Subscribe to Updates
Get the latest creative news from FooBar about art, design and business.
- ಡಿ.29ರಿಂದ ತುಮಕೂರು ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನ: ಏನೇನು ಕಾರ್ಯಕ್ರಮಗಳು ಇರಲಿವೆ?
- ತುರುವೇಕೆರೆ: ಡಿ.30: ಸಂಪಿಗೆಯಲ್ಲಿ ವೈಕುಂಠ ಏಕಾದಶಿ ಮಹೋತ್ಸವ
- ಕುಣಿಗಲ್: ಡಿ.29ರಿಂದ ವೆಂಕಟರಮಣ ಸ್ವಾಮಿ ಪೂಜೋತ್ಸವ
- ತುರುವೇಕೆರೆ: ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಸ್ಥಾಪನೆಗೆ ತೀರ್ಮಾನ
- ವಿದ್ಯುತ್ ಕಂಬಗಳಿಗೆ ಕಾರು ಡಿಕ್ಕಿ: ತಪ್ಪಿದ ಭಾರೀ ಅನಾಹುತ
- ಬಡ ರೈತರಿಗೆ ಸರಕಾರ ಹಕ್ಕು ನೀಡಿ ಬದುಕಲು ಬಿಡಬೇಕು: ಬಸವರಾಜಪ್ಪ
- ಸರಗೂರು: SSLC ವಿದ್ಯಾರ್ಥಿಗಳಿಗೆ ಟ್ಯೂಷನ್ ಕ್ಲಾಸ್ ತರಬೇತಿ
- ರೈತರ ಜಮೀನಿಗೆ ನುಗ್ಗಿದ ಕಾಡಾನೆಗಳು: ಲಕ್ಷಾಂತರ ಬೆಲೆಬಾಳುವ ರಾಗಿ, ಜೋಳ ಆನೆಗೆ ಆಹಾರ: ರೈತರು ಕಂಗಾಲು
Author: admin
ಔರಾದ: ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ ನಡೆಸಲಾಗಿದೆ ಅಂತ ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿ, ವೇದಿಕೆಯಲ್ಲೇ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಇಂದು ಪಟ್ಟಣದ ಡಾ.ಗುರುಪಾದಪ್ಪ ನಾಗಮಾರಪಲ್ಲಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಸರ್ಕಾರ, ತಾಲೂಕು ಪಂಚಾಯತ್ ಔರಾದ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಶಾಲಾ ಶಿಕ್ಷಣ ಇಲಾಖೆ ಔರಾದರವರ ಸಂಯುಕ್ತ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯವರು ಮುಖ್ಯಮಂತ್ರಿಗಳ ಮತ್ತು ಉಪಮುಖ್ಯಮಂತ್ರಿಗಳ ಶಿಕ್ಷಣ ಇಲಾಖೆ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಫೋಟೋಗಳು ಹಾಕದೆ ಕೇವಲ ಸ್ಥಳೀಯ ಶಾಸಕ ಪ್ರಭು ಚೌಹಾಣ್ ಅವರ ಭಾವಚಿತ್ರ ಹಾಕಿದ್ದಾರೆ. ಈ ಮೂಲಕ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ ಎಂದು ಕೆಪಿಸಿಸಿ ಸಾಮಾಜಿಕ ಮಾಧ್ಯಮ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಧಾಕರ ಕೊಳ್ಳುರ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರ ಕೂಗಿದರು. ಈ ಸಂದರ್ಭದಲ್ಲಿ ಶಾಸಕ ಪ್ರಭು ಚೌಹಾಣ್ ಮಧ್ಯಸ್ಥಿಕೆ ವಹಿಸಿ, “ಅಮ್ಮ.., ಇದು ನಾನು ಸ್ವಂತ ಹಣದಿಂದ ಮಾಡುತ್ತಿರುವ ಕಾರ್ಯಕ್ರಮ…
ತಿಪಟೂರು: ಪಿ.ಯು.ಸಿ. ನಂತರ ಮುಂದೇನು? ಎಂಬ ಪ್ರಶ್ನೆಗೆ ನಮ್ಮ ವಿದ್ಯಾರ್ಥಿಗಳಲ್ಲಿಯೇ ಉತ್ತರವಿರುವುದಿಲ್ಲ. ಜ್ಞಾನದ ಶಾಖೆಗಳು ವಿಸ್ತಾರವಾಗಿದ್ದು, ಅವುಗಳ ಬಗ್ಗೆ ಪೂರ್ಣ ಮಾಹಿತಿ ಪಡೆದು, ವಿದ್ಯಾರ್ಥಿಯು ತನಗೆ ಇಷ್ಟವಾದ, ಆಸಕ್ತಿಯ ವಿಷಯವನ್ನು ಆಯ್ಕೆ ಮಾಡಿಕೊಂಡು ವ್ಯಾಸಂಗ ಮುಂದುವರೆಸಿದಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು ಎಂದು ಎಂ.ಡಿ.ಶಿವಕುಮಾರ್ ನುಡಿದರು. ಅವರು ಇಂದು ಬಾಲಕರ ಸರ್ಕಾರಿ ಪ.ಪೂ. ಕಾಲೇಜಿನ ಸೈನ್ಸ್ ಫೆಸ್ಟ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಸ್ವರ್ಣಗೌರಮ್ಮ ಸಮಾಜ ಸೇವಕರು ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿದರು. ಸಮಾರಂಭದ ಮುಖ್ಯ ಅತಿಥಿಗಳಾಗಿಆಗಮಿಸಿದ್ದ ತುಮಕೂರಿನ ‘ವೇಗಸ್ ನೀಟ್ ಅಕಾಡೆಮಿ’ಯ ನಿರ್ದೇಶಕರಾದ ಡಾ. ದೇವಿಪ್ರಿಯಾರವರು ಪಿ.ಯು.ಸಿ. ನಂತರ ಉನ್ನತ ವ್ಯಾಸಂಗಕ್ಕೆ ಅವಕಾಶಗಳಿರುವ ಕೋರ್ಸ್‌ಗಳನ್ನು ಮತ್ತು ಆಯ್ಕೆಯ ಪರೀಕ್ಷಾ ವಿಧಾನಗಳನ್ನು ಆಕರ್ಷಕ ಶೈಲಿಯಲ್ಲಿ ವಿವರವಾಗಿ ತಿಳಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಂ.ಬಸವರಾಜಪ್ಪ ತಾಲೂಕು ಕ.ಸಾ.ಪ. ಅಧ್ಯಕ್ಷರು ಕಳೆದ ಬಾರಿ ಎಸ್.ಎಸ್.ಎಲ್.ಸಿ. ಕನ್ನಡ ಭಾಷೆಯಲ್ಲಿ ಪೂರ್ಣಾಂಕ ಪಡೆದ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಗೌರವಿಸಿ, ವಿವಿಧ ಕಾರಣಗಳಿಂದ ಹಲವು ವಿದ್ಯಾರ್ಥಿಗಳು ಫೇಲ್ ಆದರೆ ಚಿಂತೆ ಬೇಡ…
ಬೀದರ್: ಜಿಲ್ಲೆಯ ಕಮಲನಗರ ತಾಲೂಕಿನ ಠಾಣಕುಶನೂರ ಹೊಬ್ಬಳ್ಳಿಗೆ ಆಗಮಿಸಿರುವ ನೂತನ ಪಿಎಸ್ ಐ ಶೇಕಶಾಹ ಪಟೇಲ್ ಅವರಿಗೆ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಮಾಜಿ ಎಸ್.ಡಿ.ಎಮ್.ಸಿ. ಅಧ್ಯಕ್ಷ ಪ್ರಭಾಕರ್ ಇಂಗಳೇ, ಪತ್ರಕರ್ತ ಅರವಿಂದ ಮಲ್ಲಿಗೆ, ರಾಜಕುಮಾರ್ ಹಚಕಮಟೆ, ಉಮಾಕಾಂತ ಮಾಳೆಗೆ, ವಿಜಯಕುಮಾರ್ ಮಲ್ಲಿಗೆ ಇದ್ದರು. ವರದಿ: ಅರವಿಂದ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ಬೀದರ್: ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಮಾಂಜ್ರಾ ನದಿಗೆ ಬಿದ್ದ ಘಟನೆ ಭಾಲ್ಕಿ ತಾಲೂಕಿನ ಹಲಸಿತೂಗಾಂವ್ ಗ್ರಾಮದ ಬಳಿ ನಡೆದಿತ್ತು. ಗುರುವಾರ ಈ ಘಟನೆ ನಡೆದಿತ್ತು, ಇಂದು ಆತನ ಮೃತದೇಹ ಪತ್ತೆಯಾಗಿದೆ. ಹಲಸಿತೂಗಾಂವ್ ಗ್ರಾಮದ ನಿವಾಸಿ ಪ್ರಭಾಕರ್ ಸೂರ್ಯವಂಶಿ (38) ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ಕುಡಿದ ಮತ್ತಿನಲ್ಲಿ ಸೇತುವೆಯಿಂದ ಕೆಳಗೆ ಬಿದ್ದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಗುರುವಾರ ಈ ಘಟನೆ ನಡೆದಿದ್ದು, ಶುಕ್ರವಾರ ಮಧ್ಯಾಹ್ನ ಮೃತದೇಹ ಪತ್ತೆಯಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಮೆಹಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ. ವರದಿ: ಅರವಿಂದ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ಹಾಸನ: ಗಣೇಶ ಮೆರವಣಿಗೆ ವೇಳೆ ಸಂಭವಿಸಿದ ಭೀಕರ ಅಪಘಾತದಲ್ಲಿ 9 ಮಂದಿ ಸಾವನ್ನಪ್ಪಿರುವ ಘಟನೆ ಹಾಸನ ತಾಲೂಕಿನ ಮೊಸಳೆಹೊಸಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 373ರಲ್ಲಿ ಶುಕ್ರವಾರ ಸಂಭವಿಸಿದೆ. ಬಳ್ಳಾರಿ ನಿವಾಸಿ ಅಂತಿಮ ಬಿಇ ವಿದ್ಯಾರ್ಥಿ ಪ್ರವೀಣ್, ಹೊಳೆನರಸೀಪುರ ತಾಲೂಕಿನ ಹಳೆಕೋಟೆ ಹೋಬಳಿ ಕೆ.ಬಿ.ಪಾಳ್ಯ ನಿವಾಸಿ ರಾಜೇಶ್(17), ಡನಾಯಕನಹಳ್ಳಿ ಕೊಪ್ಪಲು ನಿವಾಸಿ ಈಶ್ವರ(17), ಮುತ್ತಿಗೆಹೀರಳ್ಳಿ ಗ್ರಾಮದ ನಿವಾಸಿ ಗೋಕುಲ್(17), ಕಬ್ಬಿನಹಳ್ಳಿ ನಿವಾಸಿಗಳಾದ ಕುಮಾರ(25), ಪ್ರವೀಣ(25), ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಗವಿ ಗಂಗಾಪುರ ಗ್ರಾಮ ನಿವಾಸಿ ಮಿಥುನ್(23), ಚಿಕ್ಕಮಗಳೂರು ಜಿಲ್ಲೆಯ ಮಾಣೇನಹಳ್ಳಿ ನಿವಾಸಿ ಬಿಇ ವಿದ್ಯಾರ್ಥಿ ಸುರೇಶ್(19), ಹಾಸನ ತಾಲೂಕಿನ ಬಂಟರಹಳ್ಳಿ ಗ್ರಾಮದ ನಿವಾಸಿ ಪ್ರಭಾಕರ್(55) ಮೃತಪಟ್ಟವರಾಗಿದ್ದಾರೆ. ಹಾಸನದಿಂದ ಹೊಳೆನರಸೀಪುರಕ್ಕೆ ಹೊರಟಿದ್ದ ಟ್ರಕ್, ಬೈಕ್ ಒಂದಕ್ಕೆ ಡಿಕ್ಕಿ ಹೊಡೆದು ಬಳಿಕ ಗಣೇಶ ಮೆರವಣಿಗೆಯತ್ತ ತಿರುಗಿದ್ದು, ಮೆರವಣಿಗೆಯಲ್ಲಿ ಸಂಭ್ರಮದಲ್ಲಿ ಕುಣಿಯುತ್ತಿದ್ದವರ ಮೇಲೆಯೇ ಹರಿದಿದ್ದು, ದುರಂತ ಸಂಭವಿಸಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.…
ಸರಗೂರು: ಗ್ರಾಮೀಣ ಭಾಗದ ರೈತರ ಜಮೀನು ಹಕ್ಕನ್ನು ಭದ್ರಪಡಿಸಲು ಸರ್ಕಾರ ಪೌತಿ ಆಂದೋಲನ ಹಮ್ಮಿಕೊಂಡಿದ್ದು, ರೈತರು ಇದರ ಸದುಪಯೋಗ ಪಡೆಯಬೇಕು’ ಎಂದು ರಾಜಸ್ವ ನಿರೀಕ್ಷಕ ರವಿಚಂದ್ರನ್ ಹೇಳಿದರು. ತಾಲೂಕಿನ ಮನುಗನಹಳ್ಳಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಪೌತಿ ಖಾತೆ ಆಂದೋಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ಸಾಲ ಸೌಲಭ್ಯ, ವಿಮೆ ಪರಿಹಾರ ಸೇರಿದಂತೆ ಸರ್ಕಾರದ ಪ್ರತಿಯೊಂದು ಸೌಲಭ್ಯ ಪಡೆಯಲು ಅವಶ್ಯಕವಾದ ಪೌತಿ ಖಾತೆಯನ್ನು ಸರ್ಕಾರ ಆಂದೋಲನದ ಮೂಲಕ ರೈತರಿಗೆ ನೀಡುತ್ತಿದ್ದು, ಮೃತ ರೈತರ ವಾರಸುದಾರರು ಕೂಡಲೇ ತಮ್ಮ ಜಮೀನುಗಳ ದಾಖಲಾತಿಗಳನ್ನು ವರ್ಗಾಯಿಸಿಕೊಳ್ಳಬೇಕು’ ಎಂದರು. ಗ್ರಾಮೀಣ ಭಾಗದ ಜನರಿಗೆ ಸರಕಾರದ ಹಲವು ಸೇವೆಗಳು ಅವರ ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರದ ನೂತನ ಯೋಜನೆಗಳಲ್ಲಿ ಪೌತಿ ಖಾತೆ ಆಂದೋಲನವು ಒಂದಾಗಿದೆ. ಪೌತಿ ಖಾತೆ ಆಂದೋಲನ ಎಂದರೆ ಪಿತ್ರಾರ್ಜಿತ ಆಸ್ತಿ ಹಕ್ಕನ್ನು ರೈತರ ಹೆಸರಿಗೆ ಮಾಡಿಕೊಡುವುದು. ಈ ಪೌತಿ ಖಾತೆ ಆಂದೋಲನದ ಮೂಲ ಉದ್ದೇಶವಾಗಿದೆ. ಕಂದಾಯ ನಿರೀಕ್ಷಕ ಎಂ.ಚೈತ್ರಾ ಮಾತನಾಡಿ,…
ಕೊರಟಗೆರೆ : ತಾಲೂಕಿನ ಹೊಳವನಹಳ್ಳಿ ಹೋಬಳಿಯ ಅರಸಾಪುರ ಗ್ರಾಪಂ ಎರಡನೇ ಅವಧಿಯ ಅಧ್ಯಕ್ಷ ಸ್ಥಾನಕ್ಕೆ ಸರ್ವ ಸದಸ್ಯರ ಒಮ್ಮತದ ನಿರ್ಧಾರದಿಂದ ಗಂಗರತ್ನಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಮಂಜುನಾಥ್ ಅಧಿಕೃತ ಘೋಷಣೆ ಮಾಡಿದರು. ಗ್ರಾ.ಪಂ. ನೂತನ ಅಧ್ಯಕ್ಷೆ ಗಂಗರತ್ನಮ್ಮ ಮಾತನಾಡಿ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಆಶೀರ್ವಾದ ಹಾಗೂ ಗ್ರಾ.ಪಂ ಎರಡನೇ ಅವಧಿಯ ಅಧ್ಯಕ್ಷ ಆಯ್ಕೆ ಚುನಾವಣೆಯಲ್ಲಿ ಸರ್ವ ಸದಸ್ಯರು ಭರವಸೆಯಿಟ್ಟು ಅಧ್ಯಕ್ಷ ಸ್ಥಾನಕ್ಕೆ ನನ್ನನ್ನು ಆಯ್ಕೆ ಮಾಡಿದ್ದು, ಸದಸ್ಯರ ಮತ್ತು ಅಧಿಕಾರಿಗಳ ವಿಶ್ವಾಸದೊಂದಿಗೆ ಗ್ರಾ.ಪಂ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಅಭಿವೃಧ್ಧಿಗೆ ಶ್ರಮಿಸುತ್ತೇನೆ ಎಂದು ಹೇಳಿ ಅವಿರೋಧ ಆಯ್ಕೆ ಮಾಡಿದ ಸದಸ್ಯರಿಗೆ ಧನ್ಯವಾದ ತಿಳಿಸಿದರು. ಗ್ರಾ.ಪಂ ಪಿಡಿಓ ಪೃಥ್ವಿಭಾ ಮಾತನಾಡಿ, ಚುನಾವಣಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ಎರಡನೇ ಅವಧಿಯ ಗ್ರಾ.ಪಂ ಅಧ್ಯಕ್ಷ ಆಯ್ಕೆ ಚುನಾವಣೆ ಯಶಸ್ವಿಕಂಡಿದೆ. ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿ ಎರಡನೇ ಅವಧಿಯ ಅಧ್ಯಕ್ಷ ಸ್ಥಾನಕ್ಕೆ ಗಂಗರತ್ನಮ್ಮರವರನ್ನು ಆಯ್ಕೆ ಮಾಡಿದ್ದಾರೆ. ನೂತನ ಅಧ್ಯಕ್ಷರು ಗ್ರಾ.ಪಂ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುವಂತೆ ತಿಳಿಸಿ…
ಸರಗೂರು: ದಸರಾ ಚಲನಚಿತ್ರೋತ್ಸವ ಉಪಸಮಿತಿ ರಚನೆಯಲ್ಲಿ ಎಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದ ಸುನೀಲ್ ಬೋಸ್ ಅಭಿಮಾನಿಗಳ ಬಳಗದ ತಾಲೂಕು ಅಧ್ಯಕ್ಷ ದೇವಲಾಪುರ ಸಿದ್ದರಾಜು ರವರನ್ನು ಉಪಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನಂತರ ಮಾತನಾಡಿದ ಸುನೀಲ್ ಬೋಸ್ ಅಭಿಮಾನಿಗಳ ಬಳಗದ ತಾಲೂಕು ಅಧ್ಯಕ್ಷ ದೇವಲಾಪುರ ಸಿದ್ದರಾಜು, ಈ ಬಾರಿ, ಮಾಲ್ ಆಫ್ ಮೈಸೂರ್ ನ ನೆಲಮಹಡಿಯಲ್ಲಿ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ಸೆ.13ರಂದು ಬೆಳಿಗ್ಗೆ 11ಕ್ಕೆ ನೆರವೇರಿಸಲಿದ್ದಾರೆ. ಇದರೊಂದಿಗೆ, ನಾಡಹಬ್ಬಕ್ಕೂ ಮುನ್ನವೇ ಚಲನಚಿತ್ರೋತ್ಸವ ಗರಿಗೆದರಲಿದೆ ಎಂದು ತಿಳಿಸಿದರು. ದಸರಾ ಚಲನಚಿತ್ರೋತ್ಸವ ಉಪಸಮಿತಿ ರಚನೆಯಲ್ಲಿ ಎಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಪಕ್ಷದ ಕಾರ್ಯಕರ್ತರಿಗೆ ಹೆಚ್ಚಿನ ಮಾನ್ಯತೆ ನೀಡುವ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಹಾಗೂ ಮೈಸೂರು ಉಸ್ತುವಾರಿ ಸಚಿವ ಡಾ.ಎಸ್.ಸಿ. ಮಹದೇವಪ್ಪ ಹಾಗೂ ಸಂಸದ ಸುನೀಲ್ ಬೋಸ್ ಮತ್ತು ಶಾಸಕ ಅನಿಲ್ ಚಿಕ್ಕಮಾದು ಹೆಚ್ಚಿನ ರೀತಿಯಲ್ಲಿ ಅವಕಾಶವನ್ನು ನೀಡುತ್ತ ಬರುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಅಭಿನಂದನೆ ಸಲ್ಲಿಸಿದರು. ವರದಿ: ಹಾದನೂರು ಚಂದ್ರ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು…
ಸರಗೂರು: ಅಬಕಾರಿ ಜಂಟಿ ಆಯುಕ್ತರು ಮೈಸೂರು ವಿಭಾಗ ಹಾಗೂ ಅಬಕಾರಿ ಉಪ ಆಯುಕ್ತರು ಮೈಸೂರು ಗ್ರಾಮಾಂತರ ಜಿಲ್ಲೆರವರ ನಿರ್ದೇಶನದಂತೆ ಅಬಕಾರಿ ಉಪ ಅಧೀಕ್ಷಕರು ನಂಜನಗೂಡು ಉಪ ವಿಭಾಗರವರ ಮಾರ್ಗದರ್ಶನದಲ್ಲಿ ಗುರುವಾರ ಅಬಕಾರಿ ನಿರೀಕ್ಷಕರು ಮತ್ತು ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳು ಹೆಚ್.ಡಿ.ಕೋಟೆ ವಲಯ ರವರು ಕಂದಲಿಕೆ (ತೆಕ್ಕಲು) ಗ್ರಾಮದಲ್ಲಿ ಸ್ಥಳೀಯ ಕಂದಾಯ ಅಧಿಕಾರಿಗಳು ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಸಿಬ್ಬಂದಿಗಳ ಸಮಕ್ಷಮ ದಾಳಿ ನಡೆಸಿದ್ದಾರೆ. ಈ ವೇಳೆ ರಾಜೇಶ್ ಬಿನ್ ನಿಂಗ ನಾಯಕ ಎಂಬುವನು ತನ್ನ ವಾಸದ ಮನೆಯ ಹಿಂಭಾಗದ ಹಿತ್ತಲಿನಲ್ಲಿ ಸುಮಾರು 3 ಹಸಿ ಗಾಂಜಾ ಗಿಡಗಳನ್ನ ಬೆಳೆದಿರುವುದು (ಒಟ್ಟು ತೂಕ 4.665 kg) ಪತ್ತೆಯಾಗಿದೆ. ಅಲ್ಲದೇ ಅದೇ ಗ್ರಾಮದ ರಮೇಶ ಬಿನ್ ಬೆಟ್ಟನಾಯಕ ಎಂಬುವವನು ತನ್ನ ವಾಸದ ಮನೆಯ ಹಿಂಭಾಗದ ಜಮೀನಿನಲ್ಲಿ 30 ಹಸಿ ಗಾಂಜಾ ಗಿಡಗಳನ್ನು (ಒಟ್ಟು ತೂಕ 17kg)ಬೆಳೆದಿರುವುದನ್ನು ಪತ್ತೆ ಹಚ್ಚಿ ,ಇಬ್ಬರು ಆರೋಪಿಗಳನ್ನು ದಸ್ತಗಿರಿ ಪಡಿಸಿ NDPS ಕಾಯ್ದೆ ಕಲಂ 8b ,20a,20b(1), 25 ,60 …
ಕೊರಟಗೆರೆ : ಶಿಕ್ಷಕ ವೃತ್ತಿ ಪುಣ್ಯದ ಕೆಲಸ. ರಾಜಕೀಯ ಸ್ಥಿತಿಗತಿಯಲ್ಲಿ ಶಿಕ್ಷಕರು ಪ್ರಶಸ್ತಿಗಳಿಸುವುದು ಸುಲಭದ ಮಾತಲ್ಲ, ಸಮುದಾಯದ ಪ್ರೌಢಶಾಲಾ ಶಿಕ್ಷಕರೊಬ್ಬರು ಮಾಜಿ ಪ್ರಧಾನಿ ರಾಜೀವ್ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಪಡೆದಿರುವುದು ನಮ್ಮ ಹೆಮ್ಮೆ ಎಂದು ಸಮುದಾಯದ ಮುಖಂಡ ಈರಣ್ಣ ತಿಳಿಸಿದರು. ಕೊರಟಗೆರೆಯ ಯಾದವ ಗೊಲ್ಲ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಮತ್ತು ಅಭಿನಂದನೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಸಮುದಾಯದ ಉತ್ತಮ ಶಿಕ್ಷಕರನ್ನು ಆಯ್ಕೆ ಮಾಡಿದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಶಿಕ್ಷಕರ ಘಟಕಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದರು. ಲೋಕೋಪಯೋಗಿ ಇಲಾಖೆಯ ಎಇಇ ಆಗಿ ಅಧಿಕಾರ ಸ್ವೀಕರಿಸಿದ ದೀಪಕ್ ಅವರಿಗೆ ಸಮುದಾಯದ ಮುಖಂಡರು ವಿಶೇಷವಾಗಿ ಸ್ವಾಗತಿಸಿದ್ದು, ಮತ್ತೋರ್ವ ಸಮುದಾಯದ ಸರ್ಕಾರಿ ಅಧಿಕಾರಿ ನಾಗರಾಜು ಇಲ್ಲಿನ ತೋಟಗಾರಿಗೆ ಇಲಾಖೆಯಲ್ಲಿ 15 ವರ್ಷಗಳ ಕಾಲ ಸೇವೆ ಸಲ್ಲಿಸಿ ಎಲ್ಲಾ ಸಮುದಾಯ ಜನರ ಪ್ರೀತಿ, ವಿಶ್ವಾಸಗಳಿಸಿ ಈಗ ಪಾವಗಡಕ್ಕೆ ವರ್ಗಾವಣೆ ಯಾಗಿದ್ದಾರೆ ಎಂದು ಹೇಳಿ ಅಭಿನಂದನೆ ಸಲ್ಲಿಸಿ ಬೀಳ್ಕೋಡುಗೆ ನೀಡಿದರು. ರಂಗಭೂಮಿ ಕಲಾವಿದ…