ಹರ್ಷಿಕಾ ಭುವನ್ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಕಳೆದ ವರ್ಷ 2023, ಆಗಸ್ಟ್ 24ರಂದು ಹರ್ಷಿಕಾ ಪೂಣಚ್ಚ ಬಹುಕಾಲದ ಗೆಳೆಯ ನಟ ಭುವನ್ ಪೊನ್ನಣ್ಣ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಇದೀಗ ವರ್ಷದೊಳಗೆ ಮಗು ಆಗಮಿಸುವ ಸುದ್ದಿ ಕೊಟ್ಟಿದ್ದಾರೆ. ಹರ್ಷಿಕಾ ಪೂಣಚ್ಚ ಈಗ ಐದು ತಿಂಗಳ ಗರ್ಭಿಣಿ. ಮುಂಬರುವ ಅಕ್ಟೋಬರ್ ತಿಂಗಳಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿ ಭುವನ್ ದಂಪತಿ ಇದ್ದಾರೆ. ಇದೇ ಖುಷಿಯಲ್ಲಿ ಈ ಜೋಡಿ ಫೋಟೊಶೂಟ್ ಮಾಡಿಸಿದೆ.
ಕೊಡವ ಸಂಪ್ರದಾಯದ ಉಡುಗೆಯಲ್ಲೇ ವಿಭಿನ್ನವಾಗಿ ಫೋಟೋಶೂಟ್ ಮಾಡಿಸಿರುವ ದಂಪತಿ ಮಗುವಿನ ಆಗಮನದ ಸುದ್ದಿ ಘೋಷಿಸಿದ್ದಾರೆ ಇದೇ ಅಕ್ಟೋಬರ್‌ನಲ್ಲಿ ಮಗು ಬರಲಿರುವ ಸಂತಸದಲ್ಲಿದ್ದಾರೆ ಹರ್ಷಿಕಾ ದಂಪತಿ.’ನಮ್ಮ ಪೂರ್ವಜ್ಜರ ಮನೆಯಲ್ಲಿ ಫೋಟೋ ಮತ್ತು ವಿಡಿಯೋ ಶೂಟ್ ಮಾಡಬೇಕು ಅನ್ನೋದು ಭುವನ್ ಐಡಿಯಾ ಆಗಿತ್ತು ಎಂದಿದ್ದಾರೆ ಹರ್ಷಿಕಾ.
‘ನಾನು ಪ್ರೆಗ್ನೆಂಟ್ ಎಂದು ತಿಳಿದಾಗ ಭುವನ್ ಹೊರಗಡೆ ಶೂಟಿಂಗ್ ಮಾಡುತ್ತಿದ್ದರು. ಆಗ ನಾನು ವಿಡಿಯೋ ಕಾಲ್ ಮಾಡಿ ಅಳುತ್ತಿದ್ದೆ. ಅದು ನನ್ನ ಖುಷಿಯ ಕಣ್ಣೀರು ಏಕೆಂದರೆ ನಾವು ಮದುವೆಯಾದ ಕ್ಷಣದಿಂದ ಮಗು ಮಾಡಿಕೊಳ್ಳಲು ರೆಡಿಯಾಗಿದ್ದೆವು. ನಮ್ಮಿಬ್ಬರಿಗೂ ಮಕ್ಕಳು ಅಂದ್ರೆ ತುಂಬಾನೇ ಇಷ್ಟ ಎಲ್ಲಿಲ್ಲದ ಖುಷಿ. ನಮ್ಮಿಬ್ಬರದ್ದು ತುಂಬಾ ಹಳೆ ಪರಿಚಯ ಈಗ ನಾವು ಪೋಷಕರಾಗುತ್ತಿರುವುದು ಖುಷಿ ಕೊಟ್ಟಿದೆ’ ಎಂದು ಹರ್ಷಿಕಾ ಹೇಳಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q