Author: admin

ಬೆಂಗಳೂರು: ಗಣೇಶ ವಿಸರ್ಜನೆ ವೇಳೆ ಮಂಡ್ಯದಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್ ಹಾಕಿರುವ ವಿಪಕ್ಷ ನಾಯಕ ಆರ್.ಅಶೋಕ್ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಗಣೇಶ ವಿಸರ್ಜನೆ ವೇಳೆ ಮಂಡ್ಯದಲ್ಲಿ ಹಿಂದು ಮುಸ್ಲಿಂ ಸಮುದಾಯದವರ ಮಧ್ಯೆ ಗಲಾಟೆ ನಡೆದಿದೆ. ಹಿಂದೂ ಅಂಗಡಿ ಮುಂಗಟ್ಟುಗಳ ಮೇಲೆ ಕಲ್ಲೆಸೆದು ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಗಣೇಶ ಮೂರ್ತಿ ಮೇಲೆ ಕಲ್ಲು, ಚಪ್ಪಲಿ ತೂರಾಡಿದ್ದಾರೆ. ಇದರಿಂದ ನಾಗಮಂಗದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಘಟನೆ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಪೋಸ್ಟ್‌ನಲ್ಲಿ ಆರ್.ಅಶೋಕ ಅವರು, ನಿನ್ನೆ ರಾತ್ರಿ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದಿರುವ ಘಟನೆ ಸಹಿಸಲು ಸಾಧ್ಯವಿಲ್ಲದ್ದು. ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯದಲ್ಲಿ ಕಣ್ಮರೆಯಾಗಿರುವ ಕಾನೂನು ಸುವ್ಯವಸ್ಥೆಗೆ ಮತ್ತೂಂದು ನಿದರ್ಶನವಾಗಿದೆ. ಕಳೆದ ವರ್ಷವೂ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಇಂತಹದ್ದೇ ಘಟನೆ ನಡೆದಿದ್ದರೂ ಈ ವರ್ಷ ಪೊಲೀಸರು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವುದು ಕಾಂಗ್ರೆಸ್ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವುದರಲ್ಲಿ…

Read More

ಮೆಪ್ಪಾಡಿ: ಕೇರಳದ ವಯನಾಡ್ ನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ತನ್ನ ಕುಟುಂಬದ 9 ಸದಸ್ಯರನ್ನು ಕಳೆದುಕೊಂಡಿದ್ದ ಕೇರಳದ ಯುವತಿ ತಾನು ಪ್ರೀತಿಸಿದವನ ಸಾಂತ್ವಾನದಿಂದ ನೋವು ಮರೆಯುತ್ತಿದ್ದಳು. ಆದ್ರೆ, ಇದೀಗ ಆ ಯುವಕನೂ ಅಪಘಾತದಲ್ಲಿ ಮೃತಪಟ್ಟ ದುರಂತ ಘಟನೆ ನಡೆದಿದೆ. ಶ್ರುತಿ ತನ್ನವರನ್ನು ಕಳೆದುಕೊಂಡು ತಬ್ಬಲಿಯಾದ ಯುವತಿಯಾಗಿದ್ದಾಳೆ. ಕೇರಳದ ವಯನಾಡ್ ನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಈಕೆ ತನ್ನ ಕುಟುಂಬದ 9 ಮಂದಿಯನ್ನು ಕಳೆದುಕೊಂಡಳು. ಈಕೆಗೆ ಡಿಸೆಂಬರ್ ನಲ್ಲಿ ಜೆನ್ಸನ್ ಎಂಬಾತನೊಂದಿಗೆ ವಿವಾಹ ನಿಶ್ಚಯವಾಗಿತ್ತು. ಆತ ಒಬ್ಬನಾದರೂ ಇದ್ದಾನೆ ಎನ್ನುವ ಧೈರ್ಯದಲ್ಲಿ ಆಕೆಯಿದ್ದಳು. ಆದ್ರೆ, ಮಂಗಳವಾರ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಜೆನ್ಸನ್ ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಕೊನೆಯುಸಿರೆಳೆದಿದ್ದಾನೆ. ಜೆನ್ಸನ್ ಹಾಗೂ ಶ್ರುತಿ ವಿವಾಹ ಸರಳವಾಗಿ ಆಚರಿಸಲು ಕುಟುಂಬಸ್ಥರು ತೀರ್ಮಾನಿಸಿದ್ದರಂತೆ. ಹೀಗಾಗಿ ಮದುವೆ ತಯಾರಿಗಳು ನಡೆಯುತ್ತಿದ್ದವು. ಈ ನಡುವೆ ಶ್ರುತಿ ಸಂಬಂಧಿಕರು ಹಾಗೂ ಜೆನ್ಸನ್ ಮದುವೆ ತಯಾರಿಗಾಗಿ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಕಾರು ಬಸ್ಸಿಗೆ ಡಿಕ್ಕಿ ಹೊಡೆದಿದ್ದು, ಜೆನ್ಸನ್ ಗಂಭೀರವಾಗಿ ಗಾಯಗೊಂಡಿದ್ದ. ಬುಧವಾರ…

Read More

ಬೆಂಗಳೂರು: ನಾವು ನಾಗಮಂಗಲದಲ್ಲಿದ್ದೇವೆಯೋ? ಪಾಕಿಸ್ತಾನದಲ್ಲೋ? ಎಂದು ಮಾಜಿ ಸಚಿವ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಅವರು, ಶಾಂತಿಯುತವಾಗಿ ಗಣಪತಿ ವಿಸರ್ಜನೆಗೆ ತೆರಳುತ್ತಿದ್ದ ಭಕ್ತರನ್ನು ಗುರಿ ಮಾಡಿ ಒಂದು ಸಮುದಾಯದ ಪುಂಡರು ಉದ್ದೇಶಪೂರ್ವಕವಾಗಿಯೇ ದಾಂಧಲೆ ನಡೆಸಿದ್ದಾರೆ. ಪೆಟೋಲ್ ಬಾಂಬ್ ಸ್ಪೋಟಿಸಿ ತಲ್ವಾರ್ ಝಳಪಿಸಿದ್ದಾರೆ ಎಂದು ಆರೋಪಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಿಂದುಗಳನ್ನು ಗುರಿಯಾಗಿಸಿ, ಹಿಂದು ಆಚರಣೆಗಳಿಗೆ ಅಡ್ಡಿಪಡಿಸುವ ಘಟನೆಗಳು ಹೆಚ್ಚುತ್ತಿವೆ. ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದಿರುವ ಘಟನೆ ಇನ್ನೊಂದು ನಿದರ್ಶನ. ಇದರ ಹೊಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೊರಬೇಕು ಎಂದು ಒತ್ತಾಯಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ನಾಗಮಂಗಲದಲ್ಲಿ ನಿನ್ನೆ ಗಣೇಶನ ಮೆರವಣಿಗೆಯ ಸಂದರ್ಭದಲ್ಲಿ ನಡೆದಿರುವ ಅಹಿತಕರ ಘಟನೆಯ ಬಗ್ಗೆ ಪೊಲೀಸ್ ಅಧಿಕಾರಿಗಳು ಹಾಗೂ ಜಿಲ್ಲಾಡಳಿತದೊಂದಿಗೆ ಚರ್ಚಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸಲಾಗಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು. ಘಟನೆಯ ಸಂದರ್ಭದಲ್ಲಿ ಕೆಲವು ಅಂಗಡಿ ಮುಂಗಟ್ಟುಗಳಿಗೆ ಹಾನಿಯಾಗಿದ್ದು ಅವನ್ನು ಪರಿಶೀಲನೆ ನಡೆಸಲಾಗುವುದು. ಈ ಪ್ರಕರಣದ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರೊಂದಿಗೆ ಚರ್ಚಿಸಿದ್ದೇನೆ. ಸಂಬಂಧಿಸಿದ ಆರೋಪಿಗಳನ್ನು ಬಂಧಿಸಲಾಗಿದ್ದು ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ನಮ್ಮ ನಾಗಮಂಗಲ ಶಾಂತಿ ಸೌಹಾರ್ದತೆಯ ತಾಣ. ಇಲ್ಲಿ ಯಾವುದೇ ಅನುಚಿತ ಘಟನೆಗೆ ಅವಕಾಶ ಮಾಡಿಕೊಡುವುದಿಲ್ಲ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಅಂಚೆ ಕಚೇರಿಯಿಂದ ಮಹಿಳೆಯರಿಗೆ ವಿಶೇಷ ಯೋಜನೆ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಪ್ರಾರಂಭಿಸಲಾಗಿದೆ. ಈ ಯೋಜನೆಯನ್ನು ವಿಶೇಷವಾಗಿ ಮಹಿಳೆಯರ ಆರ್ಥಿಕ ಸಬಲೀಕರಣ ಮತ್ತು ಆರ್ಥಿಕ ಭದ್ರತೆಯನ್ನು ಉತ್ತೇಜಿಸುವ ಉದ್ದೇಶದಿಂದ ಪ್ರಾರಂಭಿಸಲಾಗಿದೆ. 2023 ರ ಬಜೆಟ್ ನಲ್ಲಿ ಈ ಯೋಜನೆ ಮಂಡಿಸಲಾಯಿತು. ದೇಶದಲ್ಲಿ ವಾಸಿಸುವ ಮಹಿಳೆಯರು ಮತ್ತು ಹೆಣ್ಣು ಮಕ್ಕಳಿಗೆ ಸುರಕ್ಷಿತ ಮತ್ತು ಆಕರ್ಷಕ ಉಳಿತಾಯ ಆಯ್ಕೆಯನ್ನ ಈ ಯೋಜನೆ ಒದಗಿಸುತ್ತದೆ. ಪೋಸ್ಟ್ ಆಫೀಸ್ ಎಂಎಸ್‌ಎಸ್ಸಿ ಯೋಜನೆಯ ವೈಶಿಷ್ಟ್ಯಗಳು: ಅರ್ಜಿದಾರರು ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯಲ್ಲಿ (ಎಂಎಸ್‌ಎಸ್ಸಿ ಯೋಜನೆ) ಕೇವಲ 2 ವರ್ಷಗಳವರೆಗೆ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ, ಮಹಿಳೆಯರು ಮಾತ್ರ ತಮ್ಮದೇ ಆದ ಖಾತೆಯನ್ನು ತೆರೆಯಬಹುದು. ಎಂಎಸ್‌ಎಸ್ಸಿ ಯೋಜನೆಯಲ್ಲಿ ಲಭ್ಯವಿರುವ ಬಡ್ಡಿದರದ ಬಗ್ಗೆ ಮಾತನಾಡುವುದಾದರೆ, ವಾರ್ಷಿಕ 7.5% ಬಡ್ಡಿದರವನ್ನು ಒದಗಿಸಲಾಗುತ್ತದೆ, ಇದು ಬ್ಯಾಂಕಿನ ಎಫ್ಡಿ ಖಾತೆಯ ಮೇಲಿನ ಬಡ್ಡಿದರಕ್ಕಿಂತ ಹೆಚ್ಚಾಗಿದೆ. ಈಗ ಹೂಡಿಕೆಯ ಬಗ್ಗೆ ಮಾತನಾಡುವುದಾದರೆ, ನೀವು ಕನಿಷ್ಠ 1000 ರೂ.ಗಳಿಂದ ಹೂಡಿಕೆ ಮಾಡಲು ಪ್ರಾರಂಭಿಸಬಹುದು ಮತ್ತು ನೀವು ಗರಿಷ್ಠ…

Read More

ಚಿತ್ರದುರ್ಗದ ರೇಣುಕಾ ಸ್ವಾಮಿ ಕಿಡ್ನಾಪ್ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಕಡೆ ರೇಣುಕಸ್ವಾಮಿ ಕರೆತರುವ ಮೊದಲು ಆರೋಪಿಗಳು ಆತನನ್ನ ತುಮಕೂರಿನ ಬಾರ್ ವೊಂದಕ್ಕೆ ಕರೆತಂದಿದ್ರಂತೆ. ತುಮಕೂರಿನ ರಂಗಾಪುರದ ದುರ್ಗಾ ಬಾರ್ ನಲ್ಲಿ ಆರೋಪಿಗಳು ಮದ್ಯ ಖರೀದಿಸಿದ್ದರು. ಮಧ್ಯಾಹ್ನದ ವೇಳೆಗೆ ತುಮಕೂರಿನ ಬಳಿ ಇಟಿಯೋಸ್ ಕಾರು ನಿಲ್ಲಿಸಿದ್ದಾರೆ. ಬಳಿಕ A4 ರಾಘವೇಂದ್ರ, A6 ಜಗ, A7 ಅನು ಕುಮಾರ್ ಹಾಗೂ ರೇಣುಕಾ ಸ್ವಾಮಿ ಕಾರಿನಿಂದ ಇಳಿದಿದ್ರು. ಬಳಿಕ ಕಾರಿನಿಂದ ಇಳಿದು ಬಾರ್ ಒಳಗೆ ಬರುತ್ತಿರುವ ದೃಶ್ಯ ಬಾರ್ ಹೊರಭಾಗದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಾರ್ ಒಳಗೆ ಇದ್ದ ಕೌಂಟರ್ ನತ್ತ ನಾಲ್ಕು ಜನ ತೆರಳಿದ್ದರು. ಈ ವೇಳೆ ಎರಡು ಬಿಯರ್, ಎರಡು ಲೀಟರ್ ವಾಟರ್ ಬಾಟಲ್, ಸ್ನಾಕ್ಸ್ ಖರೀದಿಸಿದ್ದರು. ಬಾರ್ ಕ್ಯಾಶಿಯರ್ ಮಂಜುನಾಥ್ ಆರೋಪಿಗಳಿಗೆ ಮದ್ಯ ನೀಡಿದ್ದರು. ಪೊಲೀಸರು ಬಂದು ನನಗೆ ಸಿಸಿ ಕ್ಯಾಮೆರಾ ದೃಶ್ಯ ತೋರಿಸಿದ್ದಾಗಲೇ, ಇದು ರೇಣುಕಾ ಸ್ವಾಮಿ ಅಂತ ಗೊತ್ತಾಗಿದ್ದು ಅಂತ ಆ ದಿನದ ಇಂಚಿಂಚೂ…

Read More

ಹಾಸನ: ಸೆಪ್ಟೆಂಬರ್ 15ರಂದು ಕರ್ನಾಟಕದ ಘನ ಸರ್ಕಾರವು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಆಚರಿಸಲು ನಿರ್ಧರಿಸಿದೆ. ಈ ನಿಟ್ಟಿನಲ್ಲಿ, ಮಾನವ ಸರಪಳಿಯನ್ನು ನಿರ್ಮಿಸಿ, ಪ್ರಜಾಪ್ರಭುತ್ವದ ಮಹತ್ವವನ್ನು ಸಾರಲು ಕರೆ ನೀಡಲಾಗಿದೆ  ಎಂದು ಹಾಸನ ಸಂಸದ ಶ್ರೇಯಸ್ ಪಟೇಲ್ ಹೇಳಿದರು. ಸೆಪ್ಟೆಂಬರ್ 15ರ ಭಾನುವಾರದಂದು ಬೆಳಗ್ಗೆ 8:30ರಿಂದ 9:30ರ ತನಕ ಮಾನವ ಸರಪಳಿ ನಿರ್ಮಿಸಲಾಗುತ್ತದೆ. ಅರಕಲಗೂಡು ತಾಲೂಕಿನ ಕಡೂರುಹೊಸಳ್ಳಿ ಗ್ರಾಮದಿಂದ ಈ ಸರಪಳಿ ಆರಂಭಗೊಳ್ಳಲಿದ್ದು, ಹಗರೆ, ಬೇಲೂರು, ಕೈಮರ ಚೆಕ್ ಪೋಸ್ಟ್, ಚಿಕ್ಕಮಗಳೂರು ಗಡಿ ಮೂಲಕ ಸುಮಾರು 114 ಕಿಲೋಮೀಟರ್‌ಗಳಷ್ಟು ಐತಿಹಾಸಿಕ ಮಾನವ ಸರಪಳಿ ನಿರ್ಮಾಣಗೊಳ್ಳಲಿದೆ ಎಂದು ತಿಳಿಸಿದರು. ಪ್ರಜಾಪ್ರಭುತ್ವದ ಮಹತ್ವದ ಕಾರ್ಯದಲ್ಲಿ ನಾವೆಲ್ಲರೂ ಕೈ ಜೋಡಿಸಿ, ಮಾನವ ಸರಪಳಿಯ ಭಾಗವಾಗೋಣ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯೋಣ ಎಂದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

Read More

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490 ಇಂದು, ಚಂದ್ರನು ವೃಶ್ಚಿಕ ರಾಶಿಯ ನಂತರ ಧನು ರಾಶಿಗೆ ಚಲಿಸಲಿದ್ದಾನೆ. ಅಲ್ಲದೆ, ಈ ದಿನ ರಾಧಾ ಅಷ್ಟಮಿ ಹಬ್ಬವನ್ನು ಆಚರಿಸಲಾಗುತ್ತದೆ. ರಾಧಾ ಅಷ್ಟಮಿಯ ದಿನ ರವಿಯೋಗ, ಪ್ರೀತಿ ಯೋಗ, ಆಯುಷ್ಮಾನ್ ಯೋಗ ಮತ್ತು ಜ್ಯೇಷ್ಠ ನಕ್ಷತ್ರದ ಶುಭ ಸಂಯೋಗ ನಡೆಯುತ್ತಿದ್ದು, ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ…

Read More

ಪಾವಗಡ: ಶಾಲಾ ಕಾಲೇಜು ಮಕ್ಕಳಿಗೆ ನೈತಿಕ ಮೌಲ್ಯ,ಪರೀಕ್ಷೆ ಭಯ,ಪೋಕ್ಸೋ ಸಂಬಂಧಿತ ಅರಿವಿನ ಕಾರ್ಯಕ್ರಮ ನಡೆಸುತ್ತಿರುವ ಸಮಾಜ ಸೇವಕ ಪಾವಗಡ ನವೀನ್ ಕಿಲಾರ್ಲಹಳ್ಳಿಯವರಿಗೆ ಶಾಸಕರು ಹೆಚ್.ವಿ.ವೆಂಕಟೇಶ್ ಅವರು ಬುಧವಾರ ಅವರ ನಿವಾಸಕ್ಕೆ ತೆರಳಿ ಅಭಿನಂದಿಸಿ ಗೌರವ ಸಲ್ಲಿಸಿದ ಕಾರ್ಯ ಸಮಾಜದಲ್ಲಿ ಪ್ರಶಂಸೆಗೆ ಪಾತ್ರವಾಯಿತು. ಯಾವುದೇ ಹಣದ ನಿರೀಕ್ಷೆ ಮಾಡದೆ ಸ್ವಂತ ಖರ್ಚಿನಲ್ಲಿ ಕರ್ನಾಟಕ ರಾಜ್ಯದ ಶಾಲಾ ಕಾಲೇಜು ಮಕ್ಕಳಿಗೆ ಜಾಗೃತಿ ಕಾರ್ಯ ಮಾಡುತ್ತಿರುವ ಮಾದರಿ ಕಾರ್ಯಕ್ರಮ ಅದೆಷ್ಟೋ ಮಕ್ಕಳ ಬದುಕಿನಲ್ಲಿ ಬದಲಾವಣೆ ತಂದಿದೆ ಎಂದು ತಾಲ್ಲೂಕಿನ ಜನತೆ ಈಗಾಗಲೇ ಮೆಚ್ಚುಗೆಯ ಮಹಾಪೂರವೇ ಹರಿಸಿದ್ದಾರೆ. ಈ ವೇಳೆ ಪ್ರತಿಕ್ರಿಯಿಸಿದ ಶಾಸಕ ಹೆಚ್.ವಿ.ವೆಂಕಟೇಶ್ ಅವರು  ನವೀನ್ ಮಾಡುತ್ತಿರುವ ಸೇವೆ ಅನ್ಯರಿಗೆ ಪ್ರೇರಣೆಯಾಗಿದೆ. ಜೊತೆಗೆ ಅದ್ಭುತವಾಗಿ ಮೂಡಿ ಬರುತ್ತಿದೆ. ಕಾರ್ಯಕ್ರಮದ ಬಳಿಕ ಮಕ್ಕಳು ತಮ್ಮ ಅನುಭವಗಳನ್ನು ಹೇಳುತ್ತಿರುವುದನ್ನು ಕಣ್ಣಾರೆ ಕಂಡು  ನನಗೆ ತುಂಬಾ ಇಷ್ಟವಾಯಿತು.ಇಂತಹ ಕಾರ್ಯಕ್ರಮವನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಮಾಡುತ್ತಿರುವುದು ನಮ್ಮ ತಾಲ್ಲೂಕಿಗೆ ಹೆಮ್ಮೆಯೆಂದರು. ನನ್ನಿಂದ ಯಾವುದೇ ರೀತಿಯ ಸಹಕಾರ ನೀಡಬೇಕೋ ನೀಡುತ್ತೇನೆ ಎಂದು ಪಾವಗಡ ತಾಲ್ಲೂಕಿನ…

Read More

ನಟ, ನಿರ್ದೇಶಕ, ಕಥೆಗಾರ, ಸ್ಯಾಂಡಲ್‌ವುಡ್‌ನ ಮಿಸ್ಟರ್ ಫರ್ಪೆಕ್ಟ್ ರಮೇಶ್ ಅರವಿಂದ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 60ನೇ ವರ್ಷಕ್ಕೆ ಕಾಲಿಟ್ಟಿರುವ ರಮೇಶ್ ಅರವಿಂದ್, ಇನ್ನೂ ಯಂಗ್ ಆಯಂಡ್ ಎನೆರ್ಜೆಟಿಕ್ ಆಗಿದ್ದಾರೆ. ಈ ಸಂಭ್ರಮದ ನಡುವೆಯೇ ರಮೇಶ್ ಇದೀಗ ದರ್ಶನ್ ಕೇಸ್‌ ಬಗ್ಗೆ ಮಾತನಾಡಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಕೇಸ್‌ನ ಆರೋಪ ಹೊತ್ತು ಜೈಲು ಸೇರಿರುವ ದರ್ಶನ್ ಬಗ್ಗೆ ರಮೇಶ್ ಅರವಿಂದ್ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಇಲ್ಲಿ ಮೂವರು ದರ್ಶನ್‌ಗಳಿದ್ದಾರೆ ಅಂತ ರಮೇಶ್ ಹೇಳಿದ್ದಾರೆ. ಇಷ್ಟು ದಿನ ದರ್ಶನ್ ಬಗ್ಗೆ ನಾನೆಲ್ಲೂ ಮಾತಾಡಿರಲಿಲ್ಲ. ದರ್ಶನ್ ಅಂದಾಕ್ಷಣ ನನಗೆ ಸೂಪರ್ ಸ್ಟಾರ್ ದರ್ಶನ್ ನೆನಪಾಗ್ತಾರೆ. ವೀಕೆಂಡ್ ವಿಥ್ ರಮೇಶ್ ವೇದಿಕೆ ಮೇಲೆ ಕೂತಿದ್ದ ದರ್ಶನ್ ನೆನಪಾಗುತ್ತೆ ಅಂತ ರಮೇಶ್ ನೆನಪಿಸಿಕೊಂಡಿದ್ದಾರೆ. ನಿನ್ನೆಯ ದರ್ಶನ್, ಇವತ್ತಿನ ದರ್ಶನ್, ನಾಳೆಯ ದರ್ಶನ್ ಇದ್ದಾರೆ ಅಂತ ರಮೇಶ್ ಅರವಿಂದ್ ಹೇಳಿದ್ದಾರೆ. ನಿನ್ನೆಯ ದರ್ಶನ್ ಅವರನ್ನು ಸ್ಟಾರ್ ಆಗಿ ನೋಡಿದ್ವಿ. ಇವತ್ತಿಗೆ ದರ್ಶನ್‌ನ ಇಂಥದ್ದೊಂದು ಸಮಸ್ಯೆಯಲ್ಲಿ, ಪ್ರಕರಣದಲ್ಲಿ ನಾವು ನೋಡ್ತಿದ್ದೀವಿ ಅಂತ…

Read More