Author: admin

ಮೈಸೂರು: ಜಿಲ್ಲೆಯ ಟಿ. ನರಸೀಪುರ ತಾಲೂಕಿನ ಮೇದಿನಿ ಗ್ರಾಮದಲ್ಲಿ ವಿದ್ಯುತ್​ ತಂತಿ ತುಳಿದು ರೈತ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೇದಿನಿ ಗ್ರಾಮದ ನಿವಾಸಿ ರಾಚನಾಯಕ(70) ಮೃತ ದುರ್ದೈವಿಯಾಗಿದ್ದಾರೆ. ಇತ್ತೀಚೆಗೆ ಜಿಲ್ಲೆಯಾದ್ಯಂತ ಸುರಿದ ಧಾರಾಕಾರ ಮಳೆಯಿಂದಾಗಿ ವಿದ್ಯುತ್​ ಕಂಬದಿಂದ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಈ ವೇಳೆ ರಾಚನಾಯಕ ತನ್ನ ಗದ್ದೆಯ ಕಡೆ ಹೋದಾಗ ಈ ಅವಘಡ ಸಂಭವಿಸಿದೆ. ಘಟನೆ ಸಂಬಂಧ ತಲಕಾಡು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಕಾರವಾರ:  ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಹಾಲಮಡ್ಡಿಯಲ್ಲಿ  ದಂಪತಿಗಳ ನಡುವೆ ಜಗಳ ನಡೆದಿದ್ದು, ಸಿಟ್ಟಿಗೆದ್ದ ಹೆಂಡತಿ ತಾನು ಹೆತ್ತ ಮಗುವನ್ನು ರಾತ್ರೊ ರಾತ್ರಿ ಮೊಸಳೆಗಳಿದ್ದ ನಾಲೆಗೆ ಎಸೆದಿರುವಂತಹ ಘಟನೆ ನಡೆದಿದೆ. ಸಾವಿತ್ರಿ ಆರೋಪಿ ತಾಯಿಯಾಗಿದ್ದಾರೆ. ವಿನೋದ್​​ (6) ಸಾವಿಗೀಡಾದ ಮಗುವಾಗಿದೆ. ನಿನ್ನೆ ರಾತ್ರಿ ಗಂಡ ರವಿಕುಮಾರ್ ಜೊತೆ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿದ್ದ ಸಾವಿತ್ರಿ, ಕೋಪದಲ್ಲಿ ಮಗುವನ್ನ ಮೊಸಳೆಗಳಿದ್ದ ನಾಲೆಗೆ ಎಸೆದು ನಂತರ ಪಶ್ಚಾತಾಪದಿಂದಾಗಿ ಘಟನೆ ಬಗ್ಗೆ ಬಾಯಿ ಬಿಟ್ಟಿದ್ದಾರೆ. ಮೃತದೇಹವನ್ನು ಹೊರತೆಗೆಯಲು ಮುಳುಗು ತಜ್ಞರಿಂದ ಶೋಧ ಕಾರ್ಯ ಮುಂದುವರೆದಿದ್ದು, ಕೊನೆಗೂ ಮಗುವಿನ ಮೃತದೇಹ ಸಿಕ್ಕಿದೆ. ಮಗುವಿನ ಬಲಗೈಯನ್ನು ಮೊಸಳೆ ಕಚ್ಚಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಘಟನೆಯ ಹಿನ್ನಲೆ: ಮೃತ 6 ವರ್ಷದ ವಿನೋದ್​​ ಮಾತು ಬಾರದ ಮಗು. ಇದನ್ನೇ ನೆಪಮಾಡಿಕೊಂಡಿದ್ದ ಗಂಡ ಕುಡಿದು ಹೆಂಡತಿ ಜತೆ ಜಗಳವಾಡುತ್ತಿದ್ದ. ಪ್ರತೀ ಬಾರಿ ಗಲಾಟೆಯಾದಾಗಲೂ ಮಗು ಸಾಯಲಿ ಅಂತಾ ಗಂಡ ರವಿಕುಮಾರ್ ಬೈಯ್ಯುತ್ತಿದ್ದ. ಹೀಗಾಗಿ ಗಂಡನ ಜತೆ ಗಲಾಟೆಯ ಕೋಪದಲ್ಲಿ ಮಗುವನ್ನು…

Read More

ಛತ್ತೀಸ್​ ಗಢ: ಛತ್ತೀಸ್ ‌ಗಡದಲ್ಲಿ ಮೊಬೈಲ್‌ ಬಳಕೆಗೆ ಅಡ್ಡಿಯಾಗಿದ್ದನೆಂದು ಸ್ವತಃ ಅಣ್ಣನನ್ನೇ ತಂಗಿಯೊಬ್ಬಳು ಹೊಡೆದು ಕೊಂದ ಘಟನೆ ನಡೆದಿದೆ. 14ವರ್ಷದ ಬಾಲಕಿಯೊಬ್ಬಳು ಆಗಾಗ ಮೊಬೈಲ್ ನಲ್ಲಿ ಯಾರೋ ಹುಡುಗನ ಜೊತೆ ಮಾತನಾಡುತ್ತಿದ್ದು, ಇದನ್ನು ಗಮನಿಸಿದ ಆಕೆಯ ಅಣ್ಣ(18) ಇನ್ನು ಮುಂದೆ ಮೊಬೈಲ್‌ ಬಳಸದಂತೆ ಎಚ್ಚರಿಕೆ ನೀಡಿ ಮೊಬೈಲ್‌ ಕಿತ್ತುಕೊಂಡಿದ್ದ. ಇದರಿಂದ ಕುಪಿತಳಾದ ಬಾಲಕಿ ತಾಯಿ ಮನೆಯಲ್ಲಿಲ್ಲದ ವೇಳೆ ಕೊಡಲಿಯಿಂದ ಮಲಗಿದ್ದ ಅಣ್ಣನ ಕುತ್ತಿಗೆಗೆ ಬೀಸಿದ್ದಾಳೆ. ಗಂಭೀರವಾಗಿ ಗಾಯಗೊಂಡಿದ್ದ ಯುವಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಘಟನೆ ಬಳಿಕ ಸ್ನಾನ ಮಾಡಿದ ಬಾಲಕಿ ತನ್ನ ಬಟ್ಟೆ ಮೇಲಿದ್ದ ರಕ್ತದ ಕಲೆಯನ್ನು ಸ್ವಚ್ಛ ಮಾಡಿದ್ದಳು. ಇದಾದ ಬಳಿಕ ತನ್ನ ಅಣ್ಣನನ್ನು ಯಾರೋ ಕೊಲೆ ಮಾಡಿದ್ದಾರೆಂದು ಬಾಲಕಿ ನೆರೆಮನೆಯವರಿಗೆ ತಿಳಿಸಿದ್ದಾಳೆ. ತಕ್ಷಣ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಬಾಲಕಿಯನ್ನು ವಿಚಾರಣೆ ನಡೆಸಿದಾಗ ತಾನೇ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಆಕೆಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ…

Read More

ಮಾಜಿ ಸಚಿವ ಎಚ್.ಡಿ. ರೇವಣ್ಣ ಬಂಧನ ಹಿನ್ನಲೆ ಗದಗದಲ್ಲಿ ಕಾನೂನು ಸಚಿವ ಎಚ್.ಕೆ. ಪಾಟೀಲ ಪ್ರತಿಕ್ರಿಯೆ ನೀಡಿದ್ದಾರೆ.  ಈ ಸಂಬಂಧ ಮಾತನಾಡಿದ ಅವರು, ಮಾಜಿ ಮಂತ್ರಿಗಳಾದ ರೇವಣ್ಣ ಅವರನ್ನು ನಮ್ಮ ಪೊಲೀಸರು ಬಂಧನ ಮಾಡಿದ್ದಾರೆ. ಕಾನೂನು ತನ್ನ ಕ್ರಮ ತೆಗೆದುಕೊಂಡಿದೆ. ಅವರ ವಿರುದ್ಧ ಇರುವ ಆಪಾದನೆಗಳ ಹಿನ್ನಲೆಯಲ್ಲಿ ಕೇಸ್ ರಿಜಿಸ್ಟರ್ ಆಗಿತ್ತು. ಕೆಲವು ಪುರಾವೆಗಳು ಲಭ್ಯವಾಗಿದ್ದವು. ಆ ಹಿನ್ನಲೆಯಲ್ಲಿ ಅವರನ್ನು ಬಂಧನ ಮಾಡಿದ್ದಾರೆ. ಪ್ರಜ್ವಲ್ ರೇವಣ್ಣ ವಿಷಯ ಅವರು ಎಲ್ಲೆ ಇರಲಿ, ಅವರನ್ನು ಬಂಧನ ಮಾಡುವುದಕ್ಕೆ ಸೂಕ್ತವಾದ ಕ್ರಮ ಜಾರಿಯಲ್ಲಿದೆ ಎಂದರು. ಇನ್ನೂ ಎಸ್.ಐಟಿ ತನಿಖೆ ಚುರುಕು ಗೊಳ್ಳುವ ವಿಚಾರವಾಗಿ ಮಾತನಾಡಿ, ಸಹಜವಾಗಿ ಚುರುಕುಗೊಳ್ಳಲಿದೆ. ಹೈಕೋರ್ಟ್ ನವರು ಜಾಮೀನು ಅರ್ಜಿ ರಿಜೆಕ್ಟ್ ಮಾಡಿದ್ದಾರೆ. ಆ ಮೇಲೆ ಇವರ ಬಂಧನ ಆಗಿದೆ. ಕಾನೂನು, ನ್ಯಾಯ, ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ ಪಾಟೀಲ ಹೇಳಿಕೆ‌ ನೀಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ…

Read More

ಪಿವೋಟಲ್ ಕಂಪನಿಯು ಮೊದಲ ಸಿಂಗಲ್ ಸೀಟರ್ ವಿಮಾನವನ್ನು ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ. ಕುತೂಹಲದ ವಿಷಯ ಅಂದರೆ, ಈ ವಿಮಾನಕ್ಕೆ ಪೈಲಟ್ ಲೈಸನ್ಸ್‌ ಇಲ್ಲದಿದ್ದರೂ ಹಾರಾಟ ನಡೆಸಬಹುದು. ಅಲ್ಲದೇ, ಈ ವಿಮಾನ ಕೇವಲ 1.5 ಕೋಟಿ ರೂಪಾಯಿ ಮಾತ್ರ. ಈ ಚಿಕ್ಕ ವಿಮಾನಕ್ಕೆ ಹೆಲಿಕ್ಸ್ ಎಂದು ಹೆಸರಿಡಲಾಗಿದ್ದು, ಮುಂದಿನ ಮೂರು ವರ್ಷಗಳಲ್ಲಿ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ. ಹೆಚ್ಚು ದಟ್ಟಣೆಯ ಪ್ರದೇಶಗಳಲ್ಲಿ ಈ ವಿಮಾನ ಹಾರಾಟ ನಡೆಸಲ್ಲ. ೨೫೪ ಪೌಂಡ್‌ ಗಳಿಗಿಂತ ಕಡಿಮೆ ತೂಕವನ್ನು ಸಿಂಗಲ್ ಸೀಟರ್ ವಿಮಾನ ಹೊಂದಿದ್ದು, 20 ಮೈಲಿ ವ್ಯಾಪ್ತಿಯನ್ನು ಹೊಂದಿದೆ. ಈ ವಿಮಾನವನ್ನು ಚಾಲನೆ ಮಾಡಲು ಪೈಲಟ್ ಪರವಾನಗಿ ಅಗತ್ಯವಿಲ್ಲ. ಆದರೆ, ಇದಕ್ಕೆ ತರಬೇತಿ ಕಡ್ಡಾಯವಾಗಿದೆ. ಸದ್ಯ ಈ ವಿಮಾನದ ಬೆಲೆ 1.5 ಕೋಟಿ ಎಂದು ಕಂಪನಿ ತಿಳಿಸಿದೆ. ಮಾಡೆಲ್ ‌ಗಳ ಅನುಗುಣವಾಗಿ ದರ ಹೆಚ್ಚಾಗಲಿದೆ. ಪಿವೋಟಲ್ ವೆಬ್‌ ಸೈಟ್‌ ಮೂಲಕ ಈ ವಿಮಾನವನ್ನು ಬುಕ್ಕಿಂಗ್ ಮಾಡಬಹುದಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್…

Read More

ಸಂಸದ ಪ್ರಜ್ವಲ್ ರೇವಣ್ಣ ಮತ್ತು ಶಾಸಕ ಎಚ್.ಡಿ. ರೇವಣ್ಣ ಲೈಂಗಿಕ ಹಗರಣ, ಅತ್ಯಾಚಾರ ಮತ್ತು ಅಪಹರಣಗಳಂತಹ ಗಂಭೀರ ಆರೋಪಗಳಡಿ ಸಿಲುಕಿರುವುದು ಜೆಡಿಎಸ್ ಶಾಸಕರನ್ನು ಅಕ್ಷರಶಃ ಮುಜುಗರಕ್ಕೀಡು ಮಾಡಿದೆ. ಎಚ್.ಡಿ. ರೇವಣ್ಣ ಬಂಧನವಾಗಿದ್ದು, ಇದರ ಬೆನ್ನಲ್ಲೇ ಪ್ರಜ್ವಲ್ ರೇವಣ್ಣ ಬಂಧನದ ಸಾಧ್ಯತೆಯೂ ಸಹ ದಟ್ಟವಾಗಿದೆ. ಹೀಗಾಗಿ ಜೆಡಿಎಸ್ ಶಾಸಕರು ತಮ್ಮ ರಾಜಕೀಯ ಭವಿಷ್ಯವನ್ನು ಬೇರೆ ಪಕ್ಷಗಳಲ್ಲಿ ಕಂಡುಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ. ಪ್ರಜ್ವಲ್ ರೇವಣ್ಣ ಕಾಮಕಾಂಡ ಹೊರಬರುತ್ತಿದ್ದಂತೆಯೇ ಶಾಸಕ ಶರಣಗೌಡ ಕಂದಕೂ‌ರ್ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ದೇವೇಗೌಡರಿಗೆ ಪತ್ರ ಬರೆದು ತಮ್ಮ ಅಸಮಾಧಾನ ಹೊರಗೆಡವಿದ್ದರು. ಪ್ರಜ್ವಲ್ ರೇವಣ್ಣರನ್ನು ಪಕ್ಷದಿಂದ ಹೊರಹಾಕದಿದ್ದರೆ, ತಮಗೆ ಜನರೆದುರು ನಾಚಿಕೆ ಪಡಬೇಕಾದ ಪರಿಸ್ಥಿತಿ ಎದುರಾಗಲಿದೆ ಎಂದು ಅಳಲು ತೋಡಿಕೊಂಡಿದ್ದರು. ಇದರ ಬೆನ್ನಲ್ಲೇ ಮತ್ತೊಬ್ಬ ಜೆಡಿಎಸ್ ಮುಖಂಡ ಸಮೃದ್ಧಿ ಮಂಜುನಾಥ್ ಸಹ ಬಹಿರಂಗವಾಗಿ ತಮ್ಮ ಅಸಮಧಾನ ವ್ಯಕ್ತಪಡಿಸಿ ಪ್ರಜ್ವಲ್ ವಿರುದ್ಧ ಕಿಡಿಕಾರಿದ್ದರು. ಈ ಬೆಳವಣಿಗೆಗಳ ಬೆನ್ನಲ್ಲೇ ಸುಮಾರು 12 ಮಂದಿ ಜೆಡಿಎಸ್‌ ಶಾಸಕರು ಸಾಮೂಹಿಕವಾಗಿ ಪಕ್ಷ ತೊರೆದು ಕಾಂಗ್ರೆಸ್ ಸೇರಲಿದ್ದಾರೆ ಎಂಬ…

Read More

ಇದೇ ಮೊದಲ ಬಾರಿಗೆ ತೃತೀಯ ಲಿಂಗಿಯೊಬ್ಬರು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ದಕ್ಷಿಣ ದೆಹಲಿ ಕ್ಷೇತ್ರದಿಂದ ರಾಜನ್ ಸಿಂಗ್(26) ಎಂಬ ತೃತೀಯಲಿಂಗಿಯೊಬ್ಬರು ನಾಮಪತ್ರ ಸಲ್ಲಿಸಿದ್ದಾರೆ. ಧೋತಿ, ಕ್ಯಾಪ್ ಮತ್ತು ಚಿನ್ನದ ಆಭರಣಗಳನ್ನು ಧರಿಸಿ, ಏಕಾಂಗಿಯಾಗಿ ಸಾಕೇತ್ ‌ನಲ್ಲಿರುವ ದಕ್ಷಿಣ ದೆಹಲಿಯ ಚುನಾವಣಾಧಿಕಾರಿಯ ಕಚೇರಿಗೆ ತೆರಳಿ ಅವರು ನಾಮಪತ್ರ ಸಲ್ಲಿಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ತೃತೀಯಲಿಂಗಿಗಳಿಗೆ ಪ್ರತ್ಯೇಕ ನಾಗರಿಕ ಸೌಲಭ್ಯಗಳ ಕೊರತೆಯಿಂದಾಗಿ ಮತ್ತು ಅವರ ಸಾಮಾಜಿಕ ಸ್ಥಿತಿಗತಿ ಮತ್ತು ಹಕ್ಕುಗಳಿಗಾಗಿ, ಅವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಜನರು ಮತ್ತು ಅಧಿಕಾರಿಗಳ ಗಮನ ಸೆಳೆಯಲು, ನಾನು ಈ ಸ್ಪರ್ಧಿಸುತ್ತಿದ್ದೇನೆ ಎಂದು ತಿಳಿಸಿದರು. ಚುನಾವಣೆಯಲ್ಲಿ ಸರ್ಕಾರವು ರಾಷ್ಟ್ರೀಯ ತೃತೀಯ ಲಿಂಗಿಗಳ ಆಯೋಗವನ್ನು ಸ್ಥಾಪಿಸಬೇಕೆಂದು ನಾನು ಬಯಸುತ್ತೇನೆ. ಇದರಿಂದಾಗಿ ನಮ್ಮ ಮೂಲಭೂತ ಅಗತ್ಯಗಳು, ಉದ್ಯೋಗ ಮತ್ತು ಶಿಕ್ಷಣದಲ್ಲಿ ಕನಿಷ್ಠ 1% ಮೀಸಲಾತಿಯನ್ನಾದರೂ ಜಾರಿಗೆ ತರಬಹುದು. ನಾನು ಗೆದ್ದರೆ, ತೃತೀಯ ಲಿಂಗಿಗಳ ಮೂಲಭೂತ ಅಗತ್ಯಗಳನ್ನು ಪೂರೈಸುವ ಕೆಲಸ ಮಾಡುತ್ತೇನೆ ಎಂದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್…

Read More

ಸಾಮಾನ್ಯವಾಗಿ ಎಲ್ಲ ಆಹಾರಕ್ಕೂ ವಿರುದ್ಧ ಆಹಾರಗಳು ಇರುತ್ತವೆ. ಹಾಗೆಯೇ ಮಾವಿನ ಹಣ್ಣಿ ಗೆ ಕೂಡ ವಿರುದ್ಧ ಆಹಾರವಿದೆ. ಮಾವಿನ ಹಣ್ಣಿನ ಜೊತೆ ಅಂತಹ ಆಹಾರವನ್ನು ಸೇವಿಸಿದಾಗ ಕೆಲವರಿಗೆ ಹೊಟ್ಟೆಯ ತೊಂದರೆ, ವಾಂತಿ, ಅಲರ್ಜಿ, ಚರ್ಮದ ತೊಂದರೆ ಅಥವಾ ಹೊಟ್ಟೆನೋವು ಇತ್ಯಾದಿ ಕಾಣಿಸಿಕೊಳ್ಳುತ್ತದೆ. ಅಂತಹ ಆಹಾರಗಳ ಸಂಯೋಜನೆ ಶರೀರಕ್ಕೆ ವಿಷಕಾರಿಯಾಗುತ್ತದೆ. ಆದ್ದರಿಂದ ಮಾವಿನ ಹಣ್ಣಿನ ಜೊತೆ ಅವುಗಳನ್ನು ಸೇವಿಸದೇ ಇರುವುದು ಆರೋಗ್ಯಕ್ಕೆ ಒಳ್ಳೆಯದು. ಮಾವಿನಹಣ್ಣಿಗೆ ವಿರುದ್ಧವಾದ ಅಂತಹ ಆಹಾರಗಳು ಯಾವುದೆನ್ನುವುದನ್ನು ನಾವು ತಿಳಿದುಕೊಳ್ಳಬೇಕು. ಮಸಾಲೆ ಪದಾರ್ಥ: ಹೆಚ್ಚು ಮಸಾಲೆಬೆರೆತ ಆಹಾರಗಳು ಕೂಡ ಮಾವಿಗೆ ಒಳ್ಳೆಯದಲ್ಲ. ಇವೆರಡರ ಕಾಂಬಿನೇಶನ್ ನಿಂದ ದೇಹದಲ್ಲಿ ಹುಣ್ಣು, ಮೊಡವೆ ಚರ್ಮದ ಖಾಯಿಲೆಗಳು ಹುಟ್ಟಬಹುದು. ಹಾಗಾಗಿ ಮಾವಿನ ಹಣ್ಣಿನೊಂದಿಗೆ ಮಸಾಲೆಯುಕ್ತ ಪದಾರ್ಥ ಅಥವಾ ಶೀತಲ ಆಹಾರವನ್ನು ಸೇವಿಸದೇ ಇರುವುದು ಒಳಿತು. ಹಾಗಲಕಾಯಿ: ಅದರಕ್ಕೆ ಕಹಿ ಉದರಕ್ಕೆ ಸಿಹಿಯಾದ ಹಾಗಲಕಾಯಿ ಸಾಮಾನ್ಯ ದಿನಗಳಲ್ಲಿ ಆರೋಗ್ಯಕ್ಕೆ ಬಹಳ ಒಳ್ಳೆಯದು. ಆದರೆ ಮಾವಿನ ಹಣ್ಣಿಗೆ ಹಾಗಲಕಾಯಿ ವಿರುದ್ಧ ಆಹಾರವಾಗಿದೆ. ನಿಮ್ಮ ಊಟದಲ್ಲಿ ಹಾಗಲಕಾಯಿ ಇದ್ದು…

Read More

ಇತ್ತೀಚಿನ ದಿನಗಳಲ್ಲಿ ಪ್ರತಿ ದುಬಾರಿ ಕಾರುಗಳಲ್ಲಿ ಏರ್ ಬ್ಯಾಗ್ ಇರುತ್ತದೆ. ಕಾರು ಅಪಘಾತದ ಸಂದರ್ಭದಲ್ಲಿ, ಚಾಲಕನ ಜೀವವನ್ನು ಉಳಿಸಲು ಏರ್‌ಬ್ಯಾಗ್‌ಗಳನ್ನು ಮೊದಲು ಸಕ್ರಿಯಗೊಳಿಸಲಾಗುತ್ತದೆ. ಏರ್ ಬ್ಯಾಗ್ ಎಂದರೆ ನೈಲಾನ್ ಬಟ್ಟೆಯಿಂದ ಮಾಡಿದ ಚೀಲ. ಅಪಘಾತದ ಸಂದರ್ಭದಲ್ಲಿ, ಅದನ್ನು ತೆರೆಯಲು ಸ್ವಿಚ್ ಅನ್ನು ಬಳಸುವ ಅಗತ್ಯವಿಲ್ಲ, ಅದು ಸ್ವತಃ ತೆರೆದುಕೊಳ್ಳುತ್ತದೆ. ಕಾರಿನ ಸ್ಟೀರಿಂಗ್ ವೀಲ್, ಗೇಟ್, ಡ್ಯಾಶ್ ಬೋರ್ಡ್ ನಲ್ಲಿ ಏರ್ ಬ್ಯಾಗ್ ಅಳವಡಿಸಲಾಗಿರುತ್ತದೆ. ಇದು ಕಾರ್​ ನಲ್ಲಿ ಇರಲೇಬೇಕು. ಏರ್​ ಬ್ಯಾಗ್​ ಸೆಕೆಂಡುಗಳಲ್ಲಿ ಓಪನ್​ ಆಗುತ್ತದೆ. ಅಪಘಾತ ಸಂಭವಿಸಿದ ತಕ್ಷಣ, ಕಾರಿನ ಒಂದಷ್ಟು ಟೆಕ್ನಿಕಲ್​ ಮೂಲಕ ಓಪನ್​ ಆಗುತ್ತದೆ. ಕಾರಿನಲ್ಲಿ ಸಿಗುವ ಸಿಗ್ನಲ್ ಅನ್ನು ಸ್ವೀಕರಿಸಿದ ತಕ್ಷಣ, ಸ್ಟೇರಿಂಗ್ ವೀಲ್ ​ನ ಅಡಿಯಲ್ಲಿ ಗಾಳಿ ತುಂಬುವಿಕೆಯು ಆರಂಭವಾಗುತ್ತದೆ. ಇನ್ಫ್ಲೇಟರ್ ಸೋಡಿಯಂ ಅಜೈಡ್ ಗ್ಯಾಸ್ ​ನ್ನು ಇದು ಹೊಂದಿರುತ್ತದೆ. ಹಾಗೆಯೇ ಇದು ರಾಸಾಯನಿಕ ಪ್ರಕ್ರಿಯೆಯ ಮೂಲಕ Nitrogenನ್ನು ಉತ್ಪಾದಿಸುತ್ತದೆ. ಗಾಳಿಚೀಲವು Nitrogen ತುಂಬುವ ಮೂಲಕ ಉಬ್ಬಿಕೊಳ್ಳುತ್ತದೆ. ಅಸಲಿ ಹಾಗೂ ನಕಲಿ ಏರ್‌ ಬ್ಯಾಗ್‌…

Read More

ಭಾರತೀಯ ನೌಕಾಪಡೆಯು ಅಗ್ನಿವೀರ್ ಎಸ್ ಎಸ್ ಆರ್ ಮತ್ತು ಎಂಆರ್ ಹುದ್ದೆಗಳಿಗೆ ನೇಮಕಾತಿ ಪ್ರಕಟಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಿದ್ಧರಿರುವ ಎಲ್ಲಾ ಅವಿವಾಹಿತ ಪುರುಷರು ಮತ್ತು ಮಹಿಳೆಯರು ಅಧಿಕೃತ ವೆಬ್‌ಸೈಟ್ https://www.joinindiannavy.gov.in/ ಮೂಲಕ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಅರ್ಜಿ ಪ್ರಕ್ರಿಯೆಯು 13 ಮೇ 2024 ರಿಂದ ಪ್ರಾರಂಭವಾಗುತ್ತದೆ. ಅಭ್ಯರ್ಥಿಗಳು ಭಾರತೀಯ ನೌಕಾಪಡೆಯ ಈ ನೇಮಕಾತಿಗೆ ಮೇ 27 ಅಥವಾ ಮೊದಲು ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಯ ಮೂಲಕ ಹಲವು ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ವಿದ್ಯಾರ್ಹತೆ: ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಸಂಸ್ಥೆ ಅಥವಾ ಮಂಡಳಿಯಿಂದ ಗಣಿತ ಮತ್ತು ಭೌತಶಾಸ್ತ್ರದೊಂದಿಗೆ 12 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಕೇಂದ್ರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಗುರುತಿಸಲ್ಪಟ್ಟ ಪಾಲಿಟೆಕ್ನಿಕ್ ಸಂಸ್ಥೆಯಿಂದ ಇಂಜಿನಿಯರಿಂಗ್ (ಮೆಕ್ಯಾನಿಕಲ್/ಎಲೆಕ್ಟ್ರಿಕಲ್/ಆಟೋಮೊಬೈಲ್/ಕಂಪ್ಯೂಟರ್ ಸೈನ್ಸ್/ಇಂಜಿನಿಯರಿಂಗ್) ಮಾಡಿರಬೇಕು. ಒಟ್ಟು 50% ಅಂಕಗಳೊಂದಿಗೆ ಇನ್‌ಸ್ಟ್ರುಮೆಂಟೇಶನ್ ಟೆಕ್ನಾಲಜಿ/ಇನ್‌ಫರ್ಮೇಷನ್ ಟೆಕ್ನಾಲಜಿಯಲ್ಲಿ ಮೂರು ವರ್ಷದ ಡಿಪ್ಲೊಮಾ ಕೋರ್ಸ್‌ನಲ್ಲಿ ಉತ್ತೀರ್ಣರಾಗಿರಬೇಕು. ವಯಸ್ಸಿನ ಮಿತಿ: ಈ ಹುದ್ದೆಗಳಿಗೆ…

Read More