Author: admin

ಪವಿತ್ರಾ ಗೌಡ ಅವರಿಗೆ ಅಶ್ಲೀಲ ಮೆಸೇಜ್‌ ಮಾಡಿದ್ದಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಅಪಹರಿಸಿ ಶೆಡ್‌ನಲ್ಲಿಟ್ಟು ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಗಿತ್ತು. ಅಶ್ಲೀಲ ಮೆಸೇಜ್‌ ಮಾಡಿದ್ದೇ ಕೊಲೆಗೆ ಪ್ರಮುಖ ಕಾರಣವಾಗಿತ್ತು ಎನ್ನಲಾಗಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಪೊಲೀಸರು ಚಾರ್ಜ್‌ ಶೀಟ್‌ ಸಲ್ಲಿಸಿದ ಬಳಿಕ ಒಂದೊಂದೇ ಅಂಶಗಳು ಬೆಳಕಿಗೆ ಬರುತ್ತಿದೆ. ರೇಣುಕಾಸ್ವಾಮಿ ಪವಿತ್ರಾ ಗೌಡಗೆ ಮಾತ್ರವಲ್ಲದೆ ಬೇರೆ ಅವರಿಗೂ ಅಶ್ಲೀಲವಾಗಿ ಮೆಸೇಜ್‌ ಮಾಡಿದ್ದ ಎಂದು ಪ್ರಕರಣದ ಎ14 ಆರೋಪಿ ಪ್ರದೂಶ್ ಸ್ವ ಇಚ್ಛಾ ಹೇಳಿಕೆ ನೀಡಿದ್ದಾನೆ. ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಶುಭಾ ಪೂಂಜಾ ಅವರಿಗೆ ರೇಣುಕಾಸ್ವಾಮಿ ಅಶ್ಲೀಲವಾಗಿ ಮಸೇಜ್‌ ಮಾಡಿದ್ದಾನೆ ಎಂದು ಪ್ರದೋಶ್‌ ಹೇಳಿಕೆ ನೀಡಿದ್ದ. ಈ ಕುರಿತು ಸುದ್ದಿ ಪ್ರಸಾರವಾಗುತ್ತಿದ್ದಂತೆ ಇಬ್ಬರು ನಟಿಯರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನಟಿ ರಾಗಿಣಿ, “ನಕಲಿ ಖಾತೆ ಇಂತಹ ಮೆಸೇಜ್ ಗಳು ಬರುತ್ತಲೇ ಇರುತ್ತವೆ. ಈ ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲ್ಲ. ನನಗೆ ಗೌತಮ್‌ ಎನ್ನುವ ಖಾತೆಯಿಂದ ಮೆಸೇಜ್‌ ಬಂದಿರುವ ಬಗ್ಗೆ ಮಾಹಿತಿಯಿಲ್ಲ. ನಾನು…

Read More

ಅಮರಾವತಿ: ಗೋಡಂಬಿ ಸಾಗಿಸುತ್ತಿದ್ದ ಮಿನಿ ಟ್ರಕ್‌ ವೊಂದು ಅಪಘಾತಕ್ಕೀಡಾದ ಪರಿಣಾಮ ಏಳು ಮಂದಿ ಸಾವನ್ನಪ್ಪಿದ ಘಟನೆ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ. ಅಪಘಾತದ ಸಂದರ್ಭದಲ್ಲಿ ಗೋಡಂಬಿ ಚೀಲಗಳ ಅಡಿಯಲ್ಲಿ ಸಿಲುಕಿಕೊಂಡ ಏಳು ಮಂದಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ಒಬ್ಬರು ಬದುಕುಳಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನರಸಿಂಹ ಕಿಶೋರ್ ಹೇಳಿದ್ದಾರೆ. ಸ್ಥಳೀಯರು ಮತ್ತು ಪೊಲೀಸರು ಗೋಣಿಚೀಲದ ಅಡಿಯಿಂದ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಕೊವ್ವೂರು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ ಎಂದು ಕಿಶೋರ್ ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

Read More

ಸಿಂದಗಿ: ಬಯಲು ಬಹಿರ್ದೆಸೆಗೆ ಹೋಗಲು ರಸ್ತೆ ಮಾಡಿಕೊಡಿ ಅಂತ ಮಹಿಳೆಯರು ಬೀದಿಗಿಳಿದು ಹೋರಾಟ ನಡೆಸಿದ ಘಟನೆ ಸಿಂದಗಿ ತಾಲ್ಲೂಕಿನ ಬೋರಗಿ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯವಿಲ್ಲ. ಹೀಗಾಗಿ ಬಯಲಿಗೆ ಹೋಗಬೇಕಾದ ಪರಿಸ್ಥಿತಿ ಇದೆ. ಆದ್ರೆ ರಸ್ತೆಗಳೆಲ್ಲ ಹದಗೆಟ್ಟಿದೆ. ಮಳೆಗಾಲದಲ್ಲಿ ರಸ್ತೆ ಸಂಪೂರ್ಣ ರೊಜ್ಜುಮಯವಾಗಿ ತಿರುಗಾಡಲು ಸಾಧ್ಯವಾಗದಷ್ಟು ಕೆಟ್ಟು ಹೋಗಿವೆ ಅಂತ ಮಹಿಳೆಯರು ಅಳಲು ತೋಡಿಕೊಂಡರು. ಈ ವಿಚಾರ ಸಾಕಷ್ಟು ಬಾರಿ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಆದರೆ ಯಾವುದೇ ಕೆಲಸ ಆಗಿಲ್ಲ.  ಇನ್ನಾದರೂ ರಸ್ತೆಗಳು, ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಗ್ರಾಮ ಪಂಚಾಯ್ತಿ ಸದಸ್ಯರಾದಿಯಾಗಿ ಅಧ್ಯಕ್ಷರು, ಕಾರ್ಯಾಲಯದ ಅಧಿಕಾರಿ ವರ್ಗ ಮುಂದಾಗಬೇಕು ಎಂದು ಕೈ ಮುಗಿದು ಕೇಳುತ್ತೇವೆ. ಒಂದು ಸಲವಾದರೂ ಅಧಿಕಾರಿ ವರ್ಗ ಗ್ರಾಮದ ದುಃಸ್ಥಿತಿ ಬಂದಾದರೂ ನೋಡಿ ಎಂದು ಅಳಲು ತೋಡಿಕೊಂಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

Read More

ಪಾವಗಡ: ತಾಲ್ಲೂಕಿನ ಬುಡ್ಡಾ ಬುಡ್ಡಿ ತಾಂಡ ಉಪ್ಪಾರಹಳ್ಳಿ  ಗ್ರಾಮದಲ್ಲಿ ಶ್ರೀ ಸೇವಾಲಾಲ್ ವಿದ್ಯಾ ವಿನಾಯಕ ಯುವಕರ ಸಂಘದಿಂದ 6 ನೇ ವರ್ಷದ ಗಣೇಶ ವಾರ್ಷಿಕೋತ್ಸವದ ಅಂಗವಾಗಿ ತುಮಕೂರಿನ  ಗಗನ್ ಮೆಲೋಡೀಸ್ ಅವರಿಂದ ಸಂಜೆ ರಸಮಂಜರಿ ಕಾರ್ಯಕ್ರಮ ನಡೆಸಲಾಯಿತು. 4ನೇ ದಿನವಾದ ಮಂಗಳವಾರ ರಾತ್ರಿ ವಿಶೇಷವಾಗಿ ಗಣೇಶನಿಗೆ ಪೂಜೆ ಸಲ್ಲಿಸಲಾಗಿದ್ದು, ರಸಮಂಜರಿ ಕಾರ್ಯಕ್ರಮದಲ್ಲಿ ಸುತ್ತ ಮುತ್ತಲಿನ ಹಳ್ಳಿಗಳ ಜನರು ಭಾಗವಹಿಸಿ ಸಂಭ್ರಮಿಸಿದರು. ವರದಿ: ನಂದೀಶ್ ನಾಯ್ಕ, ಪಾವಗಡ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

Read More

ಸ್ಯಾಂಡಲ್‌ ವುಡ್ ಕ್ವೀನ್ ಖ್ಯಾತಿಯ ನಟಿ ರಮ್ಯಾ  ಅವರು ಮದುವೆಯಾಗುತ್ತಿದ್ದಾರೆ. ನವೆಂಬರ್‌ ನಲ್ಲಿ ಮದುವೆ ನಡೆಯಲಿದೆ. ಬಹುಕಾಲದ ಉದ್ಯಮಿ‌ ಗೆಳೆಯನ ಜೊತೆ ನಟಿ ರಮ್ಯಾ, ದಿವ್ಯ ಸ್ಪಂದನ ನಿಶ್ವಿತಾರ್ಥ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಹೊಟೇಲ್‌ ಒಂದರಲ್ಲಿ ಎಂಗೇಜ್‌ ಮೆಂಟ್ ನಡೆದಿದೆ. ಅವರ ಹುಟ್ಟುಹಬ್ಬದ ದಿನ (ನವೆಂಬರ್ 29) ಮದುವೆ ನಡೆಯಲಿದೆ ಎಂದು ಸುದ್ದಿ ಹರಡಿತ್ತು. ಸೆಪ್ಟೆಂಬರ್ 8 ರಂದು ನಟಿ ರಮ್ಯಾ ಅವರು ಆಪ್ತರೊಬ್ಬರ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಾಗ ಸುದ್ದಿ ಹಬ್ಬಿತು. ಈ ಸುದ್ದಿ ಹಬ್ಬಿದಾಗ ಬಹಳಷ್ಟು ಮಂದಿ ಸೋಷಿಯಲ್ ಮೀಡಿಯಾಗಳಲ್ಲಿ ಕೂಡ ಚರ್ಚೆ ಮಾಡ ತೊಡಗಿದ್ದರು. ಯಾರು ವರ? ಏನು ಮಾಡುತ್ತಿದ್ದಾರೆ? ಎಲ್ಲಿಯವರು? ಎಂದೆಲ್ಲ. ಯಾವಾಗ ಈ ಸುಳ್ಳು ಎಂದು ತಿಳಿಯಿತೋ ಅಭಿಮಾನಿಗಳಿಗೆ ನಿರಾಸೆಯಾಗಿತ್ತು. ಇದೀಗ ಈ ಸುದ್ದಿಗೆ ರಮ್ಯಾ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಮೋಹಕ ತಾರೆ ರಮ್ಯಾ ಅವರು ನನ್ನನ್ನು ಕೇಳದೆ ಯಾವುದೇ ಸುದ್ದಿ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. “ಮಾಧ್ಯಮಗಳಿಂದ ನಾನು ಹಲವಾರು ಬಾರಿ…

Read More

ಶ್ರೀ ಕ್ಷೇತ್ರ ವರನಾಡು ಅನ್ನಪೂರ್ಣೇಶ್ವರಿ ದೇವಿಯ ಪ್ರಧಾನ ಆರಾಧಕರು ನವೆಂಬರ್ 1ವಶೀಕರಣ ಸ್ಪೆಷಲಿಸ್ಟ್  ಇನ್ India   ಶ್ರೀ ಶ್ರೀ ವಿಘ್ನೇಶ್ವರ ಭಟ್ ರವರು ಫೋನ್ ಮೂಲಕವೇ ನಿಮ್ಮ ಸಮಸ್ಯೆಗಳನ್ನು ಕೇಳಿ ಪರಿಹಾರ ಮಾಡಿಕೊಡುತ್ತಾರೆ, ಒಮ್ಮೆ ಆದರು ಸಹ ಫೋನ್ ಮಾಡಿರಿ… ನಿರುದ್ಯೋಗ ಸಮಸ್ಯೆಗೆ ಹಾಗೂ ಪ್ರೀತಿ ಪ್ರೇಮದ ವೈಫಲ್ಯ ಹಾಗು ಗಂಡ ಹೆಂಡತಿ ಜಗಳ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಮಾತುಗಳು ಕೇಳಲು ಇನ್ನು ಅನೇಕ ಗುಪ್ತ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡುತ್ತಾರೆ, ಒಮ್ಮೆ ಫೋನ್ ಮಾಡಿ  ನಿಮಗೆ ಶತ್ರುಗಳಿಂದ ತೊಂದ್ರೆ ಆಗಿದ್ರೆ ಅಥವ ವ್ಯವಹಾರದಲ್ಲಿ ಏಳಿಗೆ ಕಾಣುತ್ತಾ ಇಲ್ಲ ಅಂದರೆ ಫೋನ್ ಮಾಡಿ ಪ್ರಶ್ನೆಗೆಳು ಕೇಳಿ ಅದಕ್ಕೂ ಪರಿಹಾರ ನೀಡುತ್ತೇವೆ ಕರೆ ಮಾಡಿ ವಿಶೇಷ ರೀತಿಯ ಆಂಜನೇಯ ಸ್ವಾಮಿ ಬಲಿಷ್ಠ ಯಂತ್ರ ಕೂಡ ದೊರೆಯುವುದು ಪಡೆಯಲು ತಕ್ಷಣ ಕರೆ ಮಾಡಿ 9535839666 ಮದುವೆಯಲ್ಲಿ ಮುಖ್ಯವಾದುದು ಪ್ರೀತಿ, ವಿಶ್ವಾಸ ಮತ್ತು ಸಂವಹನ. ಆದ್ದರಿಂದ, ಯಾರಾದರೂ ತಮ್ಮ ರಾಶಿಚಕ್ರದ ಚಿಹ್ನೆಗೆ…

Read More

ಬೆಂಗಳೂರು:  ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ನುಡಿದಂತೆ ನಡೆದಿದ್ದು, ಉತ್ತರ ಕನ್ನಡ ಜಿಲ್ಲೆ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಡ್ಡ ಕುಸಿತದಲ್ಲಿ ಕಣ್ಮರೆಯಾಗಿದ್ದ ಜಗನ್ನಾಥ ಅವರ ಪುತ್ರಿಗೆ ಕೆಲಸ ಕೊಡಿಸಿದ್ದಾರೆ. ಕೃತಿಕಾ ಅವರಿಗೆ ಕೆಲಸ ಕೊಡಿಸುವುದಾಗಿ ಕುಮಾರಸ್ವಾಮಿ ಮಾತುಕೊಟ್ಟಿದ್ದರು. ಇದೀಗ ಕೊಟ್ಟ ಮಾತಿನಂತೆ  ಕೈಗಾ ಅಣು ವಿದ್ಯುತ್ ಸ್ಥಾವರದ ಬಿಹೆಚ್‌ ಇಎಲ್ ನಲ್ಲಿ ಕೃತಿಕಾ ಗೆ ಉದ್ಯೋಗ ಕಲ್ಪಿಸಲಾಗಿದೆ. ದೂರವಾಣಿ ಮೂಲಕ ಕುಮಾರಸ್ವಾಮಿ ಉದ್ಯೋಗ ಖಾತರಿಪಡಿಸಿದ್ದಾರೆ. ಮತ್ತೊರ್ವ ಪುತ್ರಿ ಪಲ್ಲವಿ ನಾಯಕ ಅವರಿಗೂ ಕಳೆದ ವಾರ ಪ್ರವಾಸೋದ್ಯಮ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ನೌಕರಿ ನೀಡಲಾಗಿತ್ತು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

Read More

ಭಾರತೀಯ ರೈಲ್ವೇ ಒಬ್ಬರು ಸಾಗಿಸಬಹುದಾದ ಸರಕುಗಳ ಪ್ರಮಾಣಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ನಿಯಮವನ್ನು ಪ್ರಕಟಿಸಿದೆ. ಈ ನಿಯಮದ ಪ್ರಕಾರ ರೈಲಿನಲ್ಲಿ 70 ಕೆಜಿಗಿಂತ ಹೆಚ್ಚು ತೂಕದ ಸರಕುಗಳನ್ನು ಸಾಗಿಸುವಂತಿಲ್ಲ. ಆದಾಗ್ಯೂ, ಪ್ರಸ್ತುತ, ಜನರು ತಲಾ 4 ಚೀಲಗಳನ್ನು ಒಯ್ಯುತ್ತಾರೆ. ಇದು ವಾಸ್ತವವಾಗಿ ಭಾರತೀಯ ರೈಲ್ವೇ ನಿಯಮಗಳಿಗೆ ವಿರುದ್ಧವಾಗಿದೆ. ರೈಲ್ವೆ ಅಧಿಕಾರಿಗಳು ನಿಮಗೆ ದಂಡ ವಿಧಿಸುವ ಸಾಧ್ಯತೆಯಿದೆ. ಹಾಗಾಗಿ ರೈಲಿನಲ್ಲಿ ಪ್ರಯಾಣಿಸುವಾಗ ಅನಗತ್ಯ ವಸ್ತುಗಳನ್ನು ಕೊಂಡೊಯ್ಯದಿರುವುದು ಉತ್ತಮ. ನಿಲ್ದಾಣದಲ್ಲಿ ಆಹಾರ ಪದಾರ್ಥಗಳು ಮತ್ತು ವಸ್ತುಗಳನ್ನು ಮಾರಾಟ ಮಾಡುವ ಮಾರಾಟಗಾರರು ಎಂಆರ್‌ಪಿಗಿಂತ ಹೆಚ್ಚಿನ ಶುಲ್ಕ ವಿಧಿಸಬಾರದು. ಹಾಗೆ ಮಾಡುವುದನ್ನು ಅನ್ಯಾಯವೆಂದು ಪರಿಗಣಿಸಲಾಗುತ್ತದೆ. ರೈಲ್ವೆ ಅಧಿಕಾರಿಗಳು ದಂಡವನ್ನೂ ವಿಧಿಸಲಿದ್ದಾರೆ. ಹಾಗಾಗಿ, ಇಂತಹ ಪರಿಸ್ಥಿತಿ ಎದುರಾದರೆ ಕೂಡಲೇ ರೈಲ್ವೆ ಸಿಬ್ಬಂದಿಗೆ ದೂರು ನೀಡಬಹುದು. ಭಾರತೀಯ ರೈಲ್ವೇಯಲ್ಲಿ ಮತ್ತೊಂದು ಪ್ರಮುಖ ನಿಯಮವಿದೆ. ಹಾಡುಗಳನ್ನು ಕೇಳಬೇಡಿ ಅಥವಾ ಸ್ಪೀಕರ್ ಬಳಸಿ ಫೋನ್‌ನಲ್ಲಿ ಮಾತನಾಡಬೇಡಿ. ರಾತ್ರಿ 10 ಗಂಟೆಯ ನಂತರ ಜೋರಾಗಿ ಆಡಿಯೋ ಅಥವಾ ವೀಡಿಯೋ ಪ್ಲೇ ಮಾಡುವುದರಿಂದ ಇತರ ಪ್ರಯಾಣಿಕರಿಗೆ ತೊಂದರೆಯಾಗಬಹುದು…

Read More

ಕರ್ನಾಟಕದಲ್ಲಿ ಪ್ರತಿಯೊಬ್ಬರು ನಮ್ಮ ಮಾತೃ ಭಾಷೆಗೆ ಗೌರವ ಕೊಡಬೇಕು ಅಂದರೆ ಕನ್ನಡದಲ್ಲಿ ಮಾತನಾಡಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಕನ್ನಡ ಮಾತನಾಡುವವರನ್ನು ಕೀಳಾಗಿ ಕಾಣುತ್ತಿರುವ ಘಟನೆಗಳು ನಡೆಯುತ್ತಿವೆ.ಬೆಂಗಳೂರಿನಲ್ಲಿ ಕನ್ನಡ ಮಾತನಾಡಿದ್ದಕ್ಕಾಗಿ ಕೆಲಸದಿಂದ ವಜಾ ಮಾಡಲಾಗಿದೆ. ಮೊನ್ನೆಯಷ್ಟೇ ಯುವತಿಯೊಬ್ಬಳು ಕರ್ನಾಟಕದಲ್ಲಿ ಕನ್ನಡ ಮಾತೃಭಾಷೆಯಾದರೆ ಮಂಗಳೂರು ಉಡುಪಿಯಲ್ಲಿ ತುಳು ಮಾತೃ ಭಾಷೆ ಎಂದು ದುರಹಂಕಾರದ ಮಾತುಗಳನ್ನು ಆಡಿದ್ದಳು. ಈ ವಿಡಿಯೋ ಸಾಮಾಜಿಕ ಜಾಲಾತಣದಲ್ಲಿ ವೈರಲ್ ಆಗುತ್ತಿದ್ದಂತೆ ಕನ್ನಡಿಗರು ತುಳು ಬಗ್ಗೆ ಪಾಠ ಕೇಳಲು ಬಂದ ಯುವತಿಗೆ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದರು. ಇಲ್ಲೊಬ್ಬ ವ್ಯಕ್ತಿ ಕನ್ನಡ ಮಾತನಾಡುವವರಿಗೆ ಮರೆಯಾದೆ ಇಲ್ಲವೆಂಬಂತೆ ನಡೆದುಕೊಂಡಿದ್ದಾನೆ. ಅಷ್ಟೇ ಅಲ್ಲ ಕನ್ನಡ ಮಾತನಾಡಿದ್ದಕ್ಕಾಗಿ ಕೆಲಸದಿಂದ ವಜಾ ಕೂಡ ಮಾಡಿದ್ದಾನೆ. ಆತ ಮಾಡಿದ ಸಂದೇಶ ಕನ್ನಡಿಗರನ್ನು ಕೆಣಕಿಸಿದೆ. ಅನುರಾಗ್ ಜೈಸಿಂಗ್ ಎಂಬ ವ್ಯಕ್ತಿ ಖಾತೆಯಲ್ಲಿ ”ನನ್ನ ತಂಡದಲ್ಲಿರುವ ಯಾವುದೇ ಕನ್ನಡದವನು ಹಿಂದಿಯಲ್ಲಿ ಮಾತನಾಡಬೇಕು. ಇಲ್ಲದಿದ್ದರೆ ಅವನಿಗೆ/ಆಕೆಗೆ ಹೊರಹೋಗಲು ಬಾಗಿಲು ತೋರಿಸಲಾಗುತ್ತದೆ” ಎಂದು ಬರೆಯಲಾಗಿದೆ. ಇದಕ್ಕೂ ಮುನ್ನ ಗಣೇಶ ಚೇತನ್ ಎಂಬ ವ್ಯಕ್ತಿ ”ನಿಮಗೆ ನಿಜವಾಗಿಯೂ…

Read More

ತಿಪಟೂರು:  ರೈಲಿಗೆ ಸಿಲುಕಿ ಯುವಕ ಸಾವನ್ನಪ್ಪಿದ ಘಟನೆ ನಗರದ ಶಾರದಾನಗರ ರೈಲ್ವೆ ಗೇಟ್ ಬಳಿ   ನಡೆದಿದೆ. ಯುವಕನೋರ್ವ ರೈಲಿಗೆ ತಲೆ ಕೊಟ್ಟು ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಕಲ್ಕೆರೆ ಗ್ರಾಮದ ವಿದ್ಯಾರ್ಥಿ ಸಾವನ್ನಪ್ಪಿದ ಯುವಕ ಅಂತ ತಿಳಿದು ಬಂದಿದೆ. ನಗರದಲ್ಲಿ ಸಂಚರಿಸಿದ ಸಂಪರ್ಕ ಕ್ರಾಂತಿ ತಲೆ ಕೊಟ್ಟು ಯುವಕ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಅಪಘಾತದ ತೀವ್ರತೆಗೆ ಯುವಕನ ರುಂಡ ಮುಂಡದಿಂದ ಬೇರ್ಪಟ್ಟಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

Read More