Subscribe to Updates
Get the latest creative news from FooBar about art, design and business.
- ಕೃಷಿ ಲೋಕ /ಕಾಡು ಹಣ್ಣು.. | ಕೋಳಿ ಜುಟ್ಟು ಹಣ್ಣು
- ಮಗುವಿನ ರೋಗನಿರೋಧಕ ಶಕ್ತಿ ಹೆಚ್ಚಳಕ್ಕೆ ಸ್ತನ್ಯಪಾನ ಅತ್ಯಗತ್ಯ: ಸಿ. ದೀಪಾ ಕರೆ
- ತುಮಕೂರಲ್ಲಿ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆಗೆ ಯಶಸ್ವಿ ತೆರೆ
- ತುಮಕೂರು: 30ನೇ ವಾರ್ಡಿನ ಗಾರೇನರಸಯ್ಯ ನಕಟ್ಟೆ ಸ್ವಚ್ಛತಾ ಕಾರ್ಯ: ಪಾಲಿಕೆ ಸಿಬ್ಬಂದಿ, ನಾಗರಿಕ ಹಿತರಕ್ಷಣಾ ಸಮಿತಿ ಭಾಗಿ
- ಲಿಂಕ್ ಕೆನಾಲ್, ಭೂಸ್ವಾಧೀನ ವಿರೋಧಿಸಿ ಆ. 6ರಿಂದ ಮೂರು ದಿನಗಳ ಸತ್ಯಾಗ್ರಹ: ಎಐ ಡೇಟಾ ಕೇಂದ್ರಗಳಿಂದ ಪರಿಸರ, ಉದ್ಯೋಗಕ್ಕೆ ಆತಂಕ ಆರೋಪ
- ಸಂತಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಾ. ಮಹಾಂತ ಶಿವಯೋಗಿ ಜಯಂತಿ ಹಾಗೂ ವ್ಯಸನ ಮುಕ್ತ ದಿನಾಚರಣೆ
- ತುಮಕೂರು: ದೇವರಾಯಪಟ್ಟಣದಲ್ಲಿ ಚಿರತೆ ಹಾವಳಿ, ಇಸ್ರೋ ಆವರಣದಲ್ಲಿ ಕುರಿ ಬಲಿ – ಬೋನು ಅಳವಡಿಕೆ
- ಗೃಹಲಕ್ಷ್ಮಿ, ಯುವನಿಧಿ: 323 ಕೋಟಿ ರೂ. ಬಿಡುಗಡೆ
Author: admin
ಕೃಷ್ಣರಾಜಪೇಟೆ: ನಮ್ಮ ಪೂರ್ವಿಕರು ಆಚರಿಸಿಕೊಂಡು ಬರುತ್ತಿರುವ ಗಣೇಶೋತ್ಸವ ಹಬ್ಬವು ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿದೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ಆನಂದೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು. ಕೃಷ್ಣರಾಜಪೇಟೆ ಪಟ್ಟಣದ ನಾಗಮಂಗಲ ರಸ್ತೆಯಲ್ಲಿರುವ ಗಣಪತಿ ಪೆಂಡಾಲ್ ನಲ್ಲಿ ಹಿಂದೂ ಮುಸ್ಲಿಮರು ಶ್ರದ್ಧಾ ಭಕ್ತಿಯಿಂದ ಗಣೇಶೋತ್ಸವ ಆಚರಿಸಿದ್ದು, ಈ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು. ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ ತಿಲಕ್ ಅವರು, ಸ್ವಾತಂತ್ರ್ಯ ಪೂರ್ವದಲ್ಲಿ ಗಣೇಶೋತ್ಸವವನ್ನು ಸ್ವಾತಂತ್ರ್ಯ ಪ್ರೇಮಿಗಳನ್ನು ಎಚ್ಚರಿಸಲು ಸಂಪರ್ಕ ಸೇತುವೆಯಾಗಿ ಗಣೇಶನನ್ನು ಆರಾಧಿಸಿ ಉತ್ಸವ ಮಾಡಿದರು. ಇಂದಿನ ದಿನಮಾನದಲ್ಲಿ ಒಡೆದ ಮನಸ್ಸುಗಳನ್ನು ಒಗ್ಗೂಡಿಸಲು, ಹಿಂದೂ ಮುಸ್ಲಿಂ ಬಾಂಧವರಲ್ಲಿ ಭಾವೈಕ್ಯತೆಯ ಸಂದೇಶವನ್ನು ಸಾರಲು ಗಣೇಶೋತ್ಸವ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುತ್ತಿದೆ. ಇಂದು ಕೃಷ್ಣರಾಜಪೇಟೆ ಪಟ್ಟಣದ ಎಲ್ಲ ಮುಸ್ಲಿಂ ಯುವಕ ಬಂದವರು ಗಣೇಶನನ್ನ ಪೂಜೆ ಮಾಡಿ, ಮಜ್ಜಿಗೆ ಪಾನಕ ಜ್ಯೂಸ್ ವಿತರಿಸಿ ಪರಸ್ಪರ ಶುಭಾಶಯಗಳು ವಿನಿಮಯ ಮಾಡಿಕೊಳ್ಳುತ್ತಿರುವುದು ಇಡೀ ನಾಗರಿಕ ಸಮಾಜವೇ ಮೆಚ್ಚುವ ಸಂಗತಿ ಆಗಿದೆ ಎಂದು ಆನಂದೇಗೌಡ ಹೇಳಿದರು. ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್…
ತಿಪಟೂರು: ತಿಪಟೂರ್ ನಗರದ ಜನರಿಗೆ ನಗರಸಭೆ ಕಲುಷಿತ ನೀರನ್ನು ಕುಡಿಸುತ್ತಿದ್ದು, ತಾಲ್ಲೂಕಿನ ಈಚನೂರು ಗ್ರಾಮದ ಕೆರೆಗೆ ಕಳೆದ ನಾಲ್ಕೈದು ವರ್ಷಗಳಿಂದ ನಗರ ಸಭೆ ಕಲುಷಿತ ನೀರನ್ನು ಕಳುಹಿಸುತ್ತಿದೆ ಎನ್ನುವ ಆಕ್ರೋಶ ಕೇಳಿ ಬಂದಿದೆ. ಶಾಸಕರು ಹಾಗೂ ಮಾಜಿ ಶಾಸಕರ ಗಮನಕ್ಕೆ ಈ ವಿಚಾರವನ್ನು ಸಾಕಷ್ಟು ಬಾರಿ ತಂದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈ ಬಗ್ಗೆ ಯಾರೂ ಯಾವುದೇ ಸ್ಪಷ್ಟನೆ ಕೂಡ ನೀಡುತ್ತಿಲ್ಲ ಅಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕಳೆದ ನಾಲ್ಕೈದು ವರ್ಷಗಳಿಂದ ಕೆರೆಗೆ ಅಧಿಕಾರಿಗಳು ಕಲುಷಿತ ನೀರು ಬಿಡುತ್ತಿದ್ದಾರೆ. ಈ ಕಲುಷಿತ ನೀರನ್ನು ಕುಡಿದು ಇಪ್ಪತ್ತು ಕುರಿಗಳು ಸಾವನ್ನಪ್ಪಿದ ಘಟನೆ ಕೂಡ ನಡೆದಿದೆ ಅಂತ ಇಲ್ಲಿನ ಸಾರ್ವಜನಿಕರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆರೆಯಲ್ಲಿ ಕಲುಷಿತ ನೀರು ಸಂಗ್ರಹವಾಗುತ್ತಿರುವುದನ್ನು ತಡೆಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಹೇಮಾವತಿ ನೀರು ಹಾಗೂ ನಗರದ ಯುಜಿಡಿಯ ಕಲುಷಿತ ನೀರು ಈಚನೂರು ಕೆರೆಗೆ ಒಟ್ಟಿಗೆ ಸಂಗ್ರಹವಾಗ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಸ್ಥಳೀಯ ಜನಪ್ರತಿನಿಧಿಗಳು ಈ…
ಕೊರಟಗೆರೆ: ಜೆಡಿಎಸ್ ತೊರೆದು ನಾಲ್ವರು ಜೆಡಿಎಸ್ ಸದಸ್ಯರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವ ಘಟನೆ ಕೊರಟಗೆರೆ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ವೇಳೆ ನಡೆದಿದೆ. ತೆರವಾಗಿದ್ದ ಕೊರಟಗೆರೆ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನಕ್ಕೆ ಇಂದು ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಕುತೂಹಲ ಕೆರಳಿಸಿತ್ತು. ಮೀಸಲಾತಿ ಆಯ್ಕೆ, ಕೊನೆಗೂ ಪರಿಶಿಷ್ಟ ಮಹಿಳಾ ಅಭ್ಯರ್ಥಿ ಪಟ್ಟಿ ಬಿಡುಗಡೆಯಾಗಿದೆ. ಪರಿಶಿಷ್ಟ ಮಹಿಳಾ ಅಭ್ಯರ್ಥಿ ಒಬ್ಬರೇ ಇದ್ದ ಕಾರಣ ಅಧ್ಯಕ್ಷರ ಆಯ್ಕೆಯಲ್ಲಿ ಅದೃಷ್ಟ ಅನಿತಾ ಕೈ ಹಿಡಿದಿದ್ದು, ಪಟ್ಟಣ ಪಂಚಾಯತಿ ಅಧ್ಯಕ್ಷರಾಗಿ ಆಯ್ಕೆ ಅವರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಉಸ್ಮಾಪಾರಿಯಾ ಆಯ್ಕೆಯಾಗಿ ಅಧಿಕಾರ ಸ್ವೀಕರಿಸಿದರು. ಪಟ್ಟಣ ಪಂಚಾಯತಿ 14 ತಿಂಗಳ ಅವಧಿಗೆ ಅಧ್ಯಕ್ಷ , ಉಪಾಧ್ಯಕ್ಷರ ಚುನಾವಣೆ ನೆಡೆಯಿತು. ಕಾಂಗ್ರೆಸ್ ಪಕ್ಷದ ಐದು ಜನ ಸದಸ್ಯರೊಂದಿಗೆ ಪಕ್ಷೇತರ ಅಭ್ಯರ್ಥಿ ನಟರಾಜ ಸೇರಿದಂತೆ ಮೂರು ಜನ ಜೆಡಿಎಸ್ ಸದಸ್ಯರ ಒಮ್ಮತದಿಂದ ಅವಿರೋಧವಾಗಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಆಯ್ಕೆಯಾಯಿತು. ಕಾಂಗ್ರೆಸ್ ಪಕ್ಷ ಸೇರ್ಪಡೆಯಾದ ಜೆಡಿಎಸ್ ಸದಸ್ಯರಿಗೆ ಹಾಗೂ…
ತುಮಕೂರು: ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ತಾಯಿ ಮಗಳು ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆ ತಿಪಟೂರು ತಾಲೂಕು ರಾಮಶೆಟ್ಟಿಹಳ್ಳಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 206 ಅಂಡರ್ ಪಾಸ್ ಬಳಿ ನಡೆದಿದೆ. ಮಗಳು ವೀಣಾ(16) ಮತ್ತು ಆಕೆಯ ತಾಯಿ ಕಮಲಮ್ಮ (42) ಮೃತ ಮಹಿಳೆಯಾಗಿದ್ದಾರೆ ಇಂದು ಬೆಳಿಗ್ಗೆ 9 ಗಂಟೆ ವೇಳೆಯಲ್ಲಿ ಮಗಳನ್ನು ಶಾಲೆಗೆ ಬಿಡಲು ಹೋಗುವಾಗ ಹಿಂಬದಿಯಿಂದ ಬಂದ ಗೀತಾಂಜನೇಯ ಗಾರ್ಮೆಂಟ್ಸ್ ಹೆಸರಿನ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಪಾದಚಾರಿ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದು ಹೆಚ್ಚಿನ ಚಿಕಿತ್ಸೆಗಾಗಿ ತಿಪಟೂರು ಆಸ್ಪತ್ರೆಗೆ ಕಳುಹಿಸಲಾಗಿದೆ. ಘಟನೆ ಸಂಬಂಧ ತಿಪಟೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿ ಸ್ಥಳದಲ್ಲಿದ್ದವರು ಪ್ರತಿಭಟನೆ ನಡೆಸಿದರು. ಈ ನಡುವೆ ಪೊಲೀಸರು ಹಾಗೂ ಗ್ರಾಮಸ್ಥರ ನಡುವೆ ತಳ್ಳಾಟ ನೂಕಾಟ ನಡೆಯಿತು. ಹಿಂದೆ ಹಲವಾರು ಬಾರಿ ಈ ಭಾಗದ ಗ್ರಾಮಸ್ಥರು ಅಂಡರ್…
ತುಮಕೂರು: ನಿನ್ನೆ ಎರಡು ಕಾರುಗಳ ನಡುವೆ ನಡೆದ ಅಪಘಾತದಲ್ಲಿ ಐವರು ಮೃತಪಟ್ಟ ಸ್ಥಳಕ್ಕೆ ಇಂದು ಗೃಹ ಸಚಿವ ಜಿ. ಪರಮೇಶ್ವರ್ ಭೇಟಿ ನೀಡಿ ಮಾಹಿತಿ ಪಡೆದರು. ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು. ಅಲ್ಲದೆ ಶವಾಗಾರಕ್ಕೆ ತೆರಳಿ ಸಂತ್ರಸ್ಥರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಇದೇ ಸಂದಭದಲ್ಲಿ ಪತ್ರಕತರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಪಘಾತಗಳು, ಪ್ರಾಣ ಕಳೆದುಕೊಂಡವರ ಸಂಖ್ಯೆ. ಶೇ.50ರಷ್ಟು ಕಡಿಮೆಯಾಗಿದೆ. ರಸ್ತೆ ಅಪಘಾತಗಳ ಸಂಖ್ಯೆ ನಿಯಂತ್ರಿಸಲು ಕ್ರಮ ಕೈಗೊಳ್ಳಲು ಗೃಹ ಇಲಾಖೆಯಿಂದ ಸರಕಾರಕ್ಕೆ 100 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಣಕಾಸು ಇಲಾಖೆಗೆ ಕಳುಹಿಸಿಕೊಡಲಾಗಿದೆ ಎಂದರು. ರಾಜ್ಯದಲ್ಲಿ ಅಪಘಾತಗಳಿಂದ ಸಾವಿರಾರು ಮಂದಿ ಮೃತಪಟ್ಟಿದ್ದಾರೆ. ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ಮೇಲೆ ನಿಯಂತ್ರಿಸಲು ಲೋಕೋಪಯೋಗಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಯೊಂದಿಗೆ ಚಚಿಸಲಾಗುತ್ತಿದೆ. ಎಲ್ಲೆಲ್ಲಿ ತಿರುವುಗಳಿವೆ ಅಲ್ಲಿ ಅಪಘಾತಗಳು ಆಗದಂತೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದರು. ಮೈಸೂರು-ಬೆಂಗಳುರು ರಸ್ತೆ ನಿಮಾಣ ಮಾಡಿದ ನಂತರ ಕೇವಲ 4 ತಿಂಗಳಲ್ಲೇ 100ಕ್ಕೂ ಹೆಚ್ಚು ಮಂದಿ ಅಪಘಾತದಲ್ಲಿ…
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಹಾಗೂ ಇತರೆ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಸೆ.12 ರವರೆಗೆ ವಿಸ್ತರಿಸಿ ಕೋರ್ಟ್ ಆದೇಶಿಸಿದೆ. ಇಂದು ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಮುಕ್ತಾಯವಾಗಿತ್ತು. ಪ್ರಕರಣದ ಎಲ್ಲ 17 ಆರೋಪಿಗಳನ್ನು ಜೈಲುಗಳಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಬೆಂಗಳೂರಿನ 24 ನೇ ಎಸಿಎಂಎಂ ಕೋರ್ಟ್ ಗೆ ಹಾಜರು ಪಡಿಸಲಾಯ್ತು. ವಿಚಾರಣೆ ನಡೆಸಿದ ಕೋರ್ಟ್ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿ ಆದೇಶ ಹೊರಡಿಸಿದೆ. ಇನ್ನೂ ಈ ಪ್ರಕರಣ ಸಂಬಂಧ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಹೀಗಾಗಿ ಕೊಲೆ ಆರೋಪ ಹೊತ್ತ ನಟ ದರ್ಶನ್ ಸೇರಿದಂತೆ ಇತರ ಆರೋಪಿಗಳು ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆಗಳಿವೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ದಿವ್ಯ ಸ್ಪಂದನಾ ಅಲಿಯಾಸ್ ರಮ್ಯಾ, ಕನ್ನಡ ಮಾತ್ರವಲ್ಲದೇ ಕೆಲವು ಭಾಷೆಗಳ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು. ನಂತರ ಕಾಂಗ್ರೆಸ್‌ನಿಂದ ರಾಜಕೀಯಕ್ಕೆ ಪ್ರವೇಶಿಸಿ ಸಂಸದೆಯೂ ಆದರು. ಆದರೆ ರಾಜಕೀಯದಲ್ಲಿ ವಿಫಲರಾಗಿ ಸಂಸದೆ ಪಟ್ಟವೂ ಹೋಗಿ ಕೊನೆಗೆ ಸಿನಿಮಾ, ರಾಜಕೀಯ ಎಲ್ಲದ್ದರಿಂದಲೂ ದೂರ ಆಗಿದ್ದಾರೆ. ಇನ್ನು ರಮ್ಯಾ ಹೆಸರು ಹೇಳಿದಾಗಲೆಲ್ಲ ಅವರ ಮದುವೆ ವಿಚಾರ ಪ್ರಸ್ತಾಪ ಆಗೇ ಆಗುತ್ತದೆ. ಏಕೆಂದರೆ, ವಯಸ್ಸು 41 ಆದರೂ ಇನ್ನು ಮದುವೆ ಆಗದೇ ಉಳಿದಿರುವುದರಿಂದ ಮದುವೆ ಯಾವಾಗ ಎಂಬ ಪ್ರಶ್ನೆ ಆಗಾಗ ಕೇಳಿಬರುತ್ತಲೇ ಇದೆ. ತಾಜಾ ಸಂಗತಿ ಏನೆಂದರೆ, ರಮ್ಯಾ ಅವರು ಸದ್ದಿಲ್ಲದೆ ಮದುವೆಗೆ ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಸುದ್ದಿ ಸ್ಯಾಂಡಲ್ ವುಡ್ ನಲ್ಲಿ ಸದ್ಯಕ್ಕೆ ಭಾರಿ ಸಂಚಲನ ಮೂಡಿಸಿದೆ. ರಮ್ಯಾ ಅವರು ಖ್ಯಾತ ಉದ್ಯಮಿಯನ್ನು ವರಿಸಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಇದೇ ನವೆಂಬರ್ ತಿಂಗಳಲ್ಲಿ ಹಸೆಮಣೆ ಏರಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ನಿಶ್ಚಿತಾರ್ಥ ಕೂಡ ನೆರವೇರಲಿದೆಯಂತೆ. ರಮ್ಯಾ ವರಿಸಲಿರುವ ಆ ಉದ್ಯಮಿ ಯಾರೆಂಬುದು ಇನ್ನು ಅಧಿಕೃತವಾಗಿ…
ವಿಚಾರಣಾಧೀನ ಕೈದಿಯಾಗಿ ನಟ ದರ್ಶನ್ ಜೈಲು ಸೇರಿ 3 ತಿಂಗಳು ಕಳೆದಿದೆ. ಸದ್ಯ ಬಳ್ಳಾರಿ ಕಾರಾಗೃಹದಲ್ಲಿ ದರ್ಶನ್ ಅವರನ್ನು ಇರಿಸಲಾಗಿದೆ. ಇವತ್ತಿಗೆ ನ್ಯಾಯಾಂಗ ಬಂಧನ ಮುಗಿಯಲಿದ್ದು ಎಲ್ಲಾ ಆರೋಪಿಗಳು ವೀಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್‌ಗೆ ಹಾಜರಾಗಲಿದ್ದಾರೆ. ಮತ್ತೊಂದು ಕಡೆ ಜಾಮೀನು ಪಡೆಯಲು ಅರ್ಜಿ ಸಲ್ಲಿಸುವ ಪ್ರಯತ್ನ ನಡೀತಿದೆ. ಪೆರೋಲ್ ಮೇಲೆ ಒಂದೆರಡು ಗಂಟೆ ಅವರನ್ನು ಜೈಲಿನಿಂದ ಹೊರಗೆ ಕರೆತರುವ ಬಗ್ಗೆ ಚರ್ಚೆ ನಡೀತಿದೆ. ಸಿನಿಮಾ ಕಾರ್ಯಕ್ರಮದಲ್ಲಿ ಭಾಗಿ ಆಗಲು ಈ ವ್ಯವಸ್ಥೆ ಮಾಡುವ ಕಸರತ್ತು ಶುರುವಾಗಿದೆ. ಈ ಬಗ್ಗೆ ನಿರ್ಮಾಪಕ ಶಿಲ್ಪಾ ಶ್ರೀನಿವಾಸ್ ವಾಹಿನಿಗೆ ಮಾಹಿತಿ ನೀಡಿದ್ದಾರೆ. ರಿಯಲ್ ಸ್ಟಾರ್ ‘ಉಪೇಂದ್ರ’ ಚಿತ್ರದ 25 ವರ್ಷದ ಸಂಭ್ರಮಾಚರಣೆಗೆ ದರ್ಶನ್ ಕರೆತರುವ ಬಗ್ಗೆ ಚರ್ಚೆ ಶುರುವಾಗಿದೆ. ಸ್ವತಃ ಉಪೇಂದ್ರ ನಿರ್ದೇಶಿಸಿ ನಟಿಸಿದ್ದ ‘ಉಪೇಂದ್ರ’ ಸಿನಿಮಾ ದಾಖಲೆ ಬರೆದಿತ್ತು. ಈ ಚಿತ್ರವನ್ನು ಶೀಘ್ರದಲ್ಲೇ ರೀ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ಇದೇ ಅಕ್ಟೋಬರ್ 22ಕ್ಕೆ ಸಿನಿಮಾ 25 ವರ್ಷ ಪೂರೈಸಲಿದೆ. ‘ಉಪೇಂದ್ರ’ ಚಿತ್ರವನ್ನು ಶಿಲ್ಪಾ…
ಮುಡ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅರ್ಜಿ ವಿಚಾರಣೆ, ಸಿಎಂ ಪಟ್ಟದ ಬಗ್ಗೆ ವಿವಿಧ ಸಚಿವರ ಹೇಳಿಕೆಗಳು ಹೊರಬರುತ್ತಿರುವಾಗಲೇ ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ. ಭಾನುವಾರ ರಾತ್ರಿ ವಿಮಾನ ಏರುವ ಮೊದಲು ಅವರು ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆಯೊಂದನ್ನು ನೀಡಿದ್ದಾರೆ. ಕುಟುಂಬದ ಜೊತೆ ಒಂದು ವಾರದ ಪ್ರವಾಸಕ್ಕಾಗಿ ಡಿ. ಕೆ. ಶಿವಕುಮಾರ್ ಭಾನುವಾರ ರಾತ್ರಿ ಅಮೆರಿಕಕ್ಕೆ ತೆರಳಿದ್ದಾರೆ. ಇದು ವೈಯಕ್ತಿಕ ಪ್ರವಾಸವಾಗಿದೆ. ಆದರೆ ಇದರ ಹಿಂದೆ ರಾಜಕೀಯ ನಡೆ ಇದೆ ಎಂದು ಬಿಂಬಿಸಲಾಗುತ್ತಿತ್ತು. ಆದ್ದರಿಂದ ಡಿ. ಕೆ. ಶಿವಕುಮಾರ್ ಸ್ಪಷ್ಟನೆ ಕೊಟ್ಟಿದ್ದಾರೆ. ಲೋಕಸಭೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರದಿಂದ 3 ದಿನಗಳ ಕಾಲ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಸಹ ಅಮೆರಿಕದಲ್ಲಿದ್ದಾರೆ. ನಟ, ರಾಜಕೀಯ ನಾಯಕ ಕಮಲ್ ಹಾಸನ್ ಸಹ ಅಮೆರಿಕ ಪ್ರವಾಸದಲ್ಲಿದ್ದಾರೆ. ಆದ್ದರಿಂದ ಡಿ. ಕೆ. ಶಿವಕುಮಾರ್ ಅಮೆರಿಕ ಪ್ರವಾಸ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಉಪ ಮುಖ್ಯಮಂತ್ರಿ ಡಿ. ಕೆ.…
ಡೋಲೋ 650 ಒಂದು ಜನಪ್ರಿಯ ಪ್ರತ್ಯಕ್ಷವಾದ ಔಷಧವಾಗಿದ್ದು, ನೋವು ನಿವಾರಣೆ ಮತ್ತು ಜ್ವರವನ್ನು ನಿಯಂತ್ರಿಸಲು ವ್ಯಾಪಕವಾಗಿ ಬಳಸಲಾಗುತ್ತದೆ, ಅದರ ಕೈಗೆಟುಕುವ ಬೆಲೆ ಮತ್ತು ಲಭ್ಯತೆಯಿಂದಾಗಿ, ದೈನಂದಿನ ಕಾಯಿಲೆಗಳನ್ನು ಎದುರಿಸಲು ಅನೇಕ ಜನರು ಡೋಲೋ 650 ಅನ್ನು ಬಳಸುತ್ತಾರೆ. ಆದರೆ ಯಾರು ನಿಖರವಾಗಿ Dolo 650 ಅನ್ನು ತೆಗೆದುಕೊಳ್ಳಬಹುದು ಮತ್ತು ಅದನ್ನು ಬಳಸುವ ಮೊದಲು ನೀವು ಏನು ತಿಳಿದುಕೊಳ್ಳಬೇಕು? ಈ ಬ್ಲಾಗ್ ಈ ಪ್ರಶ್ನೆಗಳನ್ನು ಅನ್ವೇಷಿಸುತ್ತದೆ ಮತ್ತು Dolo 650 ಬೆಲೆ ವಿವರಗಳೊಂದಿಗೆ ನಿಮಗೆ ಸಹಾಯ ಮಾಡುತ್ತದೆ. ಜ್ವರವನ್ನು ಕಡಿಮೆ ಮಾಡಲು ಮತ್ತು ನೋವನ್ನು ನಿವಾರಿಸಲು ವಯಸ್ಕರು ಸುರಕ್ಷಿತವಾಗಿ ತೆಗೆದುಕೊಳ್ಳಬಹುದು. ವಯಸ್ಕರಿಗೆ ಸಾಮಾನ್ಯ ಡೋಸ್ ಪ್ರತಿ 4 ರಿಂದ 6 ಗಂಟೆಗಳಿಗೊಮ್ಮೆ ಒಂದು ಟ್ಯಾಬ್ಲೆಟ್ (650 ಮಿಗ್ರಾಂ), ಆದರೆ 24 ಗಂಟೆಗಳಲ್ಲಿ 4,000 ಮಿಗ್ರಾಂ (6 ಮಾತ್ರೆಗಳು) ಮೀರಬಾರದು. ವಯಸ್ಸಾದವರು ಇದನ್ನು ತೆಗೆದುಕೊಳ್ಳಬಹುದು ಆದರೆ ಎಚ್ಚರಿಕೆಯಿಂದ. ಜನರು ವಯಸ್ಸಾದಂತೆ, ಅವರ ಚಯಾಪಚಯ ಮತ್ತು ಮೂತ್ರಪಿಂಡದ ಕಾರ್ಯವು ನಿಧಾನಗೊಳ್ಳುತ್ತದೆ, ಇದು ದೇಹವು ಔಷಧಿಗಳನ್ನು ಹೇಗೆ…