Author: admin

ಬೆಂಗಳೂರು: ಬೆಂಗಳೂರು ನಗರಾದ್ಯಂತ ಮುಸ್ಲಿಮರು ಈದ್‌ ಮಿಲಾದ್ ಹಬ್ಬವನ್ನು ಆಚರಿಸುವ ಪ್ರಯುಕ್ತ, ಮಸೀದಿಗಳಲ್ಲಿ ಪ್ರಾರ್ಥನೆ ಮುಗಿಸಿ ನಂತರ, ಮೆರವಣಿಗೆಯಲ್ಲಿ ಸ್ಥಬ್ಧ ಚಿತ್ರಗಳು, ಧ್ವನಿವರ್ಧಕಗಳನ್ನು ಉಪಯೋಗಿಸಿಕೊಂಡು, ನಡಿಗೆಯಲ್ಲಿ ವೈ.ಎಂ.ಸಿ.ಎ. ಮೈದಾನ, ಮಿಲ್ಲರ್‌ ರಸ್ತೆ ಖುದ್ದು ಸಾಬ್ ಇದ್ದಾ ಮೈದಾನ, ಶಿವಾಜಿನಗರ ಛೋಟಾ ಮೈದಾನ, ಭಾರತೀನಗರದ ಸುಲ್ತಾನ್‌ಜೀ ಗುಂಟಾ ಮೈದಾನಗಳಲ್ಲಿ ಹಾಗೂ ಇತರೆಡೆಗಳಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಈ ಸಂಬಂಧ ಹಬ್ಬದ ದಿನದಂದು ಈ ಕೆಳಕಂಡ ಸೂಚನೆಗಳನ್ನು ಅನುಸರಿಸಲು ಸೂಚಿಸಲಾಗಿದೆ. ಮೆರವಣಿಗೆ ಸಾಗುವ ಹಾದಿಯಲ್ಲಿ ಸಾರ್ವಜನಿಕರಿಗೆ ಆಡಚಣೆ ಉಂಟಾಗದಂತೆ ಸ್ವಯಂಸೇವಕರು ಹಾಗೂ ಅಯೋಜಕರು ರಸ್ತೆಯ ಎರಡು ಬದಿಯಲ್ಲಿ ನಿಂತು ಮೆರವಣಿಗೆಗಾರರಿಗೆ ಸೂಕ್ತ ನಿರ್ದೇಶನವನ್ನು ನೀಡಿ ಮೆರವಣಿಗೆಯನ್ನು ಶಾಂತ ರೀತಿಯಲ್ಲಿ ಸಾಗುವಂತೆ ಸಹಕರಿಸುವುದು ಹಾಗೂ ಸಾರ್ವಜನಿಕ ಸಂಚಾರ ಸುಗಮವಾಗಿ ಸಾಗಲು ಅನುವು ಮಾಡುವುದು. ಮೆರವಣಿಗೆಯಲ್ಲಿ ಪಾಲ್ಗೊಳ್ಳುವವರು ಯಾವುದೆ ಹರಿತವಾದ ವಸ್ತುಗಳನ್ನು ಹೊಂದಿರಬಾರದು. ಈದ್ ಹಬ್ಬದ ದಿನದಂದು ಮೆರವಣಿಗೆಯ ಸಮಯದಲ್ಲಿ ಯಾವುದೆ ಕಾರಣಕ್ಕೂ ಡಿಜೆ ಗಳನ್ನು ಬಳಸಬಾರದು. 4. ಈದ್ ಹಬ್ಬದ ಪ್ರಯುಕ್ತ ಸ್ತಬ್ದ…

Read More

ಬೆಂಗಳೂರು: ರಾಜ್ಯ ಸರ್ಕಾರ ಇಬ್ಬರು ಹಿರಿಯ ಐಪಿಎಸ್‌‍ ಅಧಿಕಾರಿಗಳನ್ನು ವರ್ಗಾವಣೆ ಮಾಡಿ  ಆದೇಶ ಹೊರಡಿಸಿದೆ. ಗುಪ್ತಚರ ವಿಭಾಗದ ಎಡಿಜಿಪಿಯಾಗಿದ್ದ ಕೆ.ವಿ.ಶರತ್‌ಚಂದ್ರ ಅವರನ್ನು ಪೊಲೀಸ್‌‍ ನೇಮಕಾತಿ ವಿಭಾಗದ ಎಡಿಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ ಮತ್ತು ಹೆಚ್ಚುವರಿಯಾಗಿ ಸಂಚಾರ ಹಾಗೂ ರಸ್ತೆ ಸುರಕ್ಷತಾ ಮುಖ್ಯಸ್ಥರಾಗಿಯೂ ಜವಾಬ್ದಾರಿ ನೀಡಲಾಗಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾಗಿದ್ದ ಹೇಮಂತ್‌ ಎಂ.ನಿಂಬಾಳ್ಕರ್‌ ಅವರನ್ನು ರಾಜ್ಯ ಪೊಲೀಸ್‌‍ ಗುಪ್ತಚರ ವಿಭಾಗದ ಎಡಿಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ. ಇದರ ಜತೆಗೆ ವಾರ್ತಾ ಇಲಾಖೆಯ ಆಯುಕ್ತರ ಜವಾಬ್ದಾರಿಯನ್ನೂ ಕೂಡ ಹೆಚ್ಚುವರಿಯಾಗಿ ನೀಡಲಾಗಿದೆ. ಎಡಿಜಿಪಿ ಅಲೋಕ್‌ ಕುಮಾರ್‌ ಅವರನ್ನು ರಸ್ತೆ ಸುರಕ್ಷತೆ ಮತ್ತು ಸಂಚಾರ ವಿಭಾಗದಿಂದ ಬಿಡುಗಡೆ ಮಾಡಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

Read More

ಪಾವಗಡ:  2024–25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿ.ಪಿ.ಎಸ್. ಆಧಾರಿತ ಮೊಬೈಲ್ ಆಪ್ಲಿಕೇಶನ್ ಬಳಸಿ ಸರ್ವೆ ನಂಬರ್/ಉಪ ಸರ್ವೆ ನಂಬರ್‌ ವಾರು ಬೆಳೆ ಪ್ರದೇಶದ ನಿಖರ ಮಾಹಿತಿಯನ್ನು ದಾಖಲಿಸುವ ಕಾರ್ಯ ಆಯಾ ಗ್ರಾಮಕ್ಕೆ ನಿಯೋಜಿತರಾದ ಖಾಸಗಿ ನಿವಾಸಿಗಳಿಂದ ಆಗಸ್ಟ್ 16ರಿಂದ ತಾಲ್ಲೂಕಿನಾದ್ಯಂತ ಪ್ರಾರಂಭವಾಗಿರುತ್ತದೆ. ಮುಂದುವರೆದು, ರೈತರ ಬೆಳೆ ಸಮೀಕ್ಷೆ ಆಪ್‌ ನಲ್ಲಿ ರೈತರು ತಾವೇ ಸ್ವತಃ ತಮ್ಮ ಜಮೀನಿನಲ್ಲಿನ ಬೆಳೆಗಳ ಸಮೀಕ್ಷೆ ಕಾರ್ಯವನ್ನು ಮಾಡಬಹುದಾಗಿರುತ್ತದೆ. ಬೆಳೆ ಸಮೀಕ್ಷೆ ಕಾರ್ಯದಿಂದ ಸೆರೆ ಹಿಡಿಯಲಾದ ದತ್ತಾಂಶವನ್ನು ಪ್ರಕೃತಿ ವೀಕೋಪದ ಸಂದರ್ಭದಲ್ಲಿ ಬೆಳೆ ಹಾನಿ ಸಂಬವಿಸಿದಾಗ ಎನ್.ಡಿ.ಆರ್.ಎಫ್/ಎಸ್.ಡಿಆರ್.ಎಫ್ ಅಡಿಯಲ್ಲಿ ಸಹಾಯಧನ ನೀಡುವ ಸಂಬಂಧ ಅರ್ಹ ಫಲಾನುಭವಗಳ ಪಟ್ಟಿಯನ್ನು ತಯಾರಿಸಲು, ಬೆಳೆ ವಿಮಾ ಯೋಜನೆಯಡಿ ತಾಕು ಹಂತದ ಬೆಳೆ ಪರಿಶೀಲನೆಗೆ, ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಫಲಾನುಭವಿ ಆಧಾರಿತ ಯೋಜನೆಗಳ ಅನುಷ್ಠಾನಕ್ಕಾಗಿ, ಆರ್.ಟಿ.ಸಿಯಲ್ಲಿ ಬೆಳೆ ವಿವರ ದಾಖಲಾತಿಗಾಗಿ ಹಾಗೂ ಹಣಕಾಸು ಸಂಸ್ಥೆಗಳಲ್ಲಿ ಬೆಳೆ ಸಾಲ ಮಂಜೂರು ಮಾಡಲು ಬಳಸಲಾಗುತ್ತದೆ. ದಿನಾಂಕ:08.09.2024ರ ದಿನದ ಅಂತ್ಯಕ್ಕೆ ಶೇ.55ರಷ್ಟು ತಾಕುಗಳ ಬೆಳೆ…

Read More

ಪಾವಗಡ: ತಾಲ್ಲೂಕಿನ ವೈ.ಎನ್.ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಯುವಕರ ಮತ್ತು ಸಾರ್ವಜನಿಕರ ಶಾಂತಿ ಸಭೆಯನ್ನು ಪೊಲೀಸ್  ಇಲಾಖೆಯಿಂದ ಗುರುವಾರ ಕರೆಯಲಾಗಿತ್ತು. ಗಣಪತಿ ಮೂರ್ತಿ  ವಿಸರ್ಜನೆ ಸಂದರ್ಭಗಳಲ್ಲಿ ನಡೆಯಬಹುದಾದ ಅಹಿತಕರ ಘಟನೆಗಳನ್ನು ತಡೆಯುವ ಉದ್ದೇಶ ಸಭೆಯದಾಗಿತ್ತು. ಗ್ರಾಮಾಂತರ ಸರ್ಕಲ್ ಇನ್ಸ್ಪೆಕ್ಟರ್ ಗಿರೀಶ್ ಅವರು ಮಾತನಾಡಿ ಯುವಜನತೆ ಹುಚ್ಚು ಹುಮ್ಮಸ್ಸಿನಲ್ಲಿ ಗಣಪತಿ ಮೂರ್ತಿ ಮೆರವಣಿಗೆ ಸಂದರ್ಭದಲ್ಲಿ ನೂಕಟ, ತಳ್ಳಾಟ ಹಾಗೂ ಇನ್ನಿತರೆ ಕಠಿಣವುಗಳಲ್ಲಿ ತೊಡೆದುಕೊಳ್ಳಬಾರದು. ಸೂಕ್ಷ್ಮ ಪ್ರದೇಶಗಳಲ್ಲಿ ಕೂಗಾಡೋದು ಘೋಷಣೆಗಳನ್ನು ಕೂಗುವುದು ಉದ್ದೇಶಪೂರ್ವಕವಾಗಿ ಅಲ್ಲೇ ನಿಲ್ಲುವುದು ಇತ್ಯಾದಿ ಕೆಲಸಗಳನ್ನು ಮಾಡಿ ಗ್ರಾಮದ ಶಾಂತಿ ಕದಡಬಾರದು. ಅಂತಹ  ಘಟನೆಗಳು ನಡೆದಲ್ಲಿ ಪೊಲೀಸ್ ತನ್ನ ಕೆಲಸ ಕಾರ್ಯ ಮಾಡಬೇಕಾಗಿರುತ್ತದೆ ಎಂದು ಎಚ್ಚರಿಕೆ ತಿಳಿಸಿದರು. ಇದೇ ಸಂದರ್ಭದಲ್ಲಿ PSI ಮಾಳಪ್ಪ ನಾಯ್ಕೋಡಿ, ಪೊಲೀಸ್ ಸಿಬ್ಬಂದಿ, ಗಣಪತಿಯ ಆಯೋಜಕರು ಹಾಜರಾಗಿದ್ದರು. ವರದಿ: ನಂದೀಶ್ ನಾಯ್ಕ, ಪಾವಗಡ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

Read More

ಪಾವಗಡ: ಹಿಂದುಗಳ ಉಳಿವಿಗಾಗಿ ಸಹಿ ಸಂಗ್ರಹದ ಅಭಿಯಾನಕ್ಕೆ ಸಮಸ್ತ ಹಿಂದೂಗಳು ಕೈಜೋಡಿಸಬೇಕು ಎಂದು ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷರಾದ ಅನಿಲ್ ಯಾದವ್ ಅವರು ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಿಹಿ ಅಭಿಯಾನಕ್ಕೆ ಚಾಲನೆ ನೀಡಿ ನಂತರ ಮಾತನಾಡಿದ ಅವರು ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ವಕ್ಫ್ ಬೋರ್ಡ್ ಕಾಯ್ದೆಗಳನ್ನು ತಿದ್ದುಪಡಿ ಮಾಡಬೇಕೆಂದು ಸಂಸತ್ತಿನಲ್ಲಿ ಮಂಡನೆ ಮಾಡಿ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಹಿಂದೂ ವಿರೋಧವಾದ ಕಾಂಗ್ರೆಸ್ ಮತ್ತು ಕಾಂಗ್ರೆಸ್ಸಿನ ಬೆಂಬಲಿತ ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ, ಈ ವಿಚಾರವಾಗಿ ಪರ ಮತ್ತು ವಿರೋಧಗಳು ನಡೆಯುತ್ತಿದ್ದೆ ಹಾಗಾಗಿ ಕೇಂದ್ರ ಸರ್ಕಾರದಿಂದ ಜಂಟಿ ಸಂಸದೀಯ ಸಮಿತಿ ರಚನೆ ಮಾಡಿದ್ದೆ, ಈ ತಿದ್ದುಪಡಿ ಕಾಯ್ದೆಯ ವಿರುದ್ಧವಾಗಿ ಮುಸ್ಲಿಮರು ಪ್ರತಿ ಮನೆಮನೆ ಹಾಗೂ ಮಸೀದಿಗಳಿಗೆ ತೆರಳಿ ದೊಡ್ಡ ಪ್ರಮಾಣದಲ್ಲಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹಿಂದುಗಳು ಕೂಡ ಈ ಕಾಯ್ದೆಯ ಪರವಾಗಿ ವಾಕ್ ಬೋರ್ಡ್ ಸಂಬಂಧಪಟ್ಟಂತೆ 40 ತಿದ್ದುಪಡಿಗಳು ಆಗಬೇಕೆಂದು ಬೆಂಬಲ ವ್ಯಕ್ತಪಡಿಸಬೇಕಾಗಿದೆ ಎಂದರು. ಈಗಾಗಲೇ ಶ್ರೀರಾಮ ಸೇನೆಯ ಜಿಲ್ಲಾ ಘಟಕದ ವತಿಯಿಂದ…

Read More

ತುಮಕೂರು: ತಾಂತ್ರಿಕ ಆನೆಯನ್ನು ಕುಣಿಗಲ್ ತಾಲೂಕಿನ ಯಡಿಯೂರಿನಲ್ಲಿರುವ  ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ದೇವಸ್ಥಾನಕ್ಕೆ ತಾಂತ್ರಿಕ ಆನೆಯನ್ನು ವಿವಿಧ ಸಂಘಟನೆಗಳು ಕೊಡುಗೆಯಾಗಿ ನೀಡಿದವು. ಕೂಪಾ (CUPA) ಮತ್ತು ಪ್ರಾಣಿಗಳ ಸೂಕ್ತ ಉಲ್ಲೇಖದ ಪರಿವಾರ (PETA) ಇಂಡಿಯಾ ಸಂಘಟನೆಗಳು ಇಂದು “ನಿರಂಜನಾ” ಎಂಬ ಹೆಸರಿನ 3 ಮೀಟರ್ ಉದ್ದದ ಮತ್ತು 800 ಕಿಲೋಗ್ರಾಂ ತೂಕದ್ದಾಗಿದೆ. ದೇವಾಲಯವು  ನಿಜವಾದ ಆನೆಗಳನ್ನು ಬಳಸುವುದಿಲ್ಲ ಎಂದು ಗುರುತಿಸಲು ಇದು ನೈತಿಕ ಪ್ರಾಣಿ ಪರಿಪಾಲನೆಯ ಒಂದು ಪ್ರಮುಖ ಹಂತವನ್ನು ಪ್ರತಿನಿಧಿಸುತ್ತದೆ ಮತ್ತು ಕರ್ನಾಟಕದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧಾರ್ಮಿಕ ಕೊಡುಗೆ ಇಲಾಖೆ ಒಪ್ಪಿಗೆಯೊಂದಿಗೆ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿರುವ  ಮೊದಲ ತಾಂತ್ರಿಕ ಆನೆಯಾಗಿದೆ. ನಟಿ ಸಂಯುಕ್ತ ಹೊರನಾಡು , CUPA ಮತ್ತು PETA ಇಂಡಿಯಾದಿಂದ ಜಂಟಿಯಾ ನೀಡಲಾಯಿತು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

Read More

ತುಮಕೂರು: ಮುಂಬರುವ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಶಾಂತಿಯುತ ವಾತಾವರಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಜವಾಬ್ದಾರಿಗಳ ಬಗ್ಗೆ ಸಮುದಾಯದ ಹಿರಿಯರೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಅವರು  ಚರ್ಚೆ ನಡೆಸಿದರು. ತಿಲಕ್ ಪಾರ್ಕ್ ಪೊಲೀಸ್ ಠಾಣಾ ಆವರಣದಲ್ಲಿ  ಸಮುದಾಯದ ಮೌಲ್ವಿಗಳು ಮತ್ತು ಮುಖಂಡರೂಂದಿಗೆ ಜಿಲ್ಲಾ ಚರ್ಚಿಸಿ ಕೆಲವು ಸಲಹೆ ಸೂಚನೆಗಳನ್ನು ನೀಡಿ ಸಮಾಜದಲ್ಲಿ ಶಾಂತಿ ಕಾಪಾಡುವಂತೆ ಕೋರಿದರು. ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿ.ಮರಿಯಪ್ಪ, ನಗರ ಡಿಎಸ್ಪಿ ಚಂದ್ರಶೇಖರ್, ಇನ್ಸ್‌ಪೆಕ್ಟರ್ ಗಳಾದ ಪುರುಷೋತ್ತಮ್, ದಿನೇಶ್, ಗುರುನಾಥ್ ಹಾಗೂ ಪಿಎಸ್ ಐ ಗಳು ಹಾಜರಿದ್ದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

Read More

ಸಲ್ಮಾನ್ ಖಾನ್ ಬಳಿ ಹಲವು ಐಶಾರಾಮಿ ವಸ್ತುಗಳಿವೆ. ದೊಡ್ಡ ಸಂಖ್ಯೆಯ ದುಬಾರಿ ಕಾರುಗಳಿವೆ. ಆದರೆ ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಧರಿಸಿರುವುದು ವಿಶ್ವದ ಅತ್ಯಂತ ದುಬಾರಿ ವಾಚುಗಳಲ್ಲಿ ಒಂದು. ಇತ್ತೀಚೆಗೆ ಜಾಕೋಬ್ ಅರಾಬೋ ಕಂಪನಿಯ ವಾಚ್ ಧರಿಸಿದ್ದರು. ವಾಚ್ನ ಧರಿಸಿ ಅವರು ಪೋಸ್ ಕೊಟ್ಟಿದ್ದಾರೆ. ಇದು ಬಿಲಿಯನೇರ್ III ವಾಚ್ ಅನ್ನೋದು ವಿಶೇಷ. ಇದರಲ್ಲಿ ನೂರಾರು ಡೈಮಂಡ್ಸ್ ಇದೆ. ಜಾಕೋಬ್ ಅವರೇ ಈ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿ ಗಮನ ಸೆಳೆದಿದೆ. ಜಾಕೋಬ್ ಅವರು ಸಲ್ಲುಗೆ ವಾಚ್ ತೊಡಿಸುತ್ತಿರುವ ಫೋಟೋ ವೈರಲ್ ಆಗಿದೆ. ನಂತರ ಸಲ್ಲು ಅವರು ವಾಚ್ನ ಕ್ಯಾಮೆರಾಗೆ ಶೋ ಮಾಡಿದ್ದಾರೆ. ಯಾರಿಗೂ ಈ ವಾಚ್ನ ಧರಿಸೋಕೆ ನಾನು ಅವಕಾಶ ನೀಡುವುದಿಲ್ಲ ಎಂದಿರುವ ಅವರು ಸಲ್ಲು ಮೇಲಿನ ವಿಶೇಷ ಗೌರವದಿಂದಾಗಿ ಅವರು ವಿಶೇಷವಾಗಿ ಈ ಅವಕಾಶ ನೀಡಿದ್ದಾರೆ. ಈ ವಾಚ್ನಲ್ಲಿ 152 ವೈಟ್ ಡೈಮಂಡ್ಸ್ ಇದೆ. ಪ್ರತಿ ಸೆಗ್ಮೆಂಟ್ನಲ್ಲಿ 76 ಡೈಮಂಡ್ಸ್ ಇದೆ.…

Read More

ತಮಾಷೆಗಾಗಿ ತುರ್ತು ಟ್ರಿಪ್‌ ಸಿಸ್ಟಮ್‌ (ETS) ಬಟನ್‌ ಒತ್ತಿ ಮೆಟ್ರೋಗೆ ಅಡ್ಡಿಪಡಿಸಿ ಯುವಕಗೆ 5,000 ದಂಡ ವಿಧಿಸಿದ ಘಟನೆ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ನಡೆದಿದೆ. ಬೆಂಗಳೂರಿನ ವಿವೇಕನಗರ ನಿವಾಸಿ ಹೇಮಂತ್ ಕುಮಾರ್ (21) ಎಂಬಾತ ಎಂಜಿ ರಸ್ತೆ ನಿಲ್ದಾಣದಲ್ಲಿ ಇಟಿಎಸ್ ಒತ್ತಿದ್ದಾನೆ. ಇದರಿಂದಾಗಿ ಟ್ರಿನಿಟಿ ನಿಲ್ದಾಣದಿಂದ ಬರುತ್ತಿದ್ದ ರೈಲನ್ನು ಎಂಜಿ ರೋಡ್ ಮೆಟ್ರೋದಲ್ಲಿ 10 ನಿಮಿಷಗಳ ಕಾಲ ನಿಲ್ಲಿಸಲಾಯಿತು. ಹೀಗಾಗಿ ನೇರಳೆ ಮಾರ್ಗದ ಎಲ್ಲಾ ಸೇವೆಗಳು ಅಸ್ತವ್ಯಸ್ತಗೊಂಡವು. ರೈಲು ಪುನಾರಂಭವಾದ ನಂತರ ಹೇಮಂತ್‌ ಕಬ್ಬನ್ ಪಾರ್ಕ್ ನಿಲ್ದಾಣದಲ್ಲಿ ಇಳಿದು ಹೊರಟಿದ್ದಾನೆ. ಘಟನೆಯ ಹಿನ್ನೆಲೆಯಲ್ಲಿ ಮೆಟ್ರೋ ಸಿಬ್ಬಂದಿ ಸಿಸಿಟಿವಿ ಮೂಲಕ ಹೇಮಂತ್‌ ನನ್ನು ಗುರುತಿಸಿ ಹಿಂಬಾಲಿಸಿದ್ದಾರೆ. ಹೇಮಂತ್‌ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ಇಳಿದ ನಂತರ ಸಿಬ್ಬಂದಿ ಆತನನ್ನು ತಡೆದು ಘಟನೆಯ ಬಗ್ಗೆ ವಿಚಾರಿಸಿದರು. ಆದರೆ, ಮೋಜಿಗಾಗಿ ಒತ್ತಿ ಹೇಳಿರುವುದಾಗಿ ತಪ್ಪೊಪ್ಪಿಕೊಂಡಿದ್ದು, ಆತನಿಗೆ 5000 ರೂ. ದಂಡ ವಿಧಿಸಲಾಗಿದೆ. ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತದ (ಬಿಎಂಆರ್‌ಸಿಎಲ್) ಸಿಬ್ಬಂದಿ ಮಾತನಾಡಿ, ಯಾವುದೇ ಉದ್ದೇಶವಿಲ್ಲದೆ…

Read More

ಜವಾಹರ ನವೋದಯ ವಿದ್ಯಾಲಯದ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗುತ್ತದೆ. ನವೋದಯ ವಿದ್ಯಾಲಯವು ತನ್ನದೇ ಆದ ಶೈಕ್ಷಣಿಕ ಉದ್ದೇಶಗಳನ್ನು ಹೊಂದಿದ್ದು, ವಿದ್ಯಾಲಯವು ಗ್ರಾಮೀಣ ಪ್ರದೇಶದ ಪ್ರತಿಭಾವಂತ ಮಕ್ಕಳಿಗೆ ಮೀಸಲಾಗಿರುವ ಶಿಕ್ಷಣ ಸಂಸ್ಥೆಯಾಗಿದೆ. ಹಲವು ವರ್ಷಗಳಿಂದ 10 ಮತ್ತು 12ನೇ ತರಗತಿಯ ಪರೀಕ್ಷೆಗಳಲ್ಲಿ ವಿದ್ಯಾಲಯ ನೂರಕ್ಕೆ ನೂರು ಫಲಿತಾಂಶವನ್ನು ಪಡೆಯುತ್ತಿದೆ. ವಿದ್ಯಾಲಯದಲ್ಲಿ ಓದಿದ ನೂರಾರು ವಿದ್ಯಾರ್ಥಿಗಳು ಹಲವು ಕ್ಷೇತ್ರಗಳಲ್ಲಿ ಉನ್ನತ ಸಾಧನೆಯನ್ನು ಮಾಡಿರುತ್ತಾರೆ. ಮಕ್ಕಳನ್ನು ಜವಾಹರ ನವೋದಯ ವಿದ್ಯಾಲಯಕ್ಕೆ ಸೇರಿರುವ ಮುನ್ನ ವಿದ್ಯಾಲಯದ ಕುರಿತು ಮಾಹಿತಿಯನ್ನು ತಿಳಿಯಿರಿ. ಜವಾಹರ ನವೋದಯ ವಿದ್ಯಾಲಯದ ಕಿರು ಪರಿಚಯವನ್ನು ವಿದ್ಯಾರ್ಥಿಗಳು, ಪೋಷಕರ ಅನುಕೂಲಕ್ಕಾಗಿ ನೀಡಲಾಗಿದೆ. ಇದು ವಸತಿ ಶಾಲೆಯಾಗಿದ್ದು, ಪರೀಕ್ಷೆ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ನವೋದಯ ವಿದ್ಯಾಲಯವು ತನ್ನದೇ ಆದ ಶೈಕ್ಷಣಿಕ ಉದ್ದೇಶಗಳನ್ನು ಹೊಂದಿದೆ. ಪ್ರತಿ ವರ್ಷ 6ನೇ ತರಗತಿಗೆ ಪ್ರವೇಶ ಪಡೆಯುವ 80 ವಿದ್ಯಾರ್ಥಿಗಳಲ್ಲಿ ಕನಿಷ್ಠ ಪ್ರತಿಶತ 75 ಮಕ್ಕಳು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಾಗಿರುತ್ತಾರೆ. ಅಲ್ಲದೇ ನಿಯಮಾನುಸಾರ ಪ್ರತಿಶತ ಶೇ 22.5ರಷ್ಟು ಮಕ್ಕಳು ಪರಿಶಿಷ್ಟ ಜಾತಿ ಮತ್ತು…

Read More