Author: admin

‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರದ ಮೂಲಕ ಎಲ್ಲರ ಗಮನ ಸೆಳೆದಿದ್ದ ಚಂದನ್ ಶೆಟ್ಟಿ ಇದೀಗ ಮತ್ತೊಂದು ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಇದರ ಟೈಟಲನ್ನು ಇಂದು ರಿವಿಲ್ ಮಾಡಲಾಗಿದೆ. ಈ ಚಿತ್ರಕ್ಕೆ ‘ಮುದ್ದು ರಾಕ್ಷಸಿ’ ಎಂಬ ಟೈಟಲ್ ಇಡಲಾಗಿದ್ದು, ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಪುನೀತ್ ಶ್ರೀನಿವಾಸ್ ರಚಿಸಿ ನಿರ್ದೇಶಿಸುತ್ತಿರುವ ಈ ಚಿತ್ರವನ್ನು ಶ್ರೀ ಚೌಡೇಶ್ವರಿ ಕಂಬೈನ್ಸ್ ಬ್ಯಾನರ್ ನಲ್ಲಿ ಎಲ್ ಮೋಹನ್ ಕುಮಾರ್ ನಿರ್ಮಾಣ ಮಾಡಿದ್ದು, ಎಂ ಎಸ್ ತ್ಯಾಗರಾಜ್ ಸಂಗೀತ ಸಂಯೋಜನೆ ನೀಡುತ್ತಿದ್ದಾರೆ. ಸಚಿನ್ ಜಗದೇಶ್ವರನ್ ಸಂಭಾಷಣೆ, ಡಾಕ್ಟರ್ ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ, ವಿನೋದ್ ಅವರ ಸಾಹಸ ನಿರ್ದೇಶನ, ಧನು ಹಾಗೂ ಸಂತೋಷ್ ನೃತ್ಯ ನಿರ್ದೇಶನ, ಹಾಗೂ ಏ ಕರುಣಾಕರ್ ಅವರ ಛಾಯಾಗ್ರಾಣವಿದೆ. ‘ಮುದ್ದು ರಾಕ್ಷಸಿ ‘ ಟೈಟಲ್​ ಭಿನ್ನವಾಗಿದ್ದು, ಜನರಲ್ಲಿ ಕೌತುಕ ಮೂಡಿಸಿದೆ. ಇದರಲ್ಲಿ ಒಂದು ಡಿಫರೆಂಟ್​ ಆದ ರೊಮ್ಯಾಂಟಿಕ್ ಪ್ರೇಮ್​ ಕಹಾನಿ ಇರಲಿದೆ. ಸೈಕೋಥ್ರಿಲ್ಲರ್ ಕಥಾಹಂದರ ಪ್ರಮುಖವಾಗಿ ಇರಲಿದೆ.  ಮೊದಲು ಈ ಸಿನಿಮಾಕ್ಕೆ…

Read More

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆರಂಭಿಸಿರುವ ಉಚಿತ ಹೊಲಿಗೆ ಯಂತ್ರ ಯೋಜನೆಯು ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವುದು. ಈ ಯೋಜನೆಯಡಿ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರಗಳನ್ನು ನೀಡಲಾಗುತ್ತದೆ ಮತ್ತು ಅವರಿಗೆ ಹೊಲಿಗೆ ತರಬೇತಿಯನ್ನೂ ನೀಡಲಾಗುತ್ತದೆ. ಇದರೊಂದಿಗೆ ಮಹಿಳೆಯರು ಮನೆಯಲ್ಲಿಯೇ ಇದ್ದು ತಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಬಹುದು. ಈ ಯೋಜನೆಯ ಸಂಪೂರ್ಣ ಮಾಹಿತಿ ಮತ್ತು ಅಪ್ಲಿಕೇಶನ್ ಪ್ರಕ್ರಿಯೆಯ ಕುರಿತು ನಾವು ಇಲ್ಲಿ ನಿಮಗೆ ವಿವರವಾಗಿ ಹೇಳುತ್ತೇವೆ. ಉಚಿತ ಹೊಲಿಗೆ ಯಂತ್ರ ಯೋಜನೆ: ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ಉಚಿತ ಹೊಲಿಗೆ ಯಂತ್ರ ಯೋಜನೆಯ ಉದ್ದೇಶವಾಗಿದೆ. ಇದರ ಅಡಿಯಲ್ಲಿ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರಗಳನ್ನು ನೀಡುವುದಲ್ಲದೆ, ಅವರಿಗೆ ಹೊಲಿಗೆಗೆ ಅಗತ್ಯವಾದ ತರಬೇತಿಯನ್ನು ಸಹ ನೀಡಲಾಗುತ್ತದೆ. ಈ ಯೋಜನೆಯ ಪ್ರಯೋಜನವು 20 ರಿಂದ 40 ವರ್ಷ ವಯಸ್ಸಿನ ಮಹಿಳೆಯರಿಗೆ, ವಿಶೇಷವಾಗಿ ಬಡ ಮತ್ತು ದುರ್ಬಲ ಕುಟುಂಬಗಳ ಮಹಿಳೆಯರಿಗೆ ಲಭ್ಯವಿದೆ. ಯೋಜನೆಯ ಲಾಭವನ್ನು ಆರ್ಥಿಕವಾಗಿ ದುರ್ಬಲ ಮತ್ತು ವಿಶೇಷ ಚೇತನ ಮಹಿಳೆಯರಿಗೆ ಮೊದಲು ನೀಡಲಾಗುತ್ತದೆ. ಉಚಿತ ಹೊಲಿಗೆ ಯಂತ್ರ…

Read More

ಸಾಗರ ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಸಚಿವ, ಹಿರಿಯ ರಾಜಕಾರಣಿ ಕೆ.ಎಚ್.ಶ್ರೀನಿವಾಸ್ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಸಾಗರ ತಾಲ್ಲೂಕು ಕಾನುಗೋಡು ಗ್ರಾಮದವರಾದ ಶ್ರೀನಿವಾಸ್ ಜನತಾಪರಿವಾರದಲ್ಲಿ ಗುರುತಿಸಿಕೊಂಡಿದ್ದರು. ಆನಂತರ ಕಾಂಗ್ರೆಸ್‌ನಲ್ಲೂ ಇದ್ದರು. ಇವರಿಗೆ 85 ವರ್ಷ ವಯಸ್ಸಾಗಿತ್ತು. ಕೆಲ ದಿನಗಳಿಂದ ಅನಾರೋಗ್ಯ ಪೀಡಿತರಾಗಿದ್ದ ಅವರು ಬೆಂಗಳೂರನಲ್ಲಿಯೇ ನೆಲೆಸಿದ್ದರು. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕಾನುಗೋಡು ಗ್ರಾಮದಲ್ಲಿ1939ರ ಫೆಬ್ರವರಿ 5ರಂದು ಜನಿಸಿದ ಕೆ.ಎಚ್. ಶ್ರೀನಿವಾಸ್ ಇಂಗ್ಲೀಷ್‌ ಎಂಎ ಜೊತೆಗೆ ಕಾನೂನು ಪದವಿ ಪಡೆದಿದ್ದರು. ಶ್ರೀನಿವಾಸ್‌ ಮೊದಲು ಜನತಾ ಪರಿವಾರದಲ್ಲಿ ಗುರುತಿಸಿಕೊಂಡಿದ್ದರು. ಆನಂತರ ಕಾಂಗ್ರೆಸ್‌ನಲ್ಲೂ ಇದ್ದರು. ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಅವರ ಆಪ್ತರಾಗಿದ್ದ ಶ್ರೀನಿವಾಸ್‌, ಸಾಂಸ್ಕೃತಿಕ ವಲಯದಲ್ಲೂ ಗುರುತಿಸಿಕೊಂಡಿದ್ದರು. ವಕೀಲರಾಗಿ, ಕೃಷಿಕರೂ ಆಗಿದ್ದರು. ಕವಿಯಾಗಿ, ಲೇಖಕರಾಗಿ ಹಲವು ಮಹತ್ವದ ಕೃತಿಗಳನ್ನು ನೀಡಿದ್ದ ಅವರು, ಸಿನೆಮಾದಲ್ಲೂ ಅಭಿನಯಿಸಿದ್ದರು. ಕೆಲವು ದಿನಗಳ ಕಾಲ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಹೈಕೋರ್ಟ್‌ನಲ್ಲಿ ಮತ್ತು ಶಿವಮೊಗ್ಗ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲರಾಗಿಯೂ ಸೇವೆ ಸಲ್ಲಿಸಿದ್ದರು.…

Read More

ಅಮೆರಿಕ ಮೂಲದ ವೈದ್ಯರೊಬ್ಬರು ಬೇಯಿಸದ ಅಥವಾ ಅರ್ಧ ಬೇಯಿಸಿದ ಹಂದಿಮಾಂಸವನ್ನು ಸೇವಿಸುವುದರಿಂದ ಉಂಟಾಗುವ ಅಪಾಯವನ್ನು ತಿಳಿಸಿದ್ದಾರೆ. ಯುನಿವರ್ಸಿಟಿ ಆಫ್​ ಫ್ಲೋರಿಡಾ ಹೆಲ್ತ್​​ ಜಾಕ್ಸನ್​​ವಿಲ್ಲೆಯ ಡಾ.ಸ್ಯಾಮ್​​ಘಾಲಿ ಅವರು ವೈದ್ಯಕೀಯ ತುರ್ತುಸ್ಥಿತಿ ಹಾಗೂ ರೋಗಗಳ ಬಗೆ ಎಲ್ಲರಿಗೂ ತಿಳಿದಿರಲಿ ಎಂಬ ಕಾರಣಕ್ಕೆ ಹಲವು ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಡಾ.ಘಾಲಿ ಸೋಂಕಿನಿಂದ ಬಳಲುತ್ತಿರುವ ರೋಗಿಯೊಬ್ಬರ ಸಿಟಿ ಸ್ಕ್ಯಾನ್​ ಅನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ವ್ಯಕ್ತಿಯು ಪೋರ್ಕ್​​ ಟೇಪ್​ವರ್ಮ್​​ನ ಲಾರ್ವಾ ಸಿಸ್ಟ್​​ಗಳಿಂದ ನರಳುತ್ತಿದ್ದಾನೆ. ಇದರ ವೈಜ್ಞಾನಿಕ ಹೆಸರು ಟೇನಿಯಾ ಸೋಲಿಯಮ್​ ಎಂದು ವಿವರಿಸಿದ್ದಾರೆ. ಇದು ಬೇಯಿಸದ ಹಂದಿಮಾಂಸದಲ್ಲಿ ಕಂಡುಬರುವ ಸೋಂಕಾಗಿದೆ. ಇದನ್ನು ಸೇವಿಸುವ ಮೂಲಕ ಮನುಷ್ಯರು T. Solium ಸೋಂಕಿಗೆ ಒಳಗಾಗುತ್ತಾರೆ ಎಂದು ವಿವರಿಸಿದ್ದಾರೆ. ಇದನ್ನು ಸೇವಿಸಿದ 5 ರಿಂದ 12 ವಾರಗಳ ನಂತರ ಈ ಸೋಂಕು ಜೀರ್ಣಾಂಗವ್ಯೂಹದೊಳಗೆ ಪ್ರೌಢವಸ್ಥೆಯ ಟೇಪ್​​ವರ್ಮ್​​ಗಳಾಗಿ ವಿಕಸನಗೊಳ್ಳುತ್ತವೆ. ಇದನ್ನು ಕರುಳಿನ ಟೇನಿಯಾಸಿಸ್​ ಎಂದು ಕರೆಯಲಾಗುತ್ತದೆ. ಕೆಲವರಲ್ಲಿ ಇದು ಮೆದುಳಿಗೆ ಸಾಗಿ ಮೆದುಳಿನ ಅಂಗಾಂಶದಲ್ಲಿ ಟೇಪ್​ವರ್ಮ್​​​ ಅನ್ನು ರಚಿಸುತ್ತದೆ. ಇದರಿಂದ ತಲೆನೋವು ಸೇರಿ…

Read More

ಪಾವಗಡ: ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ 2024–25 ನೇ ಸಾಲಿನ ತಾಲ್ಲೂಕು ಮಟ್ಟದ ಪ್ರೌಢಶಾಲೆಗಳ ಬಾಲಕರ ಫುಟ್ಬಾಲ್ ಪಂದ್ಯಾವಳಿಯಲ್ಲಿ ತಾಲ್ಲೂಕಿನ ವೈ.ಎನ್. ಹೊಸಕೋಟೆ ಗ್ರಾಮದ ಹೆಸರಾಂತ ವಾಸವಿ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ತಾಲ್ಲೂಕು ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ. ಈ ಸಾಧನೆಗೆ  ವಾಸವಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಡಾ.ಪ್ರೇಮಯೋಗಿ, ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ಆಡಳಿತಾಧಿಕಾರಿಗಳಾದ ಶ್ರೀನಿವಾಸ್, ಪ್ರಾಂಶುಪಾಲ ಸತ್ಯನಾರಾಯಣ ರೆಡ್ಡಿ, ಶಾಲೆಯ ಮುಖ್ಯ ಶಿಕ್ಷಕರು ಹಾಗೂ ದೈಹಿಕ ಶಿಕ್ಷಕರಾದ ಶ್ರೀನಿವಾಸ್, ಸಹ ಶಿಕ್ಷಕರು, ಪೋಷಕರು ಸೇರಿ  ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ. ವರದಿ: ನಂದೀಶ್ ನಾಯ್ಕ, ಪಾವಗಡ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

Read More

ನವದೆಹಲಿ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ತನ್ನ ಸ್ಪರ್ಧೆ ಖಚಿತ ಎಂದು ಬಿಜೆಪಿ ಟಿಕೆಟ್ ಆಕಾಂಕ್ಷಿ ಸಿ.ಪಿ. ಯೋಗೇಶ್ವರ್ ಹೇಳಿದ್ದಾರೆ. ಅಭ್ಯರ್ಥಿ ಆಯ್ಕೆಯ ಕುರಿತಾಗಿ ಬಿಜೆಪಿ, ಜೆಡಿಎಸ್ ನಾಯಕರು ಸಮಾಲೋಚನೆ ನಡೆಸಿದ್ದಾರೆ. ತಮ್ಮನ್ನೇ ಕಣಕ್ಕೆ ಇಳಿಸಬೇಕೆಂದು ಸಿ.ಪಿ. ಯೋಗೇಶ್ವರ್ ಪಟ್ಟು ಹಿಡಿದಿದ್ದಾರೆ. ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮನವೊಲಿಸಬೇಕೆಂದು ಬಿಜೆಪಿ ನಾಯಕರಿಗೆ ಮನವಿ ಮಾಡಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ದೆಹಲಿ ನಿವಾಸದಲ್ಲಿ ರಾಜ್ಯ ಬಿಜೆಪಿ ನಾಯಕರು ಹಾಗೂ ಹೆಚ್.ಡಿ. ಕುಮಾರಸ್ವಾಮಿ ಸಭೆ ನಡೆಸಿದ್ದು, ಈ ಬಾರಿ ಯೋಗೇಶ್ವರ್ ಗೆ ಅವಕಾಶ ನೀಡಬೇಕೆಂದು ಮನವಿ ಮಾಡಲಾಗಿದೆ. ಇದಕ್ಕೆ ಕುಮಾರಸ್ವಾಮಿ ಒಪ್ಪಿಲ್ಲ. ಬಿಜೆಪಿ ವರಿಷ್ಠರೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ಹೆಜ್ಜೆ ಇಡುವ ಬಗ್ಗೆ ತಿಳಿಸಿದ್ದಾರೆ ಎನ್ನಲಾಗಿದೆ. ಟಿಕೆಟ್ ಸಿಗಲಿ, ಬಿಡಲಿ ಸ್ಪರ್ಧೆಯಂತೂ ನಿಶ್ಚಿತವೆಂದು ಸಿ.ಪಿ. ಯೋಗೇಶ್ವರ್ ಹೇಳಿದ್ದು, ನಾಯಕರ ಮುಂದೆ ಮೂರು ಆಯ್ಕೆಗಳನ್ನು ಇಟ್ಟಿದ್ದಾರೆ. ಬಿಜೆಪಿಯಿಂದ ಸ್ಪರ್ಧೆಗೆ ಟಿಕೆಟ್ ನೀಡಬೇಕು. ಒಂದು ವೇಳೆ ಜೆಡಿಎಸ್ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕು ಎಂದಾದಲ್ಲಿ ನಾನೇ…

Read More

ಚೆನ್ನೈ: ಯಾರಾದ್ರೂ ಅನುಚಿತವಾಗಿ ವರ್ತಿಸಿ ಅಡ್ಜೆಸ್ಟ್ ಮಾಡಿ ಅಂತ ಹೇಳಿದ್ರೆ ಚಪ್ಪಲಿಯಲ್ಲಿ ಹೊಡೆಯಿರಿ ಅಂತ ಮಹಿಳಾ ಕಲಾವಿದೆಯರಿಗೆ ತಮಿಳು ನಟ ವಿಶಾಲ್ ಕರೆ ನೀಡಿದ್ದಾರೆ. ಕೇರಳ ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯದ ಆರೋಪದ ಹಿನ್ನೆಲೆ ಪ್ರತಿಕ್ರಿಯಿಸಿದ ಅವರು, ಯಾರಾದರೂ ಅನುಚಿತವಾಗಿ ವರ್ತಿಸಲು ಪ್ರಯತ್ನಿಸಿದರೆ, ಯುವತಿ ಧೈರ್ಯದಿಂದ ರಿಯಾಕ್ಟ್ ಮಾಡಬೇಕು. ಹೊಂದಾಣಿಕೆಗೆ ಅಥವಾ ಅವರ ಬೇಡಿಕೆಗಳಿಗೆ ಸಮ್ಮತಿಸಲು ಒತ್ತಾಯಿಸಿದರೆ ಚಪ್ಪಲಿಯಿಂದ ಹೊಡೆಯುವ ಧೈರ್ಯ ಹೊಂದಿರಬೇಕು ಎಂದು ಅವರು ಹೇಳಿದ್ದಾರೆ. ಮಹಿಳೆಯನ್ನು ಬಳಸಿಕೊಳ್ಳಲು ಬಯಸುವವರಿಗೆ ಶಿಕ್ಷೆಯಾಗಬೇಕು. ತಮಿಳು ಚಿತ್ರರಂಗದಲ್ಲಿ ‘ಹೊಂದಾಣಿಕೆ’ಯಂತಹ ಸಮಸ್ಯೆಗಳು ಇಲ್ಲ ಎಂದು ಹೇಳಲಾಗದು. ಇಂತಹ ದೂರುಗಳು ಬಹಳ ಹಿಂದಿನಿಂದಲೂ ಇವೆ. ಇಲ್ಲಿಯೂ ಇದೇ ರೀತಿಯ ಸಮಸ್ಯೆಗಳಿರಬಹುದು ಎಂದು ಅವರು ಹೇಳಿದ್ದಾರೆ. ಕೆಲ ಕಂಪನಿಗಳು ಕಚೇರಿಯನ್ನು ಸ್ಥಾಪಿಸಿ ಫೋಟೋಶೂಟ್ ಗೆ ಮಹಿಳೆಯರನ್ನು ಬಳಸಿಕೊಳ್ಳುತ್ತವೆ. ನಾನು ಆ ವಿಚಾರವನ್ನು ಅಲ್ಲಗಳೆಯುವುದಿಲ್ಲ ಎಂದು ತಿಳಿಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್…

Read More

ನವದೆಹಲಿ: ಯುದ್ಧ, ಕೋಮುಗಲಭೆಗಳಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಭಾರತೀಯರು ರಸ್ತೆ ಅಪಘಾತಗಳಲ್ಲೇ ಸಾವಿಗೀಡಾಗಿದ್ದಾರೆ ಅಂತ ಕೇಂದ್ರ ಸಚಿವ ನಿತಿನ್ ಗಡ್ಕರಿ ಅಭಿಪ್ರಾಯಪಟ್ಟಿದ್ದಾರೆ. ಅವರು, FICCI ರೋಡ್ ಸೇಫ್ಟಿ ಅವಾರ್ಡ್ಸ್ ಮತ್ತು ಕಾನ್ಕ್ಲೇವ್ 2024 ರ ಆರನೇ ಆವೃತ್ತಿಯಲ್ಲಿ ಮಾತನಾಡಿ, ಪ್ರತಿ ವರ್ಷ ಭಾರತದಲ್ಲಿ ರಸ್ತೆ ಅಪಘಾತಗಳಲ್ಲಿ ಸುಮಾರು 1.5 ಲಕ್ಷ ಸಾವುಗಳು ವರದಿಯಾಗಿದೆ ಎಂದರು. ಬಲಿಪಶುಗಳಲ್ಲಿ ಸುಮಾರು 65% ಯುವಕರು ಮತ್ತು ಯುವತಿಯರು ಇದ್ದಾರೆ. ಇದರಿಂದ ಜಿಡಿಪಿಯ ಶೇ.3ರಷ್ಟು ನಷ್ಟವಾಗಿದೆ ಎಂದು ತಿಳಿಸಿದ್ದಾರೆ. ನೀವು ಲೆಕ್ಕ ಹಾಕಿದರೆ, ಚೀನಾ ಅಥವಾ ಪಾಕಿಸ್ತಾನ ಯುದ್ಧಗಳು, ನಕ್ಸಲರ ದಾಳಿ, ಕೋಮು ಗಲಭೆಗಳು, ಕಾನೂನು ಮತ್ತು ಸುವ್ಯವಸ್ಥೆಯಲ್ಲಿನ ದುರ್ಘಟನೆಗಳಿಗಿಂತ ರಸ್ತೆ ಅಪಘಾತಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಪ್ರತಿ ರಸ್ತೆ ಅಪಘಾತಕ್ಕೂ ಚಾಲಕರನ್ನೇ ಹರಕೆಯ ಕುರಿ ಮಾಡುತ್ತಿದ್ದೇವೆ. ಆದರೆ ರಸ್ತೆ ಎಂಜಿನಿಯರುಗಳ ತಪ್ಪು ಇಲ್ಲಿ ಎದ್ದು ಕಾಣುತ್ತಿದೆ ಎಂದು ಆರೋಪಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ…

Read More

ಪಾವಗಡ: ಶೃಂಗೇರಿ ಶ್ರೀ ಸರಸ್ವತಿ ವಿದ್ಯಾಪೀಠ ಪಾವಗಡದಲ್ಲಿ ವಿಜ್ಞಾನ ವಿಷಯ ಶಿಕ್ಷಕರ ಕಾರ್ಯಾಗಾರವನ್ನು ನಡೆಸಲಾಯಿತು. ಪ್ರೌಢಶಾಲಾ ವಿಜ್ಞಾನ ವಿಷಯ ಶಿಕ್ಷಕರ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಡಯಟ್ ಉಪನ್ಯಾಸಕರು ಹಾಗೂ ನೋಡಲ್ ಅಧಿಕಾರಿಗಳಾದ ಚಿತ್ತಯ್ಯ, ವಿಜ್ಞಾನ ಶಿಕ್ಷಕರು ಹೆಚ್ಚು ಕ್ರಿಯಾಶೀಲವಾಗಿ ಕರ್ತವ್ಯ ನಿರ್ವಹಿಸಿದಲ್ಲಿ ಶಾಲೆಗಳ ಫಲಿತಾಂಶಗಳು ಉತ್ತಮಗೊಳ್ಳುತ್ತವೆ. ಮೂಲ ವಿಜ್ಞಾನದ ಕಡೆಗೆ ವಿದ್ಯಾರ್ಥಿಗಳನ್ನು ಬರುವಂತೆ ಮಾಡುವ ಕೆಲಸವನ್ನು ವಿಜ್ಞಾನ ಶಿಕ್ಷಕರು ಮಾಡಬೇಕು ಎಂದು ತಿಳಿಸಿದರು. ಎಸ್ ಎಸ್ ಎಲ್ ಸಿ ಫಲಿತಾಂಶ ಉತ್ತಮಗೊಳಿಸುವ ನಿಟ್ಟಿನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಿರಂತರವಾಗಿ ವಿದ್ಯಾರ್ಥಿಗಳೊಂದಿಗೆ ಕಲಿಕೆಯಲ್ಲಿ ತೊಡಗಿಸಿಕೊಂಡು ಉತ್ತಮ ಫಲಿತಾಂಶ ಸಾಧಿಸಬೇಕು ಎಂದು ಅವರು ತಿಳಿಸಿದರು. ವಿದ್ಯಾಸಂಸ್ಥೆ ಕಾರ್ಯದರ್ಶಿ ಶ್ರೀರಾಮ್ ರವರು ಮಾತನಾಡಿ, ನಮ್ಮ ಶಾಲೆಯು ಇಲಾಖೆಯ ಯಾವುದೇ ಕಾರ್ಯಗಳು ನಡೆಸಲು ಉತ್ಸಾಹ ತೋರಿಸುತ್ತದೆ. ಕಾರ್ಯಾಗಾರದ ಪ್ರಯೋಜನವನ್ನು ಎಲ್ಲಾ ಶಿಕ್ಷಕರು ಪಡೆಯಬೇಕೆಂದು ತಿಳಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ನಿವೃತ್ತ ಪ್ರಾಧ್ಯಾಪಕರಾದ ಸುಬ್ಬಯ್ಯರವರು ಆಮ್ಲಗಳು ಪ್ರತ್ಯಾಮ್ಲಗಳು ಮತ್ತು ಲವಣಗಳು ರಾಸಾಯನಿಕ ಕ್ರಿಯೆಗಳು ಮತ್ತು ಸಮೀಕರಣಗಳು ಎಂಬ ವಿಷಯದ…

Read More

ಲಖನೌ: ಮುಸ್ಲಿಮರು ಬಿಜೆಪಿಯನ್ನು ನಿರ್ಬಂಧಿಸುವ ಅವರ ಫ್ಯಾಶನ್ ನ್ನು ಬದಲಿಸಬೇಕು ಅಂತ ಬಿಜೆಪಿಯ ಹಿರಿಯ ನಾಯಕ ಮುಖ್ತಾರ್ ಅಬ್ಬಾಸ್ ನಖ್ವಿ ಗುರುವಾರ ಹೇಳಿಕೆ ನೀಡಿದ್ದಾರೆ. ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಸದಸ್ಯತ್ವ ಅಭಿಯಾನದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಮುಸ್ಲಿಂರಲ್ಲಿ ಅಪನಂಬಿಕೆಯನ್ನು ವಿಶ್ವಾಸವನ್ನಾಗಿ ಪರಿವರ್ತಿಸುವುದು ಇಂದಿನ ಅಗತ್ಯವಾಗಿದೆ. ಬಿಜೆಪಿಯನ್ನು ಸೋಲಿಸುವ ಅಲ್ಪಸಂಖ್ಯಾತರು ಮತ್ತು ಮುಸ್ಲಿಮರ ತಮ್ಮ ದಶಕಗಳ ಪ್ಯಾಷನ್ ಅನ್ನು ಬದಲಿಸಲು ಶ್ರಮಿಸಬೇಕು. ಅವರು ಬಿಜೆಪಿ ಬೆಂಬಲಿಸುವಂತೆ ಮಾಡಬೇಕು. ಅಭಿವೃದ್ಧಿಯ ವಿಷಯದಲ್ಲಿ ಬಿಜೆಪಿ ಯಾವುದೇ ವರ್ಗದ ವಿರುದ್ಧ ತಾರತಮ್ಯ ಮಾಡದಿದ್ದಾಗ ಬಿಜೆಪಿಗೆ ಮತ ಹಾಕಲು ಯಾವುದೇ ಹಿಂಜರಿಕೆ ಬೇಡ ಎಂದರು. ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸೆಕ್ಯುಲರ್ ಸಿಂಡಿಕೇಟ್ ಎಂದು ಕರೆಯಲ್ಪಡುವ ಪ್ಯೂಡಲ್ ಸುಲ್ತಾನರು ದೀರ್ಘಕಾಲದವರೆಗೆ ಮುಸ್ಲಿಮರಲ್ಲಿ ಬಿಜೆಪಿ ಬಗ್ಗೆ ಭಯದ ವಾತಾವರಣವನ್ನ ಹೆಚ್ಚಿಸಿದ್ದಾರೆ ಅಂತ ಹೇಳಿದರು. ಬಿಜೆಪಿ ಮತ್ತು ಪ್ರಧಾನಿ ಮೋದಿಯವರ ವಿರುದ್ಧ ‘ಸಂವಿಧಾನ ವಿರೋಧಿ’ ಎಂಬ ಆರೋಪ ಹೊರಿಸಲಾಗಿದೆ. ಇದು ‘ಸತ್ಯದ ಪರ್ವತವನ್ನು ಸುಳ್ಳಿನ ಪೊದೆಯಡಿಯಲ್ಲಿ ಮರೆಮಾಚುವ ಪಟ್ಟಭದ್ರರ ಪ್ರಯತ್ನವೇ…

Read More