ಜ್ವರ, ಕೆಮ್ಮು, ನೆಗಡಿ, ಕಾಲು ಕೈ ನೋವು ಏನೇ ಬಂದ್ರು ಮೆಡಿಕಲ್ ಶಾಪ್ ಗಳಿಗೆ ಹೋಗಿ ಮೆಡಿಸಿನ್ ಹಾಗೂ ಆಯಂಟಿ ಬಯಾಟಿಕ್ ಮಾತ್ರೆ ನುಂಗುತ್ತಿದ್ದಾರೆ. ಮೆಡಿಕಲ್ ಶಾಪ್ಗಳು ಜನರು ಕೇಳುವ ಮಾತ್ರೆಗಳನ್ನ ವೈದ್ಯರ ಸಲಹೆ ಇಲ್ಲದೆ ನೀಡುತ್ತಿರುವುದು ಜನರ ಆರೋಗ್ಯಕ್ಕೆ ಕುತ್ತು ತರುತ್ತಿದೆ. ಜನರ ನಡೆ ಆರೋಗ್ಯ ಇಲಾಖೆ ಹಾಗೂ ವೈದ್ಯರ ಆತಂಕಕ್ಕೆ ಕಾರಣವಾಗುತ್ತಿದೆ.
ಇತ್ತಿಚ್ಚಿಗೆ ಮಹಿಳೆಯು ಅಸುರಕ್ಷಿತ ಗರ್ಭಪಾತ ಮಾತ್ರೆಗನ್ನು ನುಂಗುತ್ತಿದ್ದು ವೈದ್ಯರ ಟೆನ್ಷನ್ಗೆ ಕಾರಣವಾಗಿದೆ. ಹೀಗಾಗಿ ಆರೋಗ್ಯ ಇಲಾಖೆ (Health Department) ಕಡಿವಾಣಕ್ಕೆ ಹೊಸ ಅಸ್ತ್ರ ಪ್ರಯೋಗಿಸಿದೆ.ಇದನ್ನ ಬಂಡವಾಳ ಮಾಡಿಕೊಂಡ ಕೆಲವು ಮೆಡಿಕಲ್ ಶಾಪ್ಗಳು ಜನರು ಕೇಳುವ ಮಾತ್ರೆಗಳನ್ನ ವೈದ್ಯರ ಸಲಹೆ ಇಲ್ಲದೆ ನೀಡುತ್ತಿರುವುದು ಜನರ ಆರೋಗ್ಯಕ್ಕೆ ಕುತ್ತು ತರುತ್ತಿದೆ. ಹೀಗಾಗಿ ಆರೋಗ್ಯ ಇಲಾಖೆ ಈಗ ಕಡಿವಾಣಕ್ಕೆ ಮುಂದಾಗಿದೆ. ವೈದ್ಯರ ಪ್ರಿಸ್ಕ್ರಿಪ್ಷನ್ಗೆ ನಿಗದಿತ ಸಮಯ ಫಿಕ್ಸ್ ಮಾಡಲು ಮುಂದಾಗಿದ್ದು ನಂತರದ ದಿನಗಳಲ್ಲಿ ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಮಾತ್ರ ನೀಡುವುದಕ್ಕೆ ನಿರ್ಬಂಧಕ್ಕೆ ಮುಂದಾಗಿದೆ.
ಔಷಧ ಮಳಿಗೆಗಳು ಕೌಂಟರ್ ಮೆಡಿಸಿನ್ ರೂಪದಲ್ಲಿ ಗರ್ಭಪಾತ ಮಾತ್ರೆ ಸೇರಿದ್ದಂತೆ ಕೆಲವು ಅಪಾಯಕಾರಿಯಾದ ಔಷಧಗಳನ್ನ ವೈದ್ಯರ ಸಲಹಾ ಚೀಟಿ ಇಲ್ಲದೆ ನೀಡಬಾರದು. ಈ ಬಗ್ಗೆ ಆರೋಗ್ಯ ಇಲಾಖೆಯ ಆದೇಶ ಇದ್ರು ಕೂಡಾ ಕೆಲವು ಔಷಧ ಮಳಿಗೆಗಳು ನಿಯಮ ಉಲ್ಲಂಘನೆ ಮಾಡ್ತೀವೆ. ಈ ಹಿನ್ನಲೆ ಎಚ್ಚೆತ್ತುಗೊಂಡಿರುವ ಆರೋಗ್ಯ ಇಲಾಖೆ ಕಾನೂನು ಬಾಹಿರವಾಗಿ ಮಾತ್ರೆಗಳನ್ನ ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಕೌಂಟರ್ ಮೆಡಿಸಿನ ನೀಡುವ ಮೆಡಿಕಲ್ ಶಾಪ್ಗಳ ಲೈಸೆನ್ಸ್ ರದ್ದು ಮಾಡಲು ಮುಂದಾಗಿದೆ ಹಾಗೂ ಕಾನೂನು ಶಿಕ್ಷೆಗೆ ಒಳಪಡಿಸಲು ಮುಂದಾಗಿದೆ. ಸದ್ಯ ವೈದ್ಯರು ಆರೋಗ್ಯ ಇಲಾಖೆಯ ಕ್ರಮ ಒಳೆಯದು ಅಂತಿದ್ದಾರೆ. ಇಲ್ಲದೆ ಇದ್ರೆ ಚಿಕಿತ್ಸೆ ನೀಡುವುದು ನಮಗೆ ಸಮಸ್ಯೆ ಎಂದು ಜನರಲ್ ಮೆಡಿಸಿನ್ ಡಾ ಸುರೇಶ್ ಹೇಳಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q