Subscribe to Updates
Get the latest creative news from FooBar about art, design and business.
- ಕೃಷಿ ಲೋಕ /ಕಾಡು ಹಣ್ಣು.. | ಕೋಳಿ ಜುಟ್ಟು ಹಣ್ಣು
- ಮಗುವಿನ ರೋಗನಿರೋಧಕ ಶಕ್ತಿ ಹೆಚ್ಚಳಕ್ಕೆ ಸ್ತನ್ಯಪಾನ ಅತ್ಯಗತ್ಯ: ಸಿ. ದೀಪಾ ಕರೆ
- ತುಮಕೂರಲ್ಲಿ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆಗೆ ಯಶಸ್ವಿ ತೆರೆ
- ತುಮಕೂರು: 30ನೇ ವಾರ್ಡಿನ ಗಾರೇನರಸಯ್ಯ ನಕಟ್ಟೆ ಸ್ವಚ್ಛತಾ ಕಾರ್ಯ: ಪಾಲಿಕೆ ಸಿಬ್ಬಂದಿ, ನಾಗರಿಕ ಹಿತರಕ್ಷಣಾ ಸಮಿತಿ ಭಾಗಿ
- ಲಿಂಕ್ ಕೆನಾಲ್, ಭೂಸ್ವಾಧೀನ ವಿರೋಧಿಸಿ ಆ. 6ರಿಂದ ಮೂರು ದಿನಗಳ ಸತ್ಯಾಗ್ರಹ: ಎಐ ಡೇಟಾ ಕೇಂದ್ರಗಳಿಂದ ಪರಿಸರ, ಉದ್ಯೋಗಕ್ಕೆ ಆತಂಕ ಆರೋಪ
- ಸಂತಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಾ. ಮಹಾಂತ ಶಿವಯೋಗಿ ಜಯಂತಿ ಹಾಗೂ ವ್ಯಸನ ಮುಕ್ತ ದಿನಾಚರಣೆ
- ತುಮಕೂರು: ದೇವರಾಯಪಟ್ಟಣದಲ್ಲಿ ಚಿರತೆ ಹಾವಳಿ, ಇಸ್ರೋ ಆವರಣದಲ್ಲಿ ಕುರಿ ಬಲಿ – ಬೋನು ಅಳವಡಿಕೆ
- ಗೃಹಲಕ್ಷ್ಮಿ, ಯುವನಿಧಿ: 323 ಕೋಟಿ ರೂ. ಬಿಡುಗಡೆ
Author: admin
ಶ್ರೀ ಕ್ಷೇತ್ರ ವರನಾಡು ಅನ್ನಪೂರ್ಣೇಶ್ವರಿ ದೇವಿಯ ಪ್ರಧಾನ ಆರಾಧಕರು ನವೆಂಬರ್ 1ವಶೀಕರಣ ಸ್ಪೆಷಲಿಸ್ಟ್ ಇನ್ India ಶ್ರೀ ಶ್ರೀ ವಿಘ್ನೇಶ್ವರ ಭಟ್ ರವರು ಫೋನ್ ಮೂಲಕವೇ ನಿಮ್ಮ ಸಮಸ್ಯೆಗಳನ್ನು ಕೇಳಿ ಪರಿಹಾರ ಮಾಡಿಕೊಡುತ್ತಾರೆ, ಒಮ್ಮೆ ಆದರು ಸಹ ಫೋನ್ ಮಾಡಿರಿ ನಿರುದ್ಯೋಗ ಸಮಸ್ಯೆಗೆ ಹಾಗೂ ಪ್ರೀತಿ ಪ್ರೇಮದ ವೈಫಲ್ಯ ಹಾಗು ಗಂಡ ಹೆಂಡತಿ ಜಗಳ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಮಾತುಗಳು ಕೇಳಲು ಇನ್ನು ಅನೇಕ ಗುಪ್ತ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡುತ್ತಾರೆ, ಒಮ್ಮೆ ಫೋನ್ ಮಾಡಿ ನಿಮಗೆ ಶತ್ರುಗಳಿಂದ ತೊಂದ್ರೆ ಆಗಿದ್ರೆ ಅಥವ ವ್ಯವಹಾರದಲ್ಲಿ ಏಳಿಗೆ ಕಾಣುತ್ತಾ ಇಲ್ಲ ಅಂದರೆ ಫೋನ್ ಮಾಡಿ ಪ್ರಶ್ನೆಗೆಳು ಕೇಳಿ ಅದಕ್ಕೂ ಪರಿಹಾರ ನೀಡುತ್ತೇವೆ ಕರೆ ಮಾಡಿ ವಿಶೇಷ ರೀತಿಯ ಆಂಜನೇಯ ಸ್ವಾಮಿ ಬಲಿಷ್ಠ ಯಂತ್ರ ಕೂಡ ದೊರೆಯುವುದು ಪಡೆಯಲು ತಕ್ಷಣ ಕರೆ ಮಾಡಿ 9535839666 ಪಿತೃ ಪಕ್ಷದ ಸಮಯದಲ್ಲಿ ಈ ನಕ್ಷತ್ರದಲ್ಲಿ ಬದಲಾವಣೆಯಾಗಲಿದೆ ಈ 12 ರಾಶಿಗಳ ಜನರ ಮೇಲೆ…
ತುರುವೇಕೆರೆ: ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಯಶಸ್ವಿಯಾಗಿ ಆಚರಿಸುವಂತೆ ತಾಲೂಕಿನ ಜನತೆಗೆ ತುರುವೇಕೆರೆ ತಾಲೂಕು ತಹಶೀಲ್ದಾರ್ ಎಂ.ಎನ್. ಕುಂ.ಇ. ಅಹ್ಮದ್ ಅವರು ಮನವಿ ಮಾಡಿದ್ದಾರೆ. ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಲ್ಲಾಡಳಿತದ ಸೂಚನೆಯಂತೆ, ಜಿಲ್ಲೆಯ ಮುಖ್ಯ ಹೆದ್ದಾರಿಯಲ್ಲಿ ಮಾನವ ಸರಪಳಿ ನಿರ್ಮಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಶಿರಾ ತಾಲೂಕಿನಿಂದ 90 ಕಿ.ಮೀ. ಮಾನವ ಸರಪಳಿ: “ಆಗಸ್ಟ್ 15 ರಂದು ಬೆಳಗ್ಗೆ 9 ಗಂಟೆಗೆ ಶಿರಾ ತಾಲೂಕಿನಿಂದ ಪ್ರಾರಂಭವಾಗುವ ಈ ಮಾನವ ಸರಪಳಿ ಕಾರ್ಯಕ್ರಮವು 90 ಕಿಲೋಮೀಟರ್ ಗಳಷ್ಟು ವಿಸ್ತರಿಸಲಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗೌರವಿಸುವ ಉದ್ದೇಶದಿಂದ ಸರ್ಕಾರ ಈ ಕಾರ್ಯಕ್ರಮವನ್ನು ಆಯೋಜಿಸಿದೆ”. ನಮ್ಮ ತಾಲೂಕಿನಿಂದ ಸುಮಾರು 2000 ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಪ್ರತಿ ಗ್ರಾಮ ಪಂಚಾಯಿತಿಯಿಂದ ಜನರನ್ನು ಕರೆತರಲು ಗ್ರಾಮ ಪಂಚಾಯಿತಿಗೆ ಎರಡು ಬಸ್ ವ್ಯವಸ್ಥೆಯನ್ನು ಮಾಡಲಾಗಿದೆ. ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಅದನ್ನು ಯಶಸ್ವಿಯಾಗಿಸುವಂತೆ ಮನವಿ ಮಾಡುತ್ತೇನೆಂದು ಅವರು ತಿಳಿಸಿದರು. ಇನ್ನು ಈ…
ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ)ದ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ನಿಧನರಾಗಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಯೆಚೂರಿ ಏಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಅಸುನೀಗಿದ್ದಾರೆ. ಎರಡು ಬಾರಿ ರಾಜ್ಯಸಭಾ ಸದಸ್ಯರಾಗಿದ್ದ ಯೆಚೂರಿ ಮೂರು ಬಾರಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದ್ದರು. ಅತ್ಯಂತ ಕ್ರಿಯಾಶೀಲರಾಗಿದ್ದ ಯೆಚೂರಿ ಬಂಡವಾಳಶಾಹಿ, ಕೋಮುವಾದಿಗಳ ವಿರುದ್ದ ಹೋರಾಟ ನಡೆಸಿದ್ದರು. ಯೆಚೂರು ಅಪಾರ ಸಂಗಾತಿಗಳನ್ನು ಅಗಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ: ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯಚೂರಿ ಅವರ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಎಡ ಸಿದ್ದಾಂತದ ಪ್ರಖರ ಚಿಂತಕರಾಗಿದ್ದ ಯಚೂರಿ ಅವರು ಅಪ್ಪಟ ಪ್ರಜಾಪ್ರಭುತ್ವವಾದಿಯೂ ಆಗಿದ್ದರು. ಕೋಮುವಾದಿ ರಾಜಕೀಯದ ವಿರುದ್ಧ ಜಾತ್ಯತೀತ ಶಕ್ತಿಗಳ ಒಗ್ಗೂಡಿಸುವಿಕೆಯಲ್ಲಿ ಮುಖ್ಯ ಪಾತ್ರ ವಹಿಸುತ್ತಾ ಬಂದಿರುವ ಯಚೂರಿಯವರು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ರೂವಾರಿಗಳಲ್ಲೊಬ್ಬರಾಗಿದ್ದರು. ಆ ಸರ್ಕಾರದ ‘ಸಾಮಾನ್ಯ ಕನಿಷ್ಠ ಕಾರ್ಯಕ್ರಮ’ ರಚನೆಯಲ್ಲಿಯೂ ಅವರದ್ದೇ ಪ್ರಧಾನ…
ಕಿರಿಕ್ ಪಾರ್ಟಿ (Kirik Party) ನಿರ್ದೇಶನ ಮಾಡಿದ್ದು ರಿಷಬ್ ಶೆಟ್ಟಿಯವರು. ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಹಾಗು ರಶ್ಮಿಕಾ ಮಂದಣ್ಣ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದ ಶೂಟಿಂಗ್ ಮುಗಿದು, ಡಬ್ಬಿಂಗ್ ಸಮಯದಲ್ಲಿ ಆಕಸ್ಮಿಕವಾಗಿ ನಡೆದ ಘಟನೆಯೊಂದನ್ನು ರಿಷಬ್ ಶೆಟ್ಟಿ ಶೇರ್ ಮಾಡಿಕೊಂಡಿದ್ದಾರೆ. ತುಂಬಾ ಕುತೂಹಲಕಾರಿ ಎನ್ನಿಸುವ ಆ ಸಂಗತಿ ಇಲ್ಲಿದೆ ನೋಡಿ.. ಕಿರಿಕ್ ಪಾರ್ಟಿಲಿ ತ್ರೋಔಟ್ ಒಂದು ಕ್ಯಾರೆಕ್ಟರ್ ಇದೆ ಫಿಲಂನಲ್ಲಿ. ಎಲ್ಲೂ ಆನ್‌ಸ್ಕ್ರೀನ್ ಬರೋದೇ ಇಲ್ಲ ಅವ್ರು.. ಆದರೆ, ನಾರ್ತ್ ಕರ್ನಾಟಕ ಹುಡುಗಂದು ಡೈಲಾಗ್ ಕೇಳಿಸ್ತಾನೆ ಇರುತ್ತೆ ನಿಮ್ಗೆ.. ಡಬ್ಬಿಂಗ್‌ನಲ್ಲಿ ಹಾಕಿರೋ ಐಡಿಯಾ ಅದು.. ರೀಸನ್ ಏನು ಅಂದ್ರೆ, ಪ್ರೊಡ್ಯೂಸರ್-ಡಿಸ್ಟ್ರಿಬ್ಯೂಟರ್ ಜಯಣ್ಣ ಅವ್ರು ಒಂದ್ ಸಲ, ‘ಅಪ್ಪಾಜೀ, ನಾರ್ತ್ ಕರ್ನಾಟಕ ಕ್ಯಾರೆಕ್ಟರ್ ಏನಾದ್ರೂ ಹಾಕ್ಬೇಕು ಅಪ್ಪಾಜಿ.. ಅಲ್ಲೆಲ್ಲ ನಮ್ ಜನ ಬಾಳ ಇಷ್ಟಪಡ್ತಾರೆ..’ ಅಂತ ಹೇಳಿದ್ರು. ಅಯ್ಯಯ್ಯೋ, ಆದ್ರೆ ಶೂಟಿಂಗ್ ಎಲ್ಲಾನೂ ಆಗೋಗಿದ್ಯಲ್ಲಾ, ಏನ್ ಮಾಡೋದು ಅಂತ ಯೋಚ್ನೆ ಆಗಿತ್ತು.. ಆಗ ನಾನು ಮತ್ತೆ ರಕ್ಷಿತ್ ಬರ್ತಾ ಇದ್ವಿ..…
ಸರ್ಕಾರಿ ಕಚೇರಿ, ಬ್ಯಾಂಕ್ ಸೇರಿದಂತೆ ಕರ್ನಾಟಕದಲ್ಲಿ ಕಡ್ಡಾಯವಾಗಿ ಕನ್ನಡದಲ್ಲೇ ವ್ಯವಹರಿಸಬೇಕು ಎಂದು ರಾಜ್ಯ ಸರ್ಕಾರ ಸೂಚಿಸಿರುವ ಬೆನ್ನಲ್ಲೇ ಬಹುತೇಕ ಕ್ಷೇತ್ರಗಳು ಕನ್ನಡಮಯವಾಗುತ್ತಿದೆ. ಇದು ರಾಜ್ಯದ ಜನತೆಯಲ್ಲಿ ಸಂತಸ ಮೂಡಿಸಿದೆ. ಇದೀಗ ವೈದ್ಯಕೀಯ ಕ್ಷೇತ್ರಗಳಲ್ಲಿಯೂ ಕನ್ನಡ ರಾರಾಜಿಸುತ್ತಿರುವುದು ವಿಶೇಷ. ಅದರಲ್ಲಿಯೂ ವೈದ್ಯರು ಕೂಡ ಕನ್ನಡದಲ್ಲಿಯೇ ಸಲಹಾ ಚೀಟಿ ಬರೆದುಕೊಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ಸಾಮಾನ್ಯವಾಗಿ ವೈದ್ಯರು ಬರೆದುಕೊಡುವ ಪ್ರಿಸ್ ಕ್ರಿಪ್ಶನ್ ಓದುವುದು, ಅದರಲ್ಲಿ ಬರೆದಿರುವ ಔಷಧಗಳ ಬಗ್ಗೆ ಅರ್ಥಮಾಡಿಕೊಳ್ಳುವುದೇ ಒಂದು ದೊಡ್ಡ ತಲೆನೋವಾಗಿ ಬಿಡುತ್ತದೆ. ಹೀಗಿರುವಾಗ ಈಗ ವೈದ್ಯರು ಕೂಡ ಕನ್ನಡದಲ್ಲಿಯೇ ಪ್ರಿಸ್ ಕ್ರಿಪ್ಶನ್ ಬರೆದುಕೊಡುವುದರಿಂದ ಕನ್ನಡ ಬರುವ ಪ್ರತಿಯೊಬ್ಬರು ಓದಿ ಅರ್ಥೈಸಿಕೊಂಡು ಔಷಧ ಅಂಗಡಿಗಳಲ್ಲಿಯೂ ನಾವೇ ಹೇಳಿ ಔಷಧಿ ಪಡೆಯಬರುದು. ಹೊಳೆನರಸಿಪುರದ ಜನರಲ್ ಆಸ್ಪತ್ರೆ ವೈದ್ಯರೊಬ್ಬರು ಕನ್ನಡದಲ್ಲಿ ಬರೆದಿರುವ ಔಷಧ ಚೀಟಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವೈದ್ಯರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಕೆಲದಿನಗಳ ಹಿಂದಷ್ಟೇ ಡಾ.ಹರಿಪ್ರಸಾದ್ ಎಂಬುವವರು ಕನ್ನಡದಲ್ಲಿ ಬರೆದುಕೊಟ್ಟ ಪ್ರಿಸ್ ಕ್ರಿಪ್ಶನ್ ಭಾರಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಇದೀಗ…
ಬೆಂಗಳೂರು: ರಾಜ್ಯದ ಪ್ರತೀ ಕುಟುಂಬಗಳಿಗೆ ಪ್ರತೀ ತಿಂಗಳಿಗೆ ಸರ್ಕಾರದ 4–5 ಸಾವಿರ ರೂಪಾಯಿ ಅನುಕೂಲ ಆಗುತ್ತಿದೆ. ಇದರಿಂದ ಲಕ್ಷಾಂತರ ಕುಟುಂಬಗಳಿಗೆ ಆರ್ಥಿಕ ಶಕ್ತಿ ನೀಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಬಿಎಂಟಿಸಿ ನೂತನ ಬಸ್ ಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರದಲ್ಲಿ ಜನಸಂಖ್ಯೆ ಹೆಚ್ಚುತ್ತಿದೆ. ಇಲ್ಲಿನ ಹೆಚ್ಚುತ್ತಿರುವ ಶ್ರಮಿಕ ವರ್ಗಗಳಿಗೆ ಅನುಕೂಲ ಮಾಡುವ ಉದ್ದೇಶದಿಂದ ನೂತನ ಬಸ್ ಗಳನ್ನು ಬಿಎಂಟಿಸಿಗೆ ಸೇರ್ಪಡೆಗೊಳಿಸುವ ಜತೆಗೆ ಹಿಂದಿನ ಸರ್ಕಾರ ಸ್ಥಗಿತಗೊಳಿಸಿದ್ದ ಇಂದಿರಾ ಕ್ಯಾಂಟೀನ್ ಗಳನ್ನು ಆರಂಭಿಸಿದ್ದಲ್ಲದೆ, ನೂತನವಾಗಿ ಇನ್ನಷ್ಟು ಕ್ಯಾಂಟೀನ್ ಗಳನ್ನು ಶುರುಮಾಡಲಿದ್ದೇವೆ. ಇದೇ ಶ್ರಮಿಕ ವರ್ಗದ ಅನುಕೂಲಕ್ಕಾಗಿ ಶಕ್ತಿ ಯೋಜನೆ ಸೇರಿದಂತೆ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ಯಶಸ್ವಿಯಾಗಿ ಮುಂದುವರೆಸುತ್ತಿದ್ದೇವೆ. ನಮ್ಮ ಸರ್ಕಾರ ಇರುವವರೆಗೂ ಗ್ಯಾರಂಟಿ ಯೋಜನೆಗಳು ಮುಂದುವರೆಯಲಿವೆ ಎಂದು ತಿಳಿಸಿದರು. ಬಡವರ ಮತ್ತು ಮಧ್ಯಮ ವರ್ಗದ ವಿರೋಧಿಯಾಗಿರುವ ಬಿಜೆಪಿ ಈ ಗ್ಯಾರಂಟಿ ಯೋಜನೆಗಳ ವಿರುದ್ಧ ಅಪಪ್ರಚಾರ ಮಾಡುತ್ತಿದೆ. ಈ ಅಪಪ್ರಚಾರಕ್ಕೆ ಕಿವಿಗೊಡಬೇಡಿ. ಈ ಗ್ಯಾರಂಟಿಗಳು ಇನ್ನಷ್ಟು ಪರಿಣಾಮಕಾರಿಯಾಗಿ…
ಮಧುರೈ: ಮಹಿಳಾ ವಿದ್ಯಾರ್ಥಿ ನಿಲಯದಲ್ಲಿ ರೆಫ್ರಿಜರೇಟರ್ ಸ್ಫೋಟಗೊಂಡು ಇಬ್ಬರು ವಿದ್ಯಾರ್ಥಿನಿಯರು ಮೃತಪಟ್ಟ ದಾರುಣ ಘಟನೆ ತಮಿಳುನಾಡಿನ ಮಧುರೈನ ಮಹಿಳಾ ವಿದ್ಯಾರ್ಥಿ ನಿಲಯದಲ್ಲಿ ನಡೆದಿದೆ. ಪರಿಮಳಾ ಹಾಗೂ ಶರಣ್ಯಾ ಮೃತಪಟ್ಟವರು ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಹಲವು ವಿದ್ಯಾರ್ಥಿನಿಯರು ಗಾಯಗೊಂಡಿದ್ದಾರೆ. ಗುರುವಾರ ಮುಂಜಾನೆ ನಡೆದ ಈ ಸ್ಫೋಟದ ಬೀಕರತೆಗೆ ಕಟ್ಟಡದಲ್ಲಿ ಬೆಂಕಿ ಹೊತ್ತಿಕೊಂಡು, ಹೊಗೆ ಆವರಿಸಿತ್ತು. ಒಳಗಿದ್ದವರನ್ನು ರಕ್ಷಿಸಲಾಗಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಧುರೈ ಜಿಲ್ಲಾಧಿಕಾರಿ ಎಂ.ಎಸ್. ಸಂಗೀತಾ ಮಾಹಿತಿ ನೀಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ಬೆಂಗಳೂರು: ರಸ್ತೆಗುಂಡಿಗಳನ್ನು ವೈಜ್ಞಾನಿಕವಾಗಿ ಮುಚ್ಚಲು ಬಿಬಿಎಂಪಿ ಮುಂದಾಗಿದೆ. ಜೆಟ್ ಪ್ಯಾಚರ್ ಯಂತ್ರದ ಮೂಲಕ ರಸ್ತೆಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಬಿಬಿಎಂಪಿ ನಡೆಸಿದೆ, ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಈ ಕಾರ್ಯ ನಡೆಸಲಾಗಿದೆ. ಪಂತರಪಾಳ್ಯ — ನಾಯಂಡಹಳ್ಳಿ ಮೆಟ್ರೋ ನಿಲ್ದಾಣದ ಬಳಿ ಉಂಟಾಗಿದ್ದ ರಸ್ತೆಗುಂಡಿಯನ್ನು ಹೊಸ ಯಂತ್ರದ ಮೂಲಕ ಅಧಿಕಾರಿಗಳ ಸಮ್ಮುಖದಲ್ಲಿ ದುರಸ್ತಿಗೊಳಿಸಲಾಯಿತು. ತ್ವರಿತವಾಗಿ ಗುಂಡಿ ಮುಚ್ಚುವುದಲ್ಲದೆ ಮತ್ತೆ ಗುಂಡಿ ಉಂಟಾಗದಂತೆ ಈ ಮಾದರಿಯನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಆರ್.ನಗರ ವಲಯ ಆಯುಕ್ತ ಅಜಯ್, ಜೆಟ್ ಪ್ಯಾಚರ್ ಯಂತ್ರದ ಮೂಲಕ ಪ್ರಮುಖ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಶೀಘ್ರಗತಿಯಲ್ಲಿ ಮುಚ್ಚಬಹುದಾಗಿದೆ. ಒಂದು ಬಾರಿಗೆ 150 ರಿಂದ 180 ಚ.ಮೀ. ಅಗಲದ ಗುಂಡಿಗಳನ್ನು ಮುಚ್ಚಬಹುದಾಗಿದೆ. ಗುಂಡಿ ಮುಚ್ಚಿದ ಕೂಡಲೆ ವಾಹನಗಳು ಅದರ ಮೇಲೆ ಸರಾಗವಾಗಿ ಸಂಚಾರ ಮಾಡಬಹುದಾಗಿದೆ ಎಂದು ತಿಳಿಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.…
ಮಂಡ್ಯ: ನಾಗಮಂಗಲ ಪಟ್ಟಣದಲ್ಲಿ ಕಳೆದ ರಾತ್ರಿ ಗಣಪತಿ ಮೂರ್ತಿ ವಿಸರ್ಜನೆ ವೇಳೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದಿರುವ ಘಟನೆಯನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ ಎಂದು ಹೇಳಿದ್ದಾರೆ. ಗಣಪತಿ ದೇವರ ಮೆರವಣಿಗೆಯಲ್ಲಿ ಶಾಂತಿಯುತವಾಗಿ ತೆರಳುತ್ತಿದ್ದ ಭಕ್ತರನ್ನು ಗುರಿ ಮಾಡಿ ಒಂದು ಸಮುದಾಯದ ಪುಂಡರು ಉದ್ದೇಶಪೂರ್ವಕವಾಗಿಯೇ ದಾಂಧಲೆ ಎಬ್ಬಿಸಿ ಸಾರ್ವಜನಿಕರು–ಪೊಲೀಸರ ಮೇಲೆ ಕಲ್ಲು, ಚಪ್ಪಲಿ ಎಸೆದು ಪೆಟ್ರೋಲ್ ಬಾಂಬ್ ಸ್ಫೋಟಿಸಿ ತಲ್ವಾರ್ ಝಳಪಿಸುವ ದುಸ್ಸಾಹಸಕ್ಕೆ ಕೈ ಹಾಕಿರುವುದು ಪಟ್ಟಣದಲ್ಲಿ ಶಾಂತಿ ಸುವ್ಯವಸ್ಥೆ ವೈಫಲ್ಯವಾಗಿರುವುದಕ್ಕೆ ಸಾಕ್ಷಿ ಎಂದು ಕಿಡಿಕಾರಿದ್ದಾರೆ. ಪೊಲೀಸ್ ಠಾಣೆ ಎದುರು ರಕ್ಷಣೆ ಕೊಡಿ ಎಂದು ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದವರ ಮೇಲೆಯೇ ಆ ಕೋಮಿನ ಪುಂಡರು ದಬ್ಬಾಳಿಕೆ ನಡೆಸುತ್ತಾರೆ ಎಂದರೆ ನಾವು ಎಲ್ಲಿದ್ದೇವೆ ಎನ್ನುವ ಅನುಮಾನ ಬರುತ್ತದೆ ಎಂದಿರುವ ಎಚ್‌ಡಿ ಕುಮಾರಸ್ವಾಮಿ, ಇಲ್ಲಿ ಸ್ಥಳೀಯ ಪೊಲೀಸರ ವೈಫಲ್ಯವೂ ಎದ್ದು ಕಾಣುತ್ತಿದೆ. ಕಾಂಗ್ರೆಸ್…
ರಾಯಚೂರು: ರಾಯಚೂರಿನಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ಗುಂಪು ಘರ್ಷಣೆ ನಡೆದಿರುವ ಘಟನೆ ನಡೆದಿದೆ. ರಾಯಚೂರಿನ ತಿಮ್ಮಾಪುರದಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ಗುಂಪು ಘರ್ಷಣೆ ನಡೆದಿದೆ. ತಡರಾತ್ರಿಯಿಂದ ಬೆಳಿಗ್ಗೆವರೆಗೂ ಗಣೇಶ ಮೂರ್ತಿ ವಿಸರ್ಜನೆ ನಡೆದಿದ್ದು, ಮೆರವಣಿಗೆ ವೇಳೆ ಗಲಾಟೆಯಾಗಿದೆ. ಈ ವೇಳೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಲಾಠಿ ಪ್ರಹಾರ ನಡೆಸಿ ಗುಂಪುಗಳನ್ನು ಚದುರಿಸಲಾಗಿದೆ. ಸದ್ಯ ಪರಿಸ್ಥಿತಿ ಶಾಂತವಾಗಿದೆ ಎಂದು ತಿಳಿದುಬಂದಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296