Author: admin

ತುಮಕೂರು: ತೋಟಗಾರಿಕೆ ಇಲಾಖೆಯು ತೋಟಗಾರಿಕೆ ರೈತರು ಹಾಗೂ ಉದ್ದಿಮೆದಾರರಿಗೆ ನೆರವು ನೀಡಲು ಅರ್ಜಿ ಆಹ್ವಾನಿಸಿದೆ. ಅಡಿಕೆ ಸುಲಿಯುವ ಯಂತ್ರ, ದೋಟಿ, ಬ್ರಷ್ ಕಟರ್, ಟಿಲ್ಲರ್, ಪವರ್ ವೀಡರ್, ಸ್ಪ್ರೇಯರ್, ರೋಟೋವೇಟರ್, ಡಿಗ್ಗರ್ ಹಾಗೂ ಇತರೆ ಯಂತ್ರಗಳನ್ನು (ಗರಿಷ್ಟ 1.25 ಲಕ್ಷ ರೂ. ಅಥವಾ 5 ಯಂತ್ರೋಪಕರಣಗಳಿಗೆ ಮಾತ್ರ) ಖರೀದಿಸಲು ಸಹಾಯಧನ ನೀಡಲಾಗುವುದು. ಆಸಕ್ತ ರೈತರು ಹಾಗೂ ಉದ್ದಿಮೆದಾರರು ಭರ್ತಿ ಮಾಡಿದ ಅರ್ಜಿಯೊಂದಿಗೆ ಪಹಣಿ, ಬೆಳೆ ದೃಢೀಕರಣ, ಚೆಕ್ಬಂದಿ, ಆಧಾರ್, ಬ್ಯಾಂಕ್ ಪಾಸ್ ಪುಸ್ತಕ, ಜಾತಿ ಪ್ರಮಾಣಪತ್ರ(ಪ.ಜಾತಿ ಮತ್ತು ಪ.ಪಂಗಡ ರೈತರಿಗೆ), ಜಂಟಿ ಖಾತೆ ಇದ್ದಲ್ಲಿ ಒಪ್ಪಿಗೆ ಪ್ರಮಾಣ ಪತ್ರ, ಖಾತೆದಾರರು ಮರಣ ಹೊಂದಿದ್ದಲ್ಲಿ ಮರಣ ಪ್ರಮಾಣ ಪತ್ರ ಸೇರಿದಂತೆ ಮತ್ತಿತರೆ ದಾಖಲಾತಿಗಳನ್ನು ಲಗತ್ತಿಸಿ ಹತ್ತಿರದ ಗ್ರಾಮ ಪಂಚಾಯಿತಿ ಕಚೇರಿ ಅಥವಾ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ತುಮಕೂರು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ- 9686503500, ಗುಬ್ಬಿ-9535781963, ಶಿರಾ-9844042356, ಕುಣಿಗಲ್-9606570210, ತಿಪಟೂರು-9845014293, ಚಿಕ್ಕನಾಯಕನಹಳ್ಳಿ-9686056705, ಮಧುಗಿರಿ-9916378199,…

Read More

ತುಮಕೂರು: ನಗರದ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರವನ್ನು ನಾಟಕ ಪ್ರದರ್ಶನಕ್ಕೆ ಕಾಯ್ದಿರಿಸುವ ವಿಚಾರದಲ್ಲಿ ದುರುಪಯೋಗವಾಗುತ್ತಿದ್ದು, ಕೂಡಲೇ ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ಸಾಂಸ್ಕೃತಿಕ ಸಂಘಟನೆಗಳ ರಾಜ್ಯ ಮಹಾ ಒಕ್ಕೂಟ ಅಪರ ಜಿಲ್ಲಾಧಿಕಾರಿ ಡಾ. ತಿಪ್ಪೇಸ್ವಾಮಿ ರವರಿಗೆ ಮನವಿ ಸಲ್ಲಿಸಿದೆ. ಕರ್ನಾಟಕ ಸಾಂಸ್ಕೃತಿಕ ಸಂಘಟನೆಗಳ ರಾಜ್ಯ ಮಹಾ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಕಲಾವಿದರ ಒಕ್ಕೂಟದ ರಾಜ್ಯಾಧ್ಯಕ್ಷ ತಿಪ್ಪೇಸ್ವಾಮಿ ಹಾಗೂ ಒಕ್ಕೂಟದ ಜಿಲ್ಲಾಧ್ಯಕ್ಷ ಗೂಳಹರಿವೆ ಪೆರುಮಯ್ಯ ಅವರು ಅಪರ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಈ ಸಂಬಂಧ ಮನವಿ ಸಲ್ಲಿಸಿ, ನಾನು ನಮ್ಮ ನುರಿತ ಕಲಾವಿದರಿಂದ ಸಂಪೂರ್ಣ ರಾಮಾಯಣ ಪೌರಾಣಿಕ ನಾಟಕವನ್ನು ಪ್ರದರ್ಶಿಸಲು ಸ್ಥಳಾವಕಾಶ ನೀಡುವಂತೆ ಅನೇಕ ಬಾರಿ ಮನವಿ ಸಲ್ಲಿಸಿದ್ದೇವೆ. ಆದರೂ ಅವಕಾಶ ಸಿಕ್ಕಿಲ್ಲ ಎಂದು ದೂರಿದರು. ಕೆಲವು ವ್ಯಕ್ತಿಗಳು ತಮಗೆ ಅವಶ್ಯಕತೆ ಇಲ್ಲದಿದ್ದರೂ ಮುಂಚಿತವಾಗಿ ಪದೇ ಪದೇ ಗುಬ್ಬಿ ವೀರಣ್ಣ ಕಲಾಕ್ಷೇತ್ರವನ್ನು ಆನ್ ಲೈನ್ ನಲ್ಲಿ ಕಾಯ್ದಿರಿಸಿ ಹಣ ಪಡೆದು ಅನ್ಯರಿಗೆ ಬಿಟ್ಟು…

Read More

ತುಮಕೂರು: ನಾಡಿನ ಸಾಮಾಜಿಕನ್ಯಾಯದ ಹರಿಕಾರರಾಗಿ, ದೀನ ದುರ್ಬಲರಆಶಾಕಿರಣವಾಗಿ, ಜೀತ ಹಾಗೂ ಮಲ ಹೊರುವ ಪದ್ಧತಿಯನ್ನು ನಿರ್ಮೂಲನೆ ಮಾಡಿದ ಧೀಮಂತ ನಾಯಕ ದೇವರಾಜ ಅರಸು ಚಿರಸ್ಮರಣೀಯ ಎಂದು ಕುವೆಂಪು ವಿವಿಯ ಕಲಾ ನಿಕಾಯದ ಡೀನ್ ಪ್ರೊ. ಎಂ.ಗುರುಲಿಂಗಯ್ಯ ಹೇಳಿದರು. ತುಮಕೂರು ವಿಶ್ವವಿದ್ಯಾನಿಲಯದ ಡಿ.ದೇವರಾಜ ಅರಸುಅಧ್ಯಯನ ಪೀಠ ಮತ್ತು ಹಿಂದುಳಿದ ವರ್ಗಗಳ ಕೋಶವು ಮಂಗಳವಾರ ಆಯೋಜಿಸಿದ್ದ ಡಿ.ದೇವರಾಜ ಅರಸು ಅವರ 109ನೇ ಜಯಂತಿಯಲ್ಲಿ‘ಪ್ರಸಕ್ತ ಸನ್ನಿವೇಶದಲ್ಲಿ ಡಿ.ದೇವರಾಜ ಅರಸು ಅವರ ಸಾಮಾಜಿಕ ನ್ಯಾಯ ಪರಿಕಲ್ಪನೆಯ ಪ್ರಸ್ತುತತೆ’ ಕುರಿತು ಮಾತನಾಡಿದರು. 12ನೆಯ ಶತಮಾನದ ಸಾಮಾಜಿಕ ನ್ಯಾಯದ ಪರಿಪಾಲಕ ಬಸವಣ್ಣನವರ ಆದರ್ಶವನ್ನು ಪ್ರತಿಪಾದಿಸಿದ ನಾಯಕ ದೇವರಾಜ ಅರಸು ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳನ್ನು ಸಮಾಜಕ್ಕೆ ತಲುಪಿಸಿ ಸಮ ಸಮಾಜವನ್ನುರೂಪಿಸುವ, ಸಮಾಜಕ್ಕಾಗಿ ದುಡಿದು ಬದುಕುವ ವಿಕಾಸ ಮನಸ್ಥಿತಿಯಿದ್ದವರು ಎಂದರು. ಸಾಮಾಜಿಕ ನ್ಯಾಯವು ಸಂವಿಧಾನಕ್ಕೆ ಕಿರೀಟವಿದ್ದಂತೆ. ಉಳ್ಳವರು ಮತ್ತುಇರದವರ ನಡುವಿನ ವ್ಯತ್ಯಾಸವನ್ನು ಸಮಾನತೆಯ ಧ್ಯೇಯದೊಂದಿಗೆ, ಮೇಲ್ವರ್ಗದವರ ಶೋಷಣೆಯಿಂದ ತುಳಿತಕ್ಕೊಳಗಾದವರ ಧ್ವನಿಯಾಗಿ ಅರಸು ಹಿಂದುಳಿದ ಸಮುದಾಯಗಳ ನಾಯಕರಾಗಿ ಸದಾ ಮೇಲ್ಪಂಕ್ತಿಯಲ್ಲಿ ಕಾಣಿಸಿಕೊಳ್ಳುತ್ತಾರೆ…

Read More

ತುಮಕೂರು: ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಮೆಟ್ರಿಕ್ ನಂತರದ ಪಿ.ಯು.ಸಿ ಮತ್ತು ಸಮಾನಾಂತರ, ಸಾಮಾನ್ಯ ಪದವಿ ಮತ್ತು ಸಂಯೋಜಿತ ಉಭಯ ಪದವಿ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಹಾಗೂ ಪ್ರವರ್ಗ–1ರ ಅಲೆಮಾರಿ/ಅರೆ ಅಲೆಮಾರಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಶುಲ್ಕ ಮರುಪಾವತಿ ಮತ್ತು ವಿದ್ಯಾಸಿರಿ(ಊಟ ಮತ್ತು ವಸತಿ ಸಹಾಯ ಯೋಜನೆ) ಸೌಲಭ್ಯ ನೀಡಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ಜಾಲತಾಣ https://ssp.postmatric.karnataka.gov.in ಮೂಲಕ ಸೆಪ್ಟೆಂಬರ್ 15ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ https://bcwd.karnataka.gov.in , bcwdhelpline@gmail.com, postmatrichelp@karnataka.gov.in ಅಥವಾ ಇಲಾಖಾ ಸಹಾಯವಾಣಿ ಸಂಖ್ಯೆ. 8050770005, ಅಥವಾ ದೂ.ಸಂ. 1902ನ್ನು ಸಂಪರ್ಕಿಸಬೇಕೆಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

Read More

ತುಮಕೂರು: ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮವು ಸ್ವಯಂ ಉದ್ಯೋಗ ಸಾಲ, ಗಂಗಾಕಲ್ಯಾಣ ನೀರಾವರಿ, ಅರಿವು-ಶೈಕ್ಷಣಿಕ ಸಾಲ(ಹೊಸತು ಹಾಗೂ ನವೀಕರಣ), ಸ್ವಯಂ ಉದ್ಯೋಗ ಸಾಲ(ವಾಣಿಜ್ಯ ಬ್ಯಾಂಕ್‌ ಗಳ ಸಹಯೋಗದೊಂದಿಗೆ), ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ವ್ಯಾಸಂಗಕ್ಕೆ ಆರ್ಥಿಕ ನೆರವು, ಸ್ವಾವಲಂಬಿ ಸಾರಥಿ ಯೋಜನೆಗಳಡಿ ಸಾಲ ಮತ್ತು ಸಹಾಯಧನ ಸೌಲಭ್ಯ ಒದಗಿಸಲು ಅಂಬಿಗರು, ಬೆಸ್ತರು, ಗಂಗಾಮತಸ್ಥರು ಹಾಗೂ ಅದರ ಉಪಜಾತಿಗೆ ಸೇರಿದವರಿಂದ ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಆಹ್ವಾನಿಸಿದೆ. ಆಸಕ್ತರು ಆಗಸ್ಟ್ 31ರೊಳಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್ಸೈಟ್: https://ambigaradevelopment.karnataka.gov.in ಅಥವಾ ನಿಗಮದ ದೂ.ವಾ.ಸಂ.080-22864099 ಅಥವಾ ಜಿಲ್ಲಾ ವ್ಯವಸ್ಥಾಪಕರ ಕಚೇರಿ ದೂ.ವಾ.ಸಂ. 0816-2005008ನ್ನು ಸಂಪರ್ಕಿಸಿ ಪಡೆಯಬಹುದಾಗಿದೆ ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕ ಬಿ.ವಿ. ವೆಂಕಟರಾಜು ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

Read More

ತುಮಕೂರು: ಇಂದು ಬೆಳಗ್ಗೆ ಸುಮಾರು 2 ಗಂಟೆಗೂ ಹೆಚ್ಚು ಕಾಲ ಸುರಿದ ಭಾರಿ ಮಳೆಗೆ  ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಜಿಲ್ಲೆಯ ಗುಬ್ಬಿ ಪಟ್ಟಣದಿಂದ ಹೊರವಲಯದಲ್ಲಿರುವ ಬಿದರೆ –ಗುಬ್ಬಿ ಸಂಪರ್ಕ ರಸ್ತೆಯಲ್ಲಿ ಇರುವ ರೈಲ್ವೆ ಅಂಡರ್ ಪಾಸ್ ನಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ಸಂಚರಿಸುವ ವೇಳೆ ಸಿಲುಕಿಕೊಂಡಿತ್ತು. ಬಸ್ಸಿನ ಒಳಗೆ ಇದ್ದಂತ ಪ್ರಯಾಣಿಕರನ್ನು ಸುರಕ್ಷಿತ ಜಾಗಕ್ಕೆ ತಲುಪಿಸಲು ಅಗ್ನಿಶಾಮಕ ದಳ ಪ್ರಯತ್ನಪಟ್ಟರು.  ಇದರಿಂದಾಗಿ ಕೆಲಕಾಲ ಪ್ರಯಾಣಿಕರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಸುಮಾರು ಆರು ಅಡಿಯಷ್ಟು ನೀರು ನಿಂತಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

Read More

ತಿಪಟೂರು: ನಿನ್ನೆ ರಾತ್ರಿ ಸುರಿದ ಮಳೆಯಿಂದಾಗಿ ವೃದ್ಧ ದಂಪತಿಗೆ ಸೇರಿದ ಮನೆಯೊಂದು ಕುಸಿದು ಬಿದ್ದ ಘಟನೆ  ತಾಲೂಕಿನ ಹೊನ್ನವಳ್ಳಿ ಹೋಬಳಿಯ ಮಾಯಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ. ಚನ್ನಬಸಮ್ಮw/o  ರಾಜಣ್ಣ (68) ಇವರ ಮನೆ ಕುಸಿತಗೊಂಡಿದ್ದು, ಅದೃಷ್ಟವಶಾತ್ ವಯೋ ವೃದ್ಧ ದಂಪತಿಗಳು ಪ್ರಾಣಾಪಾಯದಿಂದ ಪರಾರಾಗಿದ್ದಾರೆ. ಈ ದಂಪತಿಗೆ ಈ ಮನೆ ಬಿಟ್ಟರೆ ಬೇರೆ ಯಾವುದೇ ಮನೆ ಇಲ್ಲ. ಘಟನೆಯಿಂದಾಗಿ ಸುಮಾರು ಲಕ್ಷ ರೂಪಾಯಿಯ ಗೃಹೋಪಯೋಗಿ ವಸ್ತುಗಳು ನಾಶವಾಗಿದೆ. ಈ ದಂಪತಿಯನ್ನು ಯಾರು ಪೋಷಣೆ ಮಾಡುವವರು ಇಲ್ಲ. ಕೂಲಿಯಿಂದ ಜೀವನ ಸಾಗಿಸುತ್ತಿದ್ದು, ಈ ಇಬ್ಬರೇ ಈ ಮನೆಯಲ್ಲಿ ವಾಸವಾಗಿದ್ದಾರೆ. ಈಗ ಮನೆಯ ಆಚೆ ವಾಸವಿದ್ದಾರೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮತ್ತು ತಾಲೂಕು ಆಡಳಿತ ಇಲ್ಲಿಗೆ ಭೇಟಿ ಕೊಟ್ಟು, ಸ್ಥಳ ಪರಿಶೀಲನೆ ಮಾಡಿ ವೃದ್ಧ ದಂಪತಿಗಳಿಗೆ ಆಸರೆ ಆಗಬೇಕಾಗಿದೆ. ವರದಿ: ಆನಂದ್ ತಿಪಟೂರು ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ:…

Read More

ಬಿಗ್​ ಬಾಸ್​ ಕನ್ನಡ ಹಿಂದಿರುವ ಅಗೋಚರ ಧ್ವನಿ ಯಾರದ್ದು ? ಹೀಗೊಂದು ಪ್ರಶ್ನೆ ನೋಡುಗರನ್ನು ಒಂದಲ್ಲಾ ಒಂದು ದಿನ ಕಾಡಿರುತ್ತದೆ. ಮೊದಲ ಸೀಸನ್‌ನಿಂದ ಈ ಸೀಸನ್‌ವರೆಗೂ 3 ಮಂದಿ, ಬಿಗ್‌ ಬಾಸ್‌ ಆಗಿ ಕಾರ್ಯಕ್ರಮಕ್ಕೆ ದನಿ ನೀಡಿದ್ದಾರೆ. ಆದರೆ ಪ್ರತಿದಿನ ಎಲ್ಲರೂ ಇವರ ದನಿ ಕೇಳುತ್ತಿದ್ದರೇ ಹೊರತು ಇವರ ಬಗ್ಗೆ ಮಾಹಿತಿ ಇರಲಿಲ್ಲ. ವೀಕ್ಷಕರಿಗಾಗಿ ಬಿಗ್‌ ಬಾಸ್‌ ಹಿನ್ನೆಲೆ ಧ್ವನಿ ನೀಡಿದ್ದ, ನೀಡುತ್ತಿರುವ ಕಲಾವಿದರ ಬಗ್ಗೆ ಇಲ್ಲಿದೆ ಒಂದಿಷ್ಟು ಮಾಹಿತಿ. ಬಿಎಂ ವೆಂಕಟೇಶ್‌ 2015ರಲ್ಲಿ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾದ ಬಿಗ್‌ ಬಾಸ್‌ ಸೀಸನ್‌ 3ಕ್ಕೆ ಬಿಎಂ ವೆಂಕಟೇಶ್‌ ಬಿಗ್‌ ಬಾಸ್‌ ಆಗಿ ಧ್ವನಿ ನೀಡಿದ್ದರು. ವೆಂಕಟೇಶ್‌ ಅವರನ್ನು ಅನೇಕ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನೋಡಿದ್ದೇವೆ. ಜೀ ಕನ್ನಡದಲ್ಲಿ ಪ್ರಸಾರವಾಗಿದ್ದ ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ವೆಂಕಟೇಶ್‌ ಝೇಂಡೆ ಪಾತ್ರದಲ್ಲಿ ನಟಿಸಿದ್ದರು. ವೆಂಕಟೇಶ್‌ ಡಡ್ಬಿಂಗ್‌ ಕಲಾವಿದರಾಗಿ ಕೂಡಾ ಗುರುತಿಸಿಕೊಂಡಿದ್ದಾರೆ. ಅಮಿತ್‌ ಭಾರ್ಗವ್‌ ಕನ್ನಡಕ್ಕಿಂತ ಹೆಚ್ಚಾಗಿ ತಮಿಳಿನಲ್ಲಿ ಗುರುತಿಸಿಕೊಂಡಿದ್ದಾರೆ. ಅಮಿತ್‌ ಮೊದಲ ಬಾರಿಗೆ 2010ರಲ್ಲಿ ಉದಯ…

Read More

ಒಂದು ಮಗುವೂ ಹುಟ್ಟದ ದೇಶವಿದೆ. ಇಲ್ಲಿ ಮಕ್ಕಳ ಜನನವನ್ನು ನಿಷೇಧಿಸಲಾಗಿದೆ. ಮಕ್ಕಳಿಗೆ ಜನ್ಮ ನೀಡುವ ಆಸ್ಪತ್ರೆಗಳಾಗಲಿ ಅಥವಾ ಪುರುಷರು ಮತ್ತು ಮಹಿಳೆಯರಿಗೆ ಅಂತಹ ಯಾವುದೇ ಹಕ್ಕುಗಳಿಲ್ಲ. ಆ ದೇಶದ ಹೆಸರು ವ್ಯಾಟಿಕನ್ ಸಿಟಿ. ವ್ಯಾಟಿಕನ್ ಸಿಟಿ ವಿಶ್ವದ ಅತ್ಯಂತ ಚಿಕ್ಕ ದೇಶ. ಕ್ರಿಶ್ಚಿಯನ್ ಧರ್ಮದ ಸರ್ವೋಚ್ಚ ನಾಯಕರು ಇಲ್ಲಿ ವಾಸಿಸುತ್ತಿದ್ದಾರೆ. ಇದು ಅವರ ಅಧಿಕೃತ ನಿವಾಸ. ಪುರೋಹಿತರು ಮಾತ್ರ ಅಲ್ಲಿ ವಾಸಿಸುತ್ತಾರೆ. ಅಂದರೆ, ಪುರುಷರು ಮಾತ್ರ ಅಲ್ಲಿ ವಾಸಿಸುತ್ತಾರೆ. ಅಲ್ಲಿ ಎಲ್ಲರೂ ಬ್ರಹ್ಮಚಾರಿಗಳು. ಈ ಸ್ಥಳವು ಪ್ರಪಂಚದ ಅತ್ಯಂತ ಸುಂದರವಾದ ಸ್ಥಳಗಳಲ್ಲಿ ಒಂದಾಗಿದೆ. ವ್ಯಾಟಿಕನ್ ಸಿಟಿ ಪಾದ್ರಿಗಳು ಧರ್ಮದ ಕಾರಣದಿಂದ ಮದುವೆಯಾಗಲು ಅಥವಾ ಮಕ್ಕಳನ್ನು ಹೊಂದಲು ಅನುಮತಿಸುವುದಿಲ್ಲ. ಇಲ್ಲಿ ಒಟ್ಟು 800 ಜನರು ವಾಸಿಸುತ್ತಿದ್ದಾರೆ. ಅವರಲ್ಲಿ ಕೇವಲ 30 ಮಹಿಳೆಯರಿದ್ದಾರೆ ಮತ್ತು ಅವರೂ ತಮ್ಮ ಜೀವನದುದ್ದಕ್ಕೂ ಅಲ್ಲಿಯೇ ಇರುವುದಿಲ್ಲ. ಇಲ್ಲಿ ಮಹಿಳೆಯರಿಗೆ ಹಾಗೂ ಪುರುಷರಿಗೆ ಡ್ರೆಸ್ ಕೋಡ್ ಇದೆ. ಮಿನಿ ಸ್ಕರ್ಟ್‌ಗಳು, ಶಾರ್ಟ್ಸ್ ಅಥವಾ ತೋಳಿಲ್ಲದ ಉಡುಪುಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ. ಅಲ್ಲಿ…

Read More

ಕಾರವಾರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕಾಯಕಯೋಗಿ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ  ಮೂಲಕ ಡಿ.ವೈ.ಎಸ್.ಪಿ ಗಿರೀಶ್ ಎಸ್.ವಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ನಾಮದಾರಿ ಸಮಾಜದ ಉಪಾಧ್ಯಕ್ಷ ಸುನೀಲ್ ಸೋನಿ ಮಾತನಾಡಿ, ನಾರಾಯಣ ಗುರುಗಳ ಆದರ್ಶ ತತ್ವಗಳನ್ನು ಅಳವಡಿಸಿಕೊಳ್ಳುವುದರಲ್ಲಿ ನಾವು ಹಿಂದಿದ್ದೇವೆ. ಮುಂದೆಯಾದರೂ ಅವರ ತತ್ವಗಳನ್ನು ಅಳವಡಿಸಿಕೊಂಡು ಅಖಂಡ ಭಾರತವನ್ನು ನಿರ್ಮಿಸೋಣ ಎಂದರು. ಕನ್ನಡ ಸಾಹಿತ್ಯ ಪರಿಷತ್ತ್ನ ತಾಲೂಕಾಧ್ಯಕ್ಷ ರಾಮಾ ನಾಯ್ಕ ಮಾತನಾಡಿ, ನಾರಾಯಣ ಗುರುಗಳು ಒಂದೇ ಜಾತಿಗೇ ಸಿಮೀತರಾದವರಲ್ಲ ಇಡೀ ಜಗತ್ತಿನ ಗುರುಗಳು ಆದರಿಂದ ಎಲ್ಲ ಸಮುದಾಯದವರು ಒಗ್ಗೂಡಿ ಗುರುಗಳ ಜಯಂತಿ ಆಚರಿಸಬೇಕು, ಇವರ ತತ್ವ, ಸಿದ್ದಾಂತಗಳ ಪರಿಪಲನೆಯಲ್ಲಿ ಎಲ್ಲರೂ ನಡೆಯೋಣ ಎಂದರು. ಪ್ರೊ. ಎಮ್. ಜಿ. ನಾಯ್ಕ ಬ್ರಹ್ಮಶ್ರೀ ನಾರಾಯಣಗುರು ಅವರ ಕುರಿತು ಉಪನ್ಯಾಸ ನೀಡಿ, ಕೇರಳದಲ್ಲಿ ಅಂಟಿಕೊಂಡಿದ್ದ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಶ್ರಮಿಸಿದವರು, ಅವರು ಪ್ರತಿಪಾದಿಸಿದ ತತ್ವ, ಜಗತ್ತಿನಲ್ಲಿರುವುದು,…

Read More