Author: admin

ಪ್ರೀತಿಯ ಭಾವವನ್ನು ವ್ಯಕ್ತಪಡಿಸಲು ಇರುವ ಅತ್ಯುತ್ತಮ ವಿಧಾನವೆಂದರೆ ಚುಂಬನ. ಸಂಗಾತಿಗೆ ನಿಮ್ಮ ಪ್ರೀತಿ, ವಾತ್ಸಲ್ಯದ ಭಾವನೆಗಳನ್ನು ಪ್ರಕಟಿಸಲು ಎದುರಾಗುವ ಉತ್ಕಟ ಬಯಕೆಯನ್ನು ಚುಂಬನದ ಮೂಲಕ ಸಾಧಿಸಬಹುದು. ಆದ್ರೆ ಚುಂಬನದಿಂದ ಒಂದಿಷ್ಟು ಹಾನಿ ಇದೆ ಎಂಬುದು ನಿಮಗೆ ಗೊತ್ತಾ? ಹೌದು ಚುಂಬನದಿಂದಾಗಿ ಬ್ಯಾಕ್ಟೀರಿಯಾ ಹರಡೋದು ಕಾಯಿಲೆಗೆ ಕಾರಣವಾಗಲಿದೆ. ಮೊನೊನ್ಯೂಕ್ಲಿಯೊಸಿಸ್ ಅಥವಾ ಮೊನೊವನ್ನು ಚುಂಬನ ಕಾಯಿಲೆ ಎಂದು ಕರೆಯಲಾಗುತ್ತದೆ. ಇದಕ್ಕೆ ಕಾರಣವಾದ ವೈರಸ್ ಸಾಮಾನ್ಯವಾಗಿ ಲಾಲಾರಸದ ಮೂಲಕ ಹರಡುತ್ತದೆ. ಇದು ತುಂಬಾ ಸಾಮಾನ್ಯವಾಗಿದೆ ಮತ್ತು ವಿವಿಧ ವಯಸ್ಸಿನ ಜನರ ಮೇಲೆ ಪರಿಣಾಮ ಬೀರಬಹುದು. ಇದು ಸಾಮಾನ್ಯವಾಗಿ ಹದಿಹರೆಯದವರು ಮತ್ತು ಯುವ ವಯಸ್ಕರಲ್ಲಿ ಕಂಡುಬರುತ್ತದೆ. ಮಾನೋನ್ಯೂಕ್ಲಿಯೊಸಿಸ್ ಒಂದು ವೈರಲ್ ಸೋಂಕು, ಇದು ಸಾಮಾನ್ಯವಾಗಿ ಎಪ್ಸ್ಟೀನ್–ಬಾರ್ ವೈರಸ್ (EBV) ನಿಂದ ಉಂಟಾಗುತ್ತದೆ, ಇದು ಎಲ್ಲಾ ಜನಸಂಖ್ಯೆಯ ಗುಂಪುಗಳಲ್ಲಿ ವ್ಯಾಪಕವಾಗಿ ಹರಡುತ್ತದೆ. StatPearls ನಲ್ಲಿ ಪ್ರಕಟವಾದ 2023 ರ ಸಂಶೋಧನೆಯ ಪ್ರಕಾರ, 15 ಮತ್ತು 24 ರ ನಡುವಿನ ವಯಸ್ಸಿನ ಜನರಲ್ಲಿ ಇದು ಹೆಚ್ಚಾಗಿ ಸಾಮಾನ್ಯವಾಗಿದೆ. ಮಾನೋನ್ಯೂಕ್ಲಿಯೊಸಿಸ್‌ನ ಪ್ರಾಥಮಿಕ…

Read More

ಮೈಸೂರಿನ ಕರಾಮುವಿಯ ತುಮಕೂರು ಪ್ರಾದೇಶಿಕ ಕೇಂದ್ರದಲ್ಲಿ  2024–25ನೇ ಶೈಕ್ಷಣಿಕ ಸಾಲಿನ ಯುಜಿಸಿ ಅನುಮೋದಿತ ಕೋರ್ಸ್ ಗಳ ಜುಲೈ ಆವೃತ್ತಿ ಪ್ರವೇಶಾತಿಗೆ ಆನ್ ಲೈನ್  ಮೂಲಕ ಅರ್ಜಿ ಆಹ್ವಾನಿಸಿದ್ದು, ಸ್ನಾತಕ, ಸ್ನಾತಕೋತ್ತರ, ಪಿ.ಜಿ ಸರ್ಟಿಫಿಕೇಟ್, ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸ್ ಗಳಿಗೆ  ಪ್ರವೇಶಾತಿ ಮಾಡಿಕೊಳ್ಳಲಾಗುತ್ತಿದೆ. ಪ್ರಥಮ ವರ್ಷದ ಪ್ರವೇಶಾತಿ ಶುಲ್ಕ ವಿವರ:- ಬಿ.ಎ-ರೂ.8,400/-., ಬಿ.ಕಾಂ.-ರೂ.8,900/-.,ಬಿ.ಬಿ.ಎ/ಬಿ.ಎಲ್.ಐ.ಎಸ್ಸಿ-12,400/-.,  ಬಿ.ಸಿ.ಎ/ಬಿ.ಎಸ್ಸಿ-ರೂ.23,900/-., ಬಿ.ಎಸ್.ಡಬ್ಲ್ಯೂ-ರೂ.12,900/-., ಎಂ.ಎ-ರೂ.10,600/-., ಎಂ.ಸಿ.ಜೆ-ರೂ.16,200/-., ಎಂ.ಕಾಂ-ರೂ.12,400/-., ಎಂ.ಬಿ.ಎ–ರೂ.29,900/-.‌, ಎಂ.ಎಸ್ಸಿ/ಎಂ.ಸಿ.ಎ-ರೂ.29,700/-.,   ಎಂ.ಎಸ್.ಡಬ್ಲ್ಯೂ-ರೂ.21,300/-., ಎಂ.ಎಲ್.ಐ.ಎಸ್ಸಿ-ರೂ.18,150/-ಗಳಾಗಿರುತ್ತದೆ. ಮುಂದುವರೆದು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕರಾಮುವಿಯಲ್ಲಿ ಪ್ರವೇಶಾತಿ ಪಡೆಯುವ ಕೆಲವೊಂದು ವರ್ಗದ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ಮತ್ತು ಉಚಿತ ಪ್ರವೇಶಾತಿ ನೀಡಲಾಗಿದೆ. ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳಾ ವಿದ್ಯಾರ್ಥಿಗಳಿಗೆ, ಡಿಫೆನ್ಸ್ / ಮಾಜಿ ಸೈನಿಕ ವಿದ್ಯಾರ್ಥಿಗಳಿಗೆ, ಆಟೋ/ಕ್ಯಾಬ್ ಚಾಲಕರು ಮತ್ತು ಅವರ ಪತಿ/ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ, KSRTC/BMTC/NWKSRTC/KKRTC ನೌಕರರಿಗೆ ಸ್ನಾತಕ/ಸ್ನಾತಕೋತ್ತರ ಪದವಿಗಳ ಕೋರ್ಸ್ ಗಳ ಬೋಧನಾ ಶುಲ್ಕದಲ್ಲಿ 10% ರಿಯಾಯಿತಿ ಇರುತ್ತದೆ. ಕೋವಿಡ್ ನಿಂದ ಮರಣ ಹೊಂದಿದ ಪೋಷಕ ಮಕ್ಕಳಿಗೆ, ಟ್ರಾನ್ಸ್ ಜೆಂಡರ್ /…

Read More

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಡತನ ರೇಖೆಗಿಂತ ಕೆಳಗಿರುವವರಿಗೆ ಪಡಿತರ ಚೀಟಿ ನೀಡುತ್ತವೆ. ಫಲಾನುಭವಿಗಳ ಆಹಾರ ಭದ್ರತೆಗಾಗಿ ಉಚಿತ ಪಡಿತರವನ್ನು ಒದಗಿಸುತ್ತದೆ. ಆದರೆ ಈಗ ಭಾರತ ಸರ್ಕಾರ ಈ ಯೋಜನೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲು ಹೊರಟಿದೆ. ಈ ಹಿಂದೆ ಕೇಂದ್ರವು ಪಡಿತರ ಚೀಟಿದಾರರಿಗೆ ಉಚಿತ ಅಕ್ಕಿ ನೀಡುತ್ತಿತ್ತು. ಆದರೆ ಇದೀಗ ಉಚಿತ ಅಕ್ಕಿ ಬದಲಿಗೆ 9 ಅಗತ್ಯ ವಸ್ತುಗಳನ್ನು ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗಿದೆ. ಭಾರತ ಸರ್ಕಾರದ ಉಚಿತ ಪಡಿತರ ಯೋಜನೆಯಡಿ ದೇಶದ 90 ಕೋಟಿ ಜನರಿಗೆ ಉಚಿತ ಪಡಿತರವನ್ನು ನೀಡಲಾಗುತ್ತಿದೆ. ಆಯಾ ರಾಜ್ಯ ಸರ್ಕಾರಗಳು ಪ್ರತ್ಯೇಕವಾಗಿ ಪಡಿತರ ನೀಡುತ್ತಿದೆ. ಈ ಹಿಂದೆ ಲಾನುಭವಿಗಳಿಗೆ ಉಚಿತವಾಗಿ ಅಕ್ಕಿ ನೀಡಲಾಗುತ್ತಿತ್ತು. ಆದರೆ ಇದೀಗ ಕೆಲವು ಸುದ್ದಿಗಳ ಪ್ರಕಾರ ಪಡಿತರ ಚೀಟಿದಾರರಿಗೆ ಉಚಿತ ಅಕ್ಕಿ ಬದಲು 9 ಅಗತ್ಯ ವಸ್ತುಗಳನ್ನು ನೀಡಲು ಸರ್ಕಾರ ಮುಂದಾಗಿದೆ. ಇವುಗಳಲ್ಲಿ ಗೋಧಿ, ಕಾಳುಗಳು, ಧಾನ್ಯಗಳು, ಸಕ್ಕರೆ, ಉಪ್ಪು, ಸಾಸಿವೆ ಎಣ್ಣೆ, ಹಿಟ್ಟು, ಸೋಯಾಬೀನ್‌ ಮತ್ತು ಮಸಾಲೆಗಳು ಸೇರಿವೆ…

Read More

ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ಖರ್ಗೆ ಕುಟುಂಬದ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಸಿದ್ಧಾರ್ಥ ವಿಹಾರ ಟ್ರಸ್ಟ್ ನಡೆಸುತ್ತಿರುವ ಸಂಸ್ಥೆಗೆ 19 ಎಕರೆ ಸರ್ಕಾರಿ ಭೂಮಿಯನ್ನು ಉಚಿತವಾಗಿ ನೀಡಲಾಗಿದೆ ಎಂದು ಬಿಜೆಪಿ ಸಂಸದ ಲೆಹರ್ ಸಿಂಗ್ ಸಿರೋಯಾ ಅವರು ಸೋಮವಾರ ಆರೋಪಿಸಿದ್ದಾರೆ. ಸಿದ್ಧಾರ್ಥ ವಿಹಾರ ಟ್ರಸ್ಟ್ ನಡೆಸುತ್ತಿರುವ ಕಲಬುರಗಿಯ ಪಾಲಿ, ಸಂಸ್ಕೃತ ಮತ್ತು ತುಲನಾತ್ಮಕ ತತ್ತ್ವಶಾಸ್ತ್ರದ ಇಂಟರ್‌ ನ್ಯಾಶನಲ್ ಇನ್‌ ಸ್ಟಿಟ್ಯೂಟ್‌ ಗೆ 19 ಎಕರೆ ಸರ್ಕಾರಿ ಭೂಮಿಯನ್ನು ಉಚಿತವಾಗಿ ನೀಡಲಾಗಿದೆ ಎಂದು ಹೊಸ ದಾಖಲೆಗಳು ಬಹಿರಂಗಪಡಿಸುತ್ತಿವೆ. ಈ ಕುರಿತು ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಒತ್ತಾಯಿಸಿದ್ದಾರೆ. ಅದರ ಟ್ರಸ್ಟಿಗಳಲ್ಲಿ ಖರ್ಗೆ ಅವರ ಪತ್ನಿ, ಅಳಿಯ ಮತ್ತು ಇಬ್ಬರು ಪುತ್ರರು ಇದ್ದಾರೆ. ಖರ್ಗೆ ಅವರ ಅಳಿಯ ಹಾಗೂ ಹಾಲಿ ಸಂಸದ ರಾಧಾಕೃಷ್ಣ ದೊಡ್ಡಮನಿ ಅವರು ಪಾಲಿ ಸಂಸ್ಥೆಯ ಕಾರ್ಯದರ್ಶಿಯಾಗಿದ್ದಾರೆ ಎಂದು ಸಿರೋಯಾ ಹೇಳಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್…

Read More

ಮಹಾರಾಷ್ಟ್ರ:  ರೈಲಿನಲ್ಲಿ ಗೋಮಾಂಸ ಸಾಗಾಟ ಮಾಡುತ್ತಿರುವ ಎಂಬ ಶಂಕೆಯಿಂದ ವೃದ್ಧನೊಬ್ಬನಿಗೆ ಸಹಪ್ರಯಾಣಿಕರು ಅಮಾನವೀಯವಾಗಿ ಹಲ್ಲೆ ನಡೆಸಿದ ಘಟನೆ ಮಹಾರಾಷ್ಟ್ರದಲ್ಲಿ ಧುಲೆ ಎಕ್ಸ್‌ಪ್ರೆಸ್‌ ರೈಲಿನಲ್ಲಿ ನಡೆದಿದೆ. ಜಲಗಾಂವ್ ಜಿಲ್ಲೆಯ ನಿವಾಸಿ ಅಶ್ರಫ್‌ ಮುನ್ಯಾರ್ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾರೆ. ಮಾಲೆಗಾಂವ್‌ ನಲ್ಲಿರುವ ತಮ್ಮ ಮಗಳ ಮನೆಗೆ ಧುಲೆ ಎಕ್ಸ್‌ ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಎರಡು ದೊಡ್ಡ ಪ್ಲಾಸ್ಟಿಕ್ ಬಾಕ್ಸ್‌ ಗಳಲ್ಲಿ ಅಶ್ರಫ್‌ ಮುನ್ಯಾರ್ ಮಾಂಸವನ್ನು ತಂದಿದ್ದರು. ಇದನ್ನು ಗಮನಿಸಿದ ಸುಮಾರು ಹನ್ನೆರಡು ಜನರಿದ್ದ ತಂಡ ವಿಚಾರಣೆ ನಡೆಸಿ, ವೃದ್ಧ ಎಂದೂ ನೋಡದೇ ಅಮಾನವೀಯವಾಗಿ ಥಳಿಸಿದ್ದಾರೆ. ಮಗಳ ಕುಟುಂಬಕ್ಕಾಗಿ ಮಾಂಸ ತೆಗೆದುಕೊಳ್ಳುತ್ತಿದ್ದೇನೆ ಎಂದು ವೃದ್ಧ ಪರಿಪರಿಯಾಗಿ ಬೇಡಿದರೂ ಗುಂಪು ವೃದ್ಧನನ್ನು ಮತ್ತಷ್ಣು ಕೆಣಕಿ ಪ್ರಶ್ನಿಸಿದ್ದಾರೆ. ಯಾವ ಮಾಂಸ ಎಂದು ಕೇಳಿದ್ದಾರೆ. ಈ ವೇಳೆ ವೃದ್ಧ ಇದು ಕೋಣದ ಮಾಂಸ ಎಂದು ಹೇಳಿದ್ದಾರೆ.  ಈ ವೇಳೆ ದುಷ್ಕರ್ಮಿಗಳು ನಾವು ಅದನ್ನು ಪರೀಕ್ಷಿಸಿದ ನಂತರ ಯಾವುದರ ಮಾಂಸ ಎಂದು ಗೊತ್ತಾಗುತ್ತದೆ ಎಂದು ಅಮಾನವೀಯವಾಗಿ ಹಲ್ಲೆ…

Read More

ಗುಜರಾತ್: ಭಾರತೀಯ ಕೋಸ್ಟ್ ಗಾರ್ಡ್ ನ ಹೆಲಿಕಾಪ್ಟರ್ ಗುಜರಾತ್ ಸಮುದ್ರದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.  ಅದರಲ್ಲಿದ್ದ ಇಬ್ಬರು ಪೈಲಟ್‍ ಗಳು ಸೇರಿ ಮೂವರು ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಒಬ್ಬ ಸಿಬ್ಬಂದಿಯನ್ನು ರಕ್ಷಿಸಲಾಗಿದ್ದು, ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಕೋಸ್ಟ್ ಗಾರ್ಡ್‍ನ ನಾಲ್ಕು ಹಡಗುಗಳು ಮತ್ತು ಎರಡು ವಿಮಾನಗಳ ಮುಲಕ ನಾಪತ್ತೆಯಾದ ಸಿಬ್ಬಂದಿಯನ್ನು ಹುಡುಕಾಟ ನಡೆಸಲಾಗುತ್ತಿದೆ. ಹೆಲಿಕಾಪ್ಟರ್‍ ಅವಶೇಷಗಳು ಪತ್ತೆಯಾಗಿದ್ದು, ಸಿಬ್ಬಂದಿಯ ಬಗ್ಗೆ ಯಾವುದೇ ಸುಳಿವು ಇನ್ನೂ ಸಿಕ್ಕಿಲ್ಲ. ಹೆಲಿಕಾಪ್ಟರ್ ತುರ್ತು ಭೂಸ್ಪರ್ಶಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

Read More

ತುಮಕೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಆಕಾಂಕ್ಷಿಗಳ ಪಟ್ಟಿ ಹೆಚ್ಚಾದರೆ ಅದನ್ನು ಹೈಕಮಾಂಡ್‌ ನವರು ನಿಭಾಯಿಸುತ್ತಾರೆ. ಆ ಸಂದರ್ಭ ಬಂದಾಗ ಮುಖ್ಯಮಂತ್ರಿ ಆಗುವವರು ಒಬ್ಬರೇ ಅಲ್ಲವೆ. ಆದ್ರೆ ಆ ಪರಿಸ್ಥಿತಿ ಈಗ ಇಲ್ಲ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದಾರೆ, ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ತಿಳಿಸಿದ್ದಾರೆ. ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಸಚಿವ ಸತೀಶ್‌ ಜಾರಕಿಹೊಳಿ ಅವರ ಮನೆಗೆ ನಾನು ಊಟಕ್ಕೆ ಹೋಗಿದ್ದೆ, ಇಬ್ಬರು ರಾಜಕಾರಣಿಗಳು ಭೇಟಿಯಾದಾಗ ಏನು ಮಾತನಾಡಿದ್ದೇವೆ ಎಂದರೆ ಅದ್ರಂತೆ ರಾಜಕೀಯದ ಬಗ್ಗೆ ಮಾತನಾಡಿದ್ದೇನೆ. ಮಾಧ್ಯಮದವರೊಂದಿಗೆ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದರು. ಸರಕಾರದಲ್ಲಿ ಟೀಕೆ ಟಿಪ್ಪಣಿಗಳನ್ನು ಕೇಳಿದ್ದೇವೆ, ಈಗಾಗಲೇ ನಮಗೆ ಗೊತ್ತಿಲ್ಲದಂತೆ ನ್ಯಾಯಾಲಯದಲ್ಲಿ ನಡೆಯುತ್ತಿದೆ, ಗುತ್ತಿಗೆದಾರರಿಂದ ಬಂದಿರುವ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದರು. ಬಿಜೆಪಿ ಸರಕಾರದಲ್ಲಿ ನಡೆದಿರುವ ಹಗರಣಗಳ ಬಗ್ಗೆ ತನಿಖೆ ಮಾಡುತ್ತೇವೆ ಎಂದು ಹೇಳುತ್ತಿದ್ದೇವೆ. ಹಗರಣಗಳ ಬಗ್ಗೆ ನಡೆಯುವ ಅಧ್ಯಯನ ನಡೆದು ಮಧ್ಯಂತರ ವರದಿ ಬಂದಿವೆ ಎಂದರು. ಇದಕ್ಕೂ ಮೊದಲು ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ…

Read More

ತುಮಕೂರು: ಕೇಂದ್ರ ಪುರಸ್ಕೃತ ಯೋಜನೆಯಡಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಅನುಷ್ಟಾನಗೊಳಿಸಲಾಗುತ್ತಿರುವ ವಿಚಾರಗೋಷ್ಠಿ/ಕಾರ್ಯಾಗಾರ, ದೌರ್ಜನ್ಯ ಪ್ರತಿಬಂಧ ಕಾಯ್ದೆ, ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದವರ ಜಮೀನು ಪರಭಾರೆ ನಿಷೇಧ ಅಧಿನಿಯಮ(PTCL Act)ಗಳ ಬಗ್ಗೆ ಸಾರ್ವಜನಿಕರು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜನಾಂಗದವರಿಗೆ ಬೀದಿ ನಾಟಕಗಳ ಮೂಲಕ ಅರಿವು ಮೂಡಿಸಲು ಆಸಕ್ತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಸರ್ಕಾರೇತರ ಸಂಘ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಯ್ಕೆಯಾದ ಸಂಘ ಸಂಸ್ಥೆಗಳು ಜಿಲ್ಲಾ ವ್ಯಾಪ್ತಿಯಲ್ಲಿ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿ ನಡೆಯುವ ಗ್ರಾಮ/ಪಂಚಾಯಿತಿ ಕೇಂದ್ರ ಸ್ಥಾನ/ಹೋಬಳಿ ಕೇಂದ್ರ ಸ್ಥಾನ/ತಾಲ್ಲೂಕು ಕೇಂದ್ರ ಸ್ಥಾನ/ಜಿಲ್ಲಾ ಕೇಂದ್ರ ಸ್ಥಾನದಲ್ಲಿ ಬೀದಿ ನಾಟಕದ ಮೂಲಕ ಪರಿಣಾಮಕಾರಿಯಾಗಿ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಅರ್ಜಿ ಸಲ್ಲಿಸುವ ಸಂಘ ಸಂಸ್ಥೆಗಳು ಅಗತ್ಯ ದಾಖಲಾತಿಗಳೊಂದಿಗೆ ತಮ್ಮ ಅರ್ಜಿಯನ್ನು ಸೆಪ್ಟೆಂಬರ್ 10ರೊಳಗಾಗಿ ಜಂಟಿ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ತುಮಕೂರು ಜಿಲ್ಲೆ, ಇವರಿಗೆ ಸಲ್ಲಿಸಬಹುದಾಗಿದೆ. ಆಸಕ್ತ ಸಂಘ ಸಂಸ್ಥೆಗಳು ಅರ್ಜಿಯೊಂದಿಗೆ ಸಂಘ/ಸಂಸ್ಥೆಯ ನೋಂದಣಿ ಪ್ರಮಾಣ ಪತ್ರ ಮತ್ತು ನವೀಕರಣ…

Read More

ಪಾವಗಡ: ಮುಂದಿನ ಬಾರಿ ನಿಡಗಲ್ಲು ಉತ್ಸವವನ್ನು ಸರ್ಕಾರದಿಂದಲೇ ಆಚರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಗೋವಿಂದ ಕಾರಜೋಳ ಅವರು ತಿಳಿಸಿದ್ದಾರೆ. ಸೋಮವಾರ ಪಾವಗಡ ತಾಲೂಕಿನ ನಿಡಗಲ್ ದುರ್ಗದಲ್ಲಿ ಹಮ್ಮಿಕೊಂಡಿದ್ದ 2024ನೇ ಸಾಲಿನ ನಿಡಗಲ್ಲು ಉತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,  ಈ ಬಾರಿ ವಾಲ್ಮೀಕಿ ಜಾಗೃತಿ ವೇದಿಕೆಗೆ 5 ಲಕ್ಷ ಅನುದಾನವನ್ನ ನೀಡುವುದರ ಜೊತೆಗೆ 2025 ನೇ ಸಾಲಿನಿಂದ ಶ್ರಾವಣ ಮಾಸದ ಕೊನೆಯ ಸೋಮವಾರದಂದು ಆಚರಿಸುವಂತಹ ಉತ್ಸವವನ್ನು ಸರ್ಕಾರದಿಂದಲೇ ಹಂಪಿ ಉತ್ಸವದ ಮಾದರಿಯಲ್ಲಿ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಎಚ್.ವಿ.ವೆಂಕಟೇಶ್ ಈ ಹಿಂದೆ ನಮ್ಮ ತಂದೆಯವರು ಶಾಸಕರಾಗಿದ್ದ ಸಂದರ್ಭದಲ್ಲಿ ನಿಡಗಲ್ಲು ದುರ್ಗದ ಅಭಿವೃದ್ಧಿಗೆ ಶ್ರಮಿಸಿದ್ದು ಅನೇಕ ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಸಹ ಕೈಗೊಂಡಿದ್ದರು. ಮುಂದಿನ ದಿನಗಳಲ್ಲಿ ನಾನು ಸಹ ನೀಡಲು ಅಭಿವೃದ್ಧಿಗೆ ಶ್ರಮಿಸುವುದರ ಜೊತೆಗೆ ವಿವಿಧ ದೇವಸ್ಥಾನಗಳ ಜೀರ್ಣೋದ್ಧಾರವನ್ನು ಮಾಡಲು ಬದ್ಧನಾಗುತ್ತೇನೆ. ವಾಲ್ಮೀಕಿ ಜಾಗೃತಿ ವೇದಿಕೆಗೆ 10 ಲಕ್ಷ ಅನುದಾನವನ್ನು…

Read More

ಪಾವಗಡ: ತಾಲೂಕು ವೈ.ಎನ್.ಹೊಸಕೋಟೆ ಹೋಬಳಿಯ ಬಳ್ಳೇನಹಳ್ಳಿ ಗ್ರಾಮದಲ್ಲಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಪವರ್ ಸ್ಟಾರ್ ಪವನ್ ಕಲ್ಯಾಣ್ ರವರ ಹುಟ್ಟು ಹಬ್ಬದ ಪ್ರಯುಕ್ತ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿಮಾನಿಗಳ ಬಳಗ ಹಾಗೂಗು ಜೈ ಭೀಮ್ ಯುವಕರ ಸೇವಾ ಸಮಿತಿ  ಸಹಯೋಗದೊಂದಿಗೆ ಶಾಲಾ ಮಕ್ಕಳಿಗೆ ನೋಟು ಬುಕ್ ಮತ್ತು ಪೆನ್ನು  ವಿತರಣೆ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಜೈ ಭೀಮ್ ಯುವಕರ ಸೇವಾ ಸಮಿತಿ ಅಧ್ಯಕ್ಷರು ಸುರೇಶ್, ಸಂಘದ ಉಪಾಧ್ಯಕ್ಷರು ಅಶೋಕ್ ಮತ್ತು ಕಾರ್ಯದರ್ಶಿಗಳು ಸದಸ್ಯರು ಕಾರ್ಯಕ್ರಮದಲ್ಲಿ ಹಾಜರಾಗಿದ್ದರು. ವರದಿ: ನಂದೀಶ್ ನಾಯ್ಕ, ಪಾವಗಡ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

Read More