Subscribe to Updates
Get the latest creative news from FooBar about art, design and business.
- ಬೈಕ್ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯ ನೆರವಿಗೆ ಧಾವಿಸಿದ ಶಾಸಕ ಹೆಚ್.ಟಿ. ಮಂಜು
- ಡ್ರೈವಿಂಗ್ ಲೈಸೆನ್ಸ್ ನಿಯಮಗಳಲ್ಲಿ ಮಹತ್ವದ ಬದಲಾವಣೆ! ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ಇನ್ಮುಂದೆ ಕಷ್ಟವಾಗುತ್ತಾ?
- ಆಯುರ್ವೇದ, ಹೋಮಿಯೋಪತಿ ಸೀಟು ಹಂಚಿಕೆ: ಚಾಯ್ಸ್ ಆಯ್ಕೆ, ಶುಲ್ಕ ಪಾವತಿ ದಿನಾಂಕ ವಿಸ್ತರಣೆ — ಕೆಇಎ ಅಂತಿಮ ಅವಕಾಶ
- ಮಾನಸಿಕ ಆರೋಗ್ಯ ಸೇವೆ ಪಡೆಯಲು ಹಿಂದೇಟು ಹಾಕಬಾರದು: ಡಾ.ನಂದಿತಾ
- ಮುರಿದು ಬಿದ್ದಿರುವ ಕ್ರಾಶ್ ಬ್ಯಾರಿಯರ್ ದುರಸ್ತಿ ಮಾಡೋರು ಯಾರು? | ಅನಾಹುತಕ್ಕೂ ಮುನ್ನ ಎಚ್ಚೆತ್ತುಕೊಳ್ಳುತ್ತಾರೆಯೇ ಅಧಿಕಾರಿಗಳು?
- ಯುಜಿ ನೀಟ್–2026: ವೈದ್ಯಕೀಯ ಮತ್ತು ದಂತವೈದ್ಯಕೀಯ ಆನ್ ಲೈನ್ ಸ್ಟ್ರೇ ವೇಕೆನ್ಸಿ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ
- ವೈದ್ಯಕೀಯ ಸೀಟುಗಳ ಹೆಚ್ಚುವರಿ ಸ್ಟ್ರೇ ವೇಕೆನ್ಸಿ ಸುತ್ತು: ಕೆಇಎ (KEA) ಮಹತ್ವದ ಪ್ರಕಟಣೆ
- ದಸರಾ ವೇದಿಕೆಯಲ್ಲಿ ಸಚಿವರನ್ನು ತಡೆದ ಪೊಲೀಸ್ ಅಧಿಕಾರಿ; ತನಿಖೆಗೆ ಸಿಎಂ ಆದೇಶ
Author: Ganesh Tumkuru
ಸರಗೂರು: ಪರಿಶಿಷ್ಟ ಜಾತಿಗಳಲ್ಲಿ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ಸಮುದಾಯಗಳಿಗೆ ನ್ಯಾಯಯುತ ಅವಕಾಶ ಕಲ್ಪಿಸಲು ಒಳಮೀಸಲಾತಿ ಅತ್ಯಗತ್ಯ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಹಾಗೂ ಮಾದರ ಮಹಾಸಭೆಯ ರಾಜ್ಯಾಧ್ಯಕ್ಷ ಕೆ.ಎಚ್. ಮುನಿಯಪ್ಪ ಅಭಿಪ್ರಾಯಪಟ್ಟಿದ್ದಾರೆ. ಪಟ್ಟಣದ ಜಯಚಾಮರಾಜೇಂದ್ರ ಕ್ರೀಡಾಂಗಣದ ಆವರಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ‘ಮಾದರ ಮಹಾಸಭೆಯ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ’ದಲ್ಲಿ ಗಣ್ಯರು ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಒಳಮೀಸಲಾತಿ ವಿಚಾರದಲ್ಲಿ ಎಲ್ಲ ಸಮುದಾಯಗಳ ಹಿತಾಸಕ್ತಿಯನ್ನು ಪರಿಗಣಿಸಿ, ಕಾನೂನುಬದ್ಧವಾಗಿ ಹಾಗೂ ಸಂಪುಟದ ಸಹೋದ್ಯೋಗಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಂಪುಟದ ಸಚಿವರೊಂದಿಗೆ ಸಮಾಲೋಚಿಸಿ ಒಮ್ಮತದ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರವು ಸಾಮಾಜಿಕ ನ್ಯಾಯದ ಬದ್ಧತೆ ಹಾಗೂ ದಲಿತ-ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಿದೆ. 2026ರ ಏಪ್ರಿಲ್‌ನಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸಿದ್ದರಾಮಯ್ಯ ಅವರು ಒಳಮೀಸಲಾತಿ ಸೇರಿದಂತೆ…
ಮಧುಗಿರಿ (ನಮ್ಮತುಮಕೂರು): ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡಿ, ಸಮಾಜದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕೆಂಬುದೇ ನಮ್ಮ ಮುಖ್ಯ ಗುರಿಯಾಗಿದೆ ಎಂದು ಬೆಂಗಳೂರಿನ ಎಂ.ಎಸ್.ಎ. (MSA) ಟ್ರಸ್ಟ್ ನ ಅಧ್ಯಕ್ಷರು ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿಯಾದ ಶಿವರಾಮ ಶೆಟ್ಟಿ ತಿಳಿಸಿದರು. ತಾಲ್ಲೂಕಿನ ನೇರಳೇಕೆರೆ ಗ್ರಾಮದ ಶ್ರೀರಂಗನಾಥ ಗ್ರಾಮಾಂತರ ಪ್ರೌಢಶಾಲೆಯ (ಸಿದ್ಧಗಂಗಾ ಮಠ) ಸಮುದಾಯ ಭವನದಲ್ಲಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ, ಶಾಲಾ ಬ್ಯಾಗ್, ನೋಟ್‌ಬುಕ್ ಹಾಗೂ ಅಗತ್ಯ ಶೈಕ್ಷಣಿಕ ಸಲಕರಣೆಗಳನ್ನು ವಿತರಿಸಿ ಅವರು ಮಾತನಾಡಿದರು. ಕಳೆದ ಕೆಲವು ದಶಕಗಳಿಂದ ಟ್ರಸ್ಟ್ ಈ ಸೇವಾ ಕಾರ್ಯವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. “ಸರ್ಕಾರಿ ಶಾಲೆಯ ಮಕ್ಕಳು ಯಾವುದೇ ಕಾರಣಕ್ಕೂ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳಿಗಿಂತ ಕಡಿಮೆಯಿರಬಾರದು ಎಂಬ ಉದ್ದೇಶದಿಂದ ಅಗತ್ಯ ಸೌಲಭ್ಯಗಳನ್ನು ಪೂರೈಸುತ್ತಿದ್ದೇವೆ. ಇದನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ತಮ್ಮ ಕನಸನ್ನು ನನಸು ಮಾಡಿಕೊಳ್ಳಬೇಕು. ಮುಂದೆ ಉನ್ನತ ಹುದ್ದೆಗೇರಿದಾಗ ತಾವು ಓದಿದ ಶಾಲೆ ಹಾಗೂ ಹುಟ್ಟಿದೂರನ್ನು ಮರೆಯದೆ,…
ಹುಳಿಯಾರು: ಎಐಸಿಸಿ ನಾಯಕ ರಾಹುಲ್ ಗಾಂಧಿಯವರು ಭಾರತದ ಪ್ರಧಾನಿಯಾಗಬೇಕೆಂಬ ಆಶಯದೊಂದಿಗೆ ಕನ್ಯಾಕುಮಾರಿಯಿಂದ ಕಾಶಿ ಶ್ರೀರಂಗದವರೆಗೆ ಪಾದಯಾತ್ರೆ ಕೈಗೊಂಡಿರುವ ಆಂಧ್ರಪ್ರದೇಶದ ಹಿರಿಯ ವಕೀಲರು ಹಾಗೂ ಕಾಂಗ್ರೆಸ್ ನಾಯಕ ಕಾಟೂರಿ ವೆಂಕಟೇಶ್ವರಲುಗೆ ಹುಳಿಯಾರಿನಲ್ಲಿ ಭವ್ಯ ಸ್ವಾಗತ ದೊರೆಯಿತು. ಗುರುವಾರ ತುರುವೇಕೆರೆಯಿಂದ ಬಂದ ಪಾದಯಾತ್ರೆಯು ಸಂಜೆ ಹುಳಿಯಾರಿನ ರಾಮ್ ಗೋಪಾಲ್ ಸರ್ಕಲ್ ತಲುಪಿತು. ಈ ವೇಳೆ ಸ್ವಾಗತಿಸಿ ಮಾತನಾಡಿದ ಮಾಜಿ ಶಾಸಕ ಕೆ.ಎಸ್. ಕಿರಣ್ ಕುಮಾರ್, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನಮ್ಮ ನಾಯಕರಾದ ರಾಹುಲ್ ಗಾಂಧಿಯವರನ್ನು ಪ್ರಧಾನಿಯನ್ನಾಗಿ ಮಾಡಲು ಜಾಗೃತಿ ಮೂಡಿಸಬೇಕೆಂದು ಕನ್ಯಾಕುಮಾರಿಯಿಂದ ಕಾಶಿ ಶ್ರೀರಂಗದವರೆಗೆ ಪಾದಯಾತ್ರೆ ಹೊರಟಿದ್ದಾರೆ, ಇವರಿಗೆ ಶುಭವಾಗಲಿ ಎಂದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಟಿ.ಚಿಕ್ಕಣ್ಣ, ಪ.ಪಂ. ಸದಸ್ಯ ಜುಬೇರ್, ಸೈಯದ್ ನೂರ್, ಬಡಗಿ ರಾಮಣ್ಣ, ಯೋಗೀಶ್, ಹರೀಶ್, ಪಟೇಲ್ ರಾಜಣ್ಣ ಹಾಗೂ ಕಾರ್ಯಕರ್ತರು ಇದ್ದರು. NDA ಸರ್ಕಾರ ಲಕ್ಷಾಂತರ ವಿದ್ಯಾರ್ಥಿಗಳ ಜೊತೆ ಚೆಲ್ಲಾಟವಾಡುತ್ತಿದೆ. ಸಾಕಷ್ಟು ವಿದ್ಯಾರ್ಥಿಗಳು ಆತ್ಮಹತ್ಯೆ ಸಹ ಮಾಡಿಕೊಂಡಿದ್ದಾರೆ. ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುವುದು ಒಳ್ಳೆಯದಲ್ಲ. ಮತ್ತೆ…
ತಿಪಟೂರು: ಕರ್ನಾಟಕ ಯೋಗ ವೆಲ್ನೆಸ್ ಟ್ರಸ್ಟ್ ವತಿಯಿಂದ ಆಗಸ್ಟ್ 9ರ ಭಾನುವಾರ ನಗರದ ಎಸ್.ಎನ್.ಎಸ್. ಕನ್ವೆನ್ಷನ್ ಹಾಲ್ನಲ್ಲಿ ಪ್ರಥಮ ಬಾರಿಗೆ ರಾಜ್ಯಮಟ್ಟದ ಯೋಗ ಚಾಂಪಿಯನ್ಷಿಪ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಟ್ರಸ್ಟ್ನ ಅಧ್ಯಕ್ಷೆ ಜಿ. ಎ. ರೇಖಾ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ 9 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಶಾಸಕ ಕೆ. ಷಡಕ್ಷರಿ ಯೋಗ ಸ್ಪರ್ಧೆಯನ್ನು ಉದ್ಘಾಟಿಸಲಿದ್ದಾರೆ. ಕೆರೆಗೋಡಿರಂಗಾಪುರದ ಶ್ರೀ ಗುರು ಪರದೇಶಿ ಕೇಂದ್ರ ಮಹಾಸ್ವಾಮೀಜಿ ಹಾಗೂ ನೊಣವಿನಕೆರೆ ಕಾಡು ಸಿದ್ಧೇಶ್ವರ ಮಠದ ಶ್ರೀಗಳು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಖ್ಯಾತ ವೈದ್ಯ ಡಾ. ಜಿ. ಎಸ್. ಶ್ರೀಧರ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಲಿದೆ. 1,000ಕ್ಕೂ ಹೆಚ್ಚು ಯೋಗಪಟುಗಳು ಭಾಗಿ: ಈ ಚಾಂಪಿಯನ್ಷಿಪ್ನಲ್ಲಿ ರಾಜ್ಯದ ವಿವಿಧ ಭಾಗಗಳಿಂದ 1,000ಕ್ಕೂ ಹೆಚ್ಚು ಯೋಗಪಟುಗಳು ಭಾಗವಹಿಸುವ ನಿರೀಕ್ಷೆಯಿದೆ. ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ಒಟ್ಟು 18 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಪ್ರಧಾನಿ ನರೇಂದ್ರ ಮೋದಿ ಅವರ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕರೆಯ ನಂತರ ದೇಶಾದ್ಯಂತ ಯೋಗಕ್ಕೆ ಹೆಚ್ಚಿನ…
ತುಮಕೂರು: ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮದಡಿ ಆರೋಗ್ಯ ಇಲಾಖೆಯಿಂದ ಆಗಸ್ಟ್ 10 ರಂದು ಜಿಲ್ಲೆಯ 1 ರಿಂದ 19 ವರ್ಷ ವಯಸ್ಸಿನ ಎಲ್ಲಾ ಮಕ್ಕಳಿಗೆ ಉಚಿತವಾಗಿ ಆಲ್ಬೆಂಡಜೋಲ್ ಜಂತುಹುಳು ನಿವಾರಕ ಮಾತ್ರೆಗಳನ್ನು ನೀಡಲಾಗುವುದು ಎಂದು ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಭಾರತದಲ್ಲಿ ಸುಮಾರು 1 ರಿಂದ 19 ವರ್ಷ ವಯಸ್ಸಿನ 2 ಕೋಟಿ ಮಕ್ಕಳು ಮಣ್ಣಿನಿಂದ ಹರಡುವ ಜಂತುಹುಳು ಬಾಧೆಯಿಂದ ಅಪಾಯಕಾರಿ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇದರಿಂದ ರಕ್ತಹೀನತೆ, ಪೌಷ್ಟಿಕಾಂಶ ಕೊರತೆ, ನಿಶಕ್ತಿ, ತೂಕ ಕಡಿಮೆಯಾಗುವುದು ಮುಂತಾದ ಪರಿಣಾಮಗಳಾಗುತ್ತವೆ. ಈ ನಿಟ್ಟಿನಲ್ಲಿ ಜಿಲ್ಲೆಯ 6,25,334 ಮಕ್ಕಳಿಗೆ ಜಂತುಹುಳು ನಿವಾರಕ ಮಾತ್ರೆಗಳನ್ನು ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
ತುಮಕೂರು: ಬಾಲ್ಯ ವ್ಯವಸ್ಥೆಯಲ್ಲಿ ಶಿಕ್ಷಣ ನಿಮ್ಮ ಬದುಕಿಗೆ ಭದ್ರ ಬುನಾದಿಯನ್ನು ಹಾಕುತ್ತದೆ. ಪ್ರಾಥಮಿಕ ಹಂತದಲ್ಲಿ ಕಲಿತ ಕಲಿಕೆ ಅತ್ಯಂತ ಅಮೂಲ್ಯವಾದ ಕಲಿಕೆಯಾಗಿದೆ. ಪಾಠ ಪ್ರವಚನಗಳು ಅರ್ಥವಾಗದಿದ್ದರೆ ನೀವು ನಿಮ್ಮ ಶಿಕ್ಷಕರ ಬಳಿ ಕೇಳಿ ಅಥವಾ ಪ್ರಶ್ನೆ ಮಾಡಿ ನಿಮಗೆ ಬೇಕಾದ ಜ್ಞಾನವನ್ನು ಪಡೆದುಕೊಳ್ಳಬೇಕು. ಪ್ರಶ್ನೆ ಮಾಡುವುದು ತಪ್ಪಲ್ಲ ಎಂದು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಸಿದ್ಧಗಂಗಾಮಠದ ಪೀಠಾಧ್ಯಕ್ಷರು ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ನುಡಿದರು. ನಗರದ ಶ್ರೀ ಸಿದ್ಧಲಿಂಗೇಶ್ವರ ಸನಿವಾಸ ಹಿರಿಯ ಪ್ರಾಥಮಿಕ ಶಾಲೆ ಶ್ರೀ ಸಿದ್ಧಗಂಗಾಮಠದಲ್ಲಿ ನಡೆದ ಮಂಜುನಾಥಗೌಡ ಶಿಕ್ಷಕರು ರಚಿಸಿದ ಪುಸ್ತಕ ಎಫ್.ಎಲ್.ಎನ್. ಓದು ಮತ್ತು ಬರಹ ಎನ್ನುವ ಪುಸ್ತಕ ಶ್ರೀ ಸಿದ್ಧಲಿಂಗ ಮಹಾ ಸ್ವಾಮಿಗಳು ಹಾಗೂ ಗಣ್ಯರು ಪುಸ್ತಕ ಲೋಕಾರ್ಪಣೆಯನ್ನು ಮಾಡಿ ಮಾತನಾಡಿದರು. ಶಿಕ್ಷಕರು ತಂದೆ ತಾಯಿ ಇದ್ದಂತೆ ಅವರ ಪಾಠಗಳನ್ನು ನೀವು ಶ್ರದ್ಧೆಯಿಂದ ಕಲಿತಬೇಕು. ಶಿಕ್ಷಕರು ಯಾವ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದೆ ಉಳಿದಿದ್ದಾರೆ ಅವರಿಗೆ ಪ್ರೋತ್ಸಾಹ ಮಾಡಿ ಅವರ ಕಲಿಯುತ್ತಾರೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ…
ಕುಮಾರ್ ಪೆರ್ನಾಜೆ, ಪುತ್ತೂರು ಹೂವಿನ ಮಾಟಕ್ಕೆ ಮರುಳಾಗದವರು ಯಾರು..? ವಿಧ ವಿಧದ ಬಣ್ಣವ ಬಳಿದವರಾರು, ಅದರ ಅಲಂಕಾರಕ್ಕೆ ಕುಸುಮವಾ ಬಳಸಿದವರಾರು ಹೂವಿನ ಗಿಡವನ್ನು ಬೆಳೆಸದೆ ಇರುವವರಾರು ಪ್ರಕೃತಿಯ ಮಡಿಲಲ್ಲಿ ಬೆಳೆದವರೇ ಪುನೀತರು…! ಪ್ರಕೃತಿಯ ಒಡನಾಟವೇ ಮನುಕುಲದ ಕೊನೆಯ ರಕ್ಷಾ ಕವಚ ಹೂವಿನ ಲೋಕದ ಅದ್ಭುತ ವೈಭವ. ಹೂವು. ಹೊರಳುವವು ಸೂರ್ಯನ ಕಡೆಗೆ ನಮ್ಮ ದಾರಿ ಬರಿ ಚಂದ್ರನ ವರೆಗೆ ಹಾಡಿದ್ದೇ ನೋ..! ಗೆಲ್ಲಬೇಕು ಅನ್ನೋ ಛಲ ನಮ್ಮೊಳಗಿದ್ದರೆ ಸೋಲು ನಮ್ಮ ಹತ್ತಿರ ಕೂಡ ಸುಳಿಯುವುದಿಲ್ಲ . ಏನು ಆರೈಕೆ ಇಲ್ಲದೆ ರಸ್ತೆ ಬದಿ ಕೊಚ್ಛೆಗಳಲ್ಲಿ ತೋಟಗಳಲ್ಲಿ ಕಳೆಯಾಗಿ ತಿದ್ದದೆ ತೀಡದೆ ಅಂದ ಕಾಣದು ಗೊಂಬೆ ಹಾಗೆ ಬಿತ್ತದೇ ಕೆತ್ತದೇ ಬೆಳೆಯ ಬೆಳೆಯೋದು ಭೂಮಿ ಎಂಬಂತೆ ನಿನ್ನ ಅಳುಕಿದರೆ ರೂಪುಗೊಳ್ಳಲು ಬದುಕು, ಈ ಹೂವಿನ ಹೆಸರು ಏನು ನಮ್ಮ ಕಡೆ ತೇರು ಅಂತ ಕರೀತಾರೆ ನಿಮ್ಮ ಕಡೆ ಏನೆಂದು ಕರೆಯುತ್ತೀರ….? ದಾರಿ ಬದಿಯಲ್ಲಿ ಸಾಮಾನ್ಯವಾಗಿ ಕಾಣ ಸಿಗುತ್ತದೆ ತೇರು ಕಾಣಿಸಿದ ಹಾಗೆ ಕಾಣುತ್ತೆ…
ತುಮಕೂರು: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯು ಎಂ.ಪಿ.ಪಿ ತೆಕ್ನಾಲಜಿ ಹಾಗೂ ಹೋಮ್ ಅಸೋಸಿಯೇಟ್ಸ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಆಯೋಜಿಸಿರುವ ನೇರ ಸಂದರ್ಶನ (Walk-in Interview). ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶವೊಂದನ್ನು ಕಲ್ಪಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ತಮ್ಮ ಬಯೋಡೇಟಾ (Resume)ದೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದು. ಉದ್ಯೋಗ ವಿವರಗಳು ಹುದ್ದೆಗಳ ಹೆಸರು: ಆಪರೇಟರ್, ಹೆಲ್ಪರ್, ಫೀಲ್ಡ್ ಎಕ್ಸಿಕ್ಯುಟಿವ್ ಹಾಗೂ ಕಲೆಕ್ಷನ್ ಎಕ್ಸಿಕ್ಯುಟಿವ್. ಶೈಕ್ಷಣಿಕ ಅರ್ಹತೆ: SSLC, PUC, ITI, ಡಿಪ್ಲೊಮಾ ಮತ್ತು ಯಾವುದೇ ಪದವಿ (Degree) ಪಾಸಾದ ನಿರುದ್ಯೋಗಿ ಅಭ್ಯರ್ಥಿಗಳು ಭಾಗವಹಿಸಬಹುದು. ಸಂದರ್ಶನದ ದಿನಾಂಕ ಹಾಗೂ ಸಮಯ: ಆಗಸ್ಟ್ 11, ಬೆಳಿಗ್ಗೆ 10:00 ಗಂಟೆಗೆ. ಸಂದರ್ಶನ ನಡೆಯುವ ಸ್ಥಳ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಡಿ.ಡಿ.ಪಿ.ಐ ಬಸ್ ನಿಲ್ದಾಣ, ವಾಸನ್ ಕಣ್ಣಿನ ಆಸ್ಪತ್ರೆ ಹತ್ತಿರ, ಮೂಲೆಮನೆ ಹೋಟೆಲ್ ಪಕ್ಕ, ಸೋಮೇಶ್ವರಪುರಂ, 14ನೇ ಕ್ರಾಸ್, ತುಮಕೂರು – 572102. ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ 0816-2278488 ಅಥವಾ ಮೊಬೈಲ್ ಸಂಖ್ಯೆ 8792669410…
ಬೀದರ್ (ಔರಾದ್): ಗ್ರಾಮೀಣ ಭಾಗದ ಜನರಿಗೆ ಸ್ವಗ್ರಾಮಗಳಲ್ಲೇ ಉದ್ಯೋಗ ಕಲ್ಪಿಸುವುದರ ಜೊತೆಗೆ ಜಲ ಹಾಗೂ ಮಣ್ಣಿನ ಸಂರಕ್ಷಣೆಗೆ ಪೂರಕವಾದ ಶಾಶ್ವತ ಆಸ್ತಿಗಳನ್ನು ನಿರ್ಮಿಸಲು ಅಧಿಕಾರಿಗಳು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಬೀದರ್ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಡಾ. ಗಿರೀಶ್ ದಿಲೀಪ್ ಬದೋಲೆ ಸೂಚಿಸಿದರು. ತಾಲೂಕಿನ ಧೂಪತಮಹಾಗಾಂವ ಗ್ರಾಮದಲ್ಲಿ ವಿಕಸಿತ ಭಾರತ–ಜಿ ರಾಮ್ ಜಿ (VB-G RAM G) ಯೋಜನೆಯಡಿ ನಡೆಯುತ್ತಿರುವ ಕಾಂಟೂರ್ ಟ್ರೆಂಚ್ (CCT) ಕಾಮಗಾರಿ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಮಾತನಾಡಿದರು. ವಲಸೆ ತಡೆಯಲು ಗ್ರಾಮಗಳಲ್ಲೇ ಉದ್ಯೋಗ ಸೃಷ್ಟಿ “ಗ್ರಾಮೀಣ ಪ್ರದೇಶದ ಕೂಲಿಕಾರ್ಮಿಕರು ಕೆಲಸ ಹುಡುಕಿಕೊಂಡು ಬೇರೆ ನಗರಗಳಿಗೆ ವಲಸೆ ಹೋಗುವ ಅಗತ್ಯವಿಲ್ಲ. ಸರ್ಕಾರದ ಉದ್ಯೋಗ ಖಾತರಿ ಯೋಜನೆಯಡಿ ಪ್ರತಿಯೊಬ್ಬರಿಗೂ ಅವರ ಊರುಗಳಲ್ಲೇ ಸಾಕಷ್ಟು ಕೆಲಸದ ಅವಕಾಶಗಳನ್ನು ಒದಗಿಸಲಾಗುತ್ತಿದೆ. ಪ್ರತಿಯೊಬ್ಬ ಅರ್ಹ ಫಲಾನುಭವಿಯೂ ಇದರ ಸದುಪಯೋಗ ಪಡೆದುಕೊಳ್ಳಬೇಕು” ಎಂದು ಸಿಇಒ ಕರೆ ನೀಡಿದರು. ಯೋಜನೆಯ ಹೊಸ ಮಾರ್ಗಸೂಚಿ ಮತ್ತು ಸೌಲಭ್ಯಗಳ…
ಸರಗೂರು: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವೈದ್ಯಾಧಿಕಾರಿ ಡಾ. ರವಿಕುಮಾರ್, “ಪ್ರತಿವರ್ಷ ಆಗಸ್ಟ್ 1ರಿಂದ 7ರವರೆಗೆ ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಆಚರಿಸಲಾಗುತ್ತದೆ. 2026ರ ವಿಶ್ವ ಸ್ತನ್ಯಪಾನ ಸಪ್ತಾಹದ ಧ್ಯೇಯವಾಕ್ಯ ‘ಸುಸ್ಥಿರ ಜೀವನದ ಭದ್ರ ಅಡಿಪಾಯಕ್ಕಾಗಿ ಸ್ತನ್ಯಪಾನ: ಪರಿಣಾಮಕಾರಿ ವಿಧಾನಗಳನ್ನು ಸದೃಢಗೊಳಿಸೋಣ’ ಎಂಬುದಾಗಿದೆ. ಈ ಸಪ್ತಾಹವು ಶಿಶುಗಳ ಪೋಷಣೆ, ರೋಗನಿರೋಧಕ ಶಕ್ತಿ ಹಾಗೂ ಆರೋಗ್ಯಕರ ಬೆಳವಣಿಗೆಯಲ್ಲಿ ತಾಯಿಯ ಎದೆಹಾಲಿನ ಪ್ರಾಮುಖ್ಯತೆಯನ್ನು ಸಾರುತ್ತದೆ” ಎಂದು ತಿಳಿಸಿದರು. ಮಗು ಜನಿಸಿದ ಮೊದಲ ಒಂದು ಗಂಟೆಯೊಳಗೆ ಕಡ್ಡಾಯವಾಗಿ ಎದೆಹಾಲುಣಿಸಬೇಕು. ಮೊದಲ ಆರು ತಿಂಗಳವರೆಗೆ ನೀರು ಸೇರಿದಂತೆ ಯಾವುದೇ ಬಾಹ್ಯ ಆಹಾರ ನೀಡದೆ ಕೇವಲ ತಾಯಿಯ ಎದೆಹಾಲನ್ನೇ ನೀಡಬೇಕು. ಆರು ತಿಂಗಳ ನಂತರ ಪೂರಕ ಆಹಾರದೊಂದಿಗೆ ಕನಿಷ್ಠ ಎರಡು ವರ್ಷ ಅಥವಾ ಅದಕ್ಕೂ ಹೆಚ್ಚು ಕಾಲ ಎದೆಹಾಲುಣಿಸುವುದು ಮಗುವಿನ ಅತ್ಯುತ್ತಮ ಬೆಳವಣಿಗೆಗೆ ಸಹಕಾರಿ ಎಂದು ಅವರು ವಿವರಿಸಿದರು. ಮಕ್ಕಳ ತಜ್ಞೆ ಡಾ. ಜಯಮಾಲಾ ಮಾತನಾಡಿ,…