Subscribe to Updates
Get the latest creative news from FooBar about art, design and business.
- ಭೀಕರ ರಸ್ತೆ ಅಪಘಾತ: ಟಾಟಾ ಏಸ್ ಹರಿದು ಇಬ್ಬರು ಯುವಕರು ಸಾವು, ಹೋಟೆಲ್ ಗೆ ನುಗ್ಗಿದ ವಾಹನ!
- ಕೊರಟಗೆರೆಯಲ್ಲಿ ವರುಣನ ಅಬ್ಬರ: ಶಾಲಾ ಆವರಣ, ಬಸ್ ನಿಲ್ದಾಣ ಜಲಾವೃತ, ಅವ್ಯವಸ್ಥೆ ವಿರುದ್ಧ ಸಾರ್ವಜನಿಕರ ಆಕ್ರೋಶ
- ಕಾರ್ಮಿಕರ ಮೂಲಭೂತ ಹಕ್ಕುಗಳ ರಕ್ಷಣೆಗೆ ಆಗ್ರಹ: ತುಮಕೂರಿನಲ್ಲಿ ಸಿಐಟಿಯು ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ
- ಜನರ ಮನಸ್ಸಿನಲ್ಲಿ ಉಳಿಯುವಂತೆ ಕೆಲಸ ಮಾಡಿ: ಅಧಿಕಾರಿಗಳಿಗೆ ತಹಶೀಲ್ದಾರ್ ಕೆ.ಮಂಜುನಾಥ್ ಕಿವಿಮಾತು
- ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಸಚಿವ ಸ್ಥಾನ ನೀಡಲು ಒತ್ತಾಯ: ಕಂದೇಗಾಲ ಶಿವರಾಜು ಆಗ್ರಹ
- ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಸಚಿವ ಸ್ಥಾನ ನೀಡಲು ಮುಳ್ಳೂರು ಲೋಕೇಶ್ ಒತ್ತಾಯ
- ಸರಗೂರು: ‘ರಾಷ್ಟ್ರೀಯ ಭೀಮಾ ಮಾರ್ಗ ಸಂಘಟನೆ’ಯ ನೂತನ ತಾಲ್ಲೂಕು ಅಧ್ಯಕ್ಷರಾಗಿ ಹಳಿಯೂರು ಮೂರ್ತಿ ಆಯ್ಕೆ
- ಪಾವಗಡ ತಾಲೂಕಿನ ವಸತಿ ಶಾಲೆಗಳಲ್ಲಿ 7, 8, 9ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ
Author: admin
ಪಾವಗಡ: ಭಾರತೀಯ ವಿದ್ಯಾರ್ಥಿ ಸಂಘ–BVS ತುಮಕೂರು ಜಿಲ್ಲೆ ವತಿಯಿಂದ ಪಾವಗಡ ತಾಲ್ಲೂಕು, ನಿಡಗಲ್ಲು ಹೋಬಳಿ, ಚಿಕ್ಕತಿಮ್ಮನಹಟ್ಟಿ ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಕನ್ನಡ ಕಾಪಿ ಪುಸ್ತಕ ಮತ್ತು English Cursive Copy Writing ಜೊತೆಗೆ ಕಲಿಕಾ ಸಾಮಗ್ರಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ನರಸಿಂಹಮೂರ್ತಿ ಹಾಗೂ ಸಹ ಶಿಕ್ಷಕರಾದ ದೇವರಾಜ್, ನಾಗಮಣಿ, ಹಾಗೂ ತುಮಕೂರು BVS ಜಿಲ್ಲಾ ಸಂಯೋಜಕರಾದ ಚಿಕ್ಕತಿಮ್ಮನಹಟ್ಟಿ ಗ್ರಾಮದ ಎಚ್.ಕೆಂಚರಾಯ, ಮಾಜಿ SDMC ಅಧ್ಯಕ್ಷರಾದ ಪೂಲಪ್ಪ ಹಾಗೂ ಬಿವಿಎಸ್ ಸಂಘಟನೆಗೆ ಬೆಂಬಲಿಸುತ್ತಿರುವ ರಾಜಕುಮಾರ್, ಹಾಗೂ ನಾಗೇಶ್, JCB ಓಬಳೇಶ್ ಉಪಸ್ಥಿತರಿದ್ದರು. ವಿಶೇಷವಾಗಿ ಮಕ್ಕಳಿಗೆ ವಿತರಿಸಲು ಬೇಕಾದ ಕಲಿಕಾ ಸಾಮಗ್ರಿಗಳನ್ನು ನಂಜನಗೂಡು ತಾಲೂಕಿನ ಮುಳ್ಳೂರು ಗ್ರಾಮದ BVSನ ರಾಘವೇಂದ್ರ ಅವರು ಕೊಡುಗೆಯಾಗಿ ನೀಡಿದರು. ವರದಿ: ನಂದೀಶ್ ನಾಯ್ಕ, ಪಾವಗಡ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ತುಮಕೂರು :ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆದ್ರೆ ನನ್ನಷ್ಟು ಖುಷಿ ಪಡೋರು ಯಾರೂ ಇಲ್ಲ ಎಂದು ಕೇಂದ್ರ ರೈಲ್ವೆ ರಾಜ್ಯ ಖಾತೆ ಮತ್ತು ಜಲಶಕ್ತಿ ಖಾತೆ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯನವರು ನುರಿತ ರಾಜಕಾರಣಿಯಾಗಿದ್ದಾರೆ. ಕೆಲವು ಸಂದರ್ಭದಲ್ಲಿ ಕಾನೂನಿಗಿಂತ ಯಾರು ದೊಡ್ಡವರಲ್ಲ. ಕಾನೂನಿನ ಕೆಲಸ ಕಾನೂನು ಮಾಡುತ್ತೆ ಎಂದರು. ಸಿದ್ದರಾಮಯ್ಯ ಸಾಹೆಬ್ರು ಸಹ ಅವರೇನು ಮಾಡ್ಬೇಕು ಮಾಡ್ತಾರೆ. ಒಂದು ಸತ್ಯ, ಕಾನೂನಿಗಿಂತ ನಾವ್ಯಾರು ದೊಡ್ಡವರಲ್ಲ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ದೂರದೃಷ್ಟಿಯ ಬ್ರಹ್ಮಾಸ್ತ್ರ ಏನಿದೆ ಎಂದರು. ಅದು ಯಾರ್ಯಾರಿಗೆ ಏನಾಗಿದೆ ಅನ್ನೊದಕ್ಕಿಂತ ಹೆಚ್ಚಾಗಿ ಕಾನೂನು ತನ್ನ ಕೆಲಸವನ್ನ ತಾನು ಮಾಡುತ್ತದೆ ಎಂದರು. ನನಗೂ 45 ವರ್ಷ ರಾಜಕೀಯ ಅನುಭವ ಇದೆ. ಒತ್ತಾಯ ಮಾಡೋದು, ಮತ್ತೊಂದು ಮಾಡೋದಕ್ಕಿಂತ ಹೆಚ್ಚಾಗಿ ಸಿದ್ದರಾಮಯ್ಯ ಸಾಹೇಬ್ರು ನುರಿತ ರಾಜಕಾರಣಿ, ಬುದ್ದಿವಂತರಿದ್ದಾರೆ. ನಾನು ಅವರು ಬಹಳ ಆತ್ಮೀಯರಾಗಿ ಕೆಲಸ ಮಾಡಿದ್ದೇವೆ ನಿನ್ನೆನೂ ಸಹ ಅವರ ಜೊತೆ ಮಾತನಾಡಿದಾಗ, ಅವರು ಮಾತನಾಡಿದ್ದನ್ನ ನಾನು ಬಹಳ ಆನಂದದಿಂದ…
ಪಾವಗಡ: ದೇವರ ದರ್ಶನ ಪಡೆದು ಬೈಕ್ ನಲ್ಲಿ ಹಿಂದಿರುಗುತ್ತಿದ್ದ ಯುವಕನೋರ್ವ ರಸ್ತೆ ಅಪಘಾತಕ್ಕೆ ಬಲಿಯಾದ ಘಟನೆ ಪಾವಗಡ ತಾಲ್ಲೂಕಿನ ನಿಡಗಲ್ ಹೋಬಳಿಯ ಕರೆಕ್ಯಾತನಹಳ್ಳಿ ಸ್ವಾರಮ್ಮ ದೇವಸ್ಥಾನದ ಸಮೀಪದ ಶಿರಾ ಮುಖ್ಯ ರಸ್ತೆಯಲ್ಲಿ ನಡೆದಿದೆ. ಮೃತರನ್ನು ಪಾವಗಡ ತಾಲ್ಲೂಕಿನ ಅರಸೀಕೆರೆ ಗ್ರಾಮದ 28 ವರ್ಷದ ಕುಮಾರ್ ಎಂದು ಗುರುತಿಸಲಾಗಿದೆ. ಮೃತರು ವೃತ್ತಿಯಲ್ಲಿ ಜೆಸಿಬಿ ಡ್ರೈವರ್ ಆಗಿದ್ದರು ಎನ್ನಲಾಗಿದೆ. ಇವರು ಶ್ರಾವಣ ಶನಿವಾರದ ಪ್ರಯುಕ್ತ ಪಾವಗಡದ ಶನಿಮಹಾತ್ಮ ಸ್ವಾಮಿ ದರ್ಶನ ಪಡೆದು ಬೈಕ್ ನಲ್ಲಿ ವಾಪಸ್ ಹಿಂದಿರುಗುತಿದ್ದಾಗ ದ್ವಿಚಕ್ರ ವಾಹನದ ಚಕ್ರ ಪಂಕ್ಚರ್ ಆಗಿ ರಸ್ತೆಗೆ ಬಿದ್ದಿದ್ದಾರೆ. ಆದೇ ಸಮಯದಲ್ಲಿ ಹಿಂಬದಿಯಿಂದ ಬಂದ ದೊಡ್ಡ ವಾಹನ ಅವರ ತಲೆ ಮೇಲೆ ಹರಿದ ಪರಿಣಾಮ ಅವರು ಸ್ಥಳದಲ್ಲೇ ಅಸುನೀಗಿದ್ದಾರೆ. ಘಟನೆಯ ಮಾಹಿತಿ ಪಡೆದ ಅರಸೀಕೆರೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ತಾರಾಸಿಂಗ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಮೃತದೇಹವನ್ನು ಪಾವಗಡ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ವರದಿ: ನಂದೀಶ್ ನಾಯ್ಕ, ಪಾವಗಡ ನಮ್ಮತುಮಕೂರಿನ…
‘ಬ್ಯಾಚುಲರ್ಸ್ ಪಾರ್ಟಿ’ ಸಿನಿಮಾದಲ್ಲಿ ಅನುಮತಿ ಪಡೆಯದೇ ಎರಡು ಹಾಡುಗಳನ್ನು ಬಳಕೆ ಮಾಡಿದ್ದಕ್ಕಾಗಿ ಎಂಆರ್ ಟಿ ಮ್ಯೂಸಿಕ್ ಸಂಸ್ಥೆಯು ದೆಹಲಿ ಹೈಕೋರ್ಟ್ ಮೆಟ್ಟಿಲೇರಿತ್ತು. ಇದೀಗ ದೆಹಲಿ ಹೈಕೋರ್ಟ್ ರಕ್ಷಿತ್ ಶೆಟ್ಟಿ ಮತ್ತು ಪರಂವಾ ಸ್ಟುಡಿಯೋಗೆ 20 ಲಕ್ಷ ರೂಪಾಯಿ ಠೇವಣಿ ಇಡುವಂತೆ ನಿರ್ದೇಶನ ನೀಡಿದೆ. ರಕ್ಷಿತ್ ಶೆಟ್ಟಿ ಅವರ ನಿರ್ಮಾಣದ ‘ಬ್ಯಾಚುಲರ್ ಪಾರ್ಟಿ’ ಸಿನಿಮಾದಲ್ಲಿ ಎಂಆರ್‌ಟಿ ಹಕ್ಕು ಹೊಂದಿರೋ ನ್ಯಾಯ ಎಲ್ಲಿದೆ ಮತ್ತು ‘ಒಮ್ಮೆ ನಿನ್ನನ್ನು’ ಹಾಡು ಬಳಕೆ ಮಾಡಿದ್ದರು. ಹಾಡು ಬಳಕೆ ಮಾಡುವಂತೆ ಕೇಳಿಕೊಂಡಿದ್ದೆ, ಆದರೆ ಅವರು ಬೇಡಿಕೆ ಹೆಚ್ಚು ಮಾಡಿದ್ದರು. ನಮ್ಮ ಭಾಷೆಯ ಹಾಡುಗಳನ್ನು ನಾವು ಬಳಸಲು ಅನುಮತಿ ಕೇಳಬೇಕೆ. ಈ ಬಗ್ಗೆ ಕೋರ್ಟ್‌ನಲ್ಲಿ ನೋಡಿಕೊಳ್ಳುತ್ತೇನೆ ಎಂದು ಪ್ರತಿಕ್ರಿಯಿಸಿದ್ದರು. ರಕ್ಷಿತ್ ಶೆಟ್ಟಿ ಮತ್ತು ಪರಂವಾಗೆ ಹೈಕೋರ್ಟ್ ನೋಟಿಸ್ ನೀಡಿತ್ತು. ಈ ನೋಟಿಸ್ ಗೆ ರಕ್ಷಿತ್ ಶೆಟ್ಟಿ ಕೋರ್ಟಿಗೆ ಹಾಜರಾಗದ ಕಾರಣದಿಂದಾಗಿ ಸೋಷಿಯಲ್ ಮೀಡಿಯಾ ಸೇರಿದಂತೆ, ಹಾಡುಗಳು ಬಳಕೆಯಾದ ಕಡೆಯಲ್ಲಿ ತೆಗೆದುಹಾಕಬೇಕು ಮತ್ತು 20 ಲಕ್ಷ ರೂಪಾಯಿ ಠೇವಣಿ ಇಡಬೇಕು ಎಂದು…
ಪ್ರಪಂಚದಾದ್ಯಂತ ಜನರು ವಿಭಿನ್ನ ಆಚರಣೆಗಳು ಮತ್ತು ಸಂಪ್ರದಾಯಗಳ ಪ್ರಕಾರ ಮದುವೆಯಾಗುತ್ತಾರೆ. ಅದೇ ರೀತಿ, ಹಿಂದೂ ಸನಾತನ ಧರ್ಮದಲ್ಲಿ, ಮದುವೆಯನ್ನು ಇಬ್ಬರು ವ್ಯಕ್ತಿಗಳ ನಡುವಿನ ಸಂಬಂಧವೆಂದಷ್ಟೇ ಪರಿಗಣಿಸಲಾಗುವುದಿಲ್ಲ; ಆದರೆ ಅದು ಎರಡು ಕುಟುಂಬಗಳ ಒಕ್ಕೂಟವಾಗಿಯೂ ಪರಿಗಣಿಸಲಾಗಿದೆ. ಹಿಂದೂ ಧರ್ಮದಲ್ಲಿ ವಿವಾಹ ಸಂಬಂಧಗಳನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಜಗತ್ತಿನ ಮೊದಲ ಮದುವೆ ಯಾವಾಗ ಮತ್ತು ಎಲ್ಲಿ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ವಿಶ್ವದ ಮೊದಲ ಮದುವೆ ನಡೆದ ಸ್ಥಳವೆಂದರೆ ಅದು ಭಾರತದ ಶಿವನ ದೇವಾಲಯವಾಗಿದೆ. ದಕ್ಷೇಶ್ವರ ಮಹಾದೇವ ದೇವಸ್ಥಾನದ ಪ್ರಧಾನ ಅರ್ಚಕ ಮಹಾಂತ ದಿಗಂಬರ ಸ್ವಾಮಿ ವಿಶ್ವೇಶ್ವರ ಪುರಿ ಮಹಾರಾಜ್ ಹೇಳುವಂತೆ ಜಗತ್ತಿನ ಮೊದಲ ಮದುವೆ ಶಿವ-ಸತಿದೇವಿ ಜೋಡಿಯದ್ದು. ಸೃಷ್ಟಿ ಪ್ರಾರಂಭವಾದಾಗ ಶಿವ ಮತ್ತು ಸತಿ ವಿವಾಹವಾದರು ಎಂದು ಅವರು ಹೇಳುತ್ತಾರೆ. ಆ ಮದುವೆಯ ರಾತ್ರಿಯನ್ನು ಶಿವನ ಮದುವೆ ರಾತ್ರಿ ಅಥವಾ ಶಿವರಾತ್ರಿ ಎಂದು ಕರೆಯಲಾಗುತ್ತದೆ. ಉತ್ತರಾಖಂಡದ ಹರಿದ್ವಾರ ಹಿಂದೂಗಳಿಗೆ ಪವಿತ್ರ ನಗರವಾಗಿದೆ. ಹಿಂದೂ ನಂಬಿಕೆಯ ಪ್ರಮುಖ ಕೇಂದ್ರ. ದಕ್ಷೇಶ್ವರ ಮಹಾದೇವ ದೇವಾಲಯವು ಹರಿದ್ವಾರದ…
ಕೊರಟಗೆರೆ : ಬೆಸ್ಕಾಂ ವತಿಯಿಂದ ಪ್ರತಿ ತಿಂಗಳ ಮೂರನೇ ಶನಿವಾರದಲ್ಲಿ ನಡೆಯುವ ಗ್ರಾಹಕರ ಸಂವಾದ ಸಭೆಯು ಪಟ್ಟಣದ ಬೆಸ್ಕಾಂ ಕಚೇರಿಯಲ್ಲಿ ಯಶಸ್ವಿಯಾಗಿ ನಡೆಯಿತು.. ಸಭೆಯಲ್ಲಿ ಚನ್ನರಾಯನದುರ್ಗ ಹೋಬಳಿಯ ನೇಗಲಾಲ ಮಜರೆ ಗ್ರಾಮವಾದ ಅನುಪಲು ಮತ್ತು ಮಾರಿಪಾಳ್ಯ ಹಾಗೂ ಮರೇನಾಯಕನಹಳ್ಳಿ ಸುತ್ತ ಮುತ್ತಲಿನ ಗ್ರಾಮಗಳಲ್ಲಿನ ವಿದ್ಯುತ್ ಸಮಸ್ಯೆಯ ಕುರಿತು ಚರ್ಚೆ ನಡೆಸಲಾಯಿತು.. ಮರೇನಾಯಕನಹಳ್ಳಿ ಗ್ರಾಮದ ಮುಖ್ಯರಸ್ತೆಯಲ್ಲಿನ ಬೀದಿ ದೀಪದ ವಿದ್ಯುತ್ ಕಂಬಗಳು ದುರಸ್ತಿ ಕೆಲಸ ಮತ್ತು ಕೆಲವು ವಿದ್ಯುತ್ ಕಂಬಗಳು ತುಂಬಾ ವರ್ಷಗಳಿಂದ ಬಾಗಿದ್ದು ಅವುಗಳನ್ನು ತಗೆದು ಹೊಸ ಕಂಬ ಹಾಕುವಂತೆ ಮನವಿ ಮಾಡಲಾಗಿದೆ. ಅನುಪಲು ಗ್ರಾಮದ ಅಶೋಕ್ ಮನೆಯಿಂದ ನಾಗರಾಜುರವರ ಮನೆಯವರೆಗೆ ಬೀದಿ ದೀಪದ ವಿದ್ಯುತ್ ಕಂಬಗಳನ್ನು ಅಳವಡಿಸಲು ಹೊಸ ಯೋಜನೆ ರೂಪಿಸಬೇಕೆಂದು ಎ ಇ ಇ ಪ್ರಸನ್ನ ಕುಮಾರ್ ರವರಿಗೆ ಮನವಿ ನೀಡಲಾಯಿತು. ಗ್ರಾಹಕರ ಸಂವಾದ ಸಭೆಯಲ್ಲಿ ಎಇ ಇ ಪ್ರಸನ್ನ ಕುಮಾರ್,ಸಹಾಯಕ ಲೆಕ್ಕಾಧಿಕಾರಿ ನಟರಾಜ್ ಕೆ ವಿ,ಸಹಾಯಕ ಇಂಜಿನಿಯರ್ (ತಾಂತ್ರಿಕ) ಸುಹಾಸ್ ಮತ್ತು ಮಲ್ಲಯ್ಯ,ಪ್ರದೀಪ್ ಎಲ್ಲ ಶಾಖೆಯ ಶಾಖಾಧಿಕಾರಿಗಳು,…
ಬೀದರ್: ಬೀದರ್ ನಗರದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪೊಲೀಸ್ ನಿರೀಕ್ಷಕರಾಗಿ ಸೇವೆ ಸಲ್ಲಿಸಿದ ಕಪಿಲದೇವ್ ಹಾಗೂ ಬೀದರ ಜಿಲ್ಲೆಯ ಮಂಠಾಳ, ಬ.ಕಲ್ಯಾಣ ಸಂಚಾರಿ, ಪ್ರಸ್ತುತ ಮುಡುಬಿ ಪೊಲೀಸ್ ಠಾಣೆಯ ಪಿ.ಎಸ್.ಐ. ಜಯಶ್ರೀ ಅವರು ತಮ್ಮ ಪ್ರಾಮಾಣಿಕತೆ ದಕ್ಷತೆಗಾಗಿ ಮುಖ್ಯಮಂತ್ರಿ ಪದಕ ಪಡೆದುಕೊಂಡಿದ್ದಾರೆ. ಇವರ ಸಾಧನೆಗೆ ಬೀದರ್ ಜಿಲ್ಲಾ ಪೊಲೀಸರು ಅಭಿನಂದಿಸಿದ್ದು, ತಮ್ಮ ಕರ್ತವ್ಯದಲ್ಲಿ ಪ್ರಾಮಾಣಿಕ ಹಾಗೂ ದಕ್ಷತೆಯಿಂದ ಕೆಲಸ ಮಾಡಿ ಸಾರ್ವಜನಿಕರ ಪ್ರೀತಿಗೆ ಪಾತ್ರರಾಗಿ ಮುಖ್ಯಮಂತ್ರಿ ಪದಕ ಪಡೆದುಕೊಂಡಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಈ ಸಾಧನೆ ಬೀದರ್ ಜಿಲ್ಲಾ ಪೊಲೀಸರ ಹೆಮ್ಮೆಯಾಗಿರುತ್ತದೆ. ಮುಂದೆಯು ಕೂಡ ಇದೆ ರೀತಿಯ ಸೇವೆ ಸಮಾಜಕ್ಕೆ ನೀಡುವಂತೆ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಐ.ಪಿ.ಎಸ್. ಆಶಿಸಿದ್ದಾರೆ. ವರದಿ: ಅರವಿಂದ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ಬೆಂಗಳೂರು: ಮುಡಾ ಹಗರಣ ಸಂಬಂಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾರೆ. ಈ ನಡುವೆ ಸಿಎಂ ಸಿದ್ದರಾಮಯ್ಯ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿರುವ ತ್ರಿಪುರವಾಸಿನಿಯಲ್ಲಿ ರಾಜ್ಯ ಸರ್ಕಾರಿ ನೌಕರರ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದಾರೆ. 7 ನೇ ವೇತನ ಆಯೋಗ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಿ ನೌಕರರು ಇಂದು ನಮ್ಮಭಿಮಾನ ಅಭಿನಂದನೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ವೇದಿಕೆಗೆ ಬರುತ್ತಿದ್ದಂತೆಯೇ ಜೋರಾಗಿ ಕೂಗಿ ರಾಜ್ಯ ಸರ್ಕಾರಿ ನೌಕರರು ಸಂಭ್ರಮಿಸಿ ಸ್ವಾಗತ ಕೋರಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತರಾತುರಿಯಲ್ಲಿ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರು ಅನುಮತಿ ನೀಡಿರುವುದರ ಹಿಂದೆ ಕೇಂದ್ರ ಹಾಗೂ ಬಿಜೆಪಿ ನಾಯಕರ ಒತ್ತಡವಿದೆ ಎಂದು ಸಚಿವ ರಾಮಲಿಂಗರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ. ಕೇಂದ್ರ ನಾಯಕರು ಅವರು ಕುಣಿಸಿದಂತೆ ರಾಜ್ಯಪಾಲರು ಕುಣಿಯುತ್ತಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗಿದೆ. ರಾಜ್ಯಪಾಲರ ಸ್ಥಾನಕ್ಕೆ ಇದು ಶೋಭೆ ತರುವುದಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಚ್.ಡಿ. ಕುಮಾರಸ್ವಾಮಿ ಅವರ ಗಣಿ ಹಗರಣದ ತನಿಖೆಗೆ ಲೋಕಾಯುಕ್ತ ಸಂಸ್ಥೆಯು ಅನುಮತಿ ಕೇಳಿದ್ದರೂ ರಾಜ್ಯಪಾಲರು ಕಳೆದ 10 ತಿಂಗಳಿಂದ ಕಡತವನ್ನು ಮೂಲೆಗೆ ತಳ್ಳಿ ಕೂತಿದ್ದಾರೆ. ಶಶಿಕಲಾ ಜೊಲ್ಲೆಯ ಮೊಟ್ಟೆ ಹಗರಣದ ವಿರುದ್ಧದ ತನಿಖೆಗೆ ಅನುಮತಿ ಕೋರಿದ್ದರು. ಆದರೆ ಈ ಪ್ರಕರಣ ರಾಜ್ಯಪಾಲರ ಯಾವುದೆ ಪ್ರತಿಕ್ರಿಯೆ ಇಲ್ಲದೆ ಸುಮಾರು 2 ವರ್ಷಗಳಿಂದ ಬಾಕಿ ಉಳಿದಿದೆ. ಅದಷ್ಟೇ ಅಲ್ಲ ಮುರುಗೇಶ್ ನಿರಾಣಿ ಮಂತ್ರಿಯಾಗಿದ್ದಾಗ ಬೃಹತ್ ಕೈಗಾರಿಕೆ ಇಲಾಖೆ ವ್ಯಾಪ್ತಿಯಡಿ ಬರುವ ಮಾರ್ಕೆಟಿಂಗ್, ಜಾಹೀರಾತು ಮತ್ತು ಪ್ರಚಾರ ಸಂಸ್ಥೆಯಲ್ಲಿ 2011-15ರ ನಡುವೆ ನಡೆದ ಅಕ್ರಮ ನೇಮಕಾತಿಯ ತನಿಖೆಗೆ ಅನುಮತಿ ಕೋರಿರುವ ಕಡತ…
ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದು ಮೈತ್ರಿಪಕ್ಷಗಳ ಹೋರಾಟಕ್ಕೆ ಸಂದ ಜಯ ಅಂತ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ಸಂಬಂಧ ಅವರು ಬರೆದುಕೊಂಡಿದ್ದು,ಈ ಪ್ರಕರಣದ ತನಿಖೆ ವಿಸ್ತೃತ ನಡೆಯಬೇಕೆಂದು ಒತ್ತಾಯಿಸಿ ಜೆಡಿಎಸ್, ಬಿಜೆಪಿ ಪಕ್ಷಗಳು ಬೆಂಗಳೂರಿನಿಂದ ಮೈಸೂರು ನಗರಕ್ಕೆ ಪಾದಯಾತ್ರೆ ನಡೆಸಿದ್ದನ್ನು ಸ್ಮರಿಸಬಹುದು ಎಂದು ಹೇಳಿದ್ದಾರೆ. ನಮ್ಮ ಹೋರಾಟ ಸತ್ಯದ ಪರ ಎಂಬುದನ್ನು ರಾಜ್ಯಪಾಲರು ಕೈಗೊಂಡಿರುವ ಕ್ರಮ ಸಾಬೀತುಪಡಿಸಿದೆ. ಸೂರ್ಯಚಂದ್ರರು ಇರುವುದು ಎಷ್ಟು ಸತ್ಯವೋ ಮೂಡಾ ಹಗರಣದಲ್ಲಿ ಮುಖ್ಯಮಂತ್ರಿಗಳ ಕುಟುಂಬ ಅಕ್ರಮ ಎಸಗಿದೆ ಎಂಬುದು ಅಷ್ಟೇ ಸತ್ಯ ಎಂದಿದ್ದಾರೆ. ʻಮಾನ್ಯ ಮುಖ್ಯಮಂತ್ರಿಗಳಿಗೆ ಅನ್ಯ ಆಯ್ಕೆಯೇ ಇಲ್ಲ. ಅವರು ಸತ್ಯ ಒಪ್ಪಬೇಕು, ಅಕ್ರಮ ಅಂಗೀಕರಿಸಬೇಕು. ಕೂಡಲೇ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ನಾನು ಶುದ್ಧ ಎಂದು ಪದೇ ಪದೆ ಹೇಳುವ ಸಿದ್ದರಾಮಯ್ಯನವರು ಗೌರವಯುತವಾಗಿ ನಿರ್ಗಮಿಸಬೇಕು. ಇಲ್ಲವಾದರೆ, ನಮ್ಮ ಹೋರಾಟ ನಿರಂತರ ಎಂದು…