣ-ಸಣ್ಣ ರಂಧ್ರಗಳು ಕಾಣಿಸಿಕೊಳ್ಳುತ್ತವೆ. ಕೀಟ ಬಾಧೆಗೆ ಒಳಗಾದ ರಂಧ್ರಗಳಿಂದ ಕಂದು ಬಣ್ಣದ ರಸ ಸೋರಿರುವುದು ಹಾಗೂ ಹುಳುಗಳು ತಿಂದು ಹಾಕಿದ ನಾರು ಹೊರ ಬಂದಿರುವುದನ್ನು ಕಾಣಬಹುದಾಗಿದೆ. ಕೀಟ ಬಾಧೆಯು ತೀವ್ರವಾದಾಗ ಸುಳಿ ಗರಿಗಳು ಒಣಗಿ, ಹಾನಿಗೊಳಗಾದ ಭಾಗಗಳ ಹತ್ತಿರ ಎಲೆಯ ತೊಟ್ಟು(ಎಡಮಟ್ಟೆ)ಗಳು ಸೀಳುತ್ತವೆ. ಕೆಂಪು ಮೂತಿ ಹುಳುವಿನ ಬಾಧೆಯನ್ನು ಖಚಿತಪಡಿಸಿಕೊಳ್ಳಲು ನಿಶ್ಯಬ್ದ ಸಮಯದಲ್ಲಿ ತೆಂಗಿನ ಮರದ ಕಾಂಡಕ್ಕೆ ಕಿವಿಯನ್ನಿಟ್ಟು ಆಲಿಸಿದಾಗ ಹುಳುಗಳು ತಿನ್ನುತ್ತಿರುವ ಶಬ್ದವನ್ನು ಕೇಳಿಸಿಕೊಳ್ಳಬಹುದು. ಈ ಕೀಟವು ಎಳೆಯ ವಯಸ್ಸಿನ ತೆಂಗಿನ ಮರಗಳಿಗೆ ಹೆಚ್ಚು ಹಾನಿಕಾರಕವಾಗಿದೆ. ಸಾಮಾನ್ಯವಾಗಿ 5 ರಿಂದ 20 ವರ್ಷ…
ತುಮಕೂರು: ಮಹಾರಾಷ್ಟ್ರದ ನಾಗಪುರ ದೀಕ್ಷಾ ಭೂಮಿಯಲ್ಲಿ ಅಕ್ಟೋಬರ್ 12ರಂದು ನಡೆಯಲಿರುವ ದಮ್ಮ ಪ್ರವರ್ತನ ದಿನ ಕಾರ್ಯಕ್ರಮಕ್ಕೆ ಯಾತ್ರೆ ಕೈಗೊಳ್ಳಲಿಚ್ಛಿಸುವ ಡಾ.ಬಿ.ಆರ್. ಅಂಬೇಡ್ಕರ್ ಅವರ ಅನುಯಾಯಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಮಧುಗಿರಿ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ದೀಕ್ಷಾ ಭೂಮಿಯಲ್ಲಿ ಅಕ್ಟೋಬರ್ 10 ರಿಂದ 14 ರವರೆಗೆ ನಡೆಯುವ ದಮ್ಮ ಪ್ರವರ್ತನ ದಿನ ಕಾರ್ಯಕ್ರಮಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಅನುಯಾಯಿಗಳನ್ನು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಕಳುಹಿಸಿಕೊಡಲು ಸಾರಿಗೆ ವ್ಯವಸ್ಥೆ/ರೈಲಿನ ವ್ಯವಸ್ಥೆ ಕಲ್ಪಿಸುವ ಸಂಬಂಧ ಅರ್ಹ ಯಾತ್ರಾರ್ಥಿಗಳನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಡಾ.ಬಿ.ಆರ್ ಅಂಬೇಡ್ಕರ್ ಅನುಯಾಯಿಗಳು ಸಮಾಜ ಕಲ್ಯಾಣ ಇಲಾಖೆಯ ವೆಬ್ಸೈಟ್ ಗೆ ಭೇಟಿ ನೀಡಿ ಆಗಸ್ಟ್ 31ರೊಳಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದೆಂದು ಅವರು ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ನ A1 ಆರೋಪಿ ಹಾಗೂ ನಟ ದರ್ಶನ್ ಆಪ್ತೆ ಪವಿತ್ರಾಗೌಡ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಹತ್ಯೆಯಾದ ರೇಣುಕಾಸ್ವಾಮಿ ಪವಿತ್ರಾಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಎಂಬ ಕಾರಣಕ್ಕೆ ರೇಣುಕಾಸ್ವಾಮಿಯನ್ನು ಸಂಚು ರೂಪಿಸಿ ಚಿತ್ರದುರ್ಗದಿಂದ ಬೆಂಗಳೂರಿನ ಪಟ್ಟಣಗೆರೆ ಶೆಡ್ಗೆ ಕರೆತಂದು ಕೊಲೆ ಮಾಡಿರುವ ಪ್ರಕರಣ ಇದಾಗಿದೆ. ಈಗಾಗಲೇ ಕೊಲೆ ಪ್ರಕರಣದ ತನಿಖೆಯು ಮುಕ್ತಾಯ ಹಂತಕ್ಕೆ ಬಂದಿದ್ದು, ಸದ್ಯದಲ್ಲೇ ಚಾರ್ಜ್ಶೀಟ್ ಸಲ್ಲಿಕೆ ಮಾಡುವುದಾಗಿ ಇತ್ತೀಚೆಗೆ ಪೊಲೀಸ್ ಕಮಿಷನರ್ ದಯಾನಂದ್ ಅವರು ಹೇಳಿದ್ದರು.ಚಾರ್ಜ್ಶೀಟ್ ಸಲ್ಲಿಕೆ ಹೊತ್ತಲ್ಲಿ ಪವಿತ್ರಾಗೌಡ ಜಾಮೀನಿಗಾಗಿ ಕೋರ್ಟ್ಗೆ ಮೊರೆ ಹೋಗಿದ್ದಾರೆ. ಕೊಲೆ ಪ್ರಕರಣದ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುರುವ ಆರೋಪಿ ಪವಿತ್ರಾಗೌಡ 72 ದಿನಗಳ ಬಳಿಕ ಹಿರಿಯ ವಕೀಲೆ ರೇನಿ ಸೆಬಾಸ್ಟಿಯನ್ ಅವರ ಮೂಲಕ ಸಿಸಿಹೆಚ್ 57ನೇ ಕೋರ್ಟ್ನಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಕೊಲೆ ಪ್ರಕರಣದಲ್ಲಿ ಒಟ್ಟು 17 ಆರೋಪಿಗಳು ಜೈಲು ಸೇರಿದ್ದು, ಆ ಪೈಕಿ ದರ್ಶನ್ A2 ಆರೋಪಿಯಾಗಿದ್ದಾರೆ. ಕೊಲೆ ಪ್ರಕರಣದ ಆರೋಪದಲ್ಲಿ ಪರಪ್ಪನ ಅಗ್ರಹಾರ…
ಹೆಂಡತಿ ತವರಿಗೆ ಹೋಗಬೇಕು ಎಂದಿದ್ದಕ್ಕೆ ಗಂಡ ಆಕೆಯ ಮೂಗು ಕತ್ತರಿಸಿದ್ದಾನೆ. ಉತ್ತರ ಪ್ರದೇಶದ ಹಾರ್ಡೋಯಿ ಜಿಲ್ಲೆಯ ಬನಿಯಾನಿ ಪುರ್ವಾದಲ್ಲಿ ಈ ಘಟನೆ ನಡೆದಿದೆ. ಭಾನುವಾರ ಮಹಿಳೆ ನಾಳೆ ರಾಖಿ ಹಬ್ಬ ಇದೆ ಸಹೋದರರಿಗೆ ರಾಖಿ ಕಟ್ಟಬೇಕು ತವರಿಗೆ ಹೋಗುತ್ತೇನೆ ಎಂದು ಗಂಡನಿಗೆ ಹೇಳಿದ್ದಾಳೆ. ಇಷ್ಟಕ್ಕೇ ಆಕ್ರೋಶಗೊಂಡ ಗಂಡ ಆಕೆಯ ಮೂಗು ಕತ್ತರಿಸಿದ್ದಾನೆ. 25 ವರ್ಷದ ಅನಿತಾ ಎಂಬಾಕೆಯೇ ಗಂಡನ ದಾಳಿಗೆ ತುತ್ತಾದ ಮಹಿಳೆ.ಅನಿತಾಗೆ ತೀವ್ರ ರಕ್ತಸ್ರಾವ ಆಗುತ್ತಿರುವುದನ್ನು ಕಂಡ ಅಕ್ಕಪಕ್ಕದ ಜನ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.ನಂತರ ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಲಕ್ನೋದ ಟ್ರಾಮಾ ಸೆಂಟರ್ಗೆ ಸ್ಥಳಾಂತರ ಮಾಡಲಾಗಿದೆ. ರಾಹುಲ್ ಎಂಬಾತನೇ ತನ್ನ ಹೆಂಡತಿಯ ಮೂಗು ಕತ್ತರಿಸಿದಾತ. ಗಂಡನ ಕ್ರೌರ್ಯದ ಬಗ್ಗೆ ಅನಿತಾ ವಿವರವಾಗಿ ಹೇಳಿ ಗೋಳು ತೋಡಿಕೊಂಡಿದ್ದಾಳೆ. ಆರೋಪಿ ನಾಪತ್ತೆಯಾಗಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ಕುರಿತು ವಿಡಿಯೋ ಮಾಡಿರುವ ಆ ಮಹಿಳೆ ತನ್ನ ಮೇಲೆ ಗಂಡ ಮಾಡಿದ ದೌರ್ಜನ್ಯದ ಬಗ್ಗೆ ಹೇಳಿಕೊಂಡಿದ್ದಾಳೆ. ತನ್ನ ಪತಿ ತನ್ನ ಮೂಗು ಕತ್ತರಿಸಿದ್ದಾನೆ…
ಯಶವಂತಪುರ ರೈಲು ನಿಲ್ದಾಣದ (Yeshavantpur railway station) ಪ್ಲಾಟ್ಫಾರಂಗಳಲ್ಲಿ ಏರ್-ಕಾನ್ಕೋರ್ಸ್ ಅಳವಡಿಕೆ ಕಾಮಗಾರಿ ಆರಂಭವಾಗಲಿದೆ. ಹೀಗಾಗಿ ನಿಲ್ದಾಣದ 2, 3, 4, 5 ಪ್ಲಾಟ್ಫಾರಂಗಳನ್ನು 15 ದಿನಗಳ ಕಾಲ ಬಂದ್ ಮಾಡಲಾಗುತ್ತದೆ. ಹಾಗೆ ಕೆಲ ರೈಲುಗಳ ಸಂಚಾರವನ್ನು ಬಂದ್ ಮಾಡಲಾಗಿದೆ. ಆಗಸ್ಟ್ 21 ರಿಂದ ಸೆಪ್ಟೆಂಬರ್ 4ರ ವರೆಗೆ 2 ಮತ್ತು 3ನೇ ಪ್ಲಾಟ್ಫಾರಂ ಬಂದ್ ಆಗಲಿದೆ. ನಂತರ ಸೆಪ್ಟೆಂಬರ್ 5 ರಿಂದ 19ರ ವರೆಗೆ 4 ಮತ್ತು 5ನೇ ಪ್ಲಾಟ್ಫಾರಂ ಕ್ಲೋಸ್ ಆಗಲಿದೆ ಎಂದು ನೈಋತ್ಯ ರೈಲ್ವೆ ವಲಯ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ರೈಲು ರದ್ದು ವಿವರ ಈ ಕೆಳಗಿನಂತಿದೆ. 06576 ತುಮಕೂರು-ಕೆಎಸ್‌ಆರ್ ಬೆಂಗಳೂರು ಮತ್ತು 06575 ಕೆಎಸ್‌ಆರ್ ಬೆಂಗಳೂರು-ತುಮಕೂರು ರೈಲು ಆಗಸ್ಟ್ 21 ರಿಂದ 31 ಮತ್ತು ಸೆಪ್ಟೆಂಬರ್ 1 ರಿಂದ 19ರವರೆಗೆ ರದ್ದುಪಡಿಸಲಾಗಿದೆ. ರೈಲು ಸಂಖ್ಯೆ 06574, 06580 ತುಮಕೂರು-ಯಶವಂತಪುರ ರೈಲು ಆಗಸ್ಟ್ 21 ರಿಂದ 31 ಮತ್ತು ಸೆಪ್ಟೆಂಬರ್ 1 ರಿಂದ 19ರವರೆಗೆ ಚಿಕ್ಕಬಾಣಾವರ-ಯಶವಂತಪುರ ನಡುವೆ…
ಒಮ್ಮೆ ಸಿಂಹಳಪುರದ ಅರಸು ವೀರಬಲ್ಲಾಳನು ತನ್ನ ಸಕಲ ಸೈನ್ಯ ತೆಗೆದುಕೊಂಡು ಪಕ್ಕದ ರಾಜ್ಯ ವಿಕ್ರಮಪುರಿ ವಶಪಡಿಸಿಕೊಳ್ಳಲು ತಯಾರು ನಡೆಸಿದ. ಅದರಂತೆ ವಿಕ್ರಮಪುರದ ಗಡಿವರೆವಿಗೂ ಸೈನ್ಯ ತೆಗೆದುಕೊಂಡು ಹೋದ, ಆದರೆ ಇದಕ್ಕೆ ತಕ್ಕ ಉತ್ತರ ಕೊಡಲು ವಿಕ್ರಮಪುರ ಅರಸ ಚಂದ್ರಚೂಡನು ಸರಿಯಾಗಿ ತಯಾರು ಮಾಡಿಕೊಂಡಿದ್ದ. ಮತ್ತು ಅವರ ಆಕ್ರಮಣಕ್ಕಾಗಿ ಕಾಯುತ್ತಿದ್ದ ನಂತರ ವೀರಬಲ್ಲಾಳನು ನೋಡು ಚಂದ್ರಚೂಡ ನೀನಾಗಿಯೇ ಶರಣಾದರೆ ಸರಿ ಇಲ್ಲವಾದರೆ ಆಕ್ರಮಣ ನಡೆಸಬೇಕಾಗುತ್ತದೆ ಮತ್ತು ಗೆಲುವು ನಮ್ಮದಾಗುತ್ತದೆ ಎನ್ನುವಾಗ ಪಕ್ಕದ ಮರದ ಕೊಂಬೆಯಲ್ಲಿದ್ದ ಹಲ್ಲಿ ಲೊಚ್ ಲೊಚ್ ಎಂದು ಲೊಚಗುಟ್ಟಿತು, ಇದನ್ನು ಗಮನಿಸಿದ ರಾಜಪುರೋಹಿತ ಮಹಾರಾಜರೇ ಅವರ ಉತ್ತರಕ್ಕಾಗಿ ಕಾಯುವುದು ಬೇಡ ಹಲ್ಲಿ ಲೊಚಗುಟ್ಟಿದೆ, ಶುಭ ಸಂಕೇತ, ಗೆಲುವು ನಮ್ಮದೇ ಆಕ್ರಮಣ ನಡೆಸಿ ಎಂದಾಗ ಪಲ್ಲಿಯು ಮನದಲ್ಲಿ ಅಯ್ಯೋ ಮೂರ್ಖ ರಾಜಪುರೋಹಿತರೇ ನಾನು ಲೊಚಗುಟ್ಟಿದ್ದು ನನಗೆ ದಣಿವಾಗಿ ನೀರು ಬೇಕಿತ್ತು ಅಷ್ಟೇ ನಿಮಗೆ ಶುಭ ಸಂಕೇತ ನೀಡಲು ಅಲ್ಲ ಏಕೆ ಹೀಗೆ ಯೋಚಿಸಿದಿರಿ ಎನ್ನುವಾಗಲೇ ರಾಜ ವೀರಭಲ್ಲಾಳ ಹೌದ ರಾಜಪುರೋಹಿತರೆ ಹಾಗಾದರೆ…
ಬೀದರ್: ದ್ವಿಚಕ್ರ ವಾಹನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಧನ್ನೂರಾ ಪೊಲೀಸರು 9 ಲಕ್ಷಕ್ಕೂ ಅಧಿಕ ಮೌಲ್ಯದ ದ್ವಿಚಕ್ರ ವಾಹನ ಸಹಿತ 3 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಮೇಲಾಧಿಕಾರಿಗಳ ಮಾರ್ಗದರ್ಶನದಂತೆ, ಭಾಲ್ಕಿ ಉಪ ವಿಭಾಗದ ಶಿವಾನಂದ್ ಪವಾಡ ಶೆಟ್ಟಿ, ಡಿವೈಎಸ್ ಪಿ ಭಾಲ್ಕಿ, ಗುರುಪಾದ, ಸಿಪಿಐ ಭಾಲ್ಕಿ ಗ್ರಾಮೀಣ ವೃತ್ತರವರ ನೇತೃತ್ವದಲ್ಲಿ ವಿಶ್ವರಾಧ್ಯ, ವೀರಶೆಟ್ಟಿ ಪಾಟೀಲ್, ಪಿಎಸ್ ಐ ಧನ್ನೂರಾ ಪೊಲೀಸ್ ಠಾಣೆ ರವರನ್ನೊಳಗೊಂಡ ನೂರಿತ ಅಧಿಕಾರಿ ಸಿಬ್ಬಂದಿ ತಂಡ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ, 9,35,000 ರೂ. ಮೌಲ್ಯದ 16 ದ್ವಿಚಕ್ರವಾಹನ ಸಹಿತ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ವರದಿ: ಅರವಿಂದ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ಮಧುಗಿರಿ: ಕೇಂದ್ರ ಸರ್ಕಾರದ ಕೈ ಗೊಂಬೆಯಾಗಿ ಕೆಲಸ ಮಾಡುತ್ತಿರುವ ರಾಜ್ಯಪಾಲರು ಹಾಗೂ ವಿಪಕ್ಷಗಳಿಗೆ ಬುದ್ಧಿ ಕಲಿಸುವ ಕಾಲ ಬರಲಿದೆ ಎಂದು ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ ತಿಳಿಸಿದರು. ಪಟ್ಟಣದ ಉಪ ವಿಭಾಗಾಧಿಕಾರಿಗಳ ಕಾರ್ಯಾಲಯದ ಮುಂಭಾಗ ತಾಲೂಕು ಕಾಂಗ್ರೆಸ್ ಸಮಿತಿ ವತಿಯಿಂದ ರಾಜ್ಯಪಾಲರ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದರು. ರಾಜ್ಯದಲ್ಲಿ ವಿವಿಧ ಜನಪರ ಯೋಜನೆಗಳನ್ನು ಜಾರಿಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಸುಳ್ಳು ಆರೋಪ ಮಾಡಿ ತಪಿತಸ್ಥ ಎಂದು ಬಿಂಬಿಸಲು ಬಿಜೆಪಿಯವರು ರಾಜ್ಯಪಾಲರನ್ನು ಬಳಸಿಕೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರವರ ಮಾರ್ಗದರ್ಶನದಲ್ಲಿ ಇಡೀ ರಾಜ್ಯದಲ್ಲಿ ಇಂದು ಶಾಂತಿಯುತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪಕ್ಷಪಾತ ಧೋರಣೆ ಅನುಸರಿಸುತ್ತಿರುವ ರಾಜ್ಯಪಾಲರು ದೂರುದಾರರು ಅರ್ಜಿ ಕೊಟ್ಟಾಕ್ಷಣ ಮುಖ್ಯಮಂತ್ರಿಗಳಿಗೆ ನೋಟಿಸ್ ನೀಡಿದ್ದಾರೆ. ಉನ್ನತ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳ ವಿರುದ್ಧ ದೂರು ನೀಡಿದರೆ ತನಿಕಾ ಸಂಸ್ಥೆಗಳ ಮೂಲಕ ತನಿಖೆ ನಡೆಸಿ ನೋಟಿಸ್ ನೀಡಬೇಕು. ಇಂತಹ ರಾಜ್ಯಪಾಲರನ್ನು ಬಳಸಿಕೊಂಡು ಮುಖ್ಯಮಂತ್ರಿಗಳಿಗೆ ಮಸಿ ಬಳೆಯಲು ಹೊರಟಿದ್ದು,…
ತುಮಕೂರು ಜಿಲ್ಲೆಯ, ಪಾವಗಡ ತಾಲೂಕು, ನಿಡಗಲ್ಲು ಹೋಬಳಿ, ಕ್ಯಾತಗಾನಹಳ್ಳಿ ಗ್ರಾಮದಿಂದ ಚಿಕ್ಕತಿಮ್ಮನಹಟ್ಟಿ ಗ್ರಾಮಕ್ಕೆ ಹೋಗುವ ರಸ್ತೆ 35ಕ್ಕೂ ಹೆಚ್ಚು ವರ್ಷಗಳಿಂದ ರಸ್ತೆಗೆ ಟಾರು ಹಾಕದೆ ಜನಸಾಮಾನ್ಯರು ಓಡಾಡಲು ಬಹಳಷ್ಟು ತೊಂದರೆ ಆಗುತ್ತಿದೆ ಎಂದು ಭಾರತೀಯ ಪರಿವರ್ತನ ಸಂಘದ ತುಮಕೂರು ಜಿಲ್ಲಾಧ್ಯಕ್ಷ ಚಿಕ್ಕತಿಮ್ಮನಹಟ್ಟಿ ಗ್ರಾಮದ ಎಚ್. ಕೆಂಚರಾಯ ಹೇಳಿದ್ದಾರೆ. ಈ ರಸ್ತೆಯಲ್ಲಿ ನಿಡಗಲ್ಲು, ದೇವರಾಯನರೊಪ್ಪ, ಚಿಕ್ಕತಿಮ್ಮನಹಟ್ಟಿ, ನ್ಯಾಯದಗುಂಟೆ, ಇತರೆ ಗ್ರಾಮದವರು ಈ ರಸ್ತೆಯಲ್ಲಿ ದಿನನಿತ್ಯವೂ ಸಂಚಾರ ಮಾಡುತ್ತಾರೆ, ಇಲ್ಲಿನ ರಾಜಕಾರಣಿಗಳು ಇದನ್ನು ನಿರ್ಲಕ್ಷ ಮಾಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತೀಯ ಪರಿವರ್ತನ ಸಂಘದ ತುಮಕೂರು ಜಿಲ್ಲಾಧ್ಯಕ್ಷರಾದ, ರವರು ಪಾವಗಡ ಹಾಲಿ ಶಾಸಕರಾದ ಎಚ್.ವಿ.ವೆಂಕಟೇಶ್ ಅವರು. ಈ ರಸ್ತೆಗೆ ಹೊಸದಾಗಿ ಟಾರು ಹಾಕಿಸಿ ರಸ್ತೆ ನಿರ್ಮಾಣ ಮಾಡಿಕೊಡಬೇಕೆಂದು BPS ವತಿಯಿಂದ ಇದೇ ವೇಳೆ ಅವರು ಒತ್ತಾಯ ಮಾಡಿದ್ದಾರೆ. ವರದಿ: ನಂದೀಶ್ ನಾಯ್ಕ, ಪಾವಗಡ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್…
ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಮೆಟ್ರೋದಿಂದ ಇಳಿಯುವಾಗ ಓರ್ವ ಪ್ರಯಾಣಿಕ ಆಯತಪ್ಪಿ ಬಿದ್ದಿದ್ದು, ಭದ್ರತಾ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ಪ್ರಾಣಾಪಾಯದಿಂದ ಪಾರಾಗಿರುವಂತಹ ಘಟನೆ ಇಂದು ಮಧ್ಯಾಹ್ನ 1.13ರ ಸುಮಾರಿಗೆ ಹಸಿರು ಮಾರ್ಗದಲ್ಲಿ ನಡೆದಿದೆ. ಮೆಟ್ರೋದಿಂದ ಇಳಿಯುವಾಗ ಆಯತಪ್ಪಿ ರೈಲು ಹಳಿಗೆ ಬಿದ್ದ ವ್ಯಕ್ತಿ ಅದೃಷ್ಟವಶಾತ್ ಬಚಾವ್ ಆಗಿರುವಂತಹ ಘಟನೆ ಮಧ್ಯಾಹ್ನ 1.13ರ ಸುಮಾರಿಗೆ ನಗರದ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದ ಹಸಿರು ಮಾರ್ಗದಲ್ಲಿ ನಡೆದಿದೆ. ಭದ್ರತಾ ಸಿಬ್ಬಂದಿ ತಕ್ಷಣ ಎಮರ್ಜೆನ್ಸಿ ಬಟನ್ ಉಪಯೋಗಿಸಿದ್ದರಿಂದ ಪ್ರಯಾಣಿಕ ಬಚಾವ್ ಆಗಿದ್ದಾರೆ. ಘಟನೆಯಿಂದಾಗಿ ಸುಮಾರು 15 ನಿಮಿಷಗಳ ಕಾಲ ಮೆಟ್ರೋ ಸೇವೆ ಸ್ಥಗಿತವಾಗಿತ್ತು. ಈ ವೇಳೆ ತಕ್ಷಣ ಭದ್ರತಾ ಸಿಬ್ಬಂದಿಗಳು ಎಮರ್ಜೆನ್ಸಿ ಬಟನ್ ಉಪಯೋಗಿಸಿದ್ದಾರೆ. ಪವರ್ ಸಪ್ಲೈ ಆಫ್ ಮಾಡಿದ್ದರಿಂದ ಮೆಟ್ರೋ ಪ್ರಯಾಣಿಕರು ಬಚಾವಾಗಿದ್ದಾರೆ. ಈ ವೇಳೆ ಹಳಿಗೆ ಬಿದ್ದರೂ ಯಾವುದೇ ತೊಂದರೆ ಇಲ್ಲದೆ ಪ್ರಯಾಣಿಕ ಪಾರಾಗಿದ್ದಾನೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ…