ಬಳ್ಳಾರಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಬಳ್ಳಾರಿ ಜೈಲು ಸೇರಿದ್ದಾರೆ. ಇದೀಗ ಬಳ್ಳಾರಿ ಜೈಲು ಸೇರಿದ ಬೆನ್ನಲ್ಲೇ ನಟ ದರ್ಶನ್ ಗೆ ಹಲವು ಸಮಸ್ಯೆಗಳು ಕಾಣಿಕೊಂಡಿವೆ.
ಇಂಡಿಯನ್ ಟಾಯ್ಲೆಟ್ ಬಳಸಲು ದರ್ಶನ್ ಗೆ ಕಷ್ಟವಾಗ್ತಿದೆಯಂತೆ. ಹೀಗಾಗಿ ಶೌಚಾಲಯಕ್ಕೆ ಸರ್ಜಿಕಲ್ ಚೇರ್ ನೀಡುವಂತೆ ಮನವಿ ಮಾಡಲಾಗಿದೆ. ಜೈಲು ಅಧಿಕಾರಿಗಳು ಈ ಮನವಿಯನ್ನು ಪರಿಶೀಲನೆ ನಡೆಸಿದ್ದಾರೆ.
ನಟ ದರ್ಶನ್ ಗೆ ಬೆನ್ನು ಮೂಳೆ ಸಮಸ್ಯೆ, ಮಲಬದ್ಧತೆ ಸಮಸ್ಯೆಯಿದೆ. ಕೆಳಗೆ ಕೂರಲು ಆಗುವುದಿಲ್ಲ. ಶೌಚಾಲಯಕ್ಕೆ ಸರ್ಜಿಕಲ್ ಚೇರ್ ನೀಡುವಂತೆ ಡಿಐಜಿ ಮುಂದೆ ನಟ ದರ್ಶನ್ ಮನವಿ ಮಾಡಿಕೊಂಡಿದ್ದರು. ಈ ಸಂಬಂಧ ಬೆಂಗಳೂರಿನಿಂದ ನಟನ ಆರೋಗ್ಯ ವರದಿ ಬಂದಿದ್ದು, ವೈದ್ಯಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಭಾನುವಾರವೂ ದರ್ಶನ್ ಅವರ ಆರೋಗ್ಯ ತಪಾಸಣೆ ನಡೆಸಲಾಗಿದ್ದು, ಇಂದು ನಟನಿಗೆ ಸರ್ಜಿಕಲ್ ಚೇರ್ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ.
ವಿಜಯಲಕ್ಷ್ಮೀ ಜೈಲಿಗೆ ಭೇಟಿ ಕೊಟ್ಟಾಗ ನೀಡಿದ್ದ ಬೇಕರಿ ತಿಂಡಿಗಳನ್ನು ದರ್ಶನ್ ಸೇವಿಸಿದ್ದಾರೆ. ಜೈಲಿನ ಬ್ಯಾರಕ್ ಆವರಣದಲ್ಲಿಯೇ ವಾಕಿಂಗ್ ಮಾಡುತ್ತಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q