Subscribe to Updates
Get the latest creative news from FooBar about art, design and business.
- ಬಡ ರೈತರಿಗೆ ಸರಕಾರ ಹಕ್ಕು ನೀಡಿ ಬದುಕಲು ಬಿಡಬೇಕು: ಬಸವರಾಜಪ್ಪ
- ಸರಗೂರು: SSLC ವಿದ್ಯಾರ್ಥಿಗಳಿಗೆ ಟ್ಯೂಷನ್ ಕ್ಲಾಸ್ ತರಬೇತಿ
- ರೈತರ ಜಮೀನಿಗೆ ನುಗ್ಗಿದ ಕಾಡಾನೆಗಳು: ಲಕ್ಷಾಂತರ ಬೆಲೆಬಾಳುವ ರಾಗಿ, ಜೋಳ ಆನೆಗೆ ಆಹಾರ: ರೈತರು ಕಂಗಾಲು
- ಅಟಲ್ ಜಿ ಆದರ್ಶಗಳು ಸದಾಕಾಲ ಪ್ರೇರಣೆ: ಕೇಂದ್ರ ಸಚಿವ ಸೋಮಣ್ಣ
- ನಮ್ಮೂರ ಶಾಲೆ ಉಳಿಸಿ: ಎಐಡಿಎಸ್ ಓ, ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಪ್ರತಿಭಟನೆ
- “ಕರಿಕಾಡ” ಚಿತ್ರದ “ಕಬ್ಬಿನ ಜಲ್ಲೆ” ಹಾಡಿಗೆ ವೀಕ್ಷಕ ಫಿದಾ, 2026 ಫೆಬ್ರವರಿ 6ಕ್ಕೆ ವಿಶ್ವಾದ್ಯಂತ ರಿಲೀಸ್
- ವಿದ್ಯಾರ್ಥಿಗಳ ಕಡೆ ಕುವೆಂಪು ಭಾವಗೀತೆಗಳ ನಡೆ: ಕುವೆಂಪು ಗೀತೆಗಳಲ್ಲಿ ಮಾನವೀಯತೆ ಸ್ಪರ್ಶ
- ಕುಣಿಗಲ್ ನಲ್ಲಿ ಕಸಾಪ ಭವನದ ಗ್ರಂಥಾಲಯ ಲೋಕಾರ್ಪಣೆ: “ರಾಜಕೀಯ ಸ್ವಾರ್ಥಕ್ಕೆ ಧರ್ಮ, ಜಾತಿಗಳ ಕಂದಕ ಸೃಷ್ಟಿ”
Author: admin
ಬೆಂಗಳೂರು: ಮಹಿಳೆ ಸೀರೆ ಕದ್ದಳೆಂದು ಆರೋಪಿಸಿ ಅವಳನ್ನು ರಸ್ತೆಗೆ ಎಳೆದುಕೊಂಡು ಹೋಗಿ ಪದೇ ಪದೆ ಹೊಡೆದು ಕಾಲಿನಿಂದ ಒದ್ದು ನಂತರ ಅವಳನ್ನು ಪೊಲೀಸರಿಗೆ ಒಪ್ಪಿಸಿರುವ ಘಟನೆಯೊಂದು ಬೆಂಗಳೂರಿನ ಅವೆನ್ಯೂ ರಸ್ತೆಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಮಹಿಳೆ ವಿರುದ್ಧ ಕಳ್ಳತನ ಪ್ರಕರಣ ದಾಖಲಾದರೆ, ಅಂಗಡಿ ಮಾಲಿಕನ ವಿರುದ್ಧ ಹಲ್ಲೆ ಪ್ರಕರಣ ದಾಖಲಾಗಿದ್ದು, ಅಂಗಡಿ ಮಾಲೀಕ ಮತ್ತು ಆತನ ಸಹಚರನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯ ವಿವರ: ಮಹಿಳೆ ಅಂಗಡಿಯೊಳಗೆ ನಿಂತು ಸೀರೆಗಳ ಬಂಡಲ್ ತೆಗೆದುಕೊಂಡು ಹೋಗಲು ಪ್ರಯತ್ನಿಸಿದ್ದಾಳೆ, ನಂತರ, ಮಹಿಳೆ ಪ್ಯಾಕ್ ಮಾಡಿದ ಬಂಡಲ್ ಅನ್ನು ಹೊರಗೆ ತೆಗೆದುಕೊಂಡು ಹೋಗಿದ್ದಾಳೆ. ನಂತರ ಮಹಿಳೆ ಹೆಚ್ಚಿನ ಸೀರೆ ಕಳ್ಳತನ ಮಾಡಲು ಅದೇ ಅಂಗಡಿಗೆ ಬಂದಿದ್ದಳು. ಆದರೆ ಈ ಬಾರಿ ಅಂಗಡಿಯವನು ಅವಳನ್ನು ಗುರುತಿಸಿ ರೆಡ್ ಹ್ಯಾಂಡ್ ಆಗಿ ಹಿಡಿದನು. ಕೋಪದಿಂದ, ಅಂಗಡಿಯವನು ಅವಳನ್ನು ರಸ್ತೆಗೆ ಎಳೆದುಕೊಂಡು ಹೋಗಿ ಪದೇ ಪದೆ ಹೊಡೆದು ಕಾಲಿನಿಂದ ಒದ್ದು ನಂತರ ಅವಳನ್ನು ಪೊಲೀಸರಿಗೆ ಒಪ್ಪಿಸಿದನು. ಹತ್ತಿರದಲ್ಲಿ ನಿಂತಿದ್ದ ಅಂಗಡಿಯವರು ಮತ್ತು…
ಬೆಂಗಳೂರು: ನಟ ಉಪೇಂದ್ರ ಮತ್ತು ಪತ್ನಿ ಪ್ರಿಯಾಂಕಾ ಮೊಬೈಲ್ ಹ್ಯಾಕ್ ಪ್ರಕರಣದ ತನಿಖೆ ನಡೆಸುತ್ತಿರುವ ಸದಾಶಿವನಗರ ಪೊಲೀಸರು ಹ್ಯಾಕರ್ ಗಳ ಮೂಲ ಪತ್ತೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ವರದಿಗಳ ಪ್ರಕಾರ, ಉಪೇಂದ್ರ ಮತ್ತು ಪ್ರಿಯಾಂಕಾ ಉಪೇಂದ್ರ ಮೊಬೈಲ್ ಹ್ಯಾಕ್ ಮಾಡಿರುವ ವಂಚಕರು ಬಿಹಾರ ಮೂಲದವರು ಎಂದು ತಿಳಿದುಬಂದಿದೆ. ಆರೋಪಿಗಳು ಬಿಹಾರದಿಂದಲೇ 4–5 ಜನರಿಂದ ಉಪೇಂದ್ರ ದಂಪತಿಯ ಮೊಬೈಲ್ ನಂಬರ್ ಹ್ಯಾಕ್ ಮಾಡಿ, ಹಣ ಕೇಳಿದ್ದು, ಸುಮಾರು 1.65 ಲಕ್ಷ ರೂ. ಹಣ ಪಡೆದುಕೊಂಡು, 4 ಅಕೌಂಟ್ ಗಳಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ. ಆ ನಾಲ್ಕು ಅಕೌಂಟ್ ಗಳು ಕೂಡ ನಕಲಿ ಆಗಿದ್ದು, ಅದೇ ನಂಬರ್ ಬಳಸಿ, ಅದೇ ದಿನ ತಮಿಳುನಾಡು, ಆಂಧ್ರಪ್ರದೇಶದಲ್ಲೂ ಕೆಲವರ ಮೊಬೈಲ್ ಗಳನ್ನು ಹ್ಯಾಕ್ ಮಾಡಿದ್ದಾರೆ. ಸದ್ಯ ಸದಾಶಿವನಗರ ಪೊಲೀಸರು, ಹ್ಯಾಕರ್ ಗಳ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಿದ್ದು, ಬಿಹಾರಕ್ಕೆ ವಿಶೇಷ ತಂಡ ಕಳುಹಿಸಲು ಸಿದ್ದತೆ ನಡೆಸಿದ್ದಾರೆಂದು ತಿಳಿದಬಂದಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು…
ಬೀದರ್ : ರಾಜ್ಯ ಸರ್ಕಾರವು ಆರಂಭಿಸಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ “ಹಿಂದು” ಮತ್ತು ಜಾತಿ ಕಾಲಂನಲ್ಲಿ “ಮಾದಿಗ” ಎಂದು ಕಡ್ಡಾಯವಾಗಿ ಬರೆಯಬೇಕು ಎಂದು ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಕಾರ್ಯಾಧ್ಯಕ್ಷ ಫರ್ನಾಂಡಿಸ್ ಹಿಪ್ಪಳಗಾಂವ್ ಅವರು ಒತ್ತಾಯಿಸಿದರು. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅವರು, ನಾವು ಈ ನೆಲದ ಮಕ್ಕಳು, ಬಹುದಿನಗಳ ನಮ್ಮ ಬೇಡಿಕೆಯಾಗಿದ್ದ ಒಳ ಮೀಸಲಾತಿ ಕೊನೆಗೂ ಜಾರಿಯಾಗಿದ್ದು, ಸಂತೋಷದ ವಿಷಯವಾಗಿದೆ. ಈಗ ಮತ್ತೆ ರಾಜ್ಯ ಸರ್ಕಾರ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಆರಂಭಿಸಿದೆ. ನಾವು ಆದಿ ಜಾಂಬವ ವಂಶಸ್ಥರು. ಹಾಗಾಗಿ ನಮ್ಮ ಪೂರ್ವಜರೆಲ್ಲರೂ ಮೂಲತಃ ಹಿಂದುಗಳಾಗಿದ್ದಾರೆ. ಹಾಗಾಗಿ ನಾವು ಧರ್ಮದ ಕಾಲಂನಲ್ಲಿ ಕಡ್ಡಾಯವಾಗಿ ಹಿಂದು ಎಂದು ಬರೆಸಬೇಕು ಎಂದರು. ಸಮುದಾಯದ ಹಳ್ಳಿ ಕಡೆಗಳಲ್ಲಿ “ಮಾಂಗ್”, “ಮಾತಂಗ್” ಎಂಬ ಹೆಸರುಗಳು ಬಳಸಲಾಗುತ್ತಿದ್ದರೂ, ಸಮುದಾಯದ ಸದಸ್ಯರು ಕೇವಲ ಜಾತಿ ಕಾಲಂನಲ್ಲಿ ಮಾದಿಗ ಎಂದು ದಾಖಲಿಸಬೇಕು ಎಂದು ಒತ್ತಾಯಿಸಿದರು. ಸಂದರ್ಭದಲ್ಲಿ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಕಮಲಾಕರ್ ಹೆಗಡೆ,…
ಬೀದರ್: ರಾಜ್ಯ ಸರ್ಕಾರದಿಂದ ನಡೆಯುತ್ತಿರುವ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ವೇಳೆ ನೆಟ್ ವರ್ಕ್ ಸಮಸ್ಯೆ ಎದುರಿಸಿದ ಶಿಕ್ಷಕರೊಬ್ಬರು ಮರ ಹತ್ತಿದ ಘಟನೆ ಬಸವಕಲ್ಯಾಣ ತಾಲ್ಲೂಕಿನ ಮಿರಖಲ್ ಗ್ರಾಮದಲ್ಲಿ ಬುಧವಾರ ನಡೆದಿದೆ. ಸಮೀಕ್ಷೆಗೆ ನಿಯುಕ್ತಿಗೊಂಡಿದ್ದ ಮಿರಖಲ್ ಗ್ರಾಮದ ಸರ್ಕಾರಿ ಶಾಲಾ ಶಿಕ್ಷಕ ಗೋವಿಂದ ಮಹಾರಾಜ ನೆಟ್‌ವರ್ಕ್‌ಗಾಗಿ ಮರ ಹತ್ತಿದ್ದಾರೆ. ಆದರೆ, ಮರ ಹತ್ತಿದ ನಂತರವೂ ಸರಿಯಾದ ನೆಟ್‌ವರ್ಕ್ ಸಿಗದೆ ಮರದಿಂದ ಕೆಳಗಿಳಿದಿದ್ದಾರೆ ಎಂದು ತಿಳಿದು ಬಂದಿದೆ. ಸೆ.22ರಿಂದ ರಾಜ್ಯ ಸರ್ಕಾರ ಸಮೀಕ್ಷೆ ಆರಂಭಿಸಿದ್ದು, ಗಡಿ ಭಾಗದಲ್ಲಿರುವ ಮಿರಖಲ್ ಗ್ರಾಮದಲ್ಲಿ ನೆಟ್ ವರ್ಕ್ ಸಮಸ್ಯೆ ಹೆಚ್ಚಾಗಿ ಇರುವುದರಿಂದ ಅವರು ಮರಕ್ಕೆ ಹತ್ತಿದ್ದಾರೆ ಎಂದು ತಿಳಿದು ಬಂದಿದೆ. ವರದಿ: ಅರವಿಂದ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ನವದೆಹಲಿ: ರಷ್ಯಾ ಜೊತೆಗಿನ ಭಾರತದ ದೀರ್ಘಕಾಲದ ಪಾಲುದಾರಿಕೆಯನ್ನು ಮತ್ತು ಉಭಯ ದೇಶಗಳ ಬಂಧವನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು. ಮೂರನೇ ಆವೃತ್ತಿಯ ಉತ್ತರ ಪ್ರದೇಶ ಅಂತಾರಾಷ್ಟ್ರೀಯ ವ್ಯಾಪಾರ ಪ್ರದರ್ಶನ –2025ಕ್ಕೆ ಗೌತಮಬುದ್ಧನಗರ ಜಿಲ್ಲೆಯ ಗ್ರೇಟರ್ ನೋಯ್ಡಾದಲ್ಲಿ ಅವರು ಇಂದು ಚಾಲನೆ ನೀಡಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಧಾನಿ, ಈ ಬಾರಿ ವ್ಯಾಪಾರ ಪ್ರದರ್ಶನದ ದೇಶದ ಪಾಲುದಾರ ರಷ್ಯಾ ನಮ್ಮ ಜೊತೆಯಾಗಿದೆ. ಈ ವ್ಯಾಪಾರ ಪ್ರದರ್ಶನದ ಮೂಲಕ ನಮ್ಮ ಸಮ–ಪರೀಕ್ಷಿತ ಪಾಲುದಾರಿಕೆ ಮತ್ತಷ್ಟು ಬಲಗೊಳ್ಳಲಿದೆ ಎಂದರು. ಜಾಗತಿಕ ಅಡೆತಡೆ ಮತ್ತು ಅನಿಶ್ಚಿತತೆ ನಡುವೆ ಭಾರತದ ಆರ್ಥಿಕತೆಯು ಬಲವಾಗಿ ಆಕರ್ಷಿತವಾಗಿ ಬೆಳೆಯುತ್ತಿದೆ ಎಂದು ತಿಳಿಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ಬೆಂಗಳೂರು: ಪೋಷಕರು ಮದುವೆಗೆ ವಿರೋಧ ವ್ಯಕ್ತಪಡಿಸಿದ ಕಾರಣ ಪ್ರೇಮಿಗಳು ರೈಲಿಗೆ ಸಿಕ್ಕಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಮಾಲೂರು ತಾಲ್ಲೂಕಿನ ಬ್ಯಾಟರಾಯನಹಳ್ಳಿ ನಿಲ್ದಾಣದ ಬಳಿ ನಡೆದಿದೆ. ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಶೆಟ್ಟಹಳ್ಳಿ ನಿವಾಸಿಗಳಾದ ಸತೀಶ್ (19) ಹಾಗೂ ಶ್ವೇತಾ (18) ಆತಹತ್ಯೆಗೆ ಶರಣಾದ ಪ್ರೇಮಿಗಳು. ಸತೀಶ್ ಐಟಿಐ ವ್ಯಾಸಂಗ ಮಾಡಿದ್ದು, ಶ್ವೇತಾ ಮೊದಲ ವರ್ಷದ ಬಿಎ ವ್ಯಾಸಂಗ ಮಾಡುತ್ತಿದ್ದಳು. ಇವರಿಬ್ಬರು ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಪ್ರೀತಿಸುತ್ತಿದ್ದರು. ಮನೆಯವರ ಒಪ್ಪಿಗೆ ಪಡೆದೇ ಮದುವೆ ಆಗೋಣವೆಂದು ನಿರ್ಧರಿಸಿದ್ದರು. ಅದರಂತೆ ಪರಸ್ಪರ ಪ್ರೀತಿಯನ್ನು ಪೋಷಕರ ಬಳಿ ಇಬ್ಬರೂ ಹೇಳಿಕೊಂಡಿದ್ದಾರೆ. ಆದರೆ ಜಾತಿ ಕಾರಣವೊಡ್ಡಿ ಮದುವೆಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ಮದುವೆಗೆ ಪೋಷಕರು ಒಪ್ಪದ ಕಾರಣ ನೊಂದಿದ್ದ ಪ್ರೇಮಿಗಳು ಆತಹತ್ಯೆಗೆ ನಿರ್ಧರಿಸಿದ್ದಾರೆ. ನಿನ್ನೆ ಸತೀಶ್ ತನ್ನ ಹುಟ್ಟುಹಬ್ಬವನ್ನು ಸ್ನೇಹಿತರೊಂದಿಗೆ ಆಚರಿಸಿಕೊಂಡಿದ್ದಾನೆ. ಇಂದು ಬೆಳಗ್ಗೆ ಇಬ್ಬರು ಮನೆಯಿಂದ ಹೊರಬಂದಿದ್ದಾರೆ. ನಂತರ ಬೈಕ್ ನಲ್ಲಿ ತನ್ನ ಪ್ರಿಯತಮೆ ಶ್ವೇತಾಳನ್ನು ಸತೀಶ್ ಕರೆದುಕೊಂಡು ಮಾಲೂರಿನ ಬ್ಯಾಟರಾಯನಹಳ್ಳಿ ರೈಲ್ವೆ ನಿಲ್ದಾಣದ ಬಳಿಹೋಗಿ ಬೈಕ್…
ದೊಡ್ಡಬಳ್ಳಾಪುರ: ವ್ಯಕ್ತಿಯೊಬ್ಬನನ್ನು ನಡುರಸ್ತೆಯಲ್ಲಿ ದುಷ್ಕರ್ಮಿಗಳು ಸಿಮೆಂಟ್ ಇಟ್ಟಿಗೆಯಿಂದ ತಲೆ ಜಜ್ಜಿ ಕೊಲೆ ಮಾಡಿರುವ ಘಟನೆ ನಗರದ ಹೊರವಲಯದ ಬಾಶೆಟ್ಟಿಹಳ್ಳಿ ಬಳಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಬುಲೆಟ್ ರಘು (38) ಎಂದು ಗುರುತಿಸಲಾಗಿದೆ. ತಡರಾತ್ರಿ ದುಷ್ಕರ್ಮಿಗಳ ಗುಂಪು ರಘು ಮೇಲೆ ದಾಳಿ ಮಾಡಿ ಇಟ್ಟಿಗೆಯಿಂದ ತಲೆಜಜ್ಜಿ ಕೊಲೆಗೈದು ಪರಾರಿಯಾಗಿದ್ದಾರೆ. ಸುದ್ದಿ ತಿಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ, ಡಿವೈಎಸ್ಪಿ ರವಿ ಹಾಗೂ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯ ಇನ್ಸ್ ಪೆಕ್ಟರ್ ಸಾಧಿಕ್ ಬಾಷಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಾಥಮಿಕ ಮಾಹಿತಿ ಪ್ರಕಾರ ವಯಕ್ತಿಕ ಕಾರಣಕ್ಕಾಗಿ ಪರಿಚಯಸ್ಥರೇ ಕೊಲೆ ಮಾಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದ್ದು, ಕೊಲೆಗೆ ನಿಖರ ಕಾರಣ ತನಿಖೆಯಿಂದಷ್ಟೇ ತಿಳಿದುಬರಬೇಕಿದೆ. ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ಬೆಂಗಳೂರು: ಬೆಂಗಳೂರಿನ ರಸ್ತೆ ಗುಂಡಿಗಳು ಬಿಜೆಪಿ ಸರಕಾರದ ದುರಾಡಳಿತದ ಫಲ. ರಸ್ತೆಗುಂಡಿಗಳನ್ನು ಮುಚ್ಚಲು ನಾವು ಬದ್ಧರಾಗಿದ್ದು, ಇದಕ್ಕಾಗಿಯೇ ಮುಖ್ಯಮಂತ್ರಿಗಳು 750 ಕೋಟಿ ರೂ. ಅನುದಾನ ನೀಡಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿ ಖ್ಯಾತ ಸಾಹಿತಿ ಎಸ್ ಎಲ್ ಬೈರಪ್ಪನವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ ನಂತರ ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಉತ್ತರಿಸಿದರು. ನಗರದಲ್ಲಿ ರಸ್ತೆಗುಂಡಿ ವಿಚಾರವಾಗಿ ಬಿಜೆಪಿ ಪ್ರತಿಭಟನೆ ಬಗ್ಗೆ ಕೇಳಿದಾಗ, “ನಗರದಲ್ಲಿ ರಸ್ತೆಗುಂಡಿಗಳಿರುವುದು ನಿಜ. ಅವುಗಳನ್ನು ಮುಚ್ಚಲು ನಾವು ಕಾರ್ಯಪ್ರವೃತ್ತರಾಗಿದ್ದೇವೆ. ಎಲ್ಲೆಲ್ಲಿ ರಸ್ತೆಗುಂಡಿಗಳಿವೆ ಎಂದು ಮಾಹಿತಿ ನೀಡಿ ಎಂದು ಸಾರ್ವಜನಿಕರು, ಪೊಲೀಸರಿಗೆ ನಾನೇ ಮನವಿ ಮಾಡಿದ್ದೇನೆ. ಬಿಜೆಪಿ ಸರ್ಕಾರ ದುರಾಡಳಿತದ ಪರಿಣಾಮವಾಗಿ ಈ ಪರಿಸ್ಥಿತಿ ಬಂದಿದೆ. ನಾವು ಈ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದರು. ಬೆಂಗಳೂರಿನ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಯಾವುದೇ ಅನುದಾನ ಕೊಟ್ಟಿಲ್ಲ ಎಂಬುದನ್ನು ಪ್ರತಿಭಟನೆ ಮಾಡುತ್ತಿರುವ ಬಿಜೆಪಿಗರು ಅರ್ಥಮಾಡಿಕೊಳ್ಳಬೇಕು. ನಾವು ಕೇಂದ್ರಕ್ಕೆ ಹೆಚ್ಚಿನ ತೆರಿಗೆ ಪಾವತಿ ಮಾಡುತ್ತಿದ್ದರೂ ಅವರು ಅನುದಾನ…
ಬೆಂಗಳೂರು: ನಾಡಿನ ಹಿರಿಯ ಸಾಹಿತಿ ಸರಸ್ವತಿ ಸಮ್ಮಾನ್, ಪದ್ಮ ವಿಭೂಷಣ ಡಾ.ಎಸ್.ಎಲ್. ಭೈರಪ್ಪನವರ ಸ್ಮಾರಕ ನಿರ್ಮಾಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿ ಡಾ.ಎಸ್.ಎಲ್.ಭೈರಪ್ಪ ಅವರ ಅಂತಿಮ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೈರಪ್ಪ ಅವರು ಹೆಚ್ಚು ಸಮಯಗಳ ಕಾಲ ಮೈಸೂರಿನಲ್ಲಿಯೇ ಇದ್ದರು. ಮೈಸೂರು ಅವರ ನೆಚ್ಚಿನ ಸ್ಥಳ, ಹೀಗಾಗಿ ಮೈಸೂರಿನಲ್ಲಿಯೇ ಸ್ಮಾರಕ ನಿರ್ಮಿಸಲಾಗುವುದು ಎಂದರು. ಇದಕ್ಕೂ ಮುನ್ನ ಭೈರಪ್ಪನವರ ಕುಟುಂಬಸ್ಥರೊಂದಿಗೆ ಕೆಲ ಹೊತ್ತು ಸಿಎಂ ಮಾತುಕತೆ ನಡೆಸಿದರು. ಭೈರಪ್ಪನವರ ಕೆಲವು ಕೃತಿಗಳನ್ನು ನಾನು ಓದಿದ್ದೇನೆ. ನನ್ನ ನೆಚ್ಚಿನ ಬರಹಗಾರರು ಅವರು, ಅವರ ಕಾದಂಬರಿಗಳು ಹಲವು ಭಾಷೆಗಳಿಗೆ ಅನುವಾದಗೊಂಡಿವೆ. ಕನ್ನಡದ ಯಾವ ಸಾಹಿತಿಯ ಯಾವ ಕೃತಿಗಳೂ ಇಷ್ಟು ಭಾಷೆಗೆ ಅನುವಾದಗೊಂಡಿಲ್ಲ ಎಂದರು. ಅವರಿಗೆ ಸರಸ್ವತಿ ಸಮ್ಮಾನ್, ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳು ಬಂದಿದ್ದವು. ಜ್ಞಾನಪೀಠ ಪ್ರಶಸ್ತಿಯೂ ಅವರಿಗೆ ಬರಬೇಕಿತ್ತು, ಅದಕ್ಕೆ ಅವರು ಅರ್ಹರಾಗಿದ್ದರು ಎಂದು ಅಭಿಪ್ರಾಯಪಟ್ಟರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು…
ತುಮಕೂರು: ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ (ಎಐಸಿಟಿಇ) ಹಾಗೂ ಸಿದ್ಧಗಂಗಾ ಪದವಿ ಕಾಲೇಜು ವತಿಯಿಂದ ‘ಕೃತಕ ಬುದ್ಧಿಮತ್ತೆ (Artificial Intelligence) ಕುರಿತು ಸೆ.26 ಹಾಗೂ 27ರಂದು ಎರಡು ದಿನಗಳ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಸಿದ್ಧಗಂಗಾ ಶಿಕ್ಷಣ ಸಂಸ್ಥೆ ಜಂಟಿ ಕಾರ್ಯದರ್ಶಿ ಶಿವಕುಮಾರಯ್ಯ ಬುಧವಾರ ತಿಳಿಸಿದರು. ‘ಕೃತಕ ಬುದ್ಧಿಮತ್ತೆ ಹಾಗೂ ಮಷಿನ್ ಲರ್ನಿಂಗ್ ಕ್ಷೇತ್ರದಲ್ಲಿ ಆಗುತ್ತಿರುವ ಪ್ರಗತಿ, ಮುಂದಿನ ಸವಾಲುಗಳು, ಭವಿಷ್ಯದಲ್ಲಿ ಸಮಾಜಕ್ಕೆ ಯಾವ ರೀತಿಯಲ್ಲಿ ಉಪಯುಕ್ತ ಆಗಬಲ್ಲದು ಎಂಬ ಬಗ್ಗೆ ಸಂಶೋಧಕರು, ಶಿಕ್ಷಣ ತಜ್ಞರು, ಉದ್ಯಮಿಗಳು ಚರ್ಚೆ ನಡೆಸಲಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಐದು ಸಮಾನಾಂತರ ವೇದಿಕೆಗಳಲ್ಲಿ ನಿರ್ದಿಷ್ಟ ಕ್ಷೇತ್ರಗಳ ಬಗ್ಗೆ ಲೇಖನಗಳು ಮಂಡನೆಯಾಗಲಿವೆ. ಗುಣಮಟ್ಟದ ಲೇಖನಗಳನ್ನು ಆಯ್ಕೆ ಮಾಡಿಕೊಂಡು, ಜರ್ನಲ್‌ನಲ್ಲಿ ಪ್ರಕಟಿಸಲಾಗುವುದು. ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ನಿರ್ದೇಶಕ ಎಸ್.ಆರ್.ಮಹದೇವ ಪ್ರಸನ್ನ ಸಮ್ಮೇಳನ ಉದ್ಘಾಟಿಸುವರು. ತಾಂತ್ರಿಕ ಶಿಕ್ಷಣ ಪರಿಷತ್ ಸಲಹೆಗಾರ ಎನ್.ಎಚ್.ಸಿದ್ದಲಿಂಗಸ್ವಾಮಿ ಸಮಾರೋಪ ಭಾಷಣ ಮಾಡಲಿದ್ದಾರೆ ಎಂದರು. ಕಾಲೇಜು ಪ್ರಾಂಶುಪಾಲ ನಿರಂಜನಮೂರ್ತಿ, ಸಮ್ಮೇಳನದ ಸಂಚಾಲಕಿ ಪ್ರೊ.ಮಮತ, ಸಹಸಂಚಾಲಕ…