ಯಶವಂತಪುರ ರೈಲು ನಿಲ್ದಾಣದ (Yeshavantpur railway station) ಪ್ಲಾಟ್ಫಾರಂಗಳಲ್ಲಿ ಏರ್-ಕಾನ್ಕೋರ್ಸ್ ಅಳವಡಿಕೆ ಕಾಮಗಾರಿ ಆರಂಭವಾಗಲಿದೆ. ಹೀಗಾಗಿ ನಿಲ್ದಾಣದ 2, 3, 4, 5 ಪ್ಲಾಟ್ಫಾರಂಗಳನ್ನು 15 ದಿನಗಳ ಕಾಲ ಬಂದ್ ಮಾಡಲಾಗುತ್ತದೆ. ಹಾಗೆ ಕೆಲ ರೈಲುಗಳ ಸಂಚಾರವನ್ನು ಬಂದ್ ಮಾಡಲಾಗಿದೆ.
ಆಗಸ್ಟ್ 21 ರಿಂದ ಸೆಪ್ಟೆಂಬರ್ 4ರ ವರೆಗೆ 2 ಮತ್ತು 3ನೇ ಪ್ಲಾಟ್ಫಾರಂ ಬಂದ್ ಆಗಲಿದೆ. ನಂತರ ಸೆಪ್ಟೆಂಬರ್ 5 ರಿಂದ 19ರ ವರೆಗೆ 4 ಮತ್ತು 5ನೇ ಪ್ಲಾಟ್ಫಾರಂ ಕ್ಲೋಸ್ ಆಗಲಿದೆ ಎಂದು ನೈಋತ್ಯ ರೈಲ್ವೆ ವಲಯ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ರೈಲು ರದ್ದು ವಿವರ ಈ ಕೆಳಗಿನಂತಿದೆ.
06576 ತುಮಕೂರು-ಕೆಎಸ್‌ಆರ್ ಬೆಂಗಳೂರು ಮತ್ತು 06575 ಕೆಎಸ್‌ಆರ್ ಬೆಂಗಳೂರು-ತುಮಕೂರು ರೈಲು ಆಗಸ್ಟ್ 21 ರಿಂದ 31 ಮತ್ತು ಸೆಪ್ಟೆಂಬರ್ 1 ರಿಂದ 19ರವರೆಗೆ ರದ್ದುಪಡಿಸಲಾಗಿದೆ.
ರೈಲು ಸಂಖ್ಯೆ 06574, 06580 ತುಮಕೂರು-ಯಶವಂತಪುರ ರೈಲು ಆಗಸ್ಟ್ 21 ರಿಂದ 31 ಮತ್ತು ಸೆಪ್ಟೆಂಬರ್ 1 ರಿಂದ 19ರವರೆಗೆ ಚಿಕ್ಕಬಾಣಾವರ-ಯಶವಂತಪುರ ನಡುವೆ ಭಾಗಶಃ ರದ್ದಾಗಲಿದೆ. ರೈಲು ಸಂಖ್ಯೆ 06591, 06592 ಯಶವಂತಪುರ-ಹೊಸೂರು ಮಧ್ಯೆ, ಸಂಚರಿಸುವ ರೈಲು ಆಗಸ್ಟ್ 21 ರಿಂದ 31 ಮತ್ತು ಸೆಪ್ಟೆಂಬರ್ 1 ರಿಂದ 19ರವರೆಗೆ ಯಶವಂತಪುರ-ಹೆಬ್ಬಾಳ ನಡುವೆ ಭಾಗಶಃ ರದ್ದಾಗಲಿದೆ.
ರೈಲು ಸಂಖ್ಯೆ 06593, 06594 ಯಶವಂತಪುರ-ಚಿಕ್ಕಬಳ್ಳಾಪುರ ರೈಲು ಸಂಚಾರ ಆಗಸ್ಟ್ 21 ರಿಂದ 31 ಮತ್ತು ಸೆಪ್ಟೆಂಬರ್ 1 ರಿಂದ 19ರವರೆಗೆ ಯಶವಂತಪುರ-ಯಲಹಂಕ ನಡುವೆ ಭಾಗಶಃ ರದ್ದಾಗಲಿದೆ.
ಯಶವಂತಪುರ-ಹೊಸೂರು (06393, 06393) ರೈಲು ಆಗಸ್ಟ್ 21 ರಿಂದ 31 ಮತ್ತು ಸೆಪ್ಟೆಂಬರ್ 1 ರಿಂದ 19ರವರೆಗೆ ಯಶವಂತಪುರ-ಹೆಬ್ಬಾಳ ನಡುವೆ ಭಾಗಶಃ ಸಂಚರಿಸುವುದಿಲ್ಲ. ಯಶವಂತಪುರ-ತುಮಕೂರು (06573) ರೈಲು ಆಗಸ್ಟ್ 21 ರಿಂದ 31 ಮತ್ತು ಸೆಪ್ಟೆಂಬರ್ 1 ರಿಂದ 19ರವರೆಗೆ ಯಶವಂತಪುರ-ಚಿಕ್ಕಬಾಣಾವರ ನಡುವೆ ಭಾಗಶಃ ರದ್ದಾಗಲಿದೆ.
ಚಿಕ್ಕಮಗಳೂರು-ಯಶವಂತಪುರ (16239, 16240) ರೈಲು ಆಗಸ್ಟ್ 21 ರಿಂದ 31 ಮತ್ತು ಸೆಪ್ಟೆಂಬರ್ 1 ರಿಂದ 19ರವರೆಗೆ ಚಿಕ್ಕಬಾಣಾವರ-ಯಶವಂತಪುರ ನಡುವೆ ಭಾಗಶಃ ಸಂಚರಿಸುವುದಿಲ್ಲ.
ಮೈಸೂರು-ಯಶವಂತಪುರ (16207, 16208) ಆಗಸ್ಟ್ 21 ರಿಂದ 31 ಮತ್ತು ಸೆಪ್ಟೆಂಬರ್ 1 ರಿಂದ 19ರವರೆಗೆ ಚಿಕ್ಕಬಾಣಾವರ-ಯಶವಂತಪುರ ನಡುವೆ ಭಾಗಶಃ ರದ್ದಾಗಲಿದೆ.
ರೈಲು ಸಂಖ್ಯೆ 22697 ಎಸ್‌ಎಸ್‌ಎಸ್ ಹುಬ್ಬಳ್ಳಿ-ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲು, ಆಗಸ್ಟ್ 24 ಮತ್ತು 31, 2024 ಮತ್ತು ಸೆಪ್ಟೆಂಬರ್ 7 ಮತ್ತು 14 ರಂದು ಹುಬ್ಬಳ್ಳಿ, ಅರಸೀಕೆರೆ, ಚಿಕ್ಕಬಾಣಾವರ, ಯಶವಂತಪುರ ‘ಎ’ ಕ್ಯಾಬಿನ್, ಲೊಟ್ಟೆಗೊಲ್ಲಹಳ್ಳಿ, ಲೊಟ್ಟೆಗೊಲ್ಲಹಳ್ಳಿ ಮೂಲಕ ಸಂಚರಿಸುತ್ತದೆ. SMVT ಬೆಂಗಳೂರು ಮತ್ತು ಕೃಷ್ಣರಾಜಪುರಂ ನಿಲ್ದಾಣಗಳಲ್ಲೂ ರೈಲು ನಿಲ್ಲುತ್ತದೆ.
ರೈಲು ಸಂಖ್ಯೆ 06511 ಬಾಣಸವಾಡಿ-ತುಮಕೂರು ಎಕ್ಸ್‌ಪ್ರೆಸ್ ವಿಶೇಷ ರೈಲು, ಆಗಸ್ಟ್ 21 ರಿಂದ ಸೆಪ್ಟೆಂಬರ್ 19ರವರೆಗೆ ಬಾಣಸವಾಡಿ, ಯಶವಂತಪುರ ‘ಎ’ ಕ್ಯಾಬಿನ್, ಚಿಕ್ಕಬಾಣಾವರ ಮತ್ತು ತುಮಕೂರು ನಿಲ್ದಾಣಗಳ ಮೂಲಕ ಸಂಚರಿಸುತ್ತದೆ.
ರೈಲು ಸಂಖ್ಯೆ. 11311, 11312 ಸೋಲಾಪುರ-ಹಾಸನ ಎಕ್ಸ್‌ಪ್ರೆಸ್ ರೈಲು, ಆಗಸ್ಟ್ 20 ರಿಂದ ಸೆಪ್ಟೆಂಬರ್ 18ರವರೆಗೆ ಯಲಹಂಕ, ಯಶವಂತಪುರ ‘ಎ’ ಕ್ಯಾಬಿನ್ ಮತ್ತು ಚಿಕ್ಕಬಾಣಾವರ ನಿಲ್ದಾಣಗಳ ಮೂಲಕ ಸಂಚರಿಸುತ್ತದೆ. ಮಾರ್ಗ ಬದಲಾವಣೆಯ ಎಲ್ಲ ರೈಲುಗಳು ಯಶವಂತಪುರ ನಿಲ್ದಾಣದಲ್ಲಿ ನಿಲ್ಲುವುದಿಲ್ಲ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q