Subscribe to Updates
Get the latest creative news from FooBar about art, design and business.
- ಡಿ.29ರಿಂದ ತುಮಕೂರು ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನ: ಏನೇನು ಕಾರ್ಯಕ್ರಮಗಳು ಇರಲಿವೆ?
- ತುರುವೇಕೆರೆ: ಡಿ.30: ಸಂಪಿಗೆಯಲ್ಲಿ ವೈಕುಂಠ ಏಕಾದಶಿ ಮಹೋತ್ಸವ
- ಕುಣಿಗಲ್: ಡಿ.29ರಿಂದ ವೆಂಕಟರಮಣ ಸ್ವಾಮಿ ಪೂಜೋತ್ಸವ
- ತುರುವೇಕೆರೆ: ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಸ್ಥಾಪನೆಗೆ ತೀರ್ಮಾನ
- ವಿದ್ಯುತ್ ಕಂಬಗಳಿಗೆ ಕಾರು ಡಿಕ್ಕಿ: ತಪ್ಪಿದ ಭಾರೀ ಅನಾಹುತ
- ಬಡ ರೈತರಿಗೆ ಸರಕಾರ ಹಕ್ಕು ನೀಡಿ ಬದುಕಲು ಬಿಡಬೇಕು: ಬಸವರಾಜಪ್ಪ
- ಸರಗೂರು: SSLC ವಿದ್ಯಾರ್ಥಿಗಳಿಗೆ ಟ್ಯೂಷನ್ ಕ್ಲಾಸ್ ತರಬೇತಿ
- ರೈತರ ಜಮೀನಿಗೆ ನುಗ್ಗಿದ ಕಾಡಾನೆಗಳು: ಲಕ್ಷಾಂತರ ಬೆಲೆಬಾಳುವ ರಾಗಿ, ಜೋಳ ಆನೆಗೆ ಆಹಾರ: ರೈತರು ಕಂಗಾಲು
Author: admin
ಸರಗೂರು: ಶಾಸಕ ಅನಿಲ್ ಚಿಕ್ಕಮಾದುರವರು ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಸಂಘದ ನಿರ್ದೇಶಕ ಆಯ್ಕೆ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ನಂತರ ಪಟ್ಟಣ ಪಂಚಾಯಿತಿ ಸದಸ್ಯ ಶ್ರೀನಿವಾಸ ಮಾತನಾಡಿ, ಕೊನೆಗೂ ದೇವರು ಕೈಬಿಡಲಿಲ್ಲ ಏಕೆಂದರೆ ಕೆಲವು ತಿಂಗಳ ಹಿಂದೆ ಎಂಡಿಸಿಸಿ ನಿರ್ದೇಶಕ ಆಯ್ಕೆ ಚುನಾವಣೆ ನಡೆದು ಶಾಸಕ ಅನಿಲ್ ಚಿಕ್ಕಮಾದು ರವರಿಗೆ 8 ಮತಗಳು ಬಿದ್ದಿದ್ದವು. ಅದರಿಂದ ಶಾಸಕರ ವಿರುದ್ಧ ಸ್ಪರ್ಧೆ ಮಾಡಿದವರಿಗೂ 8 ಮತಗಳು ಬಿದ್ದಿದ್ದವದರಿಂದ ನ್ಯಾಯಾಲಯ ತೀರ್ಪುಗಾಗಿ ಕಾದು ಕೊನೆಗೂ ಶಾಸಕರಿಗೆ ತೀರ್ಪು ಪ್ರಕಟವಾಗುತ್ತಿದ್ದಂತೆ. ತಾಲ್ಲೂಕಿನ ಜನತೆ ಶಾಸಕರ ಪರವಾಗಿ ನ್ಯಾಯ ಸಿಕ್ಕಿದೆ ಎಂದು ತಿಳಿಸಿದರು. ಕಾಂಗ್ರೆಸ್ ಪಕ್ಷದ ಟೌನ್ ಅಧ್ಯಕ್ಷ ಹಾಗೂ ಈಡಿಗ ಸಮಾಜದ ತಾಲ್ಲೂಕು ಅಧ್ಯಕ್ಷ ಎಸ್.ಎನ್.ನಾಗರಾಜು ಮಾತನಾಡಿ, ಯಾರೂ ಶಾಸಕರ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಸಮಬಲದ ಬಂದಿದೆ. ನಾವೇ ಗೆಲುವು ಸಾಧಿಸುವ ಭ್ರಮೆ ಇದ್ದಾರೆ. ಅವರಿಗೆ ತಕ್ಕ…
Provided by Provided by ತುಮಕೂರು: ತುಮಕೂರು ನಗರದ ಸಿರಾ ಗೇಟ್ ಬಳಿ ಅಂಜಲಿ ಫ್ಯಾನ್ಸಿ & ಗಿಫ್ಟ್ ಸೆಂಟರ್ ತನ್ನ ಹೊಸ ಅಂಗಡಿ ಆರಂಭಿಸಿದ್ದು, ಗ್ರಾಹಕರಿಗೆ ಹೊಸ ಖರೀದಿ ಅನುಭವ ನೀಡಲು ಸಜ್ಜಾಗಿದೆ. ಮಹಾವೀರ ಗೋಲ್ಡನ್ ಆರ್ಚ್, (ಲ್ಯಾಂಡ್ ಮಾರ್ಕ್: ರಿಲಯನ್ಸ್ ಟ್ರೆಂಡ್ಸ್), ಸಿರಾ ರಸ್ತೆ, ಸಿರಾ ಗೇಟ್, ತುಮಕೂರು ಈ ವಿಳಾಸದಲ್ಲಿ ಅಂಜಲಿ ಫ್ಯಾನ್ಸಿ & ಗಿಫ್ಟ್ ಸೆಂಟರ್ ಕಾರ್ಯಾರಂಭ ಮಾಡಿದ್ದು, ಗ್ರಾಹಕರಿಗೆ ಹೊಸ ಶಾಪಿಂಗ್ ಅನುಭವ ನೀಡುವ ಮೂಲಕ ಆಕರ್ಷಿಸಿದೆ. ಇಲ್ಲಿ ಲಭ್ಯವಿರುವ ವಿಶೇಷತೆಗಳು: ಗಿಫ್ಟ್ ಆರ್ಟಿಕಲ್ಸ್ ಇಮಿಟೇಶನ್ ಜ್ಯುವೆಲ್ಲರಿ ಕಾಸ್ಮೆಟಿಕ್ಸ್ ಫೋಟೋ ಫ್ರೇಮ್ಸ್ ಕಸ್ಟಮೈಸ್‌ಡ್ ಫೋಟೋ ಫ್ರೇಮ್ಸ್ ಗ್ರಾಮಗರು ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: 7022812597 / 9845977937 ಸಂಪರ್ಕಿಸಬಹುದಾಗಿದೆ. ಗ್ರಾಹಕರ ಅನುಕೂಲಕ್ಕಾಗಿ ಈ ಹೊಸ ಅಂಗಡಿಯನ್ನು ತೆರೆಯಲಾಗಿದೆ. ಖರೀದಿಯ ಹೊಸ ಅನುಭವ ಪಡೆಯಲು ಇಂದೇ ಅಂಜಲಿ ಫ್ಯಾನ್ಸಿ & ಗಿಫ್ಟ್ ಸೆಂಟರ್ ಗೆ ಭೇಟಿ ನೀಡಿ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್…
ತಿಪಟೂರು: ತಾಲ್ಲೂಕಿನ ಹೊನ್ನವಳ್ಳಿ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಸತತ ಮೂರು ಪಂದ್ಯಗಳನ್ನು ಸೋಲಿಸಿ ಖೋ ಖೋ ಪಂದ್ಯಾವಳಿಯಲ್ಲಿ, ಹಾಲ್ಕುರಿಕೆ ಹೆಚ್.ಸಿ ಎಂ.ಜಿ ಸಂಯುಕ್ತ ಪದವಿಪೂರ್ವಕಾಲೇಜು ಮೊದಲ ಸ್ಥಾನ ಪಡೆದುಕೊಂಡಿದ್ದು, ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದೆ. ವಿಜೇತ ಖೋಖೋ ತಂಡದ ವಿದ್ಯಾರ್ಥಿಗಳನ್ನ ಕೋಚ್ ಡಾ.ಗಂಗಾಧರ್ ನಾಗರಾಜ್, ಮುಖ್ಯೋಪಾಧ್ಯಾಯರಾದ ವೀರಣ್ಣಗೌಡ, ಹನುಮಂತಯ್ಯ ಮುಂತಾದವರು ಉಪಸ್ಥಿತರಿದ್ದರು. ವರದಿ: ಆನಂದ್, ತಿಪಟೂರು ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ಕೊರಟಗೆರೆ : ಕರ್ನಾಟಕ ರಾಜ್ಯ ಸರ್ಕಾರದ ರಾಜ್ಯದ ಎಲ್ಲಾ 36,000 ಮುಜರಾಯಿ ದೇವಾಲಯಗಳಲ್ಲಿ 2025ರ ಆಗಸ್ಟ್ 15ರಿಂದ ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಪರಿಸರ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಗಾಗಿ ಈ ಕ್ರಮವನ್ನು ಘನ ಸರ್ಕಾರ ಕೈಗೊಳ್ಳಲಾಗಿದ್ದು, ಪ್ಲಾಸ್ಟಿಕ್ ಲೋಟ, ತಟ್ಟೆ, ಬ್ಯಾಗ್ ಗಳು ಮತ್ತು ಇನ್ನಿತರ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ನಿಷೇಧಿಸಲಾಗಿದೆ. ಸರ್ಕಾರದ ಈ ನಿಯಮವನ್ನು ಉಲ್ಲಂಘಿಸಿದರೆ ದೇವಾಲಯಗಳ ಆಡಳಿತ ಮಂಡಳಿಯು ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕೊರಟಗೆರೆ ಗ್ರೇಡ್ 2 ತಹಶೀಲ್ದಾರ್ ರಾಮ್ ಪ್ರಸಾದ್ ತಿಳಿಸಿದ್ದಾರೆ. ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಸಸ್ಯಕಾಶಿ, ಸಿದ್ದರ ತಪೋವನ, ಆಯುರ್ವೇದಿಕ್ ಔಷಧಿಗಳ ದಿವ್ಯತಾಣವಾದ ಶ್ರೀ ಕ್ಷೇತ್ರ ಸಿದ್ದರಬೆಟ್ಟದ ಶ್ರೀ ಸಿದ್ದೇಶ್ವರ ಸ್ವಾಮಿಯ ದೇವಾಲಯದ ಅವರಣದಲ್ಲಿ ಇರುವಂತಹ ಅಂಗಡಿ ಮುಂಗಟ್ಟುಗಳು,ಹೋಟೆಲ್ ಗಳು, ಟೀ ಅಂಗಡಿಗಳು, ಪೂಜಾ ಸಾಮಗ್ರಿಗಳ ಅಂಗಡಿಗಳಿಗೆ ಗ್ರೇಡ್ 2 ತಹಶೀಲ್ದಾರ್ ರಾಮ್ ಪ್ರಸಾದ್ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ಲಾಸ್ಟಿಕ್ ವಸ್ತುಗಳನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಅಂಗಡಿಗಳ…
ಪಾವಗಡ: ಮಾಜಿ ಸಚಿವರಾದ ವೆಂಕಟರಮಣಪ್ಪನವರು ಮತ್ತು ಪಾವಗಡದ ಶಾಸಕರು, ತುಮುಲ್ ಅಧ್ಯಕ್ಷರು ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಹೆಚ್.ವಿ.ವೆಂಕಟೇಶ್ ರವರು ವಸತಿ ಮತ್ತು ಅಲ್ಪಸಂಖ್ಯಾತ ಸಚಿವರಾದ ಜಮೀರ್ ಅಹ್ಮದ್ ಖಾನ್ ಅವರನ್ನು ಬೆಂಗಳೂರಿನಲ್ಲಿ ಸೋಮವಾರದಂದು ಭೇಟಿ ಮಾಡಿದರು. ವೈ.ಎನ್.ಹೊಸಕೋಟೆಯಲ್ಲಿ ಜಾಮೀಯ ಮಸೀದಿ ನಿರ್ಮಾಣಕ್ಕೆ ಅನುದಾನ ಮತ್ತು ಮನೆಗಳಿಗೆ ಬೇಡಿಕೆ ಇಟ್ಟರು. ಈ ವೇಳೆ ಮಾನ್ಯ ಸಚಿವರು ಮಾತನಾಡಿ, ತಾಲ್ಲೂಕಿಗೆ ಈಗಾಗಲೇ 500 ಮನೆಗಳು ಮತ್ತು ಜಾಮಿಯ ಮಸೀದಿ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿರುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಶಾಸಕರಾದ ಶಿವಲಿಂಗೆಗೌಡ, ಅಬ್ಬಯ್ಯ ಪ್ರಸಾದ್ ಇದ್ದರು. ವರದಿ : ನಂದೀಶ್ ನಾಯ್ಕ ಪಿ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ವೈ.ಎನ್.ಹೊಸಕೋಟೆ: ಗ್ರಾಮದ ಶ್ರೀ ಚೌಡೇಶ್ವರಿ ಸಮುದಾಯ ಭವನದಲ್ಲಿ ಶುಕ್ರವಾರದಂದು ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆ, ತುಮಕೂರು ಜಿಲ್ಲಾ ಅಂದತ್ವ ನಿಯಂತ್ರಣಾ ಸಂಸ್ಥೆ ಸೇವಾ ಟ್ರಸ್ಟ್ ಮತ್ತು ಪಾವಗಡದ ಹೆಲ್ಪ್ ಸೊಸೈಟಿ ವತಿಯಿಂದ ಉಚಿತ ನೇತ್ರ ಶಸ್ತ್ರಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನುಉದ್ಘಾಟಿಸಿದ ಶ್ರೀ ಚೌಡೇಶ್ವರಿ ಸಮುದಾಯ ಭವನದ ಅಧ್ಯಕ್ಷರಾದ ಜಿ.ಬಿ.ಸತ್ಯನಾರಾಯಣ ಮಾತನಾಡಿ, ಹಲವು ವರ್ಷಗಳಿಂದ ತಾಲ್ಲೂಕಿನಾದ್ಯಂತ ಹೆಲ್ಪ್ ಸೊಸೈಟಿ ವಿವಿಧ ಸಮಾಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾ ಬರುತ್ತಿದೆ. ಆ ಮೂಲಕ ಹಲವರ ನೋವನ್ನು ಅಳಿಸುವ ಪ್ರಯತ್ನ ಮಾಡುತ್ತಿದೆ. ಈ ಸೇವೆ ನಿತ್ಯ ನಿರಂತರವಾಗಲಿ. ಅಶಕ್ತರಿಗೆ ಆಸರೆಯಾಗಲಿ ಎಂದು ತಿಳಿಸಿದರು. ಹೆಲ್ಪ್ ಸೊಸೈಟಿಯ ಅಧ್ಯಕ್ಷ ಮಾತನಾಡಿ, ಪ್ರತಿ ತಿಂಗಳು ವೈ.ಎನ್.ಹೊಸಕೋಟೆಯಲ್ಲಿ ಶಂಕರ ಕಣ್ಣಿನ ಆಸ್ಪತ್ರೆಯ ಸಹಯೋಗದೊಂದಿಗೆ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಆಸಕ್ತರು ಇದರ ಉಪಯೋಗ ಪಡೆದುಕೊಳ್ಳಬಹುದು. ತಾಲ್ಲೂಕಿನಲ್ಲಿ ಶಿಕ್ಷಣ ಆರೋಗ್ಯ ಪರಿಸರ ಸಂರಕ್ಷಣೆಯಲ್ಲಿ ನಮ್ಮ ಸಂಘಟನೆಯು ಎಲ್ಲರ ಸಹಕಾರದ ಮೇರೆಗೆ ಕೈಲಾದ ಸೇವೆಯನ್ನು ಸಲ್ಲಿಸುತ್ತಿದೆ. ಈ ಬಗ್ಗೆ ನಮಗೆ ಹೆಮ್ಮೆ ಇದೆ ಎಂದರು. ಶಿಬಿರದಲ್ಲಿ 93 ಜನ…
ಔರಾದ್ : ಪಟ್ಟಣದ ಯುವಕನೊಬ್ಬ 11 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಬುಧವಾರ ಔರಾದ್ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ. ಘಟನೆಗೆ ಸಂಬಂಧಿಸಿದಂತೆ 30 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಬಾಲಕಿ ಹಾಗೂ ಯುವಕ ಒಂದೇ ಬಡಾವಣೆಯಲ್ಲಿ ವಾಸವಿದ್ದು, ಬಾಲಕಿ ಕುಟುಂಬಸ್ಥರಿಗೂ ಮತ್ತು ಯುವಕನಿಗೆ ಪರಿಚಯವಿತ್ತು. ಯುವಕ ಆಗಾಗ ಬಾಲಕಿ ಜತೆ ಅನುಚಿತವಾಗಿ ವರ್ತಿಸುತ್ತಿದ್ದ. ಈ ಕುರಿತು ಬಾಲಕಿ ಪಾಲಕರಲ್ಲಿ ವಿಷಯ ತಿಳಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಔರಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ. ವರದಿ: ಅರವಿಂದ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ಬೀದರ್: ಎಕಂಬಾ ಗ್ರಾಮದಲ್ಲಿ ಶಾಲಾ ಬಸ್ ಹರಿದು ಮೃತಪಟ್ಟ ಬಾಲಕಿಯ ಮನೆಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ್ ಕೋಸಂಬೆ ಅವರು ಭೇಟಿ ನೀಡಿ ಬಾಲಕಿಯ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಸೇಂಟ್ ಪೌಲ್ ಪಬ್ಲಿಕ್ ಶಾಲೆಯ ಆಡಳಿತ ಮಂಡಳಿ ಹಾಗೂ ವಾಹನ ಚಾಲಕನ ನಿರ್ಲಕ್ಷ್ಯತನದಿಂದ ನಮ್ಮ ಮಗು ವಾಹನದ ಚಕ್ರದಲ್ಲಿ ಸಿಲುಕಿ ಮೃತಪಟ್ಟಿದೆ. ಶಾಲೆ ಶುಲ್ಕ ಕಟ್ಟಲು ಫೋನ್ ಮಾಡಿದ ಶಾಲಾ ಆಡಳಿತ ಮಂಡಳಿ, ನಮ್ಮ ಮಗಳು ಪ್ರಾಣ ಬಿಟ್ಟರೂ ಫೋನ್ ಮಾಡಲಿಲ್ಲ. ಇದಕ್ಕೆಲ್ಲ ಚಾಲಕನ ಕುಡಿತವೇ ಕಾರಣ ಎಂದು ಪಾಲಕರು ಕೋಸಂಬೆ ಅವರಲ್ಲಿ ಅಳಲು ತೋಡಿಕೊಂಡರು. ನಾವು ಬಡವರು, ನಮಗೆ ನ್ಯಾಯ ಕೊಡಿಸಿ. ಇಂತಹ ಘಟನೆ ಮರಕಳಿಸದಂತೆ ಶಾಲೆ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಬಾಲಕಿಯ ತಾಯಿ ಪೂಜಾ ಅವರು ಮನವಿ ಮಾಡಿಕೊಂಡರು. ವರದಿ: ಅರವಿಂದ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು…
ಬೀದರ್/ಔರಾದ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾದಿಗ ದಂಡೋರ ಹೋರಾಟ ಸಮಿತಿ ರಾಜ್ಯ ಕಾರ್ಯಾಧ್ಯಕ್ಷರಾದ ಫರ್ನಾಂಡಿಸ ಹಿಪ್ಪಳಗಾಂವ ಅವರ ನೇತೃತ್ವದಲ್ಲಿ ನೂತನ ತಾಲೂಕು ಪದಾಧಿಕಾರಿಗಳ ನೇಮಕಗೊಳಿಸಿ ಆದೇಶ ಪತ್ರ ನೀಡಲಾಯಿತು. ಪದಾಧಿಕಾರಿಗಳ ವಿವರ: ತಾಲೂಕು ಗೌರವಾಧ್ಯಕ್ಷರಾಗಿ ಜಗನಾಥ ಕೌಠ, ತಾಲೂಕು ಅಧ್ಯಕ್ಷರಾಗಿ ಬಸವರಾಜ್ ಮಾಳಗೆ, ಕಾರ್ಯಧ್ಯಕ್ಷರಾಗಿ ಅಶೋಕ್ ನಾಗನಪಲ್ಲಿ, ಉಪಾಧ್ಯಕ್ಷರಾಗಿ ಶಿವರಾಜ ಬೆಲ್ದಾಳ, ಸಂಜು ಮೇತ್ರ ರಾಯಪಳ್ಳಿ, ಸತೀಶ್ ನಾಗೂರ್, ಸುಂದರ ಖಾನಾಪುರ್, ಕಾರ್ಯದರ್ಶಿಗಳಾಗಿ ಶಿರೋಮಣಿ, ಅನಿಲ್, ಭಗವಂತ, ಖಜಂಚಿಯಾಗಿ ಶ್ಯಾಮವೇಲ, ಯುವ ಘಟಕ ಅಧ್ಯಕ್ಷರಾಗಿ ಮಾರುತಿ ಸೂರ್ಯವಂಶಿ, ಕಾರ್ಯಕಾರಿಣಿ ಸದಸ್ಯರುಗಳಾಗಿ ಸಿಮೋನ್, ಉಮಾಕಂತ್, ನಾಗಪ್ಪ, ಕಾರ್ಮಿಕ ಘಟಕ ತಾಲೂಕು ಅಧ್ಯಕ್ಷರಾಗಿ ನಾಗಪ್ಪ, ಕಾರ್ಯದರ್ಶಿಗಳಾಗಿ ಆನಂದ್, ಉಪಾಧ್ಯಕ್ಷರಾಗಿ ಅಮೃತ್ ಶಿವಕುಮಾರ ಅವರನ್ನು ನೇಮಕ ಮಾಡಲಾಗಿದೆ ಎಂದು ಮಾದಿಗ ದಂಡೂರ ಹೋರಾಟ ಸಮಿತಿಯ ಜಿಲ್ಲಾ ಘಟಕ ಅಧ್ಯಕ್ಷರಾದ ವಿಜಯಕುಮಾರ್ ಹಿಪ್ಪಳಗಾಂವ ಅವರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸಮುದಾಯದ ಯುವ ಮುಖಂಡರಾದ ಸುಧಾಕರ್ ಕೊಳ್ಳುರ, ದಂಡೂರ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸ್ವಾಮಿದಾಸ್ ಮೇಘ, ಕಮಲ್ ಹಾಸನ್,…
ತುಮಕೂರು: ನ್ಯಾಯಾಲಯದ ಆವರಣದಲ್ಲಿ ಬೀದಿ ನಾಯಿಯೊಂದು ಮಹಿಳೆಯ ಮೇಲೆ ಭೀಕರವಾಗಿ ದಾಳಿ ನಡೆಸಿದ್ದು, ತೀವ್ರ ರಕ್ತಸ್ರಾವವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶನಿವಾರ ತುಮಕೂರು ಜಿಲ್ಲೆಯ ಗುಬ್ಬಿ ನ್ಯಾಯಾಲಯದ ಆವರಣದಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತೆಯನ್ನು ತಿಪಟೂರು ತಾಲ್ಲೂಕಿನ ಬೀರಸಂದ್ರ ಗ್ರಾಮದ ನಿವಾಸಿ ಗಂಗೂಬಾಯಿ (35) ಎಂದು ಗುರುತಿಸಲಾಗಿದ್ದು, ಕೌಟುಂಬಿಕ ಕಲಹ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ನ್ಯಾಯಾಲಯಕ್ಕೆ ಬಂದಿದ್ದರು. ಗಂಗೂಬಾಯಿ ಶೌಚಾಲಯದಿಂದ ಹೊರಬಂದಾಗ ನಾಯಿ ಆಕೆಯ ಮೇಲೆ ಎರಗಿದೆ. ಆಕೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ, ಪದೇ ಪದೇ ದಾಳಿ ಮಾಡಿ, ಆಕೆಯ ಮುಖವನ್ನು ಕಚ್ಚಿದೆ. ಆಕೆಯ ಕಿರುಚಾಟ ಕೇಳಿ ಸ್ಥಳೀಯರು ಧಾವಿಸಿ ಆಕೆಯನ್ನು ರಕ್ಷಿಸಲು ಹೋಗಿ ನಾಯಿಯ ಹಿಡಿತದಿಂದ ಬಿಡಿಸುವಲ್ಲಿ ಯಶಸ್ವಿಯಾದರು. ಘಟನೆಯಿಂದ ಆಘಾತಕ್ಕೊಳಗಾದ ಮತ್ತು ಕೋಪಗೊಂಡ ಅವರು ನಂತರ ನಾಯಿಯನ್ನು ಬೆನ್ನಟ್ಟಿ ಕೊಂದಿದ್ದಾರೆ. ಗಾಯಾಳು ಮಹಿಳೆಯನ್ನು ಮೊದಲು ಚಿಕಿತ್ಸೆಗಾಗಿ ಗುಬ್ಬಿ ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ನಂತರ ಉನ್ನತ ವೈದ್ಯಕೀಯ ಚಿಕಿತ್ಸೆಗಾಗಿ ಬೆಂಗಳೂರಿಗೆ ಸ್ಥಳಾಂತರಿಸಲಾಯಿತು ಎಂದು ವರದಿಯಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು…