ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಕೇಸ್ ಗೆ ಸಂಬಂಧಿಸಿದಂತೆ 17 ಆರೋಪಿಗಳ ಪೈಕಿ ಮೂವರಿಗೆ ಜಾಮೀನು ಮಂಜೂರಾಗಿದೆ. ಹೀಗಾಗಿ ನಟ ದರ್ಶನ್ ಗೆ ಕೂಡ ಬೇಲ್ ಸಿಗಬಹುದು ಎಂದು ದರ್ಶನ್ ಫ್ಯಾನ್ಸ್ ಗೆ ಭರವಸೆ ಮೂಡಿದೆ.
ಪ್ರಕರಣದ ಎ15, ಎ16 ಮತ್ತು ಎ17 ಆರೋಪಿಗಳಿಗೆ ಜಾಮೀನು ನೀಡಲಾಗಿದೆ. ಎ15 ಕಾರ್ತಿಕ್, ಎ17 ನಿಖಿಲ್ ನಾಯಕ್ ಮತ್ತು ಎ16 ಕೇಶವಮೂರ್ತಿಗೆ ಜಾಮೀನು ಮಂಜೂರಾಗಿದೆ ಅಂತ ತಿಳಿದು ಬಂದಿದೆ.
ಈ ಮೂವರು ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿಲ್ಲ. ಅಲ್ಲದೇ ಇವರು ಸ್ವತಃ ಪೊಲೀಸ್ ಠಾಣೆಗೆ ಹೋಗಿ ಸರೆಂಡರ್ ಆಗಲು ಮುಂದಾಗಿದ್ದರು. ಹಣ ನೀಡಿ ಇವರನ್ನು ಸರೆಂಡರ್ ಮಾಡಿಸಲು ಯೋಜನೆ ಹಾಕಲಾಗಿತ್ತಂತೆ.
ಇವರ ಮೇಲಿರುವ ಆರೋಪ ಸಾಕ್ಷ್ಯ ನಾಶ. ಹಾಗಾಗಿ ಇದು ಜಾಮೀನು ರಹಿತ ಪ್ರಕರಣ ಅಲ್ವಂತೆ. ಹೀಗಾಗಿ ಮೂವರು ಆರೋಪಿಗಳಿಗೆ ಜಾಮೀನು ನೀಡಲಾಗಿದೆ ಅಂತ ಹೇಳಲಾಗಿದೆ.
ಇನ್ನೂ ನಟ ದರ್ಶನ್, ಪವಿತ್ರಾ ಗೌಡ ಕೂಡ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಕೆಲವೇ ದಿನಗಳಲ್ಲಿ ಈ ಅರ್ಜಿಗಳನ್ನು ಕೋರ್ಟ್ ವಿಚಾರಣೆ ನಡೆಸಲಿದೆ. ದರ್ಶನ್ ಅಭಿಮಾನಿಗಳು ಜಾಮೀನಿಗಾಗಿ ಕಾತರದಿಂದ ಕಾಯುತ್ತಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296