Author: admin

ಬೀದರ್: ಜಿಲ್ಲಾ ಮಕ್ಕಳ ಕಲ್ಯಾಣ ಇಲಾಖೆ ಬೀದರ್ ಹಾಗೂ ಬೋಸ್ಕೋ ಬೆಂಗಳೂರು ಮತ್ತು ಡಾನ್ ಬಾಸ್ಕೋ ಬೀದರ್ ಇವರ ಸಂಯುಕ್ತ ಆಶ್ರಯದಲ್ಲಿ ಪೋಷಕತ್ವ ಯೋಜನೆ ಜಾರಿಯಲ್ಲಿದೆ. ಆದ್ದರಿಂದ ಇಂದು ಬೀದರ್  ಜಿಲ್ಲೆಯ ಹಳ್ಳದಕೇರಿ ಗ್ರಾಮದ ಅಂಗನವಾಡಿ ಕೇಂದ್ರ 1ರಲ್ಲಿ ಪೋಷಕತ್ವ ಯೋಜನೆ ಕುರಿತು ಮಾಹಿತಿ ನೀಡಲಾಯಿತು. ಪೋಷಕತ್ವ ಯೋಜನೆ ಅಡಿಯಲ್ಲಿ ಮಗುವಿನ ಪಾಲನೆ ಘೋಷಣೆ ರಕ್ಷಣೆಗಾಗಿ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮತ್ತು ಬೋಸ್ಕೋ ಬೆಂಗಳೂರು ಮತ್ತು ಡಾನ್ ಬಾಸ್ಕೋ ಬೀದರ್ ಇವರ ಆದೇಶದ ಮೇರೆಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಪೋಷಕತ್ವ ಯೋಜನೆ ಕುರಿತು ಎಂದರೆ ಜೈವಿಕ ಕುಟುಂಬವಲ್ಲದ ಬೇರೊಂದು ಕುಟುಂಬಕ್ಕೆ ತಾತ್ಕಾಲಿಕ ಅಥವಾ ವಿಸ್ತರಿಸಲ್ಪಟ್ಟ ಅವಧಿಯವರೆಗೆ 2 ವರ್ಷಕ್ಕೆ ಮೀರದ ಅವಧಿಯವರೆಗೆ ಬಾಲ ನ್ಯಾಯ ಕಾಯ್ದೆ 2005ರ ಕಲಂ 44ರ ಪ್ರಕಾರ ಮಗುವನ್ನು ಕಲ್ಪಿಸಿಕೊಡಲಾಗುತ್ತದೆ ಎಂದು ಬೀದರ್ ಜಿಲ್ಲೆಯ ಡಾನ್ ಬೋಸ್ಕೋ ಪೋಷಕತ್ವ ಯೋಜನೆಯ ಸಂಯೋಜಕರಾದ ರಮೇಶ್ ಅವರು ತಿಳಿಸಿದರು.…

Read More

ಬೀದರ್: ಜಿಲ್ಲೆಯ ಔರಾದ ತಾಲೂಕಿನ ಸಂತಪೂರ ಗ್ರಾಮದ ಮರಿಯ ಕೃಪಾ ದವಾಖಾನೆ, ದೀಪಾಲಿಯ ಸಮಾಜ ಸೇವಾ ಸಂಸ್ಥೆ ಸಂತಪೂರ, ಆರ್ಬಿಟ್ ಸಮಾಜ ಸೇವಾ ಹುಮ್ನಾಬಾದ್, ಹಾಗೂ ಎಸ್.ಬಿ.ಪಾಟೀಲ್ ದಂತ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ, ಬೀದರ್, ಇವರ ಸಂಯುಕ್ತ ಆಶ್ರಯದಲ್ಲಿ ಇಂದು  ಸಂತಪೂರನ ಮರಿಯ ಕೃಪಾ ಆಸ್ಪತ್ರೆಯಲ್ಲಿ ಉಚಿತ ದಂತ ತಪಾಸಣಾ ಆರೋಗ್ಯ ಶಿಬಿರ ಕಾರ್ಯಕ್ರಮ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಂತಪೂರ ಪ್ರಾಥಮಿಕ ಆರೋಗ್ಯ ಕೇಂದ್ರ ದಂತ ವೈದ್ಯಾಧಿಕಾರಿಗಳಾದ ರೇಣುಕಾರವರು ಉದ್ಘಾಟಿಸಿ ಮಾತನಾಡಿದರು. ಎಸ್.ಬಿ.ಪಾಟೀಲ್ ದಂತ ಮಹಾವಿದ್ಯಾಲಯದ ಎಚ್ ಓ ಡಿ ಸಿದ್ದಣ ಗೌಡ ಅವರು ದಂತ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ವಿಶೇಷ ಉಪನ್ಯಾಸ ಮಂಡಿಸಿದರು ಮತ್ತು ಜಾಗೃತಿಗೊಳಿಸಿದರು. ಕೆಪಿಸಿಸಿ ಸಾಮಾಜಿಕ ಮಾಧ್ಯಮ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಔರಾದ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಮುಖಂಡರಾದ ಸುಧಾಕರ್ ಕೊಳ್ಳುರ ಅವರು ಮಾತನಾಡಿ, ದೀಪಾಲಯ ಸಂಸ್ಥೆ ಇತರ ಸಾಮಾಜಿಕ ಕಾರ್ಯಗಳಿಗೆ ಹೆಸರಾಗಿದೆ ಎಂದು ಶ್ಲಾಘನೀಯ ವ್ಯಕ್ತಪಡಿಸಿದ್ದರು. ಹೋಲಿ ಕ್ರಾಸ್ ಚರ್ಚ್ ಫಾದರ್ ಕ್ಲಿವನ್ ಗೋಮ್ಸ್ ಅಧ್ಯಕ್ಷತೆ ವಹಿಸಿಕೊಂಡು…

Read More

ಸರಗೂರು: ಸತ್ವಯುತ ಆಹಾರ ಸೇವನೆ ಮಾಡುವುದು ಮತ್ತು ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಹಾದನೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹಾದನೂರು ಪ್ರಕಾಶ್  ಹೇಳಿದರು. ತಾಲೂಕಿನ ಹಾದನೂರು ಗ್ರಾ.ಪಂ. ವ್ಯಾಪ್ತಿಯ ಹಾದನೂರು ಗ್ರಾಮದ ಅಂಗನವಾಡಿ ಸಭಾಂಗಣದಲ್ಲಿ ಸೋಮವಾರದಂದು ಬಡಗಲಪುರ ಆರೋಗ್ಯ ಕೇಂದ್ರ ಹಾಗೂ ಮಕ್ಕಳ ಜಾಗೃತಿ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಪೌಷ್ಟಿಕ ಶಿಬಿರ ಸಪ್ತಾಹ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ವ್ಯಕ್ತಿಯ ದೇಹದಲ್ಲಿ ಸರಾಗವಾಗಿ ರಕ್ತ ಸಂಚಲನೆಯಾಗುತ್ತಿದ್ದರೆ ಅಂಥಹ ವ್ಯಕ್ತಿ ಆರೋಗ್ಯವಾಗಿರುತ್ತಾನೆ.  ಪೌಷ್ಟಿಕಾಂಶಯುಕ್ತ ಆಹಾರದ ಕೊರತೆಯಿಂದ ಗ್ರಾಮೀಣ ಪ್ರದೇಶದ ಮಹಿಳೆ ಮತ್ತು ಮಕ್ಕಳು ಸಾವನ್ನಪ್ಪುತ್ತಿದ್ದು. ಅಂಗನವಾಡಿ ಕಾರ್ಯಕರ್ತೆಯರು ಪೌಷ್ಟಿಕ ಆಹಾರ ವಿತರಣೆಯಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು ಎಂದು  ಹೇಳಿದರು. ಗ್ರಾಮೀಣ ಭಾಗದಲ್ಲಿ ಇರುವಂತಹ ಗರ್ಭಿಣಿಯರು ಸತ್ವಯುತ ಆಹಾರ ಸೇವನೆಯಿಂದ ಮುಂದೆ ಜನಿಸುವ ಮಗುವಿಗೆ ಮತ್ತು ತಾಯಿಗೆ ಒಳ್ಳೆಯದಾಗುತ್ತದೆ. ಈ ಕುರಿತಂತೆ ಗರ್ಭಿಣಿ ಮಹಿಳೆಯರಿಗೆ ಸೂಕ್ತ ಮಾರ್ಗದರ್ಶನ ನೀಡುವ ಮಹತ್ತರ ಜವಬ್ದಾರಿ ಅಂಗನವಾಡಿ ಕಾರ್ಯಕರ್ತೆಯರ ಮೇಲಿದೆ ಎಂದು ತಿಳಿಸಿದರು.…

Read More

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದ ರೈತ ಮಹಿಳೆ ನೀಡಿದ್ದ ದೂರಿನ ಅನ್ವಯ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ನೌಕರರು ಸೇರಿ 15 ಮಂದಿ ವಿರುದ್ದ ಭಾನುವಾರ ಪ್ರಕರಣ ದಾಖಲಾಗಿದೆ. ಅರಣ್ಯ ಇಲಾಖೆ ಡಿಆರ್​​ ಎಫ್ ಒ ಜ್ಞಾನಶೇಖರ್, ಡಿಆರ್ ​​ಎಫ್ ಒ ಕಾರ್ತಿಕ್​ ಯಾದವ್​, ಎಸಿಎಫ್ ಸುರೇಶ್,‌ ಡಿಆರ್​​ ಎಫ್ ಒ ಶಿವಕುಮಾರ್ ಇತರ ನೌಕರರಾದ ಶಿವಣ್ಣ, ಸುಚಿತ್ರ, ಸುಬ್ರಹ್ಮಣ್ಯ, ನಾಗೇಶ್, ಸೋಮು, ಪ್ರವೀಣ್, ಮಣಿಕಂಠ, ವಿನಯ್ ಕುಮಾರ್, ಸಂತೋಷ್, ರಾಜಪ್ಪ ಹಾಗೂ ಬಸವೇಗೌಡ ಎಂಬುವರ ವಿರುದ್ದ ಎಫ್​ ಐಆರ್​ ದಾಖಲು ಮಾಡಲಾಗಿದೆ. ಬೊಮ್ಮಲಾಪುರ ಗ್ರಾಮದ ರೈತ ಮಹಿಳೆ ಕಮಲಮ್ಮ ಎಂಬುವರು, ಅರಣ್ಯ ಇಲಾಖೆಯವರು ತನ್ನ ಕೈ ಹಿಡಿದು ಎಳೆದಾಡಿ, ಕಪಾಳಕ್ಕೆ ಹೊಡೆದು, ತಳ್ಳಿ ಬೀಳಿಸಿದ್ದಾರೆ. ಅಲ್ಲದೆ, ನನ್ನ ಮಗ ಗಂಗಾಧರ ಸ್ವಾಮಿ ಮತ್ತು ನಮ್ಮ ಜಮೀನಿನ ಬಾಜುದಾರರಾದ ರಘು, ಪ್ರದೀಪ್, ರೇವಣ್ಣ ಅವರುಗಳಿಗೆ ಕೈನಿಂದ ಹೊಡೆದು ನನ್ನ ಮಗನನ್ನು ಕೊಲೆ ಮಾಡುವ ಉದ್ದೇಶದಿಂದ ಕತ್ತು…

Read More

ತಿಪಟೂರು:  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆರ್ಥಿಕ ವ್ಯವಹಾರ ಪಾರದರ್ಶಕವಾಗಿದ್ದು ಮಾದರಿಯಾಗಿದೆ ಎಂದು ಬಳುವನೆರಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ರಾಂಚ್ ಮ್ಯಾನೇಜರ್ ನಿರಂಜನ್ ತಿಳಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ) ತಿಪಟೂರು ತಾಲೂಕು, ಸಾರ್ಥವಳ್ಳಿ ವಲಯದ ಬಲುವನೆರಳು ಸಾಮಾನ್ಯ ಗ್ರಾಹಕ ಸೇವಾಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿದ ಅವರು,  ತಿಪಟೂರು ತಾಲೂಕಿನಲ್ಲಿ ಒಟ್ಟು 3,800 ಸಂಘಗಳಿಗೆ ಎಸ್.ಬಿ.ಐ. ಬ್ಯಾಂಕಿನ ಮೂಲಕ ಆರ್ಥಿಕ ವ್ಯವಹಾರ ನೀಡುತ್ತಿದ್ದು, ಮರುಪಾವತಿ ಉತ್ತಮವಾಗಿದೆ ಎಂದರು. ಸಂಘದ ಪಾಲುದಾರ ಬಂಧುಗಳಿಗೆ ಸದಸ್ಯರ ಸಮ್ಮುಖದಲ್ಲಿ ಒಪ್ಪಿಗೆ ಪಡೆದು ಸದಸ್ಯರ ಬೆರಳಚ್ಚು ಪಡೆಯುವುದರ ಮೂಲಕ  ಸದಸ್ಯರಿಗೆ ನೇರವಾಗಿ ರಾಷ್ಟ್ರೀಕೃತ ಬ್ಯಾಂಕಿನ ಮೂಲಕ ಆರ್ಥಿಕ ಸಹಕಾರ ನೀಡುತ್ತಿರುವುದು ಶ್ಲಾಘನೀಯ ಎಂದರು. ಈ ಸಂದರ್ಭ ಸಾಮಾನ್ಯ ಗ್ರಾಹಕ ಸೇವಾ ಕೇಂದ್ರದಲ್ಲಿ ಸೌಂದರ್ಯ ತಂಡದ ಸದಸ್ಯರಿಗೆ ಸಾಲ ವಿತರಣೆಯಾದ ಬಗ್ಗೆ ದಾಖಲಾತಿಯನ್ನು ವಿತರಿಸಿದರು. ಈ ಸಂದರ್ಭ ತಾಲೂಕಿನ ಯೋಜನಾಧಿಕಾರಿಯವರಾದ ಉದಯ್ ಕೆ., ಕಚೇರಿ ಹಣಕಾಸು ಪ್ರಬಂಧಕರಾದ ರೇವಣ್ಣ ಎಂ. ಹಾಗೂ…

Read More

ಔರಾದ್: ಬೀದರ್ ಜಿಲ್ಲೆಯ ಔರಾದ ತಾಲೂಕಿನ ಬೆಳಕುಣಿ ಚೌದ್ರಿ ಗ್ರಾಮದ ವಾರ್ಡ್ ನಂಬರ್ 2ರಲ್ಲಿ ರಸ್ತೆ ಸಮಸ್ಯೆಯ ಬಗ್ಗೆ ನಿನ್ನೆ(ಭಾನುವಾರ) ನಮ್ಮತುಮಕೂರು ಸವಿವರವಾದ ವರದಿಯೊಂದನ್ನು ಪ್ರಕಟಿಸಿತ್ತು. ಈ ವರದಿಯ ಬೆನ್ನಲ್ಲೇ ಎಚ್ಚೆತ್ತುಕೊಂಡ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ರಸ್ತೆ ನಿರ್ಮಾಣದ ಭರವಸೆಯನ್ನು ಸಾರ್ವಜನಿಕರಿಗೆ ನೀಡಿದ್ದಾರೆ. ಬೀದರ್ ಜಿಲ್ಲೆಯ ಔರಾದ ತಾಲೂಕಿನ ಬೆಳಕುಣಿ ಚೌದ್ರಿ ಗ್ರಾಮದ ವಾರ್ಡ್ ನಂಬರ್ 2 ರಲ್ಲಿ. ಸ್ವಲ್ಪ ಮಳೆ ಬಂದರೂ ಸಹ ರಸ್ತೆ ಕೆಸರುಮಯವಾಗಿ ಅಕ್ಷರಶಃ ಗದ್ದೆಯಾಗಿ ಮಾರ್ಪಡುತ್ತಿದೆ. ಈ ವಿಚಾರದ ಬಗ್ಗೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಗಮನಕ್ಕೆ ಹಲವಾರು ಬಾರಿ ಸಾರ್ವಜನಿಕರು ತಂದರೂ ಅವರು ಕ್ರಮಕೈಗೊಳ್ಳದೇ ನಿರ್ಲಕ್ಷ್ಯವಹಿಸಿರುವುದಾಗಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಗದ್ದೆಯಂತಾದ ರಸ್ತೆ: ಬೆಳಕುಣಿ ಚೌದ್ರಿ ಗ್ರಾಮದ ವಾರ್ಡ್ ನಂಬರ್ 2 ರಲ್ಲಿ ಅವ್ಯವಸ್ಥೆ: ಗಾಢ ನಿದ್ದೆಯಲ್ಲಿರುವ ಅಧಿಕಾರಿಗಳು ನಿನ್ನೆ ವರದಿ ಪ್ರಕಟಗೊಂಡ ಬೆನ್ನಲ್ಲೇ ಔರಾದ್ ತಾಲ್ಲೂಕು ಪಂಚಾಯಿತಿ ಅಧಿಕಾರಿ ಇಓ ಅವರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಕರೆ ಮಾಡಿ…

Read More

ಹಾಸನ: ಹೃದಯಾಘಾತದಿಂದ ಭಾರತದಲ್ಲಿ ಸುಮಾರು 30 ಲಕ್ಷ ಮಂದಿ ಪ್ರತಿ ವರ್ಷ ಸಾವಿಗೀಡಾಗುತ್ತಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಸಿ. ಎನ್​. ಮಂಜುನಾಥ್ ಹೇಳಿದ್ದಾರೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಿರ್ಮಾಣವಾಗಿರುವ ‘ಧರ್ಮಸ್ಥಳದಲ್ಲಿ ನಮ್ಮೂರ ಗಣಪ ಮಂಟಪ’ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೃದಯಾಘಾತ ಪ್ರಕರಣಗಳು ಕೇವಲ ಹಾಸನಕ್ಕೆ ಮಾತ್ರ ಸೀಮಿತವಾಗದೆ ಭಾರತದಲ್ಲಿ ಸುಮಾರು 30 ಲಕ್ಷ ಮಂದಿ ಪ್ರತಿ ವರ್ಷ ಸಾವಿಗೀಡಾಗುತ್ತಿದ್ದಾರೆ ಎಂದು ತಿಳಿಸಿದರು. ಮಾನಸಿಕ ಒತ್ತಡ ಅವರ ಜೀವನದ ಅಭ್ಯಾಸ ಕ್ರಮಗಳು ಮತ್ತು ಧೂಮಪಾನ, ಮದ್ಯಪಾನದಂತಹ ಕೆಟ್ಟ ಚಟಗಳಿಂದ ಸ್ವಯಂ ಪ್ರೇರಿತವಾಗಿ ಅವರು ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದರು. ಇವತ್ತು ದೇಶದಲ್ಲಿ ಯಾರೂ ಮದ್ಯಪಾನ ಮಾಡದವರು ಎಂಬುದನ್ನು ಹುಡುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಧೂಮಪಾನ ಮತ್ತು ಮದ್ಯಪಾನ ಹೃದಯಾಘಾತಕ್ಕೆ ಕಾರಣವಾಗಿದೆ. ಹಾಗೆ ಒತ್ತಡಗಳ ನಡುವೆ ಐಷಾರಾಮಿ ಜೀವನ ನಡೆಸುತ್ತಿರುವುದು, ಮತ್ತು ಮಾನಸಿಕ ಖಿನ್ನತೆಯಿಂದ ಮಾನವನ ದೇಹ ಸಡಿಲಿಕೆಯಾಗಿ ಉಸಿರಾಟಕ್ಕೆ ತೊಂದರೆ ಉಂಟಾಗುತ್ತಿದೆ ಎಂದು ತಿಳಿಸಿದರು. ಭಾರತ ದೇಶದಲ್ಲಿ ಸುಮಾರು 60ರಷ್ಟು ಸಾವುಗಳು ಜೀವನ…

Read More

ಮಂಡ್ಯ: ಇಲ್ಲಿನ ಕೃಷ್ಣರಾಜ ಪೇಟೆ ಪಟ್ಟಣದ ಹಿಂದೂ ಮಹಿಳೆಯರು ಗರ್ಭಿಣಿಯಾಗಿದ್ದ ಮುಸ್ಲಿಂ ಮಹಿಳೆಗೆ ‘ಸೀಮಂತ’ ಮಾಡುವ ಮೂಲಕ ಕೋಮು ಸೌಹಾರ್ದತೆಯನ್ನು ಮೆರೆದಿರುವ ಘಟನೆ ನಡೆದಿದೆ. ಹೆರಿಗೆಗೆ ಕೆಲವು ದಿನಗಳು ಇರುವಾಗ ಗರ್ಭಿಣಿಯರಿಗೆ ಸಾಮಾನ್ಯವಾಗಿ ಸೀಮಂತ ಶಾಸ್ತ್ರವನ್ನು ಮಾಡಲಾಗುತ್ತದೆ. ಉತ್ತರ ಭಾರತದಲ್ಲಿ ಇದನ್ನು ‘ಗೋಧ್ ಭರೈ’ ಎಂದೂ ಕರೆಯುತ್ತಾರೆ. ಗರ್ಭಿಣಿ ಮತ್ತು ಹುಟ್ಟಲಿರುವ ಮಗುವನ್ನು ಆಶೀರ್ವದಿಸಲು ನಡೆಸಲಾಗುತ್ತದೆ. ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣ ಮತ್ತು ರಾಜ್ಯದ ಇತರ ಕೆಲವು ಭಾಗಗಳಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಗಳ ಸಂದರ್ಭದಲ್ಲಿ ನಡೆಯುತ್ತಿದ್ದ ಕೋಮು ಕಲಹದ ಮಧ್ಯೆ ಈ ಘಟನೆ ವರದಿಯಾಗಿದೆ. ಶನಿವಾರ ಪಟ್ಟಣದ ಪದವೀಧರರ ಸಾಲ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿ ಸೀಮಂತ ಸಮಾರಂಭವನ್ನು ಆಯೋಜಿಸಲಾಗಿತ್ತು.  ಸಂಘದ ಸಿಬ್ಬಂದಿ ನಗ್ಮಾ ಭಾನು ಅವರಿಗೆ ಹಿಂದೂ ಪದ್ಧತಿಗಳ ಪ್ರಕಾರ ಸೀಮಂತ ನೆರವೇರಿಸಿದ್ದು, ಇದು ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆಗೆ ಕಾರಣವಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್…

Read More

ಬಳ್ಳಾರಿ: ಬಳ್ಳಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಐಎಂಎಸ್) ಆಸ್ಪತ್ರೆಯಿಂದ ನವಜಾತ ಶಿಶುವನ್ನು ಮಾರಾಟ ಮಾಡಲು ಯತ್ನಿಸಿದ ಆರೋಪದ ಮೇಲೆ ನಾಲ್ವರನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ನವಜಾತ ಶಿಶು ಅಪಹರಣ ಪ್ರಕರಣದಲ್ಲಿ ಈಗಾಗಲೇ ಶಿಕ್ಷೆಗೊಳಗಾಗಿದ್ದ 65 ವರ್ಷದ ವ್ಯಕ್ತಿ ಮತ್ತು ಇತರ ಮೂವರು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಬಂಧಿತರನ್ನು ಶಮಿನ್ ಇಸ್ಮಾಯಿಲ್ (25), ಇಸ್ಮಾಯಿಲ್ ಯಾಕೋಬ್ ಸಬ್ (65), ಬಾಷಾ ಸಾಬ್ (55) ಮತ್ತು ಬಸವರಾಜ ಸಜ್ಜನ್ (43) ಎಂದು ಗುರುತಿಸಲಾಗಿದೆ. ಆರೋಪಿಗಳಲ್ಲಿ ಒಬ್ಬರಾದ ಸಜ್ಜನ್ ದತ್ತು ಪಡೆಯಲು ಬಿಐಎಂಎಸ್ ಆಸ್ಪತ್ರೆಯ ಬಳಿ ವಾಸವಿದ್ದ ಇಸ್ಮಾಯಿಲ್ ಅವರನ್ನು ಸಂಪರ್ಕಿಸಿದ್ದು, ಆರೋಪಿಗಳು ದತ್ತು ಬದಲು ಮಗುವನ್ನು ಅಪಹರಣ ಮಾಡುವ ಸಲಹೆ ನೀಡಿದ್ದಾರೆ. ಇದರಂತೆ ಇಸ್ಮಾಯಿಲ್ ಮಗುವನ್ನು ಅಪಹರಿಸಿ ಸೆಪ್ಟೆಂಬರ್ 12 ರಂದು ಆರೋಗ್ಯ ತಪಾಸಣೆಗಾಗಿ ಬಿಐಎಂಎಸ್‌ ಗೆ ಬಂದಿದ್ದ ಸಜ್ಜನ್‌ ಗೆ ರೂ.1.5 ಲಕ್ಷಕ್ಕೆ ಮಾರಾಟ ಮಾಡಿದ್ದ. ಈ ನಡುವೆ ಮಗು ಅಪಹರಣ ಪ್ರಕರಣ ದಾಖಲಾದ ಒಂದೇ ದಿನದಲ್ಲಿ ಎಸ್‌ ಪಿ ಶೋಭಾ ರಾಣಿ ವಿಜೆ ಅವರು…

Read More

ಸರಗೂರು:  ಜಮೀನಿನಲ್ಲಿ ಜಾನುವಾರುಗಳನ್ನು ಹಾಗೂ ಮೇಕೆಗಳನ್ನು ಮೇಯಿಸಲು ರೈತನ ಮೇಲೆ ಕರಡಿ ದಾಳಿ ನಡೆಸಿರುವ ಘಟನೆ ಜಯಲಕ್ಷೀಪುರ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ. ತಾಲೂಕಿನ ಎಂ.ಸಿ.ತಳಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಯಲಕ್ಷೀಪುರ ಗ್ರಾಮದ ರೈತ ಪ್ರಕಾಶ್ (35) ಕರಡಿ ದಾಳಿಗೆ ಒಳಗಾದವರು. ಜಾನುವಾರುಗಳನ್ನು ಜಮೀನಿನಲ್ಲಿ ಮೇಯಿಸಲು ಹೋಗಿದ್ದ  ಪೊದೆಯಲ್ಲಿದ್ದ ಕರಡಿ ಏಕಾಏಕಿ ದಾಳಿ ನಡೆಸಿ ಗಾಯಗೊಳಿಸಿದೆ. ಅವರ ಚೀರಾಟದಿಂದ ಅಕ್ಕ ಪಕ್ಕದ ಜಮೀನಲ್ಲಿದ್ದ ರೈತರು ಬಂದು ಕರಡಿಯನ್ನು ಓಡಿಸಿದ್ದಾರೆ. ಗಾಯಾಳುಗೆ ಕೈ ಕಾಲು ಗಾಯಗೊಂಡಿದ್ದ ರೈತ ಪ್ರಕಾಶ್ ಅವರನ್ನು ಹೆಡಿಯಾಲ ವಲಯದ ಅರಣ್ಯ ಎಸಿಎಫ್ ಸತೀಶ್ ವರಿಗೆ ಗಮನಕ್ಕೆ ಬಂದ ಕೂಡಲೇ ಹಾಗೂ ಅರಣ್ಯ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಸರಗೂರು ಪಟ್ಟಣದ ವಿವೇಕಾನಂದರ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಬಂದ ಕೂಡಲೇ ಗ್ರಾಮಸ್ಥರು ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡು ಜಮೀನಿಗೆ ರೈತರು ಮತ್ತು ಹೆಂಗಸರು ಜಮೀನಿಗೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ‌ ಎಂದು ತರಾಟೆ ತೆಗೆದುಕೊಂಡರು.…

Read More