Author: admin

ಇದತ್ ಪ್ರಕರಣದಲ್ಲಿ ಖುಲಾಸೆಗೊಂಡ ಕೆಲವೇ ಗಂಟೆಗಳ ನಂತರ, ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಸಂಸ್ಥಾಪಕ ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಬುಶ್ರಾ ಬೀಬಿ ಅವರನ್ನು ಭಾನುವಾರ ಹೊಸ ತೋಶಖಾನಾ ಪ್ರಕರಣದಲ್ಲಿ ಆರು ದಿನಗಳ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಪಾಕಿಸ್ತಾನ ಮೂಲದ ಎಆರ್ವೈ ನ್ಯೂಸ್ ವರದಿ ಮಾಡಿದೆ. ಉತ್ತರದಾಯಿತ್ವ ನ್ಯಾಯಾಲಯದ ನ್ಯಾಯಾಧೀಶರು ಇಮ್ರಾನ್ ಖಾನ್ ಮತ್ತು ಅವರ ಪತ್ನಿ ವಿರುದ್ಧ ತನಿಖೆ ನಡೆಸುವಂತೆ ನ್ಯಾಷನಲ್ ಅಕೌಂಟಬಿಲಿಟಿ ಬ್ಯೂರೋ (ಎನ್ ಎಬಿ) ಗೆ ಆದೇಶಿಸಿದ್ದಾರೆ ಎಂದು ಎಆರ್ವೈ ನ್ಯೂಸ್ ವರದಿ ಮಾಡಿದೆ. ಫೆಡರಲ್ ಸರ್ಕಾರದ ಅನುಮೋದನೆಯ ನಂತರ, ಪಾಕಿಸ್ತಾನದ ಕಾನೂನು ಮತ್ತು ನ್ಯಾಯ ಸಚಿವಾಲಯವು ಪಾಕಿಸ್ತಾನದ ಮಾಜಿ ಪ್ರಧಾನಿ ಮತ್ತು ಅವರ ಪತ್ನಿ ವಿರುದ್ಧ ಹೊಸ ತೋಶಖಾನಾ ಪ್ರಕರಣದಲ್ಲಿ ಜೈಲು ಶಿಕ್ಷೆಯನ್ನು ಅನುಮೋದಿಸಿ ಅಧಿಸೂಚನೆ ಹೊರಡಿಸಿದೆ ಎಂದು ಎಆರ್ವೈ ನ್ಯೂಸ್ ವರದಿ ಮಾಡಿದೆ. ಎನ್ ಎಬಿ ಸುಗ್ರೀವಾಜ್ಞೆ 1999 ರ ಸೆಕ್ಷನ್ 16-ಬಿ ಅಡಿಯಲ್ಲಿ ಅಧಿಸೂಚನೆ ಹೊರಡಿಸಲಾಗಿದ್ದು, ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ವಿಚಾರಣೆಯನ್ನು ಜೈಲಿನ…

Read More

ಪಾವಗಡ: ಪಟ್ಟಣದ ಶ್ರೀಮತಿ ಮತ್ತು ಶ್ರೀ ವೈ ಇ ರಂಗಯ್ಯ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಂಕಿರ್ಣದಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದ ನೂತನ ಕಚೇರಿಯನ್ನು ಪಾವಗಡ ಶಾಸಕರಾದ ಹೆಚ್.ವಿ .ವೆಂಕಟೇಶ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು,  ಪಾವಡ ಬರದ ನಾಡು ಎಂದು ಕರೆಯಲ್ಪಟ್ಟರೂ ವಿದ್ಯಾಭ್ಯಾಸಕ್ಕೆ ಯಾವುದೇ ಬರ ಇಲ್ಲ,  ಏಕೆಂದರೆ ಪಾವಡ ಪಟ್ಟಣದಲ್ಲಿ ಓದಿದಂತಹ ಅನೇಕರು ಇಂದು ಉತ್ತಮ ಹುದ್ದೆಗಳಲ್ಲಿ ಇರುವಂತದ್ದು ನಾವು ಕಾಣುತ್ತಿದ್ದೇವೆ. ಇವತ್ತು ಕೆಎಸ್ ಐಎಸ್ ಹಾಗೂ ಯುನಿವರ್ಸಿಟಿ ಲೆವೆಲ್ ಗಳಲ್ಲಿ ದೊಡ್ಡ ದೊಡ್ಡ ಹುದ್ದೆಗಳು ಇರುವುದು ನಾವು ಗಮನಿಸಬಹುದು ಎಂದರು. ಈ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದ ಗೌರವ ಅಧ್ಯಕ್ಷ ಚಿನ್ನ ವೆಂಕಟರಮಣಪ್ಪ, ಸಂಘದ ಅಧ್ಯಕ್ಷರಾಗಿ ತಿಪ್ಪೇಸ್ವಾಮಿ, ಉಪಾಧ್ಯಕ್ಷರಾದ ಸ್ಟುಡಿಯೋ ಅಮರ್, ಪ್ರಧಾನ ಕಾರ್ಯದರ್ಶಿಯಾಗಿ ಫಾಸ್ಟಿಂಗ್ ಮೈಕಲ್ ಪ್ರದೀಶ್, ಕಾರ್ಯದರ್ಶಿಯಾಗಿ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಕೆ.ಓ.ಮಾರಪ್ಪ, ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ನಾಗರತ್ನಮ್ಮ ಎಸ್., ಪದಾಧಿಕಾರಿಗಳಾದ ವೆಂಕಟೇಶಲು, ಮಲ್ಲಿಕಾರ್ಜುನ, ಇಮ್ರಾನ್ ಉಲ್ಲಾ, ಸತ್ಯನಾರಾಯಣ, ನರಸಿಂಹ ಮೂರ್ತಿ, ಚಿನ್ನ…

Read More

ಪಾವಗಡ: ರಾಯದುರ್ಗ–ತುಮಕೂರು ಮಾರ್ಗದ ನೂತನ ರೈಲ್ವೇ ಕಾಮಗಾರಿಯನ್ನು  ಕೇಂದ್ರ ರೈಲ್ವೇ ಖಾತೆ ಸಚಿವ ವಿ.ಸೋಮಣ್ಣ ಶನಿವಾರ ರೊಪ್ಪ ಗ್ರಾಮದ ಬಳಿ ಅಧಿಕಾರಿ ಗಳೊಂದಿಗೆ ಪರಿಶೀಲನೆ ಮಾಡಿದರು. ಈ ವೇಳೆ ಮಾತನಾಡಿದ ಅವರು,  2026 ಡಿಸೆಂಬರ್ 30 ರೊಳಗೆ ರಾಯದುರ್ಗ -ತುಮಕೂರು ಮಾರ್ಗದ ರೈಲ್ವೇ ಕಾಮಗಾರಿ ಮುಕ್ತಾಯಗೊಂಡು ಸಾರ್ವಜನಿಕರ ಉಪಯೋಗಕ್ಕೆ ಸಿದ್ದವಾಗಲಿದೆ ಎಂದು ಭರವಸೆ ನೀಡಿದರು. ರಾಯದುರ್ಗ–ತುಮಕೂರು ರೈಲ್ವೇ ಯೋಜನೆಗೆ 700 ಕೋಟಿ ಹಾಗೂ ಚಿತ್ರದುರ್ಗ ತುಮಕೂರು ರೈಲ್ವೆ ಕಾಮಗಾರಿಗೆ 300 ಕೋಟಿ ರೂಪಾಯಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು ಕಾಮಗಾರಿ ಚುರುಕುಗೊಂಡಿವೆ ಎಂದರು. ಇದೇ ಸಂದರ್ಭದಲ್ಲಿ ಸ್ಥಳೀಯ ಶಾಸಕ ಎಚ್.ವಿ.ವೆಂಕಟೇಶ್, ಮಾಜಿ ಸಚಿವ ವೆಂಕಟರಮಣಪ್ಪ, ಮಾಜಿ ಶಾಸಕ ಕೆ.ಎಂ ತಿಮ್ಮರಾಯಪ್ಪ, ರಾಜ್ಯ ರೈತ ಮೋರ್ಚಾದ ಶಿವಪ್ರಸಾದ್, ಬಿಜೆಪಿಯರಂಗಣ್ಣ, ಅಶೋಕ್, ಡಾ.ವೆಂಕಟರಾಮಯ್ಯ, ಅಲಕುಂದರಾಜ್, ಜೆಡಿಎಸ್‌ನ ಅಂಜಿನಪ್ಪ, ಎನ್.ಎ.ಈರಣ್ಣ, ಶಂಕರರೆಡ್ಡಿ, ಬತ್ತಿನೇನಿ ನಾನಿ, ನಲ್ದಾನಿ ಸುರೇಂದ್ರ, ಸೊಗಡು ವೆಂಕಟೇಶ್ ಇದ್ದರು. ವರದಿ : ನಂದೀಶ್ ನಾಯ್ಕ, ಪಾವಗಡ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ…

Read More

ತುಮಕೂರು: ಇಂದು ಬೆಳಗ್ಗೆ  ಜಿಲ್ಲಾಧಿಕಾರಿ ಶುಭ ಕಲ್ಯಾಣ್ ದಿಢೀರ್ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ ಮಕ್ಕಳ ಶೈಕ್ಷಣಿಕ ಪ್ರಗತಿ ಪರಿಶೀಲನೆ ನಡೆಸಿದರು. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಚಿಕ್ಕನಹಳ್ಳಿ ಬಳಿ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಕ್ಕಳ ಬಳಿ ತೆರಳಿದ ಜಿಲ್ಲಾಧಿಕಾರಿ ಪಠ್ಯದ ಕುರಿತಾದ ಕೆಲ ಅಂಶಗಳನ್ನು ಮಕ್ಕಳಿಗೆ ಕೇಳಿದರು. ಈ ಕುರಿತಂತೆ ವಿದ್ಯಾರ್ಥಿಗಳು ಸಹ ಸಮರ್ಪಕ ಉತ್ತರ ನೀಡಿದರು. ಅಲ್ಲದೆ ಕೇವಲ ವಿದ್ಯಾಭ್ಯಾಸದ ಕಡೆ ಗಮನಹರಿಸಿ ಅನುಮಾನ ಬಂದ ನಂತರ ಅದನ್ನು ಗುರುತು ಮಾಡಿಕೊಂಡು ಶಿಕ್ಷಕರ ಬಳಿ ಅದನ್ನು ಪರಿಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಅಲ್ಲದೆ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಯಾವುದೇ ರೀತಿಯ ಸಮಸ್ಯೆಗಳಿದ್ದಲ್ಲಿ ತಮ್ಮ ಗಮನಕ್ಕೆ ತರುವಂತೆಯೂ ಕೂಡ ತಿಳಿಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ:…

Read More

ಭಾರತೀಯ ಅಂಚೆ ಇಲಾಖೆ ಗ್ರಾಮೀಣ ಡಾಕ್ ಸೇವಕ್ 44,228 ಹುದ್ದೆಗಳಿಗೆ ಬಂಪರ್ ನೇಮಕಾತಿ (ಪೋಸ್ಟ್ ಆಫೀಸ್ ಜಿಡಿಎಸ್ ಖಾಲಿ ಹುದ್ದೆ) ಬಿಡುಗಡೆ ಮಾಡಿದ್ದು, ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಒಟ್ಟು 44000 ಕ್ಕೂ ಹೆಚ್ಚು ಹುದ್ದೆಗಳನ್ನು ನೇಮಕ ಮಾಡಲಾಗುತ್ತದೆ. ಇದರ ಅಡಿಯಲ್ಲಿ, ಉತ್ತರ ಪ್ರದೇಶ, ಉತ್ತರಾಖಂಡ, ಬಿಹಾರ, ಛತ್ತೀಸ್ ಗಢ, ದೆಹಲಿ, ರಾಜಸ್ಥಾನ ಸೇರಿದಂತೆ ಇತರ ರಾಜ್ಯಗಳಲ್ಲಿ ಖಾಲಿ ಇರುವ ಜಿಡಿಎಸ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು indiapostgdsonline.gov.in ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು (ಪೋಸ್ಟ್ ಆಫೀಸ್ ಜಿಡಿಎಸ್ ಖಾಲಿ ಹುದ್ದೆ 2024 ಅಧಿಸೂಚನೆ). ಇಲ್ಲಿ ಅಪ್ಲಿಕೇಶನ್ ಗಾಗಿ ಲಿಂಕ್ ಅನ್ನು ಸಕ್ರಿಯಗೊಳಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 5, 2024. ನ್ಯೂ ಇಂಡಿಯಾ ಪೋಸ್ಟ್ ಜಿಡಿಎಸ್ ಹುದ್ದೆ 2024 ದಿನಾಂಕ: ಪ್ರಮುಖ ದಿನಾಂಕಗಳು ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 15-07-2024 ಅರ್ಜಿ ಸಲ್ಲಿಸಲು ಕೊನೆ…

Read More

ಮಕ್ಕಳಲ್ಲಿ ಅಪೌಷ್ಠಿಕತೆ ನಿವಾರಣೆಗೆ ರಜಾ ದಿನ ಹೊರತುಪಡಿಸಿ, ಪ್ರಸ್ತುತ ಮಕ್ಕಳಿಗೆ ವಾರಕ್ಕೆ 2 ದಿನ ಮೊಟ್ಟೆ ನೀಡಲಾಗುತ್ತಿದೆ. ವಾರದ 6 ದಿನವೂ ಮೊಟ್ಟೆ ವಿತರಣೆಗೆ ನಿರ್ಧರಿಸಲಾಗಿದೆ. ಇನ್ನೊಂದು ತಿಂಗಳಲ್ಲಿ ಅದು ಕಾರ್ಯರೂಪಕ್ಕೆ ಬರಲಿದೆ. 6 ದಿನ ನೀಡುವುದರಿಂದ ವಾರ್ಷಿಕ 1,400 ಕೋಟಿ ರೂ. ವೆಚ್ಚವಾಗಲಿದೆ. ಸರ್ಕಾರಿ ಶಾಲೆಯ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಂತ, ಹಂತವಾಗಿ ಶಿಕ್ಷಕರನ್ನು ನೇಮಕ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ. ಈ ಮೊದಲು ಎಂಟನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಮಾತ್ರ ವಾರಕ್ಕೊಮ್ಮೆ ಮೊಟ್ಟೆ ವಿತರಣೆ ಮಾಡಲಾಗುತ್ತಿತ್ತು. ಇದೀಗ ಸಿದ್ದರಾಮಯ್ಯ ನೇತೃತ್ವದ  ಸರ್ಕಾರ ಅದನ್ನು 10ನೇ ತರಗತಿಯವರೆಗೆ ವಿಸ್ತರಿಸಿದೆ. ವಾರದಲ್ಲಿ ಒಂದು ದಿನದ ಬದಲು ಎರಡು ದಿನಕ್ಕೆ ಹೆಚ್ಚಿಸಲಾಗಿತ್ತು. ಇನ್ನು ವಾರವಿಡೀ ವಿತರಿಸಲಾಗುವುದು ಎಂದು ತಿಳಿಸಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ:…

Read More

ಕಾವೇರಿ ನೀರು ಹಂಚಿಕೆಯ ವಿಚಾರವಾಗಿ  ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ವಿಪಕ್ಷ ನಾಯಕರು ಹಾಗೂ ಸಚಿವರು ತಮಿಳುನಾಡಿಗೆ ನೀರು ಹರಿಸದಂತೆ ಸರ್ಕಾರಕ್ಕೆ ಸಲಹೆ ನೀಡಿದರು. ಸಭೆ ಬಳಿಕ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿ, ಸೋಮವಾರದಿಂದ ತಮಿಳುನಾಡಿಗೆ ರೂ.8,000 ಕ್ಯೂಸೆಕ್ ನೀರು ಹರಿಸಲಾಗುತ್ತದೆ ಎಂದು ತಿಳಿಸಿದರು. ತಮಿಳುನಾಡಿಗೆ ನಿತ್ಯ 11 ಸಾವಿರ ಕ್ಯೂಸೆಕ್ ಬದಲು 8 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತದೆ. ನಾಳೆಯಿಂದ ನಿತ್ಯ 8000 ಕ್ಯೂ ಸೆಟ್ ನೀರು ಬಿಡುಗಡೆ ಮಾಡುತ್ತೇವೆ. ಎಂದು ಅವರು ತಿಳಿಸಿದರು.  ನೀರು ಬಿಡುಗಡೆ ಮಾಡಬಾರದೆಂದು ಜುಲೈ 12ರಂದು ನಿರ್ಧರಿಸಿದ್ದೆವು. ಅಂದೇ ಸರ್ವ ಪಕ್ಷಗಳ ಸಭೆ ಕರೆಯಲು ತೀರ್ಮಾನ ಮಾಡಿದ್ದೆವು. ತಮಿಳುನಾಡಿಗೆ ಈಗ ನೀರು ಬಿಡುಗಡೆ ಬೇಡವೆಂದು ನಿರ್ಧರಿಸಲಾಗಿದೆ ಸಿಡಬ್ಲ್ಯೂಆರ್‌ ಸಿ ಶಿಫಾರಸು ವಿರುದ್ಧ ಸಿಡಬ್ಲ್ಯೂಎಂ ಮೇಲ್ಮನವಿ ಸಲ್ಲಿಸಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು. ಮಳೆ ಕಡಿಮೆಯಾದರೆ ರೂ.8,000 ಕ್ಯೂಸೆಕ್ ಗಿಂತ ಕಡಿಮೆ ಬಿಡುತ್ತೇವೆ. ಒಂದು ವೇಳೆ ಮಳೆ ಹೆಚ್ಚಾದರೆ…

Read More

ಅನಂತ್‌ ಅಂಬಾನಿ ಮದುವೆ ಮುಗಿದರೂ ವಿವಾಹನ ನಂತರದ ಕಾರ್ಯಕ್ರಮಗಳು ಇನ್ನೂ ನಡೆಯುತ್ತಲೇ ಇದೆ. ಅನಂತ್‌ ಅಂಬಾನಿ–ರಾಧಿಕಾ ಮರ್ಚೆಂಟ್‌ ಮದುವೆ ಅದ್ಧೂರಿಯಾಗಿ ನಡೆದಿದೆ. ಬಾಲಿವುಡ್‌ ತಾರೆಗಳು ಸೇರಿದಂತೆ ಅನೇಕ ರಂಗದ ಗಣ್ಯರು ಈ ಅದ್ಧೂರಿ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಮದುವೆಗೆ ಆಗಮಿಸಿದ ಅನಂತ್‌ ಅಂಬಾನಿಯ 25 ಖಾಸ್‌ ಗೆಳೆಯರಿಗೆ  ಕೋಟಿ ಕೋಟಿ ಮೌಲ್ಯದ ಗಿಫ್ಟ್‌ ದೊರಕಿದೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ ವರ ಅನಂತ್‌ ತನ್ನ 25 ಅತ್ಯಾಪ್ತರಿಗೆ ಲಿಮಿಡೆಟ್‌ ಎಡಿಷನ್‌ Audemard Piguet ಕೈಗಡಿಯಾರ ನೀಡಿದ್ದಾರೆ ಎನ್ನಲಗಿದೆ. ಆರ್ಡರ್‌ ಕೊಟ್ಟು ವಿಶೇಷವಾಗಿರುವಂತಹ 25 ವಾಚ್‌ ಗಳನ್ನು ತರಿಸಲಾಗಿತ್ತು. ಇದರ ಬೆಲೆ ತಲಾ 1.5 ರಿಂದ 2 ಕೋಟಿ ರೂಪಾಯಿ ಆಗಿದೆ ಎನ್ನಲಾಗಿದೆ. ಈ ವಾಚನ್ನು 18 ಕ್ಯಾರಟ್‌ ಚಿನ್ನದಿಂದ ತಯಾರಿಸಲಾಗಿದೆ. ಇದು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಮೂಲಗಳ ಪ್ರಕಾರ ಈ ಕೈ ಗಡಿಯಾರವನ್ನು ಮಿಜಾನ್‌ ಜಾಫರಿ, ವೀರ್‌ ಪಹಾಡಿಯಾ, ಶಿಖರ್‌ ಫಹಾಡಿಯಾ, ಶಾರೂಖ್‌ ಖಾನ್‌, ರಣವೀರ್‌ ಸಿಂಗ್‌, ಹಾರ್ದಿಕ್‌ ಪಾಂಡ್ಯ ಸೇರಿ…

Read More

ಶಂಕರ್‌ ನಿರ್ದೇಶನದ ಸಿನಿಮಾ ನಟ ಕಮಲ್‌ ಹಾಸನ್‌ ಅವರ ಚಿತ್ರ ಇಂಡಿಯನ್‌ 2 ಭಾರತದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಈ ಸಿನಿಮಾ ಅಭಿಮಾನಿಗಳನ್ನು ತನ್ನತ್ತ ಸೆಳೆಯುವಲ್ಲಿ ವಿಫಲಗೊಂಡಿದ್ದು, ವಿಮರ್ಶಕರು, ಪ್ರೇಕ್ಷಕರಿಂದ ನೆಗೆಟಿವ್‌ ಪ್ರತಿಕ್ರಿಯೆ ಪಡೆದುಕೊಂಡಿದೆ. ಇಂಡಿಯನ್‌ 2 ಡಿಜಿಟಲ್‌ ಸ್ಟ್ರೀಮಿಂಗ್‌ ಹಕ್ಕನ್ನು NETFLIX ಪಡೆದುಕೊಂಡಿದೆ. ಇಂಡಿಯನ್‌ –2 ಗಿಂತ 28 ವರ್ಷಗಳ ಹಿಂದೆ ಬಂದಿದ್ದ ಪ್ರೀಕ್ವೆಲ್‌ ನ್ನು ಜನ ತುಂಬಾ ಇಷ್ಟ ಪಡುತ್ತಿದ್ದಾರೆ. ಇಂಡಿಯನ್‌ʼ ಸಿನಿಮಾ ನೋಡದವರು ಇದೀಗ ನೋಡಲು ಬಯಸುತ್ತಿದ್ದಾರೆ. ನೆಟ್‌ ಫಿಕ್ಸ್‌ ನಲ್ಲಿ ಸಿನಿಮಾ ಸ್ಟ್ರೀಮಿಂಗ್‌ ಆಗುತ್ತಿದೆ ಎನ್ನಲಾಗಿದೆ. ಇಂಡಿಯನ್‌ ಪ್ರೀಕ್ವೆಲ್‌ ಸಿನಿಮಾ ನೋಡಬಹುದು, ಆದರೆ ಸೀಕ್ವೆಲ್‌ ಸಿನಿಮಾ ನೋಡಲು ಆಗುವುದಿಲ್ಲ ಎಂದಿದ್ದಾರೆ. ಇವೆಲ್ಲದವರ ನಡುವೆ ಕೆಲವರು ʼಇಂಡಿಯನ್‌ʼ ಸಿನಿಮಾ ನೋಡಬೇಕು ಎಂದು ಬಯಸುತ್ತಿದ್ದು, ಇದೀಗ ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್‌ ಆಗುತ್ತಿದೆ. ನೆನ್ನೆ ರಾತ್ರಿಯಿಂದಲೇ ʼಇಂಡಿಯನ್‌ʼ ಸಿನಿಮಾ ರಿಲೀಸ್‌ ಆಗಲಿದೆ. 4K ವರ್ಷನ್‌ ನಲ್ಲಿ ನೋಡಲು ಸಿಗಲಿದೆ ಎನ್ನಲಾಗಿದೆ. ಇಂಡಿಯನ್‌ -2 ಸಿನಿಮಾ ಇನ್ನೇನು ಕೆಲವೇ ದಿನಗಳಲ್ಲಿ ನೆಟ್‌ ಫ್ಲಿಕ್ಸ್‌ನಲ್ಲಿ…

Read More

ಕಾಪಿರೈಟ್‌ ಉಲ್ಲಂಘನೆ ಆರೋಪದಲ್ಲಿ ನಟ ರಕ್ಷಿತ್‌ ಶೆಟ್ಟಿ ವಿರುದ್ಧ ಎಫ್‌ ಐಆರ್‌ ದಾಖಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಎಂಆರ್‌ ಟಿ ಮ್ಯೂಸಿಕ್‌ ಪಾಲುದಾರ ನವೀನ್‌ ಕುಮಾರ್‌ ಎಂಬುವವರು ನೀಡಿದ ದೂರಿನ ಮೇರೆಗೆ ಬೆಂಗಳೂರಿನ ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನ್ನ ಸಿನಿಮಾದ ಎರಡು ಹಾಡುಗಳನ್ನು ಅನುಮತಿ ಇಲ್ಲದೇ ನಟ ರಕ್ಷಿತ್‌ ಶೆಟ್ಟಿ ಬಳಸಿಕೊಂಡಿದ್ದಾರೆ ಎಂದು ದೂರು ನೀಡಲಾಗಿದೆ. ನ್ಯಾಯ ಎಲ್ಲಿದೆ ಮತ್ತು ಗಾಳಿ ಮಾತು ಎಂಬ 2 ಚಿತ್ರದ ಹಾಡುಗಳನ್ನು ಅನುಮತಿ ಇಲ್ಲದೆ ಬಳಕೆ ಮಾಡಿದ ಹಿನ್ನೆಲೆಯಲ್ಲಿ ರಕ್ಷಿತ್‌ ಶೆಟ್ಟಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ ಎಂದು ವರದಿಯಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

Read More