Subscribe to Updates
Get the latest creative news from FooBar about art, design and business.
- ಕೃಷಿ ಲೋಕ /ಕಾಡು ಹಣ್ಣು.. | ಕೋಳಿ ಜುಟ್ಟು ಹಣ್ಣು
- ಮಗುವಿನ ರೋಗನಿರೋಧಕ ಶಕ್ತಿ ಹೆಚ್ಚಳಕ್ಕೆ ಸ್ತನ್ಯಪಾನ ಅತ್ಯಗತ್ಯ: ಸಿ. ದೀಪಾ ಕರೆ
- ತುಮಕೂರಲ್ಲಿ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆಗೆ ಯಶಸ್ವಿ ತೆರೆ
- ತುಮಕೂರು: 30ನೇ ವಾರ್ಡಿನ ಗಾರೇನರಸಯ್ಯ ನಕಟ್ಟೆ ಸ್ವಚ್ಛತಾ ಕಾರ್ಯ: ಪಾಲಿಕೆ ಸಿಬ್ಬಂದಿ, ನಾಗರಿಕ ಹಿತರಕ್ಷಣಾ ಸಮಿತಿ ಭಾಗಿ
- ಲಿಂಕ್ ಕೆನಾಲ್, ಭೂಸ್ವಾಧೀನ ವಿರೋಧಿಸಿ ಆ. 6ರಿಂದ ಮೂರು ದಿನಗಳ ಸತ್ಯಾಗ್ರಹ: ಎಐ ಡೇಟಾ ಕೇಂದ್ರಗಳಿಂದ ಪರಿಸರ, ಉದ್ಯೋಗಕ್ಕೆ ಆತಂಕ ಆರೋಪ
- ಸಂತಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಾ. ಮಹಾಂತ ಶಿವಯೋಗಿ ಜಯಂತಿ ಹಾಗೂ ವ್ಯಸನ ಮುಕ್ತ ದಿನಾಚರಣೆ
- ತುಮಕೂರು: ದೇವರಾಯಪಟ್ಟಣದಲ್ಲಿ ಚಿರತೆ ಹಾವಳಿ, ಇಸ್ರೋ ಆವರಣದಲ್ಲಿ ಕುರಿ ಬಲಿ – ಬೋನು ಅಳವಡಿಕೆ
- ಗೃಹಲಕ್ಷ್ಮಿ, ಯುವನಿಧಿ: 323 ಕೋಟಿ ರೂ. ಬಿಡುಗಡೆ
Author: admin
ಬೀದರ್: ಮೀಸಲಾತಿ ರದ್ದುಪಡಿಸುವ ಹೇಳಿಕೆ ನೀಡಿರುವ ರಾಹುಲ್ ಗಾಂಧಿಯನ್ನು ಉಚ್ಛಾಟಿಸುವ ಹೇಳಿಕೆಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಲಿ ಎಂದು ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸವಾಲು ಹಾಕಿದ್ದಾರೆ. ರಾಹುಲ್ ಗಾಂಧಿಯನ್ನು ಉಚ್ಛಾಟಿಸುವ ಹೇಳಿಕೆ ನೀಡುವ ಮೂಲಕ ತಾವು ಗಾಂಧಿ ಕುಟುಂಬದ ವಾಚ್ ಮ್ಯಾನ್ ಅಲ್ಲ ಎನ್ನುವುದನ್ನು ಸಾಬೀತು ಪಡಿಸಲಿ ಎಂದು ಅವರು ಸವಾಲೆಸೆದಿದ್ದಾರೆ. ರಾಹುಲ್ ಗಾಂಧಿ ಹೇಳಿಕೆ ವಿರುದ್ಧ ನಗರದಲ್ಲಿ ರವಿವಾರ ಜಿಲ್ಲಾ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಮೀಸಲಾತಿಯ ಸೌಲಭ್ಯದಲ್ಲಿ ಅಧಿಕಾರವನ್ನು ಅನುಭವಿಸುತ್ತ ಬಂದಿರುವ ಖರ್ಗೆ, ಈಗ ಎಐಸಿಸಿ ಅಧ್ಯಕ್ಷರೂ ಆಗಿದ್ದಾರೆ. ಒಂದು ಗಾಂಧಿ ಪರಿವಾರದ ಮರ್ಜಿಯಲ್ಲಿ ನೀವು ಇಲ್ಲ ಎನ್ನುವುದಾದರೇ, ರಾಹುಲ್ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಲಿ ಎಂದು ಆಗ್ರಹಿಸಿದರು. ದೇಶದಲ್ಲಿ ಮೀಸಲಾತಿ ಸೌಲಭ್ಯ ತಂದದ್ದು ರಾಹುಲ್ ಅವರ ತಂದೆ ಅಥವಾ ಮುತ್ತಜ್ಜನಲ್ಲ. ನಮ್ಮ ತಂದೆ ಡಾ.ಅಂಬೇಡ್ಕರ ಅವರ ಹೋರಾಟದ ಪ್ರತಿಫಲದಿಂದ ಇದು ಸಿಕ್ಕಿರುವುದು. ದಲಿತ, ಹಿಂದುಳಿದವರ ವಿರೋಧಿ ಗಾಂಧಿ ಕುಟುಂಬದ ಮತ್ತು ಕಾಂಗ್ರೆಸ್ನ ಪರಂಪರೆಯಾಗಿದೆ.…
ನವದೆಹಲಿ: ಗಾಯಗೊಂಡು ರಸ್ತೆ ಬದಿಯಲ್ಲಿ ಬಿದ್ದಿದ್ದ ನವಿಲನ್ನು ರಕ್ಷಿಸುವ ಬದಲು ಜನರು, ಜೀವಂತವಾಗಿರುವಾಗಲೇ ಅದರ ಗರಿಗಳನ್ನು ಕಿತ್ತು ತಮ್ಮ ಮನೆಗಳಿಗೆ ಕೊಂಡೊಯ್ಯುತ್ತಿರುವ ಅಮಾನವೀಯ ಘಟನೆಯೊಂದು ನಡೆದಿದ್ದು, ಈ ಸಂಬಂಧ ಅಮಾನವೀಯ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನವಿಲಿನ ದೇಹದಲ್ಲಿರುವ ಪ್ರತಿಯೊಂದು ಗರಿಗಳನ್ನೂ ಕಿತ್ತ ಜನರು ನವಿಲಿನ ದೇಹವನ್ನು ರಸ್ತೆಯಲ್ಲಿ ಎಸೆದಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. @anitavladivoski X ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ನೋಡಿ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತಮ್ಮ ವಿನೋದಕ್ಕಾಗಿ ಜನರು ಒಂದು ಮೂಕ ಪಕ್ಷಿಗೆ ಈ ರೀತಿಯಾಗಿ ಹಿಂಸೆ ಕೊಡುತ್ತಿದ್ದಾರೆ ಎಂದು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆ ಎಲ್ಲಿ ನಡೆದಿರುವುದು ಎನ್ನುವುದನ್ನು ಪತ್ತೆ ಹಚ್ಚಿ ದುಷ್ಕೃತ್ಯ ನಡೆಸಿರುವವರ ವಿರುದ್ಧ ಕಾನೂನು ರೀತಿಯ ಕ್ರಮಕೈಗೊಳ್ಳಬೇಕು ಅಂತ ವ್ಯಾಪಕ ಒತ್ತಾಯ ಕೇಳಿ ಬಂದಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149…
ಬೀಜಿಂಗ್: ಸೂಪರ್ ಮಾರ್ಕೆಟ್ ನಿಂದ ತಂದ ಮೂನ್ ಕೇಕ್ ನಲ್ಲಿ ಮನುಷ್ಯನ ಹಲ್ಲು ಪತ್ತೆಯಾಗಿರುವ ಘಟನೆ ಚೀನಾದ ಜಿಯಾಂಗ್ಸುವಿನ ಚಾಂಗ್ ಝೌನನಲ್ಲಿ ನಡೆದಿದೆ. ಇಲ್ಲಿನ ಸೂಪರ್ ಮಾರ್ಕೆಟ್ ಸ್ಯಾಮ್ಸ್ ಕ್ಲಬ್ ನಿಂದ ಕುಟುಂಬವೊಂದು ನಾನ್ ವೆಜ್ ಮೂನ್ಕೇಕ್ ಖರೀದಿ ಮಾಡಿತ್ತು. ಕೇಕ್ ಮನೆಗೆ ತೆಗೆದುಕೊಂಡು ಕುಟುಂಬದ ಸದಸ್ಯರು ಕುಳಿತುಕೊಂಡು ತಿನ್ನುವ ವೇಳೆ ಕೇಕ್ ನಲ್ಲಿ ಮನುಷ್ಯನ ಹಲ್ಲು ಪತ್ತೆಯಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಕುಟುಂಬಸ್ಥರು, ನಾನ್ ವೆಜ್ ತುಂಬಿರುವ ಮೂನ್ ಕೇಕ್ ನಲ್ಲಿ ಮನುಷ್ಯನ ಹಲ್ಲು ಪತ್ತೆಯಾಗಿದೆ. ಇದು ನಮ್ಮ ಕುಟುಂಬದ ಸದಸ್ಯರದ್ದಲ್ಲ ಎಂದು ಬರೆದುಕೊಂಡಿದೆ. ಸದ್ಯ ಘಟನೆಯ ಬಗ್ಗೆ ಕುಟುಂಬ ಪೊಲೀಸರಿಗೆ ದೂರು ನೀಡಿದೆ. ಈ ಘಟನೆಯ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ತಮ್ಮದೇ ಆದ ಅಭಿಪ್ರಾಯಗಳನ್ನ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ಹೀಗೆ ಕಾಮೆಂಟ್ ಮಾಡಿದ್ದಾರೆ: ಮೂನ್ ಕೇಕ್ ನಲ್ಲಿ ನಾನ್ ವೆಜ್ ಮಾತ್ರ ಇರುತ್ತದೆ ಎಂದು ಭಾವಿಸಿದ್ರೆ ಕ್ಯಾಲ್ಸಿಯಂ ಕೂಡ ಇರುತ್ತದೆ ಎಂದು…
ಮುಂಬೈ: ಹಿಂದಿ ಬಿಗ್ ಬಾಸ್ -18 (Bigg Boss 18) ಆರಂಭಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಈ ಬಾರಿಯೂ ನಟ ಸಲ್ಮಾನ್ ಖಾನ್ ಅವರೇ ಬಿಗ್ ಬಾಸ್ ಶೋ ನಡೆಸಿಕೊಡಲಿದ್ದಾರೆ. ಆದ್ರೆ ಈ ಬಾರಿ ಸ್ಪರ್ಧಿಯೊಬ್ಬರು ಅತೀ ಹೆಚ್ಚು ಸಂಭಾವನೆ ಪಡೆದು ಬಿಗ್ ಬಾಸ್ ಶೋನಲ್ಲಿ ಭಾಗಿಯಾಗಲಿದ್ದಾರಂತೆ ಅವರು ಯಾರು ಅಂತ ಕುತೂಹಲ ಇದ್ರೆ ಮುಂದೆ ಓದಿ… ಬಿಗ್ ಬಾಸ್ –18ನಲ್ಲಿ ಸ್ಪರ್ಧಿಯೊಬ್ಬರಿಗೆ ಅತಿ ಹೆಚ್ಚು ಸಂಭಾವನೆ ನೀಡುವ ಕುರಿತು ಮಾತುಕತೆ ಆಗಿದೆ. ಹೆಚ್ಚಿನ ಸ್ಪರ್ಧಿಗಳಿಗೆ ವಾರಕ್ಕೆ 11ರಿಂದ 12 ಲಕ್ಷ ಸಂಭಾವನೆ ಇದ್ದರೆ. ಈ ಸ್ಪರ್ಧಿಗೆ 4-5 ಕೋಟಿ ರೂ. ಸಂಭಾವನೆಯ ಆಫರ್ ನೀಡಲಾಗಿದೆಯಂತೆ! ಕಿರುತೆರೆ ನಟ ಧೀರಜ್ ಧೂಪರ್ ಈ ಬಿಗ್ ಆಫರ್ ಪಡೆದವರಾಗಿದ್ದಾರೆ. ಈ ಒಪ್ಪಂದ ಓಕೆ ಆದರೆ ಅವರು ಬಿಗ್ ಬಾಸ್ ಇತಿಹಾಸದಲ್ಲೇ ಅತೀ ಹೆಚ್ಚು ಸಂಭಾವನೆ ಸ್ಪರ್ಧಿ ಇವರಾಗಲಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು…
ಕೋಟಾ: ಟ್ರಕ್ ವೊಂದು ವ್ಯಾನ್ ಗೆ ಡಿಕ್ಕಿ ಹೊಡೆದ ಪರಿಣಾಮ ಆರು ಯಾತ್ರಾರ್ಥಿಗಳು ಸಾವನ್ನಪ್ಪಿ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಜಸ್ಥಾನದ ಬುಂದಿ ಜಿಲ್ಲೆಯಲ್ಲಿ ಭಾನುವಾರ ಮುಂಜಾನೆ ನಡೆದಿದೆ. ಮಧ್ಯಪ್ರದೇಶದ ದೇವಾಸ್ ಜಿಲ್ಲೆಯ ಒಂಬತ್ತು ಯಾತ್ರಾರ್ಥಿಗಳು ಸಿಕರ್ ಜಿಲ್ಲೆಯ ಖತು ಶ್ಯಾಮ್ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ವೇಗವಾಗಿ ಬಂದ ಟ್ರಕ್ ವ್ಯಾನ್ ಗೆ ಡಿಕ್ಕಿ ಹೊಡೆದಿದೆ. ಮೃತರು 16–40 ವರ್ಷ ವಯೋಮಾನದವರಾಗಿದ್ದು, ಮದನ್ ನಾಯಕ್, ಮಂಗಿಲಾಲ್ ನಾಯಕ್, ಮಹೇಶ್ ನಾಯಕ್, ರಾಜೇಶ್ ಮತ್ತು ಪುನಂ ಎಂದು ಗುರುತಿಸಲಾಗಿದೆ. ಮೃತರಲ್ಲಿ ಒಬ್ಬರ ಗುರುತು ಇನ್ನೂ ಪತ್ತೆಯಾಗಿಲ್ಲ. ಟ್ರಕ್ ರಸ್ತೆಯ ಡಿವೈಡರ್ ದಾಟಿ ತಪ್ಪು ಬದಿಗೆ ತಿರುಗಿ ವ್ಯಾನ್ಗೆ ಡಿಕ್ಕಿ ಹೊಡೆದಿದೆ ಎಂದು ಹಿಂದೋಳಿ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಪವನ್ ಮೀನಾ ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ವಿಜಯಪುರ: ಬಿಜೆಪಿ ಶಾಸಕ ಮುನಿರತ್ನ ಆಡಿಯೋ ವೈರಲ್ ವಿಚಾರವಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದಾರೆ. ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ನಕಲಿ ಆಡಿಯೋಗಳನ್ನು ಸೃಷ್ಟಿಸುತ್ತಾರೆ. ಹಾಸ್ಯ ಕಲಾವಿದನೊಬ್ಬನಿದ್ದಾನೆ. ಎಷ್ಟು ಚೆಂದ ಮಿಮಿಕ್ರಿ ಮಾಡ್ತಾರೆ….ಎಂದಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಹಿಂದೂಗಳು ಬೇಕಾಗಿಲ್ಲ, ಮುಸ್ಲಿಮರು ಬೇಕಾಗಿದ್ದಾರೆ. ಯಾದಗಿರಿಯಲ್ಲಿ ಪಿಎಸ್ ಐ ಆತ್ಮಹತ್ಯೆಯಾಯ್ತು. ದಲಿತ ಸಂಘಟನೆಗಳು ಎಲ್ಲಿದ್ದಾವೆ? ಕೆಲ ಮುಖಂಡರು ಪೇಯ್ಡ್ ಸರ್ವೆಂಟ್ ಇದ್ದಾರೆ ಎಂದರು. ಪೇಟಿಎಂ ಇದ್ದಂತೆ ಹಣ ಹಾಕಿದ ಕೂಡಲೇ ಕೆಲ ಸಂಘಟನೆಗಳು ಮಾತನಾಡುತ್ತವೆ. ಹಣ ಕಡಿಮೆಯಾಯ್ತು ಎಂದರೆ ಕಾಂಗ್ರೆಸ್ ವಿರುದ್ಧ ಮಾತನಾಡುತ್ತವೆ. ರಾತ್ರಿ ಪೇಮೆಂಟ್ ಆಯ್ತು ಎಂದರೆ ಹೋರಾಟ ಹಿಂಪಡೆಯಲಾಯ್ತು ಅಂತಾರೆ ಎಂದು ಕಿಡಿಕಾರಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ಗರ್ಭಿಣಿಯಾಗಲು ಎಷ್ಟು ಬಾರಿ ಲೈಂಗಿಕ ಕ್ರಿಯೆ ನಡೆಸಬೇಕು ಎನ್ನುವುದು ಸಾಕಷ್ಟು ದಂಪತಿಗಳ ಅನುಮಾನವಾಗಿರುತ್ತದೆ. ಈ ಬಗ್ಗೆ ನಡೆಸಲಾದ ಅಧ್ಯಯನವೊಂದು ಏನು ಹೇಳಿದೆ ಅಂತ ನೋಡೋಣ ಬನ್ನಿ… 1,194 ಪೋಷಕರ ಮೇಲೆ ನಡೆಸಿದ ಸಮೀಕ್ಷೆಯಲ್ಲಿ ಸಾಕಷ್ಟು ದಂಪತಿಗಳು ಪೋಷಕರಾಗಲು ಪ್ರಯತ್ನಿಸುವಾಗ ತಿಂಗಳಿಗೆ 13 ಬಾರಿ ಲೈಂಗಿಕತೆಯನ್ನು ಹೊಂದಿದ್ದರು ಎಂದು ಉತ್ತರಿಸಿದ್ದಾರೆ. ಸಂಭೋಗ ಎನ್ನುವುದು ಮೋಜಿನ ಸಂಗತಿ ಎನಿಸಿದರೂ, ಪಾಸಿಟಿವ್ ರಿಪೋರ್ಟ್ ಪಡೆಯಲು ಆಗದೇ ಸಾಕಷ್ಟು ಪೋಷಕರು ಆತಂಕ ಮತ್ತು ಒತ್ತಡಕ್ಕೆ ಸಿಲುಕಲು ಕಾರಣವಾಗುತ್ತದೆ. ಕೆಲವರು ಗರ್ಭ ಧರಿಸಲು ಲೈಂಗಿಕ ಕ್ರಿಯೆ ನಡೆಸುವುದು ಒಂದು ಕೆಲಸ ಎಂಬಂತಾಗಿತ್ತು ಎಂದು ಹೇಳಿದ್ದಾರಂತೆ. ಸಾಕಷ್ಟು ಜನರಿಗೆ ಅತಿ ಸುಲಭವಾಗಿ ಗರ್ಭ ಧರಿಸಲು ಸಾಧ್ಯವಾಗುತ್ತದೆ. ಆದರೆ ಕೆಲವರು ಗರ್ಭ ಧರಿಸಬೇಕಾದರೆ, ಸಾಹಸವೇ ನಡೆಯಬೇಕಾಗಿರುತ್ತದೆ. ಯಾಕೆಂದರೆ ಒಬ್ಬರ ದೇಹದ ಆರೋಗ್ಯಕ್ಕೂ ಮತ್ತೊಬ್ಬರ ದೇಹದ ಆರೋಗ್ಯಕ್ಕೂ ವ್ಯತ್ಯಾಸಗಳಿರುತ್ತವೆ. ಕೆಲವರು ಒಂದು ಬಾರಿ ಸೆಕ್ಸ್ ನಡೆಸಿದರೂ ಗರ್ಭ ಧರಿಸುತ್ತಾರೆ. ಆದ್ರೆ, ಈ ಸಮೀಕ್ಷೆಯಲ್ಲಿ ಗರ್ಭ ಧರಿಸಲು ಸಾಕಷ್ಟು ಕಷ್ಟಗಳನ್ನು ಎದುರಿಸಿದ ಪೋಷಕರು ತಮ್ಮ…
ಯಾದಗಿರಿ: ಸ್ನೇಹಿತರೊಂದಿಗೆ ಸೆಕ್ಸ್ ಗೆ ಒಪ್ಪದ ಪತ್ನಿಯನ್ನು ಪತಿಯೊಬ್ಬ ಬರ್ಬರವಾಗಿ ಹತ್ಯೆ ನಡೆಸಿರುವ ಘಟನೆ ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಹುಣಸಗಿಯಲ್ಲಿ ನಡೆದಿದೆ. ಗಂಗನಾಳ ಗ್ರಾಮದ ಮಹಿಳೆ ಕಳೆದ ಜುಲೈ 25 ರಂದು ಗಂಡನ ಜೊತೆ ಮಲಗಿದ್ದ ವೇಳೆ ಮೃತಪಟ್ಟಿದ್ದರು. ಮೃತ ಮಹಿಳೆಯ ಸಹೋದರ ತಂಗಿಯ ಸಾವಿಗೆ ಅನುಮಾನ ವ್ಯಕ್ತಪಡಿಸಿ ಗೋಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತಂಗಿಯ ಮೊಬೈಲ್ ಗಮನಿಸಿದಾಗ ಕಾಲ್ ರೆಕಾರ್ಡಿಂಗ್ ನಲ್ಲಿ ಭೀಮಣ್ಣ ಭಾಗಲೇರ ಪತ್ನಿಗೆ ಕಿರುಕುಳ ನೀಡಿರುವುದು ಪತ್ತೆಯಾಗಿದೆ. ನೀನು ಬೇರೆಯವರ ಜೊತೆಗೆ ಸೆಕ್ಸ್ ಮಾಡಬೇಕು ಇದರಿಂದ ನನಗೆ ಖುಷಿಯಾಗುತ್ತದೆ, ಮಕ್ಕಳು ಆಗುತ್ತವೆ, ದುಡ್ಡು ಬರುತ್ತದೆ, ಸಾಲ ತೀರುತ್ತದೆ. ನೀನು ಇದಕ್ಕೆ ಒಪ್ಪದಿದ್ದರೆ ಕೊಲೆ ಮಾಡುವುದಾಗಿ ಭೀಮಣ್ಣ ಭಾಗಲೇರ ಪತ್ನಿಗೆ ಬೆದರಿಕೆ ಹಾಕಿದ್ದಾನೆ. ಸದ್ಯ ಆರೋಪಿ ಆರೋಪಿ ಭೀಮಣ್ಣ ಭಾಗಲೇರನನ್ನು ಪೊಲೀಸರು ಬಂಧಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್…
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರಿದ್ದ ಕಾರ್ಯಕ್ರಮದಲ್ಲಿ ಮತ್ತೆ ಭದ್ರತಾ ವೈಫಲ್ಯವಾಗಿದೆ. ವ್ಯಕ್ತಿಯೊಬ್ಬ ವೇದಿಕೆಗೆ ನುಗ್ಗಿ ಬಂದು ಶಾಲನ್ನು ವೇದಿಕೆಗೆ ಎಸೆದ ಘಟನೆ ನಡೆದಿದೆ. ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಇಂದು ಚಾರಿತ್ರಿಕ ಮಾನವ ಸರಪಳಿ ಚಳವಳಿಯನ್ನು ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್ ನಲ್ಲಿ ಉದ್ಘಾಟಿಸಿದರು. ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ವ್ಯಕ್ತಿಯೊಬ್ಬ ವೇದಿಕೆಗೆ ಜಂಪ್ ಮಾಡಿದ್ದಾನೆ. ಶಾಲುಗಳನ್ನು ಹಾಕಿಕೊಂಡಿದ್ದ ವ್ಯಕ್ತಿ ಏಕಾಏಕಿ ವೇದಿಕೆಗೆ ನುಗ್ಗಿ ಬಂದಿದ್ದಾನೆ. ಈ ವೇಳೆ ಎಚ್ಚೆತ್ತ ಭದ್ರತಾ ಸಿಬ್ಬಂದಿ, ಪೊಲೀಸರು ಯುವಕನನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಯುವಕ ತನ್ನ ಬಳಿ ಇದ್ದ ಶಾಲನ್ನು ತೆಗೆದು ಸಿಎಂ ಅತ್ತ ಎಸೆದು ಹೈಡ್ರಾಮ ಮಾಡಿದ್ದಾನೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ತಿಪಟೂರು: ತಿಪಟೂರು ನಗರಕ್ಕೆ ಕುಲುಷಿತ ಕುಡಿಯುವ ನೀರು ಸರಬರಾಜಾಗುತ್ತಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಈಚನೂರು ಕೆರೆಗೆ ಶಾಸಕ ಷಡಕ್ಷರಿ, ನಗರಸಭೆ ಅಧ್ಯಕ್ಷೆ ಯಮುನಾ ಧರಣೇಶ್, ನಗರ ಸಭೆ ಆಯುಕ್ತ ವಿಶ್ವೇಶ್ವರಯ್ಯ ಬದರಗಡೆ ಹಾಗೂ ನಗರಸಭೆ ಸದಸ್ಯರುಗಳಾದ ಯೋಗೀಶ್, ಮಹೇಶ್ ಮತ್ತು ಸುಜಿತ್ ಭೂಷಣ್ ಹಾಗೂ ಧರಣೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಶಾಸಕ ಷಡಕ್ಷರಿ, ನಾವು ಸ್ಥಳ ಪರಿಶೀಲನೆ ಮಾಡಿದಾಗ ಇಲ್ಲಿ ಯು ಜಿ ಡಿ ನೀರು ಕೆರೆಗೆ ನೇರವಾಗಿ ಸೇರುತ್ತಿಲ್ಲ. ಅಲ್ಲಿ ಅಡ್ಡ ಬದು ನಿರ್ಮಾಣ ಮಾಡಲಾಗಿದೆ. ಅತಿವೃಷ್ಟಿ ಮತ್ತು ಪ್ರಕೃತಿ ವಿಕೋಪವಾದಾಗ ಇಂತಹ ಸಣ್ಣಪುಟ್ಟ ಸಮಸ್ಯೆಗಳು ಸರ್ವೇಸಾಮಾನ್ಯ ಆದುದರಿಂದ ಮಳೆಗಾಲದಲ್ಲಿ ಇಂತಹ ಸಣ್ಣಪುಟ್ಟ ಘಟನೆಗಳು ನಡೆದಿರಬಹುದು. ನಾವು ಇಂದಿನಿಂದಲೇ ಇದಕ್ಕೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ನಾನು ಈಚನೂರು ಗ್ರಾಮಸ್ಥರನ್ನು ಕೇಳಿದಾಗ ಅವರು ನನಗೆ ಯು ಜಿ ಡಿ ನೀರಿನ ಯಾವುದೇ ಸಮಸ್ಯೆ ಬಗ್ಗೆ ನನ್ನ ಬಳಿ ಅವರು ಹೇಳಲಿಲ್ಲ. ಆದರೆ ನಾನು ಅದರ…