ಹೆಚ್.ಡಿ.ಕೋಟೆ: ತಾಲೂಕಿನ ನುಗು ಬಿರ‍್ವಾಳು ಗ್ರಾಮದ ಶ್ರೀ ಕಾಳಮಂಟೇಶ್ವರ ದೇವಸ್ಥಾನ ಮುಂಭಾಗದಲ್ಲಿ ಶ್ರೀ ಬಸವೇಶ್ವರ ಮೂರ್ತಿ ಪ್ರತಿಷ್ಠಾಪನಾ ಮಹೋತ್ಸವ ಭಾನುವಾರ ವಿಜೃಂಭಣೆಯಿಂದ ಜರುಗಿತು.
ಮಹೋತ್ಸವದ ಅಂಗವಾಗಿ ದೇವಸ್ಥಾನವನ್ನು ವಿವಿಧ ಬಗೆಯ ಬಣ್ಣಗಳಿಂದ ಬಳಿದು ಸಿಂಗಾರಿಸಲಾಗಿತ್ತು. ದೇವಸ್ಥಾನವನ್ನು ವಿದ್ಯುತ್ ದೀಪಾಲಂಕಾರಗೊಳಿಸಲಾಗಿತ್ತು. ಗ್ರಾಮದ ಪ್ರಮುಖ ಬೀದಿಗಳನ್ನು ತಳಿರು ತೋರಣ ಕಟ್ಟಿ ಮಧುವಣಗಿತ್ತಿಯಂತೆ ಅಲಂಕೃತಗೊಳಿಸಲಾಗಿತ್ತು. ವಾದ್ಯಗೋಷ್ಠಿಗಳು ಮೊಳಗಿದವು. ಬೆಳಗ್ಗೆ 7 ಕ್ಕೆ ದೇವರಿಗೆ ಗಣಪತಿ ಪೂಜೆ, ವಿವಿಧ ಹೋಮ ಹವನಗಳು ನಡೆದವು.
ದೇವರ ಉತ್ಸವ ಮೂರ್ತಿಯನ್ನು ಗಂಗೆಸ್ನಾನ ಮಾಡಿಸಿ, ನಂತರ ದೇವಸ್ಥಾನದ ಬಳಿಗೆ ಕರೆತಂದು ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಯಿತು. ನಂತರ ಬಸವೇಶ್ವರ ಮೂರ್ತಿಯನ್ನೂ ಪ್ರತಿಷ್ಠಾಪಿಸಿ, ಮಹಾಮಂಗಳಾರತಿ ನಡೆಸಲಾಯಿತು. ಭಕ್ತರು ದಾರಿಯುದ್ದಕ್ಕೂ ದೇವರ ಭಜನೆ ನಡೆಸಿಕೊಟ್ಟರು. ನುಗು ಜಲಾಶಯದ ನಾಲೆ ಸಮೀಪದಲ್ಲೇ ದೇವಸ್ಥಾನವಿರುವುದರಿಂದ ಭಕ್ತರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಹರಕೆ ತೀರಿಸಿದರು.
ಬಿಜೆಪಿ ಮುಖಂಡ ಡಾ.ಎಚ್.ವಿ.ಕೃಷ್ಣಸ್ವಾಮಿ, ಆಪ್ತ ಕಾರ್ಯದರ್ಶಿ ಶಿವಕುಮಾರ್, ಹೊಸ ಬಿರ‍್ವಾಳು, ನುಗು ಬಿರ‍್ವಾಳು ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಸ್ಥರು ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz