Subscribe to Updates
Get the latest creative news from FooBar about art, design and business.
- ರಾಹುಲ್ ಗಾಂಧಿಗೆ ‘ರಾಹು ಕಾಲ’ ಬಂದಿದೆ, ಅವರ ಪ್ರತಿಭಟನೆಗೆ ಯಾವುದೇ ಅರ್ಥವಿಲ್ಲ: ವಿಪಕ್ಷ ನಾಯಕ ಆರ್. ಅಶೋಕ್ ಕಿಡಿ
- ಹಾಸನ: ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ವೃದ್ಧೆಯ ಶವ ಪತ್ತೆ — ಕೊಲೆ ಶಂಕೆ, ಪ್ರಕರಣ ದಾಖಲು
- ಬೆಂಗಳೂರು: ಅಮೆಜಾನ್ ಕಚೇರಿ ಹೊರಗೆ ಟ್ರಾನ್ಸ್’ಫಾರ್ಮರ್ ಸ್ಫೋಟ; ಪಾದಚಾರಿಗೆ ಗಾಯ
- ತುಮಕೂರು: ಸ್ವಂತ ಉದ್ಯಮ ಸ್ಥಾಪನೆಗೆ ಉದ್ಯಮಶೀಲತಾ ತರಬೇತಿ – ಅರ್ಜಿ ಆಹ್ವಾನ
- ತುಮಕೂರು: ಹಳೆ ದ್ವೇಷದ ಹಿನ್ನೆಲೆ ಯುವಕನ ಬರ್ಬರ ಹತ್ಯೆ; ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
- ತುಮಕೂರಿನಲ್ಲಿ ವಿದ್ಯಾರ್ಥಿಗಳಿಗೆ ಕಯಾಕಿಂಗ್, ಕನೋಯಿಂಗ್, ಶೂಟಿಂಗ್ ವಿಶೇಷ ತರಬೇತಿ: ಜಿಲ್ಲಾಧಿಕಾರಿ ಶುಭ ಕಲ್ಯಾಣ್
- ನಂದಿನಿ ಹಾಲಿನ ದರ ಲೀಟರ್ ಗೆ ₹8 ಏರಿಕೆ?; ನವೆಂಬರ್ 1ರಿಂದ ಹೊಸ ದರ ಜಾರಿ?
- ಫ್ರಿಡ್ಜ್’ನಲ್ಲಿಟ್ಟ ಆಹಾರ ಎಷ್ಟು ದಿನ ಸೇಫ್? ಈ ವಸ್ತುಗಳನ್ನು ಹೆಚ್ಚು ದಿನ ಇಟ್ಟರೆ ಅಪಾಯ!
Author: Ganesh Tumkuru
ಬೆಂಗಳೂರು: ಕರ್ನಾಟಕದಲ್ಲಿ ಕಾವೇರಿ ನೀರು ಹಂಚಿಕೆ ವಿವಾದ ಮತ್ತು ತೀವ್ರ ಪ್ರತಿಭಟನೆಗಳ ಹಿನ್ನೆಲೆಯಲ್ಲಿ, ಆಗಸ್ಟ್ 3ರಂದು ಬೆಂಗಳೂರಿಗೆ ನಿಗದಿಯಾಗಿದ್ದ ತಮಿಳುನಾಡು ಮುಖ್ಯಮಂತ್ರಿ ಸಿ. ವಿಜಯ್ ಜೋಸೆಫ್ ಅವರ ಭೇಟಿಯನ್ನು ಮುಂದೂಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ. ಕಾವೇರಿ ನೀರು ಹಂಚಿಕೆ ಪ್ರಾಧಿಕಾರವು (CWMA) ತಮಿಳುನಾಡಿಗೆ ಪ್ರತಿದಿನ 3,500 ಕ್ಯೂಸೆಕ್ ನೀರು ಹರಿಸುವಂತೆ ನೀಡಿರುವ ನಿರ್ದೇಶನದಿಂದಾಗಿ ರಾಜ್ಯದಲ್ಲಿ, ಅದರಲ್ಲೂ ವಿಶೇಷವಾಗಿ ಮಂಡ್ಯ ಜಿಲ್ಲೆಯಲ್ಲಿ ಉದ್ವಿಗ್ನ ವಾತಾವರಣ ಹಾಗೂ ಪ್ರತಿಭಟನೆಗಳು ಹೆಚ್ಚಾಗಿವೆ. ಪ್ರತಿಭಟನಾಕಾರರು ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅಭಿನಯದ ಇತ್ತೀಚಿನ ‘ಜನನಾಯಕನ್’ ಚಿತ್ರದ ಪೋಸ್ಟರ್ಗಳನ್ನು ಹರಿದುಹಾಕಿ, ಕೆಲವು ಕಡೆ ಪ್ರದರ್ಶನವನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿದ್ದಾರೆ. “ಪರಿಸ್ಥಿತಿ ಸಂಪೂರ್ಣ ಶಾಂತವಾದ ಬಳಿಕ, ಉತ್ತಮ ವಾತಾವರಣದಲ್ಲಿ ಸ್ನೇಹಪೂರ್ವಕವಾಗಿ ಸಭೆ ನಡೆಸೋಣ. ಹಾಗಾಗಿ ತಾತ್ಕಾಲಿಕವಾಗಿ ತಮ್ಮ ಭೇಟಿಯನ್ನು ಮುಂದೂಡಬೇಕೆಂದು ತಮಿಳುನಾಡು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದೇನೆ”. “ಕರ್ನಾಟಕವು ಎಂದಿಗೂ ಎಲ್ಲ ರಾಜ್ಯಗಳ ಜನರನ್ನು ಗೌರವದಿಂದ ಬರಮಾಡಿಕೊಂಡಿದೆ. ಅತಿಥಿಗಳನ್ನು ಆತ್ಮೀಯವಾಗಿ ಸ್ವಾಗತಿಸುವುದು ನಮ್ಮ ಸಂಸ್ಕೃತಿ, ಯಾರ ಭಾವನೆಗೂ ಧಕ್ಕೆ ಆಗಬಾರದು” ಎಂದು…
ಬೀದರ್: ಜಿಲ್ಲೆಯ ಐತಿಹಾಸಿಕ ಬಸವಕಲ್ಯಾಣ ನಗರದಲ್ಲಿ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ರಸ್ತೆಗಳ ಹದೆಗೆಟ್ಟ ಸ್ಥಿತಿ ಮತ್ತೊಮ್ಮೆ ಬಹಿರಂಗಗೊಂಡಿದೆ. ನಗರದ ಮುಖ್ಯರಸ್ತೆಗಳೆಲ್ಲವೂ ಸಂಪೂರ್ಣವಾಗಿ ಗುಂಡಿಮಯವಾಗಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರು ಪರದಾಡುವಂತಾಗಿದೆ. ಮಳೆಯಾಘಾತಕ್ಕೆ ಬಸವಕಲ್ಯಾಣದ ಮುಖ್ಯರಸ್ತೆಗಳಲ್ಲಿ ದೊಡ್ಡ ಅಳತೆಯ ಗುಂಡಿಗಳು ಸೃಷ್ಟಿಯಾಗಿದ್ದು, ಅಪಾರ ಪ್ರಮಾಣದ ಮಳೆನೀರು ನಿಂತು ರಸ್ತೆಗಳು ಅಕ್ಷರಶಃ ಕೆರೆಯಂತಾಗಿ ಮಾರ್ಪಟ್ಟಿವೆ. ರಸ್ತೆಯಲ್ಲಿನ ಹೊಂಡಗಳಲ್ಲಿ ಮಳೆನೀರು ತುಂಬಿ ನಿಂತಿರುವುದನ್ನು ಕಂಡ ಸ್ಥಳೀಯ ಮಕ್ಕಳು, ಅಲ್ಲಿಯೇ ಇಳಿದು ಈಜಾಡಿ ಆಟವಾಡುತ್ತಿರುವ ದೃಶ್ಯಗಳು ಕಂಡುಬಂದವು. ಪ್ರಮುಖ ರಸ್ತೆಗಳಲ್ಲಿ ಈ ರೀತಿ ಹೊಂಡ–ಗುಂಡಿಗಳು ನಿರ್ಮಾಣವಾಗಿ ಸರೋವರದಂತಾಗಿದ್ದರೂ, ಸಂಬಂಧಪಟ್ಟ ಆಡಳಿತ ಯಂತ್ರಂಗ ಹಾಗೂ ನಗರಸಭೆ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಸ್ಥಳೀಯರು ಮತ್ತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡು ರಸ್ತೆಗಳನ್ನು ದುರಸ್ತಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ವರದಿ: ಅರವಿಂದ ಮಲ್ಲೀಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್…
ಸರಗೂರು: ಮೂರನೇ ಆಷಾಢ ಶುಕ್ರವಾರದ ಅಂಗವಾಗಿ ತಾಲೂಕಿನ ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರವಾದ ತಾಯಿ ಚಿಕ್ಕದೇವಮ್ಮ ಬೆಟ್ಟದಲ್ಲಿ ವಿಶೇಷ ಪೂಜೆ, ಧಾರ್ಮಿಕ ವಿಧಿವಿಧಾನಗಳು ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮಗಳು ಅತ್ಯಂತ ಭಕ್ತಿಭಾವದಿಂದ ನೆರವೇರಿದವು. ಬೆಳಗ್ಗೆಯಿಂದಲೇ ನೂರಾರು ಸಂಖ್ಯೆಯಲ್ಲಿ ಭಕ್ತರು ಬೆಟ್ಟಕ್ಕೆ ಆಗಮಿಸಿ ತಾಯಿ ಚಿಕ್ಕದೇವಮ್ಮನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನದಲ್ಲಿ ತಾಯಿಗೆ ಅಭಿಷೇಕ, ವಿಶೇಷ ಅಲಂಕಾರ, ಅರ್ಚನೆ ಹಾಗೂ ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ಜರುಗಿದವು. ನಂತರ ತಾಯಿ ಚಿಕ್ಕದೇವಮ್ಮನ ಉತ್ಸವ ಮೂರ್ತಿಯನ್ನು ದೇವಸ್ಥಾನದ ಸುತ್ತ ಭಕ್ತಿಭಾವದಿಂದ ಮೆರವಣಿಗೆ ನಡೆಸಲಾಯಿತು. ಈ ವೇಳೆ ಭಕ್ತರು ಜಯಘೋಷ ಮೊಳಗಿಸಿ ದೇವಿಯ ಕೃಪೆಗೆ ಪಾತ್ರರಾದರು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಬಿ. ಮಟಕರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಚಂದ್ರಶೇಖರ ಅವರು ತಮ್ಮ ಕುಟುಂಬ ಸಮೇತ ಹಾಗೂ ಸ್ನೇಹಿತರೊಂದಿಗೆ ಭಾಗವಹಿಸಿ ವಿಶೇಷ ಪೂಜೆ ಸಲ್ಲಿಸಿದರು. ಪೂಜೆ ಬಳಿಕ ಆಗಮಿಸಿದ್ದ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದ್ದು, ಭಕ್ತರು ಪ್ರಸಾದ ಸ್ವೀಕರಿಸಿ ಧನ್ಯತಾಭಾವ ಮೆರಿದರು.…
ಸರಗೂರು: “ಮಾನವ ಹಕ್ಕುಗಳ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಸಮಾಜದ ಎಲ್ಲ ವರ್ಗದ ಜನರಿಗೆ ನ್ಯಾಯ, ಸಮಾನತೆ ಹಾಗೂ ಗೌರವಯುತ ಜೀವನ ದೊರಕುವಂತೆ ಮಾನವ ಹಕ್ಕುಗಳ ಮೌಲ್ಯಗಳನ್ನು ಎಲ್ಲರೂ ಪಾಲಿಸಬೇಕು” ಎಂದು ಮಾನವ ಹಕ್ಕುಗಳ ಮಿಷನ್ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷ ಅಹಮದ್ ಖಾನ್ ಸೆರ್ ಕರೆ ನೀಡಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಮಾನವ ಹಕ್ಕುಗಳ ಮಿಷನ್ ವತಿಯಿಂದ ಆಯೋಜಿಸಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಮಹಾತ್ಮ ಬುದ್ಧ, ಬಸವಣ್ಣ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಮಾನವ ಹಕ್ಕುಗಳು ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಹಕ್ಕುಗಳಾಗಿದ್ದು, ಜಾತಿ, ಧರ್ಮ, ಲಿಂಗ ಅಥವಾ ಆರ್ಥಿಕ ಸ್ಥಿತಿಯ ಆಧಾರದ ಮೇಲೆ ಯಾರ ಮೇಲೆಯೂ ಅನ್ಯಾಯ ಅಥವಾ ಶೋಷಣೆ ನಡೆಯಬಾರದು ಎಂದು ಮುಖಂಡರು ಅಭಿಪ್ರಾಯಪಟ್ಟರು. ಆದಿ ಕರ್ನಾಟಕ ಮಹಾಸಭಾ ಅಧ್ಯಕ್ಷ ಇಟ್ನ ರಾಜಣ್ಣ ಮಾತನಾಡಿ, “ಸಮಾಜದಲ್ಲಿ ನಡೆಯುವ ಅನ್ಯಾಯ, ದೌರ್ಜನ್ಯ, ಮಹಿಳೆಯರು ಮತ್ತು ಮಕ್ಕಳ ಮೇಲಿನ…
ತಿಪಟೂರು: ತಾಲೂಕಿನ ಕಟ್ಟೇಮನೆ ಕೋಟೇನಾಯಕನಹಳ್ಳಿಯಲ್ಲಿ 58ನೇ ವರ್ಷದ ಶ್ರೀ ಬನಶಂಕರಿ ಅಮ್ಮನವರ ಭೀಮನ ಅಮಾವಾಸ್ಯೆ ಮಹೋತ್ಸವ ಆ.12 ಮತ್ತು 13 ರಂದು ನೆರವೇರಲಿದೆ. ಆ.12 ರಂದು ಬೆಳಿಗ್ಗೆ 6ಕ್ಕೆ ಅಮ್ಮನವರಿಗೆ ಅಭಿಷೇಕ, 7ಕ್ಕೆ 8 ವರ್ಷದ ಹೆಣ್ಣು ಮಗುವಿನ ಮೇಲೆ ಅಮ್ಮನವರ ಕಳಸವನ್ನು ತರುವುದು, 7.30ಕ್ಕೆ ನವಗ್ರಹ ಸ್ಥಾಪನೆ, ನಂದಾದೀಪ ಸೇವೆ, 8ಕ್ಕೆ ಶ್ರೀ ರುದ್ರಂಭಾವಸ್ವಾಮಿಯವರನೇತೃತ್ವದಲ್ಲಿ ಅಖಂಡ ಭಜನೆ, 8.30ಕ್ಕೆ ಅಮ್ಮನವರಿಗೆ ಚಿನ್ನ ಲೇಪಿತ ವಜ್ರಾಂಗಿ ಅಲಂಕಾರ, ಮಧ್ಯಾಹ್ನ 12ಕ್ಕೆ ಹೂವಿನ ಅಲಂಕಾರ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ, ಮಧ್ಯಾಹ್ನ 1ಕ್ಕೆ ಅನ್ನಸಂತರ್ಪಣೆ, ಸಂಜೆ 6ಕ್ಕೆ ಅಮ್ಮನವರಿಗೆ ಬೆಣ್ಣೆ ಅಲಂಕಾರ, ರಾತ್ರಿ 8 ಗಂಟೆಗೆ ಆರ್ಕೆಸ್ಟ್ರಾ, 8.30ಕ್ಕೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ. ಆ.13 ರಂದು ಬೆಳಿಗ್ಗೆ 7ಕ್ಕೆ ಅಮ್ಮನವರಿಗೆ ಅಭಿಷೇಕ, 8 ಗಂಟೆಗೆ ಅಖಂಡ ಭಜನೆ ಮುಕ್ತಾಯ, 8.30ಕ್ಕೆ ಶ್ರೀ ಬನಶಂಕರಿ ಅಮ್ಮನವರಿಗೆ ವಜ್ರಾಂಗಿ ಅಲಂಕಾರ, ಮಧ್ಯಾಹ್ನ 12ಕ್ಕೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ಮಧ್ಯಾಹ್ನ 1ಕ್ಕೆ ಅನ್ನಸಂತರ್ಪಣೆ, ರಾತ್ರಿ 9ಕ್ಕೆ ಶ್ರೀ…
ತುಮಕೂರು: ಇಲ್ಲಿನ ಪಾಂಡುರಂಗನಗರ (ಎಮ್ಮೆಕೇರಿ) ದಲ್ಲಿರುವ ಕೋಟೆ ಶ್ರೀ ಗ್ರಾಮ ದೇವತೆ ಅಮ್ಮನವರ ಜಾತ್ರಾ ಮಹೋತ್ಸವವು ಆ.3 ರಿಂದ 6ರವರೆಗೆ ಜರುಗಲಿದೆ. ಆ.3 ರಂದು ಸಂಜೆ ಚಿಕ್ಕಮ್ಮ ಮತ್ತು ಆರತಿಯ ನಡೆ ಮುಡಿಯ ಮೂಲಕ ಚಿಕ್ಕಪೇಟೆ ಶ್ರೀ ಗ್ರಾಮದೇವತೆ ದೇವಸ್ಥಾನದ ಬಳಿ ಜಾತ್ರಾ ಮಂಟಪಕ್ಕೆ ಆಗಮಿಸಿ ಗದ್ದುಗೆಯಾಗುವುದು, ಆ.4 ರಂದು ಬೆಳಿಗ್ಗೆ 8.30ಕ್ಕೆ ಪಾಂಡುರಂಗನಗರದ ಎಮ್ಮೆ ಕೇರಿಯಲ್ಲಿರುವ ಮೂಲ ಶ್ರೀ ಗ್ರಾಮ ದೇವತೆ ಅಮ್ಮನವರ ದೇವಸ್ಥಾನದಲ್ಲಿ ಅಮ್ಮನವರಿಗೆ ಪುಣ್ಯಾರ್ಚನೆ ಮತ್ತು ದೃಷ್ಟಿ ಪೂಜೆ, ಮಧ್ಯಾಹ್ನ 12ಕ್ಕೆ ಅಗ್ನಿವಂಶ ಕ್ಷತ್ರಿಯರಾದ ಟಿ.ಜಿ.ಹನುಮಂತರಾಜು ಅವರ ಮನೆಯಿಂದ ಶ್ರೀ ದೊಡ್ಡಮ್ಮ –ಕಳಸವು ನಡೆ ಮುಡಿಯ ಮೂಲಕ ಪಾಂಡುರಂಗ ನಗರದ ಎಮ್ಮೆ ಕೇರಿ ಶ್ರೀ ಗ್ರಾಮ ದೇವತೆ ಅಮ್ಮನವರ ದೇವಸ್ಥಾನಕ್ಕೆ ಆಗಮಿಸುವುದು. ಮಧ್ಯಾಹ್ನ 1.30ಕ್ಕೆ ಮೆರವಣಿಗೆ ಕಾರ್ಯಕ್ರಮ ನಡೆಯಲಿದ್ದು, ದಿವ್ಯ ಸಾನಿಧ್ಯವನ್ನು ಹಿರೇಮಠಾಧ್ಯಕ್ಷರಾದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳು ವಹಿಸುವರು. ಉದ್ಘಾಟನೆಯನ್ನು ಶಾಸಕ ಕೆ.ಎನ್.ರಾಜಣ್ಣ ಅವರು ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಾಜಿ ವಿ.ಪ. ಸದಸ್ಯರಾದ…
ತುಮಕೂರು: ನಗರದ ಹನುಮಂತಪುರದಲ್ಲಿ ಪೇಟೆ ಮಾತೆ ಕೊಲ್ಲಾಪುರದಮ್ಮ ಹಾಗೂ ಕರುಗಳಮ್ಮ ದೇವರ ಐದು ದಿನಗಳ ಜಾತ್ರಾಮಹೋತ್ಸವ ಏರ್ಪಾಡಾಗಿದೆ. ಆಗಸ್ಟ್ 3ರಂದು ಬೆಳಿಗ್ಗೆ 10.30ಕ್ಕೆ ಶ್ರೀರಾಮನಗರದ ಆದಿಸ್ಥಾನ ಮುದ್ರೆಗೋಣೇಮರದ ಪೂಜೆ, ಮಧ್ಯಾಹ್ನ 3 ಗಂಟೆಗೆ ಕೋಟೆ ಕೊಲ್ಲಾಪುರದಮ್ಮ ಹಾಗೂ ಕರುಗಳಮ್ಮ ದೇವಸ್ಥಾನದಿಂದ ದೇವರುಗಳನ್ನು ಮಂಗಳವಾದ್ಯ, ಜಾನಪದ ಕಲಾತಂಡಗಳ ಪ್ರದರ್ಶನದೊಂದಿಗೆ ಹನುಮಂತಪುರ ದೇವಸ್ಥಾನಕ್ಕೆ ಕರೆತರಲಾಗುವುದು. ನಂತರ ನಡೆಯುವ ಸಮಾರಂಭದಲ್ಲಿ ತಿಪಟೂರು ತಾಲೂಕು ಆಳುಬುರುಕ್ಷೇತ್ರದ ಸೋಮಶೇಖರ ಸ್ವಾಮೀಜಿ ಸಾನಿಧ್ಯವಹಿಸುವರು. ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಕಾರ್ಯಕ್ರಮ ಉದ್ಘಾಟಿಸಿದರೆ ಶಾಸಕರಾದ ಜಿ.ಬಿ. ಜ್ಯೋತಿಗಣೇಶ್, ಎಸ್.ಆರ್.ಶ್ರೀನಿವಾಸ್, ಪ್ರಜಾಪ್ರಗತಿ ಸಂಪಾದಕ ಡಾ.ಎಸ್, ನಾಗಣ್ಣ ಅತಿಥಿಗಳಾಗಿ ಭಾಗವಹಿಸುವರು. ಆಗಸ್ಟ್ 4ರಂದು ಸಂಜೆ 5 ಗಂಟೆಗೆ ಆರತಿಅಗ್ನಿಕೊಂಡವನ್ನು ಕೇಂದ್ರ ಸಚಿವ ವಿ. ಸೋಮಣ್ಣ ಉದ್ಘಾಟಿಸುವರು. ಶಾಸಕರಾದ ಜಿ.ಬಿ. ಜ್ಯೋತಿಗಣೇಶ್, ಸುರೇಶ್ ಗೌಡ, ಮಾಜಿ ಶಾಸಕ ಹೆಚ್.ನಿಂಗಪ್ಪ ಭಾಗವಹಿಸುವರು. ಇದೇ ದಿನ ಸಂಜೆ 6 ಗಂಟೆಗೆ ಕಂಬದರಂಗಯ್ಯ ಮತ್ತು ತಂಡದವರಿಂದ ಸಂಗೀತ ಸಂಜೆ ಏರ್ಪಾಡಾಗಿದೆ. ಆ. 4ರಂದು ಸಂಜೆ 5 ಗಂಟೆಗೆ ದೇವರುಗಳಿಗೆ ಆರತಿ…
ಪಾವಗಡ: ತಾಲೂಕಿನ ನಾಗಲಮಡಿಕೆ ಹೋಬಳಿಗೆ ಸೇರಿದ ಪಳವಳ್ಳಿ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಿಂದ ಓಡಿ ಹೋಗಿದ್ದ 3 ವಿದ್ಯಾರ್ಥಿಗಳು ಪತ್ತೆಯಾಗಿದ್ದಾರೆ. ಶಿಕ್ಷಕರ ಕಿರುಕುಳ ಮತ್ತು ಹಲ್ಲೆಯಿಂದ ಬೇಸತ್ತ ಎಸ್.ಎಸ್.ಎಲ್.ಸಿ. ಓದುತ್ತಿದ್ದ ಈ ಮೂವರು ಮಕ್ಕಳು ಶಾಲೆಯಿಂದ ತಪ್ಪಿಸಿಕೊಂಡಿದ್ದರು ಎಂದು ಪೋಷಕರು ಆರೋಪಿಸಿದ್ದಾರೆ. ವಸತಿ ನಿಲಯದಲ್ಲಿದ್ದ ಭೂಸೂರು ತಾಂಡದ ವಿರುಪಾಕ್ಷ, ಅಪ್ಪಾಜಿಹಳ್ಳಿಯ ವಿಷ್ಣುವರ್ಧನ ಹಾಗೂ ಪಾವುಗಡ ಪಟ್ಟಣದ ಹರ್ಷವರ್ಧನ ಎಂಬುವರು ಮಂಗಳವಾರ ಬೆಳಗ್ಗೆ ಉಪಹಾರ ಸೇವಿಸಿದ ಬಳಿಕ ಪ್ರಾರ್ಥನೆಗೆ ಹಾಜರಾಗದೆ ವಸತಿ ನಿಲಯದಲ್ಲೇ ಉಳಿದುಕೊಂಡಿದ್ದರು. ನಂತರ ಶಾಲೆಯಿಂದ ಹೊರಹೋಗಿ ನಾಪತ್ತೆಯಾಗಿದ್ದರು. ವಿದ್ಯಾರ್ಥಿಗಳ ಸ್ನೇಹಿತರು ನೀಡಿರುವ ಮಾಹಿತಿ ಪ್ರಕಾರ ವಸತಿ ಶಾಲೆಯ ಪ್ರಾಂಶುಪಾಲರಾದ ಲತಾ ಅವರು ಸಂಜೆ ವ್ಯಾಸಂಗದ ವೇಳೆಯಲ್ಲಿ ಎಲ್ಲಾ ಮಕ್ಕಳೂ ನೈಟ್ ಡ್ರೆಸ್ ಕಡ್ಡಾಯವಾಗಿ ಧರಿಸಬೇಕೆಂದು ಸೂಚಿಸಿದ್ದರು. ಕೆಲ ಮಕ್ಕಳ ಬಳಿ ನೈಟ್ ಡ್ರೆಸ್ ಇಲ್ಲದ ಕಾರಣ ಧರಿಸಲು ಸಾಧ್ಯವಾಗಿರಲಿಲ್ಲ. ಇದರಿಂದ ಕೋಪಗೊಂಡ ಪ್ರಾಂಶುಪಾಲರಾದ ಲತಾ ಅವರು ಸೋಮವಾರ ರಾತ್ರಿ ಡ್ರೈಪ್ ಪೈಪ್ ನಿಂದ ಮಕ್ಕಳ ಮೇಲೆ ಹಲ್ಲೆ ನಡೆಸಿದ್ದಾರೆ. ಈ…
ಚಿಕ್ಕನಾಯಕನಹಳ್ಳಿ: ತಾಲೂಕಿನಲ್ಲಿ ಸುದೀರ್ಘ ಕಾಲದಿಂದ ನೆನೆಗುದಿಗೆ ಬಿದ್ದಿರುವ ಹೇಮಾವತಿ ನಾಲೆ ಕಾಮಗಾರಿಯ ವಿಳಂಬ ಧೋರಣೆ ಹಾಗೂ ಅಧಿಕಾರಿಗಳ ನೆಪಮಾತ್ರದ ಭರವಸೆಗಳ ವಿರುದ್ಧ ಆಕ್ರೋಶಗೊಂಡ ರೈತರು ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿ, ತಾಲೂಕು ಕಚೇರಿ ಮುಂಭಾಗ ಅನಿರ್ದಿಷ್ಟಾವಧಿ ಅಹೋರಾತ್ರಿ ಸತ್ಯಾಗ್ರಹಕ್ಕೆ ಚಾಲನೆ ನೀಡಿದರು. ತಾಲೂಕಿನ ವಿವಿಧ ಹಳ್ಳಿಗಳಿಂದ ಆಗಮಿಸಿದ್ದ ನೂರಾರು ರೈತರು, ಹೇಮಾವತಿ ಹೋರಾಟ ಸಮಿತಿಯ ನೇತೃತ್ವದಲ್ಲಿ ನೆಹರು ಸರ್ಕಲ್ನಿಂದ ಆರಂಭಗೊಂಡ ಬೃಹತ್ ರ್ಯಾಲಿಗೆ ದನ-ಕರುಗಳು, ಎತ್ತಿನಗಾಡಿಗಳು ಹಾಗೂ ಟ್ರ್ಯಾಕ್ಟರ್ಗಳೊಂದಿಗೆ ಸಾಲು ಸಾಲಾಗಿ ಹೆಜ್ಜೆ ಹಾಕಿದರು. ಪಟ್ಟಣದ ಪ್ರಮುಖ ರಸ್ತೆಗಳ ಉದ್ದಕ್ಕೂ ತಾಲೂಕು ಆಡಳಿತ, ಜನಪ್ರತಿನಿಧಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಆಕ್ರೋಶದ ಘೋಷಣೆಗಳನ್ನು ಕೂಗುತ್ತಾ ತಾಲೂಕು ಕಚೇರಿ ಮುಂಭಾಗ ಜಮಾಯಿಸಿ ಧರಣಿ ಕುಳಿತರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಹೇಮಾವತಿ ಇಲಾಖೆಯ ಇಂಜಿನಿಯರ್ ಪ್ರಭಾಕರ್, ಇನ್ನೂ 5 ದಿನಗಳಲ್ಲಿ ಬಾಕಿ ಕಾಮಗಾರಿಯನ್ನು ಪೂರ್ಣಗೊಳಿಸಿ ಕೊಡಲಾಗುವುದು ಎಂದು ಮನವಿ ಮಾಡಲು ಯತ್ನಿಸಿದರು. ಆದರೆ ಇಷ್ಟು ದಿನಗಳ ಕಾಲ ಪದೇ ಪದೇ ಸುಳ್ಳು ಆಶ್ವಾಸನೆ ನೀಡಿ…
ಸರಗೂರು / ಎಚ್.ಡಿ. ಕೋಟೆ: ಮಾನವ ಕಳ್ಳಸಾಗಾಣಿಕೆ ಸಮಾಜಕ್ಕೆ ಅತಿ ದೊಡ್ಡ ಶಾಪವಾಗಿದ್ದು, ಇದರ ವಿರುದ್ಧ ಸಮಾಜದ ಪ್ರತಿಯೊಬ್ಬರೂ ಜಾಗೃತರಾಗಬೇಕು. ದುರ್ಬಲ ವರ್ಗದ ಜನರಿಗೆ ತ್ವರಿತ, ಉಚಿತ ಹಾಗೂ ಸುಲಭವಾಗಿ ನ್ಯಾಯ ತಲುಪಿಸಲು ಕಾನೂನು ಸೇವಾ ಪ್ರಾಧಿಕಾರ ಸದಾ ಸಿದ್ಧವಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಎಚ್.ಡಿ. ಕೋಟೆಯ ಅಪರ ಸಿವಿಲ್ ಹಾಗೂ ಜೆಎಂಎಫ್ ಸಿ ನ್ಯಾಯಾಧೀಶರಾದ ಸುಷ್ಮಾ ಎಂ. ತಿಳಿಸಿದರು. ಸರಗೂರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ (ಎಚ್.ಡಿ. ಕೋಟೆ), ವಕೀಲರ ಸಂಘ, ಸರ್ಕಾರಿ ಅಭಿಯೋಜನಾ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ “ಮಾನವ ಕಳ್ಳಸಾಗಾಣಿಕೆ ವಿರೋಧಿ ದಿನ” ಹಾಗೂ “ಜನರಿಗಾಗಿ – ತ್ವರಿತ, ಉಚಿತ ಮತ್ತು ಸುಲಭ ನ್ಯಾಯ” ಕುರಿತ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಇತ್ತೀಚಿನ ದಿನಗಳಲ್ಲಿ ಉದ್ಯೋಗ, ಉನ್ನತ ಶಿಕ್ಷಣ ಹಾಗೂ ಉತ್ತಮ ಜೀವನ ಶೈಲಿಯ ಸುಳ್ಳು ಆಮಿಷಗಳನ್ನು ಒಡ್ಡಿ…