nammatumakuru

    Subscribe to Updates

    Get the latest creative news from FooBar about art, design and business.

    What's Hot

    ಶಿರಾಗೇಟ್ ರಸ್ತೆಯಲ್ಲಿ ಕೊಳೆತ ಬೂದುಗುಂಬಳಕಾಯಿ: ಸಾರ್ವಜನಿಕರ ಗೋಳು, ಜಿಲ್ಲಾಡಳಿತ, ಪಾಲಿಕೆಯ ಜಾಣ ಕುರುಡು!

    October 24, 2026

    ಕೆಪಿಎಸ್‌ ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ: ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ವಿರುದ್ಧ ಪ್ರಾಸಿಕ್ಯೂಷನ್‌ ಗೆ ಸಮ್ಮತಿ

    October 24, 2026

    ಸ್ಟಿಂಗ್ ಆಪರೇಷನ್ — ಕೆಪಿಎಸ್‌ಸಿ ಹಗರಣ | ಕಾಂಗ್ರೆಸ್ ಸರ್ಕಾರದ ವಿರುದ್ಧ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ

    October 24, 2026
    Facebook Twitter Instagram
    ಟ್ರೆಂಡಿಂಗ್
    • ಶಿರಾಗೇಟ್ ರಸ್ತೆಯಲ್ಲಿ ಕೊಳೆತ ಬೂದುಗುಂಬಳಕಾಯಿ: ಸಾರ್ವಜನಿಕರ ಗೋಳು, ಜಿಲ್ಲಾಡಳಿತ, ಪಾಲಿಕೆಯ ಜಾಣ ಕುರುಡು!
    • ಕೆಪಿಎಸ್‌ ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ: ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ವಿರುದ್ಧ ಪ್ರಾಸಿಕ್ಯೂಷನ್‌ ಗೆ ಸಮ್ಮತಿ
    • ಸ್ಟಿಂಗ್ ಆಪರೇಷನ್ — ಕೆಪಿಎಸ್‌ಸಿ ಹಗರಣ | ಕಾಂಗ್ರೆಸ್ ಸರ್ಕಾರದ ವಿರುದ್ಧ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ
    • ಶ್ರವಣೂರಿನಲ್ಲಿ 2ನೇ ವರ್ಷದ ಉಚಿತ ಕಣ್ಣಿನ ತಪಾಸಣೆ — ಶಸ್ತ್ರಚಿಕಿತ್ಸಾ ಶಿಬಿರ
    • ಬಳತ (ಬಿ) ಗ್ರಾಮ ಪಂಚಾಯತ್ನಲ್ಲಿ ಸಾಮಾಜಿಕ ಪರಿಶೋಧನೆ ಗ್ರಾಮ ಸಭೆ: ‘ವಿಬಿ–ಜಿ ರಾಮ್ ಜಿ’ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಕರೆ
    • ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ!  ಹವಾಮಾನ ಇಲಾಖೆಯಿಂದ ಮಹತ್ವದ ಸೂಚನೆ ಇಲ್ಲಿದೆ
    • ನಂದಿಧ್ವಜ ಕಂಬ ಮುರಿತದಿಂದ ಮಾವುತನ ಪತ್ನಿ ಸಾವು ತನಕ! ಈ ಬಾರಿಯ ಮೈಸೂರು ದಸರಾದಲ್ಲಿ ನಡೆದಿದ್ದೇನು?
    • ಪ್ರಧಾನಿ ಮೋದಿ ಯಾವ ಮೊಬೈಲ್ ಬಳಸುತ್ತಾರೆ? ರಹಸ್ಯ ಫೋನ್‌ ಹಿಂದಿನ ಸತ್ಯವೇನು?
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ನಮ್ಮೂರ ಶಾಲೆ ಉಳಿಸಿ:  ಎಐಡಿಎಸ್‌ ಓ, ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಪ್ರತಿಭಟನೆ
    ತುಮಕೂರು December 27, 2025

    ನಮ್ಮೂರ ಶಾಲೆ ಉಳಿಸಿ:  ಎಐಡಿಎಸ್‌ ಓ, ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಪ್ರತಿಭಟನೆ

    By adminDecember 27, 2025No Comments2 Mins Read
    aidso

    ತುಮಕೂರು:  ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ತುಮಕೂರು ತಾಲೂಕಿನ ಡಿ ಕೊರಟಗೆರೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಚ್ಚುತ್ತಿರುವುದನ್ನು ವಿರೋಧಿಸಿ, ಶಾಲೆ ಉಳಿಸಲು ಆಗ್ರಹಿಸಿ ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ಪ್ರತಿಭಟನೆ ನಡೆಸಲಾಯಿತು.

    ಪ್ರತಿಭಟನೆಯನ್ನು ಉದ್ದೇಶಿಸಿ ಎಐಡಿಎಸ್‌ ಓ ಜಿಲ್ಲಾ ಜಿಲ್ಲಾ ಕಾರ್ಯದರ್ಶಿಗಳಾದ ಲಕ್ಕಪ್ಪ ಮಾತನಾಡಿ, ಬರಿ ಗ್ರಾಮ ಪಂಚಾಯಿತಿಗೊಂದು ಕೆಪಿಎಸ್ ಮ್ಯಾಗ್ನೆಟ್ ಶಾಲೆ ಮಾಡಿ ಶಾಲೆಯನ್ನು ಮುಚ್ಚುತ್ತಿರುವ ಸರ್ಕಾರವು ಗ್ರಾಮದ ಬಡ ರೈತ–ಕಾರ್ಮಿಕರ ಮಕ್ಕಳಿಗೆ ಅನ್ಯಾಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

    ಮುಂದುವರೆದು ಮಾತನಾಡುತ್ತಾ, ಬಸವೇಗೌಡನಪಾಳ್ಯ, ಬಿದರಕಟ್ಟೆ, ಕಳ್ಳಿಪಾಳ್ಯ, ಬೊಮ್ಮನಹಳ್ಳಿ,, ಚಿಕ್ಕ ಕೊರಟಗೆರೆ ಮತ್ತು ಡಿ ಕೊರಟಗೆರೆ  ಗ್ರಾಮಗಳ ಸರ್ಕಾರಿ ಶಾಲೆಗಳನ್ನು ಮುಚ್ಚಿ  ಮಸ್ಕಲ್ ಗ್ರಾಮ ಪಂಚಾಯತಿಯ ಮ್ಯಾಗ್ನೆಟ್ ಶಾಲೆಗೆ ಸೇರಿಸಿ ಮಕ್ಕಳನ್ನು ದೂರದ ಶಾಲೆಗೆ  ಕಳುಹಿಸಲಾಗುತ್ತದೆ. ಉಚಿತ ಬಸ್‌ ಸೌಲಭ್ಯ ಹೊರೆಯನ್ನು ಎಸ್‌ ಡಿಎಂಸಿ  ಗೆ ವಹಿಸಿ, ಮ್ಯಾಗ್ನೆಟ್ ಶಾಲೆಯ ನಿರ್ವಹಣೆ ಹೊರಗುತ್ತಿಗೆ ನೀಡಲಾಗುತ್ತಿದೆ. ಇದು ಕ್ರಮೇಣವಾಗಿ ಸರ್ಕಾರಿ ಶಾಲೆಗಳನ್ನು ಖಾಸಗೀಕರಣಗೊಳಿಸಿ, ಬಡ ಮಕ್ಕಳನ್ನು ಶಾಶ್ವತವಾಗಿ ದೂರ ತಳ್ಳುವ ಹುನ್ನಾರ ಮಾಡುತ್ತಿರುವ ಸರ್ಕಾರದ ನಡೆಯನ್ನು ಖಂಡಿಸಿದರು.

    ಗ್ರಾಮಸ್ಥರಾದ ನಾಗರಾಜು ಅವರು ಮಾತನಾಡಿ, ಸದನದಲ್ಲಿ ಶಿಕ್ಷಣ ಸಚಿವರು ಯಾವುದೇ ಒಂದು ಹಳ್ಳಿಯ ಹಾಗೂ ಸಣ್ಣ ಹಳ್ಳಿಯ ಶಾಲೆ ಸಹ ಮುಚ್ಚುವುದಿಲ್ಲ ಅಂತ ಹೇಳಿದ್ದರು ಈಗ ಅವರು ಆ ಮಾತಿನಂತೆ ನಡೆದುಕೊಳ್ಳಬೇಕು, ಶಾಲೆಗಳನ್ನು ಮುಚ್ಚಿದರೆ ನಮ್ಮ ಮಕ್ಕಳನ್ನು ದೂರದ ಊರಿಗೆ ಕಳುಹಿಸಲು ತೊಂದರೆಯಾಗುತ್ತದೆ. ಮಳೆಗಾಲದಲ್ಲಿ ಜನಸಾಮಾನ್ಯರೇ ಓಡಾಡಲು ಕಷ್ಟವಾಗುತ್ತದೆ  ಇಂತಹ ಪರಿಸ್ಥಿತಿಯಲ್ಲಿ ಮಕ್ಕಳನ್ನು ಕಳಿಸುವುದು ಸಾಧ್ಯವಾಗದ ಮಾತು, ಒಂದು ವೇಳೆ ನೀವು ಶಾಲೆಯನ್ನು ಮುಚ್ಚಲು ಬಂದದ್ದೇ ಆದರೆ ನಾವು ಪ್ರತಿಭಟನೆಯ ಮೂಲಕ ನಮ್ಮೂರಿನ ಶಾಲೆಗಳನ್ನು ಉಳಿಸಿಕೊಳ್ಳುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ನಾವು ಬೆಳಗ್ಗೆಯಿಂದ ಸಂಜೆವರೆಗೆ ದುಡಿಯುವ ಜನ, ನಮ್ಮ ಚಿಕ್ಕಮಕ್ಕಳನ್ನು 2 ಕಿಲೊಮೀಟರ್ ದೂರ ಇರುವ ಮಸ್ಕಲ್ ಶಾಲೆಗೆ ಕಳುಹಿಸಲು ಖಂಡಿತಾ  ಸಾಧ್ಯವಿಲ್ಲ. ಅಲ್ಲದೆ ಹೆಣ್ಣು ಮಕ್ಕಳನ್ನು ದೂರದ ಊರಿಗೆ ಕಳುಹಿಸುವುದು ಕಷ್ಟ , ಈ ಯೋಜನೆ ಖಂಡಿತವಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಕುತ್ತು ತರುತ್ತದೆ ಎಂದು ಗ್ರಾಮಸ್ಥರು ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದರು.

    ಪ್ರತಿಭಟನೆಯ ನಂತರ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ರಚಿಸಲಾಯಿತು.  ಪ್ರತಿಭಟನೆಯಲ್ಲಿ  ಎಐಡಿಎಸ್ ಓ ತುಮಕೂರು ಜಿಲ್ಲಾ ಕಾರ್ಯದರ್ಶಿ ಮಂಡಳಿಯ ಸದಸ್ಯರಾದ ಭರತ್ ಎಸ್. ಹಾಗೂ ಗ್ರಾಮದ ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಶಿರಾಗೇಟ್ ರಸ್ತೆಯಲ್ಲಿ ಕೊಳೆತ ಬೂದುಗುಂಬಳಕಾಯಿ: ಸಾರ್ವಜನಿಕರ ಗೋಳು, ಜಿಲ್ಲಾಡಳಿತ, ಪಾಲಿಕೆಯ ಜಾಣ ಕುರುಡು!

    October 24, 2026

    ಹಬ್ಬಗಳ ಆಚರಣೆಯಿಂದ ಧಾರ್ಮಿಕ ಚಿಂತನೆ ಜಾಗೃತಿ: ಶಮಿಪೂಜೆಯಲ್ಲಿ ಶ್ರೀ ಶಿವಸಿದ್ಧೇಶ್ವರ ಸ್ವಾಮೀಜಿ

    October 22, 2026

    ತುಮಕೂರು ದಸರಾ ವೈಭವಕ್ಕೆ ತೆರೆ: ಅದ್ದೂರಿಯ ಜಂಬೂಸವಾರಿ: ಡಿಸಿಎಂ ಸೇರಿ ಗಣ್ಯರಿಂದ ಪುಷ್ಪಾರ್ಚನೆ

    October 22, 2026

    Leave A Reply Cancel Reply

    Our Picks

    ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ!  ಹವಾಮಾನ ಇಲಾಖೆಯಿಂದ ಮಹತ್ವದ ಸೂಚನೆ ಇಲ್ಲಿದೆ

    October 24, 2026

    ಪ್ರಧಾನಿ ಮೋದಿ ಯಾವ ಮೊಬೈಲ್ ಬಳಸುತ್ತಾರೆ? ರಹಸ್ಯ ಫೋನ್‌ ಹಿಂದಿನ ಸತ್ಯವೇನು?

    October 24, 2026

    ವಾಟ್ಸಾಪ್ ಬಳಕೆದಾರರೇ ಎಚ್ಚರ! 2027ರಿಂದ ಹೊಸ ನಿಯಮ, ಫೋನ್‌ ನಲ್ಲಿ ಸಿಮ್ ಇಲ್ಲದಿದ್ದರೆ ಆ್ಯಪ್ ಬಳಕೆಗೆ ತೊಂದರೆ

    October 24, 2026

    ಹೊಸದಾಗಿ ಕೆಲಸಕ್ಕೆ ಸೇರಿದವರಿಗೆ ₹15,000 ಸಿಗುತ್ತಾ? ಕೇಂದ್ರದ ಉದ್ಯೋಗ ಯೋಜನೆಯ ಅರ್ಹತೆಗಳೇನು?

    October 21, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಶಿರಾಗೇಟ್ ರಸ್ತೆಯಲ್ಲಿ ಕೊಳೆತ ಬೂದುಗುಂಬಳಕಾಯಿ: ಸಾರ್ವಜನಿಕರ ಗೋಳು, ಜಿಲ್ಲಾಡಳಿತ, ಪಾಲಿಕೆಯ ಜಾಣ ಕುರುಡು!

    October 24, 2026

     ನಟರಾಜು ಜಿ. ಎಲ್., ನಮ್ಮ ತುಮಕೂರು ಡಿಜಿಟಲ್ ಸುದ್ದಿ ಮಾಧ್ಯಮ ಹಬ್ಬಗಳು ಬರುತ್ತವೆ, ಸಂಭ್ರಮ-ಸಡಗರವನ್ನು ಹೊತ್ತು ತರುತ್ತವೆ. ಜನ ಪರಸ್ಪರ…

    ಕೆಪಿಎಸ್‌ ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ: ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ವಿರುದ್ಧ ಪ್ರಾಸಿಕ್ಯೂಷನ್‌ ಗೆ ಸಮ್ಮತಿ

    October 24, 2026

    ಸ್ಟಿಂಗ್ ಆಪರೇಷನ್ — ಕೆಪಿಎಸ್‌ಸಿ ಹಗರಣ | ಕಾಂಗ್ರೆಸ್ ಸರ್ಕಾರದ ವಿರುದ್ಧ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ

    October 24, 2026

    ಶ್ರವಣೂರಿನಲ್ಲಿ 2ನೇ ವರ್ಷದ ಉಚಿತ ಕಣ್ಣಿನ ತಪಾಸಣೆ — ಶಸ್ತ್ರಚಿಕಿತ್ಸಾ ಶಿಬಿರ

    October 24, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.