Author: admin

ತುಮಕೂರು: ಯುಜಿಸಿ ನಿರ್ದೇಶನದ ಮೇರೆಗೆ ಕರಾಮುವಿಯು 2025–26ನೇ ಜುಲೈ ಆವೃತ್ತಿ ಪ್ರವೇಶಾತಿ ಅಂತಿಮ ದಿನಾಂಕವನ್ನು 2025ರ ಅಕ್ಟೋಬರ್ 15ರ ವರೆಗೆ ವಿಸ್ತರಿಸಲಾಗಿದೆ. ತುಮಕೂರಿನಲ್ಲಿರುವ ಕರಾಮುವಿ ಪ್ರಾದೇಶಿಕ ಕೇಂದ್ರದಲ್ಲಿ 2025–26ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿ ಪ್ರವೇಶಾತಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ಸ್ನಾತಕ/ ಸ್ನಾತಕೋತ್ತರ ಕೋರ್ಸ್ ಗಳಾದ ಬಿ.ಎ, ಬಿ.ಕಾಂ, ಬಿ.ಬಿ.ಎ, ಬಿ.ಸಿ.ಎ, ಬಿ.ಲಿಬ್.ಐ.ಎಸ್ಸಿ., ಬಿ.ಎಸ್ಸಿ., ಬಿ.ಎಸ್.ಡಬ್ಲ್ಯೂ., ಎಂ.ಎ., ಎಂ.ಸಿ.ಜೆ., ಎಂ.ಕಾಂ., ಎಂ.ಎಸ್ಸಿ., ಎಂ.ಲಿಬ್‌.ಐ.ಎಸ್ಸಿ., ಎಂ.ಬಿ.ಎ., ಎಂ.ಸಿ.ಎ., ಎಂ.ಎಸ್.ಡಬ್ಲ್ಯೂ ಮತ್ತು ಪಿ.ಜಿ ಸರ್ಟಿಫಿಕೇಟ್., ಡಿಪ್ಲೊಮಾ., ಸರ್ಟಿಫಿಕೇಟ್ ಪ್ರೋಗ್ರಾಮ್ಸ್ ಗಳಿಗೆ ಪ್ರವೇಶಾತಿ ಮಾಡಿಕೊಳ್ಳಲಾಗುತ್ತಿದೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ 10+2 (ಪದವಿ ಪೂರ್ವ) ಮತ್ತು 10+2+3 (ಸ್ನಾತಕ ಪದವಿ) ವಿದ್ಯಾರ್ಹತೆ ಹೊಂದಿರುವ ಎಲ್ಲಾ ವಯೋಮಾನದ ವಿದ್ಯಾರ್ಥಿಗಳು ಮನೆಯಲ್ಲೇ ಅಥವಾ ಯಾವುದೇ ಕೆಲಸ ನಿರ್ವಹಿಸಿಕೊಂಡು ಕಾಲೇಜುಗಳಿಗೆ ಹೋಗದೆ ಕರಾಮುವಿಯ ಮೂಲಕ ಪದವಿ ಪಡೆಯಬಹುದಾಗಿದೆ.  ಈ ಹಿನ್ನೆಲೆಯಲ್ಲಿ ಕೆಲಸಕ್ಕೆ ಹೋಗುವ ಆಸಕ್ತರು ಕರಾಮುವಿಯಲ್ಲಿ ಪ್ರವೇಶಾತಿ ಪಡೆಯಲು ಅನುಕೂಲ ಮಾಡಿಕೊಡುವ ಸಲುವಾಗಿ 2025ರ ಅಕ್ಟೋಬರ್ 15ರ…

Read More

ಕುಮಟಾ: ಕರ್ನಾಟಕ ರಣಧೀರ ವೇದಿಕೆ ಕುಮಟಾ ಹಾಗೂ ಭಟ್ಕಳ ತಾಲೂಕು ಘಟಕ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಕುಮಟಾದ ಮಿರ್ಜಾನ್‌ ನ ಡಾ.ಬಿ.ಆರ್.ಅಂಬೇಡ್ಕ‌ರ್ ಭವನದಲ್ಲಿ ಭವ್ಯವಾಗಿ ನೆರವೇರಿತು. ಕಾರ್ಯಕ್ರಮಕ್ಕೆ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಕೆ.ಆರ್.ಶಂಕರ್ ಗೌಡ್ರು ಜೊತೆಗೆ ರಾಜ್ಯ ಸಮಿತಿಯ ಹಲವು ಸದಸ್ಯರು ಬೆಂಗಳೂರಿನಿಂದ ಆಗಮಿಸಿದ್ದರು. ಮಹೇಶ್ ಗೌಡ ಅವರ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಉತ್ತರ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷೆ ಕುಮಾರಿ ಸುಪ್ರಿಯಾ ವಿಷ್ಣು ನಾಯ್ಕ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, “ಕನ್ನಡ ನಾಡು, ನುಡಿ, ನೆಲ, ಜಲದ ಬಗ್ಗೆ ನಮಗೆ ಸದಾ ಅಭಿಮಾನ ಇರಬೇಕು. ಅವಕ್ಕೆ ಧಕ್ಕೆ ಉಂಟಾದಾಗ ಧ್ವನಿ ಎತ್ತುವುದು ನಮ್ಮ ಕರ್ತವ್ಯ. ಜೊತೆಗೆ ಶೋಷಿತರ ಪರವಾಗಿ ನಿಲ್ಲುವ ಸಂಘಟನೆ ಆಗಬೇಕಿದೆ” ಎಂದು ಹೇಳಿದರು. ನಂತರ ಕರ್ನಾಟಕ ರಣಧೀರರ ವೇದಿಕೆಯ ಸಂಸ್ಥಾಪಕರು ಹಾಗೂ ರಾಜ್ಯಾಧ್ಯಕ್ಷರಾದ ಕೆ.ಆರ್.ಶಂಕರ್ ಗೌಡ್ರು ದೀಪ ಬೆಳಗಿಸಿ ಘಟಕವನ್ನು ಉದ್ಘಾಟಿಸಿದರು. ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು “ಕರ್ನಾಟಕ ರಣಧೀರರ ವೇದಿಕೆಯು ಕೇವಲ…

Read More

ಬೀದರ್: ಜಿಲ್ಲೆಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 8 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ಕಮಲನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಔರಾದ್–ಕಮಲನಗರ್ ರಸ್ತೆ ಮೂಲಕ ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು ಸಾಗಿಸುತ್ತಿರುವ ಮಾಹಿತಿ ಮೇರೆಗೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರ ಅವರ ನಿರ್ದೇಶನದಲ್ಲಿ, ಪಿಎಸ್ ಐ ಆಶಾ ಹಾಗೂ ಸಿಬ್ಬಂದಿ ದಾಳಿ ನಡೆಸಿದರು. ದಾಳಿಯ ವೇಳೆ 8 ಕ್ವಿಂಟಾಲ್ ಪಡಿತರ ಅಕ್ಕಿ ಹಾಗೂ ಸಾಗಾಣಿಕೆಗೆ ಬಳಸಿದ ವಾಹನವನ್ನು ವಶಕ್ಕೆ ಪಡೆಯಲಾಯಿತು. ಆದರೆ, ವಾಹನ ಚಾಲಕ ಪೊಲೀಸ್ ವಾಹನವನ್ನು ಕಂಡ ತಕ್ಷಣ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಈ ಕುರಿತು ಕಮಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ವರದಿ: ಅರವಿಂದ ಮಲ್ಲಿಗೆ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

 ವಿವೇಕಾನಂದ. ಎಚ್.ಕೆ. ನಗರ ಮತ್ತು ಗ್ರಾಮೀಣ ಪ್ರದೇಶ ಎಂಬ ಭೇದವಿಲ್ಲದೆ ಬಹುತೇಕರ ಮನೆಯಲ್ಲಿ ಆಚರಿಸುವ ಒಂದು ಹಬ್ಬ…  ತೀರಿಹೋದ ಹಿರಿಯರ ನೆನಪಿನಲ್ಲಿ, ಅವರ ಇಷ್ಟದ ಊಟ, ಬಟ್ಟೆ, ವಸ್ತುಗಳು ಇತ್ಯಾದಿಗಳನ್ನು ಇಟ್ಟು ಅವರಿಗೆ ಅರ್ಪಿಸಿದಂತೆ ಮಾಡಿ ನಾವೇ ಉಪಯೋಗಿಸುವುದು…! ಜ್ಯೋತಿಷಿಗಳಂತು ಟಿವಿಗಳಲ್ಲಿ ಇದರ ಬಗ್ಗೆ ಇಲ್ಲಸಲ್ಲದ ಅನೇಕ ಮೌಢ್ಯಗಳನ್ನು ಹೇಳಿ ಜನರನ್ನು ಮತ್ತಷ್ಟು ದಿಕ್ಕು ತಪ್ಪಿಸುತ್ತಿದ್ದಾರೆ.  ಪುನರ್ ಜನ್ಮ, ಆತ್ಮಗಳ ಅಲೆದಾಟ, ಶವಗಳ ಕನಸುಗಳು.. ಇನ್ನೂ ಮುಂತಾದ ಭಯಂಕರ ವಿಷಯಗಳನ್ನು ಪ್ರಸ್ತಾಪಿಸಿ ಜನರನ್ನು ಭಯಗೊಳಿಸಿ ಹಬ್ಬದ ತೀವ್ರತೆ ಹೆಚ್ಚಿಸುತ್ತಿದ್ದಾರೆ. ‌ಒಂದೇ ಒಂದು ಟಿವಿ ವಾಹಿನಿ ವಿವೇಚನೆಯಿಂದ ಈ ಹಬ್ಬದ ವಿಮರ್ಶೆ ಮಾಡುತ್ತಿಲ್ಲ. ಊಹಾತ್ಮಕ ಮೂಡನಂಬಿಕೆಯನ್ನೇ ಮತ್ತಷ್ಟು ಆಳಕ್ಕೆ ಇಳಿಸುತ್ತಿದ್ದಾರೆ. ಬದಲಾದ ಕಾಲಮಾನದಲ್ಲಿ ಈ ಹಬ್ಬದ ಆಚರಣೆಯನ್ನು ಮತ್ತಷ್ಟು ವಿಶಾಲ, ಸರಳ, ಅರ್ಥಪೂರ್ಣ, ಪ್ರಾಯೋಗಿಕ ಮತ್ತು ಮಾನವೀಯಗೊಳಿಸಬಹುದಾದ ಒಂದು ಸಲಹೆ ಮತ್ತು ಮನವಿ… ವ್ಯಕ್ತಿಯ ಸಾವೇ ಆತನ ಕೊನೆ. ಬದುಕಿದ್ದಾಗ ಎಷ್ಟೇ ಪ್ರಮುಖನಾಗಿದ್ದರೂ ಉಸಿರು ನಿಂತ ನಂತರ ಆತನ ದೇಹ ಪ್ರಕೃತಿಯಲ್ಲಿ ಲೀನವಾಗುತ್ತದೆ.…

Read More

ತುಮಕೂರು: ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆಗೆ ಹೆರಿಗೆ ಮಾಡಿಸಲು 3 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ಪ್ರಸೂತಿ ಹಾಗೂ ಸ್ತ್ರೀ ರೋಗ ತಜ್ಞೆಯಾದ ಡಾ.ಸಿ.ಎನ್‌.ಮಹಾಲಕ್ಷ್ಮಮ್ಮ ಎಂಬವರ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಅವರಿಗೆ 5 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 20 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಇಲ್ಲಿನ 7ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಯಾಸ್ಮೀನ ಪರವೀನ ಲಾಡಖಾನ ಅವರು ತೀರ್ಪು ಪ್ರಕಟಿಸಿದರು. ನಗರದ ಕೋತಿತೋಪು ನಿವಾಸಿ ಮುಕುಂದ ಎಂಬವರು ನಾದಿನಿ ಸವಿತಾ ಎಂಬವರನ್ನು 2021 ಫೆಬ್ರವರಿ 2ರಂದು ಹೆರಿಗೆ ನೋವಿನ ಕಾರಣ ತುಮಕೂರಿನ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಇವರಿಗೆ ಹೆರಿಗೆ ಮಾಡಿಸಲು ಡಾ.ಸಿ.ಎನ್‌.ಮಹಾಲಕ್ಷ್ಮಮ್ಮ 3 ಸಾವಿರ ರೂ. ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ನಾದಿನಿ ಮತ್ತು ಮಗುವಿನ ಆರೋಗ್ಯದ ದೃಷ್ಟಿಯಿಂದ ಅನಿವಾರ್ಯವಾಗಿ 2 ಸಾವಿರ ರೂ. ಲಂಚ ನೀಡಲು ಒಪ್ಪಿ ರಾತ್ರಿ 9.30 ಗಂಟೆಗೆ ‘ಡಿ’ ಗ್ರೂಪ್‌ ನೌಕರ…

Read More

ತುಮಕೂರು: ಇಬ್ಬರು ಮಕ್ಕಳೊಂದಿಗೆ ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಮಕೂರಿನಲ್ಲಿ ನಡೆದಿದ್ದು, ಈ ಘಟನೆಗೆ ಸಂಬಂಧಿಸಿದಂತೆ  ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಮೃತಪಟ್ಟ ಮಹಿಳೆಯನ್ನು ಸರಿತಾ ಎಂದು ಗುರುತಿಸಲಾಗಿದೆ. ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಕಡಪಲಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಇನ್ನಿಬ್ಬರು ಮಕ್ಕಳ ಜೊತೆಗೆ ಸರಿತಾ  ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಆತ್ಮಹತ್ಯೆಗೆ ಶರಣಾಗಿದ್ದರು. ಕಡಪಲಕೆರೆ ಗ್ರಾಮದ ಸರಿತಾ ಅವರು 6 ವರ್ಷಗಳ ಹಿಂದೆ ಅದೇ ಗ್ರಾಮದ ಸಂತೋಷ ಎಂಬಾತನನ್ನು ವಿವಾಹವಾಗಿದ್ದರು. ಸಂತೋಷ್ ಆಟೋ ಚಾಲಕನಾಗಿದ್ದ. ಮದುವೆಯಾದ ದಿನದಿಂದಲೂ ಸಂತೋಷ್ ಮತ್ತು ಆತನ ತಾಯಿ, ಅಜ್ಜಿ  ಸರಿತಾಳಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು  ಎನ್ನುವ ಆರೋಪ ಕೇಳಿ ಬಂದಿದೆ. ಇಬ್ಬರು ಮಕ್ಕಳ ಜೊತೆಗೆ ಮಹಿಳೆ ಸರಿತಾ, ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.  ಸದ್ಯ ಪತಿ, ಪತಿಯ ತಾಯಿ ಹಾಗೂ ಅಜ್ಜಿಯ ಕಿರುಕುಳದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ. ಪೊಲೀಸರ ತನಿಖೆಯ ನಂತರ ಹೆಚ್ಚಿನ ಮಾಹಿತಿಗಳು…

Read More

ಬೀದರ್: ಜಿಲ್ಲೆಯ ಔರಾದ ತಾಲೂಕಿನ ಜಂಬಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಾರಾಜವಾಡಿ ಗ್ರಾಮದಲ್ಲಿ ಜೆಜೆಎಂ ಯೋಜನೆಯ ಅಡಿಯಲ್ಲಿ ಹೊಸ ಬೋರ್ವೆಲ್ ಹಾಕದೆ ಹಳೆಯ ಬೋರ್ವೆಲ್ ಪೈಪ್ ಲೈನ್ ನ ನೀರು ಸರಬರಾಜು ಮಾಡುತ್ತಿದ್ದಾರೆಂದು ಆರೋಪಿಸಿ ಗ್ರಾಮದ ಮುಖಂಡರಾದ ಪ್ರಜಯ್ ಪಾಟೀಲ್ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ಜಂಬಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಾರಾಜವಾಡಿ ಗ್ರಾಮದಲ್ಲಿ  ಗುತ್ತಿಗೆದಾರ ಸರಿಯಾಗಿ ಕೆಲಸ ಮಾಡಿರುವುದಿಲ್ಲ.  ಹೊಸ ಬೋರ್ವೆಲ್ ತೋಡಲಾರದೆ ಗ್ರಾಮದ ಹಳೆಯ ಬೋರ್ವೆಲ್ ಗಳಿಗೆ ಪೈಪಲೈನ್ ಅಳವಡಿಸಿ ನೀರು ಸರಬರಾಜು ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಗ್ರಾಮದ ಜನರಿಗೆ ಗೊತ್ತಿಲ್ಲದೆ ಸಂಪೂರ್ಣ ಕಾಮಗಾರಿ ಮುಗಿದಿದೆ ಅಂತ ಪಂಚಾಯತ ಪಿ.ಡಿ.ಓ. ಅಧಿಕಾರಿಗೆ ಒಪ್ಪಿಸಿರುತ್ತಾರೆ. ಮೇಲಾಧಿಕಾರಿಗಳು  ಗ್ರಾಮದಲ್ಲಿ ಹೊಸ ಬೋರ್ವೆಲ್ ಅಳವಡಿಸಿ ಹಳೆ ಬೋರ್ವೆಲ್ ಕನೆಕ್ಷನ್ ಕೊಟ್ಟಿರುವುದನ್ನು ರದ್ದು ಮಾಡಿ ಹೊಸ ಬೋರ್ವೆಲ್ ಗಳಿಗೆ ಕನೆಕ್ಷನ್ ಮಾಡಿಕೊಡಬೇಕು ಮತ್ತು ಮಹಾದೇವ ಮಂದಿರದ ಕಾಂಪೌಂಡ್ ವಾಲ್ ಕಟ್ಟಿಸಿಕೊಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಬರೆದ ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ವರದಿ: ಅರವಿಂದ ಮಲ್ಲಿಗೆ, ಬೀದರ್  ನಮ್ಮತುಮಕೂರಿನ ಕ್ಷಣ…

Read More

ತುಮಕೂರು: ಜಿಲ್ಲಾ ಆಡಳಿತದಿಂದ ಹಮ್ಮಿಕೊಂಡಿರುವ ತುಮಕೂರು ದಸರಾಗೆ ಸೆ. 22ರಂದು ಚಾಲನೆ ನೀಡಲಾಗುತ್ತದೆ. ದಸರಾ ಉತ್ಸವಕ್ಕೆ ಆಗಮಿಸುವ ಜನರಿಗಾಗಿ ಜಿಲ್ಲೆಯಾದ್ಯಂತ ಪ್ರತಿ ದಿನ 250 ವಿಶೇಷ ಬಸ್‌ ಗಳು ಸಂಚರಿಸಲಿವೆ. ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ 11 ದಿನ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಲಿವೆ. ಅ. 2ರಂದು ನಡೆಯಲಿರುವ ಜಂಬೂ ಸವಾರಿಯಲ್ಲಿ 50 ಗ್ರಾಮ ದೇವತೆಗಳು ಸಾಗಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಹೇಳಿದರು. ದಸರಾ ಉತ್ಸವದ ಮೊದಲ ದಿನ ಸರ್ವೋದಯ ಪ್ರೌಢಶಾಲೆ ಮೈದಾನದಲ್ಲಿ ಬೆಳಿಗ್ಗೆ 8 ಗಂಟೆಗೆ ಹಾಟ್ ಏರ್ ಬಲೂನ್, ವಿಶ್ವವಿದ್ಯಾಲಯ ಹೆಲಿಪ್ಯಾಡ್‌ ನಲ್ಲಿ ಬೆಳಿಗ್ಗೆ 10.30 ಗಂಟೆಗೆ ಹೆಲಿ ರೈಡ್‌ ಗೆ ಚಾಲನೆ ಸಿಗಲಿದೆ. ಸಂಜೆ 4.30 ಗಂಟೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಸೆ. 27ರಂದು ಫಲಪುಷ್ಪ, ಕಲಾ ಮತ್ತು ವಿಜ್ಞಾನ ವಸ್ತು ಪ್ರದರ್ಶನ, ಆಹಾರ ಮೇಳ, ಮಹಿಳಾ ಕೌಶಲ ಮೇಳ ಮತ್ತು ಮಹಿಳೆಯರ ಬೈಕ್‌ ರೈಡ್ ಏರ್ಪಡಿಸಲಾಗಿದೆ.…

Read More

ಸರಗೂರು:  ರಾಜ್ಯ ಸರಕಾರ ಸೆ.22 ರಿಂದ ಅ.7 ರವರೆಗೆ ನಡೆಸಲಿರುವ ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆಯಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಅಭಿಮಾನಿ ಹಾಗೂ ಅನುಯಾಯಿಗಳು ಧರ್ಮದ ಕಲಂನಲ್ಲಿ ಬೌದ್ಧ ಹಾಗೂ ಜಾತಿ ಕಾಲಂನಲ್ಲಿ ಹೊಲಯ ಎಂದು ಬರೆಸುವಂತೆ ಉರಿಲಿಂಗಪೆದ್ದಿ ಮಠದ ಜ್ಞಾನ ಪ್ರಕಾಶ್ ಸ್ವಾಮೀಜಿ ವಿನಂತಿಸಿದರು. ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮುದಾಯದ ಭವನದಲ್ಲಿ ಭಾನುವಾರದಂದು ಬಲಗೈ ಸಮಾಜದ ಪರಿಶಿಷ್ಟ ಜಾತಿ ಪೂರ್ವಭಾವಿ ಸಭೆಯಲ್ಲಿ ಧರ್ಮದಲ್ಲಿ ಬೌದ್ಧ ಎಂದು ನಮೋದಿಸಿ ಹಾಗೂ ಅ.14 ರಂದು ಬೌದ್ಧ ಸಮ್ಮೇಳನ ಕುರಿತು ಮಾತನಾಡಿದರು. ಪರಿಶಿಷ್ಟ ಜಾತಿಯವರು ಬೌದ್ಧ ಎಂದು ಬರೆಸಿದಲ್ಲಿ ಕೇಂದ್ರ ಸರಕಾರದ ಆದೇಶದಂತೆ ಮೀಸಲಾತಿಗೆ ಯಾವುದೇ ತೊಂದರೆಯಾಗುವುದಿಲ್ಲ. ಈ ಬಗ್ಗೆ ದಲಿತಪರ ಸಂಘಟನೆಗಳು ಹಳ್ಳಿ ಹಳ್ಳಿಗಳಲ್ಲಿ ಪ್ರಚಾರ ಮಾಡಿ ಸಮೀಕ್ಷೆಯ ಕಲಂ 8 ರಲ್ಲಿನ 6ನೇ ಕ್ರಮ ಸಂಖ್ಯೆಯಲ್ಲಿ ಬೌದ್ಧ ಎಂದು ತಪ್ಪದೇ ಬರೆಸಲು ಮಾರ್ಗದರ್ಶನ ಮಾಡಬೇಕು ಎಂದು ತಿಳಿಸಿದರು. ಇದೇ‌ ತಿಂಗಳ 22 ರಿಂದ ಸಮೀಕ್ಷೆ ನಡೆಸಲಾಗುತ್ತಿದ್ದು, ಅಂಬೇಡ್ಕರ್ ಅವರ ಅನುಯಾಯಿಗಳಾದ ನಾವು ಅಂಬೇಡ್ಕರ್…

Read More

ತುಮಕೂರು: ವಿಶ್ವವಿದ್ಯಾಲಯದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಡೀನ್ ಹಾಗೂ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಹೆಚ್. ನಾಗಭೂಷಣ ಅವರು ಮತ್ತೊಮ್ಮೆ ಜಾಗತಿಕ ಮಾನ್ಯತೆಯನ್ನು ಗಳಿಸಿದ್ದಾರೆ. ಅಮೆರಿಕದ ಸ್ಟಾನ್‌ಫೋರ್ಡ್ ವಿಶ್ವವಿದ್ಯಾಲಯ ಮತ್ತು ಎಲ್ಸೆವಿಯರ್ ಸಂಸ್ಥೆಗಳು ಸಂಯುಕ್ತವಾಗಿ ಪ್ರಕಟಿಸಿರುವ ವಿಶ್ವದ ಶ್ರೇಷ್ಠ 2% ವಿಜ್ಞಾನಿಗಳ ಪಟ್ಟಿಯಲ್ಲಿ ಅವರು ಸ್ಥಾನ ಪಡೆದಿದ್ದಾರೆ. ವಿಶೇಷವೆಂದರೆ, ಇದು ಡಾ. ನಾಗಭೂಷಣ ಅವರ ಸತತ ಆರನೇ ವರ್ಷವೂ ಈ ಪ್ರತಿಷ್ಠಿತ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಿರುವುದು. ಅವರ ಸಾಧನೆ ತುಮಕೂರು ವಿಶ್ವವಿದ್ಯಾಲಯಕ್ಕೂ, ದೇಶಕ್ಕೂ ಕೀರ್ತಿಯನ್ನು ತಂದಿದೆ. ಜಾಗತಿಕ ಮಟ್ಟದಲ್ಲಿ ಅತ್ಯಂತ ವಿಶ್ವಾಸಾರ್ಹವೆಂದು ಪರಿಗಣಿಸಲ್ಪಡುವ ಈ ಪಟ್ಟಿಯಲ್ಲಿ, ಒಟ್ಟು ಉಲ್ಲೇಖಗಳು (citations), H-ಇಂಡೆಕ್ಸ್, ಸಹಲೇಖಕರ ತಿದ್ದುಗೊಳಿಸಿದ ಅಳತೆಗಳು (co-authorship adjusted measures) ಮುಂತಾದ ಮಾನದಂಡಗಳ ಆಧಾರದ ಮೇಲೆ ವಿಜ್ಞಾನಿಗಳನ್ನು ಮೌಲ್ಯಮಾಪನ ಮಾಡಲಾಗುತ್ತದೆ. ಇತ್ತೀಚಿನ ಪಟ್ಟಿಯಲ್ಲಿ, ಡಾ.ನಾಗಭೂಷಣ ಅವರು ವಿಶ್ವದ ಶ್ರೇಷ್ಠ 2% ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದು ವಿಶ್ವದ ಅತ್ಯಂತ ಪ್ರಭಾವಶಾಲಿ ಸಂಶೋಧಕರ ಪೈಕಿ ಒಬ್ಬರಾಗಿ ಹೊರಹೊಮ್ಮಿದ್ದಾರೆ. ಭೌತಶಾಸ್ತ್ರ ಮತ್ತು ವಸ್ತು…

Read More