Subscribe to Updates
Get the latest creative news from FooBar about art, design and business.
- ತುಮಕೂರು: ದೇವರಾಯಪಟ್ಟಣದಲ್ಲಿ ಚಿರತೆ ಹಾವಳಿ, ಇಸ್ರೋ ಆವರಣದಲ್ಲಿ ಕುರಿ ಬಲಿ – ಬೋನು ಅಳವಡಿಕೆ
- ಗೃಹಲಕ್ಷ್ಮಿ, ಯುವನಿಧಿ: 323 ಕೋಟಿ ರೂ. ಬಿಡುಗಡೆ
- ಜಿಟಿಟಿಸಿ: ವಿವಿಧ ಕೋರ್ಸ್ ಗಳ ಪ್ರವೇಶಾತಿಗೆ ಅರ್ಜಿ
- ರಾಜಕಾರಣದಷ್ಟೇ ಶಿಕ್ಷಣ ವ್ಯವಸ್ಥೆ ಕಲುಷಿತ: ಡಾ.ವೈ.ಎ.ನಾರಾಯಣಸ್ವಾಮಿ ಕಳವಳ
- ತಮಿಳುನಾಡಿಗೆ ನೀರು ಹರಿಸುವ ಆದೇಶಕ್ಕೆ ಸಂಘಟನೆಗಳ ಆಕ್ರೋಶ: ಆದೇಶ ಧಿಕ್ಕರಿಸಿ ರಾಜ್ಯದ ಪರ ನಿಲ್ಲಲು ಒತ್ತಾಯ
- ಸರಗೂರು: ಕೊಟ್ಟಿಗೆಗೆ ನುಗ್ಗಿ ಕಾಡು ಪ್ರಾಣಿ ದಾಳಿ: 6 ಕುರಿ ಬಲಿ, 12 ಕುರಿಗಳಿಗೆ ಗಂಭೀರ ಗಾಯ
- ಸರಗೂರು: ಮೂರನೇ ಆಷಾಢ ಶುಕ್ರವಾರ -– ವಾಹನ ಚಾಲಕರ ಸಂಘದಿಂದ ವಿಶೇಷ ಪೂಜೆ ಹಾಗೂ ಖಾಕಿ ಸಮವಸ್ತ್ರ ವಿತರಣೆ
- ಔರಾದ್: ಜೈ ಕಿಸಾನ್ ಶಾಲೆ ಶಿಕ್ಷಕ, ಬಿಎಲ್ ಒ ಮಲ್ಲಿಕಾರ್ಜುನ ಪಿಟ್ರೆ ನಿಧನ
Author: admin
ಗದಗ: ಅಪರಿಚಿತ ವಾಹನ ಡಿಕ್ಕಿಯಾಗಿ ಅರ್ಚಕರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ಗಜೇಂದ್ರಗಢ ತಾಲೂಕಿನ ನರೇಗಲ್ ಪಟ್ಟಣದಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ನರೇಗಲ್ ನಿವಾಸಿ ಮಲ್ಲಯ್ಯ ಬಕ್ಕಯ್ಯನವರ (65) ಮೃತಪಟ್ಟಿದ್ದಾರೆ. ಬೆಳಿಗ್ಗೆ ಚಹಾ ಕುಡಿಯಲೆಂದು ಮನೆಯಿಂದ ಹೊರ ಹೋಗಿದ್ದ ಮಲ್ಲಯ್ಯ ಅವರಿಗೆ ಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ನರೇಗಲ್ ಠಾಣೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ಗ್ಯಾಂಗ್ಟಾಕ್: 61 ವರ್ಷ ವಯಸ್ಸಿನ ವಿಕಲಚೇತನ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ, ವಿಡಿಯೋ ವೈರಲ್ ಮಾಡಿದ ನಾಲ್ವರು ಆರೋಪಿಗಳನ್ನು ಬಂಧಿಸಿರುವುದಾಗಿ ಸಿಕ್ಕಿಂ ಪೊಲೀಸರು ತಿಳಿಸಿದ್ದಾರೆ. ಆಗಸ್ಟ್ 26ರಂದು ಜೋರೆಥಾಂಗ್ ಟೌನ್ ಬಸ್ ಪಾರ್ಕಿಂಗ್ ಕಾಂಪ್ಲೆಕ್ಸ್‌ನಲ್ಲಿ ಈ ಘಟನೆ ನಡೆದಿದ್ದು, ಆರೋಪಿಗಳು ಕೃತ್ಯವನ್ನು ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದರು. ನಾಲ್ವರು ಆರೋಪಿಗಳ ಪೈಕಿ ಮೂವರು ಅಪ್ರಾಪ್ತ ವಯಸ್ಕರು ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಯ ಕುಟುಂಬಸ್ಥರು ನೀಡಿದ ದೂರು ಆಧರಿಸಿ ಆರೋಪಿಗಳನ್ನ ಬಂಧಿಸಲಾಗಿತ್ತು. ಆರೋಪಿಗಳನ್ನ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ಸಿರುಗುಪ್ಪ: ಈ ಶಾಲೆಯ ವಿದ್ಯಾರ್ಥಿಗಳಿಗೆ ದೇವಸ್ಥಾನದ ಆವರಣವೇ ಶಾಲೆ. ಜೋರಾಗಿ ಮಳೆ ಬಂದರೆ, ಕುಳಿತುಕೊಳ್ಳಲು ನಿಂತುಕೊಳ್ಳಲೂ ಆಗದೇ ಮನೆಯ ದಾರಿ ಹಿಡಿಯಬೇಕಿರುವ ಅನಿವಾರ್ಯತೆ ಈ ಶಾಲೆಯ ಮಕ್ಕಳದ್ದಾಗಿದೆ. ಸಿರುಗುಪ್ಪ ತಾಲ್ಲೂಕಿನ ಬೀರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೈರಗಾಮದಿನ್ನೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ ಇದಾಗಿದೆ. ಇಲ್ಲಿ ಒಟ್ಟು 130 ವಿದ್ಯಾರ್ಥಿಗಳು 1ರಿಂದ 5ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಐದು ತರಗತಿಗಳ ವಿದ್ಯಾರ್ಥಿಗಳಿಗಾಗಿ ಈ ಹಿಂದೆ ಕಟ್ಟಲಾಗಿರುವ ಮೂರು ಕೊಠಡಿಗಳ ಕಟ್ಟಡಗಳು ಸೋರುತ್ತಿದ್ದು, ಪಾಠ ಪ್ರವಚನ ಕೇಳಲು ಸಾಧ್ಯವಿಲ್ಲದ ಸ್ಥಿತಿಯಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಯೋಜನೆಯಡಿ 5 ಹೊಸ ಶಾಲಾ ಕೊಠಡಿ ನಿರ್ಮಿಸಲು ಅನುದಾನ ಬಿಡುಗಡೆಯಾಗಿದೆ. ಆದರೆ ಸದ್ಯ ಇರುವ ಶಾಲೆಯ ಹಿಂದಿನ ಬಯಲು ಜಾಗ ತಮ್ಮದೆಂದು ಗ್ರಾಮಸ್ಥರೊಬ್ಬರು ನ್ಯಾಯಾಲಯದ ಮೊರೆ ಹೋಗಿರುವುದರಿಂದ ಹೊಸ ಕೊಠಡಿ ನಿರ್ಮಿಸಲು ಸಾಧ್ಯವಾಗಿಲ್ಲವೆಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಸದ್ಯ ಇರುವ ಮೂರು ಕೊಠಡಿಗಳು ಶಿಥಿಲಾವಸ್ಥೆ ತಲುಪಿದ್ದು, ಕೆ.ಕೆ.ಆರ್.ಡಿ.ಬಿ. ಯೋಜನೆಯಡಿ ಈ 5…
ನವದೆಹಲಿ: ದೇಶದ ಆಸ್ಪತ್ರೆಗಳಲ್ಲಿ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ ಮಹಿಳಾ ವೈದ್ಯರಲ್ಲಿ ಮೂರನೇ ಒಂದು ಭಾಗದಷ್ಟು ಮಂದಿ ಅಸುರಕ್ಷಿತವಾಗಿದ್ದಾರೆ ಎಂದು ಇಂಡಿಯನ್ ಮೆಡಿಕಲ್ ಅಸೋಷಿಯೇಷನ್ ವರದಿ ಮಾಡಿದೆ. ಶೇ.45ರಷ್ಟು ಮಂದಿ ವೈದ್ಯರು ರಾತ್ರಿ ಪಾಳಿಯಲ್ಲಿ ಡ್ಯೂಟಿ ರೂಮ್ ಲಭ್ಯವಿಲ್ಲ ಹೀಗಾಗಿ ನಾವು ಅತ್ಯಂತ ಅಸುರಕ್ಷಿತರಾಗಿದ್ದೇವೆ ಎಂದು ತಿಳಿಸಿದ್ದಾರೆ ಎಂದು ಐಎಂಎ ಹೇಳಿದೆ. ಕೋಲ್ಕತ್ತಾದ ಸರ್ಕಾರಿ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮಹಿಳಾ ವೈದ್ಯೆ ಅತ್ಯಾಚಾರ ಮತ್ತು ಕೊಲೆ ನಡೆದ ಘಟನೆಯ ನಂತರ ಐಎಂಎ ನಡೆಸಿದ ಸಮೀಕ್ಷೆ ವೇಳೆ ಮಹಿಳಾ ವೈದ್ಯರಲ್ಲಿ ಮೂರನೇ ಒಂದು ಭಾಗದಷ್ಟು ಮಂದಿ ಅಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ. 20–30 ವರ್ಷ ವಯಸ್ಸಿನ ವೈದ್ಯರು ಆಸ್ಪತ್ರೆಯಲ್ಲಿ ಸುರಕ್ಷತೆ ಎಂಬುವುದೇ ಇಲ್ಲ ಎಂದು ಭಾವಿಸುತ್ತಿದ್ದಾರೆ. ಈ ಗುಂಪು ಹೆಚ್ಚಾಗಿ ಇಂಟರ್ನಿಗಳು ಮತ್ತು ಸ್ನಾತಕೋತ್ತರ ಪದವೀಧರರನ್ನು ಒಳಗೊಂಡಿದೆ. ರಾತ್ರಿ ಪಾಳಿಯಲ್ಲಿ 45 ಪ್ರತಿಶತದಷ್ಟು ಮಂದಿಗೆ ಕರ್ತವ್ಯ ಕೊಠಡಿ ಲಭ್ಯವಿರಲಿಲ್ಲ. ಡ್ಯೂಟಿ ಕೋಣೆಗೆ ಪ್ರವೇಶ ಹೊಂದಿರುವವರು ತಾವು ಸುರಕ್ಷಿತವಾಗಿರುವುದಾಗಿ ಹೇಳಿಕೊಂಡಿದ್ದಾರೆ.…
ಬೆಂಗಳೂರು: ಗೋಬಿ ಮಂಚೂರಿ ಮತ್ತು ಕಬಾಬ್, ಕಾಟನ್ ಕ್ಯಾಂಡಿಯಲ್ಲಿ ಕೃತಕ ಬಣ್ಣ ಬಳಕೆ ನಿಷೇಧದ ಬಳಿಕ ಇದೀಗ ಕೇಕ್ ಗಳಲ್ಲಿ ಕೃತಕ ಬಣ್ಣ ಬಳಕೆ ನಿಷೇಧಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ತಿಳಿದು ಬಂದಿದೆ. ಕೇಕ್ ನಲ್ಲೂ ಕೃತಕ ಬಣ್ಣಗಳನ್ನು ಬಳಸಲಾಗುತ್ತಿದ್ದು, ಹೀಗಾಗಿ ಕೃತಕ ಬಣ್ಣಗಳನ್ನು ನಿಷೇಧಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ ಎಂದು ಹೇಳಲಾಗಿದೆ. ಕೇಕ್ ನಲ್ಲಿ ಬಳಸುವ ಬಣ್ಣದಲ್ಲಿ ಅಪಾಯಕಾರಿ ಅಂಶಗಳು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಶೀಘ್ರವೇ ಸರ್ಕಾರ ಕೇಕ್ ಗಳಲ್ಲಿ ಬಣ್ಣ ಬಳಕೆ ನಿಷೇಧಿಸಿ ಆದೇಶ ಹೊರಡಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ತುಮಕೂರು: ಗುತ್ತಿಗೆದಾರರಿಗೆ ಅಧಿಕಾರಿಗಳು ಹಣ ಪಾವತಿಸಲು ಲಂಚಕ್ಕಾಗಿ ಬೇಡಿಕೆ ಇಟ್ಟು ಸತಾಯಿಸಿದರೆ ಮುಂದಿನ ದಿನಗಳಲ್ಲಿ ಲೋಕಾಯುಕ್ತರ ಮೊರೆ ಹೋಗಲಾಗುವುದು ಎಂದು ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಬಲರಾಮಯ್ಯ ಎಚ್ಚರಿಕೆ ನೀಡಿದ್ದಾರೆ. ತುಮಕೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ ಸರ್ಕಾರದಲ್ಲಿ ಇದುವರೆಗೂ 31,000 ಕೋಟಿ ರೂ ಗುತ್ತಿಗೆದಾರರಿಗೆ ನೀಡಬೇಕಾಗಿದ್ದು ಅದು ಬಾಕಿ ಉಳಿದಿದೆ. ಬಿಲ್ ಪಾವತಿ ಮಾಡಲು ಲಂಚಕ್ಕಾಗಿ ಬೇಡಿಕೆ ಇಟ್ಟು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಇತ್ತೀಚಿಗೆ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಅಧಿಕಾರಿಗಳ ವರ್ತನೆಯಿಂದ ಬೇಸತ್ತು ಗುತ್ತಿಗೆದಾರರೊಬ್ಬರು ಲೋಕಾಯುಕ್ತ ಇಲಾಖೆಗೆ ದೂರು ನೀಡಿದ್ದರು ಈ ಸಂಬಂಧ ಮೂವರು ಮೂವರು ಇಂಜಿನಿಯರ್ಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದರೂ ಎಂದು ಹೇಳಿದರು. ಎಲ್ ಒಸಿ ಕೊಡುವಾಗ ತಾರತಮ್ಯ ಮಾಡುತ್ತಿದ್ದು 5 ಕೋಟಿ ರೂ ಬಿಡುಗಡೆಯಾದರೆ 5 ಕೋಟಿ ರೂ ಸೀನಿಯಾ ರೀತಿ ಮಾಡುತ್ತಾರೆ ಉಳಿದಿರುವ ಹಣ ಅಧಿಕಾರಿಗಳು ತಮ್ಮ ಮನಸ್ಸಿಗೆ ಬಂದಂತೆ ವ್ಯವಹಾರ ಮಾಡುತ್ತಾರೆ ಎಂದು ದೂರಿದರು. ಕೇಂದ್ರ ಸರ್ಕಾರದ ರೀತಿಯಲ್ಲಿ 1:1 ಅನುಪಾತದಲ್ಲಿ ರಾಜ್ಯ…
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..? ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490 Provided by ಜ್ಯೋತಿಷ್ಯ ಶಾಸ್ತ್ರಗಳ ಪ್ರಕಾರ ರಾಶಿ ಚಕ್ರಗಳಲ್ಲಿ ಕಾಲಕಾಲಕ್ಕೆ ಗ್ರಹಗಳು ಬದಲಾಯಿಸುತ್ತಿರುತ್ತವೇ ಸೆಪ್ಟಂಬರ್ ನಲ್ಲಿ. ಬುಧ ಗ್ರಹವು ತನ್ನದೇ ಆದ ಕನ್ಯಾ ರಾಶಿಯಲ್ಲಿ ಪ್ರವೇಶಿಸಲಿದೆ. ಒಂದು ವರ್ಷದ ನಂತರ ಬುಧ ಗ್ರಹವು ಕನ್ಯಾ ರಾಶಿಯಲ್ಲಿ ಪ್ರವೇಶಿಸುತ್ತಿದೆ. ಅಂತಹ ಸಮಯದಲ್ಲಿ ಕೆಲವು ರಾಶಿ ಚಕ್ರಗಳು ಚಿನ್ನೆಗಳ ಅದೃಷ್ಟ…
ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಆಹಾರ ಇಲಾಖೆಯು ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, ಖಾತೆಗ ಹಣ ಬಾರದೇ ಇರುವವರು ತಪ್ಪದೇ ಈ ಕೆಲಸ ಮಾಡುವಂತೆ ಸೂಚನೆ ನೀಡಲಾಗಿದೆ. ಸರ್ಕಾರದ ಗ್ಯಾರಂಟಿ ಯೋಜನೆಯಡಿ ಐದು ಕೆಜಿ ಅಕ್ಕಿ ಬದಲಾಗಿ ಪಡಿತರ ಚೀಟಿದಾರರಿಗೆ ನೇರ ನಗದು ವರ್ಗಾವಣೆ ಮಾಡುತ್ತಿದ್ದು , ಯಾವುದೇ ರೀತಿಯ ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಪರಿಹರಿಸಿಕೊಳ್ಳಬಹುದು. ಇನ್ನು ಕುಟುಂಬದ ಮುಖ್ಯಸ್ಥೆಯ ಆಧಾರ್ ಕಾರ್ಡ್ ಅಪ್ಡೇಟ್ ಮಾಡಬೇಕು.ಪಡಿತರ ಚೀಟಿಯ ಈಕೆ ವೈಸಿ ಕಡ್ಡಾಯ ಮಾಡಬೇಕು.ಕುಟುಂಬದ ಮುಖ್ಯಸ್ಥೆಯ ಬ್ಯಾಂಕ್ ಖಾತೆಯ ಈ ಕೆವೈಸಿ ಮಾಡಬೇಕು.ಪಡಿತರ ಚೀಟಿ ಅಪ್ಡೇಟ್ ಅಪ್ ಡೇಟ್ ಮಾಡಬೇಕು. ಈ ಮೇಲಿನ ಎಲ್ಲ ಸಮಸ್ಯೆಗಳನ್ನು ನೀವು ಪರಿಹರಿಸಿಕೊಂಡರೆ ನಿಮಗೆ ಅನ್ನ ಭಾಗ್ಯ ಯೋಜನೆಯ ಅಕ್ಕಿ ಹಣ ಖಾತೆಗೆ ಜಮಾ ಆಗಲಿದೆ. ಕರ್ನಾಟಕ ಸರ್ಕಾರದ ವೆಬ್‌ಸೈಟ್ https://www.karnataka.gov.in/ ಗೆ ಭೇಟಿ ನೀಡಿ ಅನ್ನಭಾಗ್ಯ ಯೋಜನೆಯಡಿ ನಿಮ್ಮ ಸ್ಟೇಟಸ್ ಹೇಗಿದೆ ಎಂದು ಸ್ಕ್ರೀನ್ ನಲ್ಲಿ ತೋರಿಸಲಾಗುತ್ತದೆ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ,…
ಹರ್ಷಿಕಾ ಭುವನ್ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಕಳೆದ ವರ್ಷ 2023, ಆಗಸ್ಟ್ 24ರಂದು ಹರ್ಷಿಕಾ ಪೂಣಚ್ಚ ಬಹುಕಾಲದ ಗೆಳೆಯ ನಟ ಭುವನ್ ಪೊನ್ನಣ್ಣ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೀಗ ವರ್ಷದೊಳಗೆ ಮಗು ಆಗಮಿಸುವ ಸುದ್ದಿ ಕೊಟ್ಟಿದ್ದಾರೆ. ಹರ್ಷಿಕಾ ಪೂಣಚ್ಚ ಈಗ ಐದು ತಿಂಗಳ ಗರ್ಭಿಣಿ. ಮುಂಬರುವ ಅಕ್ಟೋಬರ್ ತಿಂಗಳಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿ ಭುವನ್ ದಂಪತಿ ಇದ್ದಾರೆ. ಇದೇ ಖುಷಿಯಲ್ಲಿ ಈ ಜೋಡಿ ಫೋಟೊಶೂಟ್ ಮಾಡಿಸಿದೆ. ಕೊಡವ ಸಂಪ್ರದಾಯದ ಉಡುಗೆಯಲ್ಲೇ ವಿಭಿನ್ನವಾಗಿ ಫೋಟೋಶೂಟ್ ಮಾಡಿಸಿರುವ ದಂಪತಿ ಮಗುವಿನ ಆಗಮನದ ಸುದ್ದಿ ಘೋಷಿಸಿದ್ದಾರೆ ಇದೇ ಅಕ್ಟೋಬರ್‌ನಲ್ಲಿ ಮಗು ಬರಲಿರುವ ಸಂತಸದಲ್ಲಿದ್ದಾರೆ ಹರ್ಷಿಕಾ ದಂಪತಿ.’ನಮ್ಮ ಪೂರ್ವಜ್ಜರ ಮನೆಯಲ್ಲಿ ಫೋಟೋ ಮತ್ತು ವಿಡಿಯೋ ಶೂಟ್ ಮಾಡಬೇಕು ಅನ್ನೋದು ಭುವನ್ ಐಡಿಯಾ ಆಗಿತ್ತು ಎಂದಿದ್ದಾರೆ ಹರ್ಷಿಕಾ. ‘ನಾನು ಪ್ರೆಗ್ನೆಂಟ್ ಎಂದು ತಿಳಿದಾಗ ಭುವನ್ ಹೊರಗಡೆ ಶೂಟಿಂಗ್ ಮಾಡುತ್ತಿದ್ದರು. ಆಗ ನಾನು ವಿಡಿಯೋ ಕಾಲ್ ಮಾಡಿ ಅಳುತ್ತಿದ್ದೆ. ಅದು ನನ್ನ ಖುಷಿಯ ಕಣ್ಣೀರು…
ಭಾರತದ ಮಾಟಗಾರರ ರಾಜಧಾನಿ ಎಂದೇ ಅಪಖ್ಯಾತಿ ಪಡೆದಿರುವ ಈ ಗ್ರಾಮದ ಬಗ್ಗೆ ನೀವು ಕೇಳಿರಲಾರಿರಿ. ಇಂಥ ಊರೊಂದು ಅಸ್ಸಾಂನಲ್ಲಿದೆ. ಅದರ ಹೆಸರು ಮಯೋಂಗ್. ಇಲ್ಲಿನ ಇತಿಹಾಸ ಗೊತ್ತಿರುವವರು, ಆಸುಪಾಸಿನವರು ಇಲ್ಲಿಗೆ ಕಾಲಿಡಲು ಅಂಜಿಕೊಳ್ಳುತ್ತಾರೆ. ಭಾರತದ ಬ್ಲ್ಯಾಕ್ ಮ್ಯಾಜಿಕ್ ಕ್ಯಾಪಿಟಲ್ ಎಂದು ಕರೆಯಲ್ಪಡುವ ಊರು ಅಸ್ಸಾಂನ ಮಯೋಂಗ್ ಗ್ರಾಮ. ಇಲ್ಲಿ ಮನೆ ಮನೆಗಳಲ್ಲೂ ಒಬ್ಬ ಮಾಂತ್ರಿಕ, ಮಾಟಗಾರ ಇದ್ದಾನೆ ಎನ್ನಲಾಗುತ್ತದೆ. ಮಾಟಗಾರ್ತಿಯರೂ ಇದ್ದಾರೆ. ಇಲ್ಲಿನ ಒಂಟಿ ವಿಧವೆಯರನ್ನು ಸುತ್ತಮುತ್ತಲಿನ ಊರಿನ ಜನ ಗುಮಾನಿಯಿಂದಲೇ ನೋಡುತ್ತಾರೆ. ಇಲ್ಲಿನ ಹಳೆಯ ಜನಪದ ಕತೆಗಳು ಕೂಡ ದೆವ್ವ ಭೂತಗಳಿಂದ ಕೂಡಿವೆ. ಜನರು ಕಣ್ಮರೆಯಾಗುವುದು, ಬೇರೆ ರೂಪದಲ್ಲಿ ಬರುವುದು, ಪುರುಷರಿಗೆ ಮೋಹಿನಿ ಕಾಟ, ಸ್ತ್ರೀಯರಿಗೆ ಗಂಧರ್ವ ಪಿಶಾಚಿಯ ಕಾಟ ಹೀಗೆ. ಶತಮಾನಗಳಿಂದ ಇಲ್ಲಿ ಮಾಟಮಂತ್ರ ಮತ್ತು ಅಲೌಕಿಕ ಚಟುವಟಿಕೆಗಳ ಅಭ್ಯಾಸಗಳು ಇವೆ. ಶಕ್ತಿ ದೇವತೆಗಳನ್ನು ಪೂಜಿಸುವುದು, ಬಲಿ ಕೊಡುವುದು ಇಲ್ಲಿ ಮಾಮೂಲು. ಇಲ್ಲಿ ನಡೆಯುವ ಮಾಟಮಂತ್ರಕ್ಕಾಗಿ ನರಬಲಿಯನ್ನೂ ಕೊಡಲಾಗುತ್ತದೆ ಎಂದು ಹೇಳಲಾಗುತ್ತದೆ. ಸುತ್ತಮುತ್ತಲಿನ ಗ್ರಾಮಗಳಲ್ಲಿ ಯಾರೇ ಕಣ್ಮರೆಯಾದರೂ, ಅಥವಾ…