Subscribe to Updates
Get the latest creative news from FooBar about art, design and business.
- ತುಮಕೂರು: ದೇವರಾಯಪಟ್ಟಣದಲ್ಲಿ ಚಿರತೆ ಹಾವಳಿ, ಇಸ್ರೋ ಆವರಣದಲ್ಲಿ ಕುರಿ ಬಲಿ – ಬೋನು ಅಳವಡಿಕೆ
- ಗೃಹಲಕ್ಷ್ಮಿ, ಯುವನಿಧಿ: 323 ಕೋಟಿ ರೂ. ಬಿಡುಗಡೆ
- ಜಿಟಿಟಿಸಿ: ವಿವಿಧ ಕೋರ್ಸ್ ಗಳ ಪ್ರವೇಶಾತಿಗೆ ಅರ್ಜಿ
- ರಾಜಕಾರಣದಷ್ಟೇ ಶಿಕ್ಷಣ ವ್ಯವಸ್ಥೆ ಕಲುಷಿತ: ಡಾ.ವೈ.ಎ.ನಾರಾಯಣಸ್ವಾಮಿ ಕಳವಳ
- ತಮಿಳುನಾಡಿಗೆ ನೀರು ಹರಿಸುವ ಆದೇಶಕ್ಕೆ ಸಂಘಟನೆಗಳ ಆಕ್ರೋಶ: ಆದೇಶ ಧಿಕ್ಕರಿಸಿ ರಾಜ್ಯದ ಪರ ನಿಲ್ಲಲು ಒತ್ತಾಯ
- ಸರಗೂರು: ಕೊಟ್ಟಿಗೆಗೆ ನುಗ್ಗಿ ಕಾಡು ಪ್ರಾಣಿ ದಾಳಿ: 6 ಕುರಿ ಬಲಿ, 12 ಕುರಿಗಳಿಗೆ ಗಂಭೀರ ಗಾಯ
- ಸರಗೂರು: ಮೂರನೇ ಆಷಾಢ ಶುಕ್ರವಾರ -– ವಾಹನ ಚಾಲಕರ ಸಂಘದಿಂದ ವಿಶೇಷ ಪೂಜೆ ಹಾಗೂ ಖಾಕಿ ಸಮವಸ್ತ್ರ ವಿತರಣೆ
- ಔರಾದ್: ಜೈ ಕಿಸಾನ್ ಶಾಲೆ ಶಿಕ್ಷಕ, ಬಿಎಲ್ ಒ ಮಲ್ಲಿಕಾರ್ಜುನ ಪಿಟ್ರೆ ನಿಧನ
Author: admin
ಮುಖ ಮಲ್ಟಿಪ್ಲೆಕ್ಸ್ ಆಪರೇಟರ್ ಪಿವಿಆರ್ ಐನಾಕ್ಸ್ ಈ ಆರ್ಥಿಕ ವರ್ಷದಲ್ಲಿ ಕಾರ್ಯನಿರ್ವಹಿಸದ ತನ್ನ 70 ಸ್ಕ್ರೀನ್‌ಗಳನ್ನು ಬಂದ್ ಮಾಡಲು ನಿರ್ಧರಿಸಿದೆ. ಅದರ ಇತ್ತೀಚಿನ ವಾರ್ಷಿಕ ವರದಿಯ ಪ್ರಕಾರ ಮುಂಬೈ, ಪುಣೆ ಮತ್ತು ವಡೋದರದಂತಹ ಪ್ರಮುಖ ಸ್ಥಳಗಳಲ್ಲಿ ಕಾರ್ಯನಿರ್ವಹಿಸದ ಸ್ಕ್ರೀನ್ ಗಳನ್ನು ಮುಚ್ಚಲಾಗುತ್ತದೆ. “ನಮ್ಮ ಕಂಪನಿಯ ಮಧ್ಯಮ ಮತ್ತು ದೀರ್ಘಾವಧಿಯ ಕಾರ್ಯತಂತ್ರವು ದಕ್ಷಿಣ ಭಾರತದಲ್ಲಿ ಚಲನಚಿತ್ರಗಳಿಗೆ ಹೆಚ್ಚಿನ ಬೇಡಿಕೆ ಮತ್ತು ಇತರ ಪ್ರದೇಶಗಳಿಗೆ ಹೋಲಿಸಿದರೆ ಕಡಿಮೆ ಸಂಖ್ಯೆಯ ಮಲ್ಟಿಪ್ಲೆಕ್ಸ್ ಗಳ ಕಾರಣದಿಂದಾಗಿ ಅಲ್ಲಿ ಪರದೆಗಳ ಸಂಖ್ಯೆಯನ್ನು ವಿಸ್ತರಿಸುವುದನ್ನು ಒಳಗೊಂಡಿರುತ್ತದೆ. ನಮ್ಮ ಒಟ್ಟು ಸ್ಕ್ರೀನ್ ಸೇರ್ಪಡೆಗಳಲ್ಲಿ ಸರಿಸುಮಾರು 40% ದಕ್ಷಿಣ ಭಾರತದಿಂದ ಬರುತ್ತದೆ ಎಂದು ನಾವು ಅಂದಾಜಿಸಿದ್ದೇವೆ, “ಎಂದು ಕಂಪನಿ ಹೇಳಿದೆ. ವರದಿ ಪ್ರಕಾರ ಪಿವಿಆರ್ ಐನಾಕ್ಸ್ ಈ ವರ್ಷ 130 ಹೊಸ ಸ್ಕ್ರೀನ್‌ಗಳನ್ನು ತೆರೆಯಿತು. ಆದರೆ ಕಡಿಮೆ ಪ್ರದರ್ಶನದ ಕಾರಣದಿಂದಾಗಿ 85 ಸ್ಕ್ರೀನ್ ಗಳನ್ನು ಮುಚ್ಚಿದೆ. ಆರ್ಥಿಕ ವರ್ಷ 24 ರಲ್ಲಿ ಪಿವಿಆರ್ ಐನಾಕ್ಸ್ ನ ನಿವ್ವಳ ಸಾಲವು ₹1,294 ಕೋಟಿ ಆಗಿತ್ತು.…
ಪೆರ್ನಾಜೆ: “ಸ್ವರಸಿಂಚನ” ಸಂಗೀತ ಶಾಲೆ ವಿಟ್ಲ ಮತ್ತು ಪಡಿಬಾಗಿಲು ಶಾಖೆಯ ವಿದ್ಯಾರ್ಥಿಗಳಿಂದ ಶ್ರೀ ಭಗವತಿ ದೇವಸ್ಥಾನ ಪೂಜಾ ಕಾರ್ಯಕ್ರಮದ ಪ್ರಯುಕ್ತ ಶ್ರೀ ಭಗವತಿ ದೇವಸ್ಥಾನದ ಸಭಾಂಗಣದಲ್ಲಿ ಆಗಸ್ಟ್ 25 ರಂದು ನಡೆದ ಭಕ್ತಿ ಗಾನ ಸಂಗೀತ ಕಾರ್ಯಕ್ರಮ ನಡೆಯಿತು. ದೇಗುಲದ ವ್ಯವಸ್ಥಾಪಕರಾದ ಕೇಶವ ಆರ್.ವಿ.ದೀಪ ಪ್ರಜ್ವಲನೆ ಮಾಡಿ ಮಾತನಾಡಿ, ಸಂಗೀತ ಶಿಕ್ಷಕಿಯ ಮಾರ್ಗದರ್ಶನದಲ್ಲಿ ಉತ್ತಮ ರೀತಿಯಲ್ಲಿ ವೈವಿಧ್ಯಮಯ ವಿನ್ಯಾಸದಲ್ಲಿ ಸುಂದರ ಹಾಡುಗಳ ಜೋಡಣೆಯಲ್ಲಿ ಪ್ರತಿಭೆಗಳು ಹೊರ ಹೊಮ್ಮುತಿರುವುದನ್ನು ಕಂಡಾಗ ಮನ ತುಂಬಿ ಬರುತ್ತದೆ. ಹಾಗೆ ಈ ವಿದ್ಯಾರ್ಥಿಗಳಿಗೆ ಮುಂದೆ ಉತ್ತಮ ಭವಿಷ್ಯ ಇದೆ ಎಂದು ಮೆಚ್ಚುಗೆಯ ನುಡಿಯನ್ನು ನುಡಿದರು. ವಿಠಲ ಬಾಲಿಕ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಕೆ. ಕೃಷ್ಣ ಭಟ್ , ಗೋಪಾಲಕೃಷ್ಣ ನಾಯಕ್ ಪಾಡಿಬಾಗಿಲು, ವಿಟ್ಲ ಸುಪ್ರ ಜೀತ್ ಐಟಿಐ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ರಘುರಾಮ ಶಾಸ್ತ್ರಿ ಕೋಡಂದೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು. ಸಿಂಚನ ಲಕ್ಷ್ಮಿ ಕೋಡಂದೂರು ಪ್ರಾರ್ಥನೆ ಮಾಡಿದರು. ಮುಖ್ಯ ಶಿಕ್ಷಕಿ ಸವಿತಾ ಕೋಡಂದೂರು ಸ್ವಾಗತಿಸಿದರು. ಪದ್ಮರಾಜ್ ಚಾರ್ವಾಕ…
ತುಮಕೂರು: ತುಮಕೂರು ನಗರದ ಹನುಮಂತಪುರದ ಬಳಿ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿ ಆ್ಯಂಬುಲೆನ್ಸ್ ವೊಂದು ಪರದಾಡಿದ ಘಟನೆ ನಡೆದಿದೆ. ಸುಮಾರು 15 ನಿಮಿಷಕ್ಕೂ ಹೆಚ್ಚು ಸಮಯ ಆ್ಯಂಬುಲೆನ್ಸ್ ಟ್ರಾಫಿಕ್ ನಲ್ಲಿ ಸಿಲುಕಿದೆ. ಹನುಮಂತದ ಬ್ರಿಡ್ಜ್ ಬಳಿ ನಾಲ್ಕು ಕಡೆಯಿಂದ ಬರುವ ವಾಹನಗಳಿಂದ ಉಂಟಾದ ಟ್ರಾಫಿಕ್ ಜಾಮ್ ನಡುವೆ ಆ್ಯಂಬುಲೆನ್ಸ್ ಸಿಲುಕಿತು. ಸುಮಾರು ಅರ್ಧ ಕಿ.ಮೀ. ದೂರದವರೆಗೂ ಟ್ರಾಫಿಕ್ ಜಾಮ್ ಉಂಟಾಗಿತ್ತು. ರಾಷ್ಟ್ರೀಯ ಹೆದ್ದಾರಿ ಶಿರಾ ಭಾಗದಿಂದ ತುಮಕೂರು ನಗರದ ಕಡೆಗೆ ಆ್ಯಂಬುಲೆನ್ಸ್ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಟ್ರಾಫಿಕ್ ನಿಯಂತ್ರಿಸುವಲ್ಲಿ ಪೊಲೀಸ್ ಇಲಾಖೆಯ ನಿರ್ಲಕ್ಷ್ಯವಹಿಸಿದ ಹಿನ್ನೆಲೆ ಈ ಘಟನೆ ನಡೆದಿದೆ. ಟ್ರಾಫಿಕ್ ಸಮಸ್ಯೆ ಉಂಟಾಗುವ ಸ್ಥಳದಲ್ಲಿ ಸಿಬ್ಬಂದಿ ನಿಯೋಜನೆಯಾಗದ ಕಾರಣ ಈ ಘಟನೆ ನಡೆದಿದೆ ಎನ್ನಲಾಗಿದೆ. ಹನುಮಂತಪುರದ ಬಳಿ ಬೆಳಗಿನ ಸಮಯ ನಿತ್ಯ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಬೆಳಿಗ್ಗಿನ ಸಮಯದಲ್ಲಿ ಪೊಲೀಸ್ ಸಿಬ್ಬಂದಿ ಇಲ್ಲದೆ ನಿತ್ಯ ಟ್ರಾಫಿಕ್ ಜಾಮ್ ಹೆಚ್ಚುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ…
ಮಂಗಳೂರು: 47 ವರ್ಷದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಎಫ್ ಐಆರ್ ದಾಖಲಾಗಿದೆ. ದಕ್ಷಿಣ ಕನ್ನಡ ಮಹಿಳಾ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದಾಗಿ ದೂರು ದಾಖಲಿಸಿದ್ದಾರೆ. 2023ರ ಜೂನ್ ನಲ್ಲಿ ಲೈಂಗಿಕ ದೌರ್ಜನ್ಯ ನಡೆದಿದೆ. ದೌರ್ಜನ್ಯದ ಫೋಟೋ, ಸೆಲ್ಫಿ ವೀಡಿಯೋ ಮಾಡಿ ಬ್ಲಾಕ್ ಮೇಲ್ ಮಾಡಿದ್ದಾರೆಂದು ಸಹ ಆರೋಪಿಸಿದ್ದಾರೆ. ಮಹಿಳೆ ನೀಡಿದ ದೂರಿನ ಮೇರೆಗೆ ಐಪಿಸಿ ಸೆಕ್ಷನ್ 417, 354ಎ, 506 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ಶಿವಮೊಗ್ಗ: ಮದುವೆಯಾಗುವುದಾಗಿ ನಂಬಿಸಿ ಉಪನ್ಯಾಸಕ ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಘಟನೆ ನಡೆದಿದ್ದು, ಘಟನೆ ಸಂಬಂಧ ವಿದ್ಯಾರ್ಥಿನಿ ನೀಡಿದ ದೂರಿನನ್ವಯ ಉಪನ್ಯಾಸಕನ ವಿರುದ್ಧ ಎಫ್ ಐಆರ್ ದಾಖಲಿಸಿ ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರದ ಹೆಸರಾಂತ ಖಾಸಗಿ ಕಾಲೇಜಿನ ಉಪನ್ಯಾಸಕ ಪುನೀತ್ ಮದುವೆಯಾಗುವುದಾಗಿ ನಂಬಿಸಿ ತಾನು ಕಾರ್ಯ ನಿರ್ವಹಿಸುತ್ತಿರುವ ಕಾಲೇಜಿನ 19 ವರ್ಷದ ಯುವತಿಯ ಮೇಲೆ ಅತ್ಯಾಚಾರ ನಡೆಸಿ ವಂಚಿಸಿರುವುದಾಗಿ ಯುವತಿ ದೂರಿನಲ್ಲಿ ತಿಳಿಸಿದ್ದಾಳೆ. ಅರ್ಥವಾಗದ ವಿಷಯಗಳ ಕುರಿತು ಪಾಠ ಹೇಳುವುದಾಗಿ ನಂಬಿಸಿ ಪುಸಲಾಯಿಸಿ, ಸ್ನೇಹ ಬೆಳಸಿಕೊಂಡ ಉಪನ್ಯಾಸಕ ನಂತರ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಶಿವಮೊಗ್ಗದ ಮಹಿಳಾ ಠಾಣೆಯ ಪೊಲೀಸರು ಯುವತಿ ನೀಡಿದ ದೂರಿನ ಆಧಾರದ ಮೇಲೆ ಆರೋಪಿ ಪುನೀತ್ ನನ್ನು ಬಂಧಿಸಿದ್ದು, ಎಫ್ ಐಆರ್ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ಬೆಂಗಳೂರು: ನಗರದ ಪ್ರಮುಖ ರಸ್ತೆಗಳಲ್ಲಿನ ಪಾದಾಚಾರಿ ಮಾರ್ಗದಲ್ಲಿರುವ ಬೀದಿ ಬದಿ ಅಂಗಡಿಗಳನ್ನು ತೆರವು ಮಾಡಲು ಪಾಲಿಕೆ ಬಿಬಿಎಂಪಿ ಮುಂದಾಗಿದೆ. ಬೆಂಗಳೂರು ನಗರದಲ್ಲಿ ಹರಡಿರುವ ಪ್ರಮುಖ ರಸ್ತೆಗಳಲ್ಲಿನ ಬದಿಯಲ್ಲಿರುವ ಬೀದಿಬದಿ ಅಂಗಡಿಗಳ ತೆರವಿಗೆ ಬೆಂಗಳೂರು ಮಹನಾಗರ ಸಿದ್ಧತೆ ಮಾಡಿಕೊಳ್ಳುತ್ತಿದೆ. ನಗರದಲ್ಲಿ ಸುಮಾರು 1,200 ಕಿ.ಮೀ.ಗೂ ಅಧಿಕ ಉದ್ದದ ಪ್ರಮುಖ ರಸ್ತೆಗಳಿವೆ. ಈ ರಸ್ತೆಗಳ ಎರಡೂ ಬದಿಯಲ್ಲಿ ಬೀದಿಬದಿ ವ್ಯಾಪಾರಿಗಳು ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡಿದ್ದಾರೆ. ಇದೀಗ ಈ ರೀತಿ ಪ್ರಮುಖ ರಸ್ತೆಯ ಫುಟ್ ಪಾತ್ ಮೇಲಿನ ಅಂಗಡಿ ಮುಂಗಟ್ಟುಗಳನ್ನು ತೆರವು ಮಾಡಲು ಪಾಲಿಕೆ ಮುಂದಾಗುತ್ತಿದೆ. ಕೆ.ಆರ್.ಮಾರುಕಟ್ಟೆ, ಮಲ್ಲೇಶ್ವರ ಮಾರುಕಟ್ಟೆ, ಚಿಕ್ಕಪೇಟೆ, ಜಯನಗರ ಶಾಪಿಂಗ್ ಕಾಂಪ್ಲೆಕ್ಸ್, ಹೆಬ್ಬಾಳ ಹೂವಿನ ಮಾರುಕಟ್ಟೆ, ಮಡಿವಾಳ ಮಾರುಕಟ್ಟೆ ಹೀಗೆ ನಗರದ ಮಾರುಕಟ್ಟೆಗಳಿಗೆ ಹೊಂದಿರುವ ರಸ್ತೆಗಳ ಫುಟ್‌ಪಾತ್ ಮೇಲೆ ಹೆಚ್ಚು ಬೀದಿಬದಿ ವ್ಯಾಪಾರಿಗಳಿದ್ದಾರೆ. ಇದರಿಂದಾಗಿ ಪಾದಾಚಾರಿಗಳಿಗೆ ಸಮಸ್ಯೆ ಆಗುತ್ತಿದೆ ಎನ್ನುವುದು ಪಾಲಿಕೆ ವಾದ. ಹೀಗಾಗಿ ತೆರವು ಮಾಡಿ ಪಾದಾಚಾರಿಗಳಿಗೆ ಅನುವು ಮಾಡಿಕೊಡಬೇಕು ಎನ್ನುವುದು ಹೈಕೋರ್ಟ್ ನಿದರ್ಶನ ಅಂತ ಪಾಲಿಕೆ ಅಧಿಕಾರಿಗಳು ಹೇಳುತ್ತಿದ್ದಾರೆ.…
ಬಳ್ಳಾರಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಬಳ್ಳಾರಿ ಜೈಲು ಸೇರಿದ್ದಾರೆ. ಇದೀಗ ಬಳ್ಳಾರಿ ಜೈಲು ಸೇರಿದ ಬೆನ್ನಲ್ಲೇ ನಟ ದರ್ಶನ್ ಗೆ ಹಲವು ಸಮಸ್ಯೆಗಳು ಕಾಣಿಕೊಂಡಿವೆ. ಇಂಡಿಯನ್ ಟಾಯ್ಲೆಟ್ ಬಳಸಲು ದರ್ಶನ್ ಗೆ ಕಷ್ಟವಾಗ್ತಿದೆಯಂತೆ. ಹೀಗಾಗಿ ಶೌಚಾಲಯಕ್ಕೆ ಸರ್ಜಿಕಲ್ ಚೇರ್ ನೀಡುವಂತೆ ಮನವಿ ಮಾಡಲಾಗಿದೆ. ಜೈಲು ಅಧಿಕಾರಿಗಳು ಈ ಮನವಿಯನ್ನು ಪರಿಶೀಲನೆ ನಡೆಸಿದ್ದಾರೆ. ನಟ ದರ್ಶನ್ ಗೆ ಬೆನ್ನು ಮೂಳೆ ಸಮಸ್ಯೆ, ಮಲಬದ್ಧತೆ ಸಮಸ್ಯೆಯಿದೆ. ಕೆಳಗೆ ಕೂರಲು ಆಗುವುದಿಲ್ಲ. ಶೌಚಾಲಯಕ್ಕೆ ಸರ್ಜಿಕಲ್ ಚೇರ್ ನೀಡುವಂತೆ ಡಿಐಜಿ ಮುಂದೆ ನಟ ದರ್ಶನ್ ಮನವಿ ಮಾಡಿಕೊಂಡಿದ್ದರು. ಈ ಸಂಬಂಧ ಬೆಂಗಳೂರಿನಿಂದ ನಟನ ಆರೋಗ್ಯ ವರದಿ ಬಂದಿದ್ದು, ವೈದ್ಯಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಭಾನುವಾರವೂ ದರ್ಶನ್ ಅವರ ಆರೋಗ್ಯ ತಪಾಸಣೆ ನಡೆಸಲಾಗಿದ್ದು, ಇಂದು ನಟನಿಗೆ ಸರ್ಜಿಕಲ್ ಚೇರ್ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ. ವಿಜಯಲಕ್ಷ್ಮೀ ಜೈಲಿಗೆ ಭೇಟಿ ಕೊಟ್ಟಾಗ ನೀಡಿದ್ದ ಬೇಕರಿ ತಿಂಡಿಗಳನ್ನು ದರ್ಶನ್ ಸೇವಿಸಿದ್ದಾರೆ. ಜೈಲಿನ ಬ್ಯಾರಕ್ ಆವರಣದಲ್ಲಿಯೇ ವಾಕಿಂಗ್ ಮಾಡುತ್ತಿದ್ದಾರೆ. ನಮ್ಮತುಮಕೂರಿನ ಕ್ಷಣ…
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಆ್ಯಂಡ್ ಗ್ಯಾಂಗ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಗೆ ದಿನಗಣನೆ ಶುರುವಾಗಿದೆ. ವರದಿಗಳ ಪ್ರಕಾರ, ಇದೇ ವಾರ ಚಾರ್ಜ್ ಶೀಟ್ ಸಲ್ಲಿಕೆಯಾಗುವ ಸಾಧ್ಯತೆಯಿದೆಯಂತೆ. ಆರೋಪಪಟ್ಟಿ ಸ್ಟ್ರಾಂಗ್ ಆಗಿದ್ದು, ತನಿಖೆ ಅಂತಿಮ ಹಂತದಲ್ಲಿದೆ ಎಂದು ತನಿಖೆಯ ಭಾಗವಾಗಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ತನಿಖಾ ತಂಡ ಕೆಲ ವಿಧಿವಿಜ್ಞಾನ ಮತ್ತು ತಾಂತ್ರಿಕ ವರದಿಗಾಗಿ ಕಾಯುತ್ತಿದ್ದು, ವರದಿ ಬಂದ ಕೂಡಲೇ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ. ಜೂನ್ 9 ರಂದು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಜೂನ್ 11 ರಂದು ನಟ ದರ್ಶನ್ ಅವರನ್ನು ಮೈಸೂರಿನಲ್ಲಿ ಬಂಧಿಸಲಾಗಿತ್ತು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ತುಮಕೂರು: ಪಟಾಕಿ ತುಂಬಿದ ಗೋಡೌನ್ ಗೆ ಆಕಸ್ಮಿಕ ಬೆಂಕಿ ಬಿದ್ದ ಪರಿಣಾಮ ಅಪಾರ ಪ್ರಮಾಣದ ಸಾಮಗ್ರಿಗಳು ಸುಟ್ಟು ಭಸ್ಮವಾಗಿರುವ ಘಟನೆ ತುಮಕೂರು ನಗರದ ಹೃದಯ ಭಾಗ ಮಂಡಿ ಪೇಟೆಯಲ್ಲಿ ನಡೆದಿದೆ. ಹೊತ್ತಿ ಉರಿದ ಪಟಾಕಿ ಜೊತೆಗೆ ಪಕ್ಕದಲ್ಲಿಯೇ ಇದ್ದ ಪ್ಲಾಸ್ಟಿಕ್ ಅಂಗಡಿ, ಗ್ರಂಥಿಗೆ ಅಂಗಡಿಯ ಗೋದಾಮಿಗೂ ಬೆಂಕಿ ವ್ಯಾಪಿಸಿತ್ತು. ಮೆಟ್ರೋ ಮುಂಭಾಗ ಇರುವ ನೇತಾಜಿ ಸ್ಟೋರ್ ಗೋದಾಮಿನಲ್ಲಿ ಪಟಾಕಿ, ಗ್ರಂಥಿಗೆ, ಸ್ಡೇಷನರಿ ಪ್ಲಾಸ್ಟಿಕ್ ವಸ್ತುಗಳ ಅಂಗಡಿ ಇತ್ತು. ರಾಮಕೃಷ್ಣ ಎಂಬುವರಿಗೆ ಸೇರಿದ ಅಂಗಡಿ ಮಳಿಗೆ ಇದಾಗಿದ್ದು,, ಬೆಳಗ್ಗೆ 8ಗಂಟೆಯಿಂದ ಗೋದಾಮು ಹೊತ್ತಿಉರಿಯುತ್ತಿದೆ. ಅಕ್ರಮ ಪಟಾಕಿ ಶೇಖರಣೆಯಿಂದ ಭಾರಿ ಅನಾಹುತವಾಗಿದ್ದು ನಿರಂತರವಾಗಿ ಪಟಾಕಿಗಳು ಸ್ಪೋಟಗೊಂಡಿವೆ. ಗೋದಾಮಿಗೆ ಹೊಂದಿಕೊಂಡಂತೆ ಮನೆಗಳಿದ್ದು, ಪಟಾಕಿ ಸ್ಪೋಟದಿಂದ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಹೆಚ್ಚಿದೆ. ಸುತ್ತಮುತ್ತಲ ಪ್ರದೇಶದಲ್ಲಿ ಆವರಿಸಿದ ದಟ್ಟವಾದ ಹೊಗೆ ಆವರಿಸಿತ್ತು. ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸಲು ಹರಸಾಹಸ ಪಡಬೇಕಾಯಿತು. ಬೆಳಗ್ಗೆ 8 ಗಂಟೆಯಿಂದ ನಿರಂತರವಾಗಿ ಕಾರ್ಯಾಚರಣೆ ನಡೆದಿದೆ. ಮಂಡಿಪೇಟೆ ರಸ್ತೆಯಲ್ಲಿ ಎರಡು ಕಡೆ ಬಂದ್ ಬಿಗಿ ಪೊಲೀಸ್…
ಬೆಂಗಳೂರು: ನನ್ನ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಲು ಷಡ್ಯಂತ್ರ ನಡೆಯುತ್ತಿದೆ. ಆದ್ರೆ ನಾವು ಯಾವುದಕ್ಕೂ ಹೆದ್ರಲ್ಲ ಅಂತ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಈ ಸಂಬಂಧ ಭಾನುವಾರ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದ ಟ್ರಸ್ಟ್ ಗೆ ಕೆಐಎಡಿಬಿ ಜಮೀನು ಮಂಜೂರು ವಿವಾದ ಕುರಿತು ಕಾಂಗ್ರೆಸ್ ನಾಯಕರ ವಿರುದ್ಧ ಸಲ್ಲಿಕೆಯಾಗಿರುವ ಎರಡು ಅರ್ಜಿಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದರು. ಇದರ ಬಗ್ಗೆ ನಮ್ಮ ಬಳಿ ಯಾವುದೇ ಮಾಹಿತಿಲ್ಲ. ಕೆಲವರು ಕಾಂಗ್ರೆಸ್ ನಾಯಕರ ವಿರುದ್ಧ ದೂರು ಸಲ್ಲಿಸಿದ್ದಾರೆ. ನನ್ನ ವಿರುದ್ಧವೂ ದೂರು ಸಲ್ಲಿಸಲು ಯತ್ನಗಳು ನಡೆಯುತ್ತಿವೆ. ದೂರು ಸಲ್ಲಿಸಲಿ. ಆದರೆ, ನಾನು ಯಾವುದಕ್ಕೂ ಹೆದರುವುದಿಲ್ಲ ಎಂದು ಹೇಳಿದರು. ಇದೇ ವೇಳೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ಗಾಲಿ ಜನಾರ್ದನ ರೆಡ್ಡಿ, ಮುರುಗೇಶ್ ನಿರಾಣಿ ಸೇರಿದಂತೆ ಪ್ರತಿಪಕ್ಷ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ನಾಯಕರ ವಿರುದ್ಧ ರಾಜಭವನದಲ್ಲಿ ಯಾವುದೇ ದೂರುಗಳೂ ದಾಖಲಾಗಿಲ್ಲ ಎಂದು ರಾಜ್ಯಪಾಲರು ಕಾಂಗ್ರೆಸ್ ನಿಯೋಗಕ್ಕೆ ತಿಳಿಸಿದ್ದಾರೆ ಎಂದು…