Author: admin

ಕಾರವಾರ: ದೇಶದ ಅಭಿವೃದ್ಧಿ ರಾಜಕಾರಣಿಗಳಿಂದ, ಬೇರೆ ಬೇರೆ ವ್ಯವಸ್ಥೆಯಿಂದ ಆಗಿದೆ ಎಂದು ಅಂದುಕೊAಡಿದ್ದರೆ ಅದು ತಪ್ಪು, ದೇಶದ ಅಭಿವೃದ್ಧಿಗೆ ನಿಜವಾಗಿಯೂ ಕಾರಣರಾದವರು ಶಿಕ್ಷಕರು ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳ ಎಸ್. ವೈದ್ಯ ಹೇಳಿದರು. ಅವರು ಗುರುವಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ, ಉತ್ತರ ಕನ್ನಡ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹೊನ್ನಾವರ, ಲಯನ್ಸ್ ಕ್ಲಬ್ ಹೊನ್ನಾವರ ಇವರ ಸಂಯುಕ್ತ ಆಶ್ರಯದಲ್ಲಿ ಹೊನ್ನಾವರದ ಮೂಡಗಣಪತಿ ಸಬಾಭವನದಲ್ಲಿ ನಡೆದ ಡಾ. ಸರ್ವಪಲ್ಲಿ ರಾಧಾಕೃಷ್ಣರವರ ಜನ್ಮ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಯಾವುದೇ ವ್ಯಕ್ತಿ ಎಷ್ಟೇ ಎತ್ತರಕ್ಕೆ ಏರಿದರು, ತನಗೆ ವಿದ್ಯೆ ಕಲಿಸಿದ ಶಿಕ್ಷಕರಿಗೆ ತಲೆ ಬಾಗುತ್ತಾನೆ, ಕೈ ಮುಗಿಯುತ್ತಾನೆ. ಶಿಕ್ಷಕರಿಗೆ ದೇಶದ ಮೂಲೆ ಮೂಲೆಯಲ್ಲಿಯು ಆಸ್ತಿ ಇದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳೆಲ್ಲಾ ಅವರಿಗೆ ವಿದ್ಯಾರ್ಥಿಗಳಾಗಿದ್ದು, ಅವರದೇ ಆಸ್ತಿಯಾಗಿದ್ದಾರೆ. ಶಿಕ್ಷಕರು ಯಾವಾಗಲು ಗುರುಗಳೇ…

Read More

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490 Provided by ಮೇಷ ರಾಶಿ : ಮೇಷ ರಾಶಿಯವರಿಗೆ ಈ ದಿನ ಉತ್ತಮವಾಗಲಿದೆ.ಹಣ ಬರಲಿದೆ. ಸದ್ಯಕ್ಕೆ ಯಾವುದೇ ರೀತಿಯ ಹೂಡಿಕೆಯನ್ನು ತಪ್ಪಿಸಿ. ನ್ಯಾಯಾಲಯದಲ್ಲಿ ಜಯವನ್ನು ಪಡೆಯಬಹುದು. ಆರೋಗ್ಯ ಉತ್ತಮವಾಗಿರಲಿದೆ. ಇಂದು ಭೂಮಿ ಅಥವಾ ವಾಹನ ಖರೀದಿಗೆ ಶುಭ ದಿನವಾಗಿದೆ. ನೀವು ಶೈಕ್ಷಣಿಕ ಕೆಲಸದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಇಂದಿನ ಅದೃಷ್ಟ-…

Read More

ಶಿಕ್ಷಕರ ದಿನಾಚರಣೆ ಸೆಪ್ಟೆಂಬರ್ 5 ಅಕ್ಷರದವ್ವ ಸಾವಿತ್ರಿ ಬಾಯಿ ಪುಲೆ – ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್ – ಇಡೀ ಶಿಕ್ಷಕ ಸಮೂಹ ಎಲ್ಲರನ್ನೂ ಗೌರವ ಮತ್ತು ಪ್ರೀತಿ ಪೂರ್ವಕವಾಗಿ ನೆನೆಯುತ್ತಾ…….. ಮಾತನಾಡಬೇಕಿದೆ ಶಿಕ್ಷಕರೇ ನೀವು ಧ್ವನಿ ಎತ್ತಿ – ಮನ ಬಿಚ್ಚಿ – ಮುಂದಿನ 25 ವರ್ಷಗಳಲ್ಲಿ ಮೌಲ್ಯಯುತ ಬಲಿಷ್ಠ ಭಾರತ ನಿರ್ಮಾಣವಾಗಲು…….. ಅಕ್ಷರ ಕಲಿಸುವವರು ನೀವಲ್ಲವೇ – ಅಧ್ಯಯನ ಮಾಡಲು ಮಾರ್ಗ ಸೂಚಿಸುವವರು ನೀವಲ್ಲವೇ – ಚಿಂತಿಸಲು ಪ್ರೇರೇಪಿಸುವವರು ನೀವಲ್ಲವೇ – ಅನ್ಯಾಯದ ವಿರುದ್ಧ ಸಿಡಿದೇಳಲು ಪ್ರೋತ್ಸಾಹಿಸುವವರು ನೀವಲ್ಲವೇ – ಬದುಕು ರೂಪಿಸಿಕೊಳ್ಳಲು ಸಹಾಯ ಮಾಡುವವರು ನೀವಲ್ಲವೇ…… ಭ್ರಷ್ಟ ವ್ಯವಸ್ಥೆಯ ವಿರುದ್ಧ ನೀವೇ ಮೌನವಾದರೆ, ಮೌಢ್ಯಗಳ ವಿರುದ್ಧ ನೀವೇ ಮೌನವಾದರೆ, ಜಾತಿ ಪದ್ದತಿಯು ವಿರುದ್ಧ ನೀವೇ ಮೌನವಾದರೆ, ಚುನಾವಣಾ ಅಕ್ರಮಗಳ ವಿರುದ್ಧ ನೀವೇ ಮೌನವಾದರೆ ಸಮಾಜದ ಭವಿಷ್ಯವೇನು…… ಸತ್ಯದ ಪರವಾಗಿ ಮಾತನಾಡಲು ಹೇಳಿ ಕೊಟ್ಟವರು ನೀವು, ದೇಶ ಭಕ್ತಿಯ ಪಾಠ ಮಾಡಿದವರು ನೀವು, ಮಾನವೀಯ ಮೌಲ್ಯಗಳನ್ನು ಬಿತ್ತಿದವರು ನೀವು, ಸಂವಿಧಾನ…

Read More

ಈ ದಿನ ಶಿಕ್ಷಕರ ದಿನ. ನಾವು ಗುರುಗಳನ್ನು ಸ್ಮರಿಸುವ ದಿನ. ಈ ದಿನವು ಗುರುಗಳಿಗೆ ಅಥವಾ ಶಿಕ್ಷಕರಿಗೆ, ಗೌರವ ಸಲ್ಲಿಸಲು ವಿಶೇಷವಾಗಿ ಮೀಸಲಾಗಿದ್ದು, ಅವರ ಕುರಿತಾದ ಸ್ಮರಣೆ ಮತ್ತು ಗೌರವಕ್ಕೆ ಉದ್ದೇಶಿತವಾಗಿದೆ. ನೂರಾರು ವಿದ್ಯಾರ್ಥಿಗಳಿಗೆ ದಾರಿ ತೋರಿಸುವ ಗುರುಗಳು  ಅನೇಕ ವಿದ್ಯಾರ್ಥಿಗಳಿಗೆ ಪಾಠದ ಜೊತೆಗೆ ಮಾರ್ಗದರ್ಶನವನ್ನೂ ಕೊಡುಗೆಯಾಗಿ ನೀಡುತ್ತಾರೆ. ವಿದ್ಯೆ ಕಲಿಸಿದ ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು.  ನೀವು ಸದಾ ನಮ್ಮ ನೆನಪಿನಂಗಳದಲ್ಲಿ ಶಾಶ್ವತವಾಗಿ ನೆಲೆಸುವಂತೆ ಮಾಡಿ ಹೋಗಿದ್ದೀರಿ. ನೀವು ನೀಡಿದ ಸಂದೇಶ, ಮಾರ್ಗದರ್ಶನಗಳು ವಿದ್ಯೆ ಕಲಿತು ಸಮಾಜದಲ್ಲಿ ನಾವು ಉತ್ತಮ ಪ್ರಜೆಗಳಾಗಿ ಬಾಳಲು ಸಹಕಾರಿಯಾಗಿದೆ. – ರಹಮತ್ ಉಲ್ಲಾ ಪಿ. ಹಳೆಯ ವಿದ್ಯಾರ್ಥಿ ಹಾಗೂ ಕಲಾವಿದರು ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

Read More

“ಆಚಾರ್ಯ ದೇವೋ ಭವ” ಎಂಬ ಶ್ಲೋಕವು ನಮಗೆ ಶಿಕ್ಷಕರಿಗೆ ಸಲ್ಲುವ ಗೌರವವನ್ನು ಸ್ಮರಿಸುವಂತೆ ಮಾಡುತ್ತದೆ. ಸಮಾಜದ ನಿರ್ಮಾಣಕಾರರಾಗಿ, ಮಕ್ಕಳ ಜೀವನದ ರಚನೆಗೆ ಅನೇಕ ವಿಧಗಳಲ್ಲಿ ತಾತ್ತ್ವಿಕವಾಗಿ, ಬೌದ್ಧಿಕವಾಗಿ, ನೈತಿಕವಾಗಿ ಆಧಾರವನ್ನು ನೀಡುವವರು ಶಿಕ್ಷಕರು. ಅವರ ಮಾರ್ಗದರ್ಶನವು ಕೇವಲ ಪಠ್ಯಾಭ್ಯಾಸದ ಸೀಮಿತದಲ್ಲಿ ನಿಲ್ಲದೆ, ಜೀವನದ ಮೌಲ್ಯಗಳನ್ನು ಕಗ್ಗೊಲೆಗೊಳಿಸುವ ಮಹತ್ವದ ಕೆಲಸವನ್ನು ಮಾಡುತ್ತದೆ. ಶಿಕ್ಷಕರ ಪಾತ್ರ: ಪ್ರತಿಯೋರ್ವ ವಿದ್ಯಾರ್ಥಿಯ ಜೀವನದಲ್ಲಿ, ಶಿಕ್ಷಕರು ಅವರ ಮೊದಲ ನೈತಿಕ ಮಾರ್ಗದರ್ಶಕರು. ಒಂದು ಸರಿಯಾದ ನಿಲುವಿನೊಂದಿಗೆ ಬೋಧನೆಯಿಂದ ಭವಿಷ್ಯವನ್ನು ರೂಪಿಸುವ ಶಕ್ತಿ ಶಿಕ್ಷಕರ ಹಸ್ತದಲ್ಲಿದೆ. ಕನ್ನಡದ ಅಕ್ಷರಗಳಿಗೆ ಜೀವ ತುಂಬಿದ ಕನ್ನಡ ಮೇಷ್ಟ್ರು, ನಿಖರ ಲೆಕ್ಕಾಚಾರವನ್ನು ಕಲಿಸಿದ ಗಣಿತ ಮೇಷ್ಟ್ರು, ಭೂತಕಾಲವನ್ನು ತಿಳಿಯದವರು ಭವಿಷ್ಯವನ್ನು ರೂಪಿಸಲು ಸಾಧ್ಯವಿಲ್ಲ ಎಂದು ಹೇಳಿದ ಸಮಾಜ ಶಾಸ್ತ್ರ ಮೇಷ್ಟ್ರು—ಅವರಿಂದ ನಾವು ಕೇವಲ ಪುಸ್ತಕದ ಜ್ಞಾನವನ್ನೇ ಅಲ್ಲ, ಬಾಳಿನ ಪಾಠವನ್ನೂ ಕಲಿಯುತ್ತೇವೆ. ಮಾತೃಭಾಷೆಯ ಮಹತ್ವ: ಈಗ ಜಗತ್ತಿನಲ್ಲಿ ಇಂಗ್ಲಿಷ್ ಭಾಷೆ ಮುಖ್ಯವಾದರೂ, ಶಿಕ್ಷಕರು ನಮಗೆ ಎಂದಿಗೂ ಮಾತೃಭಾಷೆಯ ಪ್ರಾಮುಖ್ಯತೆಯನ್ನು ತಿಳಿಸುತ್ತಾರೆ. ಒಬ್ಬ ಶಿಕ್ಷಕ ಮಾತೃಭಾಷೆಯ…

Read More

ತುಮಕೂರು: ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದ್ದು ಸೆ.8ರಂದು ಚಾಲನೆ ನೀಡಲಾಗುತ್ತಿದೆ ಎಂದು ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ.ಪರಮೇಶ್ವರ ಅವರು ತಿಳಿಸಿದರು. ಜಿಲ್ಲಾಧಿಕಾರಿಯವರ ಕಾರ್ಯಾಲಯದಲ್ಲಿ ಬುಧವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ನೀರಿನ ಯಂತ್ರಗಳು ತುಕ್ಕು ಹಿಡಿದ ಹಿನ್ನೆಲೆಯಲ್ಲಿ ಸ್ಪೋಟಗೊಂಡಿದ್ದವು. ಉಪ ಮುಖ್ಯಮಂತ್ರಿ ಡಿ‌.ಕೆ.ಶಿವಕುಮಾರ್ ಅವರು ಪ್ರಾಯೋಗಿಕವಾಗಿ ಪರೀಕ್ಷೆ ನಡೆಸಿದ್ದ ಯಶಶ್ವಿಯಾಗಿವೆ. ಸೆ.6ರಂದು ಚಾಲನೆ ನೀಡಲಾಗುತ್ತಿದೆ. ಈ ನೀರನ್ನು ವಾಣಿವಿಲಾಸ ಸಾಗರ ಅಣೆಕಟ್ಟೆಗೆ 1500 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ. ಆ ಭಾಗಕ್ಕೆ ಉಪಯೋಗವಾಗಲಿದೆ. ಮುಂದಿನ ವರ್ಷ ಅರಸಿಕೆರೆ, ತಿಪಟೂರು ಭಾಗದಲ್ಲಿನ ಕಾಮಗಾರಿ ಪೂರ್ಣಗೊಳ್ಳಲಿದ್ದು ತುಮಕೂರಿಗೆ ನೀರು ಬರಲಿದೆ ಎಂದು ತಿಳಿಸಿದರು. ಪರಮಶಿವಯ್ಯನವರು ಹಾಸನ, ಚಿಕ್ಕಮಗಳೂರು, ತುಮಕುರು, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಬಯಲುಸೀಮೆ ಪ್ರದೇಶಗಳಿಗೆ ಕುಡಿಯುವ ನೀರಿನ ಯೋಜನೆ ಮಾಡಬೇಕೆಂದು ಪ್ರಸ್ತಾಪ ಮಾಡಿದ್ದರು. ಇದಕ್ಕೆ ನೇತ್ರಾವತಿಯ ತಿರುವು ಎಂದು ಹೆಸರಿಟ್ಟಿದ್ದರು. ಇದಕ್ಕೆ ಮಂಗಳೂರಿನಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದರಿಂದ ಯೋಜನೆ ಕೈ ಬಿಡುವ…

Read More

ಕೆ. ಮಲ್ಲೇಶ್  ಇಂದು 5 ಸೆಪ್ಟೆಂಬರ್, ದೇಶಾದ್ಯಾಂತ ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ, ನಾನು ಕೆ. ಮಲ್ಲೇಶ್, ಹೂವಿನ ಹಡಗಲಿಯಿಂದ, ಡಾ. ಎಮ್. ಕೋಟಪ್ಪ ಅವರ ಶ್ರದ್ಧಾಂಜಲಿಗಳನ್ನು ಅರ್ಪಿಸಲು ಇಚ್ಛಿಸುತ್ತೇನೆ. ನಮ್ಮ ಪರಿಚಯವು ಸುಮಾರು ಐದು ವರ್ಷಗಳ ಕಾಲ ಹರಿದುಬಂದಿದೆ. ಅವರು ತಮ್ಮ ಶ್ರೇಷ್ಠ ಶಿಕ್ಷಣ ಹಾಗೂ ಮಾರ್ಗದರ್ಶನದಿಂದ ನಮ್ಮೆಲ್ಲರ ಜೀವನವನ್ನು ರೂಪಿಸಿದರು. ನಾನು ಒಂದು ವರ್ಷ ಅವರ ಸೇವೆಯಲ್ಲಿ ಭಾಗವಹಿಸಲು ಅವಕಾಶ ಪಡೆದಿದ್ದೇನೆ, ಇದು ನನಗೆ ಆಧ್ಯಾತ್ಮಿಕ ಮತ್ತು ವ್ಯಕ್ತಿತ್ವ ಅಭಿವೃದ್ಧಿಯಲ್ಲಿ ಅಮೂಲ್ಯವಾದ ಅನುಭವವನ್ನು ನೀಡಿತು. ಡಾ. ಎಮ್. ಕೋಟಪ್ಪ ಅವರ ಶಿಕ್ಷಣ ಶ್ರೇಷ್ಠತೆಯು ಮತ್ತು ಸತ್ಯ ನಿಷ್ಠೆ ಮತ್ತು ಶಿಸ್ತಿನ ನಿಯಮಾವಳಿ ಅವರು ಪಾಲಿಸುತ್ತಿದ್ದರು. ಅವರು ತಮ್ಮ ವಿದ್ಯಾರ್ಥಿಗಳನ್ನು ಕೇವಲ ಶಿಕ್ಷಣ ನೀಡುವವರಾಗಿರಲಿಲ್ಲ, ಆದರೆ ಜೀವನದ ಪ್ರತಿ ಹಂತದಲ್ಲೂ ಮಾರ್ಗದರ್ಶನ ನೀಡುವ ಮೂಲಕ, ವ್ಯಕ್ತಿತ್ವವನ್ನು ಬೆಳೆಸಲು ಸಹಾಯ ಮಾಡಿದ್ದಾರೆ. ಶಿಕ್ಷಕರ ದಿನಾಚರಣೆಯ ಈ ವಿಶೇಷ ದಿನದಲ್ಲಿ, ಅವರ ಶ್ರದ್ಧಾ, ಸೇವೆ ಮತ್ತು ಶಿಕ್ಷಣಕ್ಕಾಗಿ ಅವರಿಗೆ ನಮ್ಮ ಎಲ್ಲಾ…

Read More

ಡಾ.ಎಂ.ಕೋಟಪ್ಪ ಸರ್, ಸರ್ಕಾರಿ ಚಿತ್ರಕಲಾ ಶಿಕ್ಷಕರಾಗಿದ್ದರೂ, ಅವರು ಕಲಾ ಕ್ಷೇತ್ರದಲ್ಲಿ ಬೇರೆಯುವಂತಹ ದೀರ್ಘಕಾಲದ ಪ್ರಭಾವವನ್ನು ಬಿಟ್ಟುಹೋದವರು. ಅವರ ಪರಿಶ್ರಮ ಮತ್ತು ದೃಷ್ಟಿಕೋನವು ಅವರು ಸೇವೆ ಸಲ್ಲಿಸಿದ ಸ್ಥಳಗಳಲ್ಲಿ ಕಲೆಯ ಮಹತ್ವವನ್ನು ಬೆಳೆಸಲು ಸಹಾಯ ಮಾಡಿತು. ಅಂತಹ ಪ್ರಗತಿಗೆ ಸಾಕ್ಷಿಯಾಗಿದ್ದು, ಅವರ ಸಹೋದ್ಯೋಗಿಗಳಾದ ಡಯಟ್ ಕಾಲೇಜಿನ ಗ್ರಾಮ ಪುರೋಹಿತ್ ಸರ್ ಮತ್ತು ಎಂ. ಎನ್. ಸುಬ್ರಹ್ಮಣ್ಯ ಸರ್ ಅವರೊಂದಿಗೆ ಅವರು ತುಮಕೂರಿನಲ್ಲಿ ಸರ್ಕಾರಿ ಚಿತ್ರಕಲಾ ಕಾಲೇಜು ಪ್ರಾರಂಭಿಸಲು ಕೈಗೊಂಡ ನಿರ್ಧಾರ. ಹೀಗೆ  ಈ ಕಲಾ ಶಾಲೆಯನ್ನು ಆರಂಭಿಸುವ ಪ್ರಯತ್ನದ ಹಾದಿಯಲ್ಲಿ ಕೆಲವು ಅಡಚಣೆಗಳಿದ್ದರೂ, ಕೊನೆಗೆ ಇವರ ಸಮರ್ಥ ಪ್ರಯತ್ನದಿಂದ ಕಾಲೇಜು ತುಮಕೂರಿನ ಸರ್ಕಾರಿ ಪಿಯು ಕಾಲೇಜಿನ ಆವರಣದಲ್ಲಿಯೇ ಸ್ಥಾಪಿತವಾಯಿತು. ಈ ಹಿಂದಿನ ದಿನಗಳಲ್ಲಿ, ತುಮಕೂರಿನಲ್ಲಿ ಕೇವಲ ಎರಡು ಖಾಸಗಿ ಚಿತ್ರಕಲಾ ಶಾಲೆಗಳೇ ಇದ್ದವು—ರವೀಂದ್ರ ಕಲಾನಿಕೇತನ ಮತ್ತು ರವಿವರ್ಮ ಚಿತ್ರಕಲಾ ಶಾಲೆ. ಆದರೆ ಬಡ ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ಈ ಖಾಸಗಿ ಶಾಲೆಗಳಲ್ಲಿ ಕಲಿಯಲು ಸಾಧ್ಯವಾಗದ ತೊಂದರೆ ಇದ್ದಾಗ, ಡಾ. ಕೋಟಪ್ಪ ಸರ್ ಇದನ್ನು…

Read More

ಡಾ.ಡಿ.ಆರ್.ಸ್ನೇಹ ನಮ್ಮ ಎಲ್ಲಾ ಜೀವಿತದಲ್ಲಿ ಕೆಲವು ವ್ಯಕ್ತಿಗಳು ಅನನ್ಯವಾದ ಪ್ರಭಾವ ಬೀರುತ್ತಾರೆ. ಅವರು ಒಬ್ಬ ಶಿಕ್ಷಕರಾಗಿರಬಹುದು, ಸ್ನೇಹಿತರಾಗಿರಬಹುದು, ಅಥವಾ ಗುರುಹಿರಿಯರಾಗಿರಬಹುದು. ಇಂತಹ ಒಬ್ಬ ಮಹಾನ್ ವ್ಯಕ್ತಿ, ಕಲಾ ಕ್ಷೇತ್ರದಲ್ಲಿ ತನ್ನದೇ ಆದ ಅಪಾರ ಕೊಡುಗೆಯನ್ನು ನೀಡಿದವರು, ನನ್ನ ಪ್ರೀತಿಯ ಗುರು, ಡಾ. ಕೋಟೆಪ್ಪಾ ಸರ್. ಅವರ ಅಗಲಿಕೆಯ ಸುದ್ದಿ ನಮಗೆ ಎಲ್ಲರಿಗೂ ದೊಡ್ಡ ಆಘಾತವಾಗಿದೆ. 2024ರ ಆಗಸ್ಟ್ 17ರಂದು ಅವರು ನಮ್ಮನ್ನು ಅಗಲಿದರು, ಆದರೆ ಅವರ ಕಲಾ ಕೃತಿಗಳು, ಬೋಧನೆಗಳು ಮತ್ತು ಸ್ಫೂರ್ತಿದಾಯಕ ಜೀವನ ಶೈಲಿ ಅನೇಕ ಪುಟ್ಟುಗಳಿಗೆ ಸ್ಫೂರ್ತಿಯಾಗಿ ಉಳಿಯುತ್ತವೆ. ಕೋಟೆಪ್ಪಾ ಸರ್‌ ಅವರ ಸಾಧನೆಗಳು: ಕೋಟೆಪ್ಪಾ ಸರ್‌ ಗಳು ತಮ್ಮ ಬೋಧನೆ ಮತ್ತು ಶೈಕ್ಷಣಿಕ ಜೀವನದಲ್ಲಿ ಎಷ್ಟು ಶ್ರದ್ಧಾವಂತರಾಗಿದ್ದರೆ, ಅದನ್ನು ಅವರ ಸಾಧನೆಗಳು ದೃಢಪಡಿಸುತ್ತವೆ. ಕರ್ನಾಟಕ ಸರ್ಕಾರದ ಪಾಠ್ಯಪುಸ್ತಕ ನಿರ್ದೇಶನ ವಿಭಾಗವು 8ನೇ ತರಗತಿಯ ಗಣಿತ ಪಾಠ್ಯಪುಸ್ತಕಕ್ಕೆ ಕಲಾವಿದರಾಗಿ ಅವರನ್ನು ಆಯ್ಕೆ ಮಾಡಿತ್ತು. ಇದು ಅವರ ಕಲಾ ಶಕ್ತಿ ಮತ್ತು ನೈಪುಣ್ಯತೆಗೆ ನೀಡಿದ ದೊಡ್ಡ ಗೌರವವೇನೂ ಅಲ್ಲ. ಸರ್…

Read More

ಕೈಗೆಟಕುವ ದರದ ಮತ್ತು ಆರಾಮದಾಯಕ ಬಸ್‌ ಸೇವೆಗೆ ಹೆಸರುವಾಸಿಯಾದ ಜರ್ಮನಿಯ ಫ್ಲಿಕ್ಸ್‌ಬಸ್‌, ಬೆಂಗಳೂರಿನಿಂದ ದಕ್ಷಿಣ ಭಾರತದ 33 ಪ್ರಮುಖ ನಗರಗಳಿಗೆ ಬಸ್‌ ಸೇವೆ ಆರಂಭಿಸಿದೆ. ಸೆಪ್ಟೆಂಬರ್‌ 11ರಿಂದ ಕಂಪನಿಯ ಬಸ್‌ಗಳು ಕಾರ್ಯಾಚರಣೆ ಆರಂಭಿಸಲಿದ್ದು, ಮಂಗಳವಾರದಿಂದಲೇ ಬುಕ್ಕಿಂಗ್‌ ಆರಂಭವಾಗಿದೆ. ಆರಂಭಿಕ ರಿಯಾಯಿತಿ ಎಂದು ಸೆಪ್ಟೆಂಬರ್ 15ರವರೆಗಿನ ಎಲ್ಲ ಬುಕ್ಕಿಂಗ್‌ಗಳಿಗೆ ₹99 ಶುಲ್ಕ ಮತ್ತು ₹5 ಸೇವಾತೆರಿಗೆ ವಿಧಿಸಲಿದೆ. ಬೆಂಗಳೂರಿನಿಂದ ಚೆನ್ನೈ, ಹೈದರಾಬಾದ್‌, ಕೊಯಮತ್ತೂರು, ವಿಜಯವಾಡ ಸೇರಿ 33 ನಗರಗಳು ಮತ್ತು ಈ ಮಾರ್ಗಗಳಲ್ಲಿ ಬರುವ ಎಲ್ಲಾ ನಗರ-ಪಟ್ಟಣಗಳಿಗೆ ಸೇವೆ ಇರಲಿದೆ. ವಿಶ್ವದಾದ್ಯಂತ 43 ದೇಶಗಳಲ್ಲಿ ಸೇವೆ ಒದಗಿಸುತ್ತಿರುವ ಈ ಕಂಪನಿ, ಇದೇ ಫೆಬ್ರುವರಿಯಲ್ಲಿ ಉತ್ತರ ಭಾರತದಲ್ಲಿ ಸೇವೆ ಆರಂಭಿಸಿತ್ತು. ಈಗ ದಕ್ಷಿಣ ಭಾರತದಲ್ಲಿ ಸೇವೆ ಆರಂಭಿಸಿದೆ. ಕಂಪನಿಯು ತನ್ನ ಬಸ್‌ಗಳು ಮತ್ತು ಇತರ ಖಾಸಗಿ ಬಸ್‌ ಸೇವಾ ಕಂಪನಿಗಳ ಸಹಯೋಗದಲ್ಲಿ ಸೇವೆ ಒದಗಿಸಲಿದೆ. ಖಾಸಗಿ ಬಸ್ ನಿರ್ವಾಹಕರ ಸಹಯೋಗದಲ್ಲಿ ಸಂಚಾರ ಜಾಲ ವಿಸ್ತರಿಸಿಕೊಳ್ಳುವ ಯೋಜನೆಯನ್ನು ಫ್ಲಿಕ್ಸ್‌ ಬಸ್ ಹೊಂದಿದೆ. ಹೆಚ್ಚಿನ ಅನುಕೂಲ, ಸುರಕ್ಷತೆ…

Read More