Author: admin

ತಿಪಟೂರು: ತಾಲೂಕಿನ ಹಾಲ್ಕುರಿಕೆ ವೃತ್ತದ ಹಾಲ್ಕುರಿಕೆ ಅಂಗನವಾಡಿ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ  ಕೆ. ಷಡಕ್ಷರಿ ಶಾಸಕರು ತಿಪಟೂರು ವಿಧಾನಸಭಾ ಕ್ಷೇತ್ರ ಹಾಗೂ ಅಧ್ಯಕ್ಷರು ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್, ರವರ  ಉಪಸ್ಥಿತಿಯಲ್ಲಿ ಹಾಗೂ  ಗ್ರಾಮ ಪಂಚಾಯಿತಿ ಅಧ್ಯಕ್ಷರಾದ  ಸೋಮಶೇಖರ್ ಅವರ ಅಧ್ಯಕ್ಷತೆಯಲ್ಲಿ ಕಟ್ಟಡವನ್ನು ಉದ್ಘಾಟನೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಾದ ಸುದರ್ಶನ್ ಅವರು, ನಿರೂಪಣಾಧಿಕಾರಿಗಳಾದ ದಿನೇಶ್ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಲೋಕೇಶ್, ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರು, ಇಲಾಖಾ ಮೇಲ್ವಿಚಾರಕರು, ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀಶಕ್ತಿ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಸ್ತ್ರೀಶಕ್ತಿ ಸಂಘದ ಸದಸ್ಯರು ಸೀಮಂತ ಕಾರ್ಯಕ್ರಮವನ್ನು ನೆರವೇರಿಸಿ ಕೊಟ್ಟರು. ವರದಿ: ಆನಂದ್ ತಿಪಟೂರು ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

Read More

ತುಮಕೂರು: ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮವು ಸ್ವಯಂ ಉದ್ಯೋಗ ಸಾಲ, ಸ್ವಯಂ ಉದ್ಯೋಗ ನೇರಸಾಲ (ಬ್ಯಾಂಕ್ ಗಳ ಸಹಯೋಗದೊಂದಿಗೆ), ಅರಿವು-ಶೈಕ್ಷಣಿಕ ಸಾಲ(ಹೊಸತು ಹಾಗೂ ನವೀಕರಣ), ವಿದೇಶಿ ವ್ಯಾಸಂಗ, ಗಂಗಾಕಲ್ಯಾಣ, ಸ್ವಾವಲಂಬಿ ಸಾರಥಿ ಯೋಜನೆಗಳಡಿ ಸಾಲ ಮತ್ತು ಸಹಾಯಧನದ ಸೌಲಭ್ಯ ಒದಗಿಸಲು ಸೇವಾಸಿಂಧು ಪೋರ್ಟಲ್ ಮೂಲಕ ಉಪ್ಪಾರ ಮತ್ತು ಇದರ ಉಪಜಾತಿಗೆ ಸೇರಿದವರಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು. ಗಂಗಾಕಲ್ಯಾಣ ಯೋಜನೆಯ ಸೌಲಭ್ಯ ಪಡೆಯಲು 18 ರಿಂದ 55 ವಯೋಮಿತಿಯೊಳಗಿನವರಾಗಿದ್ದು, ಒಂದೇ ಕಡೆ ಹೊಂದಿ ಕೊಂಡಂತೆ 2 ಎಕರೆ ಜಮೀನು ಹೊಂದಿರಬೇಕು. ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ 98,000 ರೂ. ಹಾಗೂ ನಗರ ಪ್ರದೇಶದವರಿಗೆ 1,20,000 ರೂ.ಗಳ ಒಳಗಿರಬೇಕು. ಅರಿವು ಯೋಜನೆಯ ಸೌಲಭ್ಯಕ್ಕಾಗಿ 18 ರಿಂದ 30 ವರ್ಷ ವಯೋಮಿತಿಯೊಳಗಿದ್ದು, ವಾರ್ಷಿಕ ವರಮಾನ ರೂ.3.50ಲಕ್ಷಗಳ ಮಿತಿಯಲ್ಲಿರಬೇಕು. ಸ್ವಾವಲಂಬಿ ಸಾರಥಿ ಯೋಜನೆಯ ಸೌಲಭ್ಯಕ್ಕಾಗಿ 18 ರಿಂದ 45 ವರ್ಷ ವಯೋಮಿತಿಯೊಳಗಿರಬೇಕು. ಅರ್ಜಿದಾರರ ಹೆಸರು, ಆಧಾರ್ ಕಾರ್ಡ್, ಜಾತಿ/ಆದಾಯ ಪ್ರಮಾಣ…

Read More

ತುಮಕೂರು: ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು 2024–25ನೇ ಸಾಲಿಗಾಗಿ ರೇಷ್ಮೆ ನೂಲು ಬಿಚ್ಚಾಣಿಕೆ ಉದ್ಯಮಕ್ಕೆ ಪ್ರೋತ್ಸಾಹ, ಸಿಖ್ಖಲಿಗಾರ ಸಮುದಾಯದ ಜನರ ಆರ್ಥಿಕ ಸಬಲೀಕರಣಕ್ಕೆ ಪ್ರೋತ್ಸಾಹ ಹಾಗೂ ಅಲ್ಪಸಂಖ್ಯಾತ ಸಮುದಾಯದ ಮಹಿಳಾ ಸ್ವಸಹಾಯ ಗುಂಪುಗಳಿಗೆ ಸಹಾಯಧನ ಯೋಜನೆಯಡಿ ಸಾಲ/ ಸಹಾಯಧನ ಸೌಲಭ್ಯ ನೀಡಲು ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಆರ್ಥಿಕ ಸಬಲೀಕರಣ ಹೊಂದಲಿಚ್ಛಿಸುವ ಸಿಖ್ಖಲಿಗಾರ(ಸಿಖ್ ಜನಾಂಗದವರಿಗೆ ಮಾತ್ರ) ಸಮುದಾಯದವರು ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಸಹಾಯಧನ ಸೌಲಭ್ಯ ಪಡೆಯ ಬಯಸುವ ಮಹಿಳಾ ಸ್ವಸಹಾಯ ಗುಂಪುಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮಹಿಳೆಯರು ಮಾತ್ರ ಈ ಸೌಲಭ್ಯ ಪಡೆಯಬಹುದು. ರೇಷ್ಮೆ ನೂಲು ಬಿಚ್ಚಾಣಿಕೆ ಉದ್ಯಮಕ್ಕಾಗಿ ಸಾಲ ಸೌಲಭ್ಯ ಪಡೆಯಲು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮುಸ್ಲಿಂ, ಕ್ರೈಸ್ತ, ಜೈನ, ಬೌದ್ಧ, ಸಿಖ್ ಹಾಗೂ ಪಾರ್ಸಿ ಜನಾಂಗದವರಾಗಿರಬೇಕು. ಸಾಲ/ಸಹಾಯಧನ ಸೌಲಭ್ಯ ಪಡೆಯಲಿಚ್ಛಿಸುವ ಅಲ್ಪಸಂಖ್ಯಾತ ಸಮುದಾಯದವರು ಜಾಲತಾಣ kmdconline.karnataka.gov.in ಮೂಲಕ ಆಗಸ್ಟ್ 31ರೊಳಗಾಗಿ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಮೌಲಾನಾ ಆಜಾದ್ ಭವನ, ಇಂದಿರಾ ಕಾಲೇಜು…

Read More

ತುಮಕೂರು: ಗುಬ್ಬಿ ತಾಲ್ಲೂಕು ತೋಟಗಾರಿಕೆ ಇಲಾಖೆ ವತಿಯಿಂದ ತೆಂಗು ಬೆಳೆಯನ್ನು ಉತ್ತೇಜಿಸುವ ಸಲುವಾಗಿ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಎಲ್ಲಾ ವರ್ಗದ ರೈತರಿಗೆ ಉಚಿತ ತೆಂಗಿನ ಸಸಿಗಳನ್ನು ನೀಡಲು ಉದ್ದೇಶಿಸಿದ್ದು, ಪ್ರತಿ ಫಲಾನುಭವಿಗೆ ಗರಿಷ್ಠ 1 ಹೆಕ್ಟೇರ್ ವರೆಗೆ 123 ತೆಂಗಿನ ಸಸಿಗಳನ್ನು ನೀಡಲಾಗುವುದು ಎಂದು ಗುಬ್ಬಿ ತಾಲ್ಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ. ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಅಡಿಕೆ ಬೆಳೆ ಹೊರತುಪಡಿಸಿ ಉಳಿದೆಲ್ಲಾ ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆಗಾಗಿ ಈಗಾಗಲೇ ಎಲ್ಲಾ ಪಂಚಾಯತಿ/ ವಾರ್ಡ್ ಗಳಲ್ಲಿ ಗ್ರಾಮ/ ವಾರ್ಡ್ ಸಭೆಗಳನ್ನು ಆಯೋಜಿಸಿ ಕ್ರಿಯಾ ಯೋಜನೆಯನ್ನು ತಯಾರಿಸಲಾಗುತ್ತಿದೆ. ಆಸಕ್ತ ರೈತರು ಸೂಕ್ತ ದಾಖಲೆಗಳನ್ನು ತೋಟಗಾರಿಕಾ ಇಲಾಖೆಗೆ ಸಲ್ಲಿಸುವ ಮೂಲಕ ತಮ್ಮ ತೋಟಗಾರಿಕೆ ಬೆಳೆಗಳ ಪ್ರದೇಶವನ್ನು ವಿಸ್ತರಿಸಿಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

Read More

ತುಮಕೂರು: ತೆಂಗು ಬೆಳೆಯಲ್ಲಿ ಕೆಂಪುಮೂತಿ ಹುಳುಗಳನ್ನು ಹತೋಟಿ ಮಾಡುವ ಕ್ರಮದ ಬಗ್ಗೆ ಗುಬ್ಬಿ ತಾಲ್ಲೂಕು ತೋಟಗಾರಿಕೆ ಇಲಾಖೆ ರೈತರಿಗೆ ಸಲಹೆ ನೀಡಿದೆ. ಕೆಂಪುಮೂತಿ ಕೀಟವು ತನ್ನ ಜೀವನಚಕ್ರವನ್ನು ಪೂರ್ಣಗೊಳಿಸಲು ತೆಂಗಿನ ಮರವನ್ನು ಅವಲಂಬಿಸಿರುವುದರಿಂದ ಎಲ್ಲಾ ಹಂತದಲ್ಲೂ ತೆಂಗಿಗೆ ಹಾನಿ ಉಂಟು ಮಾಡುತ್ತದೆ. ಕೆಂಪುಮೂತಿ ಹುಳುಗಳು ತೆಂಗಿನ ಮರದ ಕಾಂಡದೊಳಗೆ ಸೇರಿಕೊಂಡು ಮೃದು ಭಾಗಗಳನ್ನು ಕೊರೆಯುವುದರಿಂದ ಪ್ರಾರಂಭದಲ್ಲಿ ಸಣ್ಣ-ಸಣ್ಣ ರಂಧ್ರಗಳು ಕಾಣಿಸಿಕೊಳ್ಳುತ್ತವೆ. ಕೀಟ ಬಾಧೆಗೆ ಒಳಗಾದ ರಂಧ್ರಗಳಿಂದ ಕಂದು ಬಣ್ಣದ ರಸ ಸೋರಿರುವುದು ಹಾಗೂ ಹುಳುಗಳು ತಿಂದು ಹಾಕಿದ ನಾರು ಹೊರ ಬಂದಿರುವುದನ್ನು ಕಾಣಬಹುದಾಗಿದೆ. ಕೀಟ ಬಾಧೆಯು ತೀವ್ರವಾದಾಗ ಸುಳಿ ಗರಿಗಳು ಒಣಗಿ, ಹಾನಿಗೊಳಗಾದ ಭಾಗಗಳ ಹತ್ತಿರ ಎಲೆಯ ತೊಟ್ಟು(ಎಡಮಟ್ಟೆ)ಗಳು ಸೀಳುತ್ತವೆ. ಕೆಂಪು ಮೂತಿ ಹುಳುವಿನ ಬಾಧೆಯನ್ನು ಖಚಿತಪಡಿಸಿಕೊಳ್ಳಲು ನಿಶ್ಯಬ್ದ ಸಮಯದಲ್ಲಿ ತೆಂಗಿನ ಮರದ ಕಾಂಡಕ್ಕೆ ಕಿವಿಯನ್ನಿಟ್ಟು ಆಲಿಸಿದಾಗ ಹುಳುಗಳು ತಿನ್ನುತ್ತಿರುವ ಶಬ್ದವನ್ನು ಕೇಳಿಸಿಕೊಳ್ಳಬಹುದು. ಈ ಕೀಟವು ಎಳೆಯ ವಯಸ್ಸಿನ ತೆಂಗಿನ ಮರಗಳಿಗೆ ಹೆಚ್ಚು ಹಾನಿಕಾರಕವಾಗಿದೆ. ಸಾಮಾನ್ಯವಾಗಿ 5 ರಿಂದ 20 ವರ್ಷ…

Read More

ತುಮಕೂರು: ಮಹಾರಾಷ್ಟ್ರದ ನಾಗಪುರ ದೀಕ್ಷಾ ಭೂಮಿಯಲ್ಲಿ ಅಕ್ಟೋಬರ್ 12ರಂದು ನಡೆಯಲಿರುವ ದಮ್ಮ ಪ್ರವರ್ತನ ದಿನ ಕಾರ್ಯಕ್ರಮಕ್ಕೆ ಯಾತ್ರೆ ಕೈಗೊಳ್ಳಲಿಚ್ಛಿಸುವ ಡಾ.ಬಿ.ಆರ್. ಅಂಬೇಡ್ಕರ್ ಅವರ ಅನುಯಾಯಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಮಧುಗಿರಿ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ದೀಕ್ಷಾ ಭೂಮಿಯಲ್ಲಿ ಅಕ್ಟೋಬರ್ 10 ರಿಂದ 14 ರವರೆಗೆ ನಡೆಯುವ ದಮ್ಮ ಪ್ರವರ್ತನ ದಿನ ಕಾರ್ಯಕ್ರಮಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಅನುಯಾಯಿಗಳನ್ನು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಕಳುಹಿಸಿಕೊಡಲು ಸಾರಿಗೆ ವ್ಯವಸ್ಥೆ/ರೈಲಿನ ವ್ಯವಸ್ಥೆ ಕಲ್ಪಿಸುವ ಸಂಬಂಧ ಅರ್ಹ ಯಾತ್ರಾರ್ಥಿಗಳನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಡಾ.ಬಿ.ಆರ್ ಅಂಬೇಡ್ಕರ್ ಅನುಯಾಯಿಗಳು ಸಮಾಜ ಕಲ್ಯಾಣ ಇಲಾಖೆಯ ವೆಬ್ಸೈಟ್ ಗೆ ಭೇಟಿ ನೀಡಿ ಆಗಸ್ಟ್ 31ರೊಳಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದೆಂದು ಅವರು ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

Read More

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್​​​​​ನ A1 ಆರೋಪಿ ಹಾಗೂ ನಟ ದರ್ಶನ್​​ ಆಪ್ತೆ ಪವಿತ್ರಾಗೌಡ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಹತ್ಯೆಯಾದ ರೇಣುಕಾಸ್ವಾಮಿ ಪವಿತ್ರಾಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಎಂಬ ಕಾರಣಕ್ಕೆ ರೇಣುಕಾಸ್ವಾಮಿಯನ್ನು ಸಂಚು ರೂಪಿಸಿ ಚಿತ್ರದುರ್ಗದಿಂದ ಬೆಂಗಳೂರಿನ ಪಟ್ಟಣಗೆರೆ ಶೆಡ್​​​ಗೆ ಕರೆತಂದು ಕೊಲೆ ಮಾಡಿರುವ ಪ್ರಕರಣ ಇದಾಗಿದೆ. ಈಗಾಗಲೇ ಕೊಲೆ ಪ್ರಕರಣದ ತನಿಖೆಯು ಮುಕ್ತಾಯ ಹಂತಕ್ಕೆ ಬಂದಿದ್ದು, ಸದ್ಯದಲ್ಲೇ ಚಾರ್ಜ್​​ಶೀಟ್​ ಸಲ್ಲಿಕೆ ಮಾಡುವುದಾಗಿ ಇತ್ತೀಚೆಗೆ ಪೊಲೀಸ್ ಕಮಿಷನರ್​​ ದಯಾನಂದ್​ ಅವರು ಹೇಳಿದ್ದರು.ಚಾರ್ಜ್​​​ಶೀಟ್​​ ಸಲ್ಲಿಕೆ ಹೊತ್ತಲ್ಲಿ ಪವಿತ್ರಾಗೌಡ ಜಾಮೀನಿಗಾಗಿ ಕೋರ್ಟ್​​​ಗೆ ಮೊರೆ ಹೋಗಿದ್ದಾರೆ. ಕೊಲೆ ಪ್ರಕರಣದ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುರುವ ಆರೋಪಿ ಪವಿತ್ರಾಗೌಡ 72 ದಿನಗಳ ಬಳಿಕ ಹಿರಿಯ ವಕೀಲೆ ರೇನಿ ಸೆಬಾಸ್ಟಿಯನ್​​ ಅವರ ಮೂಲಕ ಸಿಸಿಹೆಚ್​​ ​​57ನೇ ಕೋರ್ಟ್​​ನಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಕೊಲೆ ಪ್ರಕರಣದಲ್ಲಿ ಒಟ್ಟು 17 ಆರೋಪಿಗಳು ಜೈಲು ಸೇರಿದ್ದು, ಆ ಪೈಕಿ ದರ್ಶನ್​​ A2 ಆರೋಪಿಯಾಗಿದ್ದಾರೆ. ಕೊಲೆ ಪ್ರಕರಣದ ಆರೋಪದಲ್ಲಿ ಪರಪ್ಪನ ಅಗ್ರಹಾರ…

Read More

ಹೆಂಡತಿ ತವರಿಗೆ ಹೋಗಬೇಕು ಎಂದಿದ್ದಕ್ಕೆ ಗಂಡ ಆಕೆಯ ಮೂಗು ಕತ್ತರಿಸಿದ್ದಾನೆ. ಉತ್ತರ ಪ್ರದೇಶದ ಹಾರ್ಡೋಯಿ ಜಿಲ್ಲೆಯ ಬನಿಯಾನಿ ಪುರ್ವಾದಲ್ಲಿ ಈ ಘಟನೆ ನಡೆದಿದೆ. ಭಾನುವಾರ ಮಹಿಳೆ ನಾಳೆ ರಾಖಿ ಹಬ್ಬ ಇದೆ ಸಹೋದರರಿಗೆ ರಾಖಿ ಕಟ್ಟಬೇಕು ತವರಿಗೆ ಹೋಗುತ್ತೇನೆ ಎಂದು ಗಂಡನಿಗೆ ಹೇಳಿದ್ದಾಳೆ. ಇಷ್ಟಕ್ಕೇ ಆಕ್ರೋಶಗೊಂಡ ಗಂಡ ಆಕೆಯ ಮೂಗು ಕತ್ತರಿಸಿದ್ದಾನೆ. 25 ವರ್ಷದ ಅನಿತಾ ಎಂಬಾಕೆಯೇ ಗಂಡನ ದಾಳಿಗೆ ತುತ್ತಾದ ಮಹಿಳೆ.ಅನಿತಾಗೆ ತೀವ್ರ ರಕ್ತಸ್ರಾವ ಆಗುತ್ತಿರುವುದನ್ನು ಕಂಡ ಅಕ್ಕಪಕ್ಕದ ಜನ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.ನಂತರ ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಲಕ್ನೋದ ಟ್ರಾಮಾ ಸೆಂಟರ್ಗೆ ಸ್ಥಳಾಂತರ ಮಾಡಲಾಗಿದೆ. ರಾಹುಲ್ ಎಂಬಾತನೇ ತನ್ನ ಹೆಂಡತಿಯ ಮೂಗು ಕತ್ತರಿಸಿದಾತ. ಗಂಡನ ಕ್ರೌರ್ಯದ ಬಗ್ಗೆ ಅನಿತಾ ವಿವರವಾಗಿ ಹೇಳಿ ಗೋಳು ತೋಡಿಕೊಂಡಿದ್ದಾಳೆ. ಆರೋಪಿ ನಾಪತ್ತೆಯಾಗಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ಕುರಿತು ವಿಡಿಯೋ ಮಾಡಿರುವ ಆ ಮಹಿಳೆ ತನ್ನ ಮೇಲೆ ಗಂಡ ಮಾಡಿದ ದೌರ್ಜನ್ಯದ ಬಗ್ಗೆ ಹೇಳಿಕೊಂಡಿದ್ದಾಳೆ. ತನ್ನ ಪತಿ ತನ್ನ ಮೂಗು ಕತ್ತರಿಸಿದ್ದಾನೆ…

Read More

ಯಶವಂತಪುರ ರೈಲು ನಿಲ್ದಾಣದ (Yeshavantpur railway station) ಪ್ಲಾಟ್​ಫಾರಂಗಳಲ್ಲಿ ಏರ್​-ಕಾನ್ಕೋರ್ಸ್ ಅಳವಡಿಕೆ ಕಾಮಗಾರಿ ಆರಂಭವಾಗಲಿದೆ. ಹೀಗಾಗಿ ನಿಲ್ದಾಣದ 2, 3, 4, 5 ಪ್ಲಾಟ್​ಫಾರಂಗಳನ್ನು 15 ದಿನಗಳ ಕಾಲ ಬಂದ್​ ಮಾಡಲಾಗುತ್ತದೆ. ಹಾಗೆ ಕೆಲ ರೈಲುಗಳ ಸಂಚಾರವನ್ನು ಬಂದ್​ ಮಾಡಲಾಗಿದೆ. ಆಗಸ್ಟ್​ 21 ರಿಂದ ಸೆಪ್ಟೆಂಬರ್​​ 4ರ ವರೆಗೆ 2 ಮತ್ತು 3ನೇ ಪ್ಲಾಟ್​ಫಾರಂ ಬಂದ್​ ಆಗಲಿದೆ. ನಂತರ ಸೆಪ್ಟೆಂಬರ್​ 5 ರಿಂದ 19ರ ವರೆಗೆ 4 ಮತ್ತು 5ನೇ ಪ್ಲಾಟ್​ಫಾರಂ ಕ್ಲೋಸ್​ ಆಗಲಿದೆ ಎಂದು ನೈಋತ್ಯ ರೈಲ್ವೆ ವಲಯ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ರೈಲು ರದ್ದು ವಿವರ ಈ ಕೆಳಗಿನಂತಿದೆ. 06576 ತುಮಕೂರು-ಕೆಎಸ್‌ಆರ್ ಬೆಂಗಳೂರು ಮತ್ತು 06575 ಕೆಎಸ್‌ಆರ್ ಬೆಂಗಳೂರು-ತುಮಕೂರು ರೈಲು ಆಗಸ್ಟ್​​ 21 ರಿಂದ 31 ಮತ್ತು ಸೆಪ್ಟೆಂಬರ್​​ 1 ರಿಂದ 19ರವರೆಗೆ ರದ್ದುಪಡಿಸಲಾಗಿದೆ. ರೈಲು ಸಂಖ್ಯೆ 06574, 06580 ತುಮಕೂರು-ಯಶವಂತಪುರ ರೈಲು ಆಗಸ್ಟ್​​ 21 ರಿಂದ 31 ಮತ್ತು ಸೆಪ್ಟೆಂಬರ್​​ 1 ರಿಂದ 19ರವರೆಗೆ ಚಿಕ್ಕಬಾಣಾವರ-ಯಶವಂತಪುರ ನಡುವೆ…

Read More

ಒಮ್ಮೆ ಸಿಂಹಳಪುರದ ಅರಸು ವೀರಬಲ್ಲಾಳನು ತನ್ನ ಸಕಲ ಸೈನ್ಯ ತೆಗೆದುಕೊಂಡು ಪಕ್ಕದ ರಾಜ್ಯ ವಿಕ್ರಮಪುರಿ ವಶಪಡಿಸಿಕೊಳ್ಳಲು ತಯಾರು ನಡೆಸಿದ. ಅದರಂತೆ ವಿಕ್ರಮಪುರದ ಗಡಿವರೆವಿಗೂ ಸೈನ್ಯ ತೆಗೆದುಕೊಂಡು ಹೋದ, ಆದರೆ ಇದಕ್ಕೆ ತಕ್ಕ ಉತ್ತರ ಕೊಡಲು ವಿಕ್ರಮಪುರ ಅರಸ ಚಂದ್ರಚೂಡನು ಸರಿಯಾಗಿ ತಯಾರು ಮಾಡಿಕೊಂಡಿದ್ದ. ಮತ್ತು ಅವರ ಆಕ್ರಮಣಕ್ಕಾಗಿ ಕಾಯುತ್ತಿದ್ದ ನಂತರ ವೀರಬಲ್ಲಾಳನು ನೋಡು ಚಂದ್ರಚೂಡ ನೀನಾಗಿಯೇ ಶರಣಾದರೆ ಸರಿ ಇಲ್ಲವಾದರೆ ಆಕ್ರಮಣ ನಡೆಸಬೇಕಾಗುತ್ತದೆ ಮತ್ತು ಗೆಲುವು ನಮ್ಮದಾಗುತ್ತದೆ ಎನ್ನುವಾಗ ಪಕ್ಕದ ಮರದ ಕೊಂಬೆಯಲ್ಲಿದ್ದ ಹಲ್ಲಿ ಲೊಚ್ ಲೊಚ್ ಎಂದು ಲೊಚಗುಟ್ಟಿತು, ಇದನ್ನು ಗಮನಿಸಿದ ರಾಜಪುರೋಹಿತ ಮಹಾರಾಜರೇ ಅವರ ಉತ್ತರಕ್ಕಾಗಿ ಕಾಯುವುದು ಬೇಡ ಹಲ್ಲಿ ಲೊಚಗುಟ್ಟಿದೆ, ಶುಭ ಸಂಕೇತ, ಗೆಲುವು ನಮ್ಮದೇ ಆಕ್ರಮಣ ನಡೆಸಿ ಎಂದಾಗ ಪಲ್ಲಿಯು ಮನದಲ್ಲಿ ಅಯ್ಯೋ ಮೂರ್ಖ ರಾಜಪುರೋಹಿತರೇ ನಾನು ಲೊಚಗುಟ್ಟಿದ್ದು ನನಗೆ ದಣಿವಾಗಿ ನೀರು ಬೇಕಿತ್ತು ಅಷ್ಟೇ ನಿಮಗೆ ಶುಭ ಸಂಕೇತ ನೀಡಲು ಅಲ್ಲ ಏಕೆ ಹೀಗೆ ಯೋಚಿಸಿದಿರಿ ಎನ್ನುವಾಗಲೇ ರಾಜ ವೀರಭಲ್ಲಾಳ ಹೌದ ರಾಜಪುರೋಹಿತರೆ ಹಾಗಾದರೆ…

Read More