Subscribe to Updates
Get the latest creative news from FooBar about art, design and business.
- ತುಮಕೂರು: ದೇವರಾಯಪಟ್ಟಣದಲ್ಲಿ ಚಿರತೆ ಹಾವಳಿ, ಇಸ್ರೋ ಆವರಣದಲ್ಲಿ ಕುರಿ ಬಲಿ – ಬೋನು ಅಳವಡಿಕೆ
- ಗೃಹಲಕ್ಷ್ಮಿ, ಯುವನಿಧಿ: 323 ಕೋಟಿ ರೂ. ಬಿಡುಗಡೆ
- ಜಿಟಿಟಿಸಿ: ವಿವಿಧ ಕೋರ್ಸ್ ಗಳ ಪ್ರವೇಶಾತಿಗೆ ಅರ್ಜಿ
- ರಾಜಕಾರಣದಷ್ಟೇ ಶಿಕ್ಷಣ ವ್ಯವಸ್ಥೆ ಕಲುಷಿತ: ಡಾ.ವೈ.ಎ.ನಾರಾಯಣಸ್ವಾಮಿ ಕಳವಳ
- ತಮಿಳುನಾಡಿಗೆ ನೀರು ಹರಿಸುವ ಆದೇಶಕ್ಕೆ ಸಂಘಟನೆಗಳ ಆಕ್ರೋಶ: ಆದೇಶ ಧಿಕ್ಕರಿಸಿ ರಾಜ್ಯದ ಪರ ನಿಲ್ಲಲು ಒತ್ತಾಯ
- ಸರಗೂರು: ಕೊಟ್ಟಿಗೆಗೆ ನುಗ್ಗಿ ಕಾಡು ಪ್ರಾಣಿ ದಾಳಿ: 6 ಕುರಿ ಬಲಿ, 12 ಕುರಿಗಳಿಗೆ ಗಂಭೀರ ಗಾಯ
- ಸರಗೂರು: ಮೂರನೇ ಆಷಾಢ ಶುಕ್ರವಾರ -– ವಾಹನ ಚಾಲಕರ ಸಂಘದಿಂದ ವಿಶೇಷ ಪೂಜೆ ಹಾಗೂ ಖಾಕಿ ಸಮವಸ್ತ್ರ ವಿತರಣೆ
- ಔರಾದ್: ಜೈ ಕಿಸಾನ್ ಶಾಲೆ ಶಿಕ್ಷಕ, ಬಿಎಲ್ ಒ ಮಲ್ಲಿಕಾರ್ಜುನ ಪಿಟ್ರೆ ನಿಧನ
Author: admin
ವಿಮಾನ ನಿಲ್ದಾಣ ಎಂದ ತಕ್ಷಣ ನಿಮ್ಮ ಕಣ್ಣಿಗೆ ವೇಟಿಂಗ್ ಪ್ರದೇಶ, ತಿಂಡಿ, ತಿನಿಸುಗಳು, ವಿಮಾನಗಳು, ಐಷಾರಾಮಿ ಮೂಲಸೌಕರ್ಯಗಳೇ ನೆನಪಿಗೆ ಬರುತ್ತವೆ. ವಿಶ್ವದ ಒಂದು ವಿಮಾನ ನಿಲ್ದಾಣವು ಸಾಮಾನ್ಯ ವಿಮಾನ ನಿಲ್ದಾಣಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಅದು ಜಗತ್ತಿನ ಸಣ್ಣ ವಿಮಾನ ನಿಲ್ದಾಣ ಎಂಬ ಖ್ಯಾತಿಗೆ ಪಾತ್ರವಾಗಿದೆ. ಕೊಲಂಬಿಯಾದ ಅಗುವಾಚಿಕಾ ಎಂಬ ಸ್ಥಳದಲ್ಲಿ ಹಕಾರಿಟಮಾ ವಿಮಾನ ನಿಲ್ದಾಣವಿದೆ. ವಿಮಾನ ನಿಲ್ದಾಣದ ಗಾತ್ರದಿಂದಾಗಿ ಅದು ಪ್ರಸಿದ್ಧವಾಗಿದೆ. ವಿಮಾನ ಹೊರಡಲು 20 ನಿಮಿಷಗಳು ಬಾಕಿ ಇರುವಾಗ ಬೋರ್ಡಿಂಗ್ ಪ್ರಕ್ರಿಯೆಗಳು ಶುರುವಾಗುತ್ತವೆ. ಅಲ್ಲಿ ಲಗೇಶ್ ಪರಿಶೀಲಿಸಲು ಸ್ಕ್ಯಾನ್ ಕೂಡ ಇಲ್ಲ, ಕೈಯಲ್ಲಿ ಪರಿಶೀಲಿಸಲಾಗುತ್ತದೆ. ಇಲ್ಲಿ ಸ್ಕ್ಯಾನರ್ ಯಂತ್ರ ಇರಿಸಲೂ ಕೂಡ ಸ್ಥಳವಿಲ್ಲ. ಜನರು ವಿಮಾನ ನಿಲ್ದಾಣಕ್ಕೆ ಬಂದರೆ ಬಿಸಿಲಿನಲ್ಲಿ ಸರತಿ ಸಾಲಿನಲ್ಲಿ ನಿಲ್ಲಬೇಕು. ಇಲ್ಲಿ ಐಷಾರಾಮಿ ಕಾಯುವ ಕೊಠಡಿ ಇಲ್ಲ, ಬದಲಿಗೆ ಮಾವಿನ ಮರದ ಕೆಳಗೆ ನಿರ್ಮಿಸಲಾದ ಬೆಂಚುಗಳ ಮೇಲೆ ಜನರು ಕಾಯುತ್ತಾರೆ. ಪುರುಷರು ಮತ್ತು ಮಹಿಳೆಯರಿಗೆ ತಲಾ ಒಂದು ಕಾಯುವ ಕೊಠಡಿ ಇದೆ. ಇಲ್ಲಿ ವಿಮಾನವು ಚಿಕ್ಕದಾಗಿದ್ದರೂ,…
ಕನ್ನಡತಿ ಸೀರಿಯಲ್ ಖ್ಯಾತಿಯ ರಂಜನಿ ರಾಘವನ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಜೀವನ ಸಂಗಾತಿಯನ್ನು ನಟಿ ಪರಿಚಯಿಸಿದ್ದಾರೆ. ಜೀವನ ಸಂಗಾತಿ, ನನ್ನ ಹುಡುಗ ಎಂದು ಹ್ಯಾಶ್ ಟ್ಯಾಗ್ ಕೊಟ್ಟು ಫೋಟೋ ಶೇರ್ ಮಾಡಿ ನಟಿ ಸಂಭ್ರಮಿಸಿದ್ದಾರೆ. ಸಾಗರ್ ಭಾರಧ್ವಜ್ ಎಂಬುವವರ ಜೊತೆ ರಂಜನಿ ರಾಘವನ್ ಎಂಗೇಜ್ ಆಗಿದ್ದಾರೆ. ಅಂತೂ ಇಂತೂ ನಟಿ ಬಾಯ್ ಫ್ರೆಂಡ್ ಪರಿಚಯ ಮಾಡಿಕೊಟ್ಟಿದಕ್ಕೆ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಇಬ್ಬರಿಗೂ ಶುಭಕೋರುತ್ತಿದ್ದಾರೆ. ಮದುವೆ ಯಾವಾಗ? ಎಂಬ ವಿವರ ಇನ್ನಷ್ಟೇ ರಿವೀಲ್ ಆಗಬೇಕಿದೆ. ರಂಜನಿ ಅವರ ಕೈ ಹಿಡಿಯುತ್ತಿರೋ ಹುಡುಗನ ಹೆಸರು ಸಾಗರ್ ಭಾರಧ್ವಜ್. ಜೀವನ ಸಂಗಾತಿ, ನನ್ನ್ ಹುಡುಗ , ಬೆಸ್ಟ್ ಫ್ರೆಂಡ್ ಫಾರ್‌ಎವರ್ ಅಂತ #ಟಾಗ್ ಕೊಟ್ಟಿದ್ದಾರೆ. ಅವರು ವೃತ್ತಿಯಲ್ಲಿ ಅಥ್ಲೆಟ್ ಎನ್ನಲಾಗಿದೆ. ರನ್ನರ್, ಸೈಕಲಿಸ್ಟ್, ಬೈಕರ್. ಅವರು ಇನ್ಸ್ಟಾಗ್ರಾಮ್ ಖಾತೆಯನ್ನು ಪ್ರೈವೇಟ್ ಆಗಿ ಇಟ್ಟಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್…
ಹಾಲಿವುಡ್ ನ ಅನೇಕ ತಾರೆಯರು, ಬಿಲಿಯನೇರ್ ಉದ್ಯಮಿಗಳು ಹೀಗೆ ಪ್ರೈವೇಟ್ ಐಲ್ಯಾಂಡ್ ಹೊಂದಿದ್ದಾರೆ. ಭಾರತದಲ್ಲಿ ಹೀಗೆ ಸ್ವಂತ ದ್ವೀಪ ಹೊಂದಿದವರು ಬಹಳ ಕಡಿಮೆ. ಬಾಲಿವುಡ್‌ನ ಒಂದಿಬ್ಬರು ನಟ- ನಟಿ ಮಾತ್ರ ಸ್ವಂತ ದ್ವೀಪ ಹೊಂದಿದ್ದಾರೆ. ಅವರಲ್ಲಿ ನಮ್ಮ ಕನ್ನಡದಲ್ಲಿ ನಟಿಸಿದ ಒಬ್ಬಾಕೆ ನಟಿಯೂ ಇದ್ದಾಳೆ ಎಂದರೆ ನೀವು ಅಚ್ಚರಿಪಡಬಹುದು. ಈ ಸಾಧನೆ ತುಂಬಾ ಅಪರೂಪ. ಕೇವಲ ಮೂವರು ಬಾಲಿವುಡ್ ಸೆಲೆಬ್ರಿಟಿಗಳು ಮಾತ್ರ ತಮ್ಮದೇ ಆದ ದ್ವೀಪಗಳನ್ನು ಹೊಂದಿದ್ದಾರೆ. ಅವರಲ್ಲಿ ಮಹಿಳೆ ಒಬ್ಬಾಕೆ ಮಾತ್ರ. ಖಾಸಗಿ ದ್ವೀಪವನ್ನು ಹೊಂದಿರುವ ಏಕೈಕ ಭಾರತೀಯ ನಟಿ ಈಕೆ. ಐಶ್ವರ್ಯಾ ರೈ ಇಂದು ಅತ್ಯಂತ ಶ್ರೀಮಂತ ಭಾರತೀಯ ನಟಿ ಆದರೆ ಆಕೆ ದ್ವೀಪವನ್ನು ಹೊಂದಿಲ್ಲ. ಪ್ರಿಯಾಂಕಾ ಚೋಪ್ರಾ ಮತ್ತು ದೀಪಿಕಾ ಪಡುಕೋಣೆ ಕೂಡ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರು. ಆದರೆ ಅವರೂ ದ್ವೀಪಗಳನ್ನು ಖರೀದಿಸಿಲ್ಲ. ಅದೇ ರೀತಿ, ಆಲಿಯಾ ಭಟ್, ಕತ್ರಿನಾ ಕೈಫ್, ಸಮಂತಾ ರುತ್ ಪ್ರಭು, ಕರೀನಾ ಕಪೂರ್ ಕೂಡ ಶ್ರೀಮಂತರು. ಆದರೆ ಖಾಸಗಿ…
ಕೊರಟಗೆರೆ: ಪುರಾತನ ಗಂಗಾಧರೇಶ್ವರ ಕೆರೆಯ ವಾಲ್ ಬಿರುಕು ಬಿದ್ದ ಪರಿಣಾಮ ಕೆರೆಯ ನೀರು ಭಾರೀ ಪ್ರಮಾಣದಲ್ಲಿ ಪೋಲಾಗುತ್ತಿದ್ದು, ಕೆರೆಗಳು ಖಾಲಿ ಇದ್ದ ಸಂದರ್ಭದಲ್ಲಿ ಬಿರುಕು ಬಿಟ್ಟ ಸ್ಥಳಗಳನ್ನ ಸರಿಪಡಿಸುತ್ತಿದ್ದರೆ. ಇಂದು ಅಪಾರ ಪ್ರಮಾಣದ ನೀರು ವ್ಯರ್ಥವಾಗುತ್ತಿರಲಿಲ್ಲ. ಮುಂದಿನ ದಿನಗಳಲ್ಲಿ ಕೆರೆಗಳಿಂದ ಭಾರಿ ಗಂಡಾಂತರ ಸೃಷ್ಟಿಯಾಗುವ ಸನ್ನಿವೇಶ ಸೃಷ್ಟಿಯಾಗಿದೆ. ಕೆರೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಕೊರಟಗೆರೆಯಲ್ಲಿ ಇಲ್ಲವೇ ಇಲ್ಲ. ಅದರಿಂದಲೇ ಇಷ್ಟೆಲ್ಲ ಅವಾಂತರಗಳಿಗೆ ಕಾರಣವಾಗುತ್ತದೆ ಎಂದು ರೈತರ ಆರೋಪಿಸಿದರು. ಮಳೆ ಬಂದಾಗ ಕೆರೆಗಳ ಬಿರುಕು ಕಾಣುತ್ತದೆ ಈ ಅಧಿಕಾರಿಗಳಿಗೆ , ಸಂಬಂಧಪಟ್ಟ ಅಧಿಕಾರಿಗಳು ಕೆರೆಗಳ ಬಗ್ಗೆ ಜಾಗೃತಿ ವಹಿಸಬೇಕು ಎಂಬ ಮಾತುಗಳು ಕೇಳಿ ಬಂತು. ಗಂಗಾಧರೇಶ್ವರ ಕೆರೆಯಲ್ಲಿ ಆಗಿರುವ ಸಮಸ್ಯೆಯ ಬಗ್ಗೆ ರೈತರು ತಹಶೀಲ್ದಾರ್ ಹಾಗೂ ಪಟ್ಟಣ ಪಂಚಾಯತಿ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ ತಹಶೀಲ್ದಾರ್ ಮಂಜುನಾಥ್ ಖುದ್ದು ಪರಿಶೀಲಿಸಿದಾಗ ಎಂಟು ಅಡಿ ಆಳದಷ್ಟು ಕೆರೆಯ ವಾಲ್ ಬಳಿ ಬಿರುಕು ಹಾಗೂ ಕುಸಿತವಾಗಿದ್ದನ್ನ ಕಂಡು ಹಿಡಿದಿದ್ದು, ತಕ್ಷಣ…
ಬೀದರ್: ಸಾಮರ್ಥ್ಯಕ್ಕಿಂತ ಹೆಚ್ಚು ಶಾಲಾ ಮಕ್ಕಳನ್ನು ಆಟೋದಲ್ಲಿ ಕರೆದೊಯ್ಯುತ್ತಿದ್ದ ಆಟೋ ಚಾಲಕರ ವಿರುದ್ಧ ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ನಗರದಲ್ಲಿ ನಿಗದಿತ ಆಟೋ ಚಾಲಕರು ತಮ್ಮ ಆಟೋಗಳಲ್ಲಿ ಸಾಮರ್ಥ್ಯಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗಬಾರದೆಂದು ಈಗಾಗಲೇ ಜಾಗೃತಿ ಮೂಡಿಸಿದ್ದರೂ, ಆಟೋಗಳಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುತ್ತಿರುವುದು ಕಂಡು ಬಂದಿದೆ. ಈ ಹಿನ್ನೆಲೆ ಬಾಪುಗೌಡ ಎಸ್. ಪಾಟೀಲ್ ಪಿ.ಐ. ಬೀದರ್ ಸಂಚಾರ ಪೊಲೀಸ್ ಠಾಣೆ ಇವರ ನೇತೃತ್ವದಲ್ಲಿ ಬೀದರ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿ/ಸಿಬ್ಬಂದಿಯವರನ್ನು ಒಳಗೊಂಡ ಒಂದು ತಂಡವನ್ನು ರಚಿಸಿ, ನಗರದ ವಿವಿಧ ಸ್ಥಳಗಳಲ್ಲಿ Special Driveನ್ನು ಮಾಡಿ, ರಸ್ತೆ ಸುರಕ್ಷತೆ ಕ್ರಮ ಕುರಿತು 10 ಪ್ರತ್ಯೇಕ ಪ್ರಕರಣಗಳನ್ನು ದಾಖಲು ಮಾಡಲಾಯಿತು. ಚಾಲಕರ ಪಕ್ಕದಲ್ಲಿ ಹೆಚ್ಚುವರಿಯಾಗಿ ಅಳವಡಿಸಿರುವ ಸೀಟಗಳನ್ನು ತೆಗೆಸಿ, ಚಾಲಕರಿಗೆ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಕಟ್ಟೆಚ್ಚರ ನೀಡಲಾಯಿತು. ವರದಿ: ಅರವಿಂದ ಮಲ್ಲಿಗೆ, ಬೀದರ್ ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ…
ಕೋಲ್ಕತ್ತ: ನನ್ನ ಹೇಳಿಕೆಗಳನ್ನು ಮಾಧ್ಯಮದಲ್ಲಿ ತಿರುಚಿ ಅಪಪ್ರಚಾರ ನಡೆಸಲಾಗಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾಧ್ಯಮಗಳು ಹಾಗೂ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಬಿಜೆಪಿಯು ಪಶ್ಚಿಮ ಬಂಗಾಳದಲ್ಲಿ ಅರಾಜಕತೆ ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಬರೆದುಕೊಂಡಿದ್ದು, ‘ನಮ್ಮ ವಿದ್ಯಾರ್ಥಿಗಳ ಕಾರ್ಯಕ್ರಮದಲ್ಲಿ ನಾನು ಮಾಡಿದ ಭಾಷಣದಲ್ಲಿ ಉಲ್ಲೇಖಿಸಿದ ಕೆಲವು ವಿಷಯಗಳನ್ನು ಮುದ್ರಣ, ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ದುರುದ್ದೇಶದೊಂದಿಗೆ ತಪ್ಪು ಮಾಹಿತಿ ಹಂಚಿದ್ದಾರೆ’ ಎಂದು ಹೇಳಿದ್ದಾರೆ. ವೈದ್ಯಕೀಯ ಅಥವಾ ವಿದ್ಯಾರ್ಥಿಗಳ ಹೋರಾಟದ ವಿರುದ್ಧ ನಾನು ಒಂದೇ ಒಂದು ಪದವನ್ನು ಆಡಿಲ್ಲ ಎಂದು ಸ್ಪಷ್ಟಪಡಿಸಲು ಬಯುಸುತ್ತೇನೆ. ಅವರ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಅವರ ಹೋರಾಟ ಪ್ರಾಮಾಣಿಕವಾಗಿದೆ. ನಾನು ಅವರಿಗೆ ಬೆದರಿಕೆ ಹಾಕಿಲ್ಲ. ಆದರೆ ಈ ಕುರಿತು ನನ್ನ ಮೇಲೆ ಆಪಾದನೆ ಹೊರಿಸಲಾಗಿದ್ದು, ಇದು ಸತ್ಯಕ್ಕೆ ದೂರವಾದ ಮಾತು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ನಾನು ಬಿಜೆಪಿ ವಿರುದ್ಧ ಮಾತನಾಡಿದ್ದೇನೆ. ಏಕೆಂದರೆ…
ಸುಂಟಿಕೊಪ್ಪ: ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ಏಳನೇ ಹೊಸಕೋಟೆ ಗ್ರಾಮ ಪಂಚಾಯಿತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದೆ. ರಾಷ್ಟ್ರೀಯ ಹೆದ್ದಾರಿ 275ರ ಏಳನೇ ಹೊಸಕೋಟೆ- ಆನೆಕಾಡು ಭಾಗದಲ್ಲಿ ರಸ್ತೆಯ ಮಧ್ಯದಲ್ಲಿಯೇ ದನಗಳು ಮಲಗುತ್ತಿವೆ. ಇದರಿಂದಾಗಿ ವಾಹನ ಸವಾರರಿಗೆ ದಿಢೀರನೇ ಜಾನುವಾರುಗಳು ಎದುರಾಗುತ್ತಿದ್ದು, ಪರಿಣಾಮವಾಗಿ ಅಪಘಾತಗಳು ಸಂಭವಿಸುತ್ತಿವೆ. ಹಲವರು ಹೀಗೆ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಜಾನುವಾರುಗಳು ಕೂಡ ಅಪಘಾತದಲ್ಲಿ ಮೃತಪಟ್ಟಿವೆ. ರಾಷ್ಟ್ರೀಯ ಹೆದ್ದಾರಿ ಬಳಿಯ ಹೊಸಕೋಟೆ, ತೊಂಡೂರು, ಹೇರೂರು, ಮೆಟ್ನಳ್ಳ, ಉಪ್ಪುತೋಡು, ಬಸವನಹಳ್ಳಿ ಭಾಗದ ಜಾನುವಾರು ಮಾಲೀಕರು ತಮ್ಮ ಜಾನುವಾರುಗಳನ್ನು ಮೇಯಲು ರಸ್ತೆಗೆ ಬಿಡುತ್ತಿದ್ದಾರೆ. ಈ ನಡುವೆ ನಾಕೂರು ಶಿರಂಗಾಲ, ಹೇರೂರು ಭಾಗದಿಂದಲೂ ಜಾನುವಾರುಗಳು ಕಾಡಿನೊಳಗೆ ಮೇಯುತ್ತಾ ರಸ್ತೆಗೆ ಬರುತ್ತಿವೆ. ಮಳೆ ಮತ್ತು ಚಳಿ ಹೆಚ್ಚು ಇರುವ ಸಂದರ್ಭದಲ್ಲಿ ರಸ್ತೆಯಲ್ಲಿ ಬೆಚ್ಚನೆಯ ವಾತಾವರಣ ಇರುವ ಕಾರಣಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ದನಕರುಗಳು ಕಾಣಿಸಿಕೊಳ್ಳುತ್ತಿವೆ. ಬೆಳಗಿನ ಜಾವ ಮಂಜು ಕವಿದ ವಾತಾವರಣ ಮತ್ತು ಮಳೆಯ ಹನಿಯ ನಡುವೆ ಚಾಲಕರಿಗೆ ರಸ್ತೆ ಅಸ್ಪಷ್ಟವಾಗಿ ಕಾಣುವುದರಿಂದ ಅಪಘಾತಗಳು ಹೆಚ್ಚಾಗಿ…
ಹಾಸನ: ದರ್ಶನ್ ಬಿಟ್ಟರೆ ಬೇರೆ ಯಾವುದೇ ಸುದ್ದಿಗಳೇ ಇಲ್ವಾ ಎಂದು ಮಾಧ್ಯಮಗಳ ವಿರುದ್ಧ ಸಚಿವ ಕೆ.ಎನ್.ರಾಜಣ್ಣ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ಹಾಸನದಲ್ಲಿ ದರ್ಶನ್ ವಿಚಾರವಾಗಿ ಸುದ್ದಿಗಾರರು ಪ್ರಶ್ನಿಸಲು ಮುಂದಾದ ವೇಳೆ ಬೆಳಿಗ್ಗೆ ಎದ್ದರೆ ಟಿವಿಯಲ್ಲಿ ಬರಿ ದರ್ಶನ್ ಬಗ್ಗೆ ತೋರಿಸುತ್ತೀರಿ. ಅವನನ್ನು ಬಿಟ್ಟು ಬೇರೆ ಯಾವ ವಿಚಾರ ಇಲ್ಲವೇ? ಒಳ್ಳೆಯ ವಿಚಾರಗಳನ್ನು ತೋರಿಸಿ ಎಂದು ಅವರು ಗರಂ ಆಗಿದ್ದಾರೆ. ಬೆಳಿಗ್ಗೆ ಎದ್ದರೆ ಟಿವಿಯಲ್ಲಿ ಆತನನ್ನೇ ತೋರಿಸುತ್ತೀರಿ. ಅವನೇನು ಸಮಾಜಕ್ಕೆ ರೋಲ್ ಮಾಡೆಲ್ಲಾ? ಅಂತ ಅವರು ಪ್ರಶ್ನಿಸಿದರಲ್ಲದೇ, ಒಳ್ಳೆಯ ಕಲಾವಿದ ಎಂಬುದನ್ನು ಎಲ್ಲರೂ ಒಪ್ಪುತ್ತೇವೆ. ಒಳ್ಳೆಯ ಕಲಾವಿದ ಎಂದ ಮಾತ್ರಕ್ಕೆ ಮಾಡಬಾರದ್ದು ಮಾಡಿದರೆ ಕಾನೂನು ಕ್ರಮ ತೆಗೆದುಕೊಳ್ಳುತ್ತೆ. ಮೂರು ಹೊತ್ತು ಆತನ ಬಗ್ಗೆಯೇ ತೋರಿಸಿದರೆ ಹೇಗೆ? ಟಿವಿಯವರಿಗೆ ಬೇರೆ ಕೆಲಸವಿಲ್ವಾ? ಅಂತ ಆಕ್ರೋಶ ವ್ಯಕ್ತಪಡಿಸಿದ್ರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ಬೆಂಗಳೂರು: ಆಗಸ್ಟ್ 30 ಮತ್ತು 31 ರಂದು ರಾಜ್ಯಾದ್ಯಂತ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಹೋಟೆಲ್, ರೆಸ್ಟೋರೆಂಟ್ ಗಳಲ್ಲಿರುವ ಆಹಾರ ಸುರಕ್ಷತೆ ಬಗ್ಗೆ ವಿಶೇಷ ತಪಾಸಣೆ ನಡೆಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಈ ಬಬಗ್ಗೆ ಮಾಹಿತಿ ನೀಡಿದ ಅವರು, ಮಾಂಸ, ಮೀನು, ಮೊಟ್ಟೆಗಳ ಆಹಾರ ಮಾದರಿಗಳನ್ನು ಸಂಗ್ರಹಿಸಿ ತಪಾಸಣೆ ನಡೆಸಲಾಗುವುದು ಎಂದು ತಿಳಿಸಿದರಲ್ಲದೇ, ಅಸುರಕ್ಷಿತ ಆಹಾರ ತಯಾರಿಸುತ್ತಿರುವವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದರು. ಸಾರ್ವಜನಿಕರು ತಾವು ಸೇವಿಸುವ ಆಹಾರದ ಗುಣಮಟ್ಟವನ್ನು ತಾವೇ ಪರೀಕ್ಷಿಸಿಕೊಳ್ಳಲು ಅನುಕೂಲವಾಗುವಂತೆ ಹೋಟೆಲ್, ರೆಸ್ಟೋರೆಂಟ್, ಫುಡ್ ಪಾರ್ಕ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ 3,400 ಟೆಸ್ಟಿಂಗ್ ಕಿಟ್ ಅಳವಡಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ವಡೋದರ: ನಿರಂತರ ಮಳೆಯಿಂದಾಗಿ ಗುಜರಾತ್ ನಲ್ಲಿ ಅವಾಂತರ ಸೃಷ್ಟಿಯಾಗಿದೆ. ರಾಜ್ಯದಾದ್ಯಂತ ಸುಮಾರು 137 ಜಲಾಶಯಗಳು, 24 ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ. ಇದೇ ವೇಳೆ ನೀರಿನಿಂದ ಆವೃತ್ತವಾದ ಮನೆಯೊಂದರ ಮೇಲ್ಛಾವಣಿಯಲ್ಲಿ ಮೊಸಳೆಯೊಂದು ಪ್ರತ್ಯಕ್ಷವಾಗಿರುವ ಘಟನೆ ವಡೋದರದ ಅಕೋಟ ಕ್ರೀಡಾಂಗಣ ಪ್ರದೇಶದಲ್ಲಿ ನಡೆದಿದೆ. ಸದ್ಯ ಮನೆಯ ಮೇಲೆ ಮೊಸಳೆ ಇರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗುಜರಾತ್ ನಲ್ಲಿ ಕಳೆದ ಮೂರು ದಿನಗಳಿಂದ ಮಳೆ ಸಂಬಂಧಿತ ಅವಘಡಗಳಿಂದಾಗಿ ಮೃತಪಟ್ಟವರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ. ಏತನ್ಮಧ್ಯೆ ಸುಮಾರು 17,800 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಸೌರಾಷ್ಟ್ರ ಭಾಗದ ದೇವ್‌ಭೂಮಿ ದ್ವಾರಕಾ, ಜಾಮ್‌ನಗರ, ರಾಜ್‌ಕೋಟ್ ಮತ್ತು ಪೋರಬಂದರ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕಳೆದ 24 ಗಂಟೆಗಳಲ್ಲಿ ಭಾರಿ ಮಳೆಯಾಗಿದ್ದು, ಆತಂಕ ಸೃಷ್ಟಿಸಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q