Author: admin

ಹೃದಯಾಘಾತವು ಇದ್ದಕ್ಕಿದ್ದಂತೆ ಬರುತ್ತದೆ ಎಂಬ ತಪ್ಪು ಕಲ್ಪನೆ ಇದೆ. ಆರೋಗ್ಯ ತಜ್ಞರು ತಿಳಿಸುವ ಪ್ರಕಾರ, ದೇಹವು ಹೃದಯಾಘಾತಕ್ಕೆ 30 ದಿನಗಳ ಮೊದಲು ಎಚ್ಚರಿಕೆ ಸಂಕೇತಗಳನ್ನು ನೀಡುತ್ತದೆ. ಆದ್ರೆ ಸಾಕಷ್ಟು ಜನರು ಈ ಸಂಕೇತಗಳನ್ನು ನಿರ್ಲಕ್ಷಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಯುವಕರು, ವೃದ್ಧರು ಇಬ್ಬರೂ ಹೃದಯಾಘಾತದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಎಲ್ಲ ವರ್ಗದ ಜನರು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ದವಡೆ, ಭುಜಗಳು, ಎದೆಯಲ್ಲಿ ನೋವು: ಹೃದಯಾಘಾತದ ಮೊದಲು ಪ್ರಮುಖ ಚಿಹ್ನೆಗಳೆಂದ್ರೆ, ಒತ್ತಡ, ನೋವು ಅಥವಾ ಎದೆಯ ಸುತ್ತಲೂ ಭಾರದ ಭಾವನೆ. ಕೆಲವು ಜನರು ತೋಳುಗಳು, ಭುಜಗಳು ಅಥವಾ ದವಡೆಯಲ್ಲಿ ನೋವು ಅನುಭವಿಸಬಹುದು. ಈ ನೋವು ಯಾವಾಗಲೂ ತೀವ್ರವಾಗಿರುವುದಿಲ್ಲ. ಕೆಲವೊಮ್ಮೆ ನೀವು ಸ್ವಲ್ಪ ಉರಿ, ಭಾರವನ್ನು ಅನುಭವಿಸಿದರೆ, ನೀವು ಈ ಲಕ್ಷಣಗಳನ್ನು ನಿರ್ಲಕ್ಷಿಸಬಾರದು. ನೀವು ಅಂತಹ ಲಕ್ಷಣಗಳನ್ನು ಅನುಭವಿಸಿದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಅನೇಕ ಜನರು ಇದನ್ನು ನಿರ್ಲಕ್ಷಿಸುತ್ತಾರೆ. ಆಮ್ಲೀಯತೆ ಹಾಗೂ ಗ್ಯಾಸ್ಟ್ರಿಕ್​ ಸಮಸ್ಯೆಯಾಗಿರಬಹುದು ಎಂದು ತಪ್ಪಾಗಿ ಭಾವಿಸಬಾರದು ಎನ್ನುತ್ತಾರೆ ತಜ್ಞರು. ದೇಹದಲ್ಲಿ ದೌರ್ಬಲ್ಯದ ಭಾವನೆ:…

Read More

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿಯರಾದ ಜಯಮಾಲಾ, ಶ್ರುತಿ ಮತ್ತು ಮಾಳವಿಕಾ ಅವಿನಾಶ್ ಅವರಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​​ ಅವರನ್ನು ಭೇಟಿ ಮಾಡಿ ದಿ.ನಟ ವಿಷ್ಣುವರ್ಧನ್ ಅವರಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಮಂಗಳವಾರದಂದು ಟ್ವೀಟ್​ ಶೇರ್ ಮಾಡಿದ್ದ ಮುಖ್ಯಮಂತ್ರಿ, ”ಕನ್ನಡ ಚಿತ್ರರಂಗದ ಹಿರಿಯ ನಟಿಯರಾದ ಜಯಮಾಲ, ಶ್ರುತಿ ಮತ್ತು ಮಾಳವಿಕಾ ಅವಿನಾಶ್ ಅವರು ಇಂದು ನನ್ನನ್ನು ಭೇಟಿಯಾಗಿ ದಿವಂಗತ ವಿಷ್ಣುವರ್ಧನ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಮನವಿ ಸಲ್ಲಿಸಿದರು. ಇದೇ ವೇಳೆ, ಇತ್ತೀಚೆಗೆ ನಿಧನರಾದ ಪಂಚಭಾಷಾ ನಟಿ ಬಿ.ಸರೋಜಾ ದೇವಿ ಅವರ ಹೆಸರನ್ನು ಅವರು ವಾಸವಿದ್ದ ಮಲ್ಲೇಶ್ವರಂನ ರಸ್ತೆಗೆ ನಾಮಕರಣ ಮಾಡುವಂತೆಯೂ ಮನವಿ ಮಾಡಿದರು” ಎಂದು ತಿಳಿಸಿದ್ದಾರೆ. ಇಂದು ಭೇಟಿಯ ಫೋಟೋಗಳನ್ನು ತಮ್ಮ ಅಧಿಕೃತ ಎಕ್ಸ್​​ ಖಾತೆಯಲ್ಲಿ ಹಂಚಿಕೊಂಡ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ”ಖ್ಯಾತ ನಟಿಯರಾದ ಜಯಮಾಲಾ, ಶ್ರುತಿ ಹಾಗೂ ಮಾಳವಿಕಾ ಅವಿನಾಶ್ ಅವರು ಇಂದು ನನ್ನನ್ನು ಗೃಹ ಕಚೇರಿಯಲ್ಲಿ ಭೇಟಿಯಾಗಿ,…

Read More

ಕೊರಟಗೆರೆ : ಪಟ್ಟಣದ ಗಣಪತಿ ಬಸ್ಟಾಂಡ್ ಸರ್ಕಲ್‌ ನ ಶ್ರೀಸತ್ಯಗಣಪತಿ ಸನ್ನಿದಾನದಲ್ಲಿ 65ನೇ ವರ್ಷದ ವಾರ್ಷಿಕ ಹಬ್ಬದ ಅಂಗವಾಗಿ ಎಸ್‌ ಆರ್‌ ಎಸ್ ಬಸ್ ಮಾಲೀಕರಾದ ದಿವಂಗತ ಎನ್.ಆರ್.ರೇವಣ್ಣಪ್ಪ ಹಾಗೂ ಕುಟುಂಬದವರಿಂದ ಆಯೋಜಿಸಿದ್ದ ಅನ್ನ ಸಂತರ್ಪಣೆ ಕಾರ್ಯಕ್ರಮವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ಯಶಸ್ವಿ ಕಂಡಿತ್ತು. ಎಸ್‌ ಆರ್‌ ಎಸ್ ಬಸ್ ಮಾಲೀಕ ಮಂಜುನಾಥ್ ನಾಗಪ್ರಸಾದ್ ಮಾತನಾಡಿ, ನಮ್ಮ ತಂದೆಯವರ ಕಾಲದಿಂದಲೂ ಶ್ರೀಸತ್ಯಗಣಪತಿ ಸನ್ನಿದಾನದಲ್ಲಿ ಪ್ರತಿವರ್ಷ ಅನ್ನಸಂತರ್ಪಣೆ ಕಾರ್ಯಕ್ರಮವನ್ನ ಆಯೋಜಿಸಿಕೊಂಡು ಬರುತ್ತಿದ್ದು, ಭಕ್ತರು ಹೆಚ್ಚಿನ ಸಂಖೈಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುತ್ತಿದ್ದಾರೆ. ದಾನಗಳಲ್ಲಿ ಶ್ರೇಷ್ಠ ದಾನ ಅನ್ನದಾನ. ತಂದೆಯವರ ನಡೆದು ಬಂದ ಹಾದಿಯನ್ನು ನಾವು ಮುಂದುವರಿಯುತ್ತಿದ್ದೇವೆ ಎಂದು ಹೇಳಿದರು. ಕೊರಟಗೆರೆ ಪೊಲೀಸ್ ಠಾಣೆಯ ಸಿಪಿಐ ಅನಿಲ್ ಮಾತನಾಡಿ, ಎರಡು ವರ್ಷಗಳಿಂದ ನಮ್ಮ ಕೊರಟಗೆರೆಯಲ್ಲಿ ನಗರದ ಎಲ್ಲಾ ಗಣಪತಿ ಪ್ರತಿಷ್ಠಾಪನೆ ಮಂಡಳಿಗಳು ನಿಗದಿತ ದಿನದಲ್ಲಿ ಒಟ್ಟಾರೆ ಗಣಪತಿ ಮೂರ್ತಿಗಳನ್ನು ವಿಸರ್ಜನೆ ಮಾಡುವ ಮೂಲಕ ಸಹೋದರತ್ವ ಭಾವನೆಯನ್ನು ಮೆರೆಯುತ್ತಿರುವುದು ಖುಷಿಯ ವಿಚಾರ. ನಮ್ಮ ತಾಲ್ಲೂಕು ಇಡೀ…

Read More

ಸರಗೂರು :  ಮೈಸೂರಿನ ಅಗ್ರಹಾರದಲ್ಲಿ ನಡೆದ ಶುಕ್ರವಾರದಂದು ಶ್ರೀ ದುರ್ಗಾ ಫೌಂಡೇಶನ್ ನ 6ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಕ್ಷೇತ್ರದ ಸಾಧಕರಿಗೆ ಮೈಸೂರು ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಪ್ರದಾನ ಸ್ವೀಕರಿಸಿ ನಂತರ ಮಾತನಾಡಿದ ಜಿಲ್ಲಾ ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಳಸೂರು ಬಸವರಾಜುರವರು ಸಮಾಜ ಸೇವೆಗಳಲ್ಲಿ ತನು, ಮನದ ಸೇವೆಗಳು ಶ್ರೇಷ್ಠತೆ ಪಡೆದುಕೊಂಡಿವೆ. ಪ್ರತಿಯೊಬ್ಬರು ಧನವಿದ್ದರೆ ಮಾತ್ರ ಸೇವೆ ಮಾಡಬಹುದು ಎಂಬ ಮನೋಭಾವನೆಯಿಂದ ಹೊರಬಂದು, ತನು, ಮನ ಸೇವೆ ಸಲ್ಲಿಸುವ ಮೂಲಕ ಜೀವನದಲ್ಲಿ ಸಾರ್ಥಕತೆ ಕಂಡುಕೊಳ್ಳಬಹುದು. ಸಮಾಜದಲ್ಲಿ ಒಳ್ಳೆಯ ಕಾರ್ಯ ಮಾಡುವ ಸಂದರ್ಭದಲ್ಲಿ ವ್ಯಕ್ತಿಯೇ ಇರಬೇಕು ಅಂತಿಲ್ಲ. ಅವರ ವ್ಯಕ್ತಿತ್ವ ಇದ್ದರೆ ಸಾಕು. ಇದಕ್ಕೆ ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷೆ ರೇಖಾ ಶ್ರೀನಿವಾಸ ಅವರು ಹಾಗೂ ಫೌಂಡೇಶನ್ ಪದಾಧಿಕಾರಿಗಳು ನಮ್ಮನ್ನು ಗುರುತಿಸಿ ಪ್ರಶಸ್ತಿ ಪ್ರದಾನ ನೀಡಿದಕ್ಕೆ ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ರಮೇಶ್ ರಾಮಪ್ಪ, ಕಾವ್ಯ, ಉಮೇಶ್ ವನಸಿರಿ, ಲಕ್ಷ್ಮೀ ನಾರಾಯಣ ಯಾದವ್, ಬೀರೇಶ್…

Read More

ಸರಗೂರು:  ತಾಲೂಕಿನ ಹಂಚೀಪುರ ಗ್ರಾಮದಲ್ಲಿ ಇತ್ತೀಚೆಗೆ ನಡೆದ ನೂತನ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡ ಮಸಹಳ್ಳಿ ಸೂರ್ಯ ಕುಮಾರ್ ಸಂವಿಧಾನ ಪೀಠಿಕೆಯನ್ನು ಶಾಸಕ ಅನಿಲ್ ಚಿಕ್ಕಮಾದು ಸಮ್ಮುಖದಲ್ಲಿ ಪಂಚಾಯಿತಿ ಅಧಿಕಾರಿಗಳಿಗೆ  ಕೊಡುಗೆ ನೀಡಿದರು. ನಂತರ ಮಾತನಾಡಿದ ಮಸಹಳ್ಳಿ ಸೂರ್ಯ ಕುಮಾರ್, ಭಾರತದ ಸಂವಿಧಾನದ‌ ಕುರಿತು ಗ್ರಾಮೀಣ ಪ್ರದೇಶಗಳಲ್ಲೂ ಅರಿವು ಮೂಡಿಸುವ ಉದ್ದೇಶದಿಂದ ಗ್ರಾಮ ಪಂಚಾಯಿತಿಗೆ ಗ್ರಂಥಾಲಯಗಳಿಗೆ ಸಂವಿಧಾನದ ಪ್ರತಿಯನ್ನು ಪೂರೈಸಲಾಗುವುದು ಎಂದು ತಿಳಿಸಿದರು. ‘ಗ್ರಾಮೀಣ ಪ್ರದೇಶದ ಜನರು ಅಲ್ಲಿನ ಗ್ರಂಥಾಲಯಗಳಲ್ಲಿ ಸಂವಿಧಾನ ಓದಲು ಅವಕಾಶ ಕಲ್ಪಿಸಲಾಗುವುದು’ ಎಂದರು. ನಂತರ ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ಸಂವಿಧಾನದ ಪ್ರತಿಗಳ ಜತೆಯಲ್ಲೇ ಸ್ಥಳೀಯ ಸಂಸ್ಥೆಗಳ ರಚನೆಯ ಮೂಲಕ ಆಡಳಿತ ವಿಕೇಂದ್ರೀಕರಣಕ್ಕೆ ಅವಕಾಶ ಕಲ್ಪಿಸಿದ ಸಂವಿಧಾನದ 73 ಮತ್ತು 74ನೇ‌ತಿದ್ದುಪಡಿಗಳಿಗೆ ಸಂಬಂಧಿಸಿದ ಗ್ರಂಥಗಳನ್ನೂ ಗ್ರಾಮೀಣ ಪ್ರದೇಶಗಳ ಗ್ರಂಥಾಲಯಗಳಿಗೆ ಒದಗಿಸಲಾಗುವುದು ಎಂದರು. ಅಂಬೇಡ್ಕರ್ ನೇತೃತ್ವದ ಸಂವಿಧಾನ ರಚನಾ ಸಮಿತಿಯು ಜಗತ್ತಿನ ಹಲವು ರಾಷ್ಟ್ರಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ…

Read More

ಮಂಡ್ಯ: ಹುಡುಗನ ಕಡೆಯವರು ಮದುವೆ ಕ್ಯಾನ್ಸಲ್ ಮಾಡಿದ್ದರಿಂದ ನೊಂದು ಯುವತಿಯೊಬ್ಬಳು  ಕಚೇರಿಯಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯಲ್ಲಿ ನಡೆದಿದೆ. ಕೆಆರ್ ಪೇಟೆ ತಾಲೂಕಿನ ವಳಗೆರೆ ಮೆಣಸ ಗ್ರಾಮದ ಕಾವ್ಯ (26) ಆತ್ಮಹತ್ಯೆಗೆ ಶರಣಾಗಿರುವ ಯುವತಿಯಾಗಿದ್ದಾಳೆ. ಈಕೆಗೆ 15 ದಿನಗಳ ಹಿಂದೆ ಹಾಸನದ ಹುಡುಗನ ಜೊತೆ ಮದುವೆ ಫಿಕ್ಸ್ ಆಗಿತ್ತು. ಆದರೆ ಹುಡುಗನ ಮನೆಯವರು ಇತ್ತೀಚೆಗೆ ಮದುವೆ ಬೇಡ ಎಂದು ಮದುವೆ ಕ್ಯಾನ್ಸಲ್ ಮಾಡಿದ್ದರು. ಇದರಿಂದ ಮನನೊಂದ ಯುವತಿ ಕಚೇರಿಯಲ್ಲಿ ಶುಕ್ರವಾರ ನಿದ್ರೆ ಮಾತ್ರೆ ಸೇವಿಸಿ ಅಸ್ವಸ್ಥಗೊಂಡಿದ್ದಾಳೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗಿದೇ ಮೃತಪಟ್ಟಿದ್ದಾಳೆ. ಘಟನೆ ಸಂಬಂಧ ಕಿಕ್ಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ಬೆಂಗಳೂರು: ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಹಬ್ಬವನು ಬೂಕರ್‌ ಪ್ರಶಸ್ತಿ ವಿಜೇತೆ ಬಾನು ಮುಸ್ತಾಕ್‌ ಅವರಿಂದ ಉದ್ಘಾಟನೆ ನೆರವೇರಿಸದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಮಾಜಿ ಸಂಸದ ಪ್ರತಾಪ್‌ ಸಿಂಹ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಹಿಂದೂ ಮತ್ತು ಕನ್ನಡ ವಿರೋಧಿ ಭಾವನೆ ಹೊಂದಿರುವ ಬಾನು ಮುಸ್ತಾಕ್‌ ಅವರಿಂದ ದಸರಾ ಉದ್ಘಾಟಿಸಿದರೆ ಶತಮಾನಗಳಿಂದಲೂ ಆಚರಿಸಿಕೊಂಡು ಬಂದಿರುವ ಸಂಪ್ರದಾಯಕ್ಕೆ ಧಕ್ಕೆ ಬರುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದಾರೆ. ರಾಜ್ಯ ಸರ್ಕಾರ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡಿದೆ. ದಸರಾ ಹಿಂದೂಗಳು ಆಚರಿಸುವ ಹಬ್ಬವಾಗಿದೆ. ನಾಡದೇವತೆ ಚಾಮುಂಡೇಶ್ವರಿಗೆ ಕುಂಕುಮಾರ್ಚನೆ ಮಾಡಬೇಕು. ಇಲ್ಲವೇ ಉದ್ಘಾಟನೆ ಮಾಡುವವರು ಹಣೆಗೆ ತಿಲಕ, ಗಂಧದ ಕಡ್ಡಿ ಬೆಳಗುವುದು ಮಂಗಳಾರತಿ ಮಾಡುವುದು ನಮ್ಮ ಸಂಪ್ರದಾಯವಾಗಿದೆ. ಮೂರ್ತಿ ಪೂಜೆ ವಿರೋಧಿಸುವವರು ದಸರಾ ಉದ್ಘಾಟನೆ ಮಾಡುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ. ಬಾನು ಮುಸ್ತಾಕ್‌ ಅವರಿಂದ ದಸರಾ ಉದ್ಘಾಟನೆಗೆ ಸ್ವತಃ ಮೈಸೂರಿನ ರಾಜಮನೆತನದ ಕುಟುಂಬದ ಸದಸ್ಯರು ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ. ನಾಡದೇವತೆಯನ್ನು ಬಹಿರಂಗವಾಗಿ ವಿರೋಧಿಸುವ ಅವರಿಂದ ಉದ್ಘಾಟನೆ…

Read More

ತಿಪಟೂರು: ತಾಲ್ಲೂಕಿನ ಬೊಮ್ಮಲಾಪುರ ಕೆರೆ ಕಾಮಗಾರಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ರೂ.14.73 ಲಕ್ಷ ವೆಚ್ಚವನ್ನು ವಿನಿಯೋಗಿಸಿ ಕಾಮಗಾರಿಯನ್ನು ನಡೆಸುತ್ತಿದ್ದು, ಕಾಮಗಾರಿ ವೀಕ್ಷಣೆಗೆ ತಾಲ್ಲೂಕು ದಂಡಾಧಿಕಾರಿಗಳಾದ ಮೋಹನ್ ಆಗಮಿಸಿ, ಯೋಜನೆಯ ಸಾಮಾಜಿಕ ಕಾರ್ಯಕ್ರಮಗಳ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ರಾಜ್ಯದ ಬಡ ಜನತೆಗೆ ಹಾಗೂ ರೈತರಿಗೆ ಉಪಯೋಗವಾಗುವಂತಹ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಪ್ರಸ್ತುತ ತಾಲ್ಲೂಕಿನಲ್ಲಿ ಒಟ್ಟು 15 ಕೆರೆ ಪುನಶ್ಚೇತನಗೊಳಿಸಲು ಸರಿಸುಮಾರು 2 ಕೋಟಿಯಷ್ಟು ಮೊತ್ತವನ್ನು ಮಂಜೂರುಗೊಳಿಸಿರುವುದು ಕಂಡುಬರುತ್ತಿದೆ. ಈ ತರಹದ ಸಮಾಜಮುಖಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮಾಡಲು ಧರ್ಮಸ್ಥಳ ಕ್ಷೇತ್ರದ ವೀರೇಂದ್ರ ಹೆಗ್ಗಡೆಯವರಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು. ಇಷ್ಟಲ್ಲದೇ ಈ ಒಂದು ಕೆರೆ ಪುನಶ್ಚೇತನದ ಭಾಗ್ಯ ಬೊಮ್ಮಲಾಪುರ ಗ್ರಾಮಕ್ಕೆ ದೊರೆತಿದ್ದು, ದಯವಿಟ್ಟು ಗ್ರಾಮದ ಎಲ್ಲಾ ಮುಖಂಡರು, ರೈತರು ಧರ್ಮಸ್ಥಳ ಸಂಸ್ಥೆಗೆ ಸಹಕರಿಸಿ ಉತ್ತಮ ಕೆರೆಯನ್ನಾಗಿ ಮಾರ್ಪಾಡುಗೊಳಿಸಲು ಸಹಕರಿಸಬೇಕೆಂದು ವಿನಂತಿಸಿದರು. ಜೊತೆಗೆ ಬಾಕಿ ಉಳಿದ ಕಾಮಗಾರಿಯ ಬಗ್ಗೆಯೂ ಅತ್ಯಮೂಲ್ಯವಾದ…

Read More

ಬೀದರ್: 9ನೇ ತರಗತಿಯ ಬಾಲಕಿ ಮೇಲೆ ಶಿಕ್ಷಕನೊರ್ವ ಲೈಂಗಿಕ ದೌರ್ಜನ್ಯ ನಡೆಸಿರುವ ಬಗ್ಗೆ ನೀಡಿದ ದೂರಿನ ಮೇರೆಗೆ ಆ.28ರಂದು ಹುಮನಾಬಾದ್ ಪೊಲೀಸ್‌ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ. ಜಿಲ್ಲೆಯ ಗ್ರಾಮವೊಂದರಲ್ಲಿ ಬಾಲಕಿಯು ಶಾಲೆಗೆ ಹೋದಾಗ, ಶಿಕ್ಷಕನೊರ್ವ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಶಿಕ್ಷಕನು ಬಾಲಕಿಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದ. ಬಾಲಕಿಯು ತನ್ನ ಪೋಷಕರಿಗೆ ಈ ವಿಷಯ ತಿಳಿಸುತ್ತೇನೆ ಎಂದಾಗ ಶಿಕ್ಷಕ,  ನಿನ್ನ ತಂದೆಯನ್ನು ಕೊಲೆ ಮಾಡುತ್ತೇನೆ ಎಂದು ಬಾಲಕಿಯನ್ನು ಹೆದರಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಬಾಲಕಿಯು ಶಾಲೆಗೆ ಹೋಗುವುದಿಲ್ಲ ಎಂದು ಅಳುತ್ತಾ ಹಠ ಹಿಡಿದಿದ್ದಾಗ ಪೋಷಕರು ಈ ಕುರಿತು ಬಾಲಕಿಯ ಬಳಿ ವಿಚಾರಿಸಿದಾಗ ಬಾಲಕಿಯು ಘಟನೆಯನ್ನು ವಿವರಿಸಿದ್ದಾಳೆ ಎಂದು ತಿಳಿದು ಬಂದಿದೆ. ವರದಿ: ಅರವಿಂದ ಮಲ್ಲಿಗೆ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ಕೊರಟಗೆರೆ: ಸಾಧನೆಯ ಪ್ರಶಸ್ತಿಗಳು ನಮ್ಮ ಜವಾಬ್ದಾರಿಯನ್ನು ಇನ್ನು ಹೆಚ್ಚಿಸುತ್ತದೆ ಅದನ್ನು ಉಳಿಸಿಕೊಳ್ಳುವ ಮತ್ತು ಬೆಳೆಸಿಕೊಳ್ಳುವ ಕರ್ತವ್ಯ ಮಹತ್ವವಾದದ್ದು ಎಂದು ರಾಷ್ಟ್ರಪತಿ ಪದಕ ಪುರಸ್ಕೃತ ಕೊರಟಗೆರೆ ಪೊಲೀಸ್ ಇಲಾಖೆಯ ಸಿಪಿಐ ಆರ್.ಪಿ.ಅನಿಲ್ ತಿಳಿಸಿದರು. ಕೊರಟಗೆರೆ ಪಟ್ಟಣದ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸಂಘದ ಕಛೇರಿಯಲ್ಲಿ ಏರ್ಪಡಿಸಿದ್ದ ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತರಾದ ಸಿಪಿಐ ಆರ್.ಪಿ.ಅನಿಲ್ ರವರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ರಾಷ್ಟ್ರಪತಿ ಪ್ರಶಸ್ತಿ ಅತ್ಯುತ್ತಮವಾದುದು ಈ ಪ್ರಶಸ್ತಿ ರಾಜ್ಯದಲ್ಲಿ ಪ್ರತಿ ವರ್ಷ 37  ಮಂದಿಗೆ ಮಾತ್ರ ದೊರೆಯುತ್ತದೆ, ಇಂತಹ ಪ್ರಶಸ್ತಿಗಳಿಂದ ನಮ್ಮ ಮೇಲಿನ ಜವಾಬ್ದಾರಿ ಹೆಚ್ಚಾಗುತ್ತದೆ, ಕೊರಟಗೆರೆ ತಾಲೂಕಿನಲ್ಲಿ ಪೊಲೀಸ್ ಮತ್ತು ಪತ್ರಕರ್ತರ ಸಂಘ ಉತ್ತಮವಾಗಿ ಸ್ನೇಹಮಯವಾಗಿ ಕೆಲಸ ಮಾಡುತ್ತಿದೆ, ಎಷ್ಟೋ ಅಪಘಾತ ಕೊಲೆ ಪ್ರಕರಣಗಳಲ್ಲಿ ಪತ್ರಕರ್ತರು ಸಹಕಾರದಿಂದ ಪ್ರಕರಣಗಳು ಪತ್ತೆಯಾಗಲು ಸಹಕಾರಿಯಾಗಿದೆ, ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ರವರ ತವರು ಕ್ಷೇತ್ರದಲ್ಲಿ ಅವರ ಸಮ್ಮುಖದಲ್ಲಿ ಇಂತಹ ಪ್ರಶಸ್ತಿಯನ್ನು ಪಡೆಯುತ್ತಿರುವುದು ಹೆಮ್ಮೆ ಎನ್ನಿಸಿದೆ, ನನ್ನನ್ನು ಸನ್ಮಾನಿಸಿದ ತಾಲೂಕು ಕರ್ನಾಟಕ…

Read More