Subscribe to Updates
Get the latest creative news from FooBar about art, design and business.
- ತುಮಕೂರು: ದೇವರಾಯಪಟ್ಟಣದಲ್ಲಿ ಚಿರತೆ ಹಾವಳಿ, ಇಸ್ರೋ ಆವರಣದಲ್ಲಿ ಕುರಿ ಬಲಿ – ಬೋನು ಅಳವಡಿಕೆ
- ಗೃಹಲಕ್ಷ್ಮಿ, ಯುವನಿಧಿ: 323 ಕೋಟಿ ರೂ. ಬಿಡುಗಡೆ
- ಜಿಟಿಟಿಸಿ: ವಿವಿಧ ಕೋರ್ಸ್ ಗಳ ಪ್ರವೇಶಾತಿಗೆ ಅರ್ಜಿ
- ರಾಜಕಾರಣದಷ್ಟೇ ಶಿಕ್ಷಣ ವ್ಯವಸ್ಥೆ ಕಲುಷಿತ: ಡಾ.ವೈ.ಎ.ನಾರಾಯಣಸ್ವಾಮಿ ಕಳವಳ
- ತಮಿಳುನಾಡಿಗೆ ನೀರು ಹರಿಸುವ ಆದೇಶಕ್ಕೆ ಸಂಘಟನೆಗಳ ಆಕ್ರೋಶ: ಆದೇಶ ಧಿಕ್ಕರಿಸಿ ರಾಜ್ಯದ ಪರ ನಿಲ್ಲಲು ಒತ್ತಾಯ
- ಸರಗೂರು: ಕೊಟ್ಟಿಗೆಗೆ ನುಗ್ಗಿ ಕಾಡು ಪ್ರಾಣಿ ದಾಳಿ: 6 ಕುರಿ ಬಲಿ, 12 ಕುರಿಗಳಿಗೆ ಗಂಭೀರ ಗಾಯ
- ಸರಗೂರು: ಮೂರನೇ ಆಷಾಢ ಶುಕ್ರವಾರ -– ವಾಹನ ಚಾಲಕರ ಸಂಘದಿಂದ ವಿಶೇಷ ಪೂಜೆ ಹಾಗೂ ಖಾಕಿ ಸಮವಸ್ತ್ರ ವಿತರಣೆ
- ಔರಾದ್: ಜೈ ಕಿಸಾನ್ ಶಾಲೆ ಶಿಕ್ಷಕ, ಬಿಎಲ್ ಒ ಮಲ್ಲಿಕಾರ್ಜುನ ಪಿಟ್ರೆ ನಿಧನ
Author: admin
ಸಿಲಿಕಾನ್ ಸಿಟಿಯಲ್ಲಿ ಟ್ರಾಫಿಕ್ ಸಮಸ್ಯೆಗೆ ಒಂದು ಹಂತದ ನಾಂದಿ ಹಾಡಿದೆ ನಮ್ಮ ಮೆಟ್ರೋ. ಬೆಂಗಳೂರಿನಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಸಾರಿಗೆ ಸಂಸ್ಥೆ ಇದು. ಜಿಲ್ಲೆ ಜಿಲ್ಲೆಗಳಿಗೂ ನಮ್ಮ ಮೆಟ್ರೋ ವಿಸ್ತರಣೆಯಾಗುತ್ತಿದೆ. ಇದರ ಬೆನ್ನಲ್ಲೇ ಇದೀಗ ನಮ್ಮ ಮೆಟ್ರೋದಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಕೆಲಸ ಹುಡುಕುತ್ತಿರುವವರಿಗೆ ಒಂದೊಳ್ಳೆಯ ಅವಕಾಶವಾಗಿದೆ. ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಅರ್ಹ ಅಭ್ಯರ್ಥಿಗಳು, ಆಸಕ್ತರು ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಉತ್ತಮ ಸಂಬಳ ಅಂತು ಸಿಕ್ಕೆ ಸಿಗಲಿದೆ. ಒಟ್ಟು 58 ಪೋಸ್ಟ್ ಗಳಿದ್ದು, ಬೆಂಗಳೂರಿನಲ್ಲಿ ಕೆಲಸ ಸಿಗಲಿದೆ. ಸಹಾಯಕ ಭದ್ರತಾ ಅಧಿಕಾರಿಗಳ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಇನ್ನು ಈ ಹುದ್ದೆಗೆ ಇರುವ ಸಂಬಳ30 ಸಾವಿರದಿಂದ 32 ಸಾವಿರ ಇದೆ. ಆಯ್ಕೆ ಪ್ರಕ್ರಿಯೆಯೂ ದೈಹಿಕ ಪರೀಕ್ಷೆ, ಹುದ್ದೆಗೆ ಬೇಕಾದ ಅರ್ಹತೆ, ಅನುಭವ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. english.bmrc.co.in ವೆಬ್ಸೈಟ್ಗೆ ಭೇಟಿ ನೀಡಬೇಕು. ಬಳಿಕ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ…
ಬೀದರ್: ನಗರದಲ್ಲಿ ರೂ.500ಮುಖ ಬೆಲೆಯ ನಕಲಿ ನೋಟಿನ ಹಾವಳಿ ಹೆಚ್ಚಾಗಿದ್ದು, ಶುಕ್ರವಾರ ಬೀದರ ನಗರದ ಹಳೆಯ ಬಡಾವಣೆಯಲ್ಲಿ ವೃದ್ಧರೊಬ್ಬರಿಗೆ ಚಿಲ್ಲರೆ ನೆಪದಲ್ಲಿ 500 ರೂಪಾಯಿ ನಕಲಿ ನೋಟು ಕೊಟ್ಟಿರುವ ಸಂಗತಿ ಬೆಳಕಿಗೆ ಬಂದಿದೆ. ಅದೇ ರೀತಿಯಲ್ಲಿ ಕಿರಾಣಿ ಅಂಗಡಿಯಲ್ಲಿ ಗ್ರಾಹಕನ ಸೋಗಿನಲ್ಲಿ ಬಂದು ಸಾಮಾನು ಖರೀದಿಸಿ ನಕಲಿ ರೂ. 500 ನೋಟು ಕೊಟ್ಟಿರುವ ವಿಚಾರ ಬೆಳಕಿಗೆ ಬಂದಿರುವುದುದಾಗಿ ತಿಳಿದು ಬಂದಿದೆ. ವರದಿ: ಅರವಿಂದ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ಭೂಮಿಯ ಮೇಲಿನ ಅತ್ಯಂತ ನಿಶ್ಯಬ್ದ ಸ್ಥಳವನ್ನ USA ನಲ್ಲಿ ಸೃಷ್ಟಿಸಲಾಗಿದ್ದು, ಇಲ್ಲಿನ ಅನುಭವದಿಂದ ಜನ ಅಚ್ಚರಿಯ ಜೊತೆಗೆ ವಿಶಿಷ್ಟ ಅನುಭವಕ್ಕೆ ಒಳಗಾಗಿದ್ದಾರೆ. ಈ ಸ್ಥಳ ತುಂಬಾ ಮೌನವಾಗಿದ್ದು, ಮನುಷ್ಯ ಇದುವರೆಗೂ ಕೇಳಿರಲು ಸಾಧ್ಯವಿರದ ಅತಿ ಸಣ್ಣ ಶಬ್ಧವೂ ಇಲ್ಲಿ ಕೇಳಿಸುತ್ತದೆ. ಮಿನ್ನಿಯಾ ಪೋಲಿಸ್ — ಮಿನ್ನೇಸೋಟ ಎಂಬ USA ನಲ್ಲಿರುವ ಆರ್ಫೀಲ್ಡ್ ಲ್ಯಾಬೊರೇಟರೀಸ್‌ನಲ್ಲಿರುವ ಅನಿಕೋಯಿಕ್ ಟೆಸ್ಟ್ ಚೇಂಬರ್ ಈ ಅನುಭವ ನೀಡುತ್ತದೆ. ಇಲ್ಲಿ ಹೊರ ಜಗತ್ತಿನ ಸಂಪೂರ್ಣ ಶಬ್ದವನ್ನು ನಿಗ್ರಹಿಸಲು ವಿಶೇಷವಾಗಿ ಕೋಣೆಯನ್ನ ವಿನ್ಯಾಸಗೊಳಿಸಲಾಗಿದೆ. ಹೀಗಾಗಿ ಈ ಕೋಣೆಗೆ ಭೇಟಿ ನೀಡುವವರು, ಎಷ್ಟು ಸಣ್ಣ ಶಬ್ದವನ್ನು ಆಲಿಸಬಹುದು ಅಂದ್ರೆ, ತಮ್ಮ ರಕ್ತನಾಳಗಳ ಮೂಲಕ ರಕ್ತ ಹರಿಯುವ ಶಬ್ಧವನ್ನು ಕೇಳಲು ಸಾಧ್ಯವಾಗುತ್ತದೆ ಎಂದು ವರದಿ ಮಾಡಲಾಗಿದೆ. ಅಷ್ಟು ಮಾತ್ರವಲ್ಲದೇ ತಾವು ಮಿಟುಕಿಸುವ ಕಣ್ಣ ರೆಪ್ಪೆಗಳ ಸದ್ದನ್ನೂ ಕೇಳಬಹುದಂತೆ. ಹೀಗೆ ಈ ಕೋಣೆಯಲ್ಲಿ ಸಮಯ ಕಳೆದು ಬಂದವರು ತಮ್ಮ ವಿಚಿತ್ರ ಅನುಭವಗಳನ್ನು ಹೇಳಿಕೊಂಡಿದ್ದಾರೆ. ತಮಗೆ ಧಿಡೀರ್ ಅನಾರೋಗ್ಯವಾದಂತೆ, ವಿಚಿತ್ರ ಹಿಂಸೆಯದಂತೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.…
ಜ್ವರ, ಕೆಮ್ಮು, ನೆಗಡಿ, ಕಾಲು ಕೈ ನೋವು ಏನೇ ಬಂದ್ರು ಮೆಡಿಕಲ್ ಶಾಪ್ ಗಳಿಗೆ ಹೋಗಿ ಮೆಡಿಸಿನ್ ಹಾಗೂ ಆಯಂಟಿ ಬಯಾಟಿಕ್ ಮಾತ್ರೆ ನುಂಗುತ್ತಿದ್ದಾರೆ. ಮೆಡಿಕಲ್ ಶಾಪ್ಗಳು ಜನರು ಕೇಳುವ ಮಾತ್ರೆಗಳನ್ನ ವೈದ್ಯರ ಸಲಹೆ ಇಲ್ಲದೆ ನೀಡುತ್ತಿರುವುದು ಜನರ ಆರೋಗ್ಯಕ್ಕೆ ಕುತ್ತು ತರುತ್ತಿದೆ. ಜನರ ನಡೆ ಆರೋಗ್ಯ ಇಲಾಖೆ ಹಾಗೂ ವೈದ್ಯರ ಆತಂಕಕ್ಕೆ ಕಾರಣವಾಗುತ್ತಿದೆ. ಇತ್ತಿಚ್ಚಿಗೆ ಮಹಿಳೆಯು ಅಸುರಕ್ಷಿತ ಗರ್ಭಪಾತ ಮಾತ್ರೆಗನ್ನು ನುಂಗುತ್ತಿದ್ದು ವೈದ್ಯರ ಟೆನ್ಷನ್ಗೆ ಕಾರಣವಾಗಿದೆ. ಹೀಗಾಗಿ ಆರೋಗ್ಯ ಇಲಾಖೆ (Health Department) ಕಡಿವಾಣಕ್ಕೆ ಹೊಸ ಅಸ್ತ್ರ ಪ್ರಯೋಗಿಸಿದೆ.ಇದನ್ನ ಬಂಡವಾಳ ಮಾಡಿಕೊಂಡ ಕೆಲವು ಮೆಡಿಕಲ್ ಶಾಪ್ಗಳು ಜನರು ಕೇಳುವ ಮಾತ್ರೆಗಳನ್ನ ವೈದ್ಯರ ಸಲಹೆ ಇಲ್ಲದೆ ನೀಡುತ್ತಿರುವುದು ಜನರ ಆರೋಗ್ಯಕ್ಕೆ ಕುತ್ತು ತರುತ್ತಿದೆ. ಹೀಗಾಗಿ ಆರೋಗ್ಯ ಇಲಾಖೆ ಈಗ ಕಡಿವಾಣಕ್ಕೆ ಮುಂದಾಗಿದೆ. ವೈದ್ಯರ ಪ್ರಿಸ್ಕ್ರಿಪ್ಷನ್ಗೆ ನಿಗದಿತ ಸಮಯ ಫಿಕ್ಸ್ ಮಾಡಲು ಮುಂದಾಗಿದ್ದು ನಂತರದ ದಿನಗಳಲ್ಲಿ ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಮಾತ್ರ ನೀಡುವುದಕ್ಕೆ ನಿರ್ಬಂಧಕ್ಕೆ ಮುಂದಾಗಿದೆ. ಔಷಧ ಮಳಿಗೆಗಳು ಕೌಂಟರ್ ಮೆಡಿಸಿನ್ ರೂಪದಲ್ಲಿ…
ತುಮಕೂರು: ದೇವಸ್ಥಾನ, ಜಾತ್ರೆ, ಹಬ್ಬ ಮತ್ತಿತರ ಪೂಜಾ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳಿಗೆ ವಿತರಿಸಲಾಗುವ ಪ್ರಸಾದ ತಯಾರಿಕೆಯಲ್ಲಿ ಕೃತಕ ಬಣ್ಣಗಳನ್ನು ಬಳಸಬಾರದು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೂಚನೆ ನೀಡಿದ್ದಾರೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ–2006ರಡಿ ದೇವಸ್ಥಾನ ಹಾಗೂ ಜಾತ್ರಾ ಮಹೋತ್ಸವಗಳಲ್ಲಿ ಪಾಲಿಸಬೇಕಾದ ಮಾನದಂಡಗಳ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ದೇವಸ್ಥಾನ ಹಾಗೂ ಜಾತ್ರಾ ಮಹೋತ್ಸವ, ಹಬ್ಬ–ಹರಿದಿನಗಳಲ್ಲಿ ಭಕ್ತಾದಿಗಳು/ಸಾರ್ವಜನಿಕರಿಗೆ ಪ್ರಸಾದ ವಿತರಿಸಲು ಆಹಾರ ತಯಾರಿಸುವವರು ಕಡ್ಡಾಯವಾಗಿ ಆಹಾರ ಪರವಾನಗಿ ಪಡೆದುಕೊಳ್ಳಬೇಕು. ಪಡೆದಿರುವ ಆಹಾರ ಪರವಾನಗಿಯನ್ನು ಸಾರ್ವಜನಿಕರಿಗೆ ಎದ್ದು ಕಾಣುವಂತೆ ಪ್ರದರ್ಶಿಸಬೇಕು. ಆಹಾರ ತಯಾರಿಸುವ ಜಾಗ ಶುಚಿತ್ವದಿಂದ ಕೂಡಿರಬೇಕು. ಆಹಾರ ತಯಾರಿಕೆಗೆ ಬಳಸುವ ಪದಾರ್ಥಗಳು ಎಫ್.ಎಸ್.ಎಸ್.ಎ. ಲೈಸನ್ಸ್ ಪಡೆದಿದ್ದು, ಅವಧಿ ಮುಗಿದಿರುವ ಆಹಾರ ಪದಾರ್ಥಗಳನ್ನು ಯಾವುದೇ ಕಾರಣಕ್ಕೂ ಪ್ರಸಾದ ತಯಾರಿಕೆಯಲ್ಲಿ ಬಳಸಬಾರದು ಎಂದು ಸೂಚನೆ ನೀಡಿದ್ದಾರೆ. ಜಾತ್ರೆ/ ಊರ ಹಬ್ಬಗಳಲ್ಲಿ ಆಹಾರ ವಿತರಣೆಗೆ ಸಂಬಂಧಿಸಿದಂತೆ ಆಹಾರ ತಯಾರಿಸುವವರು ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವುದರೊಂದಿಗೆ ಏಪ್ರಾನ್, ಕೈಗವಸು, ಮುಖಗವಸು, ತಲೆಗೆ ಕೂದಲುಗಳನ್ನು ಮುಚ್ಚುವಂತಿರುವ ಟೋಪಿ, ಕಾಲುಗಳಿಗೆ…
ತುಮಕೂರು: ಮಹಾರಾಷ್ಟದ ನಾಗಪುರ ದೀಕ್ಷಾ ಭೂಮಿಯಲ್ಲಿ ಅಕ್ಟೋಬರ್ 12ರಂದು ನಡೆಯಲಿರುವ ದಮ್ಮ ಪ್ರವರ್ತನ ದಿನ ಕಾರ್ಯಕ್ರಮಕ್ಕೆ ಯಾತ್ರೆ ಕೈಗೊಳ್ಳಲಿಚ್ಛಿಸುವ ಡಾ.ಬಿ.ಆರ್. ಅಂಬೇಡ್ಕರ್ ಅವರ ಅನುಯಾಯಿಗಳಿಂದ ಈಗಾಗಲೇ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸುವ ಅವಧಿಯನ್ನು ಸೆಪ್ಟೆಂಬರ್ 5ರವರೆಗೆ ವಿಸ್ತರಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ದೀಕ್ಷಾ ಭೂಮಿಯಲ್ಲಿ ಅಕ್ಟೋಬರ್ 10 ರಿಂದ 14ರವರೆಗೆ ನಡೆಯುವ ದಮ್ಮ ಪ್ರವರ್ತನ ದಿನ ಕಾರ್ಯಕ್ರಮಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಅನುಯಾಯಿಗಳನ್ನು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಕಳುಹಿಸಿಕೊಡಲು ಸಾರಿಗೆ ವ್ಯವಸ್ಥೆ/ರೈಲಿನ ವ್ಯವಸ್ಥೆ ಕಲ್ಪಿಸುವ ಸಂಬಂಧ ಅರ್ಹ ಯಾತ್ರಾರ್ಥಿಗಳನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಡಾ.ಬಿ.ಆರ್ ಅಂಬೇಡ್ಕರ್ ಅನುಯಾಯಿಗಳು ಸಮಾಜ ಕಲ್ಯಾಣ ಇಲಾಖೆಯ ವೆಬ್ ಸೈಟ್ https://swdservices.karnataka.gov.in/ ಗೆ ಭೇಟಿ ನೀಡಿ ಸೆಪ್ಟೆಂಬರ್ 5ರೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದೆಂದು ಅವರು ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ…
ತುಮಕೂರು: ಕಾರ್ಮಿಕ ಇಲಾಖೆಯು ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಜೇಷ್ಠತೆ ಆಧಾರದಲ್ಲಿ ಮೇಸನ್ ಕಿಟ್, ವೆಲ್ಡಿಂಗ್ ಕಿಟ್, ರೋಡ್ ಕನ್ಸಟಕ್ಷನ್ ಕಿಟ್ ಸೇರಿದಂತೆ ವಿವಿಧ ಟೂಲ್ ಕಿಟ್ ಗಳನ್ನು ವಿತರಿಸುತ್ತಿದ್ದು, ಸವಲತ್ತು ಪಡೆಯಲಿಚ್ಛಿಸುವ ಅರ್ಹ ಕಟ್ಟಡ ಕಾರ್ಮಿಕರು ಆಯಾ ಕಾರ್ಮಿಕ ನಿರೀಕ್ಷಕರ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬೇಕೆಂದು ಕಾರ್ಮಿಕ ಅಧಿಕಾರಿ ತೇಜಾವತಿ ತಿಳಿಸಿದ್ದಾರೆ. ಅರ್ಹ ಫಲಾನುಭವಿಗಳು ತಮ್ಮ ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ ಹಾಗೂ ನೋಂದಾಯಿತ ಕಟ್ಟಡ ಕಾರ್ಮಿಕರ ಚಾಲ್ತಿಯಲ್ಲಿರುವ ಗುರುತಿನ ಚೀಟಿಯೊಂದಿಗೆ ಸೆಪ್ಟೆಂಬರ್ 17ರೊಳಗಾಗಿ ತಮ್ಮ ವ್ಯಾಪ್ತಿಯ ಕಾರ್ಮಿಕ ನಿರೀಕ್ಷಕರ ಕಚೇರಿಯಲ್ಲಿ ನೋಂದಾಯಿಸಿಕೊಂಡು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ತುಮಕೂರು: ಕರ್ತವ್ಯ ನಿರ್ಲಕ್ಷ, ಸರ್ಕಾರಿ ಯೋಜನೆಗಳ ಪ್ರಗತಿ ಕುಂಠಿತ, ಯೋಜನಾನುಷ್ಠಾನದಲ್ಲಿ ಬೇಜವಾಬ್ದಾರಿ ತೋರುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ತಿಳಿಸಿದರು. ಜಿಲ್ಲಾ ಪಂಚಾಯತಿಯ ತಮ್ಮ ಕೊಠಡಿಯಲ್ಲಿಂದು ವಿವಿಧ ಯೋಜನೆಗಳ ಪ್ರಗತಿ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲಾ ಪಂಚಾಯತಿ ವತಿಯಿಂದ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಲ್ಲಿ ಗುಣಮಟ್ಟವನ್ನು ಆದ್ಯತೆ ಮೇರೆಗೆ ಕಾಯ್ದುಕೊಳ್ಳಲಾಗುತ್ತಿದೆ. ಕಳಪೆ ಕಾಮಗಾರಿಗಳು ಕಂಡು ಬಂದಲ್ಲಿ ತಾಲ್ಲೂಕು ಪಂಚಾಯತಿ ಅಥವಾ ಜಿಲ್ಲಾ ಪಂಚಾಯತಿ ಗಮನಕ್ಕೆ ತಂದಲ್ಲಿ ಕೂಡಲೇ ಕಳಪೆ ಕಾಮಗಾರಿಗೆ ಸಂಬಂಧಿಸಿದ ಗುತ್ತಿಗೆದಾರರ ವಿರುದ್ಧ ಕ್ರಮವಹಿಸಲಾಗುವುದೆಂದು ತಿಳಿಸಿದರು. ಕಾಮಗಾರಿಗಳ ಬಿಲ್ ಪಾವತಿ ವಿಳಂಬ ಕುರಿತು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಆರ್ಥಿಕ ವರ್ಷಾರಂಭದ ಮೊದಲ 3 ತಿಂಗಳು ಅನುದಾನದ ಬಳಕೆಯಾಗುವುದಿಲ್ಲ. ಮೊದಲ 3 ತಿಂಗಳ ಅವಧಿಯಲ್ಲಿ ಪ್ರಸಕ್ತ ವರ್ಷ ಕೈಗೊಳ್ಳಲು ಉದ್ದೇಶಿಸಿರುವ ಕಾಮಗಾರಿಗಳ ಕ್ರಿಯಾ ಯೋಜನೆ ತಯಾರಿಕೆ, ಟೆಂಡರ್ ಪ್ರಕ್ರಿಯೆ, ವಿಸ್ತೃತ ಯೋಜನಾ ವರದಿ(ಡಿಪಿಆರ್)…
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490 ಮೇಷ ರಾಶಿ✨ ಇಂದು ನೀವು ಗುರಿಯನ್ನು ಸಾಧಿಸುವ ಕಡೆ ಹೆಚ್ಚು ಗಮನ ಕೊಡುವಿರಿ. ಯುವಕರು ಸಂದರ್ಶನಗಳಲ್ಲಿ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ಯಾವುದೇ ಅಕ್ರಮ ಚಟುವಟಿಕೆಗಳನ್ನು ತಪ್ಪಿಸಿ. ಕೌಟುಂಬಿಕ ವಾತಾವರಣ ಆಹ್ಲಾದಕರವಾಗಿರಬಹುದು.✨ ವೃಷಭ ರಾಶಿ ✨ ಇಂದು ನಿಮ್ಮ ಪ್ರೀತಿ ಪಾತ್ರರೊಡನೆ ಮನರಂಜನೆಯಲ್ಲಿ ಉತ್ತಮ ಸಮಯವನ್ನು ಕಳೆಯಬಹುದು. ವ್ಯವಹಾರದಲ್ಲಿ ಕೆಲವು ಹೊಸ…
ಚಿಕ್ಕ ಮಕ್ಕಳಿಂದ ಹಿಡಿದು ಹಣ್ಣು ಹಣ್ಣು ಮುದುಕರವರೆಗೂ ಕೇಕ್ ನ್ನು ಚಪ್ಪರಿಸಿಕೊಂಡು ತಿಂತಾರೆ. ಅದರಲ್ಲೂ ಈಗಂತೂ ಕೇಕ್ ಇಲ್ದೆ ಹೋದ್ರೆ ಬರ್ತೇಡೆ ಪಾರ್ಟಿಗಳನ್ನ ಊಹಿಸೋದು ಕೂಡ ಕಷ್ಟ. ಅಂತದ್ರಲ್ಲಿ ಇನ್ಮಂದೇ ಕರ್ನಾಟಕದಲ್ಲಿ ಕೇಕ್ ಸಿಗೋದಿಲ್ವಾ? ಅಚ್ಚರಿಯ ವಿಷ್ಯ ಅಂದ್ರೆ ಈಗಾಗಲೇ ಗೋಬಿ, ಕಬಾಬ್, ಬಾಂಬೆ ಮಿಠಾಯಿಗಳಿಗೆ ರಾಜ್ಯದಲ್ಲಿ ವಿಘ್ನ ಎದುರಾಗಿತ್ತು. ಅದ್ರೆ ಇದೀಗ ಕೇಕ್ ಗೂ ಸಹ ಸಂಕಷ್ಟ ಎದುರಾಗಿದೆ. ಕೇಕ್ನಲ್ಲಿ ಮನುಷ್ಯನ ಆರೋಗ್ಯಕ್ಕೆ ಹಾನಿಯಾಗುವ ಕೆಮಿಕಲ್ಸ್ ಪತ್ತೆಯಾಗಿದೆ ಎಂಬ ಸ್ಪೋಟಕ ಮಾಹಿತಿ ಹೊರಬಿದ್ದಿದೆ. ಆಘಾತಕಾರಿ ವಿಷ್ಯವೊಂದನ್ನ ಆಹಾರ ಮತ್ತು ಆರೋಗ್ಯ ತಜ್ಞರು ಪತ್ತೆ ಹಚ್ಚಿದ್ದಾರೆ. ವಿಶೇಷ ಅಂದ್ರೆ ಬಾಂಬೆ ಮಿಠಾಯಿಯಲ್ಲಿ ರೋಡಮೈನ್–ಬಿ ಎಂಬ ವಿಷಕಾರಿ ರಾಸಾಯನಿಕ ಅಂಶ ಇದ್ಯಂತೆ. ಅದಲ್ಲದೆ ಗೋಬಿ ತಯಾರಿಕೆಯಲ್ಲಿ ಬಳಸುವ ಕೃತಕ ಬಣ್ಣ, ರುಚಿಕಾರಕ, ಕಡಿಮೆ ಬೆಲೆಯ ಸಾಸ್ ಇವೆಲ್ಲಾ ಮಾನವನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ ಎಂಬ ಮಾಹಿತಿ ನೀಡಿದ್ದಾರೆ. ಇಂಟರೆಸ್ಟಿಂಗ್ ಅಂದ್ರೆ ಇದ್ರಲೆಲ್ಲ ಸಿಂಥೆಟಿಕ್ ಬಣ್ಣಗಳನ್ನು ಅತಿ ಹೆಚ್ಚು ಬಳಸಲಾಗುತ್ತೆ. ಅದರಲ್ಲೂ…